Galaxy Tv Kannada

  • Home
  • Galaxy Tv Kannada
ಏಪ್ರಿಲ್ 18 ರಂದು ತೆರೆಗೆ ಬರಲಿದೆ ಅಜೇಯ್ ರಾವ್ ನಿರ್ಮಾಣ ಹಾಗೂ ನಟನೆಯ "ಯುದ್ದ ಕಾಂಡ". ಶ್ರೀಕೃಷ್ಣ ಆರ್ಟ್ಸ್ & ಕ್ರಿಯೇಷನ್ಸ್ ಲಾಂಛನದಲ್ಲಿ ಅಜೇ...
05/04/2025

ಏಪ್ರಿಲ್ 18 ರಂದು ತೆರೆಗೆ ಬರಲಿದೆ ಅಜೇಯ್ ರಾವ್ ನಿರ್ಮಾಣ ಹಾಗೂ ನಟನೆಯ "ಯುದ್ದ ಕಾಂಡ".

ಶ್ರೀಕೃಷ್ಣ ಆರ್ಟ್ಸ್ & ಕ್ರಿಯೇಷನ್ಸ್ ಲಾಂಛನದಲ್ಲಿ ಅಜೇಯ್ ರಾವ್ ನಿರ್ಮಿಸಿ, ನಾಯಕನಾಗಿ ನಟಿಸಿರುವ "ಯುದ್ಧಕಾಂಡ" ಚಿತ್ರ ಏಪ್ರಿಲ್ 18 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

"ಯುದ್ಧಕಾಂಡ" ಪ್ರತಿಯೊಬ್ಬ ಮಹಿಳೆಯು ನೋಡಲೇ ಬೇಕಾದ ಚಿತ್ರ. ಮಹಿಳೆಯರ ಮೇಲೆ ಯಾವ ರೀತಿಯ ದೌರ್ಜನ್ಯಗಳು ನಡೆಯುತ್ತಿವೆ ಎಂದು ತೋರಿಸುತ್ತಿರುವ ಚಿತ್ರವೂ ಹೌದು. ನೊಂದ ಮಹಿಳೆಯರನ್ನು ಪ್ರತಿನಿಧಿಸುವ ಪಾತ್ರವನ್ನು ಅರ್ಚನಾ ಜೋಯಿಸ್ ಅದ್ಭುತವಾಗಿ ನಿಭಾಯಿಸಿದ್ದಾರೆ. ಪವನ್ ಭಟ್ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಹಿರಿಯ ನಟರಾದ ಟಿ.ಎಸ್ ನಾಗಾಭರಣ, ಪ್ರಕಾಶ್ ಬೆಳವಾಡಿ ಮುಂತಾದವರು ನಟಿಸಿದ್ದಾರೆ. ಬೇಬಿ ರಾದ್ನ್ಯ ಸಹ ಈ ಚಿತ್ರದಲ್ಲಿದ್ದಾರೆ. ಇದೊಂದು ಸಾಮಾಜಿಕ ಕಳಕಳಿಯುಳ್ಳ ಚಿತ್ರವಾಗಿದೆ. "ಯುದ್ಧ ಕಾಂಡ" ತೀರಾ ಕಡಿಮೆ ಬಜೆಟ್ ಅಥವಾ ತೀರಾ ಹೆವಿ ಬಜೆಟ್ ನ ಚಿತ್ರವಲ್ಲ. ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣವಾಗಿರುವ ಚಿತ್ರ. ಇಂತಹ ಚಿತ್ರಗಳು ಹೆಚ್ಚಾಗಿ ಜನರನ್ನು ತಲುಪಬೇಕು. ಉತ್ತಮ ಸಂದೇಶವಿರುವ ಈ ಚಿತ್ರವನ್ನು ರಾಷ್ಟ್ರಪತಿಗಳಿಗೂ ತೋರಿಸುವ ಯೋಚನೆ ಇದೆ. ಏಪ್ರಿಲ್ 18 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರವಿರಲಿ ಎಂದರು ನಿರ್ಮಾಪಕ & ನಾಯಕ ಅಜೇಯ್ ರಾವ್‌.

"ಯುದ್ಧ ಕಾಂಡ" 2022ರಲ್ಲೇ ಬರೆದ ಕಥೆ. ಈ ಕಥೆಯಲ್ಲಿ ಎಲ್ಲಾ ಪಾತ್ರಗಳು ಪ್ರಮುಖ ಪಾತ್ರಗಳೆ. ಈ ರೀತಿ ಕಥೆಯನ್ನು ನಿರ್ಮಾಪಕರು ಒಪ್ಪುತ್ತಾರೊ, ಇಲ್ಲವೊ? ಎಂಬ ಸಂಶಯದಿಂದ ಕಥೆ ಯಾರಿಗೂ ಹೇಳಿರಲಿಲ್ಲ‌. ಅನಂತರ ಕಥೆ ಕೇಳಿದ ಅಜೇಯ್ ರಾವ್ ಅವರು ನಿರ್ಮಾಣಕ್ಕೆ ಮುಂದಾದರು. ಚಿತ್ರಕಥೆ ಕೂಡ ಅಜೇಯ್ ರಾವ್ ಅವರದೆ‌. ಇನ್ನು, ಇದೊಂದು ಕೋರ್ಟ್ ರೂಮ್ ಡ್ರಾಮ. ನಾಗಾಭರಣ, ಪ್ರಕಾಶ್ ಬೆಳವಾಡಿ ಅವರಂತಹ ಅನುಭವಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕಾರ್ತಿಕ್ ಶರ್ಮ ಛಾಯಾಗ್ರಹಣ, ಹೇಮಂತ್ ಜೋಯಿಸ್,ಕೆ ಬಿ ಪ್ರವೀಣ್ ಸಂಗೀತ ನಿರ್ದೇಶನ ಹಾಗೂ ಶ್ರೀ ಕ್ರೇಜಿ ಮೈಂಡ್ಸ್ ಅವರ ಸಂಕಲನ "ಯುದ್ಧ ಕಾಂಡ" ಚಿತ್ರಕ್ಕಿದೆ ಎಂದರು ನಿರ್ದೇಶಕ ಪವನ್ ಭಟ್.

"ಯುದ್ಧಕಾಂಡ" ಚಿತ್ರದಲ್ಲಿ ಅನ್ಯಾಯದಿಂದ ನೊಂದ ಹೆಣ್ಣನ್ನು ಪ್ರತಿನಿಧಿಸುವ ಪಾತ್ರ ನನ್ನದು . ಪವನ್ ಭಟ್ ಅವರ ಕಥೆ ಚೆನ್ನಾಗಿದೆ ಎಂದು ನಟಿ ಅರ್ಚನಾ ಜೋಯಿಸ್ ತಿಳಿಸಿದರು.

ನ್ಯಾಯಾಧೀಶರ ಪಾತ್ರದಲ್ಲಿ ಅಭಿನಯಿಸಿರುವುದಾಗಿ ತಮ್ಮ ಪಾತ್ರದ ಬಗ್ಗೆ ವಿವರಿಸಿದ ಟಿ.ಎಸ್ ನಾಗಾಭರಣ,‌ "ಯುದ್ಧ ಕಾಂಡ" ಎಲ್ಲರಿಗೂ ಪ್ರಿಯವಾಗುವ ಚಿತ್ರವಾಗಲಿದೆ ಎಂಬ ಭರವಸೆ ನಮ್ಮ ತಂಡಕ್ಕಿದೆ ಎಂದರು.

ನಾನು ಹೆಚ್ಚಾಗಿ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಅಜೇಯ್ ರಾವ್ ಅವರು ಈ ಚಿತ್ರದ ಕಥೆ ಬಗ್ಗೆ ಹೇಳಿದಾಗ ನಟಿಸಲು ಒಪ್ಪಿಕೊಂಡೆ. ನನ್ನದು ಈ ಚಿತ್ರದಲ್ಲಿ ವಕೀಲನ ಪಾತ್ರ ಎಂದು ಪ್ರಕಾಶ್ ಬೆಳವಾಡಿ ಹೇಳಿದರು.

ಸಂಕಲನಕಾರ ಶ್ರೀ ಕ್ರೇಜಿ ಮೈಂಡ್ಸ್ ಮತ್ತು ತಂಡದ ಇತರೆ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕನ್ನಡದ ಸೃಜನಶೀಲ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ನಿರ್ದೇಶನದ ಯಕ್ಷಗಾನ ಕಲೆ ಆಧಾರಿತ "ವೀರ ಚಂದ್ರಹಾಸ" ಸಿನಿಮಾದ ಟ್ರೇಲರ್ ಅನ್ನು ಮುಖ್ಯಮಂತ...
05/04/2025

ಕನ್ನಡದ ಸೃಜನಶೀಲ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ನಿರ್ದೇಶನದ ಯಕ್ಷಗಾನ ಕಲೆ ಆಧಾರಿತ "ವೀರ ಚಂದ್ರಹಾಸ" ಸಿನಿಮಾದ ಟ್ರೇಲರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಬಿಡುಗಡೆಗೊಳಿಸಿದರು.

ತಮಿಳು, ಮಲಯಾಳಂ, ಕನ್ನಡ ಸೇರಿ ಬಹುಭಾಷೆಗಳ ಸಿನಿಮಾಗಳಲ್ಲಿ ತನ್ನ ಕಲಾ ಸಾಮರ್ಥ್ಯ ಪ್ರದರ್ಶಿಸಿ ಜನಮೆಚ್ಚುಗೆ ಕಳಿಸಿದ್ದೀರಿ. ಈ ಸಿನಿಮಾ ಕೂಡ ಯಶಸ್ವಿ ಕಾಣುತ್ತದೆ. ಸರ್ಕಾರದಿಂದ ಅಗತ್ಯ ಇರುವ ಸಹಕಾರ ನೀಡಲಾಗುವುದು. ನಿಮ್ಮ ಇಡೀ ಕಲಾ ತಂಡಕ್ಕೆ ಮತ್ತು ಸಿನಿಮಾ ತಂಡಕ್ಕೆ ಶುಭಾಶಯಗಳು‌ ಎಂದು ಮುಖ್ಯಮಂತ್ರಿಗಳು ಹಾರೈಸಿದರು.

ಮುಖ್ಯಮಂತ್ರಿಗಳ ಆಶೀರ್ವಾದ ಪಡೆದ ರವಿ ಬಸ್ರೂರು ತಂಡ ಅವರನ್ನು ಸಿನಿಮಾ ವೀಕ್ಷಣೆಗೆ ಬರಬೇಕು ಎಂದು ಆಹ್ವಾನಿಸಿದರು.

ಬರುತ್ತೇನೆ ಎಂದು ಆಶ್ವಾಸನೆ ನೀಡಿದ ಮುಖ್ಯಮಂತ್ರಿಗಳು ಸಿನಿಮಾ ತಂಡಕ್ಕೆ ಮತ್ತೊಮ್ಮೆ ಶುಭ ಹಾರೈಸಿದರು.

05/04/2025

ಜೋಯಾಲುಕ್ಕಾಸ್ನ ಜಯನಗರ ಮಳಿಗೆಯಲ್ಲಿ ಅತಿದೊಡ್ಡ
ಆಭರಣ ಪ್ರದರ್ಶನ `ದಿ ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ'

04/04/2025

ಭರ್ಜರಿ ಓಪನಿಂಗ್ ಪಡೆದ ಡಾ.ರಾಜಕುಮಾರ್ ಮೊಮ್ಮಗ ಅಭಿನಯದ ‘ನಿಂಬಿಯಾ ಬನದ ಮ್ಯಾಗ ಪೇಜ್ ೧’ ಸಿನಿಮಾ

03/04/2025

ಆಕಾಶ್ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್ನಿಂದ ಆಕಾಶ್ ಇನ್ವಿಕ್ಟಸ್ ಆರಂಭ |

03/04/2025

ಜಾಂಟಿ ಸನ್ ಆಫ್ ಜಯರಾಜ್ ಚಿತ್ರದ ಅಮ್ಮನ ಹಾಡು ಬಿಡುಗಡೆ ಸಮಾರಂಭ..! JHONTY SON OF JAYRAJ

ಕುತೂಹಲ ಹಾದಿಯಲ್ಲಿ ಸಾಗುವ ʼಅಜ್ಞಾತವಾಸಿʼ ಟ್ರೇಲರ್..ಏಪ್ರಿಲ್ 11ಕ್ಕೆ ರಂಗಾಯಣ ರಘು ಚಿತ್ರ ರಿಲೀಸ್ರಣರೋಚಕ ʼಅಜ್ಞಾತವಾಸಿʼ ಟ್ರೇಲರ್..ಏ.11ಕ್ಕೆ...
03/04/2025

ಕುತೂಹಲ ಹಾದಿಯಲ್ಲಿ ಸಾಗುವ ʼಅಜ್ಞಾತವಾಸಿʼ ಟ್ರೇಲರ್..ಏಪ್ರಿಲ್ 11ಕ್ಕೆ ರಂಗಾಯಣ ರಘು ಚಿತ್ರ ರಿಲೀಸ್

ರಣರೋಚಕ ʼಅಜ್ಞಾತವಾಸಿʼ ಟ್ರೇಲರ್..ಏ.11ಕ್ಕೆ ಹೇಮಂತ್ ರಾವ್ ನಿರ್ಮಾಣದ ಚಿತ್ರ ತೆರೆಗೆ

ಮಲೆನಾಡಿನ ಒಡಲಿನ ನಿಗೂಢ ಕಥೆ ʼಅಜ್ಞಾತವಾಸಿʼ ಟ್ರೇಲರ್ ಅನಾವರಣ

ಮಲೆನಾಡು ಸೊಗಡಿನ ಮತ್ತೊಂದು ಥ್ರಿಲರ್ ಕಥೆ ಅಜ್ಞಾತವಾಸಿ ಟ್ರೇಲರ್ ಬಿಡುಗಡೆ

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಮರ್ಡರ್ ಮಿಸ್ಟರಿ ಸಿನಿಮಾಗಳು ಬಂದಿವೆ. ಬರುತ್ತಲೇ ಇವೆ. ಈಗ ಬಿಡುಗಡೆಗೆ ಸಜ್ಜಾಗಿರುವ ಅಜ್ಞಾತವಾಸಿ ಸಿನಿಮಾ ಕೂಡ ಮರ್ಡರ್ ಮಿಸ್ಟರಿ ಕಥಾಹಂದರವನ್ನು ಹೊಂದಿದೆ. ಆದರೆ ಈ ಚಿತ್ರ ಬೇರೆಯದ್ದೇ ಕಂಟೆಂಟ್ ಹೊಂದಿದೆ ಅನ್ನೋದನ್ನು ಟ್ರೇಲರ್ ಹೇಳುತ್ತಿದೆ. ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅಜ್ಞಾತವಾಸಿ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆಯಿತು. ಈ ವೇಳೆ ಇಡೀ ಚಿತ್ರತಂಡ ಹಾಜರಾಗಿತ್ತು.

ಟ್ರೇಲರ್ ಬಿಡುಗಡೆ ಬಳಿಕ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಮಾತನಾಡಿ, ಮಲೆನಾಡಿನಲ್ಲಿ ನಡೆಯುವ ಕಥೆ. ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಕಾಲ್ಪನಿಕ ಕಥೆ. ಹಳ್ಳಿಯಲ್ಲಿ ಪೊಲೀಸ್ ಸ್ಟೇಷನ್ ಸ್ಥಾಪನೆಯಾಗಿ 25 ವರ್ಷವಾಗಿರುತ್ತದೆ. ಯಾವುದೇ ಸಣ್ಣ ಕೇಸ್ ಕೂಡ ಅಲ್ಲಿ ರಿಪೋರ್ಟ್ ಆಗಿರುವುದಿಲ್ಲ. 1997ರಲ್ಲಿ ಮರ್ಡರ್ ಕೇಸ್ ದಾಖಲಾಗುತ್ತದೆ. ಅನುಭವಿ ಇಲ್ಲದ ಪೊಲೀಸ್ ಅಲ್ಲಿಗೆ ಬಂದಾಗ ಈ ಕೇಸ್ ಹೇಗೆ ಬಗೆಹರಿಸುತ್ತಾರೆ ಎಂಬುವುದೇ ಕಥೆ. ಗುಲ್ಟು ಬಳಿಕ ಏನೂ ಮಾಡಬೇಕು ಅಂದುಕೊಂಡಾಗ ಈ ಕಥೆ ನನ್ನನ್ನು ಎಕ್ಸೈಟ್ ಮಾಡಿತು. ಹೇಮಂತ್ ಅವರಿಗೆ ಕಥೆ ಹೇಳಿದ ಅವರಿಗೆ ಇಷ್ಟವಾಯ್ತು. ಏಪ್ರಿಲ್ 11ಕ್ಕೆ ಚಿತ್ರ ತೆರೆಗೆ ಬರುತ್ತಿದ್ದು, ಎಲ್ಲರೂ ನೋಡಿ ಹಾರೈಸಿ ಎಂದರು.

ನಿರ್ಮಾಪಕ ಹೇಮಂತ್ ಎಂ ರಾವ್ ಮಾತನಾಡಿ, ಗೋಧಿ ಬಣ್ಣ ಸಾಧಾರಾಣ ಮೈಕಟ್ಟು ಬಳಿಕ ನಾನು ರಕ್ಷಿತ್ ಮಾತಾಡಿಕೊಳ್ಳುತ್ತಿದ್ದೇವು. ಈ ರೀತಿ ಸಿನಿಮಾ ಮಾಡಲು ಯಾಕೆ ಇಷ್ಟು ಒದ್ದಾಟ ಮಾಡಬೇಕು. ಅವತ್ತು ನಾವಿಬ್ಬರು ಈ ರೀತಿಯ ಒಳ್ಳೆ ಕಥೆಗೆ ಬಂಡವಾಳ ಹಾಕಲು ತೀರ್ಮಾನ ಮಾಡಿಕೊಂಡಿದ್ದೇವು. ಅದರಂತೆ ಅಜ್ಞಾತವಾಸಿ ಸಿನಿಮಾ ಮಾಡಿದ್ದೇನೆ. ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಒಳ್ಳೆ ಸಿನಿಮಾ ಮೇಕರ್. ನಮ್ಮ ಇಂಡಸ್ಟ್ರೀಯ ಬ್ರೈಟ್ ಫಿಲ್ಮಂ ಮೇಕರ್. ರಘು ಸರ್ ಸೇರಿದಂತೆ ಇಡಿ ತಂಡ ಚಿತ್ರದಲ್ಲಿ ಸಾಕಷ್ಟು ಕೆಲಸ ಮಾಡಿದೆ. ಸಿನಿಮಾ ಚೆನ್ನಾಗಿ ಬಂದಿದೆ. ಜನರನ್ನು ನಂಬಿ ಈ ರೀತಿ ಸಿನಿಮಾ ಮಾಡಿದ್ದೇವೆ. ನೀವು ಈ ಚಿತ್ರಗಳಿಗೆ ಬೆಂಬಲ ಕೊಡಿ ಎಂದು ತಿಳಿಸಿದರು.

ರಂಗಾಯಣ ರಘು ಮಾತನಾಡಿ, ಒಬ್ಬರಿಗೊಬ್ಬರು ನಿರ್ದೇಶಕರು ಬೆಳೆಯಲಿ ಎಂದು ಈ ರೀತಿ ಸಿನಿಮಾಗಳನ್ನು ಮಾಡುತ್ತಿರುವುದು ಖುಷಿ ವಿಚಾರ. ಜನಾರ್ಧನ್ ಕಥೆ ಹೇಳಿದಾಗ ಎಲ್ಲಾ ಪಾತ್ರಗಳ ಮೇಲೆ ಹೊಟ್ಟೆ ಕಿಚ್ಚು ಬಂದಿತ್ತು. ಅಷ್ಟೂ ಚೆನ್ನಾಗಿವೆ ಪಾತ್ರಗಳು. ಇದು ಮರ್ಡರ್ ಮಿಸ್ಟ್ರಿ ಸಿನಿಮಾ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಒಳ್ಳೆ ಸಿನಿಮಾಗಳು ಬಂದಿವೆ. ಆ ಸಾಲಿಗೆ ಈ ಚಿತ್ರವನ್ನು ಜನಾರ್ಧನ್ ಹೇಮಂತ್ ಸೇರಿಸುತ್ತಾರೆ. ಆ ರೀತಿ ಕೆಲಸವನ್ನು ಎಲ್ಲರೂ ಮಾಡಿದ್ದಾರೆ. ಇದೊಂದು ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಸಪೋರ್ಟ್ ಇರಲಿ ಎಂದು ತಿಳಿಸಿದರು.

2 ನಿಮಿಷ 6 ಸೆಕೆಂಡ್ ಇರುವ ಅಜ್ಞಾತವಾಸಿ ಟ್ರೇಲರ್ ಸಾಕಷ್ಟು ಕುತೂಹಲ ಹೆಚ್ಚಿಸಿದೆ. ಮಲೆನಾಡಿ ಸೊಬಗಿನಲ್ಲಿ ನಡೆಯುವ ರೋಚಕ ಮರ್ಡರ್ ಮಿಸ್ಟರಿ ಕಥೆ ರಣರೋಚಕವಾಗಿ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಕಟ್ಟಿಕೊಟ್ಟಿದ್ದಾರೆ. ಇನ್ನೂ ಎಂದಿನಂತೆ ರಂಗಾಯಣ ರಘು ತಮ್ಮ ಪಾತ್ರದಲ್ಲಿ ಜೀವಿಸಿದ್ದಾರೆ. ಪವನಾ ಗೌಡ, ಸಿದ್ದು ಮೂಲಿಮನೆ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಟ್ರೇಲರ್ ನಲ್ಲಿಒ ಗಮನಸೆಳೆಯುತ್ತಾರೆ. ಚರಣ್ ರಾಜ್ ಸಂಗೀತ, ಹಾಗೂ ಅದ್ವೈತ್ ಗುರುಮೂರ್ತಿ ಕ್ಯಾಮೆರಾ ವರ್ಕ್ ಟ್ರೇಲರ್ ಅಂದವನ್ನು ಹೆಚ್ಚಿಸಿದೆ.

ಅಜ್ಞಾತವಾಸಿ ಚಿತ್ರಕ್ಕೆ 'ಗುಳ್ಟು' ಸಾರಥಿ ಜನಾರ್ಧನ್ ಚಿಕ್ಕಣ್ಣ ಆಕ್ಷನ್ ಕಟ್ ಹೇಳಿದ್ದಾರೆ. 'ಗೋಧಿಬಣ್ಣ ಸಾಧಾರಣ ಮೈಕಟ್ಟು', ಸಪ್ತ ಸಾಗರದಾಚೆ ಎಲ್ಲೋ ಸರಣಿ ಚಿತ್ರಗಳ ಸಾರಥಿ ಹೇಮಂತ್ ಎಂ ರಾವ್ ತಾಯಿ ನೆನಪಿನಲ್ಲಿ ಪ್ರಾರಂಭಿಸಿರುವ ದಾಕ್ಷಾಯಿಣಿ ಟಾಕೀಸ್ ಪ್ರೊಡಕ್ಷನ್ ಹೌಸ್ ನಡಿ ಚಿತ್ರ ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಅಜ್ಞಾತವಾಸಿಯಲ್ಲಿ ಪಾವನಾ ಗೌಡ ಹಾಗೂ ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಸೇರಿದಂತೆ ಹಲವರು ನಟಿಸಿದ್ದಾರೆ.

ಜನಾರ್ಧನ್ ಚಿಕ್ಕಣ್ಣ ಗುರುಗಳಾದ ಕೃಷ್ಣರಾಜ್ ಅವರು ಅಜ್ಞಾತವಾಸಿ ಚಿತ್ರಕ್ಕೆ ಕಥೆ ಬರೆದ್ದಾರೆ. 1997ರಲ್ಲಿ ಮಲೆನಾಡಿನಲ್ಲಿ ನಡೆದ ಕೊಲೆಯೊಂದರ ಸುತ್ತ ಈ ಕಥೆ ಹೆಣೆಯಲಾಗಿದೆ. ಕನ್ನಡದಲ್ಲಿ ಈವರೆಗೂ ಬಂದಿರದ ಮರ್ಡರ್ ಮಿಸ್ಟರಿ ಕಥಾಹಂದರ ಚಿತ್ರದಲ್ಲಿದೆ. ಅದ್ವೈತ ಛಾಯಾಗ್ರಾಹಕರಾಗಿ ಹಾಗೂ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ, ಭರತ್ ಎಂ.ಸಿ ಸಂಕಲನಕಾರರಾಗಿ, ಉಲ್ಲಾಸ್ ಹೈದೂರು ಕಲಾ ನಿರ್ದೇಶಕರಾಗಿ ಅಜ್ಞಾತವಾಸಿ ಚಿತ್ರದಲ್ಲಿ ಕಾರ್ಯನಿರ್ವಾಹಿಸಿದ್ದಾರೆ. ಎನ್ ಹರಿಕೃಷ್ಣ ಸಹ ನಿರ್ದೇಶಕರಾಗಿ ದುಡಿದಿದ್ದು, ಜಿ.ಬಿ.ಭರತ್ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.

"ಜಾಕಿ 42" ಚಿತ್ರದ ಮೂಲಕ ಮತ್ತೆ ಒಂದಾದ ಗುರುತೇಜ್ ಶೆಟ್ಟಿ ಹಾಗೂ ಕಿರಣ್ ರಾಜ್ .“ರಾನಿ” ಚಿತ್ರದ ಮುಖಾಂತರ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ ನಿರ...
03/04/2025

"ಜಾಕಿ 42" ಚಿತ್ರದ ಮೂಲಕ ಮತ್ತೆ ಒಂದಾದ ಗುರುತೇಜ್ ಶೆಟ್ಟಿ ಹಾಗೂ ಕಿರಣ್ ರಾಜ್ .

“ರಾನಿ” ಚಿತ್ರದ ಮುಖಾಂತರ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ ನಿರ್ದೇಶಕ ಗುರುತೇಜ್ ಶೆಟ್ಟಿ ಹಾಗೂ ನಟ ಕಿರಣ್ ರಾಜ್ ಮತ್ತೆ ಒಂದ್ದಾಗಿದ್ದಾರೆ, "ರಾನಿ" ಯಲ್ಲಿ ಲಾಂಗ್ ಹಿಡಿದು ಅಬ್ಬರಿಸಿದ ಕಿರಣ್ ರಾಜ್ ಈಗ ಕುದುರೆ ಏರಿ “ಜಾಕಿ” ಯಾಗಿದ್ದಾರೆ ರಾನಿ ಯಲ್ಲಿ ಕೆಲಸ ಮಾಡಿದ ತಂತ್ರಜ್ಞರ ತಂಡ ಇಲ್ಲೂ ಕೆಲಸ ಮಾಡುತ್ತಿದೆ,ರಾಗವೇಂದ್ರ ಬಿ ಕೋಲಾರ ಛಾಯಾಗ್ರಹಣ ಸತೀಶ್ ಕಲಾ ನಿರ್ದೇಶನ ಹಾಗೂ ಉಮೇಶ ಆರ್ ಬಿ ಸಂಕಲನ ಚಿತ್ರಕ್ಕಿದೆ.

“ಗೋಲ್ಡನ್ ಗೇಟ್ ಸ್ಟುಡಿಯೋಸ್” ಬ್ಯಾನರ್ ನಲ್ಲಿ ಭಾರತಿ ಸತ್ಯನಾರಾಯಣ‌ "ಜಾಕಿ 4" ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಕಮರ್ಷಿಯಲ್ ಚಿತ್ರವಾಗಿದ್ದು ಹಾರ್ಸ್ ರೇಸ್ ಹಿನ್ನೆಲೆ ಯಲ್ಲಿ ಕಥೆ ಸಾಗಲಿದೆ. ಚಿತ್ರ ಕಥೆಯಲ್ಲಿ ಲವ್ ಫ್ಯಾಮಿಲಿ ಸೆಂಟಿಮೆಂಟ್ ಹಾಸ್ಯ ಎಲ್ಲವೂ ಒಳಗೊಂಡಿದೆ ಎನ್ನುತ್ತಾರೆ ನಿರ್ದೇಶಕ ಗುರುತೇಜ್ ಶೆಟ್ಟಿ..ಮೇ 15 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

ಬೆಂಗಳೂರು , ಮೈಸೂರು ವಿದೇಶದಲ್ಲೂ ಚಿತ್ರೀಕರಣ ನೆಡೆಯಲಿದೆ..ಚಿತ್ರದ ಟೈಟಲ್ ಬಿಡುಗಡೆ ಗೊಳಿಸಿದ ಚಿತ್ರ ತಂಡ ಟೈಟಲ್ ಪೋಸ್ಟರ್ ನಲ್ಲಿ ಪ್ರೇಕ್ಷಕನ ಗಮನ ಸೆಳೆದಿದೆ,ಹಾರ್ಸ್ ರೇಸ್ ಹಿನ್ನೆಲೆಯಲ್ಲಿ ಪೋಸ್ಟರ್ ಇದ್ದು ಹಾರ್ಸ್ ಮೇಲೆ ಜಾಕಿ ಹಾಗೂ ಹಾರ್ಸ್ ಕಾಲ್ ಕೆಳಗೆ ಹಣದ ರೋಲ್ jockey 42 ಎನ್ನುವ ಟೈಟಲ್ ಗಮನ ಸೆಳೆದಿದೆ,ಉಳಿದ ತಾರಾಗಣ ಹಾಗೂ ತಂತ್ರಜ್ಞರ ಮಾಹಿತಿ ಇನ್ನಸ್ಟೇ ಚಿತ್ರ ತಂಡದಿಂದ ಬರಬೇಕಿದೆ..

29/03/2025

ಜೋಯಾಲುಕ್ಕಾಸ್ ಪ್ರೈಡ್‌ನ 'ಡೈಮಂಡ್ ವೆಡ್ಡಿಂಗ್ ಕಲೆಕ್ಷನ್' ಅನ್ನು ಅನಾವರಣಗೊಳಿಸಿದೆ

28/03/2025

ʼಫ್ಯೂಚರ್ ಈಸ್ ನೌʼ ಧ್ಯೇಯದ ವೈಟ್‌ಫೀಲ್ಡ್ ಆರ್ಟ್ ಕಲೆಕ್ಟಿವ್‌ನ ಎಂಟನೇ ಆವೃತ್ತಿಗೆ ವಿಆರ್ ಬೆಂಗಳೂರಿನಲ್ಲಿ ಚಾಲನೆ

27/03/2025

ಬೆಂಗಳೂರಿನಲ್ಲಿ ತನ್ನ ಮೊದಲ ಫ್ಲ್ಯಾಗ್ ಶಿಪ್ ಸ್ಟೋರ್ ಪ್ರಾರಂಭಿಸಿದ ಟೆಕ್ನೋಸ್ಪೋರ್ಟ್
TechnoSport opens its first flagship store in Bengaluru

27/03/2025

ಬೆಂಗಳೂರಿನಲ್ಲಿ ನಡೆದ ತನ್ನ ಮೊದಲ 'ಬಿಯಾಂಡ್ ಇನ್ಕ್ರೆಡಿಬಲ್ ವಿತ್ ASUS 'ಕಾರ್ಯಕ್ರಮ

Address


Telephone

+919206609005

Website

Alerts

Be the first to know and let us send you an email when Galaxy Tv Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Galaxy Tv Kannada:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share