02/09/2025
ಪರಿವರ್ತಿನಿ ಏಕಾದಶಿ ವ್ರತದ ಕಥೆ
ಪರಿವರ್ತಿನಿ ಏಕಾದಶಿಯ ಕಥೆಯು ತ್ರೇತಯುಗದಲ್ಲಿ ಆರಂಭವಾಗಿದ್ದು. ಪ್ರಹ್ಲಾದನ ಮೊಮ್ಮಗನಾದ ರಾಜ ಮಹಾಬಲಿ ಮೂರು ಲೋಕಗಳನ್ನು ಆಳಿದ (ದೇವ ಲೋಕ, ಭೂ ಲೋಕ ಮತ್ತು ಪಾತಾಳ ಲೋಕ). ಮತ್ತು ಅಸುರ (ರಾಕ್ಷಸ) ಆಗಿದ್ದರೂ ಸಹ, ಅವರು ಭಗವಾನ್ ವಿಷ್ಣುವನ್ನು ಪೂಜಿಸುತ್ತಿದ್ದರು. ಇದಲ್ಲದೆ, ಅವನು ತನ್ನ ಅಜ್ಜ ಪ್ರಹ್ಲಾದನಂತೆ ಸಮರ್ಥ ರಾಜನಾಗಿದ್ದನು.
ಆತನ ಆಳ್ವಿಕೆಯ ಸಮಯದಲ್ಲಿ ಜನರು ಕಷ್ಟದಿಂದ ಬಳಲಿದ್ದೇ ಇಲ್ಲವಂತೆ. ಪ್ರತಿಯೊಬ್ಬ ಪ್ರಜೆ ಬಲಿ ಚಕ್ರವರ್ತಿ ಆಡಳಿತದಿಂದ ಖುಷಿಯಾಗಿದ್ದರು. ರಾಜ್ಯದಲ್ಲಿ ಶಾಂತಿ ಸಮಾಧಾನ ನೆಲೆಸಿತ್ತಂತೆ. ಆದರೆ ಇವನ ಈ ಒಳ್ಳೆತನವೇ ಇವನನ್ನು ಪರೀಕ್ಷೆಗೆ ಒಳಪಡುವಂತೆ ಮಾಡುತ್ತದೆ.
ರಾಜ ಬಲಿ ಚಕ್ರವರ್ತಿಯ ಉದಾರ ಮನಸ್ಸಿನಿಂದ ಖುಷಿಯಾಗಿದ್ದ ಜನ ಆತನನ್ನೇ ದೇವರೆಂದು ಪೂಜಿಸುತ್ತಿದ್ದರು. ಇದರಿಂದ ದೇವತೆಗಳಿಗೆ ಮತ್ಸರ ಉಂಟಾಗುತ್ತೆ. ಬಲಿ ಚಕ್ರವರ್ತಿಯಿಂದ ತಮ್ಮ ಅಧಿಕಾರಕ್ಕೆ ಕುತ್ತು ಬರಬಹುದೆಂಬ ಭಯ ಶುರುವಾಗುತ್ತೆ. ಹೀಗಾಗಿ ಬಲಿ ಚಕ್ರವರ್ತಿಯ ಖ್ಯಾತಿಯನ್ನು ಕುಗ್ಗಿಸಬೇಕೆಂದು ಉಪಾಯವನ್ನು ಮಾಡುತ್ತಾರೆ. ಬಳಿಕ ವಿಷ್ಣುವನ್ನು ಸಂಧಿಸಿ ತಮ್ಮ ಕಷ್ಟಗಳನ್ನು ಹೇಳುತ್ತಾರೆ. ಬಲಿ ಚಕ್ರವರ್ತಿಯ ದಯೆ, ಕರುಣೆ ಬಗ್ಗೆ ತಿಳಿದಿದ್ದ ವಿಷ್ಣು ಸ್ವತಃ ತಾವೇ ಬಲಿ ಚಕ್ರವರ್ತಿಯನ್ನು ಪರೀಕ್ಷಿಸಲು ವಾಮನ ರೂಪವನ್ನು ತಾಳುತ್ತಾರೆ.
ವಾಮನ ಅವತಾರದಲ್ಲಿ ವಿಷ್ಣು
ಪರೀಕ್ಷೆಗೆ ಮುಂದಾದ ವಿಷ್ಣು ಬಡ ಬ್ರಾಹ್ಮಣನಾಗಿ ಕುಬ್ಜ ರೂಪದಲ್ಲಿ ಬಲಿ ಚಕ್ರವರ್ತಿ ಬಳಿ ಹೋಗುತ್ತಾರೆ. ತನಗೆ ಭೂಮಿ ದಾನ ಮಾಡುವಂತೆ ಕೇಳಿಕೊಳ್ಳುತ್ತಾರೆ. ತನ್ನ ಮೂರು ಪಾದಗಳು ಆಕ್ರಮಿಸುವ ಸ್ಥಳವನ್ನು ದಾನ ನೀಡುವಂತೆ ಬಲಿ ಚಕ್ರವರ್ತಿಯಲ್ಲಿ ಕೇಳುತ್ತಾರೆ.
ಅದರಂತೆಯೇ ಬಲಿ ಚಕ್ರವರ್ತಿ ಇದಕ್ಕೆ ಸಮ್ಮತಿಯನ್ನು ಸೂಚಿಸುತ್ತಾನೆ.
ಆಗ ವಾಮನ ಬೃಹತಾಕಾರದಲ್ಲಿ ಬೆಳೆದು ತನ್ನ ಒಂದು ಹೆಜ್ಜೆಯನ್ನು ಭೂಮಿಯ ಮೇಲೆ ಇಡುತ್ತಾರೆ. ಎರಡನೇ ಹೆಜ್ಜೆಯನ್ನು ಆಕಾಶದ ಮೇಲೆ ಇಡುತ್ತಾರೆ. ಅದು ಸಂಪೂರ್ಣ ಆಕಾಶವನ್ನು ಆವರಿಸಿಕೊಳ್ಳುತ್ತದೆ. ಇದಾದ ಬಳಿಕ ಬಲಿ ಚಕ್ರವರ್ತಿಗೆ ಇದು ವಿಷ್ಟುವಿನ ಅವತಾರವೆಂದು ತಿಳಿಯುತ್ತದೆ.
ಆಗ ವಿಷ್ಟು ಮೂರನೇ ಹೆಜ್ಜೆಯನ್ನು ಎಲ್ಲಿ ಇಡಬೇಕು. ಸ್ಥಳವೇ ಇಲ್ಲವೆಂದು ಹೇಳಿದಾಗ ಪರಿಸ್ಥಿತಿ ಅರಿತಿದ್ದ ಬಲಿ ಚಕ್ರವತ್ರಿ ಕೊಟ್ಟ ಮಾತನ್ನು ತಪ್ಪಲಾರೆ ಎಂದು ತನ್ನ ತಲೆಯ ಮೇಲೆಗೆ ಮೂರನೆ ಹೆಜ್ಜೆ ಇಡಲು ಹೇಳುತ್ತಾರೆ. ಆಗ ವಿಷ್ಣು ತಮ್ಮ ಮೂರನೇ ಹೆಜ್ಜೆಯನ್ನು ಬಲಿ ಚಕ್ರವರ್ತಿಯ ತಲೆಯ ಮೇಲೆ ಇರಿಸುತ್ತಾರೆ. ಪಾತಾಳ ಲೋಕಕ್ಕೆ ತಳ್ಳುತ್ತಾರೆ. ಈ ರೀತಿ ಬಲಿ ಪರಿವರ್ತನೆ ಕಾಣುತ್ತಾನೆ. ಹೀಗಾಗಿ ಈ ದಿನವನ್ನು ಆಚರಿಸಲಾಗುತ್ತೆ.
▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
ಶ್ರೀಮತಿ ನಿರ್ಮಲರಾಜೇಶ್
▬▬▬▬▬▬ஜ۩۞۩ஜ▬▬▬▬▬