Ballari Super

  • Home
  • Ballari Super

Ballari Super Information About In & Around Ballari

🔸ಮೈಸೂರು - ಸಾಯಿ ನಗರ ಶಿರಡಿ- ಮೈಸೂರು ಎಕ್ಸ್ಪ್ರೆಸ್ ಗಾಡಿಯು ಬಳ್ಳಾರಿ ಬೈಪಾಸ್ ಮೂಲಕ ಮಾರ್ಗ ಬದಲಾವಣೆ ಮಾಡಿದ್ದು, ಬಳ್ಳಾರಿ ಜಂಕ್ಷನ್ ನಲ್ಲಿ ನಿ...
26/09/2023

🔸ಮೈಸೂರು - ಸಾಯಿ ನಗರ ಶಿರಡಿ- ಮೈಸೂರು ಎಕ್ಸ್ಪ್ರೆಸ್ ಗಾಡಿಯು ಬಳ್ಳಾರಿ ಬೈಪಾಸ್ ಮೂಲಕ ಮಾರ್ಗ ಬದಲಾವಣೆ ಮಾಡಿದ್ದು, ಬಳ್ಳಾರಿ ಜಂಕ್ಷನ್ ನಲ್ಲಿ ನಿಲುಗಡೆಗೆ ಇರುವುದಿಲ್ಲ... ಪ್ರಯಾಣಿಕರ ಅನುಕೂಲಕ್ಕಾಗಿ #ಬಳ್ಳಾರಿಕಂಟೋನ್ಮೆಂಟ್ ನಿಲ್ದಾಣದಲ್ಲಿ 5 ನಿಮಿಷಗಳ ತಾತ್ಕಲಿಕ ನಿಲುಗಡೆಯನ್ನು ಒದಗಿಸಲಾಗಿದೆ.

*ಸ್ಪರ್ಧಾತ್ಮಕ ಪರೀಕ್ಷೆಗಳ ಒಂದು ದಿನದ ಉಚಿತ ಕಾರ್ಯಾಗಾರ*26 ನೇ ಜುಲೈ 2023  ಬುದವಾರ ಬೆಳಗ್ಗೆ 10:00 ಗಂಟಗೆ  ಶ್ರೀಮತಿ ಸರಳಾದೇವಿ ಸತೀಶ್ಚಂದ್ರ...
25/07/2023

*ಸ್ಪರ್ಧಾತ್ಮಕ ಪರೀಕ್ಷೆಗಳ ಒಂದು ದಿನದ ಉಚಿತ ಕಾರ್ಯಾಗಾರ*
26 ನೇ ಜುಲೈ 2023 ಬುದವಾರ ಬೆಳಗ್ಗೆ 10:00 ಗಂಟಗೆ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಸಭಾಂಗಣದಲ್ಲಿ.
*ಸಂಪರ್ಕಕ್ಕಾಗಿ* : ನಂ , 23/1 , ಎರಡನೇ ಮಹಡಿ ಸಪ್ತಗಿರಿ ಕಾಂಪ್ಲೆಕ್ಸ್ ,ಆಂದ್ರ ಬ್ಯಾಂಕ್ ಹತ್ತಿರ ,ಕೆಸಿ ರೋಡ್ ,ಬಳ್ಳಾರಿ.
ಮೊ ನಂ 8217726470 , 9164730267

ಕಲ್ಯಾಣ- ಕರ್ನಾಟಕದ ಜೀವನಾಡಿ.. ತುಂಗಭದ್ರಾ ಜಲಾಶಯ. TB DAM
22/07/2023

ಕಲ್ಯಾಣ- ಕರ್ನಾಟಕದ ಜೀವನಾಡಿ.. ತುಂಗಭದ್ರಾ ಜಲಾಶಯ. TB DAM

Bellary Weather Report ..
21/07/2023

Bellary Weather Report ..

19/07/2023
18/07/2023

Night view of Hampi

14/07/2023

ಗಣಿನಾಡು ಬಳ್ಳಾರಿಯ ಕಾಶ್ಮೀರ ಸಂಡೂರು.. ಮಾನಸ ಸರೋವರ ಖ್ಯಾತಿಯ ನಾರಿಹಳ್ಳದ ಅದ್ಭುತ ನೋಟ..

22/06/2023

"ಗೃಹ ಜ್ಯೋತಿ" ಯೋಜನೆಗೆ ನಿಮ್ಮ ಸ್ಮಾರ್ಟ್ ಫೋನ್, ಕಂಪ್ಯೂಟರ್/ ಲ್ಯಾಪ್‌ಟಾಪ್ ಗಳಿಂದ ನೊಂದಾಯಿಸುವ ಸುಲಭ ಮಾರ್ಗ,ಯಾವುದೇ ದಾಖಲೆ ಅಪ್ಲೋಡ್ ಮಾಡುವ ಅವಶ್ಯಕತೆ ಇಲ್ಲ

1) ವಿದ್ಯುತ್ ಬಿಲ್
2) ಆಧಾರ್ ಸಂಖ್ಯೆ
3) ಆಧಾರ್ ಕಾರ್ಡ್ ನಲ್ಲಿರುವ ಪೋನ್ ಸಂಖ್ಯೆಯಿರುವ ಮೊಬೈಲ್..
ಈ ಮೂರು ಇದ್ದರೆ ಸಾಕು..
ಸೈಬರ್ ಸೆಂಟರ್, ನಾಡ ಕಚೇರಿ- ಕರ್ನಾಟಕ ಒನ್, ಎಸ್ಕಾಂ ಕಚೇರಿಗಳಿಗೆ ಹೋಗುವ ಅವಶ್ಯಕತೆಯೂ ಇಲ್ಲ..

1) ಈ ಲಿಂಕ್ ನ Internet Explorer/Google Chrome/ Mozilla Firefox App ನಲ್ಲಿ ತೆರೆಯಿರಿ..👇🏻👇🏻

https://sevasindhugs.karnataka.gov.in/

2) ನಿಮ್ಮದು ಯಾವ ಎಸ್ಕಾಂ- ESCOM ಅಂತ ಟಿಕ್ 🔘 ಮಾಡಿ

3) ನಂತರ ನಿಮ್ಮ ವಿದ್ಯುತ್ ಬಿಲ್ ನಲ್ಲಿರುವ 10 ಸಂಖ್ಯೆಯ Account ID ಟೈಪ್ ಮಾಡಿ..
ಮನೆ ವಿಳಾಸ ತಾನಾಗೆ ಮೂಡುತ್ತದೆ..(ವಿಳಾಸ ಬರುವವರೆಗೆ ತಾಳಿ)

4) ಮುಂದೆ ಸ್ವಂತ ಮನೆನಾ ಅಥವಾ ಬಾಡಿಗೆ ಮನೆನಾ ಅಂತ ಟಿಕ್ 🔘ಮಾಡಿ

5) ಅರ್ಜಿದಾರರ ಮನೆಯ ಯಜಮಾನ/ ಯಜಮಾನಿಯ( ಬಾಡಿಗೆ ಇದ್ದರೆ ಬಾಡಿಗೆಯವರು) ಆಧಾರ್ ಕಾರ್ಡ್ ನ 12 ಸಂಖ್ಯೆ ಟೈಪಿಸಿ..

6) ನಂತರ ಆಧಾರ್ e - KYC ಕೇಳುತ್ತದೆ.. OK ಮಾಡಿದರೆ ಹೊಸ ಪೇಜ್ ತೆರೆದುಕೊಳ್ಳುತ್ತದೆ..
ಅಲ್ಲಿ OK ಅಂತ ಟಿಕ್ ಮಾಡಿ.. ಆಧಾರ್ ಕಾರ್ಡ್'ನಲ್ಲಿ ಇರುವ ಫೋನ್ ನಂಬರ್'ಗೆ OTP( ಒಟಿಪಿ) ಸಂಖ್ಯೆ ಬರುತ್ತದೆ.. ಅದನ್ನ ಟೈಪಿಸಿ OK ಮಾಡಿ, e - KYC‌ ಮುಗಿಯಿತು..

7) ನಂತರ ಮುಂದಿನ ಬಾಕ್ಸ್' ನಲ್ಲಿ ಸಂಪರ್ಕಕ್ಕಾಗಿ ಫೋನ್ ಸಂಖ್ಯೆ ಟೈಪಿಸಿ.. ಈ ಸಂಖ್ಯೆಗೆ ಮತ್ತೊಂದು OTP (ಒಟಿಪಿ) ಬರುತ್ತದೆ.. ‌
ಅದನ್ನ ಟೈಪಿಸಿ OK ಮಾಡಿ..

8) ಕೆಳಗೆ I agree ಅಂತ ಇರುವ ಡಿಕ್ಲೆರೇಶನ್'ಗೆ right tick mark ✅ ಮಾಡಿ..

9) ಕೆಳಗೆ Word verification ಅಂತ ತೋರಿಸುವ 6 ಸಂಖ್ಯೆಯನ್ನ, ಅಲ್ಲಿನ ಬಾಕ್ಸ್'ನಲ್ಲಿ ಟೈಪ್ ಮಾಡಿ submit ಮಾಡಿ..

10) ನಿಮ್ಮ ಅರ್ಜಿಯ ಒಟ್ಟು ಮಾಹಿತಿಯ ಹೊಸ ಪೇಜ್ ತೆರೆದುಕೊಳ್ಳುತ್ತದೆ, ಮತ್ತೆ submit ಅಂತ ಕೊಡಿ.‌.

11) ನಿಮ್ಮ‌ ಅರ್ಜಿಯ ಸಂಖ್ಯೆಯೊಂದಿಗೆ ಸ್ವೀಕೃತಿ ಪ್ರತಿಯ ಪಿಡಿಎಫ್ ಬರುತ್ತದೆ..
ಅದನ್ನ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ..
ಇಲ್ಲಿಗೆ ಅರ್ಜಿ ಹಾಕುವ ಪ್ರಕ್ರಿಯೆ ಮುಗಿಯಿತು..

ಎರಡು- ಮೂರು ಸಲ ಪ್ರಯತ್ನ ಮಾಡಿದರೆ ಸಾಕು, ಸುಲಭವಾಗಿ ಅರ್ಜಿ ನೊಂದಾಯಿಸಬಹುದು.. ಸರ್ವರ್‌ ಸಮಸ್ಯೆ ಇರುವುದರಿಂದ ಬೆಳಿಗ್ಗೆ 10 ಗಂಟೆಯ ಒಳಗೆ, ರಾತ್ರಿ 8ರ ನಂತರ ನೊಂದಾಯಿಸಿದರೆ‌ ಉತ್ತಮ.. ಅರ್ಜಿ ನೊಂದಾಯಿಸಲು ಕೊನೆಯ ದಿನಾಂಕ ಇಲ್ಲ ,ಹಾಗಾಗಿ ಅವಸರ ಬೇಡ

ವಿಮ್ಸ್‍ನ ಟ್ರಾಮಾ ಕೇರ್‍ನಲ್ಲಿ ವಿಸ್ಮಯ ಮೂಡಿಸುವ ಅತೀ ವಿರಳ ಯಶಸ್ವಿ ಮೆದುಳಿನ ಶಸ್ತ್ರ ಚಿಕಿತ್ಸೆ ಉಸಿರಾಟ ಮತ್ತು ಹೃದಯ ಬಡಿತ ಕ್ರಿಯೆ ನಿಯಂತ್ರಿ...
07/06/2023

ವಿಮ್ಸ್‍ನ ಟ್ರಾಮಾ ಕೇರ್‍ನಲ್ಲಿ ವಿಸ್ಮಯ ಮೂಡಿಸುವ ಅತೀ ವಿರಳ ಯಶಸ್ವಿ ಮೆದುಳಿನ ಶಸ್ತ್ರ ಚಿಕಿತ್ಸೆ

ಉಸಿರಾಟ ಮತ್ತು ಹೃದಯ ಬಡಿತ ಕ್ರಿಯೆ ನಿಯಂತ್ರಿಸುವ ಬ್ರೈನ್ ಸ್ಟೆಮ್ ಬಳಿ ಮೆದುಳಿನ ದ್ರವದಿಂದ ಉಂಟಾದ ನೀರಿನ ಗುಳ್ಳೆ ರೂಪದ ಚೀಲ (cyst) ದಂತಹ ಅತೀವಿರಳ ಖಾಯಿಲೆಯಿಂದ ಬಳಲುತ್ತಿದ್ದ 5 ವರ್ಷದ ಬಾಲಕನಿಗೆ ಮೆದುಳಿನ ಅರ್ಧ ಭಾಗದ ತಲೆ ಬುರುಡ ತೆರೆದು ಮೈಕ್ರೋಸ್ಕೋಪ್ ಮೂಲಕ ಸತತ ಮೂರು ಗಂಟೆಗಳ ಕಾಲ ಅತೀ ಕ್ಲಿಷ್ಟಕರ ಹಾಗೂ ಅತೀ ಸೂಕ್ಷ್ಮ ರೀತಿಯ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ಯಶಸ್ವಿಯಾಗಿದ್ದು, ವಿಮ್ಸ್‍ನ ಮೆದುಳು ಮತ್ತು ನರರೋಗ ಶಸ್ತ್ರ ಚಿಕಿತ್ಸೆ ತಜ್ಞ (ನ್ಯೂರೋ ಸರ್ಜನ್) ಹಾಗೂ ವಿಮ್ಸ್‍ನ ನ್ಯೂರೋ ಸರ್ಜರಿ ವಿಭಾಗದ ಡಾ.ವಿಶ್ವನಾಥ ಅವರ ಸಾಧನೆ ವೈದ್ಯಕೀಯ ರಂಗವೇ ಹೆಮ್ಮೆ ಪಡುವ ಸಂಗತಿಯಾಗಿದೆ ಎಂದು ವಿಮ್ಸ್ ನಿರ್ದೇಶಕರು ತಿಳಿಸಿದ್ದಾರೆ.
ವೈದ್ಯಕೀಯ ದಾಖಲಾತಿಗಳ ಸಂಗ್ರಹವಾದ ಪಬ್ ಮೆಡ್ (Pub Med) ಪ್ರಕಾರ ಜಗತ್ತಿನಲ್ಲೇ ಅತ್ಯಂತ ವಿರಳ ಚಿಕಿತ್ಸೆಯಲ್ಲಿ ಇದು ಎರಡನೇ ಶಸ್ತ್ರ ಚಿಕಿತ್ಸೆಯಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, ಅತೀ ವಿರಳವಾದ ಈ ಖಾಯಿಲೆಯಿಂದ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತಾರನಗರದ 5 ವರ್ಷದ ಬಾಲಕ ಹುಟ್ಟಿನಿಂದಲೇ ಬಳಲುತ್ತಿದ್ದು, ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ನಿಯಂತ್ರಣ ತಪ್ಪಿ ಬೀಳುತ್ತಿದ್ದ. ಇದನ್ನು ಗಮನಿಸಿದ ಪೋಷಕರು ಸ್ಥಳೀಯ ವೈದ್ಯರ ಬಳಿ ತಪಾಸಣೆಗೊಳಪಡಿಸಿದಾಗ ಮಗುವಿಗೆ ಅತೀ ವಿರಳ ಖಾಯಿಲೆ ಇದ್ದು, ನರರೋಗ ತಜ್ಞ ವೈದ್ಯರ ಬಳಿ ಶಸ್ತ್ರಚಿಕಿತ್ಸೆ ಮಾಡಿಸುವಂತೆ ಸಲಹೆ ನೀಡಲಾಗಿತ್ತು.
ಬೆಂಗಳೂರಿನ ನಿಮಾನ್ಸ್, ಇಂದಿರಾಗಾಂಧಿ ಆಸ್ಪತ್ರೆಗೆ ಬಂದು ತಪಾಸಣೆಗೊಳಪಟ್ಟು, ಶೀರ್ಘವಾಗಿ ಚಿಕಿತ್ಸೆಗೆ ದಿನಾಂಕ ನಿಗದಿಯಾಗದ ಹಿನ್ನಲೆಯಲ್ಲಿ ವಿಮ್‍ನಲ್ಲಿ ತಪಾಸಣೆಗೊಳಗಾಗಿದ್ದರು.
ಎಂಆರ್‍ಐ ಪರೀಕ್ಷೆಯಿಂದ ಅತೀ ವಿರಳ ಖಾಯಿಲೆ ಇರುವುದನ್ನು ಖಚಿತಪಡಿಸಿಕೊಂಡ ಡಾ.ವಿಶ್ವನಾಥ್ ಅವರು ಬಾಲಕನನ್ನು ಮೇ 08 ರಂದು ದಾಖಲು ಮಾಡಿಕೊಂಡು ಪಾಲಕರೊಂದಿಗೆ ಆಪ್ತ ಸಮಾಲೋಚಲನೆ ನಡೆಸಿದ್ದರು.
ಪೋಷಕರ ಸಮ್ಮತಿಯ ಮೇರೆಗೆ ಮೇ 12 ರಂದು ಡಾ.ವಿಶ್ವನಾಥ ಅವರು ಸತತ ಮೂರು ಗಂಟೆಗಳ ಅವಧಿಯ ಶಸ್ತ್ರ ಚಿಕಿತ್ಸೆಯನ್ನು ವಿಮ್ಸ್‍ನ ಅಧೀನದಲ್ಲಿರುವ ಟ್ರಾಮಾ ಕೇರ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೈಗೊಂಡಿದ್ದರು ಎಂದು ವಿಮ್ಸ್ ನಿರ್ದೇಶಕರು ತಿಳಿಸಿದ್ದಾರೆ.
ಈ ಮಗುವಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿ ನಂತರ ನಿರಂತರ ತಪಾಸಣೆ ಔಷದೋಪಚಾರ ನೀಡಲಾಗಿದೆ. ಮಗು ಸಹಜ ಚಟುವಟಿಕೆಗಳ ಕಂಡುಬಂದಿದ್ದು, ಯಾವುದೇ ನ್ಯೂನತೆಗಳನ್ನು ಇರುವುದಿಲ್ಲ. ಸ್ವತಂತ್ರವಾಗಿ ಆಹಾರ ಸೇವನೆ, ಚಲನೆ ಮಾಡುತ್ತಿದ್ದಾನೆ. ಇಂತಹ ಅತೀ ವಿರಳ ಶಸ್ತ್ರ ಚಿಕಿತ್ಸೆ ಉಚಿತವಾಗಿ ಕೈಗೊಂಡು, ಮಗುವು ಸಹಜತೆಯತ್ತ ಮಾಡುವಂತೆ ಪರಿಶ್ರಮ ಪಟ್ಟ ಡಾ.ವಿಶ್ವನಾಥ ಮತ್ತು ಅವರ ತಂಡ ಹಾಗೂ ವಿಮ್ಸ್‍ಗೆ ಬಾಲಕನ ಪೋಷಕರಾದ ನಾಗೇಶ್ ಮತ್ತು ಪಾರ್ವತಿ ಅವರು ಕೃತಜ್ಞತೆ ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆಯಲ್ಲಿ ಡಾ.ವಿಶ್ವನಾಥ್ ಅವರೊಂದಿಗೆ ಡಾ.ಬಸವರಾಜ್ ಪಾಟೀಲ್, ಡಾ.ಚಂದ್ರಕುಮಾರ್, ಅರವಳಿಕೆ ತಜ್ಞ ಡಾ.ಶ್ರೀನಿವಾಸುಲು, ಶುಶ್ರೂಷಕಿರಾದ ಸಿಜ್ಜು, ನ್ಯಾನ್ಸಿ ಅವರು ಪಾಲ್ಗೊಂಡಿದ್ದರು.
ವಿಮ್ಸ್‍ನ ಮೆದುಳು ಮತ್ತು ನರರೋಗ ಶಸ್ತ್ರ ಚಿಕಿತ್ಸೆ ತಜ್ಞ (ನ್ಯೂರೋ ಸರ್ಜನ್) ಹಾಗೂ ವಿಮ್ಸ್‍ನ ನ್ಯೂರೋ ಸರ್ಜರಿ ವಿಭಾಗದ ಡಾ.ಎಸ್.ವಿಶ್ವನಾಥ ಅವರು ಮೆದುಳು ಹಾಗೂ ನರರೋಗಗಳಿಗೆ ಸಂಬಂಧಿಸಿದ ಅನೇಕ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಗಳನ್ನು ಕೈಗೊಂಡು ವಿಮ್ಸ್‍ಗೆ ಕೀರ್ತಿ ತಂದಿದ್ದಾರೆ. ಇಂತಹ ಅಪರೂಪದ ಶಸ್ತ್ರಚಿಕಿತ್ಸೆ ಕೈಗೊಂಡು ಸಾಧನೆಗೈದ ಡಾ.ವಿಶ್ವನಾಥ್ ಮತ್ತು ತಂಡಕ್ಕೆ ವಿಮ್ಸ್‍ನ ನಿರ್ದೇಶಕರಾದ ಡಾ.ಗಂಗಾಧರ ಗೌಡ, ಟ್ರಾಮಾ ಕೇರ್‍ನ ಅಧೀಕ್ಷಕ ಡಾ.ಶಿವನಾಯ್ಕ ಅವರು ಅಭಿನಂದಿಸಿದ್ದಾರೆ.
------

19/01/2023

*ಬಳ್ಳಾರಿ ಬೈಸ್ಕೈ* ಗೆ ಕೊಳಗಲ್ ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ಹಾರಾಟ ಆರಂಭ

Address


Telephone

+919741058686

Website

Alerts

Be the first to know and let us send you an email when Ballari Super posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Telephone
  • Alerts
  • Claim ownership or report listing
  • Want your business to be the top-listed Media Company?

Share