Prabhudev News

  • Home
  • Prabhudev News

Prabhudev News News Publishing

13/06/2026
06/06/2026

ಗೋವಾದಲ್ಲಿ ಇಂದು ಸಂಭವಿಸಿದ ದೋಣಿ ದುರಂತ ಅತ್ಯಂತ ಹೃದಯವಿದ್ರಾವಕವಾಗಿದೆ. 23 ಮೃತದೇಹಗಳನ್ನು ಪತ್ತೆಹಚ್ಚಲಾಗಿದ್ದು, 40 ಜನರನ್ನು ರಕ್ಷಿಸಲಾಗಿದೆ. ಇನ್ನೂ 64 ಜನರು ನಾಪತ್ತೆಯಾಗಿದ್ದಾರೆ.
ದೋಣಿ ಮಾಲೀಕರ ಅತಿಯಾದ ಲಾಭದಾಸೆಯಿಂದ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡಿರುವುದು ಹಾಗೂ ಪ್ರಯಾಣಿಕರ ಅತಿಯಾದ ಆತ್ಮವಿಶ್ವಾಸವೂ ಈ ದುರಂತಕ್ಕೆ ಕಾರಣವಾಗಿರಬಹುದು. ಅಮೂಲ್ಯ ಜೀವಗಳನ್ನು ಕಳೆದುಕೊಂಡಿರುವುದು ಅತ್ಯಂತ ದುಃಖದ ಸಂಗತಿ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸೋಣ. 🙏💐
"ಒಂದು ಕ್ಷಣದ ನಿರ್ಲಕ್ಷ್ಯ ಮತ್ತು ಲಾಭದಾಸೆ, ಅನೇಕ ಕುಟುಂಬಗಳ ಬದುಕನ್ನೇ ಕತ್ತಲೆಗೆ ತಳ್ಳಿದೆ."

05/06/2026

ಜೂನ್ 5 ವಿಶ್ವ ಪರಿಸರ ದಿನಾಚಾರಣೆಯ ಅಂಗವಾಗಿ
ವನ ಮಹೋತ್ಸವ "ಬನ್ನಿ ಸಸಿ ನೆಟ್ಟು ಗೋಕಾಕ ನಗರವನ್ನು ಹಸಿರಾಗಿಸೋಣ"

04/06/2026

ಶಿವಂ ಅಸೋಸಿಯೇಟ್ಸ್ ಬಳಿಕ ಬೆಳಗಾವಿಯಲ್ಲಿ ಮತ್ತೊಂದು ನೂರಾರು ಕೋಟಿ ವಂಚನೆ ಪ್ರಕರಣ ಬೆಳಕಿಗೆ!!

ಬೆಳಗಾವಿ ಬ್ರೇಕಿಂಗ್
*ಬೆಳಗಾವಿಯಲ್ಲಿ ಮತ್ತೊಂದು ನೂರಾರು ಕೋಟಿ ರೂ ವಂಚನೆ ಪ್ರಕರಣ ಬೆಳಕಿಗೆ*
*ಶಿವಾನಂದ ನೀಲಣ್ಣವರ್ ಮಾದರಿಯಲ್ಲೇ ವಂಚನೆ ಬೆಳಕಿಗೆ*
ಆದಿತ್ಯರಾಜ ಕ್ಯಾಪಿಟಲ್ ಪ್ರೈ ಲಿ‌ ಕಂಪನಿ ಮೇಲೆ ದಾಳಿ.
ಮಹಾರಾಷ್ಟ್ರ ಮೂಲ ಬಲರಾಮ್ ಮಾನೆ ಎಂಬುವರ ಒಡೆತನದ ಕಂಪನಿ.
*ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್ ನೇತೃತ್ವದಲ್ಲಿ ದಾಳಿ*
ದಾಳಿ ವೇಳೆ ನೂರಾರು ಕೋಟಿ ಹಣ ವರ್ಗಾವಣೆ ಆಗಿರುವುದು ಬೆಳಕಿಗೆ.
ಆನ್ ಲೈನ್ ಮೂಲಕ ಹಣ ವರ್ಗಾವಣೆ ಆಗಿರುವುದು ಪತ್ತೆ.
ಸಾವಿರಾರು ಜನರಿಂದ ಹಣ ಠೇವಣಿ ಇರಿಸಿಕೊಂಡು ವಂಚನೆ ಆರೋಪ.
ಒಂದು ಲಕ್ಷಕ್ಕೆ ತಿಂಗಳಿಗೆ 3ಸಾವಿರ ಹಣ ಬಡ್ಡಿ ಕೊಡುವುದಾಗಿ ಆಮಿಷ.
ಠೇವಣಿದಾರರಿಗೆ ಆಮಿಷವೊಡ್ಡಿ ಹಣ ಸಂಗ್ರಹ ಆರೋಪ.
ನೂರಾರು ಕೋಟಿ ವಂಚನೆ ಮಾಡಿರುವ ಆರೋಪ.
ದಾಖಲೆ ಸೇರಿದಂತೆ ಹಣದ ಮೂಲ ಪರಿಶೀಲನೆ ಮಾಡ್ತಿರುವ ಅಧಿಕಾರಿಗಳು.
ಎಸಿಗೆ ಇಬ್ಬರು ಎಸಿಪಿ ಹಾಗೂ ಟಿಳಕವಾಡಿ ಪೊಲೀಸರು ಸಾಥ್.

02/06/2026

ಗೋಕಾಕ್ ನಗರದ ಆಶ್ರಯ ಬಡವಾನಿ ವಿಠ್ಠಲ್ ಪೂಜಾರಿ ಅವರ ಮನೆ ಹತ್ತಿರ ಹೆಬ್ಬಾವು ಪ್ರತ್ಯಕ್ಷ

02/06/2026

ಕೇರಳದ ತಿರುವಾನಂತಪುರಂ ಜಿಲ್ಲೆಯ ನೆಡುಮಂಗಾಡಿ ನಲ್ಲಿ 18 ತಿಂಗಳ ಮಗು ಆರ್ಶಿದ್ ಸಾವಿನ ಪ್ರಕರಣ ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ದೇಹದಲ್ಲಿ ಸುಮಾರು 51 ಗಾಯಗಳ ಗುರುತುಗಳು ಪತ್ತೆಯಾಗಿದ್ದು ನಿರಂತರ ಹಲ್ಲೆಯಿಂದ ಮಗು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಾಯಿ ಹಾಗೂ ಆಕೆಯ ಸಂಗಾತಿಯನ್ನು ಪೊಲೀಸರು ಬಂಧಿಸಿದ್ದಾರೆ.

31/05/2026

ಅಪಪ್ರಚಾರದ ಹಿಂದೆ ಕಾಣದ ಕೈಗಳ ಕೈವಾಡ : ಸತೀಶ್ ಜಾರಕಿಹೊಳಿ.

30/05/2026

ಸಂಗನಕೇರಿ
29-05-2026
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಸಂಗನಕೇರಿ ಪಟ್ಟಣದಲ್ಲಿ ಭೀಕರ ಅಗ್ನಿ ಅವಘಡ ರಾತ್ರಿ ಸುಮಾರು 2:30 ಗಂಟೆಯ ವೇಳೆಗೆ ಸಂಗನಕೇರಿಯಲ್ಲಿರುವ ಬೃಹತ್ S.M.K ಮಾರ್ಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿ, ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಘಟನೆಯಿಂದ ಅಪಾರ ಪ್ರಮಾಣದ ಆಸ್ತಿ ನಷ್ಟ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿ ಅವಘಡದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

Address


Telephone

+919449537373

Website

Alerts

Be the first to know and let us send you an email when Prabhudev News posts news and promotions. Your email address will not be used for any other purpose, and you can unsubscribe at any time.

Contact The Business

Send a message to Prabhudev News:

Shortcuts

  • Want your business to be the top-listed Media Company?

Share