Tumakuru Express

  • Home
  • Tumakuru Express

Tumakuru Express News and article

ನಮ್ಮ ತುಮಕೂರು ಎಕ್ಸ್‌ಪ್ರೆಸ್‌ ದಿನಪತ್ರಿಕೆಯ ಸಂಪಾದಕರಾದ ಸೀಗಲಹಳ್ಳಿ ನರಸಿಂಹ ಮೂರ್ತಿ ಯವರು ಮಾಡಿದ ಪ್ರಯತ್ನಕ್ಕೆ ಮತ್ತು ಸಂಸ್ಥೆಯ ಮನವಿಗೆ ಸ್ಪ...
01/11/2025

ನಮ್ಮ ತುಮಕೂರು ಎಕ್ಸ್‌ಪ್ರೆಸ್‌ ದಿನಪತ್ರಿಕೆಯ ಸಂಪಾದಕರಾದ ಸೀಗಲಹಳ್ಳಿ ನರಸಿಂಹ ಮೂರ್ತಿ ಯವರು ಮಾಡಿದ ಪ್ರಯತ್ನಕ್ಕೆ ಮತ್ತು ಸಂಸ್ಥೆಯ ಮನವಿಗೆ ಸ್ಪಂದಿಸಿ ತುಮಕೂರು ಜಿಲ್ಲಾಡಳಿತ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಸೀಗಲಹಳ್ಳಿಯ ಬಾಗವತ ಕರಿಯಣ್ಣರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಗವತ ಕರಿಯಣ್ಣ ನವರೊಂದಿಗೆ ಅವರ ಧರ್ಮಪತ್ನಿ ಹನುಮಕ್ಕ, ಪುತ್ರ ಸೀತಾರಾಮು, ಸೀಗಲಹಳ್ಳಿ ಗ್ರಾಮದ ಯುವ ಮಿತ್ರ ಸಿದ್ದರಾಜು, ತುಮಕೂರು ಎಕ್ಸ್‌ಪ್ರೆಸ್‌ ದಿನಪತ್ರಿಕೆಯ ಸಂಪಾದಕರಾದ ಸೀಗಲಹಳ್ಳಿ ನರಸಿಂಹಮೂರ್ತಿ ಉಸ್ಥಿತರಿದ್ದರು.

ತುಮಕೂರು ಎಕ್ಸ್‌ಪ್ರೆಸ್‌ ದಿನಪತ್ರಿಕೆಯ ಮನವಿಗೆ ಸ್ಪಂದಿಸಿದ ಆಯ್ಕೆ ಸಮಿತಿ, ಹಿರಿಯ ಪತ್ರಕರ್ತರು ಗೆಳಯರಿಗೆ ತುಮಕೂರು ಎಕ್ಸ್‌ಪ್ರೆಸ್‌ ದಿನಪತ್ರಿಕೆ ಬಳಗದಿಂದ ಹೃದಯ ಸ್ಪರ್ಷಿ ಧನ್ಯವಾದಗಳನ್ನು ಸಂಸ್ಥೆ ಸಲ್ಲಿಸುತ್ತದೆ.

ಧನ್ಯವಾದಗಳು

DC Tumakuru DR. G Parameshwara ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು

ಆತ್ಮೀಯ ಮಿತ್ರರಿಗೆ ಶುಭವಾಗಲಿಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ & ತುಮಕೂರು ಜಿಲ್ಲಾ ಘಟಕದ ಚುನಾವಣೆ-2025
19/10/2025

ಆತ್ಮೀಯ ಮಿತ್ರರಿಗೆ ಶುಭವಾಗಲಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ & ತುಮಕೂರು ಜಿಲ್ಲಾ ಘಟಕದ ಚುನಾವಣೆ-2025

16/10/2025

https://youtu.be/lNHDE76xH7M

ಬಂಗಾರಿ ಹಟ್ಟಿಯಲ್ಲಿ ಕುರುಬರಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮ ಸಭೆ

ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಕುರುಬರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಬಂಗಾರಿಹಟ್ಟಿಯಲ್ಲಿ 2024 25 ನೇ ಸಾಲಿನ ಮುಖ್ಯಮಂತ್ರಿ ಆಶ್ರಯ ಯೋಜನೆ ಅಡಿಯಲ್ಲಿ ಫಲಾನುಭವಿಗಳ ಆಯ್ಕೆಯ ಕುರಿತಾದ ಗ್ರಾಮ ಸಭೆ ನೆರವೇರಿತು ಮಾಳಿಗೆ ಹಟ್ಟಿ ಬಂಗಾರಿ ಹಟ್ಟಿ ಗ್ರಾಮದ ನೂರಾರು ಜನ ಗ್ರಾಮಸ್ಥರು ಆಗಮಿಸಿ ಗ್ರಾಮ ಸಭೆಯಲ್ಲಿ ತಮ್ಮ ಅಹವಾಲುಗಳನ್ನು ಅಧ್ಯಕ್ಷರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮುಂದೆ ನಿವೇದಿಸಿಕೊಂಡರು ಹುಣಸೆ ಕಟ್ಟೆ ಗ್ರಾಮದ ಸರ್ವೆ ನಂಬರ್ 105ರಲ್ಲಿ ಮುಖ್ಯಮಂತ್ರಿ ಆಶ್ರಯ ಯೋಜನೆಯ ಅಡಿಯಲ್ಲಿ ನಿವೇಶನಗಳ ಹಂಚಿಕೆಯ ಫಲಾನುಭವಿಗಳ ಆಯ್ಕೆಯು ಈ ಸಂದರ್ಭದಲ್ಲಿ ನೆರವೇರಿತು ಕಳೆದ ಬಾರಿ ಗ್ರಾಮ ಸಭೆಯನ್ನು ಹಮ್ಮಿಕೊಂಡಾಗ ಬಹಳಷ್ಟು ಗೊಂದಲ ಉಂಟಾಗಿ ಹಾಲಿ ಮಾಜಿ ಅಧ್ಯಕ್ಷೆಯರ ಪತಿಯರ ಜಗಳಕ್ಕೆ ಇದು ವೇದಿಕೆಯಾಗಿತ್ತು. ಈ ದಿನ ಅವರಿಬ್ಬರ ಸಮ್ಮುಖದಲ್ಲಿ ಯಾವುದೇ ಗೊಂದಲಗಳಿಲ್ಲದೆ ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹಾರ ಮಾಡುವತ್ತಾ ಹಾಲಿ ಮಾಜಿ ಅಧ್ಯಕ್ಷರುಗಳು ಗಮನಹರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೌಸರ್ ರವರು ತಾಳ್ಮೆಯಿಂದ ಎಲ್ಲರನ್ನು ಸಂಭಾಳಿಸಿಕೊAಡು ಗ್ರಾಮ ಸಭೆಯನ್ನು ಅತ್ಯುತ್ತಮವಾಗಿ ಮುಗಿಸಿದರು ಗ್ರಾಮ ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಕೃಷಿ ಇಲಾಖೆಯ ನಟರಾಜು, ಕುರುಬರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಕ್ಕ ಚಿಕ್ಕಣ್ಣ, ಮಾಜಿ ಅಧ್ಯಕ್ಷೆ ತಿಮ್ಮಕ್ಕ ಕೆಂಗಣ್ಣ, ದ್ವಿತೀಯ ದರ್ಜೆ ಸಹಾಯಕ ಚಂದ್ರಯ್ಯ ಬಿ, ಕುರುಬರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಗ್ರಾಮಸ್ಥರು ಸಾರ್ವಜನಿಕರು ಹಾಜರಿದ್ದರು.

ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿಗೂ ಆಕ್ರಮದ ನಂಟು?DC Tumakuru DR. G Parameshwara
16/10/2025

ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿಗೂ ಆಕ್ರಮದ ನಂಟು?

DC Tumakuru DR. G Parameshwara

https://youtu.be/Up5VzvQMSCUಗುಬ್ಬಿ: ಸಾಮಾಜಿಕ ಲೆಕ್ಕ ಪರಿಶೋಧನೆಯಲ್ಲಿ ಸಿಕ್ಕಿ ಬಿದ್ದ ಸಿ ಎಸ್ ಪುರ ಹೋಬಳಿ ಇಡಗೂರು ಗ್ರಾಪಂ ಪಿಡಿಓ ಹಾಗೂ ಸ...
15/10/2025

https://youtu.be/Up5VzvQMSCU

ಗುಬ್ಬಿ: ಸಾಮಾಜಿಕ ಲೆಕ್ಕ ಪರಿಶೋಧನೆಯಲ್ಲಿ ಸಿಕ್ಕಿ ಬಿದ್ದ ಸಿ ಎಸ್ ಪುರ ಹೋಬಳಿ ಇಡಗೂರು ಗ್ರಾಪಂ ಪಿಡಿಓ ಹಾಗೂ ಸದಸ್ಯರು,

ಅನುದಾನ ಮರಳಿ ಸರ್ಕಾರಕ್ಕೆ ಕಟ್ಟಿಸಿಕೊಳ್ಳುವಂತೆ ಇಡಗೂರು ಗ್ರಾಮಸ್ಥರ ಆಕ್ರೋಶ

ಗುಬ್ಬಿ: ಸರ್ಕಾರದ ಹಣವನ್ನು ಫಲಾನುಭವಿಗಳಿಗೆ ನೀಡದೆ ತಮ್ಮ ಜೇಬು ತುಂಬಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮಸ್ಥರ ಸಭೆಯಲ್ಲಿ ಇಡಗೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಸಿ ಎಸ್ ಪುರ ಹೋಬಳಿ ಇಡಗೂರು ಗ್ರಾಮ ಪಂಚಾಯಿತಿಯಲ್ಲಿ 2025-26 ನೇ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ನೇರೆಗಾ) ಹಣವನ್ನು ಫಲಾನುಭವಿಗಳಿಗೆ ನೀಡದೆ ಅಧಿಕಾರಿಗಳು ಹಾಗೂ ಗ್ರಾ. ಪಂ ಸದಸ್ಯರ ಸ್ನೇಹಿತರು ಕೈ ಜೋಡಿಸಿ ಲಕ್ಷ ರೂಪಾಯಿಗಳ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಬೀಚಿಂಗ್ ಪೌಡರ್ ಹಾಗೂ ಕಟ್ಟರ್ ಮಿಷನ್ ಮತ್ತು ಫಾಗ್ ಮಿಷಿನ್ ಯಂತ್ರಗಳನ್ನು ಖರೀದಿಸುವಲ್ಲಿ ಸರ್ಕಾರದ ಹಣವನ್ನು ಲೂಟಿ ಮಾಡಿ ನಿಮಗೆ ಮನ ಬಂದಂತೆ ವೆಚ್ಚ ಮಾಡಿದ್ದೀರಿ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

15ನೇ ಹಣಕಾಸಿನ ಹಣವನ್ನು ಪಲಾನುಭವಿಗಳಿಗೆ ನೇರವಾಗಿ ನೀಡದೆ ಇಲ್ಲಸಲ್ಲದ ಮಾಹಿತಿಗಳನ್ನು ನೀಡಿ ಹಾಗೂ ತುಮಕೂರು,ತುರುವೇಕೆರೆ, ಕುಣಿಗಲ್ ,ಇತರೆ ಬೇರೆ ಬೇರೆ ತಾಲೂಕಿನ ಅಂಗಡಿಗಳ ಬಿಲ್ ಬಳಕೆ ಮಾಡಿಕೊಂಡು ಸರ್ಕಾರದ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ಗ್ರಾಮಸ್ಥರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಬೋರ್ ವೆಲ್ ಗೆ ಅಳವಡಿಸುವಂತ ಮೋಟಾರ್ ಪಂಪು ಮತ್ತು ಸ್ಟಾರ್ಟರ್ ಯಂತ್ರಗಳು ಹಾಗೂ ಪೈಪುಗಳನ್ನು ಖರೀದಿಸುವಲ್ಲಿ ಲಕ್ಷ ರೂಪಾಯಿ ಹಣವನ್ನು ವೆಚ್ಚ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂತು.

ಕೆಲವು ಗಂಟೆಗಳ ಕಾಲ ಗ್ರಾಮಸ್ಥರು ಮತ್ತು ಅಧಿಕಾರಿಗಳು ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಅಂತ ತಲುಪಿ ತಣ್ಣಗಾದ ಸಂಗತಿ ಕಂಡು ಬಂತು.

ಭೈರಪ್ಪನಕಟ್ಟೆ ಕಾಮಗಾರಿಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಕೆಲವು ಗಂಟೆಗಳ ಕಾಲ ಅಧಿಕಾರಿಗಳ ಜೊತೆ ಚರ್ಚೆಗೆ ನಡೆಯಿತು. ಈ ಕಾಮಗಾರಿಗೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ಸರ್ಕಾರದ ಹಣವನ್ನು ತಡೆಹಿಡಿಯಬೇಕು. ಎಂದು ಯೋಜನಾ ಅಧಿಕಾರಿ ಹೊನ್ನಪ್ಪರವರಿಗೆ ಗ್ರಾಮಸ್ಥರು ತಿಳಿಸಿದರು.

ಬಳಕೆಗೆ ಬಾರದ ಕಸ ವಿಲೇವಾರಿ ವಾಹನ
ಘನ ತ್ಯಾಜ್ಯ ವಿಲೇವೇರಿ ಘಟಕ ನಿರ್ಮಾಣಗೊಂಡಿದ್ದು ಮನೆ ಮನೆಯಿಂದ ಹಸಿ ಕಸ -ಒಣ ಕಸ ವಿಂಗಡಣೆ ಮಾಡಿ ಕಸ ಸಂಗ್ರಹಣೆ ಮಾಡಿಕೊಂಡು ಒಂದೆಡೆ ಶೇಖರಣೆ ಮಾಡಲು ಲಕ್ಷಾಂತರ ರೂಗಳ ವೆಚ್ಚದಲ್ಲಿ ಟ್ರ್ಯಾಕ್ಟರ್ ಖರೀದಿ ಮಾಡಿ ಕಳೆದೆರಡು ವರ್ಷಗಳಿಂದ ಬಳಕೆ ಮಾಡದೆ ವಾಟರ್ ಮ್ಯಾನ್ ಮನೆ ಹತ್ತಿರ ನಿಲ್ಲಿಸಿದ್ದು, ಬಳಕೆಯಾಗದ ಟ್ರ್ಯಾಕ್ಟರ್ ನಿಂತಲ್ಲೇ ನಿಂತು ಕೆಟ್ಟು ಹೋದರೆ ಮತ್ತೆ ರಿಪೇರಿಗೆ ಹಣ ದುರುಪಯೋಗವಾಗುವ ಸಾಧ್ಯತೆ ಹೆಚ್ಚಾಗಿದೆ. ಕೂಡಲೇ ಟ್ರ್ಯಾಕ್ಟರ್ ಬಳಕೆ ಆಗುವಂತೆ ಮಾಡಬೇಕು ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಸೂಚಿಸಿದರು.

15 ನೇ ಹಣಕಾಸಿನ ಸಾಮಾಜಿಕ ಲೆಕ್ಕ ಪರಿಶೋಧನೆಯಲ್ಲಿ ಸಿಕ್ಕಿ ಬಿದ್ದ ಪಿಡಿಓ ಹಾಗೂ ಸದಸ್ಯರು, ಅನುದಾನ ಮರಳಿ ಸರ್ಕಾರಕ್ಕೆ ಕಟ್ಟಿಸಿಕೊಳ್ಳು....

12/10/2025

ಶಿರಾ:ಕರ್ತವ್ಯ ಮರೆತ ಬುಕ್ಕಾಪಟ್ಟಣ ಗ್ರಾಮ ಪಂಚಾಯಿತಿ ರಾಷ್ಟ್ರಧ್ವಜಕ್ಕೆ ಅವಮಾನ

DC Tumakuru DR. G Parameshwara Priyank Kharge Siddaramaiah

07/10/2025

ಪ್ರಧಾನಮಂತ್ರಿಗಳ ನಿರ್ದೇಶನದ ಮೇರೆಗೆ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ. ಸೋಮಣ್ಣ ಇಂದು ಪಂಜಾಬ ರಾಜ್ಯದಲ್ಲಿನ ನೇರೆ ಪಿಡಿತ ಪ್ರದೇಶಕ್ಕೆ ಭೇಟಿ ನೀಡಿದ್ದರು.

ಈ ಭೇಟಿ ದಿನಾಂಕ 7 ಮತ್ತು 8ನೇ ಅಕ್ಟೋಬರ್ 2025ರ ೨ ದಿವಸಗಳ ಭೇಟಿಯಾಗಿದ್ದು, ಕೇಂದ್ರ ಸಚಿವ ವಿ. ಸೋಮಣ್ಣ ಅಮೃತಸರ್ ಜಿಲ್ಲೆಯಲ್ಲಿನ ನೇರ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ನಿಮಿತ್ತ ಇಂದು ದೆಹಲಿಯಿಂದ ಪಂಜಾಬಿನ ಅಮೃತಸರ್ ಜಿಲ್ಲೆಗೆ ತೆರಳಿದ್ದಾರೆ.

ಇಂದಿನ ಭೇಟಿಯ ಸಂದರ್ಭದಲ್ಲಿ ಪಾಕಿಸ್ತಾನ ಮತ್ತು ಭಾರತದ ಗಡಿಯಾದ ಪಂಜಾಬ ರಾಜ್ಯದ ಅಮೃತಸರ್ ಜಿಲ್ಲೆಯಲ್ಲಿನ ಕಕ್ಕಾಡ, ಲೊದಿಗುಜ್ಜಾರ್, ಮಾಂಜ್, ಸೈದಾಪುರ ಹಳ್ಳಿಗಳಿಗೆ ಭೇಟಿ ನೀಡಿ ನೆರೆಯಿಂದ ಉಂಟಾದ ಹಾನಿಯ ಬಗ್ಗೆ ಪರಿಶೀಲಿಸಿದರು.

ಇದೇ ವೇಳೆ ಸಂತ್ರಸ್ತ ಪ್ರದೇಶದ ಗ್ರಾಮಸ್ತರೊಂದಿಗೆ ಚರ್ಚಿಸಿ ಅವರ ಕುಂದುಕೊರತೆ ಹಾಗು ನಷ್ಟವುಂಟಾದ ಬಗ್ಗೆ ವಿವರ ಪಡೆದ ಕೇಂದ್ರ ಸಚಿವ ವಿ. ಸೋಮಣ್ಣ,
ನೆರೆ ಪೀಡಿತ ಪ್ರದೇಶಗಳಲ್ಲಿನ ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡುವಂತೆ ಸ್ಥಳದಲ್ಲಿದ್ದ ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿ, ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಪಂಜಾಬ್ ರಾಜ್ಯಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರ ಈಗಾಗಲೇ ಪಂಜಾಬ್ ರಾಜ್ಯಸರ್ಕಾರಕ್ಕೆ ಎನ್.ಡಿ.ಆರ್.ಏಪ್. ನಿಂದ ಸಾಕಷ್ಟು ಹಣವನ್ನು ನೀಡಿದ್ದು, ಈ ಸಂದರ್ಭದಲ್ಲಿ ಸದುಪಯೋಗ ಪಡಿಸಿ ಸಂತ್ರಸ್ತರಿಗೆ ನೇರವಾಗಲು ಪಂಜಾಬ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಂತಹ ಸಂದರ್ಭದಲ್ಲಿಯೂ ನೆರೆ ಸಂತ್ರಸ್ತರೊಂದಿಗಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಸಂತ್ರಸ್ತರ ಜೀವನವನ್ನು ಪುನರ್ನಿಮಿಸುವಲ್ಲಿ ಮತ್ತು ಪಂಜಾಬ್ ರಾಜ್ಯದ ಜನತೆಯ ಬೆಂಬಲಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಸದಾ ಸಿದ್ದವಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅಮೃತಸರ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಗ್ರಾಮಾಂತರದ ಅಧ್ಯಕ್ಷರಾದ ಶ್ರೀ ಅಮರ್ ಪಾಲ್ ಸಿಂಗ್ ಬೋನಿ, ಭಾಜಪದ ಹಿರಿಯ ನಾಯಕರು, ಬಿ.ಜೆ.ಪಿಯ ಕಾರ್ಯಕರ್ತರು, ರೇಲ್ವೆ ಅಧಿಕಾರಿಗಳು, ಪಂಜಾಬ್ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ನಾಳೆಯು ಸಹ ಕೇಂದ್ರ ಸಚಿವ ವಿ. ಸೋಮಣ್ಣನವರು ಅಮೃತಸರ್ ಜಿಲ್ಲೆ ಕರೋಟಾನಾ, ರಾಜಾಸಂಸಿ, ಇತ್ಯಾದಿ ಹಳ್ಳಗಳಲ್ಲಿನ ನೆರೆಪಿಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯ ವಿವರ ಪಡೆದುಕೊಳ್ಳಲಿದ್ದಾರೆ.

V Somanna Vijayendra Yediyurappa BJP Karnataka Narendra Modi

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲುಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ಆರೋಗ್ಯದಲ್ಲಿ ಏ...
07/10/2025

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಚಿಕಿತ್ಸೆ ಮುಂದುವರಿಸಿದ್ದು, ಸದ್ಯ ದೇವೇಗೌಡರ ಆರೋಗ್ಯದಲ್ಲಿ ಚೇತರಿಕೆ ಕಂಡುಬAದಿದೆ ಎನ್ನಲಾಗಿದೆ. ದೇವೇಗೌಡರ ಆರೋಗ್ಯದ ಬಗ್ಗೆ ಶೀಘ್ರದಲ್ಲಿಯೇ ಕುಟುಂಬ ಅಥವಾ ಆಸ್ಪತ್ರೆಯಿಂದ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ತೀವ್ರ ಜ್ವರ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಇದೇ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಎಚ್‌ಡಿ ದೇವೇಗೌಡ ಅವರಿಗೆ 92 ವಯಸ್ಸಾಗಿದ್ದು, ವಯೋಸಹಜ ಆರೋಗ್ಯ ಸಮಸ್ಯೆ ಎದುರಾಗಿದೆ. ಇಳಿಯಸ್ಸಿನಲ್ಲೂ ದೊಡ್ಡಗೌಡರು ಸಕ್ರಿಯ ರಾಜಕಾರಣದಲ್ಲಿದ್ದು, ರಾಜ್ಯಸಭೆ ಸದಸ್ಯರಾಗಿದ್ದಾರೆ. ಇತ್ತೀಚೆಗೆ ಹಾಸನದ ಗಣೇಶ ಮೆರವಣಿಗೆ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ದೇವೇಗೌಡ ಭೇಟಿಯಾಗಿದ್ದರು.

DR. G Parameshwara H D Kumaraswamy BJP Karnataka Janata Dal Secular ಕಲ್ಪತರ ನಾಡು ನಮ್ಮ ತುಮಕೂರು ಜಿಲ್ಲೆ District Nikhil Gowda JDS Karnataka - ಜೆಡಿಎಸ್ ಕರ್ನಾಟಕ JDS fans club B S Sathyaprakash S R Gowda BJP Sira V S Ugrappa

03/10/2025

ಬೆಂಗಳೂರು ಮೆಟ್ರೋದಲ್ಲಿ ಕನ್ನಡ-ಹಿಂದಿ ವಿವಾದ: ಮಹಿಳೆಯರ ನಡುವೆ ವಾಕ್ಸಮರ

ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣದಲ್ಲಿ (Metro Station) ಇಬ್ಬರು ಮಹಿಳೆಯರ ನಡುವೆ ನಡೆದ ವಾಗ್ವಾದದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಭಾಷೆಯ ಆಯ್ಕೆಯ ವಿಷಯದಲ್ಲಿ ಘರ್ಷಣೆ ಭುಗಿಲೆದ್ದಿದೆ. ಒಬ್ಬ ಮಹಿಳೆ ಕನ್ನಡದಲ್ಲಿ (Kannada) ಮಾತನಾಡಲು ಒತ್ತಾಯಿಸಿದರೆ, ಇನ್ನೊಬ್ಬ ಮಹಿಳೆ ನಿರಾಕರಿಸಿ ಹಿಂದಿಯಲ್ಲಿ (Hindi) ಪ್ರತಿಕ್ರಿಯಿಸಿದರು. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

ಮೆಟ್ರೋ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಇಬ್ಬರು ಮಹಿಳೆಯರು ನಿಂತು ಮಾತಿನ ಚಕಮಕಿ ನಡೆಸುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ವಿಡಿಯೊದಲ್ಲಿ, ಬುರ್ಖಾ ಧರಿಸಿದ ಮಹಿಳೆಯೊಬ್ಬರು ಹಿಂದಿ ಮಾತನಾಡಿ ಎಂದು ಜೋರಾಗಿ ಹೇಳಿದರೆ, ಮತ್ತೊಬ್ಬ ಮಹಿಳೆ ಕನ್ನಡದಲ್ಲಿ ಮಾತನಾಡುವಂತೆ ಹೇಳಿದ್ದಾರೆ. ಹಿಂದಿ, ಕನ್ನಡ ಎನ್ನುತ್ತಾ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.

ಸೀರೆಯುಟ್ಟ ಕನ್ನಡ ಭಾಷಿಕ ಮಹಿಳೆಯ ಬಗ್ಗೆ ಬುರ್ಖಾ ಧರಿಸಿದ ಮಹಿಳೆಯು, ನೀವು ಸಿದ್ದರಾಮಯ್ಯ ಅವರ ಮಹಿಳೆಯೇ? ಎಂದು ಪ್ರಶ್ನಿಸಿದ್ದಲ್ಲದೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಮಾತು ಮುಂದುವರಿದಂತೆ, ಕನ್ನಡ ಮಾತನಾಡುವ ಮಹಿಳೆ ಪದೇ ಪದೆ ಕನ್ನಡ...ಕನ್ನಡ...ಎಂದು ಹೇಳಿದರೆ, ಮತ್ತೊಬ್ಬಾಕೆ ಭಾಷೆ ಬದಲಾಯಿಸಲು ನಿರಾಕರಿಸಿದ್ದಾಳೆ.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಹೆಚ್ಚುತ್ತಿರುವ ಭಾಷಾ ಉದ್ವಿಗ್ನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಒಬ್ಬ ರೆಡ್ಡಿಟ್ ಬಳಕೆದಾರರು, ಪ್ರತಿದಿನ ಕನ್ನಡಕ್ಕಾಗಿ ಹೋರಾಟ ನಡೆಯುತ್ತಿರುವಂತೆ ತೋರುತ್ತಿದೆ. ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ಅಸಹಿಷ್ಣುತೆ ಏಕೆ? ಎಂದು ಪ್ರಶ್ನಿಸಿದ್ದಾರೆ. ಪರಿಸ್ಥಿತಿ ಗೊಂದಲದಿಂದ ಕೂಡಿದ್ದು, ಇದು ಆಕ್ರೋಶ ಅಥವಾ ಗಲಾಟೆಗೆ ನಿಜವಾಗಿಯೂ ಅರ್ಹವಲ್ಲ ಎಂದು ಎಕ್ಸ್‌ನಲ್ಲಿ ಬಳಕೆದಾರರೊಬ್ಬರು ಟೀಕಿಸಿದ್ದಾರೆ.

ಮೊನ್ನೆಯಷ್ಟೇ ಮಹಾರಾಷ್ಟ್ರದಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಮರಾಠಿ ಭಾಷಿಕ ಮಹಿಳೆ ಹಾಗೂ ಹಿಂದಿ ಭಾಷಿಕ ಮಹಿಳೆಯ ನಡುವೆ ರೈಲಿನಲ್ಲಿ ಭಾಷಾ ಸಮರ ನಡೆದಿತ್ತು. ಅಲ್ಲಿ ಮರಾಠಿ ಮಾತನಾಡುವ ಮಹಿಳೆಯು, ಮತ್ತೊಬ್ಬ ಮಹಿಳೆಗೆ ಮರಾಠಿ ಭಾಷೆ ಮಾತನಾಡದಿದ್ದರೆ ಮಹಾರಾಷ್ಟ್ರದಿಂದ ಒದ್ದು ಓಡಿಸುವುದಾಗಿ ಬೆದರಿಸಿದ್ದಳು. ಈ ವಿಡಿಯೊ ವೈರಲ್ ಆಗಿತ್ತು.

ದಕ್ಷಿಣ ಭಾರತದಲ್ಲಿ ಇತ್ತೀಚೆಗೆ ಭಾಷಾ ಸಮರ ನಡೆಯುತ್ತಿದೆ. ಹಿಂದಿ ಭಾಷಿಕರು ನಮ್ಮ ನಾಡಿಗೆ ಬಂದು, ಇಲ್ಲಿನ ಭಾಷೆ, ಸಂಸ್ಕೃತಿಗೆ ಬೆಲೆ ಕೊಡುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. ಇದು ಕನ್ನಡಿಗರು, ತಮಿಳಿಗರು, ತೆಲುಗು ಜನರ ಕೋಪಕ್ಕೆ ಕಾರಣವಾಗಿದೆ.

Address

26th Ward, Behind SP Office. 11th Cross, Ashokanagara

572102

Alerts

Be the first to know and let us send you an email when Tumakuru Express posts news and promotions. Your email address will not be used for any other purpose, and you can unsubscribe at any time.

Contact The Business

Send a message to Tumakuru Express:

  • Want your business to be the top-listed Media Company?

Share