RJ Thrishool Gowda

RJ Thrishool Gowda Storyteller 🎙 | Content Creator 🎭
📜 History • 📰 Current Affairs • 🏏 Cricket • 🎬 Cinema • 🌍 Culture
Ex RJ – Radio City 91.1 FM & 93.5 Red FM 📻

26/08/2026

Toxic Review: Definitely a fairy tale for grown ups!🔥

25/08/2026

India has legends in every role, but there’s only ONE mastermind. ♟️
🏏The ultimate cricket scientist!

20/08/2026

ದುಡ್ಡಿದ್ದವರು ನಾಳೆ ಇಲ್ಲ ಅನ್ನೋ ಹಾಗೆ ಖರ್ಚು ಮಾಡ್ತಾರೆ, ಯಾಕಂದ್ರೆ ಅವರ ಬಳಿ ನಾಳೆಗೂ ದುಡ್ಡಿರುತ್ತೆ! ಆದರೆ ಮಧ್ಯಮ ವರ್ಗ?
ಒಂದು ದಿನದ ಸಂಭ್ರಮಕ್ಕಾಗಿ, ಇಡೀ ಜೀವನದ ಉಳಿತಾಯ ಕಳೆದುಕೊಳ್ಳಬೇಕಾ?
ಕಮೆಂಟ್ ಮಾಡುವ ಮುನ್ನ ಪೂರ್ತಿ ವೀಡಿಯೋ ನೋಡಿ.

19/08/2026

ಮಂಡಿ ನೋವು (Knee Injury) ಅಂದ್ರೆ just pain ಅಲ್ಲ! 😳

ಆಡ್ತಾ ಇದ್ದಾಗ sudden twist, wrong landing ಅಥವಾ direct impact — ಇವೆಲ್ಲಾ ACL tear ಗೆ ಕಾರಣ ಆಗಬಹುದು.

18/08/2026

🚨 ಜುಬಾನ್ ಕೇಸರಿ ಆಟಕ್ಕೆ ಬ್ರೇಕ್!
ಬಾಲಿವುಡ್ ಸ್ಟಾರ್‌ಗಳಿಗೆ IAS ಅಧಿಕಾರಿ ತುಕಾರಾಂ ಮುಂಧೆ ಅವರ ಖಡಕ್ ವಾರ್ನಿಂಗ್! 📄⚖️

17/08/2026

ನಾನು ಒಂದು ಕಾಲದಲ್ಲಿ ರಾಜಕೀಯದಲ್ಲಿ ತುಂಬಾ ಆಸಕ್ತಿ ಹೊಂದಿದ್ದವನು. ಕರ್ನಾಟಕದಲ್ಲಿ ಒಂದು ಪಕ್ಷದ ದೊಡ್ಡ ಅಭಿಮಾನಿ ಮತ್ತು ಬೆಂಬಲಿಗನಾಗಿದ್ದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕದ ರಾಜಕೀಯ ವಿಚಾರದಲ್ಲಿ ನಾನು ತಟಸ್ಥನಾಗಿದ್ದೇನೆ.

ನಾನು ಬೆಂಬಲಿಸುತ್ತಿದ್ದ ಪಕ್ಷವು ಅನೇಕ ಸಮರ್ಥ ನಾಯಕರನ್ನು ಕಡೆಗಣಿಸಿದೆ. ಇಂದು ಆ ಪಕ್ಷದಲ್ಲಿ ಬೆರಳೆಣಿಕೆಯಷ್ಟು ಮಾತ್ರ ನಿಜವಾಗಿಯೂ ಸಮರ್ಥ ನಾಯಕರು ಉಳಿದಿದ್ದಾರೆ ಅನ್ನಿಸುತ್ತದೆ. ಮತ್ತೊಂದೆಡೆ, ನಾನು ಬಹಳ ವರ್ಷಗಳಿಂದ ವಿರೋಧಿಸುತ್ತಿದ್ದ, ನನ್ನ ಧರ್ಮ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದ ಪಕ್ಷದಲ್ಲಿಯೂ ಕೆಲವು ಉತ್ತಮ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಮತ್ತು ಅಭಿವೃದ್ಧಿಯತ್ತ ಗಮನ ಹರಿಸಿರುವ ನಾಯಕರು ಇದ್ದಾರೆ.

ಅವರನ್ನು “Right people in the wrong party” ಎಂದು ಜನ ಕರೆಯುವುದಾದರೆ, ನಾನು ಕೂಡ ಹೇಳುತ್ತೇನೆ — “Wrong people in the right party” ಕೂಡ ಸಾಕಷ್ಟು ಇದ್ದಾರೆ.

ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಅಭಿವೃದ್ಧಿ ಆಗಬೇಕಾದರೆ ಆಡಳಿತ ಪಕ್ಷದಷ್ಟೇ ಬಲಿಷ್ಠವಾದ ವಿರೋಧ ಪಕ್ಷವೂ ಬೇಕು. ಸರ್ಕಾರವನ್ನು ಪ್ರಶ್ನಿಸುವ, ತಪ್ಪುಗಳನ್ನು ಎತ್ತಿ ತೋರಿಸುವ ಮತ್ತು ಜನರ ಕೆಲಸಗಳನ್ನು ಮಾಡಿಸಿಕೊಳ್ಳುವಷ್ಟು ಬಲವಾದ ವಿರೋಧ ಪಕ್ಷ ಇರಬೇಕು. ಆದರೆ ಕರ್ನಾಟಕದ ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ, ವಿರೋಧ ಪಕ್ಷದ ಸ್ಥಿತಿ ಏನು ಅನ್ನೋದು ನಮಗೆಲ್ಲ ಗೊತ್ತಿದೆ.

ನಿನ್ನೆ ನಾನು ಒಬ್ಬ ಚಿಕ್ಕ ಹುಡುಗನನ್ನು ಕೇಳಿದೆ —
“ಕರ್ನಾಟಕದ ವಿರೋಧ ಪಕ್ಷದ ನಾಯಕ ಯಾರು?”

ಅವನು ಸ್ವಲ್ಪ ಅನುಮಾನದಿಂದ, “HD ಕುಮಾರಸ್ವಾಮಿ ಅವ್ರಾ?” ಎಂದು ಕೇಳಿದ.

ನಿಜ ಹೇಳಬೇಕೆಂದರೆ, ಅವನನ್ನು ತಪ್ಪು ಎಂದು ಹೇಳಲು ನನಗೆ ಸಾಧ್ಯವಿಲ್ಲ. ಏಕೆಂದರೆ ಅನೇಕ ಸಂದರ್ಭಗಳಲ್ಲಿ, ವಿರೋಧ ಪಕ್ಷದ ನಾಯಕರಿಗಿಂತ HDK ಅವರೇ ಹೆಚ್ಚು ಪರಿಣಾಮಕಾರಿಯಾಗಿ ಸರ್ಕಾರವನ್ನು ಪ್ರಶ್ನಿಸುತ್ತಿರುವಂತೆ ಕಾಣುತ್ತಿದೆ.

ನನ್ನ ಮಟ್ಟಿಗೆ, ಇನ್ನು ಮುಂದೆ ಕರ್ನಾಟಕದಲ್ಲಿ BJP, Congress ಅಥವಾ JD(S) ಎಂಬ ಪಕ್ಷದ ಹೆಸರಿಗಿಂತ, ನಾಯಕ ಹೇಗಿದ್ದಾನೆ ಎಂಬುದೇ ಮುಖ್ಯ.

ನಾಯಕ ಒಳ್ಳೆಯವರಾಗಿದ್ದರೆ, ಜನರಿಗೆ ಸ್ಪಂದಿಸುತ್ತಿದ್ದರೆ, ತನ್ನ ಕ್ಷೇತ್ರಕ್ಕೆ ಅಭಿವೃದ್ಧಿ ತರುತ್ತಿದ್ದರೆ, ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತಿದ್ದರೆ ಮತ್ತು ನಿಜವಾಗಿಯೂ ಕೆಲಸ ಮಾಡುತ್ತಿದ್ದರೆ — ಅವರು ಯಾವ ಪಕ್ಷದಲ್ಲಿದ್ದರೂ ನಾನು ಬೆಂಬಲಿಸುತ್ತೇನೆ.

ಮಾತನಾಡುವ, ಆದರೆ ಕೆಲಸ ಮಾಡದ ನಾಯಕರಿಗೆ ನನ್ನ ಬೆಂಬಲವಿಲ್ಲ.

ಧರ್ಮದ ಹೆಸರಿನಲ್ಲಿ ನಿರಂತರ ರಾಜಕೀಯ ಮಾಡುವ, ಆದರೆ ಅಭಿವೃದ್ಧಿಯ ವಿಚಾರದಲ್ಲಿ ಶೂನ್ಯವಾಗಿರುವ ನಾಯಕರಿಗೂ ನನ್ನ ಬೆಂಬಲವಿಲ್ಲ.

ಹಾಗೆಯೇ, ನನ್ನ ಧರ್ಮವನ್ನು ಅವಮಾನಿಸುವ ಯಾರನ್ನೂ ನಾನು ಗೌರವಿಸುವುದಿಲ್ಲ. ಇದು ಸ್ಪಷ್ಟ.

ನನ್ನ ಮಟ್ಟಿಗೆ ರಾಜಕೀಯ ಎಂದರೆ ಪಕ್ಷದ ಬಣ್ಣವಲ್ಲ.

ಜನರು, ಅಭಿವೃದ್ಧಿ, ಪ್ರಶ್ನಿಸುವ ಧೈರ್ಯ, ಜವಾಬ್ದಾರಿ ಮತ್ತು ಫಲಿತಾಂಶ — ಇವೇ ಮುಖ್ಯ.

16/08/2026

UB - ದಿ ರಿಯಲ್ OG 🍻

14/08/2026

ನನ್ನ ಹೊಸ ಪಾಡ್‌ಕಾಸ್ಟ್ ON THE RAWX! ಗಾಗಿ ಕ್ಷಣಗಣನೆ ಶುರುವಾಗಿದೆ.🎙️
ನಮ್ಮ ಮೊದಲ ಎಪಿಸೋಡ್‌ನಲ್ಲಿ, ನಾನು ಖ್ಯಾತ ಸ್ಪೋರ್ಟ್ಸ್ ಆರ್ಥೋಪೆಡಿಕ್ ಸರ್ಜನ್ ಅವರೊಂದಿಗೆ ವಿಶೇಷ ಮಾತುಕತೆ ನಡೆಸಿದ್ದೇನೆ.
ಪೂರ್ಣ ಎಪಿಸೋಡ್ ಶೀಘ್ರದಲ್ಲೇ ಬರಲಿದೆ, ಆದರೆ ಆಫೀಶಿಯಲ್ ಟೀಸರ್ ಈಗ ಬಿಡುಗಡೆಯಾಗಿದೆ. 🔥

08/08/2026

ನಗರ ಪಂಚಾಯತ್ ಬಳಿ ಸ್ವಂತ ಟಾಯ್ಲೆಟ್ ಕ್ಲೀನಿಂಗ್ ವಾಹನ ಇಲ್ಲ! ಪುತ್ತೂರಿನಿಂದ ತರಿಸಿ ಜನರಿಗೆ ಡಬಲ್ ಚಾರ್ಜ್ ಬರೆ!!! ಇನ್ನೊಂದ್ಕಡೆ 2022ರಲ್ಲಿ ಜನಸಾಮಾನ್ಯರ ಹಣದಲ್ಲಿ ತಂದ ಬುಲ್ಡೋಜರ್ ತುಕ್ಕು ಹಿಡಿಯುತ್ತಿದೆ. ಈಗ ಅದರ ರಿಪೇರಿಗೆ ಬರೋಬ್ಬರಿ 10 ಲಕ್ಷ ಬೇಕಂತೆ!

07/08/2026

ಕೇವಲ ಕನಸು ಕಂಡರಷ್ಟೇ ಸಾಲದು, ಅದನ್ನು ನನಸು ಮಾಡುವ ಛಲವಿರಬೇಕು. ಕಾಡಿನಂತಿದ್ದ ಸುಳ್ಯವನ್ನು 'ವಿದ್ಯಾಕಾಶಿ'ಯನ್ನಾಗಿ ಬದಲಾಯಿಸಿದ ಸುಳ್ಯದ ಶಿಲ್ಪಿ, ಡಾ. ಕುರುಂಜಿ ವೆಂಕಟ್ರಮಣ ಗೌಡರ (KVG) ಸಾಧನೆಯ ಹಾದಿ ಪ್ರತಿಯೊಬ್ಬರಿಗೂ ಸ್ಫೂರ್ತಿ. 🙏
ಅವರು ನಮ್ಮನ್ನಗಲಿ 13 ವರ್ಷಗಳಾದರೂ, ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಆ ಭವ್ಯ ಪರಂಪರೆಯನ್ನು ಇಂದು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ವಿಶೇಷವೆಂದರೆ, ಅವರು ಸ್ಥಾಪಿಸಿದ ನೆಹರು ಮೆಮೋರಿಯಲ್ ಕಾಲೇಜು (NMC Sullia) ಇದೀಗ ಸುವರ್ಣ ಮಹೋತ್ಸವದ (Golden Jubilee) ಐತಿಹಾಸಿಕ ಸಂಭ್ರಮದಲ್ಲಿದೆ! ✨
Drone Visuals:

Address

Sullia D K

Website

Alerts

Be the first to know and let us send you an email when RJ Thrishool Gowda posts news and promotions. Your email address will not be used for any other purpose, and you can unsubscribe at any time.

Contact The Business

Send a message to RJ Thrishool Gowda:

Shortcuts

Share