Radio Shivamogga

Radio Shivamogga We are the first Community Radio Station in the Malenadu region.

ಪರಿಸರ ಅಧ್ಯಯನ ಕೇಂದ್ರ ಶಿವಮೊಗ್ಗ ಹಾಗೂ ರೇಡಿಯೋ ಶಿವಮೊಗ್ಗ ಪರ್ಯಾವರಣ ಟ್ರಸ್ಟ್ ಮತ್ತು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಇವರ ಸಂಯುಕ್ತ ಆಶ್ರಯದ...
09/09/2025

ಪರಿಸರ ಅಧ್ಯಯನ ಕೇಂದ್ರ ಶಿವಮೊಗ್ಗ ಹಾಗೂ ರೇಡಿಯೋ ಶಿವಮೊಗ್ಗ ಪರ್ಯಾವರಣ ಟ್ರಸ್ಟ್ ಮತ್ತು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 8 2025 ರಂದು 42ನೇ ಸಹಾದ್ರಿ ದಿನಾಚರಣೆಯನ್ನು ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಆಚರಿಸಲಾಯಿತು ಕಾರ್ಯಕ್ರಮವನ್ನು ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನದ ಅಂಗವಾಗಿ ರಚಿಸಿದ ಪೋಸ್ಟರ್ ಬಿಡುಗಡೆ ಗೊಳಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಐಐಟಿ ಧಾರವಾಡ ದ ಅತಿಥಿ ಉಪನ್ಯಾಸಕರ ಹಾಗೂ JNNC ವಿಶ್ರಾಂತ ಉಪ ಪ್ರಾಂಶುಪಾಲರಾದ ಡಾಕ್ಟರ್ ಎಲ್ ಶ್ರೀಪತಿ ರವರು ಮಾತನಾಡುತ್ತಾ
"ಪ್ರಪಂಚದ ಶ್ವಾಸಕೋಶ ಎಂದು ಕರೆಯುವ ಪಶ್ಚಿಮ ಘಟ್ಟದ ಮೇಲೆ ನಿರಂತರವಾಗಿ ಸಾವಿರಾರು ಯೋಜನೆಗಳು ಬರುತ್ತಿದ್ದು ಇದನ್ನು ಸಹ್ಯಾದ್ರಿ ಪರ್ವತವು ಸಹಿಸಲಾಗದ ಸ್ಥಿತಿಯಲ್ಲಿದೆ ವಿದ್ಯಾರ್ಥಿಗಳಾದ ನೀವು ನಿಮ್ಮ ಮುಂದಿನ ಸುಂದರ ಭವಿಷ್ಯಕ್ಕಾಗಿ ಸಹ್ಯಾದ್ರಿ ಪರ್ವತವನ್ನ ಸಂರಕ್ಷಿಸಿಕೊಳ್ಳುವ ಹೋರಾಟಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು" ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸಂಧ್ಯಾ ಕಾವೇರಿಯವರು ಮಾತನಾಡುತ್ತಾ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಶರಾವತಿ ಉಳಿಸಿ ಆಂದೋಲನದಲ್ಲಿ ಭಾಗವಹಿಸಿ ಹಾಗೆ ಬೀದಿ ನಾಟಕಗಳ ಮೂಲಕ ಸಮುದಾಯಕ್ಕೆ ಅರಿವು ಮೂಡಿಸುವ ಕಾರ್ಯವನ್ನು ಸಹ ಮಾಡಿರುತ್ತಾರೆ. ನಾವು ಮಣ್ಣು ನೀರು ಗಾಳಿ ಇವುಗಳನ್ನು ಯಾವಾಗಲೂ ಶುದ್ಧವಾಗಿ ಇಟ್ಟುಕೊಳ್ಳುವ ಸಂಕಲ್ಪ ಮಾಡಬೇಕು ಆಗ ಮಾತ್ರ ನಾವು ನಮ್ಮನ್ನು ರಕ್ಷಿಸಿಕೊಂಡಂತಾಗುತ್ತದೆ ಎಂದು ತಿಳಿಸಿದರು ಕಾರ್ಯಕ್ರಮದ ಪ್ರಸ್ತಾವಿಕ ನುಡಿಯ ಮೂಲಕ ಸಹ್ಯಾದ್ರಿ ದಿನಾಚರಣೆ ಹೇಗೆ ಆರಂಭವಾಯಿತು ಕರ್ನಾಟಕದ ಅಪ್ಪಿಕೋ ಚಳುವಳಿಯ ಯಶಸ್ಸಿನ ನೆನಪಿಗಾಗಿ ಶ್ರೀ ಸುಂದರ ಲಾಲ್ ಬಹುಗುಣ ಇವರ ಮಾರ್ಗದರ್ಶನದಂತೆ ಸಪ್ಟೆಂಬರ್ 8ನೇ ತಾರೀಖಿನ ಸಹ್ಯಾದ್ರಿ ದಿನಾಚರಣೆ ಎಂದು ಆಚರಿಸಿಕೊಂಡು ಬರುತ್ತಿದ್ದೇವೆ ವೇದಿಕೆಯಲ್ಲಿ ಮಾನಸ ಟ್ರಸ್ಟ್ ಇದರ ನಿರ್ದೇಶಕರಾದ ಡಾಕ್ಟರ್ ರಜನಿ ಪೈ ಕಾಲೇಜಿನ ಆಡಳಿತ ಅಧಿಕಾರಿಯಾದ ಶ್ರೀರಾಮಚಂದ್ರ ಬಾಳಿಗ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು

06/09/2025

ರೇಡಿಯೋ ಶಿವಮೊಗ್ಗ 90.8 fm
ಸಮುದಾಯ ಬಾನುಲಿ
ಭರವಸೆಗಾಗಿ ಭವಿಷ್ಯಕ್ಕಾಗಿ
ನಮ್ಮ ಬಾನುಲಿ…

Address

No. 70/1, Rathnakara Nagara, Opp. Keladi Shivappa Nayaka University Of Agricultural & Horticultural Scinces, Matthodu Road
Shimoga
577204

Opening Hours

Monday 6am - 8pm
Tuesday 6am - 8pm
Wednesday 6am - 8pm
Thursday 6am - 8pm
Friday 6am - 8pm
Saturday 6am - 8pm
Sunday 6am - 8pm

Telephone

+919686096279

Alerts

Be the first to know and let us send you an email when Radio Shivamogga posts news and promotions. Your email address will not be used for any other purpose, and you can unsubscribe at any time.

Contact The Business

Send a message to Radio Shivamogga:

Share

Category