24/10/2025
ಕೋಲಾರ ಪ್ರೇಮಿಗಳಿಗೆ ಪ್ರಾಣ ಬೆದರಿಕೆ ಪೊಲೀಸ್ ಠಾಣೆಯಲ್ಲಿ ದೂರು
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕತ್ತಿಬೀಸಹಳ್ಳಿ ಗ್ರಾಮದ ರೆಶ್ಮಿ ಮತ್ತು ಮೀಸಗಾನಹಳ್ಳಿ ಗ್ರಾಮದ ವೆಂಕಟರವಣ ಅವರು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ, ಪರಸ್ಪರ ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದಾರೆ. ಸಂತೋಷವಾಗಿ ಜೀವನ ನಡೆಸುವ ಆಸೆಯಿಂದ ದೇವಸ್ಥಾನದಲ್ಲಿ ಸಪ್ತಪದಿ ತುಳಿದಿದ್ದ ಇವರಿಗೆ ಈಗ ಪ್ರಾಣಭಯ ಎದುರಾಗಿದೆ. ರಕ್ಷಣೆ ಕೋರಿ ವಧು-ವರರಿಬ್ಬರೂ ಇಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.