04/03/2023
*ಸಿರಾ ತಾಲೂಕಿನಾದ್ಯಂತ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಹಾಗೂ ನಿರ್ಮಾಣವಾಗುತ್ತಿರುವ ಚೆಕ್ ಡ್ಯಾಂ/ ಪಿಕಪ್ , ಬ್ರಿಡ್ಜ್ ಹಾಗೂ ಬ್ಯಾರೇಜ್ ಕಾಮಗಾರಿಗಳ ವೀಕ್ಷಣೆ ಮಾಡಿದ ಶಾಸಕ ಡಾ. ರಾಜೇಶ್ ಗೌಡ*
ಮಾನ್ಯ ಶಾಸಕರಾದ ಶ್ರೀ ಡಾ.ಸಿ.ಎಂ.ರಾಜೇಶ್ ಗೌಡ ರವರು ಶಿರಾ ತಾಲೂಕಿನಾದ್ಯಂತ ಸಣ್ಣ ನೀರಾವರಿ ಇಲಾಖೆ ವತಿಯಿಂದ 30 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗಿರುವ
ಹಲವಾರು ಕಾಮಗಾರಿಗಳು ಈ ಎರಡು ವರ್ಷ ಅವಧಿಯಲ್ಲಿ ಪೂರ್ಣಗೊಂಡಿದ್ದು, ಕೆಲವು ಕಾಮಗಾರಿಗಳು ಪ್ರಗತಿಯಲ್ಲಿದ್ದು
ಇಂದು ಅಧಿಕಾರಿಗಳ ಜೊತೆ ಬೇಜ್ಜಿಹಳ್ಳಿ ಕಲ್ಯಾಣಿ ಸುಂದರೀಕರಣ ಹಾಗೂ ನೀರು ಶೇಖರಣೆ ಯೋಜನೆ,
ದೊಡ್ಡ ಬಾಣಗೆರೆ ಕೆರೆ ಏರಿ ಸಂಸ್ಕರಣೆ,ಕೆರೆ ಹಳ್ಳ ಸ್ವಚ್ಚ ಹಾಗೂ ತಡಗೋಡೆ ನಿರ್ಮಾಣ,
ಕರೆತಿಮ್ಮನಹಳ್ಳಿ ಹಾಗೂ ನಾರಗೊಂಡನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ರೈತರಿಗೆ ಕೃಷಿ ಚಟುವಟಿಕೆಗೆ ಹೆಚ್ಚಿನ ಅನುಕೂಲವಾಗುವಂತೆ ನೂರಾರು ಎಕರೆ ಗೂ ಅಧಿಕ ಆಗುವಂತೆ ಚೆಕ್ ಡ್ಯಾಂ ನಿರ್ಮಾಣ,
ಬರಗೂರು ಕೆರೆ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣ ಹಾಗೂ ನೀರು ಶೇಖರಣೆ ಘಟಕ ,
ಕಲ್ಲಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಕೃಷಿಕರಿಗೆ ಅನುಕೂಲವಾಗುವಂತೆ ಬೃಹತ್ ಚೆಕ್ ಡ್ಯಾಂ ನಿರ್ಮಾಣ,
ಕಾಮಗೊಂಡನಹಳ್ಳಿ 2km ಕೆರೆ ಮತ್ತು ಕೆರೆ ಏರಿ ಅಭಿವೃದ್ದಿ ಹಾಗೂ ಕೆರೆ ಏರಿಯ ಮೇಲೆ 1.5km ಕಾಲುದಾರಿ ಅಭಿವೃದ್ದಿ ಮತ್ತು ತಂತಿ ಬೇಲಿ ವ್ಯವಸ್ಥೆ,, ಮದಲೂರು ಕೆರೆ ಪೂರಕ ನಾಲ ಅಭಿವೃದ್ಧಿ ನಿರ್ಮಾಣ,
ಮದಲೂರು ಚಿಕ್ಕಕೆರೆ ಎಸ್ಕೇಪ್ ಗೇಟ್
ಮದಲೂರು ಕೆರೆ ಅಂಗಳ ಕೆರೆ ಏರಿ ಮತ್ತು ಕೋಡಿ ದುರಸ್ತಿ ನಿರ್ಮಾಣ ಕಾಮಗಾರಿ ಹಾಗೂ ಮದಲೂರು ಕೆರೆ ಕೋಡಿ ಬಳಿ ಬ್ರಿಡ್ಜ್ ರಿಪೇರಿ,
ಮಾನoಗಿ ಗ್ರಾಮದ ವ್ಯಾಪ್ತಿಯಲ್ಲಿ ರೈತರಿಗೆ ಅನುಕೂಲವಾಗುವಂತೆ ಚೆಕ್ ಡ್ಯಾಂ ತಡೆಗೋಡೆ ನಿರ್ಮಾಣ,
ತಾವರೆಕೆರೆ ಬಳಿಯ ಬಂಡಿ ಹೊಳೆಗೆ ಚೆಕ್ ಡ್ಯಾಂ ಕಂ ಬ್ರಿಡ್ಜ್ ನಿರ್ಮಾಣ,
ಯಲಿಯೂರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹತ್ತಿರ ತಡೆಗೋಡೆ ನಿರ್ಮಾಣ,
ಟಿ. ರಂಗನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ರೈತರಿಗೆ ಅನುಕೂಲವಾಗುವಂತೆ ಚೆಕ್ ಡ್ಯಾಂ ನಿರ್ಮಾಣ,
ಹೊಸಮಲ್ಲನ ಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ರೈತರಿಗೆ ಅನುಕೂಲವಾಗುವಂತೆ ಚೆಕ್ ಡ್ಯಾಂ ನಿರ್ಮಾಣ ಮತ್ತು ಹುಂಜಿನಾಳು ಗ್ರಾಮದ ವ್ಯಾಪ್ತಿಯಲ್ಲಿ ರೈತರ ನೂರಾರು ಎಕರೆ ಜಮೀನುಗಳಿಗೆ ಅಂತರ್ಜಲವೃದ್ಧಿಯಾಗಲು ಸೇತುವೆ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿಯ
ಸ್ಥಳಗಳಿಗೆ ಭೇಟಿ ನೀಡಿ ಕೆಲಸದ ಕಾಮಗಾರಿಗಳ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.
Man of Simplicity