Z9 Kannada

Z9 Kannada ಭ್ರಷ್ಟರ ವ್ಯವಸ್ಥೆ ವಿರುದ್ಧ ನಮ್ಮ ಧ್ವನಿ. ನಮ್ಮ ಹೋರಾಟ

23/08/2026
20/08/2026

ವೈರಲ್ ಭಾಷಣಕ್ಕೆ ತಡೆ ಹಾಕಲು ಬಂದ ಪೊಲೀಸ್..! ಕಾನೂನು ತಿಳಿದಿದ್ದರೆ ಉತ್ತರ ಹೇಗಿರುತ್ತೆ ಎಂಬುದಕ್ಕೆ ಸಾಕ್ಷಿಯಾದ ಕ್ಷಣ..! # Z9 Kannada # # #

18/08/2026

ಪ್ರಸ್ತಾಪಿತ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಳಕ್ಕೆ ಭೇಟಿ

ತುಮಕೂರು ಜಿಲ್ಲೆಯಲ್ಲಿ ಸುಮಾರು 26 ವರ್ಷಗಳಿಂದ ವಿವಿಧ ಹಂತದ ಮೇಲ್ಮನವಿ ಹಾಗೂ ನ್ಯಾಯಾಂಗ # Z9 Kannada # # #

18/08/2026

ಚಾಮರಾಜನಗರ: ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಎನ್‌ಕೌಂಟರ್ ನಡೆದಿರುವ ಘಟನೆ ಕುರಿತು – ಹೊನ್ನೂರು ಪ್ರಕಾಶ್ ಸ್ಥಳಕ್ಕೆ ಭೇಟಿ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಎನ್ನಲಾದ ಎನ್‌ಕೌಂಟರ್ ಘಟನೆ ಕುರಿತು ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್ ಅವರು ಸ್ಥಳಕ್ಕೆ ಭೇಟಿ ನೀಡಿ .

ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಸಂತ್ರಸ್ತ ಕುಟುಂಬಕ್ಕೆ ₹5 ಕೋಟಿ ಪರಿಹಾರ ನೀಡಬೇಕು ಹಾಗೂ ಘಟನೆಗೆ ಸಂಬಂಧಿಸಿದ ಅರಣ್ಯ ಅಧಿಕಾರಿಗಳನ್ನು ತಕ್ಷಣ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

“ನ್ಯಾಯ ಸಿಗುವವರೆಗೂ ರೈತ ಸಂಘದ ಹೋರಾಟ ಮುಂದುವರಿಯುತ್ತದೆ.”

✊ ಸಾಮೂಹಿಕ ನಾಯಕತ್ವ – ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ # Z9 Kannada # MR Mallesh :-9980231542 # # #

16/08/2026

ಸದರಿ ಅಪರಿಚಿತ ಮಹಿಳೆಯ ಮೃತ ದೇಹವು ಅರ್ಧ ಸುಟ್ಟ ಸ್ಥಿತಿಯಲ್ಲಿ ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲೂಕು , ಆಶ್ರೀಯಾಳು ಗ್ರಾಮದ ತೋಟದಲ್ಲಿ ದಿನಾಂಕ 30/07/ 2026 ರಂದು ದೊರೆತಿದ್ದು ಈ ವರೆಗೆ ಪತ್ತೆಯಾಗಿರುವುದಿಲ್ಲ ಸದರಿ ಕೊಲೆ ಪ್ರಕರಣದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದಲ್ಲಿ 25000/- ನಗದು ಬಹುಮಾನ ನೀಡಲಾಗುವುದು ಹಾಗೂ ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಹಾಗೂ ಸಾರ್ವಜನಿಕರು ತಮ್ಮ ಗ್ರಾಮದ ಸುತ್ತಮುತ್ತಲಲ್ಲಿ ಯಾವುದೆ ಮಹಿಳೆ ಕಾಣೆಗಿರುವ ಬಗ್ಗೆ ಮಾಹಿತಿ ಇದ್ದರೆ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ತಿಳಿಸಲು ಕೋರಿ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿರುತ್ತೆ ಮಾಹಿತಿ ನೀಡಬೇಕಾದ ಮೊಬೈಲ್ ಸಂಖ್ಯೆ 9480802973 ,9535705412 # Z9 Kannada # MR Mallesh # # #

16/08/2026

ಹೆಗ್ಗಡದೇವನ ಕೋಟೆ ಕುಂದೂರಿನ ಬಳಿ ಬೆಟ್ಟದಲ್ಲಿ ನೆಲೆಸಿರುವ ಚಿಕ್ಕದೇವಮ್ಮ ಮೈಸೂರಿನ ಚಾಮುಂಡಿ ದೇವತೆಯ ಸಹೋದರಿಯರಲ್ಲಿ ಒಬ್ಬಳು. ಈಕೆಯ ಕುರಿತು ಹಂಪಾಪುರ ಹಿರೇನಂದಿಯ ವಾರಗಿತ್ತಿಯರಾದ ಚಾಮಮ್ಮ ಮತ್ತು ಲಕ್ಷ್ಮಮ್ಮ ಗಂಟೆಗಟ್ಟಲೆ ಹಾಡಬಲ್ಲರು. ಅವರ ಹಾಡಿನ ಸಣ್ಣದೊಂದು ಸ್ಯಾಂಪಲ್ ನಿನ್ನೆ ಅಚಾನಕ್ಕಾಗಿ ಹೋದಾಗ ಕೇಳಿಕೊಂಡದ್ದು. # Z9 Kannada Mallesh # # #

15/08/2026

ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿಯ ಎತ್ತಪ್ಪನ ಹಟ್ಟಿ ಗ್ರಾಮ ಇಲ್ಲಿಯ ಸರ್ಕಾರಿ ಶಾಲೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನೋತ್ಸವವನ್ನು ಶ್ರದ್ಧೆ ಮತ್ತು ದೇಶಭಕ್ತಿಯೊಂದಿಗೆ ಶಾಲಾ ಸಿಬ್ಬಂದಿ ಮತ್ತು ಮಕ್ಕಳು ಗ್ರಾಮಸ್ಥರು ಸೇರಿ ಆಚರಿಸಿದರು ಇದೇ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಇವರು ಸುಮಾರು 60 ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ವಿತರಿಸುವ ಮೂಲಕ ತಮ್ಮ ದೇಶಭಕ್ತಿಯನ್ನು ವ್ಯಕ್ತಪಡಿಸಿದರು # Z9 Kannada # MR Mallesh # #

14/08/2026

ಕಳ್ಳಂಬೆಳ್ಳ ಹೋಬಳಿಯ ಕಟಾವೀರನಹಳ್ಳಿ ದೇವರಾಜ್ ಅರಸು ಹಾಸ್ಟೆಲ್ ನಲ್ಲಿ ನೆನ್ನೆ ಅಕ್ಕಿ ಮತ್ತು ರಾಗಿ ಹಿಟ್ಟಿನಲ್ಲಿ ಹುಳುಗಳು ಇರುವ ವಿಡಿಯೋ ಸುದ್ದಿ ಪ್ರಸಾರವಾದ ಹಿನ್ನೆಲೆ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಸ್ಟೆಲಿಗೆ ಭೇಟಿ ನೀಡಿ ಹಾಸ್ಟೆಲ್ ಅಡುಗೆ ಸಿಬ್ಬಂದಿಯ ನೇತೃತ್ವದಲ್ಲಿ ಎಲ್ಲಾ ಸ್ವಚ್ಛಗೊಳಿಸಿ ಇನ್ನು ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇವೆ ಮತ್ತು ಇನ್ನು ಮುಂದೆ ಈ ತರಹ ಘಟನೆ ಸಂಭವಿಸಿದರೆ ಕಾನೂನು ಕ್ರಮವಹಿಸಿ ಈ ಕೆಲಸ ಕಾರಣಾಂತರದಿಂದ ನಡೆದಿರುತ್ತದೆ ಯಾವುದೇ ಇತರಹದ ಘಟನೆ ಸಂಭವಿಸದಂತೆ ನೋಡಿಕೊಂಡು ಕಾರ್ಯನಿರ್ವಹಿಸುತ್ತೇವೆ ಎಂದು ಹಾಸ್ಟೆಲ್ ಮಕ್ಕಳ ಸಮ್ಮುಖದಲ್ಲಿ ಹಾಸ್ಟೆಲ್ ಮೇಲ್ವಿಚಾರಕರು ಅಡುಗೆ ಸಿಬ್ಬಂದಿಯವರು ತಿಳಿಸಿರುತ್ತಾರೆ # ZKannada # # #

14/08/2026

ಕಳ್ಳಂಬೆಳ್ಳ ಟೋಲ್ ಬಳಿ ರೇಣುಕಾ ಯಲ್ಲಮ ದೇವಾಲಯ ನಿರ್ಮಾಣ ವಾಗಿದ್ದು ದೇವರ ಪೂಜೆಗೆ ಭಕ್ತಾದಿಗಳು ಸಾವಿರಾರು ಸಂಖ್ಯೇಯಲ್ಲಿ ಬರುತ್ತಿದ್ದು ಪ್ರತಿ ಅಮಾವಾಸ್ಯ ದಿನ ವೀಶೇಶ ಪೂಜಾ ಕಾರ್ಯಕ್ರಮ ನಡೆಯುತ್ತಿದ್ದು ಭಕ್ತಾದಿಗಳು ಮಂಗಳವಾರ. ಶುಕ್ರವಾರ. ಗದ್ದುಗೆ ಪ್ರವಚನ ಕೇಳಲು ಬರುತ್ತಿದ್ದು ವಿಶೇಷವಾಗಿ ಇಲ್ಲಿ ಮರೆ ನೀರಿನ ಪದ್ದತಿ ಇದ್ದು ತಮ್ಮ ಸಮಸ್ಯೆಗಳ ಹಾಗೂ ಇತರೆ ಕಾರ್ಯಸಿದ್ಧಿಗೆ ಪೂಜೆ ಸಲ್ಲಿಸಿ ಮರೆ ನೀರನ್ನು ಹಾಕಿಸಿಕೊಳ್ಳುವುದು ರೇಣುಕಾ ಎಲ್ಲಮ್ಮ ದೇವಿಯ ವಿಶೇಷವಾಗಿದೆ ಕಳ್ಳಂಬೆಳ್ಳ ಟೋಲ್ ಗೇಟ್ ಬಳಿ ಈ ದೇವಸ್ಥಾನ ನಿರ್ಮಾಣವಾಗಿದ್ದು ಈಗಾಗಲೇ ಸಾವಿರಾರು ಭಕ್ತಾದಿಗಳನ್ನು ಹೊಂದಿರುವ ಈ ರೇಣುಕಾ ಎಲ್ಲಮ್ಮ ದೇವಿಯು ಪ್ರತಿ ಮಂಗಳವಾರ. ಶುಕ್ರವಾರ ಗದ್ದುಗೆ ಪ್ರವಚನಕ್ಕಾಗಿ ಭಕ್ತಾದಿಗಳು ಸೇರಬಹುದು # Z9 Kannada # MR Mallesh # Mob:-9980231542 # # #

Address

Sira

Telephone

+919980231542

Website

Alerts

Be the first to know and let us send you an email when Z9 Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Z9 Kannada:

Shortcuts

Share