UDUPI LIVE

UDUPI LIVE Don't miss out on the latest happenings - and be a part of the cultural renaissance.

ಕಟೀಲ್ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಇಂದಿನ ಮುಂಜಾನೆ ಪೂಜಾ ಅಲಂಕಾರ
11/08/2025

ಕಟೀಲ್ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಇಂದಿನ ಮುಂಜಾನೆ ಪೂಜಾ ಅಲಂಕಾರ

ತುಳು ಹಾಗೂ ಕನ್ನಡ ರಂಗಭೂಮಿಗೆ ಕಳೆದ 12 ವರ್ಷಗಳಿಂದ ದಿ.ಅಲೆವೂರು ಶೇಖರ್ ಪೂಜಾರಿಯವರ ಸಾರಥ್ಯದಲ್ಲಿ ಅದ್ಭುತ ಕಲಾಕಾಣಿಕೆಗಳನ್ನು ನೀಡುತ್ತಾ ಬಂದಿರ...
07/08/2025

ತುಳು ಹಾಗೂ ಕನ್ನಡ ರಂಗಭೂಮಿಗೆ ಕಳೆದ 12 ವರ್ಷಗಳಿಂದ ದಿ.ಅಲೆವೂರು ಶೇಖರ್ ಪೂಜಾರಿಯವರ ಸಾರಥ್ಯದಲ್ಲಿ ಅದ್ಭುತ ಕಲಾಕಾಣಿಕೆಗಳನ್ನು ನೀಡುತ್ತಾ ಬಂದಿರುವ ಕಲಾತಂಡ ಅಭಿನಯ ಕಲಾವಿದರು, ಉಡುಪಿ. ಪ್ರಸ್ತುತ ಬಾಲಕೃಷ್ಣ ಶೆಟ್ಟಿ ನಿಟ್ಟೂರು ಇವರ ಸಾರಥ್ಯದಲ್ಲಿ, ಯತೀಶ್ ಕುಮಾರ್ ಅಲೆವೂರು ಇವರ ಗೌರವ ಸಲಹೆಯೊಂದಿಗೆ, ಉಮೇಶ್ ಅಲೆವೂರು ಇವರ ಅಧ್ಯಕ್ಷತೆಯಲ್ಲಿ, ತುಳುನಾಡ ರತ್ನ ದಿನೇಶ್ ಅತ್ತಾವರ್ ಇವರ ದಕ್ಷ ನಿರ್ದೇಶನದಲ್ಲಿ ಮೂಡಿಬಂದ ಈ ತಂಡದ ಈ ಬಾರಿಯ ಸೂಪರ್ ಹಿಟ್ ನಾಟಕ "ಶಾಂಭವಿ" ಇದರ 222 ನೇ ಪ್ರದರ್ಶನವು ರಂಗಪಯಣ ಹಾಗೂ ಅಭಿನಯ ಕಲಾವಿದರು ಉಡುಪಿ ಇದರ ಸಹಭಾಗಿತ್ವದಲ್ಲಿ, ಎಚ್.ಎಸ್ ಪ್ರಾಪರ್ಟೀಸ್ ಇವರ ಪ್ರಾಯೋಜಕತ್ವದಲ್ಲಿ ಹಾಗೂ "ಸುಪ್ರೀಂ ಸೂರ್ಯ 100% ತೆಂಗಿನ ಎಣ್ಣೆ, ಲಕ್ಷ್ಮೀಶ್ಯಾಂ ಡೆವೆಲಪರ್ಸ್, ರಿಯೂನಿಯನ್, ಎಸ್.ವಿ ಸರ್ವಿಸಸ್ ಇವರ ಸಹಪ್ರಾಯೋಜಕತ್ವದಲ್ಲಿ "ಶಾಂಭವಿ 222 ಸಂಭ್ರಮ" ವಿಜೃಂಭಣೆಯಿಂದ ಆಗಸ್ಟ್ 10 ಸಂಜೆ 4 ರಿಂದ ರಾತ್ರಿ 10 ರ ವರೆಗೆ ಎಂ.ಜಿ.ಎಂ ಕಾಲೇಜ್ ನ ಮುದ್ದಣ ಮಂಟಪದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನೃತ್ಯ ತಂಡ "ಸ್ಮಾರ್ಟ್ ಗೈಸ್ ಡಾನ್ಸ್ ಅಕಾಡೆಮಿ" ಇವರಿಂದ ನೃತ್ಯ ಕಾರ್ಯಕ್ರಮ, ಹಲವಾರು ಪ್ರಶಸ್ತಿ ವಿಜೇತ ತಂಡ "ಪ್ರಶಂಸಾ, ಕಾಪು" ಇವರಿಂದ ಹಾಸ್ಯ ಕಾರ್ಯಕ್ರಮ, ಹಲವು ವಿಶ್ವದಾಖಲೆಗಳ ಮೂಲಕ ಮಿಂಚಿರುವ ಯೋಗಪಟು "ತನುಶ್ರೀ ಪಿತ್ರೋಡಿ" ಯವರಿಂದ ವಿಶೇಷ ಯೋಗ ನೃತ್ಯ, ತುಳು ಹಾಗೂ ಕನ್ನಡ ರಂಗಭೂಮಿಯ ಸಾಮಾಜಿಕ ನಾಟಕದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಅದ್ದೂರಿ ರಂಗವಿನ್ಯಾಸದ ಜೊತೆಗೆ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದ ಶಾಂಭವಿ ನಾಟಕದ 222 ನೇ ಪ್ರದರ್ಶನ ಅದ್ಧೂರಿಯಾಗಿ ನಡೆಯಲಿದೆ.

ರಂಗದಾಖಲೆಯ ಈ ಅದ್ಧೂರಿ ಸಂಗಮಕ್ಕೆ ಕಲಾಭಿಮಾನಿಗಳಾದ ತಮಗೆಲ್ಲರಿಗೂ ಪ್ರೀತಿಯ ಸ್ವಾಗತ ಬಯಸುವ "ರಂಗ ಪಯಣ" ಹಾಗೂ "ಅಭಿನಯ ಕಲಾವಿದರು" ಉಡುಪಿ

07/08/2025

ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ 7 ದಿನಗಳ ಕಾಲ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವ ವೈಭವದಿಂದ ನೆಡೆದು ಬುಧ ವಾರ ಭಜನಾ ಮಂಗಳೋತ್ಸವ ಸ್ವಂಪನ್ನ ಗೊಂಡಿತ್ತು

05/08/2025

ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ , 125 ವರ್ಷದ ಭಜನಾ ಸಪ್ತಾಹ ಅಂಗವಾಗಿ
ದೇವಾಲಯ ಹಾಗೂ ಭಜನಾ ಸಾಳಿಯನ್ನು ವಿಶೇಷ ಹೂವಿನಿಂದ ಅಲಂಕಾರ ಮಾಡಲಾಗಿದೆ.

04/08/2025

ಮಾತಾ ಅಮೃತಾನಂದಮಯಿ ಸೇವಾ ಸಮಿತಿಯಿಂದ ಮಹಾ ಮೃತ್ಯುಂಜಯ ಹೋಮ ಆಯೋಜನೆ.ನೂರಾರು ಭಕ್ತರು ಭಾಗಿ.

ಉಡುಪಿ: ಮನುಷ್ಯತ್ವ, ಮೋಕ್ಷತ್ವ ಮತ್ತು ಸಜ್ಜನರ ಸಂಗ ಮಾಡುವುದರಿಂದ ಜೀವನದ ಧ್ಯೇಯ ಗುರಿಯನ್ನು ತಲುಪಲು ಸಾಧ್ಯವಿದೆ ಎಂದು ಮಂಗಳೂರು ಶ್ರೀ ಮಾತಾ ಅಮೃತಾನಂದಮಯಿ ಮಠದ ಮಠಾಧಿಪತಿಗಳಾದ ಸ್ವಾಮಿನಿ ಮಂಗಳಾಮೃತ ಪ್ರಾಣ ಹೇಳಿದರು.
ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಉಡುಪಿ ಇದರ ಆಶ್ರಯದಲ್ಲಿ ಗುರುಪೂರ್ಣಿಮಾ ದಿನಾಚರಣೆಯ ಅಂಗವಾಗಿ ಮಲ್ಪೆ ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ "ಮಹಾ ಮೃತ್ಯುಂಜಯ ಹೋಮ" ಹಾಗೂ ಗುರುಪಾದುಕಾ ಪೂಜೆಯಲ್ಲಿ‌ ಭಾಗವಹಿಸಿ ಅವರು ಸಂದೇಶ ನೀಡಿದರು. ಸನಾತನ ಧರ್ಮದಲ್ಲಿ ಮೋಕ್ಷವೇ ಮನುಷ್ಯ ಜೀವನದ ಮುಖ್ಯ ಗುರಿ. ಮೋಕ್ಷವನ್ನು ಜೀವನದ ಗುರಿಯಾಗಿ ಇಟ್ಟುಕೊಂಡು ಧರ್ಮದ ಹಾದಿಯಲ್ಲಿ ಆಸೆ, ಬಯಕೆಗಳನ್ನು ಪೊರೈಸಿಕೊಂಡು ಸಂಪತ್ತು ಗಳಿಸಬೇಕು ಎಂದರು.
ಬೆಳಿಗ್ಗೆ ಸಂಜೆ ಒಂದು ಸಲ ದೇವರ ಪ್ರಾರ್ಥನೆ ಮಾಡಿದರೆ ಸಾಕಾಗುವುದಿಲ್ಲ. ಅಲ್ಲದೆ, ಕೇವಲ ಹಬ್ಬ ಹರಿದಿನಗಳಲ್ಲಿ ದೇವರ ಆಚರಣೆ ಮಾಡುವುದರಿಂದ ದೇವರು ಹಾಗೂ ನಮ್ಮ ಸಂಬಂಧ ಗಟ್ಟಿಗೊಳ್ಳುವುದಿಲ್ಲ. ದೇವರು ಹೇಳಿದ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಾವು ಮುಂದುವರಿಯಬೇಕು. ಗುರುಗಳಿಗೆ ನಮ್ಮ ಜೀವನವನ್ನು ಸಮರ್ಪಿಸಿದ ಮೇಲೆ ಅವರು ನೀಡಿದ ಸಂದೇಶಗಳನ್ನು ನಾವು ಪಾಲನೆ ಮಾಡಬೇಕು. ಅಲ್ಲದೆ, ನಮ್ಮ ಜೀವನ ಪದ್ದತಿ, ಆಲೋಚನೆಗಳಲ್ಲಿ‌ ಏನು ಬದಲಾವಣೆ ಆಗಿದೆ ಎಂಬುವುದನ್ನು ಅವಲೋಕಿಸಬೇಕು ಎಂದರು.
ಸಮಿತಿಯ ಸೇವಾ ಕಾರ್ಯಕರ್ತೆ ಪ್ರಮೋದಾ ಮಾತನಾಡಿ, ಅಜ್ಞಾನ ಎಂಬ ಅಂಧಕಾರವನ್ನು ನೀಗಿಸಿ ಸುಜ್ಞಾನವನ್ನು ನೀಡುವ ದಿನವೇ ಈ ಗುರುಪೂರ್ಣಿಮೆ. ಅದೇ ಅದರ ಮಹತ್ವ. ನಾವು ಉಡುಪಿ ಸಮಿತಿಯವರು ಸೇರಿಕೊಂಡು ಮಾತಾ ಅಮೃತಾನಂದಮಯಿ ದೇವಿ‌ಯ ಕಿರುಕಾಣಿಕೆಯಾಗಿ ಈ ಗುರುಪೂರ್ಣಿಮೆ ದಿನಾಚರಣೆ ಆಚರಣೆ ಮಾಡಿದ್ದೇವೆ. ಸಾರ್ವಜನಿಕರ ಸಹಕಾರದೊಂದಿಗೆ ಮೃತ್ಯುಂಜಯ ಹೋಮವನ್ನು‌ ಕೂಡ ಹಮ್ಮಿಕೊಂಡಿದ್ದೇವೆ. ಆಧ್ಯಾತ್ಮ ನಮ್ಮ ಜೀವನದಲ್ಲಿ ಎದುರಾಗುವ ಸಂಘರ್ಷಗಳನ್ನು ಎದುರಿಸಲು ರಕ್ಷಣೆ ನೀಡುತ್ತದೆ. ಕೆಟ್ಟ ಕರ್ಮಗಳೆಲ್ಲ ನೀಗಿ, ಜೀವನದಲ್ಲಿ ಒಳ್ಳೆಯತನ ಬೆಳೆಯುತ್ತದೆ ಎಂದರು.
ಸೇವಾ ಸಮಿತಿಯ ಕಾರ್ಯಕರ್ತ ಭಾಸ್ಕರ್ ಮಾತನಾಡಿ, ಭಾರತದಲ್ಲಿ ಗುರುಪೂರ್ಣಿಮೆಗೆ ಮಹತ್ತರವಾದ ಸ್ಥಾನವಿದೆ. ಗುರು ಅಂದರೆ ಅಜ್ಞಾನ ದೂರ ಮಾಡಿ ಜ್ಞಾನ ಕೊಡುವ ಮಹಾಶಕ್ತಿ. ಅವರಿಗೆ ಕೃತಜ್ಞತೆಯನ್ನು ಸಲ್ಲಿಸುವುದು ನಮ್ಮ ಕರ್ತವ್ಯ ಎಂದರು.
ಮಾತಾ ಅಮೃತಾನಂದಮಯಿ ಸೇವಾ ಸಮಿತಿ @ಉಡುಪಿ ಇದರ ಅಧ್ಯಕ್ಷ ಯೋಗೀಶ್ ಬೈಂದೂರು, ಸದಸ್ಯರಾದ ನವೀನ, ಭವಾನಿಶಂಕರ, ಭಾಸ್ಕರ್ ಉದ್ಯಾವರ, ಡಾ. ವೀಣಾ, ದಯಾನಂದ ಕಡೆಕಾರ್, ಆನಂದ ಮೊದಲಾದವರು ಭಾಗವಹಿಸಿದ್ದರು‌.
ಮೃತ್ಯುಂಜಯ ಹೋಮದಲ್ಲಿ ನೂರಾರು ಸೇವಾ ಕಾರ್ಯಕರ್ತರು ಭಾಗವಹಿಸಿದ್ದರು.

24/07/2025

ಇಂದು ಆಷಾಢ ಅಮಾವಾಸ್ಯೆ. ಕರಾವಳಿ ಜಿಲ್ಲೆಗಳಲ್ಲಿ ತುಳು ಪದ್ಧತಿಯಂತೆ ಆಟಿ ಅಮಾವಾಸ್ಯೆ ಆಚರಿಸಲಾಗುತ್ತದೆ. ಈ ದಿನ ಕಷಾಯ ಕುಡಿಯುವ ವಿಶಿಷ್ಟ ಸಂಪ್ರದಾಯ ಚಾಲ್ತಿಯಲ್ಲಿದೆ. ಸೂರ್ಯೋದಯಕ್ಕೆ ಮುನ್ನ ಪುರುಷರು ಪಾಲೆ ಮರದ ತೊಗಟೆಯನ್ನು ಕಲ್ಲಿನಿಂದ ಜಜ್ಜಿ ತರುತ್ತಾರೆ. ಬಳಿಕ ಈ ತೊಗಟೆಯಿಂದ ಕಷಾಯ ತಯಾರಿಸಿ ಕುಡಿಯುವುದು ಪದ್ಧತಿ. ಈ ದಿನ ಪಾಲೆ ಮರದಲ್ಲಿ ರೋಗ ನಿರೋಧಕ ಅಂಶಗಳು ಇರುತ್ತವೆ ಅನ್ನೋದು ಇಲ್ಲಿನ ನಂಬಿಕೆ. ಹಾಗಾಗಿ ಪ್ರತಿಯೊಬ್ಬರೂ ತಪ್ಪದೆ ಆಟಿ ಕಷಾಯ ಕುಡಿಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕವಾಗಿಯೂ ವಿತರಿಸುವ ಪರಿಪಾಠ ಇದೆ. ತುಳುಕೂಟ ಸಂಸ್ಥೆಯ ಆಶ್ರಯದಲ್ಲಿ ನೂರಾರು ಮಂದಿಗೆ ಕಷಾಯ ವಿತರಣೆ ನಡೆಯಿತು. ಕಷಾಯ ಕುಡಿದು ಗೇರು ಬೀಜ ತಿಂದು, ಮೆಂತೆ ಗಂಜಿ ಉಣ್ಣುವ ಮೂಲಕ ದೇಹವನ್ನು ತಂಪು ಮಾಡಲಾಗುತ್ತದೆ.

24/07/2025

ತುಳು ನಾಡಿನಲ್ಲಿ‌ ಆಟಿ ಅಮಾವಾಸ್ಯೆಗೆ ಅದರದ್ದೇ ಆದ ವಿಶೇಷ ಮಹತ್ವವಿದೆ.‌ ಹಾಲೆ ಮರದ ಕಷಾಯ ಕುಡಿದು ಸರ್ವರೋಗದಿಂದ ವರ್ಷವಿಡೀ ದೂರವಿದ್ರೆ ಇನ್ನೊಂದೆಡೆ ಅಗಲಿದ ಪಿತೃಗಳಿಗೆ ತರ್ಪಣ ಬಿಡುವ ಧಾರ್ಮಿಕ ವಿಧಿವಿಧಾನಕ್ಕೆ ಇಂದು ವಿಶೇಷ ಮಹತ್ವ. ಈ ವಿಶೇಷ ದಿನದಲ್ಲಿ ಕೇರಳ‌ ಸಮಾಜ ಕೂಡ ತುಳುನಾಡಿನಲ್ಲಿ ಮೊದಲ ಬಾರಿ ಪಿತೃಗಳಿಗೆ ತರ್ಪಣ ಬಿಟ್ಟಿದ್ದಾರೆ..

ಕೇರಳದಿಂದ ಕರಾವಳಿಗೆ ಬಂದು ನೆಲೆಸಿರುವ ನೂರಾರು ಮಂದಿ ಇಷ್ಟರವರೆಗೆ ಕರಾವಳಿಯ ಪದ್ದತಿಯಂತೆ ತರ್ಪಣ‌ ಬಿಡುತ್ತಿದ್ದರು. ಆದರೆ ಇದೇ ಮೊದಲು ಕೇರಳ ಸಮಾಜಂ ಸಂಸ್ಥೆ ಕೇರಳದಿಂದ ನುರಿತ ತಂತ್ರಿಗಳನ್ನ ಕರೆಸಿ ಅಲ್ಲಿನ ಪದ್ದತಿಯಂತೆ ವಿಧಿವಿಧಾನಗಳನ್ನ ನಡೆಸಿ ಅಗಲಿದ ಪಿತೃ ಗಳಿಗೆ ತರ್ಪಣ ಬಿಡಲಾಯಿತು. ಉಡುಪಿಯ‌ ಮಲ್ಪೆ ಕಡಲತೀರದಲ್ಲಿ ನಡೆದ ಬಲಿತರ್ಪಣಂ ನಲ್ಲಿ ಸುಮಾರು ಎಪ್ಪತ್ತಕ್ಕೂ ಅಧಿಕ ಕುಟುಂಬ ಈ ವಿಧಿವಿಧಾನದಲ್ಲಿ ಪಾಲ್ಗೊಂಡು ತರ್ಪಣ ಬಿಡುವ ಮೂಲಕ ಸಂತೃಪ್ತಭಾವವನ್ನ ವ್ಯಕ್ತಪಡಿಸಿದರು
ಇಷ್ಟರವರೆಗೆ ಕೇರಳದ ಓಣಂ ಆಚರಣೆ ಉಡುಪಿಯಲ್ಲಿ ನಡಿತಾಯಿತ್ತು.‌ಆದ್ರೆ ಇದೇ ಮೊದಲ ಬಾರಿಗೆ ತರ್ಪಣ ಬಿಡುವ ಮಹತ್ವದ ಕೆಲಸ ಉಡುಪಿಯ‌ ಮಲ್ಪೆ ಕಡಲತೀರದಲ್ಲಿ ನಡೆಸಿದೆ. ಕೇರಳ ಮೂಲದ ಕುಟುಂಬಿಕರು ಈ ಆಯೋಜನೆ ಮೂಲಕ ನಿಜವಾಗಿಯೂ ಖುಷಿಪಟ್ಟಿದ್ದಾರೆ. ಯಾವುದೇ ಧಾರ್ಮಿಕ ಕೆಲಸದಲ್ಲಿ ಸ್ವಲ್ಪ ಏರುಪೇರಾದರೂ ನಡೆಯುತ್ತೆ ಆದ್ರೆ ಮೃತರ ಆತ್ಮಕ್ಕೆ ಸದ್ಗತಿ ಕೊಡುವ ಬಲಿತರ್ಪಣಂ ಕೆಲಸ ಅದರದ್ದೇ ವಿಧಿವಿಧಾನ, ಸಂಪ್ರದಾಯದಂತೆ ನಡೆಯಲೇ ಬೇಕು.‌ಇದನ್ನ ಅರಿತ ಕೇರಳ ಸಮಾಜಂ ಕೇರಳ ಮೂಲದ ಸಮುದಾಯದವರಿಗಾಗಿ ಇಂದಿನಿಂದ ಪ್ರತೀ ವರ್ಷ ಅಲ್ಲಿನ ಪದ್ದತಿಯ ಅನುಸಾರ ನಡೆಸುವ ಕೆಲಸಕ್ಕೆ ಮುಂದಾಗಿದೆ.

ಒಟ್ಟಾರೆ ಕೇರಳ‌ ಸಮಾಜದವರಿಗೂ ತುಳುನಾಡಿನ ಆಟಿ ಅಮಾವಾಸ್ಯೆಯಂದು ‌ತಮ್ಮ ಸಂಪ್ರದಾಯದಂತೆ ಆಚರಿಸುವ ವ್ಯವಸ್ಥೆ ಉಡುಪಿಯ ಕೇರಳ ಸಮಾಜಂ ಸಂಸ್ಥೆ ಆಯೋಜನೆ‌‌ ಮಾಡಿರುವುದು ನಿಜಕ್ಕೂ ವಿಶೇಷ..

23/07/2025

ಮಣಿಪಾಲದಲ್ಲಿ ಚಡ್ಡಿ‌ ಹಾಕದೆ ಸ್ಕೂಟರ್ ಚಾಲಾಯಿಸಿದ ವ್ಯಕ್ತಿ ,ವಿಡಿಯೋ ವೈರಲ್.
. #

22/07/2025

ಶ್ರೀ ಶ್ರೀ ಸುಜ್ಞಾನೇಂದ್ರ ತೀರ್ಥ ಶ್ರೀಪಾದರ ಆರಾಧನೆಯ ಪ್ರಯುಕ್ತ ಶ್ರೀ ಕೃಷ್ಣ ಮಠದ ಸಮುಚ್ಚಯದಲ್ಲಿರುವ ಅವರ ವೃಂದಾವನಕ್ಕೆ ಪರಮಪೂಜ್ಯ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಶ್ರೀ ಪುತ್ತಿಗೆ ಕಿರೀಯ ಶ್ರೀ ಪಾದರು ವಿಶೇಷ ಪೂಜೆ ಸಲ್ಲಿಸಿ ಆರಾಧನೆಯನ್ನು ವೈಭವದಿಂದ ಆಚರಿಸಿದರು .

21/07/2025

ಕಾಪು ಶ್ರೀ ಮಾರಿಯಮ್ಮನ ದರ್ಶನ ಪಡೆದ ನಟ ರಾಜ್ ಬಿ ಶೆಟ್ಟಿ.ಸೂ ಫ್ರಮ್ ಸೋ ಚಿತ್ರದ ಪ್ರಚಾರದಲ್ಲಿ ಬ್ಯೂಸಿಯಾಗಿರುವ ರಾಜ್ ಬಿ ಶೆಟ್ಟಿ ,ಅಭಿಮಾನಿಗಳೇ ಸಿನಿಮಾ ನೋಡಿ ರಿವ್ಯೂ ನೀಡುವಂತೆ ಕೇಳಿಕೊಂಡಿದ್ದಾರ.

21/07/2025

ರಿಷಭ್ ಶೆಟ್ಟಿ ನಿರ್ದೇಶ ನದ ಕಾಂತರ ಚಾಪ್ಟರ್ 1 ರ ಬಿಗ್ ಅಪ್ಡೇಟ್.ಮೇಕಿಂಗ್ ರಿಲೀಸ್ ಮಾಡಿದ ಹೊಂಬಾಳೆ ಫಿಲ್ಮ್ಸ್ . ಹೇಗಿದೆ ನೋಡಿ ಕಾಂತರ ಸೆಟ್, ಮೇಕಿಂಗ್ ಬಗ್ಗೆ ಮಾಹಿತಿ ಬಿಚ್ಚಿಟ್ಟ ಡಿವೈನ್ ಸ್ಟಾರ್.

ಬೆಂಗಳೂರಿನ ಕುಂದಾಪ್ರ ಕನ್ನಡ ಹಬ್ಬದಲ್ಲಿ ಅಟ್ಟಣಿಗೆ ಆಟ!. ಆ ಕಾಲದ ಯಕ್ಷಗಾನದಲ್ಲಿ ಮೆರೆದ ವಿಶಿಷ್ಠ ಪ್ರಯೋಗ ಇದು. ಪ್ರಸಕ್ತ ವರ್ಷಗಳಲ್ಲಿ ಅಟ್ಟಣಿ...
21/07/2025

ಬೆಂಗಳೂರಿನ ಕುಂದಾಪ್ರ ಕನ್ನಡ ಹಬ್ಬದಲ್ಲಿ ಅಟ್ಟಣಿಗೆ ಆಟ!. ಆ ಕಾಲದ ಯಕ್ಷಗಾನದಲ್ಲಿ ಮೆರೆದ ವಿಶಿಷ್ಠ ಪ್ರಯೋಗ ಇದು. ಪ್ರಸಕ್ತ ವರ್ಷಗಳಲ್ಲಿ ಅಟ್ಟಣಿಗೆ ಆಟ ಮರೆಯಾಗಿದೆ. ಕಳೆದ ವರ್ಷ ಜೋಡಾಟವನ್ನು ಆಯೋಜಿಸಿ ಯಶಸ್ವಿಗೊಳಿಸಿದ ಕುಂದಾಪ್ರ ಕನ್ನಡ ಪ್ರತಿಷ್ಠಾನದಲ್ಲಿ ಈ ಸಲ ಭರ್ಜರಿ ಅಟ್ಟಣಿಗೆ ಆಟ!. ರಂಗಸ್ಥಳದ ಮೇಲೆ ಮತ್ತೊಂದು ರಂಗಸ್ಥಳ! ಇದು ಕೇವಲ ಆಟವಲ್ಲ! ಬೆಂಗಳೂರಿನಲ್ಲಿ ಫಸ್ಟ್ ಟೈಮ್ ಪ್ರದರ್ಶನ! ಈ ತಲೆಮಾರಿನ ಯಕ್ಷಾಭಿಮಾನಿಗಳು ನೋಡಿರದ ಪ್ರಸ್ತುತಿ! ಇದು, ನೀವು ನೋಡಲೇಬೇಕಾದ, ಅವಳಿ ರಂಗಸ್ಥಳದಲ್ಲಿ ಅಬ್ಬರದ ಅಟ್ಟಹಾಸ!

#ಕುಂದಾಪ್ರಕನ್ನಡಹಬ್ಬ2025
#ಭಾಷಿಅಲ್ಲಬದ್ಕ್ #ತಾಯ್ನುಡಿ #ಅಬ್ಬಿಭಾಷಿ

Address

Udupi
576101

Alerts

Be the first to know and let us send you an email when UDUPI LIVE posts news and promotions. Your email address will not be used for any other purpose, and you can unsubscribe at any time.

Contact The Business

Send a message to UDUPI LIVE:

Share

Category