
30/05/2025
ಸಮಾಜಸೇವೆಯನ್ನು ಉಸಿರಾಗಿಸಿಕೊಂಡಿರುವ ಗುಣವಂತ.
ಇಂಜಿನಿಯರಿಂಗ್, ಎಮ್ ಟೆಕ್ ಪದವಿ ಮುಗಿಸಿ ಕೃಷಿ ಕಾಯಕದ ಮೂಲಕ ಮಾದರಿಯಾಗಿರುವ ವಿದ್ಯಾವಂತ.
ಸದಾ ಸಾಮಾಜಿಕ ಕಳಕಳಿಗೆ ಮಿಡಿಯುತ್ತಿರುವ ಹೃದಯವಂತ.
ಸರಳ ಸಜ್ಜನಿಕೆಯ, ರಾಷ್ಟ್ರಭಕ್ತಿಯ ನಿಷ್ಠಾವಂತ.
ಸನ್ನಡತೆಯ ಮೂಲಕ ಜನಮನ ಗೆದ್ದ ಶ್ರೀ ಚನ್ನಬಸವಣ್ಣ ಬಳತೆಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ಜನಸೇವಕರಾಗಿ, ಜನನಾಯಕರಾಗಿ ಈ ನಾಡಿನ ಹಾಗೂ ಈ ದೇಶದ ಸೇವೆ ಗೈಯಲು ಭಾರತ ಮಾತೆಯು ತಮಗೆ ಇನ್ನೂ ಹೆಚ್ಚಿನ ಅವಕಾಶವನ್ನು, ಯಶಸ್ಸನ್ನು ನೀಡಿ ಹರಸಲಿ ಎಂದು ಹಾರೈಸುತ್ತೇವೆ.