05/09/2022
ಪಯಶ್ವಿ ಉಸ್ತಾದರ ಸುಪುತ್ರ ಹಾಫಿಲ್ ಸ್ವಾಲಿಹ್ ಮುಈನಿ ಬರೆದ ಮಲಯಾಳಂ ಬರಹದ ಕನ್ನಡಾನುವಾದ....
೧. ಇಷ್ಟೊಂದು ಬ್ಯುಸಿ ನಡುವೆ ಆ ನಾಯಕತ್ವದ ಗುಣ ನಮಗೆಲ್ಲರಿಗೂ ಪಾಠ.
೨. ಕಾರ್ಯಕರ್ತರಿಗಾಗಿ, ಜೊತೆಗಾರರನ್ನು, ಸಮುದಾಯವನ್ನು ಸದಾಕಾಲ ನೆನಪಿಸಿ ಪ್ರಾರ್ಥಿಸುವ ಆ ನಾಯಕತ್ವದ ಡಿಯ ನಾವು ಅದೃಷ್ಟವಂತರು.
೩. ಆ ನಾಯಕತ್ವದ ಡಿ ಅವರ ಆದರ್ಶ ದಲ್ಲಿ ಜೀವಿಸಿದರೆ ಖಂಡಿತ ಪರಲೋಕದಲ್ಲೂ ನಮ್ಮ ಕೈ ಆ ಮಹಾನರು ನಮ್ಮನ್ನು ಬಿಡಲಾರರು ಎಂಬುದು ನಮಗೆ ದೃಡ.
✍️ರಾಫಿ ನಗರ
ನಿನ್ನೆ ರಾತ್ರಿ (1/08/22) ಒಂದು ಕರೆ ದುಬೈನಿಂದ ಬಂತು. ಹಲೋ, ಏನು ಮಗನೇ ಸಂತೊಷವಲ್ಲವೇ!?, ಪ್ರಶ್ನೆ ಕೇಳಿದ ತಕ್ಷಣ ಗೊತ್ತಾಯ್ತು, ಕರೆ ಮಾಡಿದ್ದು ಎಪಿ ಉಸ್ತಾದರ ಖಾದಿಂ ಆಶಿಕ್ ಸಖಾಫಿ. ತಂದೆಯ ಮರಣದ ಬಳಿಕ ಆಗಾಗ ಕರೆಮಾಡಿ ನಮ್ಮ ಕುಶಲೋಪರಿ ಮಾಡುವ ಆಶಿಕ್ ಸಖಾಫಿ ಯ ಕರೆಯೇ ನಮಗೆ ಬಹಳಷ್ಟು ನೆಮ್ಮದಿ ಮತ್ತು ಸಂತೋಷ ನೀಡುವುದು. ನಿನ್ನೆ ರಾತ್ರಿಯ ಕರೆಯೂ ಬಹಳಷ್ಟು ಸಂತೋಷ ನೀಡಿತು. ಕರೆಮಾಡಿ ದ ಆಶಿಕ್ ಸಖಾಫಿ ಶೈಖುನಾ ಎಪಿ ಉಸ್ತಾದ್ ಮಟ್ಟನ್ನೂರು ಏರ್ಪೋರ್ಟ್ ನಲ್ಲಿ 3.45ಕ್ಕೆ ಬಂದಿಳಿಯಲಿದ್ದಾರೆ ಅಂತ ಸೂಚಿಸಿದ್ರು, ಈ ವಿಷಯ ಕೇಳಿ ನಾನು ಉಸ್ತಾದರನ್ನು ನಮ್ಮ ಮನೆಗೆ ಬಂದು ಚಹಾ ಕುಡಿದು ಹೋಗುವರೇ ಎಂಬುದಾಗಿ ಕೇಳಿದೆ. ಅದಕ್ಕೆ ಪ್ರತ್ಯುತ್ತರವಾಗಿ ಆಶಿಕ್ ಸಖಾಫಿ ಉಸ್ತಾದ್ ಗೆ ಮರ್ಕಝ್ ಬುಖಾರಿ ತರಗತಿಗೆ ತಲುಪಬೇಕೆಂದು ಸೂಚಿಸಿದ್ರು. ಇಷ್ಟೊಂದು ಆಯಾಸದೊಂದಿಗೆ ಯಾತ್ರೆ ಮಾಡಿ ತಲುಪಿದ ಈ ಮಧ್ಯರಾತ್ರಿಯಲ್ಲೂ ಶೈಖುನಾರಿಗೆ ದರ್ಸ್ ನೊಂದಿಗಿನ ಆಸಕ್ತಿ ಕೇಳಿ ನನ್ನನ್ನು ಬಹಳಷ್ಟು ಆಕರ್ಷಣೆಗೊಳಿಸಿತು. ಹಾಗಾದ್ರೆ ಚಾ ತೆಗೆದುಕೊಂಡು ವಿಮಾನ ನಿಲ್ದಾಣಕ್ಕೆ ತಲುಪುವಂತೆ ಆಶಿಕ್ ಸಖಾಫಿ ಸೂಚಿಸಿದರು.ಅದರಂತೆ 3.30 ಗಂಟೆಗೇ ಚಾ ತೆಗೆದುಕೊಂಡು ಏರ್ಪೋರ್ಟ್ ಗೆ ತಲುಪಿದೆ. ಆ ಸಮಯ ಶೈಖುನಾರ ಡ್ರೈವರ್ ನಿಝಾರ್ ಕೂಡಾ ತಲುಪಿದ್ದರು. ಸ್ವಲ್ಪ ಸಮಯದಲ್ಲೇ ಶೈಖುನಾರು ಹೊರ ಬಂದರು, ಅಲ್ಲಾಹ್, 😢 ಈ ವಯಸ್ಸಿನಲ್ಲೂ ಉಸ್ತಾದರ ಈ ವಿಶ್ರಾಂತಿಯಿಲ್ಲದ ಜೀವನ ಮನಸ್ಸನ್ನು ಭಾರವಾಗಿಸಿತು. ಉಸ್ತಾದರು ಹೊರಬರುತ್ತಿದ್ದಂತೆ ಸುತ್ತಮುತ್ತಲಿನ ಪರಿಚಯಸ್ಥರೆಲ್ಲರೂ ಉಸ್ತಾದರ ಬಲಿ ತಲುಪಿದರು. ಎಲ್ಲರಿಗೂ ಮುಗುಳ್ನಗೆ ಯೊಂದಿಗೆ ಸಂತೋಷ ವ್ಯಕ್ತಪಡಿಸಿ ಉಸ್ತಾದ್ ಕಾರಿಗೆ ಹತ್ತಿದರು.ನಾನು ಉಸ್ತಾದರ ಬಳಿ ಹೋಗಿ ಮನೆಗೆ ಹೋಗಿ ಸ್ವಲ್ಪ ವಿಶ್ರಾಂತಿ ಮಾಡಿ ಹೋಗುಬಹುದಲ್ಲವೇ ಎಂದು ಸೂಚಿಸಿದೆ. ಮುಗುಳ್ನಗುತ್ತಾ, ಆಹಾ ನನಗೆ ವಿಶ್ರಾಂತಿಯೇ ,ನನಗೆ ಬುಖಾರಿಗೆ ಮರ್ಕಝ್ ಗೆ ತಲುಪಬೇಕಿದೆ. ಆಗ ಆಶಿಕ್ ಸಖಾಫಿ ಚಹಾ ವನ್ನು ತೆಗೆದುಕೊಂಡು ಕಾರಿಗೆ ಹತ್ತುವಂತೆ ಸೂಚಿಸಿದ್ರು. ಸಮಯ 4.30 ಗಂಟೆ. ವಾಹನ ಸಂಚರಿಸುತ್ತಿದ್ದಂತೆ ಶೈಖುನಾ ನನಗೆ ಉಝೂಹ್ ಮಾಡಿ ನಮಾಝ್ ಮಾಡಬೇಕೆಂದರು. ಆಗ ನಾನು ಶೈಖುನಾರಲ್ಲಿ ನಮ್ಮ ಮನೆಗೆ ತೆರಳಿ ಫ್ರೆಶ್ ಆಗಿ ನಮಾಝ್ ಮಾಡಿ ತೆರಳಬಹುದೆಂದು ಸೂಚಿಸಿದೆ.ಆಗ ಉಸ್ತಾದರು ಸಮ್ಮತಿ ನೀಡಿದರು.
ಅಲ್ ಹಮ್ದುಲಿಲ್ಲಾಹ್, ಕಾರು ಪಯಶ್ವಿ ಮಸೀದಿಯ ಬಲಿ ತಲುಪಿದಾಗ, ಮಸ್ಜಿದ್ ಕಡೆ ನೋಡಿ ಶೈಖುನಾ "ಅಸ್ಸಲಾಮುಅಲೈಕುಂ ಅಬ್ಬುಲ್ ಲತೀಫ್ ಸಅದಿ 😰"
ಎಂದು ಉದ್ಗರಿಸಿದರು.
ತಂದೆಯ ಕಬರಿನಲ್ಲಿ ಅತ್ಯಂತ ಸಂತೋಷದ ದಿನ ಇವತ್ತಾಗಿರಬಹುದೆಂದು ಭಾವಿಸುತ್ತೇನೆ. ಯಾ ಅಲ್ಲಾಹ್ ತಂದೆಯ ದರಜವನ್ನು ಉನ್ನತಿ ಮಾಡು ಆಮೀನ್.
ಅಷ್ಟೊಂದು ಪ್ರೀತಿಯಾಗಿತ್ತು ತಂದೆಗೆ ಶೈಖುನಾ ರೊಂದಿಗೆ. ಒಂದಕ್ಷರ ಮಾತಿನಿಂದಲೂ ತಂದೆ ಶೈಖುನಾ ರನ್ನು ಜೀವಿತಕಾಲದಲ್ಲಿ ನೋವಿಸಿಲ್ಲ. ಶೈಖುನಾರು ಮನೆಗೆ ಬಂದು ಚಹಾ ಕುಡಿದು ,ಫ್ರೆಶ್ ಆಗಿ ನಮಾಝ್ ನಿರ್ವಹಿಸಿ ,ಹಲವಾರು ಸಮಾಧಾನದ ಮಾತುಗಳನ್ನಾಡಿ ನಮ್ಮನ್ನು ಸಂತೋಷ ಪಡಿಸಿದರು. ಹಲವಾರು ಅನಾಥರನ್ನು ಸಾಕಿ ಸಲಹುವ ಶೈಖುನಾರಿಗೆ ನಮ್ಮನ್ನು ಯಾವ ರೀತಿ ಸಾಂತ್ವನಮಾಡಬೇಕೆಂದು ಉಸ್ತಾದರಿಗೆ ಗೊತ್ತಿತ್ತು. ದುವಾ ಮಾಡಿ ನೇರವಾಗಿ ಮರ್ಕಝ್ ಬುಖಾರಿ ತರಗತಿಗೆ ತೆರಳಿ ಅಲ್ಲಿಂದ ಕೊಯಿಲಾಂಡಿಗೆ ಭಾಫಕಿ ತಂಙಲರ ಜನಾಝ ನಮಾಝ್ ಗೆ ತಲುಪಿದರು. ಆ ರೀತಿ ಉಸ್ತಾದರ ಯಾತ್ರೆ ಮುಂದುವರೆಯಿತು. ಅಲ್ಲಾಹ್ ಉಸ್ತಾದರನ್ನು ಎಲ್ಲಿಯೂ ಬಿಟ್ಟುಕೊಡದಿರು, ಆಫಿಯತ್ ಮತ್ತು ದೀರ್ಘಾಯುಷ್ಯ ನೀಡು ಆಮೀನ್.