20/11/2024
ಬೆಂಗಳೂರು / ಹಾಸನ : ಸಿನಿಮಾ ನಿರ್ಮಾಣದ ಕುರಿತು ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ಚಿತ್ರ ನಿರ್ದೇಶಕರೊಬ್ಬರ ಮೇಲೆ ಗುಂಡು ಹಾರಿಸಿ ಕೊ ..ಲೆಗೆ ಯತ್ನಿಸಿದ್ದ ಆರೋಪದ ಅಡಿ ನಟ ತಾಂಡವೇಶ್ವರ ಅಲಿಯಾಸ್ ತಾಂಡವ ಅವರನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.,
• ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ' ಎಂದು ಪೊಲೀಸರು ತಿಳಿಸಿದರು.
• 'ಹಾಸನದ ತಾಂಡವೇಶ್ವರ ಅವರು 'ಜೋಡಿಹಕ್ಕಿ' ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರು.
• ಚಲನಚಿತ್ರಗಳಲ್ಲೂ ಕೆಲಸ ಮಾಡಲು ಮುಂದಾಗಿದ್ದರು. ಚಿತ್ರ ನಿರ್ದೇಶಕ ಭರತ್ ನವುಂದ ಅವರೊಂದಿಗೆ 'ದೇವನಾಂಪ್ರಿಯ' ಚಿತ್ರ ನಿರ್ಮಾಣಕ್ಕೆ ಇಬ್ಬರ ಮಧ್ಯೆ ಮಾತುಕತೆ ನಡೆದು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರು.
• ಚಿತ್ರ ನಿರ್ಮಾಣಕ್ಕೆ ನಿರ್ಮಾಪಕರು ಸಿಗದ ಕಾರಣಕ್ಕೆ ತಾಂಡವೇಶ್ವರ ಅವರೇ ಹಂತ ಹಂತವಾಗಿ ನಿರ್ದೇಶಕರಿಗೆ ₹6 ಲಕ್ಷ ನೀಡಿದ್ದರು.
ಈ ಮಧ್ಯೆ ಚಿತ್ರ ನಿರ್ಮಾಣಕ್ಕೆ ಹಾಸನ ಕುಮಾರಸ್ವಾಮಿ ಹಣ ಹೂಡಿಕೆ ಮಾಡಿದ್ದರು.
• ಚಿತ್ರ ನಿರ್ಮಾಣ ಕೆಲಸ ಆರಂಭಗೊಂಡು ಎರಡು ವರ್ಷ ಕಳೆದರೂ ಚಿತ್ರೀಕರಣ ಪೂರ್ಣಗೊಂಡಿರಲಿಲ್ಲ.
• ವಿಳಂಬ ಆಗಿದ್ದರಿಂದ ಹಣ ವಾಪಸ್ ನೀಡುವಂತೆ ತಾಂಡವೇಶ್ವರ ಅವರು ಭರತ್ ಅವರನ್ನು ಕೇಳಿದ್ದರು.
• ಈ ಸಂಬಂಧ ಚರ್ಚಿಸಲು ಚಂದ್ರಾ ಲೇಔಟ್‌ನ ಬಸವೇಶ್ವರ ಬಡಾವಣೆಯ ನಿರ್ಮಾಪಕ ಕಚೇರಿಯಲ್ಲಿ ಸೋಮವಾರ ಸಂಜೆ ಸಭೆ ನಡೆಯುತ್ತಿತ್ತು.
• ಆಗ ಆರೋಪಿ ಕೃತ್ಯ ಎಸಗಿದ್ಧಾರೆ' ಎಂದು ಪೊಲೀಸರು ಹೇಳಿದರು., ಸಭೆಯಲ್ಲಿ ಹಣಕಾಸಿನ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು.
• ಆ ಸಂದರ್ಭದಲ್ಲಿ ತಾಂಡವೇಶ್ವರ್ ಅವರು ತಮ್ಮ ಬಳಿಯಿದ್ದ ಬಂದೂಕಿನಿಂದ ನಿರ್ದೇಶಕರತ್ತ ಗುಂಡು ಹಾರಿಸಿದ್ದರು.
• ಆಗ ಅವರು ತಪ್ಪಿಸಿಕೊಂಡಿದ್ದರಿಂದ ಗುಂಡು ಕಚೇರಿ ಕೊಠಡಿಯ ಮೇಲ್ಚಾವಣಿಗೆ ತಾಗಿತ್ತು' ಎಂದು ಪೊಲೀಸರು ತಿಳಿಸಿದರು.
• 'ನಿರ್ದೇಶಕ ನೀಡಿದ ದೂರು ಆಧರಿಸಿ ಬಿಎನ್‌ಎಸ್ 109 ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಕಲಂ 3, 27, 30ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ಪೊಲೀಸರು ಹೇಳಿದರು.
• ರವಿಚಂದ್ರನ್ ಅವರ ಮಗ ಮನೋರಂಜನ್ ನಾಯಕನಾಗಿ ನಟಿಸಿದ್ದ ಮುಗಿಲ್‌ಪೇಟೆ ಸಿನಿಮಾವನ್ನು 2021ರಲ್ಲಿ ಭರತ್ ನಿರ್ದೇಶಿಸಿದ್ದರು.