
06/08/2025
ಶಿವಮೊಗ್ಗ ಡಿಸಿ ಕಚೇರಿ ಪುರುಷರ ಶೌಚಾಲಯದಲ್ಲಿ ಎಲ್ಲೆಂದರಲ್ಲಿ ಅವಧಿ ಮುಗಿದ ಸ್ಯಾನಿಟೈಸರ್ - ೨೦೨೧ರ ಜನಗಣತಿ ಕೈಚೀಲಗಳ ರಾಶಿ...!
(ವಿಶೇಷ ವರದಿ: ರಾಕಶ್ ಡಿಸೋಜ, ಮೊ: 94483 43211)
ಶಿವಮೊಗ್ಗ : ಶೈಕ್ಷಣಿಕ ನಗರಿ ಎಂದು ಹೆಸರಾಗಿರುವ ಶಿವಮೊಗ್ಗ ನಗರದಲ್ಲಿ ಜಿಧಿಕಾರಿಗಳ ಕಚೇರಿ ಶಿಸ್ತು, ಶುದ್ಧತೆ, ಸ್ವಚ್ಚತೆ ಮತ್ತು ಸಕಾರಾತ್ಮಕ ಆಡಳಿತದ ಸಂಕೇತವಾಗಿರ ಬೇಕಾದ ಸ್ಥಳ. ಡಿಸಿ ಕಛೇರಿ ಎಂದರೆ ಇದು ಜಿಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿ ಕಚೇರಿಯಾಗಿ ರಾಜಕೀಯ, ಆಡಳಿತಾತ್ಮಕ ನಿರ್ಧಾರಗಳ ಕೇಂದ್ರ ವಾಗಿದೆ. ಇದು ಜಿಯ ಹೃದಯ ಭಾಗದಲ್ಲಿರುವ ಆಡಳಿತದ ಕೇಂದ್ರ ಬಿಂದು. ಪ್ರತಿ ದಿನ ನೂರಾರು ನಾಗರಿಕರು ತಮ್ಮ ದೈನಂದಿನ ಬೇಡಿಕೆ, ಅರ್ಜಿ ಹಾಗೂ ದಾಖಲೆಗಳೊಂದಿಗೆ ತಮ್ಮ ನಾನಾ ಸಮಸ್ಯೆಗಳ ಪರಿಹಾರಕ್ಕಾಗಿ ಈ ಕಛೇರಿಗೆ ಬರುತ್ತಾರೆ. ಆದರೆ ಈ ಕಛೇರಿ ಕಟ್ಟಡದ ಕೆಳ ಅಂತಸ್ತಿನಲ್ಲಿ ಪುರುಷರು ಬಳಸುವ ಶೌಚಾಲಯದ ಸ್ಥಿತಿ ಮಾತ್ರ ಆಘಾತಕಾರಿಯಾಗಿದ.
ಈ ಕಚೇರಿಯ ಶೌಚಾಲಯದ ಸ್ಥಿತಿಗತಿ ನೋಡಿದರೆ, ಆಡಳಿತದ ಮುಖವಾಣಿ ಹಿಂದೆ ಇರುವ ನಿರ್ಲ ಕ್ಷ್ಯದ ಕಹಿ ಯಥಾರ್ಥ ಸ್ಪಷ್ಟವಾಗುತ್ತದೆ.
ಈ ಕಟ್ಟಡದ ಗ್ರೌಂಡ್ ಫ್ಲೋರ್ ನಲ್ಲಿರುವ (ಕೊಠಡಿ ಸಂಖ್ಯೆ ಎ-೦೪) ಪುರುಷರ ಶೌಚಾಲಯದ ದುಸ್ಥಿತಿ ಜಿಲ್ಲೆಯ ಆಡಳಿತ ವ್ಯವಸ್ಥೆಯನ್ನು ಅಕ್ಷರಷಃ ಅನಾವರಣ ಗೊಳಿಸುತ್ತಿದೆ. ಇಲ್ಲಿ ಅವಧಿ ಮುಗಿದ ಸ್ಯಾನಿಟೈಸರ್‌ಗಳ ರಾಶಿ, ೨೦೨೧ರ ಜನಗಣತಿ ಕಾರ್ಯಕ್ಕೆ ಬಳಸಬೇಕಿದ್ದ ಕೈಚೀಲಗಳು, ಗಬ್ಬುನಾತ, ಸ್ವಚ್ಛತೆಯ ಕೊರತೆ ಇಲ್ಲಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಅಪಮಾನದ ಅನುಭವ ನೀಡುತ್ತಿದ್ದು, ಆರೋಗ್ಯದ ಮೇಲೆ ನೇರವಾಗಿ ಕರೆ ನೆರಳು ಬೀರುತ್ತಿದೆ.
ಎಲ್ಲೆಂದರಲ್ಲಿ ಅವಧಿ ಮುಗಿದ ಸ್ಯಾನಿಟೈಸರ್ ಬಾಟಲ್‌ಗಳ ರಾಶಿ: ಈ ಶೌಚಾಲಯದ ಒಳಗೆ ಎಲ್ಲೆಂದ ರಲ್ಲಿ ಅವಧಿ ಮುಗಿದ, ಬಿಸಾಡಲಾಗದ ಹಳೆಯ ಸ್ಯಾನಿಟೈಸರ್ ಬಾಟಲ್‌ಗಳ ರಾಶಿ ಬಿದ್ದಿದೆ. ಇಲ್ಲಿಟ್ಟಿರುವ ಬಹುತೇ ಎಲ್ಲಾ ಬಾಟಲ್‌ಗಳು ಇನ್ನೂ ಬಳಕೆಯೇ ಮಾಡಿರುವುದಿಲ್ಲ. ಈ ಅವಧಿ ಮುಗಿದ ಬಾಟಲ್‌ಗಳ ರಾಶಿ ನೋಡಿದರೆ ಅವುಗಳ ಲೇಬಲ್ ತೆಗೆದು ಮರು ಬಳಕೆಗೆ ವಿತರಿಸುತ್ತಾರೆಯೇ ಎಂಬ ಬಲವಾದ ಅನುಮಾನಗಳು ಸಾರ್ವಜನಿಕರಲ್ಲಿ ಕಾಡತೊಡಗಿದೆ.
ಅಂತೆಯೇ ಇಲ್ಲಿ ಬಿದ್ದಿರುವ ೨೦೨೧ರ ಜನಗಣತಿಗೆ ಬಳಸಬೇಕಿದ್ದ ಕೈಚೀಲಗಳ ರಾಶಿಯೂ ಜಿಲ್ಲಾಡಳಿತದ ಆಡಳಿತ ವೈಖರಿಯ ನಿರ್ಲಕ್ಷ್ಯತೆ ಎಷ್ಟಿದೆ ಎಂಬುದನ್ನು ತೋರಿಸುತ್ತಿದೆ.
ಕಛೇರಿಯ ಗ್ರೌಂಡ್ ಫ್ಲೋರ್ ಒಳಗೆ ಕಾಲಿಟ್ಟ ತಕ್ಷಣವೇ ಮೂಗು ಮುಚ್ಚುವಂತಹ ದುರ್ವಾಸನೆ ಗ್ರಹಿಸುತ್ತಿದೆ. ಎಲ್ಲೆಂದರಲ್ಲಿ ಎಸೆದಿರುವ ಬಾಕ್ಸ್‌ಗಳು ಕಸದ ರಾಶಿ, ಫೈಲ್‌ಗಳು ಮತ್ತು ಸೆನ್ಸೆಕ್ಸ್‌ಗೆ ಬಳಸಲು ತಂದಿದ್ದ ಹೊಚ್ಚ ಹೊಸ ಚೀಲಗಳು ಇಲ್ಲಿ ಇದ್ದು, ಇಂತಹ ಟಾಯ್ಲೆಟ್‌ಗಳು 'ಪ್ರದರ್ಶನಕ್ಕೆ' ಇಟ್ಟಂತೆ ಇದೆ. ಕೋವಿಡ್ ಸಂದರ್ಭ ದಲ್ಲಿ ಖರೀದಿಸಿದ ಸ್ಯಾನಿಟೈಸರ್ ಬಾಟಲ್‌ಗಳು ಇನ್ನೂ ಬಳಕೆ ಆಗದೆ ಉಳಿದಿವೆ. ಅವುಗಳನ್ನು ಈಗಲೇ ವಿಲೆ ಮಾಡದಿದ್ದರೆ ಕೆಮಿಕಲ್ ದ್ರವ ಅಪಾಯಕಾರಿ ಯಾಗಿ ರೂಪಾಂತರ ಗೊಳ್ಳುವ ಸಾಧ್ಯತೆಯೂ ಇದೆ!.
ಕಛೇರಿಯಲ್ಲಿ ದಿನನಿತ್ಯದ ಕಸ ಮುಕ್ತ ಪರಿಸರ ನಿರ್ಮಿಸುವಲ್ಲಿ ಇಲ್ಲಿನ ಸಿಬ್ಬಂದಿಗಳ ಅಸಡ್ಡೆಯೇ ಪ್ರಮುಖ ಕಾರಣವಾಗಿದ್ದು, ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯವೂ ಅವರಿಗೆ ಸಪೋರ್ಟ್ ಮಾಡುತ್ತಿರುವಂತಿದೆ. ಈ ಕಚೇರಿಗೆ ಬರುವ ಸಾರ್ವಜನಿಕರು ಇಲ್ಲಿನ ಆಡಳಿತ ವ್ಯವಸ್ಥೆ ಕುರಿತು ತಮ್ಮ ಅಸಹನೆ ವ್ಯಕ್ತಪಡಿಸುತ್ತಿzರೆ.
ಈ ಸ್ಥಳವು ಶುದ್ಧತೆಯ ಕೊರತೆ ಯೊಂದಿಗೆ ಸೋಂಕಿನ ಮೂಲವಾಗಿ ಪರಿವರ್ತನೆ ಗೊಂಡಿದೆ. ಹಳೆಯ ಸ್ಯಾನಿಟೈಸರ್‌ಗಳು ಅವಧಿ ಮುಗಿದಿರು ವುದರಿಂದ ರಾಸಾಯನಿಕಗಳಾಗಿ ಪರಿವರ್ತನೆಯಾಗಬಹುದು. ಒಂದು ವೇಳೆ ಸ್ಪರ್ಶವಾದಲ್ಲಿ ಚರ್ಮದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಬಾಕ್ಟೀರಿಯಾ ಹಾಗೂ ಫಂಗಲ್ ಇನ್ಫೆಕ್ಷನ್ ಆಗುವ ಸಾಧ್ಯತೆಯೂ ಅಲ್ಲ ಗಳೆಯುವಂತಿಲ್ಲ. ಶೌಚಾಲಯ ವೆಂಬುದು ಸೋಂಕಿನ ಮೊದಲ ದಾರಿ. ಅವು ಶುದ್ಧವಿರದೇ ಇದ್ದರೆ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದ್ದು, ಇನ್ನಾದರೂ ಆರೋಗ್ಯ ಇಲಾಖೆಯ ಮಾರ್ಗದರ್ಶನದಂತೆ ಅವಧಿ ಮುಗಿದ ಸ್ಯಾನಿಟೈಸರ್ ಬಾಟಲ್‌ಗಳ ವಿಲೇವಾರಿ ಮಾಡುವ ಮೂಲಕ ಈ ಶೌಚಾಲಯವನ್ನು ಶುಚಿಗೊಳಿಸಬೇಕಿದೆ.
ಉಸ್ತುವಾರಿ ಸಚಿವರ ತವರು ಜಿಲ್ಲೆಯಲ್ಲೇ ಜಿಧಿಕಾರಿಗಳ ಕಚೇರಿಯ ಶೌಚಾಲಯದಲ್ಲಿ ಸ್ಯಾನಿಟೈಸರ್‌ಗಳ ರಾಶಿ, ಗಬ್ಬು, ದುರ್ವಾಸನೆ ಮತ್ತು ಶುದ್ಧತಾ ಸಮಸ್ಯೆ ಅದೆಷ್ಟೋ ಪಾರದರ್ಶಕ ಆಡಳಿತದ ಮಾತುಗಳಿಗೆ ಪೈಪೋಟಿ ನೀಡುವಂತೆ ತೋರಿಸುತ್ತದೆ. ಇದು ಸಣ್ಣ ವಿಷಯ ಎಂದು ತಿರಸ್ಕರಿಸಬೇಕಾದುದು ಅಲ್ಲ. ಇಷ್ಟು ದೊಡ್ಡ ಜಿಧಿಕಾರಿಗಳ ಕಚೇರಿಯಲ್ಲಿ ಈ ಮಟ್ಟದ ಅಜಾಗೃತಿ ಅಕ್ಷಮ್ಯ. ನಾಗರಿಕರಿಗೆ ಸೂಕ್ತ ಸೌಲಭ್ಯ ಕೊಡಲಾಗದಿದ್ದರೆ ಆಡಳಿತ ವ್ಯವಸ್ಥೆಯ ಮೇಲಿನ ನಂಬಿಕೆ ಕುಂದುವುದು ಖಚಿತ.
ಶಿವಮೊಗ್ಗ ಜಿಧಿಕಾರಿಗಳ ಕಚೇರಿ ನಗರದ ಆಡಳಿತದ ನಡಿಗೆ ತೋರಿಸುವ ಬೃಹತ್ ದರ್ಪಣ. ಆ ಕಚೇರಿಯ ಒಳಗಿರುವ ಶೌಚಾಲಯದ ದುಸ್ಥಿತಿ ಈ ದರ್ಪಣದಲ್ಲಿ ಕಾಣುತ್ತಿರುವ ಮಸುಕಾದ ಚಿತ್ರವಾಗಿದೆ. ಜಿಲ್ಲಾಧಿಕಾರಿಗಳೇ ಜಿಲ್ಲೆಯ ಪ್ರದಕ್ಷಿಣೆ ಮಾಡುವ ಮುನ್ನ ಒಮ್ಮೆ ತಮ್ಮದೇ ಆದ ಕಛೇರಿ ಕಟ್ಟಡದ ಪ್ರದಕ್ಷಿಣೆ ಹಾಕಿ, ಮೊದಲು ಅಲ್ಲಿನ ಅವ್ಯವಸ್ಥೆ ಸರಿಪಡಿಸಿ. ಈ ದುಸ್ಥಿತಿಯನ್ನು ಬದಲಾಯಿಸದಿದ್ದರೆ, ಇದು ಕೇವಲ ದೈಹಿಕ ಸಮಸ್ಯೆಗಳಷ್ಟೇ ಅಲ್ಲ, ಆಡಳಿತ ವ್ಯವಸ್ಥೆಯ ನೈತಿಕ ಕುಸಿತಕ್ಕೂ ಸೂಚನೆಯಾಗುತ್ತದೆ.
ನಮ್ಮ ನಿತ್ಯ ಸೇವೆಯ ಸ್ಥಳವೇ ಅಸಹ್ಯತೆಯ ಸಂಕೇತವಾದರೆ, ನಾವು ಸರ್ಕಾರದ ಭದ್ರತೆ ಯಲ್ಲಿ ಯಾವ ನಂಬಿಕೆಯಿಂದ ಬದುಕಬೇಕು? ಸಮಾಧಾನ ಕೇವಲ ಶಬ್ದಗಳಲ್ಲಿ ಅಲ್ಲ , ಜಿಲ್ಲಾಧಿಕಾರಿಗಳೇ ನಿಮ್ಮ ದಕ್ಷತೆ ಕೇವಲ ಕಡತಗಳಿಗೆ ಸೀಮಿತವಾಗದೇ ಮೊದಲು ನಿಮ್ಮದೇ ಕಛೇರಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಡೆಗೂ ಒಮ್ಮೆ ನೋಡಿ ಅಲ್ಲಿದ ಭ್ರಷ್ಟತೆ ಮತ್ತು ಕಟ್ಟಡದೊಳಗಿನ ಕೊಳಕನ್ನು ಶುದ್ಧಗೊಳಿಸಿ ಎಂಬುದು ಹೊಸನಾವಿಕ ಪತ್ರಿಕೆಯ ಕಳಕಳಿಯಾಗಿದೆ.