25/07/2022
*ಈ ದಿನ ಹುಬ್ಬಳ್ಳಿಯಲ್ಲಿ ನಡೆದ ಈಡಿಗ ಬಿಲ್ಲವ ನಾಮಧಾರಿ ಸಮುದಾಯಗಳ ಪೂಜ್ಯ ಸ್ವಾಮೀಜಿಗಳು ಹಾಗೂ ಸಮುದಾಯದ ಪ್ರಮುಖ ಸಭೆಯಲ್ಲಿ ಸಮಾಜದ ಶ್ರೇಯಾಭಿವೃದ್ಧಿಗಾಗಿ ತೆಗೆದುಕೊಂಡ ಪ್ರಮುಖ ನಿರ್ಣಯಗಳು*
ಸಭೆಯಲ್ಲಿ ಗಂಭೀರವಾಗಿ ಚರ್ಚಿಸಿ ತೆಗೆದುಕೊಂಡ ನಿರ್ಣಯಗಳು
1. ಕುಲಕಸುಬು ಸೆಂದಿ ಬಗ್ಗೆ ಚರ್ಚಿಸಿ ರಾಜ್ಯದಲ್ಲಿ ಎಲ್ಲಿ ಎಲ್ಲಿ ಈಚಲು ಮರ ತೆಂಗಿನ ಮರ ತಾಳೆಮರ ಇದೆಯೊ ಅಲ್ಲಿ ಸೇಂದಿ ಇಳಿಸಿ ಮಾರಾಟ ಮಾಡುವುದಕ್ಕೆ ರಾಜ್ಯ ಸರ್ಕಾರ ಮಂಗಳೂರು ಉಡುಪಿಯ ಮಾದರಿಯಲ್ಲಿ ಅನುಮತಿ ನೀಡಬೇಕೆಂದು ಸರಕಾರಕ್ಕೆ ಒತ್ತಡ ತಂದು ಅನುಮತಿ ಪಡೆಯಲು ಒಮ್ಮತದಿಂದ ಸಭೆಯಲ್ಲಿ ನಿರ್ಧರಿಸಲಾಯಿತು.
2. ಈಗ ಬಿಲ್ಲವ ನಾಮಧಾರಿ ಸಮಾಜ ಕೆಟಗರಿ 2Aಯಲ್ಲಿದೆ. ಸದರಿ ಕೆಟಗರಿಯಿಂದ ಹೆಚ್ಚಿನ ಮೀಸಲಾತಿ ಪಡೆಯುವ ದೃಷ್ಟಿಯಲ್ಲಿ ಪ್ರವರ್ಗ I ಅಥವಾ ಎಸ್ ಟಿ ಹೋಗುವುದಕ್ಕೆ ಕಾನೂನು ತೊಡಕುಗಳನ್ನು ಮತ್ತು ಹೆಚ್ಚಿನ ಮಾಹಿತಿಯನ್ನು ಪಡೆದು ಎರಡು ತಿಂಗಳ ಒಳಗಡೆ ವರದಿಯನ್ನು ನೀಡುವುದಕ್ಕೆ ಆರು ಜನ ಹಿರಿಯ ಪ್ರಮುಖರಿಗೆ ಜವಾಬ್ದಾರಿ ನೀಡಲಾಯಿತು.
3. ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮವನ್ನು ಘೋಷಿಸುವುದಕ್ಕೆ ಸಭೆಯಲ್ಲಿ ಒಮ್ಮತದಿಂದ ನಿರ್ಣಯ ತೆಗೆದುಕೊಳ್ಳಲಾಯಿತು.
4. ಕುಲ ಬಾಂಧವರನ್ನು ರಾಜಕೀಯವಾಗಿ ಅರಿವು ಮೂಡಿಸುವುದು ನಮ್ಮ ಸಮುದಾಯದ ಕುಲಬಾಂಧವರ ಪ್ರತಿಯೊಂದು ಮತವು ಕೂಡ ಮುಂದಿನ ನಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವುದಕ್ಕೆ ಅನುಕೂಲವಾಗುವ ರೀತಿಯಲ್ಲಿ ಸಮುದಾಯ ನಿರ್ಣಾಯಕವಾಗಿರುವ ಪ್ರತಿಯೊಂದು ವಿಧಾನಸಭಾ ಕ್ಷೇತ್ರ ಹಾಗೂ ಲೋಕಸಭಾ ಕ್ಷೇತ್ರದಲ್ಲಿ ಜಾಗೃತಿ ಮೂಡಿಸುವುದು ನಿರಂತರವಾಗಿ ನಡೆಸುವುದಕ್ಕೆ ಸಭೆಯಲ್ಲಿ ನಿರ್ಣಯಿಸಲಾಯಿತು.
5. ಮೂರು ತಿಂಗಳಿಗೊಮ್ಮೆ ಈಡಿಗ ಬಿಲ್ಲವ ನಾಮಧಾರಿ ಸಮುದಾಯಗಳ ಸ್ವಾಮೀಜಿಗಳು ಹಾಗೂ ಸಮುದಾಯದ ಪ್ರಮುಖರು ಸಮುದಾಯದ ಶ್ರೇಯಾ ಅಭಿವೃದ್ಧಿಗಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಸೇರಿ ಸಭೆ ನಡೆಸಿ ಸರ್ಕಾರದ ಗಮನವನ್ನು ಸೆಳೆಯುವುದಕ್ಕೆ ಸಭೆಯಲ್ಲಿ ನಿರ್ಣಯಿಸಲಾಯಿತು.
ಈ ದಿನದ ಸಭೆಯಲ್ಲಿ ಸಮಾಜದ ಗುರುಗಳಾದ ಶ್ರೀಶ್ರೀಶ್ರೀ ಪ್ರಣವಾನಂದ ಸ್ವಾಮೀಜಿಗಳು ಅಧ್ಯಕ್ಷತೆಯನ್ನು ವಹಿಸಿ ರಾಷ್ಟ್ರೀಯ ಬಿಲ್ಲವ ಮಹಾಮಂಡಳಿಯ ಉಪಾಧ್ಯಕ್ಷರಾಗಿರುವ ಶ್ರೀ ಪ್ರೀತಾಂಬರ ಹೆರಾಜೆ, ಆರ್ಯ ಈಡಿಗ ಕೇಂದ್ರ ಹೋರಾಟ ಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್ ಗುತ್ತೇದಾರ್, SNGV ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸತ್ಯಜಿತ್ ಸುರತ್ಕಲ್, ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀ ವೆಂಕಟೇಶ ಗುಂಡನೂರ್, ಪ್ರದೇಶ್ ಈಡಿಗ ಸಂಘದ ಸದಸ್ಯರುಗಳಾದ ಶ್ರೀ ಮಂಜುನಾಥ ಇಳಿಗೆರ್, ಶ್ರೀ ರವಿ ಇಳಿಗೆರ್, ಶಿವಪ್ಪ ಇಳಿಗೆರ್, ನಾಮಧಾರಿ ಸಮಾಜದ ಅಧ್ಯಕ್ಷರಾದ ಶ್ರೀ ಟಿ ಡಿ ನಾಯ್ಕ್, ಶ್ರೀ ಸಚಿನ್ ನಾಯ್ಕ್, ಕುದ್ರೋಳಿ ದೇವಸ್ಥಾನದ ಕೋಶಾಧ್ಯಕ್ಷರು ಹಾಗೂ ಹಿರಿಯ ವಕೀಲರಾಗಿರುವ ಶ್ರೀ ಪದ್ಮರಾಜ್, ಹಿರಿಯ ಬಿಲ್ಲವ ನಾಯಕರಾದ ಶ್ರೀ ಶಂಕರ್ ಪೂಜಾರಿ, ಶ್ರೀ ಬಿಹೆಚ್ ಮಂಚೇಗೌಡರು, ಶ್ರೀ ವೆಂಕಟೇಶ್ ಕಡೆಚೂರು, ಶ್ರೀ ಮಹದೇವಪ್ಪ ಗುತ್ತೇದಾರ್ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಬಂದ ಈಡಿಗ ಬಿಲ್ಲವ ನಾಮಧಾರಿ ಸಮಾಜದ ಅನೇಕ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು. ಜುಲೈ 30ನೇ ತಾರೀಕಿನೊಳಗಡೆ ಹಿರಿಯ ಸಚಿವರಾದ ಶ್ರೀ ಕೋಟ ಶ್ರೀನಿವಾಸ್ ಪೂಜಾರಿ ಸಚಿವರಾದ ಶ್ರೀ ಸುನಿಲ್ ಕುಮಾರ್ ಮತ್ತು ಸಮಾಜದ ಶಾಸಕರುಗಳ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ನೀಡಿ ಸಮುದಾಯದ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಕ್ಕೆ ನಿರ್ಣಯ ತೆಗೆದುಕೊಳ್ಳಲಾಯಿತು.