Bharani News Kannada

Bharani News Kannada Welcome To Official Account Of Bharani News Kannada

29/08/2023
29/08/2023
ಅವಿಭಜಿತ ಮೈಸೂರು ಜಿಲ್ಲೆಯ ಆದಿ ಕರ್ನಾಟಕ ಜನಸಮುದಾಯದ ಎಲ್ಲಾ ಸಾಂಸ್ಕೃತಿಕ ಹಿರಿಮೆಯ ಪರಂಪರೆಯಲ್ಲಿ ಬೆಳೆದ ಡಾ ಸುಭಾಷ್ ಭರಣಿ ಸಾಹೇಬರು  ಈ ರಾಷ್ಟ್...
27/08/2023

ಅವಿಭಜಿತ ಮೈಸೂರು ಜಿಲ್ಲೆಯ ಆದಿ ಕರ್ನಾಟಕ ಜನಸಮುದಾಯದ ಎಲ್ಲಾ ಸಾಂಸ್ಕೃತಿಕ ಹಿರಿಮೆಯ ಪರಂಪರೆಯಲ್ಲಿ ಬೆಳೆದ ಡಾ ಸುಭಾಷ್ ಭರಣಿ ಸಾಹೇಬರು ಈ ರಾಷ್ಟ್ರದ ಇನ್ನಿತರೆಡೆ ಬಹುಜನ ಸಮುದಾಯದ ಅತ್ಯಂತ ದಾರುಣತೆ ಅವರನ್ನು ಅಷ್ಟೇ ತೀವ್ರ ರೀತಿಯಲ್ಲಿ ಘಾಸಿಗೊಳಿಸಿದಾಗ , ಅವರನ್ನು ತನ್ನ ಅಧಿಕಾರದ ದಂಡ ಪ್ರಯೋಗಿಸಿಯಾದರೂ ಸರಿಯೇ ಸಮಾಜದ ಈ ಅಮಾನವೀಯವಾದ ಶೋಷಣೆಗಳಿಂದ ಮುಕ್ತಗೊಳಿಸಿಯೇ ತೀರಬೇಕೆಂದು ಮಾನಸಿಕವಾಗಿ ಸಂಕಲ್ಪ ಮಾಡಿದ ಭರಣಿ ಸಾಹೇಬರು "ದೇವದಾಸಿ "ಎಂಬ ಪದ ಹಾಗೂ ಪದ್ಧತಿಯನ್ನು ಶಾಶ್ವತವಾಗಿ ಕರ್ನಾಟಕದ ಮೂಲೆಮೂಲೆಗಳಲ್ಲಿ ತೊಡೆದು ಹಾಕಲೇಬೇಕೆಂಬ ತನ್ನ ಆ ದೃಢ ಸಂಕಲ್ಪದ ಹಿಂದೆ ತಾನು ಗಳಿಸಿಕೊಂಡಿದ್ದ ಆತ್ಮ ವಿಶ್ವಾಸದ ಹಾಗೂ ಆತ್ಮಗೌರವದ ಅರಿವು ಪ್ರಧಾನ ಪಾತ್ರ ವಹಿಸಿತ್ತು ಎಂಬುದನ್ನು ಒಂದು ಮಹತ್ತರವಾದ ಘಟನೆ ಸಾಬೀತು ಪಡಿಸಿದೆ ಎಂಬುದಕ್ಕೆ
ಡಾ:ಸುಭಾಷ್ ಭರಣಿ ಸಾಹೇಬರು
ಬಳ್ಳಾರಿಯಲ್ಲಿ (೧೯೮೪-೮೫) ಎಸ್.ಪಿ ಆಗಿದ್ದಾಗ ಮಾಡಿದ ಸಾಮಾಜಿಕ ಕ್ರಾಂತಿಯೊಂದು ಇಂದು ಇತಿಹಾಸದ ಪುಟಗಳಲ್ಲಿ ರಾರಾಜಿಸುವಂತಾಗಿದೆ.

ಬಳ್ಳಾರಿ ಜಿಲ್ಲೆಯ ಜನತೆ ಸೇರಿದಂತೆ ಕರುನಾಡು ಮತ್ತು ಪ್ರಜ್ಞಾಪೂರ್ವಕ ದಲಿತ ಸಮುದಾಯ ಕೂಡ ಎಂದೂ ಮರೆಯದಂತ , ಮರೆಯಲು ಸಾದ್ಯವಾಗದಂತಹ ಐತಿಹಾಸಿಕ ಸಾಧನೆ ನಮ್ಮ ಡಾ ಸುಭಾಷ್ ಭರಣಿ ಸಾಹೇಬರದು ಎಂಬುದು ನಮ್ಮೆಲ್ಲರ ಹೆಮ್ಮೆಯ ಸಂಗತಿ. ಅದನ್ನು ಅಲ್ಲಿನ ಸ್ಥಳೀಯ ಜಿಲ್ಲಾ ಜನರು ಅದನ್ನು ಇಂದಿಗೂ ಮರೆತಿಲ್ಲ...ಮರೆಯುವುದು ಇಲ್ಲ...ಕಲ್ಕಂಬ, ಮುದ್ದಟನೂರು ಗ್ರಾಮದಲ್ಲಿ ನಡೆಯುತ್ತಿದ್ದ ಯಾರೂ ಊಹಿಸಲಾಗದಂತಹ ಅಮಾನವೀಯ "ಓಕಳಿ " ಎಂಬ ನಿರ್ಲಜ್ಜ ಆಚರಣೆ ಪದ್ಧತಿಯನ್ನು ತಡೆಗಟ್ಟಿದ ಕೀರ್ತಿ ಭರಣಿ ಸಾಹೇಬರಿಗೆ ಸಲ್ಲುತ್ತದೆ.

ಸಂಶೋಧಕರು ಈ ಕಾರ್ಯವನ್ನು ಹೈದ್ರಾಬಾದ್ ಕರ್ನಾಟಕ ಸಾಮಾಜಿಕ ಕ್ರಾಂತಿಗಳಲ್ಲಿ ಇದು ಕೂಡಾ ಒಂದು ಎಂದು ದಾಖಲಿಸಿದ್ದಾರೆ....ಅದು ಖಂಡಿತವಾಗಿ ಸ್ತುತ್ಯಾರ್ಹ ಸಂಗತಿಯಾಗಿದೆ.

ಚನ್ನಪಟ್ಟಣದ ಎಎಸ್ಪಿ ,ಹುಬ್ಬಳ್ಳಿ- ಧಾರವಾಡ, ಚಿಕ್ಕಮಂಗಳೂರು , ಬಳ್ಳಾರಿ ಜಿಲ್ಲಾ ಎಸ್ಪಿಯಾಗಿದ್ದಾಗಲೂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮುಖ್ಯಸ್ಥ ರಾಗಿ , ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ರಾಜ್ಯ ವ್ಯವಸ್ಥಾಪಕ ನಿರ್ದೇಶಕರಾಗಿ ಹಲವಾರು ಸಮಾಜ ಮುಖಿ ಕಾರ್ಯಗಳ ಮೂಲಕ ಜನಪ್ರಿಯ ಜನಾನುರಾಗಿ ಹಾಗೂ ಎಲ್ಲದಕ್ಕಿಂತ ಮುಖ್ಯವಾಗಿ ಈ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಉನ್ನತ ಪೊಲೀಸ್ ಅಧಿಕಾರಿಯಾಗಿ ತಮ್ಮ ಸೇವಾ ನಿಷ್ಠೆ, ಶ್ರದ್ಧೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿ ಗುರುತಿಸಿ ಕೊಂಡವರು ಡಾ. ಭರಣಿ ಸಾಹೇಬರು .

ಡಾ ಸುಭಾಷ್ ಭರಣಿ ಸಾಹೇಬರು ಅಂದರೆ ಬೆಂಗಳೂರು ನಗರ ಕೂಡ ಇಂತವರೇ ಬೇಕಿತ್ತು ನಮ್ಮ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಹುದ್ದೆಗೆ ಎಂಬ ಕೂಗು ಕೇಳಿಬರುತ್ತಿದ್ದ ಕಾಲಮಾನದಲ್ಲಿಯೂ ಅದ್ಯಾರೋ ,ಮತ್ತಿನ್ಯಾರೋ ಪರಕೀಯರು ಬಂದು ಆ ಹುದ್ದೆಗೆ ಬಂದು ಕುಳಿತಾಗ ಕರುನಾಡ ಜನ ಒಪ್ಪಲಿಲ್ಲ ಮತ್ತು ನೈತಿಕತೆಯ ಮಾತು ಬಂದಾಗ ಖುದ್ದು ಭರಣಿ ಸಾಹೇಬರು ಕೂಡ ಅದನ್ನು ಒಪ್ಪಿ ಒಪ್ಪಿಗೆ ಸೂಚಿಸಲೂ ಇಲ್ಲ. ಎಲ್ಲಾ ರೀತಿಯ ಅನುಭವ, ಅರ್ಹತೆ ಮತ್ತು ಯೋಗ್ಯತೆ ಇದ್ದೂ ಆ ಹುದ್ದೆ ತನಗೊಲಿಯದೇ ಹೋದಾಗ ಅದರಲ್ಲೂ ಅದೂ ಯಾವುದೋ ವಾಮಾಮಾರ್ಗದಲ್ಲಿ ಮತ್ತಿನ್ಯಾರಿಗೋ ಅನರ್ಹ ! ? ರಿಗೆ ಒಲಿದು ,ತನ್ನೆಲ್ಲಾ ಅಷ್ಟೂ ವರ್ಷಗಳ ನಿಷ್ಠಾವಂತಿಕೆಯ ಪ್ರಾಮಾಣಿಕ ಕರ್ತವ್ಯದ ಅನುಭವ ,ಅರ್ಹತೆ ,ಯೋಗ್ಯತೆಯನ್ನು ಅಣಕಿಸಿದಾಗ, ಆ ಮೂಲಕ ಇಡೀ ದಲಿತ ಸಮುದಾಯವನ್ನು ಅವಮಾನಿಸಿದಾಗ ಸಾಲದ್ದಕ್ಕೆ ತಮ್ಮ ಸ್ವಾಭಿಮಾನಕ್ಕೆ ದಕ್ಕೆಯಾದಾಗ ಅವರು ಆ ಉನ್ನತವಾದ ಹುದ್ದೆಯನ್ನೂ ಲೆಕ್ಕಿಸದೇ ರಾಜೀನಾಮೆ ನೀಡಿ ಹೊರ ಬಂದದ್ದು ಈಗ ಇತಿಹಾಸ ಇರಬಹುದು.ಆದರೂ
ಇನ್ನೂ ಉತ್ಸಾಹದ ಬುಗ್ಗೆಯಾಗಿರುವ ಡಾ. ಭರಣಿ ಸಾಹೇಬರ ಸೇವೆ ಕನ್ನಡ ನಾಡಿಗೆ ಮತ್ತಷ್ಟು ದೊರೆಯಲಿ ಎಂದು ಆಶಿಸುತ್ತಾ..
ನಮ್ಮೆಲ್ಲರ ಪ್ರೀತಿ, ವಿಶ್ವಾಸಾರ್ಹ ಬೌದ್ಧ ಸಂಬೂತ ಶಿಖರ ಪ್ರಾಯವಾಗಿ ಅಂದಿನ ಬಳ್ಳಾರಿಯ ಪ್ರಭಾವಿ ಸಂಸದೆಯಾಗಿದ್ದ ಬಸವ ರಾಜೇಶ್ವರಿ ಯವರ ವಿರೋಧ ಹಾಗೂ ಅವರ ವರ್ಗಾವಣೆ ಬೆದರಿಕೆಗೂ ಮಣಿಯದೆ
" ದೇವದಾಸಿ " ಎಂಬ ಪದ ಮತ್ತು ಅಂತಹದೊಂದು ನಿರ್ಲಜ್ಜ ಸಾಮಾಜಿಕ ಪಿಡುಗನ್ನು ಉತ್ತರ ಕರ್ನಾಟಕ ಭಾಗದಲ್ಲಿ ಸಂಪೂರ್ಣವಾಗಿ ಹಾಗೂ ಶಾಶ್ವತವಾಗಿ ತೊಡೆದುಹಾಕಿ ತಮ್ಮ ಆತ್ಮಸಾಕ್ಷಿಗೆ ತಕ್ಕಂತೆ ದಿಟ್ಟತನದಿಂದ ವರ್ತಿಸಿ ಸಾಮಾಜಿಕ ನ್ಯಾಯ ಕಲ್ಪನೆಯ ಮೌಲ್ಯವನ್ನು ಎತ್ತಿಹಿಡಿದ ,ಇತಿಹಾಸವನ್ನು ಪಟ್ಟಭದ್ರ ಹಿತಾಸಕ್ತಿ ನೆಲೆಯಿಂದ ತಿರುಚಿ ಬರೆಯಲ್ಪಟ್ಟಿರುವುದನ್ನು ಗ್ರಹಿಸಿ ನಿಜ ಚರಿತ್ರೆಯ ಪುನರ್ ಮೌಲ್ಯೀಕರಣದ ಮೂಲಕ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹಾದಿಯಲ್ಲಿ ನಡೆಯುತ್ತಿರುವ ವೈಚಾರಿಕ ಪೂಜಾರಿ ಹಾಗೂ ನೈಜ ಬೌದ್ಧ ದಮ್ಮಾ ಚಾರಿ ಯಾದ ಡಾ ಸುಭಾಷ್ ಭರಣಿ ಸಾಹೇಬರ ಸಾಧನೆಗಳು ನಿಜಕ್ಕೂ ಸ್ಮರಣೀಯ.

ಎಸ್ .ಶಿವರಾಜ್ ಭರಣಿ
ಸಂಪಾದಕ, ಭರಣಿ ಪತ್ರಿಕೆ
ರಾಮನಗರ.

12/07/2023
07/07/2023

Don't pix the target to your children - Manam

27/06/2023
25/06/2023
ದ್ವನಿ ಇಲ್ಲದ ದಮನಿತರ ಮಾರ್ದನಿಯಾಗಲು...ಮೌನದ ಮಾತಿಗೆ ನುಡಿಯಾಗಿ ನೆಲೆ ನಿಲ್ಲಲು..ನಂಬಿದವರ ಅಂಬಿಗನಂತೆ ಬದುಕು ಕಳೆದುಕೊಂಡವರ ಬದುಕಾಗಲು...ಸೋತು...
18/04/2022

ದ್ವನಿ ಇಲ್ಲದ ದಮನಿತರ ಮಾರ್ದನಿಯಾಗಲು...
ಮೌನದ ಮಾತಿಗೆ ನುಡಿಯಾಗಿ ನೆಲೆ ನಿಲ್ಲಲು..
ನಂಬಿದವರ ಅಂಬಿಗನಂತೆ ಬದುಕು ಕಳೆದುಕೊಂಡವರ ಬದುಕಾಗಲು...
ಸೋತು-ನೊಂದ ಮನಸ್ಸುಗಳಿಗೆ ಧೈರ್ಯ ತುಂಬುವ ಸಾಂತ್ವಾನದ ಹೆಗಲಾಗಲು ..ವಂಚಿತರ ಹೋರಾಟದ ಮೆರವಣಿಗೆಗೆ ಹೊಸದೊಂದು ಭಾಷ್ಯ ಬರೆಯಲು ...
ಬರುತ್ತಿದೆ...ನಿಮ್ಮ ಮನೆ-ಮನಗಳಿಗೆ ಸದಾ ನಿಮ್ಮೊಂದಿಗೆ ಜೊತೆ ಜೊತೆಯಾಗಿ ಹೆಜ್ಜೆ ಹಾಕಲು...

ಅತೀ ಶೀಘ್ರದಲ್ಲೇ
ವೀಕ್ಷಿಸಿ
"ಭರಣಿ ನ್ಯೂಸ್ "
ಇದು "ಭರವಸೆಯ ಜನದನಿ".

Address

Ramanagara
562159

Website

Alerts

Be the first to know and let us send you an email when Bharani News Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Bharani News Kannada:

Share

Category