01/09/2026
ಇಂದು ಜನತಾದಳ ಕಚೇರಿಯಲ್ಲಿ ಸಾಗುವಳಿ ಚೀಟಿ ಇದ್ದರೂ ಸಕ್ರಮವಾಗದೆ ಇರುವ ರೈತರೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಸಾಗುವಳಿ ಸಕ್ರಮಗೊಳಿಸಲು ಅಹೋರಾತ್ರಿ ಹೋರಾಟ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಯಿತು...
ಶಿರಾ ತಾಲ್ಲೂಕು ಆಡಳಿತ ನಮ್ಮ ಮನವಿಗೆ ಸ್ಪಂದಿಸಿ ನಿವೃತ್ತ ತಹಸಿಲ್ದಾರ್ ಚಿಕ್ಕಚೆನ್ನಯ್ಯ ಮತ್ತು ರಾಮದಾಸ್ ಕಾಲದ ಬಗರು ಹುಕುಂ ಸಾಗುವಳಿ ಸಮಸ್ಯೆಗಳನ್ನು ಇನ್ನೂ ಒಂದು ವಾರದಲ್ಲಿ ಪರಿಹರಿಸದಿದ್ದರೆ ಸೆಪ್ಟಂಬರ್ 8 ಮಂಗಳವಾದಿಂದ ಶಿರಾ ಮಿನಿ ವಿಧಾನಸೌಧ (ಹೊಸ ತಾಲ್ಲೂಕು ಕಚೇರಿ) ಮುಂದೆ ರೈತರಿಗೆ ನ್ಯಾಯ ಕೊಡಿಸಲು ಅಹೋರಾತ್ರಿ ಧರಣಿ ನಡೆಸಲಾಗುತ್ತದೆ..