Suddi Sahyadri

Suddi Sahyadri ನಮ್ಮೂರು ನಮ್ಮವರ ಧ್ವನಿ...

ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳುಅಣ್ಣ-ತಂಗಿ, ಅಕ್ಕ-ತಮ್ಮನ ನಡುವಿನ ಪ್ರೀತಿ, ವಿಶ್ವಾಸ ಮತ್ತು ರಕ್ಷಣೆಯ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಪ...
28/08/2026

ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು

ಅಣ್ಣ-ತಂಗಿ, ಅಕ್ಕ-ತಮ್ಮನ ನಡುವಿನ ಪ್ರೀತಿ, ವಿಶ್ವಾಸ ಮತ್ತು ರಕ್ಷಣೆಯ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಪವಿತ್ರ ಹಬ್ಬವೇ ರಕ್ಷಾ ಬಂಧನ.

ಈ ದಿನ ಸಹೋದರಿಯರು ತಮ್ಮ ಸಹೋದರರ ಕೈಗೆ ರಾಖಿ ಕಟ್ಟುವ ಮೂಲಕ ಪ್ರೀತಿ ಮತ್ತು ಬಾಂಧವ್ಯದ ಸಂಕೇತವನ್ನು ಸಾರುತ್ತಾರೆ. ಸಹೋದರರು ಕೂಡ ತಮ್ಮ ಸಹೋದರಿಯರ ಸಂತೋಷ, ಗೌರವ ಮತ್ತು ಸುರಕ್ಷತೆಗೆ ಸದಾ ಜೊತೆಯಾಗಿರುವ ಭರವಸೆ ನೀಡುತ್ತಾರೆ.

ರಾಖಿಯಲ್ಲಿರುವುದು ಕೇವಲ ಒಂದು ದಾರವಲ್ಲ… ಅದು ಬಾಲ್ಯದ ನೆನಪು, ಅಕ್ಕರೆಯ ಭಾವನೆ, ಕಾಳಜಿ ಮತ್ತು ಎಂದಿಗೂ ಕಳಚದ ಸಹೋದರ-ಸಹೋದರಿಯ ಸಂಬಂಧದ ಸಂಕೇತ.

ಈ ಪವಿತ್ರ ರಕ್ಷಾ ಬಂಧನವು ಪ್ರತಿಯೊಂದು ಕುಟುಂಬದಲ್ಲೂ ಪ್ರೀತಿ, ಸಂತೋಷ ಮತ್ತು ನೆಮ್ಮದಿಯನ್ನು ಹೆಚ್ಚಿಸಲಿ ಎಂದು ಸುದ್ದಿ ಸಹ್ಯಾದ್ರಿ ಹಾರೈಸುತ್ತದೆ.

ಎಲ್ಲಾ ಸಹೋದರ-ಸಹೋದರಿಯರಿಗೂ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು. 🌸🌹🌹
ಸುದ್ದಿ ಸಹ್ಯಾದ್ರಿ ಇದು ನಮ್ಮೂರು ನಮ್ಮವರ ಧ್ವನಿ ಪ್ರಧಾನ ಸಂಪಾದಕರು ರಾಘವೇಂದ್ರ ತಾಳಗುಪ್ಪ 08183226626

28/08/2026

ಎಲ್ಲಾ ಸಹೋದರ-ಸಹೋದರಿಯರಿಗೂ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು. 🌸🌹🌹
ಸುದ್ದಿ ಸಹ್ಯಾದ್ರಿ ಇದು ನಮ್ಮೂರು ನಮ್ಮವರ ಧ್ವನಿ ಪ್ರಧಾನ ಸಂಪಾದಕರು ರಾಘವೇಂದ್ರ ತಾಳಗುಪ್ಪ 08183226626

26/08/2026

ಪ್ರವಾದಿ ಮೊಹಮ್ಮದ್ ರ 1501ನೇ ಜನ್ಮದಿನದ ಪ್ರಯುಕ್ತ ಈದ್ ಮಿಲಾದ್ ಹಬ್ಬವನ್ನು ಸಾಗರದಲ್ಲಿ ಇಂದು ವಿಜೃಂಭಣೆಯಿಂದ ಆಚರಿಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ನೃತ್ಯದೊಂದಿಗೆ ಮೆರವಣಿಗೆ ಮಾಡಲಾಯಿತು.

ದೇಶಾದ್ಯಂತ H1N1 ಪ್ರಕರಣಗಳ ಏರಿಕೆ: ಸೋಂಕಿನ ಲಕ್ಷಣಗಳು, ಸಾರ್ವಜನಿಕರು ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು, IMA ಸಲಹೆ ಏನು?.  ಹೆಚ್ಚಿನ ಮು...
26/08/2026

ದೇಶಾದ್ಯಂತ H1N1 ಪ್ರಕರಣಗಳ ಏರಿಕೆ: ಸೋಂಕಿನ ಲಕ್ಷಣಗಳು, ಸಾರ್ವಜನಿಕರು ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು, IMA ಸಲಹೆ ಏನು?. ಹೆಚ್ಚಿನ ಮುನ್ನೆಚ್ಚರಿಕೆಯ ಅಗತ್ಯವಿದ್ದರೂ, ಆತಂಕಪಡುವ ಅಗತ್ಯವಿಲ್ಲ" ಎಂದು ಸ್ಪಷ್ಟಪಡಿಸಿದೆ. ಹೆಚ್ಚಿನ H1N1 ಸೋಂಕುಗಳು ಸೌಮ್ಯ ಸ್ವರೂಪದ್ದಾಗಿರುತ್ತವೆ ಮತ್ತು ತಾವಾಗಿಯೇ ಗುಣವಾಗುತ್ತವೆ (self-limiting) ಎಂದು ವೈದ್ಯಕೀಯ ಸಂಸ್ಥೆ ತಿಳಿಸಿದೆ.ಮಳೆಗಾಲದಲ್ಲಿ ದೇಶಾದ್ಯಂತ ಹಂದಿಜ್ವರ ಅಥವಾ (H1N1) ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು, ಭಾರತೀಯ ವೈದ್ಯಕೀಯ ಅಸೋಸಿಯೇಷನ್ ​​(IMA) ಬುಧವಾರ ಸಾರ್ವಜನಿಕರು ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿದೆ. ಜನರು ಆಂಟಿಬಯಾಟಿಕ್‌ಗಳು ಮತ್ತು ಆಂಟಿವೈರಲ್ ಔಷಧಿಗಳನ್ನು ಸ್ವಯಂ-ಚಿಕಿತ್ಸೆಯಾಗಿ ಬಳಸಬಾರದು ಮತ್ತು ತೀವ್ರ ರೋಗಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದೆ.

ರಾಷ್ಟ್ರ ರಾಜಧಾನಿ ದೆಹಲಿಯಂತಹ ಮಹಾನಗರಗಳಲ್ಲಿ 1,770ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಮಹಾರಾಷ್ಟ್ರ, ಕರ್ನಾಟಕ ಹಾಗೂ ಪಶ್ಚಿಮ ಬಂಗಾಳದಲ್ಲೂ ಪ್ರಕರಣಗಳು ವರದಿಯಾಗಿವೆ. ಪ್ರಸ್ತುತ ಹರಡುತ್ತಿರುವ ವೈರಸ್ ಕಾಲೋಚಿತ ಇನ್ಫ್ಲುಯೆನ್ಸಾ ಎ (H1N1) ಆಗಿದ್ದು, ಇದರಲ್ಲಿ ಯಾವುದೇ ಹೊಸ ಆನುವಂಶಿಕ ರೂಪಾಂತರಗಳು (genetic mutations) ಕಂಡುಬಂದಿಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ನಡೆಸಿದ ನಿಗಾ ಪ್ರಕ್ರಿಯೆಯು ದೃಢಪಡಿಸಿದೆ ಎಂದು ಸಲಹೆಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಮುನ್ನೆಚ್ಚರಿಕೆಯ ಅಗತ್ಯವಿದ್ದರೂ, ಆತಂಕಪಡುವ ಅಗತ್ಯವಿಲ್ಲ" ಎಂದು ಸ್ಪಷ್ಟಪಡಿಸಿದೆ. ಹೆಚ್ಚಿನ H1N1 ಸೋಂಕುಗಳು ಸೌಮ್ಯ ಸ್ವರೂಪದ್ದಾಗಿರುತ್ತವೆ ಮತ್ತು ತಾವಾಗಿಯೇ ಗುಣವಾಗುತ್ತವೆ (self-limiting) ಎಂದು ವೈದ್ಯಕೀಯ ಸಂಸ್ಥೆ ತಿಳಿಸಿದೆ.

H1N1 ಸೋಂಕಿನ ಲಕ್ಷಣಗಳು: H1N1 ಸೋಂಕಿನಲ್ಲಿ ಸಾಮಾನ್ಯವಾಗಿ ತೀವ್ರ ಜ್ವರ ಮತ್ತು ಚಳಿ, ನಿರಂತರ ಒಣ ಕೆಮ್ಮು ಮತ್ತು ಗಂಟಲು ನೋವು, ತೀವ್ರ ಸ್ನಾಯು ನೋವು ಮತ್ತು ಆಯಾಸ, ತಲೆನೋವು, ಮೂಗು ಸೋರುವಿಕೆ ಅಥವಾ ಮೂಗು ಕಟ್ಟುವಿಕೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮಕ್ಕಳಲ್ಲಿ ವಾಕರಿಕೆ, ವಾಂತಿ ಅಥವಾ ಭೇದಿಯಂತಹ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ.ಸ್ವಯಂ-ಚಿಕಿತ್ಸೆಯ ಅಪಾಯಗಳು: ಇನ್ಫ್ಲುಯೆನ್ಸಾ ಎ (H1N1) ಒಂದು ವೈರಲ್ ಕಾಯಿಲೆಯಾಗಿದ್ದು, ಆಂಟಿಬಯಾಟಿಕ್‌ಗಳು ವೈರಸ್‌ಗಳನ್ನು ಕೊಲ್ಲುವುದಿಲ್ಲ ಎಂದು IMA ಹೇಳಿದೆ.

ಹಂದಿಜ್ವರದ ರೋಗಲಕ್ಷಣಗಳಿಗಾಗಿ ಅಜಿಥ್ರೊಮೈಸಿನ್ (Azithromycin), ಅಮೋಕ್ಸಿಸಿಲಿನ್-ಕ್ಲಾವ್ಯುಲನೇಟ್ (Amoxicillin-Clavulanate), ಸೆಫಿಕ್ಸಿಮ್ (Cefixime) ಅಥವಾ ಇತರ ಆಂಟಿಬಯಾಟಿಕ್‌ಗಳನ್ನು ಸೇವಿಸಬೇಡಿ," ಎಂದು ಹೇಳಿದೆ. ವೈರಲ್ ಸೋಂಕು ಹೆಚ್ಚಿರುವಾಗ ವಿವೇಚನೆಯಿಲ್ಲದೆ ಆಂಟಿಬಯಾಟಿಕ್‌ಗಳನ್ನು ಬಳಸುವುದರಿಂದ ದೇಹದ ರಕ್ಷಣಾತ್ಮಕ ಸೂಕ್ಷ್ಮಜೀವಿಗಳ ಸಮೂಹ (microbiome flora) ನಾಶವಾಗಬಹುದು ಮತ್ತು ಮಾರಣಾಂತಿಕ 'ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್' (AMR) ಅಥವಾ ಔಷಧ-ನಿರೋಧಕ ಶಕ್ತಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದೆ. ಅರ್ಹ ವೈದ್ಯರು ಕ್ಲಿನಿಕಲ್ ಮತ್ತು ಪ್ರಯೋಗಾಲಯದ ಸಂಶೋಧನೆಗಳ ಆಧಾರದ ಮೇಲೆ ದ್ವಿತೀಯ ಬ್ಯಾಕ್ಟೀರಿಯಾದ ಸೋಂಕನ್ನು ಪತ್ತೆಹಚ್ಚಿದಾಗ ಮಾತ್ರ ಅಂಟಿಬಯಾಟಿಕ್ ಬಳಸಬೇಕು ಎಂದು ಐಎಂಎ ಸ್ಪಷ್ಟಪಡಿಸಿದೆ.

ತುರ್ತು ಆರೈಕೆಯನ್ನು ಯಾವಾಗ ಪಡೆಯಬೇಕು: ಉಸಿರಾಟದ ತೊಂದರೆ, ಉಸಿರಾಟದ ತೊಂದರೆ ಅಥವಾ ತ್ವರಿತ ಉಸಿರಾಟದ ತೊಂದರೆ, ಎದೆ ನೋವು ಅಥವಾ ನಿರಂತರ ಒತ್ತಡ, ಮತ್ತು ತುಟಿಗಳು ಅಥವಾ ಬೆರಳುಗಳ ನೀಲಿ ಬಣ್ಣ ಸೇರಿದಂತೆ ತಕ್ಷಣದ ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿರುವ ಹಲವಾರು ಎಚ್ಚರಿಕೆ ಚಿಹ್ನೆಗಳನ್ನು ವೈದ್ಯಕೀಯ ಸಂಸ್ಥೆ ಪಟ್ಟಿ ಮಾಡಿದೆ.

ಕೆಮ್ಮುವಾಗ ರಕ್ತ ಬರುವುದು, ಅರೆನಿದ್ರಾವಸ್ಥೆ, ಗೊಂದಲ, ತೀವ್ರ ನಿದ್ರಾಹೀನತೆ ಅಥವಾ ರೋಗಗ್ರಸ್ತವಾಗುವಿಕೆಗಳು, ನಿರಂತರ ವಾಂತಿ ಮತ್ತು ಮೌಖಿಕ ದ್ರವಗಳನ್ನು ಸಹಿಸಲು ಅಸಮರ್ಥತೆಯನ್ನು ಅನುಭವಿಸುವ ರೋಗಿಗಳು ಸಹ ತುರ್ತು ಆರೈಕೆಯನ್ನು ಪಡೆಯಬೇಕು ಎಂದು ಅದು ಹೇಳಿದೆ. ಮಕ್ಕಳಿಗೆ, ತಿನ್ನಲು ಅಸಮರ್ಥತೆ, ಆಲಸ್ಯ, ಗೊಣಗುವುದು ಅಥವಾ ತೀವ್ರ ಎದೆಯ ಹಿಂತೆಗೆದುಕೊಳ್ಳುವಿಕೆಯನ್ನು ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿರುವ ಲಕ್ಷಣಗಳಾಗಿ ಪಟ್ಟಿ ಮಾಡಲಾಗಿದೆ.ತಡೆಗಟ್ಟುವ ಕ್ರಮಗಳು ಮತ್ತು ವ್ಯಾಕ್ಸಿನೇಷನ್: ಜನರು ಸೋಪ್ ಮತ್ತು ನೀರಿನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ಆಗಾಗ್ಗೆ ಕೈ ತೊಳೆಯುವುದು ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು ಸೇರಿದಂತೆ ತಡೆಗಟ್ಟುವ ಕ್ರಮಗಳನ್ನು ಅನುಸರಿಸಲು ಸಲಹೆ ನೀಡಿದೆ.

ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಟಿಶ್ಯೂ ಕಾಗದ ಅಥವಾ ಬಾಗಿದ ಮೊಣಕೈಯಿಂದ ಮುಚ್ಚಿಕೊಳ್ಳುವುದು ಮತ್ತು ಜನದಟ್ಟಣೆ ಮತ್ತು ಸುತ್ತುವರಿದ ಸ್ಥಳಗಳಲ್ಲಿ ಚೆನ್ನಾಗಿ ಹೊಂದಿಕೊಳ್ಳುವ ಮಾಸ್ಕ್ ಧರಿಸುವುದು ಸಹ ಶಿಫಾರಸು ಮಾಡಲಾಗಿದೆ. 'ಅನಾರೋಗ್ಯ ಬಂದಾಗ ಮನೆಯಲ್ಲೇ ಇರಿ: ಜ್ವರ ಕಡಿಮೆ ಮಾಡುವ ಔಷಧಿಗಳಿಲ್ಲದೆ ಜ್ವರ ಕಡಿಮೆಯಾದ ನಂತರ ಕನಿಷ್ಠ 24 ಗಂಟೆಗಳ ಕಾಲ ಶಾಲೆಗಳು, ಕೆಲಸದ ಸ್ಥಳಗಳು, ಹಬ್ಬ ಹರಿದಿನಗಳನ್ನು ತಪ್ಪಿಸಿ' ಎಂದು ಸಲಹೆ ನೀಡಲಾಗಿದೆ. ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ.
Mobile:- 8123824626,
ಸುದ್ದಿ ಸಹ್ಯಾದ್ರಿ ಇದು ನಮ್ಮೂರು ನಮ್ಮವರ ಧ್ವನಿ ಪ್ರಧಾನ ಸಂಪಾದಕರು ರಾಘವೇಂದ್ರ ತಾಳಗುಪ್ಪ 08183226626

ಮಡಸೂರು ಆನಂದ ಪೂಜಾರಿ ಬರ್ಬರ ಹತ್ಯೆ !. ಬೆಚ್ಚಿ ಬಿದ್ದ ಸಾರ್ವಜನಿಕರು.ಸಾಗರ ತಾಲೂಕಿನ ಪಡವಗೊಡು ಗ್ರಾಮ ಪಂಚಾಯತಿ ಮಡಸೂರು ಕಲ್ಮನೆ ಕೇರಿ ವಾಸಿ ಆನ...
26/08/2026

ಮಡಸೂರು ಆನಂದ ಪೂಜಾರಿ ಬರ್ಬರ ಹತ್ಯೆ !. ಬೆಚ್ಚಿ ಬಿದ್ದ ಸಾರ್ವಜನಿಕರು.
ಸಾಗರ ತಾಲೂಕಿನ ಪಡವಗೊಡು ಗ್ರಾಮ ಪಂಚಾಯತಿ ಮಡಸೂರು ಕಲ್ಮನೆ ಕೇರಿ ವಾಸಿ ಆನಂದ ಪೂಜಾರಿ ಎಂಬಾತನನ್ನು ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.. ಊರಿನ ಮುಖಂಡರಾದ ಮಾಜಿಗ್ರಾ.ಪ ಅಧ್ಯಕ್ಷ ಮಡಸೂರು ವೀರೆಂದ್ರ ನೇತೃತ್ವದಲ್ಲಿ ಗ್ರಾಮಸ್ಥರು ಕೊಲೆಗಟಕರನ್ನು ಕೂಡಲೇ ಬಂದಿಸಬೇಕೆಂದು ಆಗ್ರಹಿಸಿದರು.
ಸ್ಥಳ ಕ್ಕೆ ದಾವಿಸಿದ ಡಿವೈಸ್ಪಿ ನೇತೃತ್ವದ ತಂಡ ತಕ್ಷಣವೇ ಸ್ಥಳ ಪರಿಶೀಲಿಸಿ ಆರೋಪಗಳನ್ನು ಬಂಧಿಸಲು ಕಾರುಚರಣೆ ನಡೆಸುತ್ತಿದ್ದಾರೆ...ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ.
Mobile:- 8123824626,
ಸುದ್ದಿ ಸಹ್ಯಾದ್ರಿ ಇದು ನಮ್ಮೂರು ನಮ್ಮವರ ಧ್ವನಿ ಪ್ರಧಾನ ಸಂಪಾದಕರು ರಾಘವೇಂದ್ರ ತಾಳಗುಪ್ಪ 08183226626

ನೂತನ ಯುವ ಕಾಂಗ್ರೆಸ್ ಅಧ್ಯಕ್ಷರ ನೇಮಕಸೊರಬ ತಾಲ್ಲೂಕಿನ ವಿಧಾನಸಭಾ ಕ್ಷೇತ್ರ ಹಾಗೂ ಸೊರಬ ಬ್ಲಾಕ್‌ ಗೆ ಯುವ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡ...
25/08/2026

ನೂತನ ಯುವ ಕಾಂಗ್ರೆಸ್ ಅಧ್ಯಕ್ಷರ ನೇಮಕ
ಸೊರಬ ತಾಲ್ಲೂಕಿನ ವಿಧಾನಸಭಾ ಕ್ಷೇತ್ರ ಹಾಗೂ ಸೊರಬ ಬ್ಲಾಕ್‌ ಗೆ ಯುವ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಹೆಚ್. ಎಸ್. ಮಂಜುನಾಥ್ ಗೌಡ ಅವರು ಆದೇಶ ಹೊರಡಿಸಿದ್ದಾರೆ.

ಸೊರಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಯಶೋಧರ ಸಿ. ಅಂದವಳ್ಳಿ ಹಾಗೂ ಸೊರಬ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪಾಂಡುರಂಗ ಕೊಡಕಣಿ ಅವರನ್ನು ನೇಮಕ ಮಾಡಲಾಗಿದೆ.

ನೂತನ ಅಧ್ಯಕ್ಷರಿಗೆ ಇಂದು ಸಚಿವ ಮಧು ಬಂಗಾರಪ್ಪ ಅವರು ನೇಮಕಾತಿ ಆದೇಶವನ್ನು ವಿತರಿಸಿದರು.

ಕಾಂಗ್ರೆಸ್ ಪಕ್ಷದ ಮಾರ್ಗದರ್ಶನದಲ್ಲಿ, ಹಿರಿಯ ಹಾಗೂ ಕಿರಿಯ ಸ್ಥಳೀಯ ಮುಖಂಡರ ಸಹಕಾರದೊಂದಿಗೆ ಯುವ ಕಾಂಗ್ರೆಸ್ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವಂತೆ ರಾಜ್ಯಾಧ್ಯಕ್ಷರು ನೂತನ ಅಧ್ಯಕ್ಷರಿಗೆ ಸೂಚಿಸಿದ್ದಾರೆ. ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ರಾಹುಲ್ ಗಾಂಧಿ ಅವರ ಮಾರ್ಗದರ್ಶನದಂತೆ ಯುವ ಘಟಕವನ್ನು ತಳಮಟ್ಟದಿಂದ ಸಂಘಟಿಸಿ, ಪಕ್ಷದ ಸಂಘಟನೆಯನ್ನು ಮತ್ತಷ್ಟು ಸದೃಢಗೊಳಿಸುವಂತೆ ಅವರು ಕರೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಅವರು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹರ್ಷಿತ್ ಗೌಡ ರವರು, ಸೇರಿದಂತೆ ಸೊರಬ ತಾಲ್ಲೂಕಿನ ಯುವ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ.
Mobile:- 8123824626,
ಸುದ್ದಿ ಸಹ್ಯಾದ್ರಿ ಇದು ನಮ್ಮೂರು ನಮ್ಮವರ ಧ್ವನಿ ಪ್ರಧಾನ ಸಂಪಾದಕರು ರಾಘವೇಂದ್ರ ತಾಳಗುಪ್ಪ 08183226626

*ಈದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 3,000 ಪೊಲೀಸರ ನಿಯೋಜನೆ: ಎಸ್‌ಪಿ*ಶಿವಮೊಗ್ಗ: ಈದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿ...
25/08/2026

*ಈದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 3,000 ಪೊಲೀಸರ ನಿಯೋಜನೆ: ಎಸ್‌ಪಿ*ಶಿವಮೊಗ್ಗ: ಈದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾದ್ಯಂತ ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ನಿಖಿಲ್‌ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈದ್ ಹಬ್ಬದ ಭದ್ರತೆಗಾಗಿ ಇಡೀ ಜಿಲ್ಲೆಯಲ್ಲಿ ಸುಮಾರು 3,000 ಪೊಲೀಸರನ್ನು ನಿಯೋಜಿಸಲಾಗಿದೆ ಮುಂಜಾಗ್ರತಾ ಕ್ರಮವಾಗಿ 12 ಕೆಎಸ್‌ಆರ್‌ಪಿ ತುಕುಡಿಗಳು, ಒಂದು ಆರ್‌ಎಎಫ್ ತುಕುಡಿ ಹಾಗೂ ಒಂದು ಎಸ್‌ಐಆರ್ ತುಕಡಿಯನ್ನು ಜಿಲ್ಲೆಗೆ ಕರೆಸಿಕೊಳ್ಳಲಾಗಿದೆ. ಇದರ ಜೊತೆಗೆ 21 ಡಿಆರ್ ತುಕುಡಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು. ಹಬ್ಬದ ಹಿನ್ನೆಲೆಯಲ್ಲಿ ಕಳೆದ ಮೂರು ವಾರಗಳಿಂದ ಶಾಂತಿ ಸಭೆಗಳನ್ನು ನಡೆಸಲಾಗಿದ್ದು, ಪೊಲೀಸ್ ಇಲಾಖೆಯಿಂದ ಕೈಗೊಳ್ಳಬೇಕಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಪೂರ್ಣಗೊಳಿಸಲಾಗಿದೆ.
ಮಸೀದಿ ಹಾಗೂ ವಿವಿಧ ಸಮಿತಿ ಮುಖಂಡರೊಂದಿಗೆ ಸಭೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲಾಗಿದೆ. ಅಗತ್ಯ ಸೂಚನೆಗಳು ಮತ್ತು ಮಾರ್ಗಸೂಚಿಗಳನ್ನು ಕೂಡ ನೀಡಲಾಗಿದೆ ಎಂದರು.
ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಕಂಟ್ರೋಲ್ ಪ್ಲಾನ್ ಮತ್ತು ಎಕ್ಸೆಸ್ ಪ್ಲಾನ್ ಸಿದ್ಧಪಡಿಸಲಾಗಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಧ್ವನಿವರ್ಧಕಗಳ ಡೆಸಿಬಲ್ ಮಿತಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಈ ಕುರಿತು ಹೊರಡಿಸಿರುವ ಎಲ್ಲಾ ಆದೇಶಗಳನ್ನು ಮಸೀದಿ ಹಾಗೂ ಸಮಿತಿ ಮುಖಂಡರಿಗೆ ತಲುಪಿಸಲಾಗಿದೆ ಎಂದು ಎಸ್‌ಪಿ ನಿಖಿಲ್ ತಿಳಿಸಿದರು.
ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮೆರವಣಿಗೆ ಅಥವಾ ಹಬ್ಬದ ಸಂದರ್ಭದಲ್ಲಿ ಇತರೆ ಸಮುದಾಯಗಳಿಗೆ ಧಕ್ಕೆ ತರುವಂತಹ ಹೇಳಿಕೆ, ಕೃತ್ಯ ಅಥವಾ ದ್ವೇಷ ಮೂಡಿಸುವ ಪ್ರಯತ್ನ ಕಂಡುಬಂದರೆ ತಕ್ಷಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
13 ಮಂದಿ ಗಡಿಪಾರು:
ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರಬಹುದಾದವರ ವಿರುದ್ಧ ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸುಮಾರು 13 ಮಂದಿಯನ್ನು ಗಡಿಪಾರು ಮಾಡಲಾಗಿದ್ದು, 110ರ ಅಡಿಯಲ್ಲಿ 312 ಮಂದಿಯ ವಿರುದ್ದ ಸಕ್ಯುರಿಟಿ ಪ್ರೊಸೀಡಿಂಗ್ಸ್ ಆರಂಭಿಸಲಾಗಿದೆ ಎಂದು ಎಸ್‌ಪಿ ನಿಖಿಲ್ ಮಾಹಿತಿ ನೀಡಿದರು.ಹಿಂದಿನ ಪ್ರಕರಣಗಳಲ್ಲಿ ಭಾಗಿಯಾಗಿರುವವರು, ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿರುವವರು ಹಾಗೂ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರಬಹುದಾದ ವ್ಯಕ್ತಿಗಳನ್ನು ಗುರುತಿಸಿ ಅವರ ವಿರುದ್ಧ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು. ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ.
Mobile:- 8123824626,
ಸುದ್ದಿ ಸಹ್ಯಾದ್ರಿ ಇದು ನಮ್ಮೂರು ನಮ್ಮವರ ಧ್ವನಿ ಪ್ರಧಾನ ಸಂಪಾದಕರು ರಾಘವೇಂದ್ರ ತಾಳಗುಪ್ಪ 08183226626

25/08/2026

ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕದ ವತಿಯಿಂದ ದಿನಾಂಕ 26.08.2026 ರಿಂದ 6/9 /2026ರ ತನಕ ಪ್ರವಾದಿ ಮಹಮ್ಮದ್ ರ ಜನ್ಮದಿನದ ಪ್ರಯುಕ್ತ ರಾಜ್ಯಾದ್ಯಂತ ಸೀರತ್ ಅಭಿಯಾನ ನಡೆಯಲಿದೆ.

25/08/2026

ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಹರತಾಳ ಹಾಲಪ್ಪ. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ

ರೈತರು ಮತ್ತು ಕೃಷಿ ಕಾರ್ಮಿಕರ ಬದುಕನ್ನೇ ದುರ್ಬಲಗೊಳಿಸುವ ಕಸ್ತೂರಿ ರಂಗನ್ ವರದಿ ಜಾರಿಯನ್ನು ವಿರೋಧಿಸಿ ಪಾದಯಾತ್ರೆ ಮತ್ತು ಬಹಿರಂಗ ಸಭೆ. ದಿನಾಂ...
25/08/2026

ರೈತರು ಮತ್ತು ಕೃಷಿ ಕಾರ್ಮಿಕರ ಬದುಕನ್ನೇ ದುರ್ಬಲಗೊಳಿಸುವ ಕಸ್ತೂರಿ ರಂಗನ್ ವರದಿ ಜಾರಿಯನ್ನು ವಿರೋಧಿಸಿ ಪಾದಯಾತ್ರೆ ಮತ್ತು ಬಹಿರಂಗ ಸಭೆ. ದಿನಾಂಕ 3/ 9/ 2026ರ ಗುರುವಾರ ಆವಿನಹಳ್ಳಿ ಶ್ರೀ ದುರ್ಗಾಂಬಾ ದೇವಸ್ಥಾನದಿಂದ ಪಾದಯಾತ್ರೆ ಆರಂಭ. ಗಾಂಧಿ ಮೈದಾನ ಸಾಗರದಲ್ಲಿ ಬಹಿರಂಗ ಸಭೆ. ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ.
Mobile:- 8123824626,
ಸುದ್ದಿ ಸಹ್ಯಾದ್ರಿ ಇದು ನಮ್ಮೂರು ನಮ್ಮವರ ಧ್ವನಿ ಪ್ರಧಾನ ಸಂಪಾದಕರು ರಾಘವೇಂದ್ರ ತಾಳಗುಪ್ಪ 08183226626

Address

Sagar

Website

Alerts

Be the first to know and let us send you an email when Suddi Sahyadri posts news and promotions. Your email address will not be used for any other purpose, and you can unsubscribe at any time.

Shortcuts

Share