27/06/2025
#ಹೈಕೋರ್ಟ್_ವಕೀಲರು ಹಾಗೂ ಾಜ್ಯಾಧ್ಯಕ್ಷರು ಆದಂತಹ #ಪ್ರೊ_ಹರಿರಾಮ್ ಸರ್ ಬರೆದಿರುವ ಈ ಲೇಖನವನ್ನು ತಪ್ಪದೇ ಓದಿ ಸತ್ಯ ತಿಳಿಯುತ್ತದೆ,
ಬಾಬಾಸಾಹೇಬರು ಹಾಗು ಸಂವಿಧಾನವು ನಮಗೆ ಶಕ್ತಿಯಾಗ ಬೇಕೆ ಹೊರತು ಬಲಹೀನತೆಯಲ್ಲಾ !
ಸಂವಿಧಾನದಿಂದ ಜಾತ್ಯಾತೀತ ಹಾಗು ಸಮಾಜವಾದಿ ಪದಗಳನ್ನು (ತತ್ವಗಳನ್ನು) ತೆಗೆಯಬೇಕು ಎಂದು RSS ನವರು ಹೇಳುತಿದ್ದಾರೆ ! ನೋಡಿ ಇವರು ಎಂತಹ ದೇಶದ್ರೋಹಿಗಳು ಎಂದೆಲ್ಲಾ ಹೇಳುತ್ತಿರುವ ಕಾಂಗ್ರೆಸ್ ಹಾಗು ಕಾಂಗ್ರೆಸ್ ಪ್ರೇರಿತ ಪರಗತಿಪರರು, ನಿಜ RSS ಅವರೇಳಿದ್ದನ್ನು ನಾನು ಒಪ್ಪುವುದಿಲ್ಲಾ , ಆದರೆ ನನ್ನದೊಂದು ಪ್ರೆಶ್ನೆ , ನಮ್ಮನ್ನು ಇನ್ನೂ ಪೆದ್ದರು ಎಂದು ಭಾವಿಸಿರುವ ಈ ರಾಜಕೀಯ ಪಕ್ಷಗಳಿಗೂ ನಿಮಗೂ ಏನು ವ್ಯತ್ಯಾಸ ?
ಏಕೆಂದರೆ ನಾವು ಇನ್ನೂ ನಮ್ಮ ದೇಶ ಜಾತ್ಯಾತೀತ ಹಾಗು ಸಮಾಜವಾದಿಯಾಗಿ ಉಳಿದಿದೆ ಎಂದು ನಂಬಿದ್ದೀವಲ್ಲಾ ಅಥವಾ ನಮ್ಮನ್ನು ಹಾಗೆ ನಂಬಿಸಲಾಗಿದೆಯಲ್ಲಾ ! ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ನಂತರದಲ್ಲೂ ಯಾವ ಕಾಲಘಟ್ಟದಲ್ಲಿ ನಮ್ಮ ದೇಶವು ಜಾತ್ಯಾತೀತವಾಗಿ ಉಳಿದಿದ್ದಿಲ್ಲಾ ಪ್ರತಿ ಕಾಲಘಟ್ಟದಲ್ಲೂ ಅದರಲ್ಲೂ ಕಾಂಗ್ರೆಸ್ ಆಳ್ವಿಕೆಯಲ್ಲಿ ಹಿಂದೂಗಳ ಹೆಸರಿನಲ್ಲಿ ಕೇವಲ ಮೇಲ್ಜಾತಿಯ ಜನರು ದೇಶದ ಎಲ್ಲಾ ಸಂಪತ್ತು ಹಾಗು ಅವಕಾಶಗಳನ್ನು ಅನುಭವಿಸುತ್ತ ಯಾವಾಗ ತಮಗೆ ಸಮಸ್ಯೆ ಉಂಟಾಗುತ್ತೆ ಆಗ ಇದೆ 'ಜಾತ್ಯಾತೀತ' ಎಂಬ ಸಿದ್ದಾಂತವನ್ನು ಬಳಸಿ ನಮ್ಮ ನಡುವೆ ತಂದಿಡುವ ಕೆಲಸ ಮಾಡಿ ಮತ್ತೆ ತಮ್ಮ ಆಟವನ್ನು ಮುಂದುವರಿಸುತ್ತಾ ಬಂದಿದ್ದಾರೆ.
ಹಾಗೆಯೆ, ಸಮಾಜವಾದಿ ಎಂಬ ಪದಕ್ಕೆ (ಆರ್ಥಿಕ ವ್ಯವಸ್ಥೆ ) ಹೊಸ ಆರ್ಥಿಕ ನೀತಿಯೆಂಬ ಹೆಸರಿನಲ್ಲಿ LPG ಮುಖಾಂತರ ಕೊಳ್ಳಿಯಿಟ್ಟು ಸರಕಾರಿ ಸಂಸ್ಥೆಗಳನ್ನು ಮುಚ್ಚಿ ಅಥವಾ ಮಾರಟ ಮಾಡಿ ಮತ್ತೆ ತಮ್ಮ ಕುಲ ಬಾಂಧವರಿಗೆ ಈ ದೇಶದ ಸಂಪತ್ತು ಹಾಗು ಅವಕಾಶಗಳ ದರೋಡೆ ಮಾಡಲು ದಾರಿ ಮಾಡಿಕೊಟ್ಟಿದ್ದು ಇದೆ ಕಾಂಗ್ರೆಸ್ ಪಕ್ಷದ P V ನರಸಿಂಹ ರಾವ್ ಹಾಗು ಮನಮೋಹನ್ ಸಿಂಗ್ ಎಂಬುದು ಈ ಕಾಂಗ್ರೆಸ್ ಹಾಗು ಕಾಂಗ್ರೆಸ್ ಪ್ರೇರಿತ ಪರಗತಿಪರರಿಗೆ ಬಿಟ್ಟು ಇಡಿ ಜಗತ್ತಿಗೆ ಗೊತ್ತಿರುವ ವಿಷಯ. 1991-92 ರಿಂದ ಇಲ್ಲಿಯವರೆಗೂ ಯಾವುದೆ ಅಡೆ ತಡೆಯಿಲ್ಲದೆ ಬಂಡವಾಳಶಾಹಿ ವ್ಯವಸ್ಥೆಯನ್ನು ಹಾಗು ನವ- ಬಂಡವಾಳಶಾಹಿ ವ್ಯವಸ್ಥೆಯನ್ನು ಪೋಷಿಸುತ್ತ ನಮ್ಮ ಬದುಕಿಗೆ ಕೊಳ್ಳಿಯಿಟ್ಟು ನಮ್ಮನ್ನು ಇನ್ನೂ ಮೂಲಭೂತ ಅವಶ್ಯಕತೆಗಳನ್ನು ಪಡೆಯಲು ಬೀದಿಯಲ್ಲೆ ಬಿಟ್ಟು, ಬಾಬಾಸಾಹೇಬ್ ಅಂಬೇಡ್ಕರ್ ಹಾಗು ಸಂವಿಧಾನದ ಮೇಲಿನ ನಮ್ಮ ಭಾವನಾತ್ಮಕ ಸಂಬಂಧವನ್ನು ಬಂಡವಾಳ ವನ್ನಾಗಿಸಿಕೊಂಡು , ಇದೋ ಸಂವಿಧಾನ ಬದಲಾಯಿಸುತ್ತಾರೆ ಇದೋ ಸಂವಿಧಾನವನ್ನು ತಿರುಚುತ್ತಾರೆ ಎಂದು ಹೇಳಿ ನಮ್ಮನ್ನು ನಿರಂತರವಾಗಿ ದಡ್ಡರಾಗಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳ ಬೇಕಿದೆ.
ಸಂವಿಧಾನದಲ್ಲಿನ ಅಭಿವೃದ್ಧಿ ಹಾಗು ಸಾಮಾಜಿಕ ನ್ಯಾಯದ ಅಂಶಗಳನ್ನು ಸಂಸತ್ತಿನಲ್ಲಿ ತಿದ್ದುಪಡಿಯ ಮುಖಾಂತರ ಹಾಗು ನ್ಯಾಯಾಲಯಗಳ ಮುಖಾಂತರ ಜೊತೆಗೆ ಕಾರ್ಯಾಂಗದ ಮುಖಾಂತರ ನಮಗೆ ಗೊತ್ತಾಗದ ರೀತಿಯಲ್ಲಿ ಮಾಯ ಮಾಡಿ ಅಥವಾ ಅಪ್ರಸ್ತುತ ಮಾಡಿ ಸಂವಿಧಾನವನ್ನು ಇವರಿಗೆ ಬೇಕಾದ ರೀತಿಯಲ್ಲಿ ಬಳಸುತ್ತ ತಮ್ಮ ಹಿತವನ್ನು ಕಾಪಾಡಿಕೊಂಡು ಸಂವಿಧಾನವನ್ನು ತಮ್ಮ ರಕ್ಷಾಕವಚವನ್ನಾಗಿಸಿಕೊಂಡು ನಮಗೆ ಮಾತ್ರ ಅದೆ ಸಂವಿಧಾನವನ್ನು ತೋರಿಸಿ ನೋಡಿ ಇದನ್ನು ನೀವು ರಕ್ಷಿಸ ಬೇಕು , ಇದರಿಂದಲೆ ನಿಮ್ಮ ಬದುಕು ಉದ್ದಾರ ಆಗುವುದು ಎಂದು ಹೇಳುತ್ತ ನಮ್ಮನ್ನು ತಮ್ಮ Vote Bank ನ್ನಾಗಿಸಿಕೊಂಡು ಪ್ರಜಾಪ್ರಭುತ್ವವನ್ನು ಉಳ್ಳವರ ಪ್ರಭುತ್ವವನ್ನಾಗಿಸಿ ಕೊಂಡಿದ್ದಾರೆ. ಪ್ರಜೆಗಳೆ ದೊರೆಗಳಾಗ ಬೇಕಿದ್ದ ವ್ಯವಸ್ಥೆಯನ್ನು ತಮ್ಮ ಮಕ್ಕಳು ಹಾಗು ಕುಟುಂಬದವರೆ ದೊರೆಗಳಾಗಿ ಉಳಿಯುವಂತ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಗಟ್ಟಿಗೊಳಿಸುತಿದ್ದಾರೆ ಆದರೆ ನಾವು ಮಾತ್ರ ನಮ್ಮ ಬದುಕು ಇಂದಲ್ಲಾ ನಾಳೆ ಬದಲಾಗುತ್ತೆ ಎಂಬ ವಿಶ್ವಾಸದಲ್ಲೆ ಈ ರಾಜಕೀಯ ಪಕ್ಷಗಳ ಮೋಸದಾಟಕ್ಕೆ ಬಲಿಯಾಗುತ್ತಲೆ ಇದ್ದೇವೆ, ನಾವು ಎಲ್ಲಿಯವರೆಗೆ ರಾಜಕೀಯವಾಗಿ ಪ್ರಬುದ್ಧರಾಗುವುದಿಲ್ಲವೋ ಹಾಗು ಎಲ್ಲಿಯವರೆಗೆ ನಮ್ಮ Politics is a game of Power ಎಂಬುದನ್ನು ಅರಿತು ರಾಜಕೀಯ ಪಕ್ಷಗಳಿಗೆ ಬಳಕೆಯಾಗುವ ಬದಲು ರಾಜಕೀಯ ಪಕ್ಷಗಳನ್ನು ಬಳಸುವುದನ್ನು ಕಲಿಯುವುದಿಲ್ಲವೋ ಹಾಗು ಪಕ್ಷಗಳಿಗೆ Loyal ಆಗಿರದೆ ಸಮುದಾಯಕ್ಕೆ Loyal ಆಗಿರುವುದನ್ನು ಕಲಿಯುವುದಿಲ್ಲವೋ ಅಲ್ಲಿಯವರೆಗೂ ನಾವು ಅವರ Political Trap ಹಾಗು Game ಗಳಿಗೆ ಬಲಿಯಾಗುತಿರುತ್ತೇವೆ , ಹಾಗೆಯೇ ಅವರು ಸಂವಿಧಾನ ಹಾಗು ಬಾಬಾಸಾಹೇಬ್ ಅಂಬೇಡ್ಕರ್ ರವರನ್ನು ತೋರಿಸಿ ನಮ್ಮನ್ನು ಭಾವುಕರಾಗಿಸಿ ನಮ್ಮ ಬದುಕಿನ ಜೊತೆ ಆಟವಾಡುತ್ತಲೆ ಇರುತ್ತಾರೆ ಸಂವಿಧಾನ ಹಾಗು ಬಾಬಾಸಾಹೇಬ್ ಅಂಬೇಡ್ಕರ್ ರವರು ನಮಗೆ ಶಕ್ತಿಯಾಗ ಬೇಕೆ ಹೊರೆತು ಬಲಹೀನತೆ ಆಗಬಾರದು.
- ಹರಿರಾಮ್. ಎ -
ವಕೀಲರು ಹಾಗು ಅಧ್ಯಕ್ಷರು BPS