08/03/2025
*'ಹಾಂಗ್ಯೋ' ದ ಸಾಮಾಜಿಕ ಕಳಕಳಿ ಮೆಚ್ಚುವಂಥದ್ದು: ಪುಷ್ಪಲತಾ ವೈದ್ಯ*
ಸಮಾನತೆ ಅನ್ನೊದು ನಮ್ಮ ಮನೆಯಿಂದನೇ ಪ್ರಾರಂಭ ಆಗಬೇಕು ಅವಕಾಶ ಅನ್ನೊದು ನಮ್ಮಿಂದಲೇ ಶುರು ಆಗಬೇಕು ಅದನ್ನು ಅರ್ಥ ಮಾಡಿಕೊಂಡು ಮಹಿಳೆಯರಿಗಾಗಿ ವಿಶೇಷ ವ್ಯವಸ್ಥೆ ಮಾಡಿರುವ ಹಾಂಗ್ಯೋ ಗ್ರೂಪ್ ಗೂ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ ಪೈ ರವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಉಸ್ತುವಾರಿ ಸಚೀವ ಮಂಕಾಳ ವೈದ್ಯ ರವರ ಧರ್ಮಪತ್ನಿ ಪುಷ್ಪಲತಾ ವೈದ್ಯ ತಿಳಿಸಿದರು..
ಇಂದು ಮಹಿಳಾ ದಿನಾಚರಣೆ ಅಂಗವಾಗಿ ಮುರ್ಡೇಶ್ವರ ಹಾಗೂ ಭಟ್ಕಳ ದ ರೈಲೈ ನಿಲ್ದಾಣ ದಲ್ಲಿ ಮಹಿಳೆಯರಿಗಾಗಿ ಹಾಂಗ್ಯೋ ಐಸ್‌ಕ್ರೀಂ ಕಂಪನಿ ವತಿಯಿಂದ ವಿಶ್ರಾಂತಿ ಕೊಠಡಿ ನಿರ್ಮಾಣ ಮಾಡಲಾಗಿದ್ದು ಮುರುಡೇಶ್ವರ ವಿಶ್ರಾಂತಿ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತ ಎಲ್ಲ ಮಹಿಳೆಯರಿಗೆ ಶುಭಾಶಯ ತಿಳಿಸಿ
ಮಹಿಳೆರಿಗಾಗಿ ವಿಶೇಷ ವಾದ ಆಸನ ವ್ಯವಸ್ಥೆ ಹೊಂದಿರುವ ಕೊಠಡಿ ನಿರ್ಮಾಣ ಮಾಡಿ ಕೊಟ್ಟಿದ್ದಾರೆ ಇದರಿಂದ ಮಹಿಳೆಯರಿಗೆ ತುಂಬಾ ಅನುಕೂಲವಾಗಲಿದೆ... ದುಡ್ಡು ಎಲ್ಲರ ಹತ್ತಿರ ವೂ ಇರುತ್ತದೆ ಆದರೆ ಸಮಾಜಕ್ಕೆ ಒಳ್ಳೆಯದು ಮಾಡಬೇಕು ಎಂಬ ಆಶಯದೊಂದಿಗೆ ಹಣ ಖರ್ಚು ಮಾಡುವವರು ತುಂಬಾ ವಿರಳ ಆದರೆ ಹಾಂಗ್ಯೋ ದ ಹಾಗೂ ಪ್ರದೀಪ ಪೈ ರವರ ಸಾಮಾಜಿಕ ಕಾಳಜಿ ಮೆಚ್ಚುವಂಥದ್ದು ಎಂದರು...
ಕೊಂಕಣ ರೈಲ್ವೆ ಯ ಸೀನಿಯರ್ ರೀಜನಲ್ ಟ್ರಾಫಿಕ್ ಮೆನೇಜರ್ ದಿಲೀಪ್ ಭಟ್ಟ ಮಾತನಾಡಿ ಇಂದಿನ ಮಹಿಳಾ ದಿನಾಚರಣೆ ಯ ಶುಭ ಸಂದರ್ಭದಲ್ಲಿ ಹಾಂಗ್ಯೋ ಐಸ್‌ಕ್ರೀಂ ಕಂಪನಿ ವತಿಯಿಂದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ ಪೈ ರವರು ಮಹಿಳಾ ಪ್ರಯಾಣಿಕರಿಗೆ ತುಂಬಾ ಅನುಕೂಲ ವಾಗುವ ಪ್ರತ್ಯೇಕ ಆಸನದ ಕೊರಡಿ ನಿರ್ಮಾಣ ಮಾಡಿಕೊಟ್ಟಿರುವುದು ತುಂಬಾ ವಿಶೇಷ ಆದ್ದರಿಂದ ಅವರಿಗೆ ಶುಭ ಹಾರೈಸಿ ಧನ್ಯವಾದ ತಿಳಿಸುತ್ತೇನೆ ಎಂದರು..
ಕೊಂಕಣ ರೈಲ್ವೆ ಯ ಅಸಿಸ್ಟಂಟ್ ಕಮರ್ಷಿಯಲ್ ಮೆನೇಜರ್ ಜಿ ಡಿ ಮೀನಾ ಮಾತನಾಡಿ ಎಲ್ಲ ಮಹಿಳೆಯರಿಗೆ ಶುಭ ಕೊರುತ್ತ ನಮ್ಮ ಕೊಂಕಣ ರೈಲ್ವೆ ನಿಲ್ದಾಣ ದಲ್ಲಿ ಮಹಿಳೆಯರಿಗಾಗಿ ಕೊಠಡಿ ವ್ಯವಸ್ಥೆ ಮಾಡಿಕೊಟ್ಟ ಹಾಂಗ್ಯೋ ಕಂಪನಿ ಎಮ್ ಡಿ ಪ್ರದೀಪ ಪೈ ರವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು..
ಭಟ್ಕಳ ದ ಮಹಿಳಾ ಕೊಠಡಿಯನ್ನು ಪ್ರದೀಪ ಪೈ ರವರ ತಾಯಿ ವೀಣಾ ಜೀ ಪೈ ರವರ ಅಮೃತ ಹಸ್ತದಿಂದ ಉದ್ಘಾಟಿಸಲಾಯಿತು..
ಕಾರ್ಯಕ್ರಮ ದಲ್ಲಿ ಉದ್ಯಮಿ ರಾಜೇಶ ನಾಯ್ಕ, ಸ್ಥಳೀಯ ಅನೇಕ ಮಹಿಳೆಯರು, ಕೊಂಕಣ ರೈಲ್ವೆ ಸಿಬ್ಬಂದಿಗಳು, ಹಾಂಗ್ಯೋದ ಹಿತೈಷಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದು