Vikas.Tv

Vikas.Tv Contact information, map and directions, contact form, opening hours, services, ratings, photos, videos and announcements from Vikas.Tv, TV Network, ANEKAL, Bangalore.

09/08/2025

ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಅತ್ತಿಬೆಲೆ ಶ್ರೀ ನಾಗ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಆಯೋಜನೆ

06/08/2025

ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ. ಜೀವನ ಜ್ಯೋತಿ ಯೋಜನೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ

ಆನೇಕಲ್ ತಾಲ್ಲೂಕಿನ ಕರ್ಪೂರ ಗ್ರಾಮದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೆನರಾ ಬ್ಯಾಂಕ್ ಮತ್ತು ವಿವಿಧ ಬ್ಯಾಂಕ್ ಗಳ ಸಹಯೋಗದಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇನ್ನು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ ಕುರಿತು ಹಮ್ಮಿಕೊಂಡಿದ್ದ ಅರಿವು ಮೂಡಿಸುವ ಕಾರ್ಯಕ್ರಮಕಕ್ಕೆ ಕರ್ಪೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೃಷ್ಣಪ್ಪನವರು ಚಾಲನೆ ನೀಡಿ ಶುಭ ಹಾರೈಸಿದರು
ಇನ್ನು ಕಾರ್ಯಕ್ರಮದಲ್ಲಿ ಕರ್ಪೂರು ಗ್ರಾಮ ಪಂಚಾಯಿತಿ ಸದಸ್ಯರಾದ ಹಾಲ್ದೇನಹಳ್ಳಿ ತಿಮ್ಮರಾಜು. ಮುನಿರಾಜು. ಬಿದರಗೆರೆ ತಿಮ್ಮರಾಜು. ಶ್ರೀಮತಿ ರಾಧಾ ಚಿನ್ನಪ್ಪ ಮತ್ತು ಪಿಡಿಓ ಶಶಿಕಿರಣ್. ಸಾಕ್ಷರತಾ ಸಂಸ್ಥೆಯ ವಿದ್ಯಾ ರಾಣಿ ಮತ್ತು ವಿವಿಧ ಬ್ಯಾಂಕಿನ ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

06/08/2025

ಆನೇಕಲ್ ವಕೀಲರ ಸಂಘದ ನೂತನ ಅದ್ಯಕ್ಷರಾಗಿ ಹಿರಿಯ ವಕೀಲರಾದ ಪಟಾಪಟ್ ಪ್ರಕಾಶ್ ಭರ್ಜರಿ ಗೆಲುವು

06/08/2025

ಭೂ ಸ್ವಾದೀನ ಆದೇಶವನ್ನು ವಿರೋದಿಸಿ ಹಂದೇನಹಳ್ಳಿ ಗ್ರಾಮದಲ್ಲಿ ಇಂದಿನಿAದ ಪ್ರಾರಂಭಗೊoಡ ಅನಿರ್ದಿಷ್ಟಾವದಿ ಧರಣಿ ಸತ್ಯಾಗ್ರಹ

ಕೆಐಎಡಿಬಿ ಸಂಸ್ಥೆಯು ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿ ವ್ಯಾಪ್ತಿಯ ಗ್ರಾಮಗಳ ಕೃಷಿ ಭೂಮಿಗಳ ಮೇಲೆ ಹೊರಡಿಸಿರುವ ಭೂ ಸ್ವಾದೀನ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ಆನೇಕಲ್ ತಾಲ್ಲೂಕು ಭೂ ಸ್ವಾದೀನ ವಿರೋದಿ ಹೋರಾಟ ಸಮಿತಿ ಪದಾದಿಕಾರಿಗಳು ಮತ್ತು ರೈತರು ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ ಈಗಾಗಲೇ 28 ದಿನಗಳಿಂದ ಅನಿರ್ದಿಷ್ಟಾವದಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು ಹೋರಾಟವನ್ನು ಮತ್ತಷ್ಠು ಗಟ್ಟಿಗೊಳಿಸುವ ಉದ್ದೇಶದಿಂದ. ಮತ್ತು ರೈತರನ್ನು ಸಂಘಟನೆ ಮಾಡುವ ಉದ್ದೇಶದಿಂದ ಮುಂದುವರೆದ ಬಾಗವಾಗಿ ಇಂದಿನಿAದ ಹಂದೇನಹಳ್ಳಿ ಗ್ರಾಮದಲ್ಲಿಯೂ ಸಹ ಆನೇಕಲ್ ತಾಲ್ಲೂಕು ಭೂ ಸ್ವಾದೀನ ವಿರೋದಿ ಹೋರಾಟ ಸಮಿತಿ ವತಿಯಿಂದ ಅನಿರ್ದಿಷ್ಟಾವದಿ ಧರಣಿ ಸತ್ಯಾಗ್ರಹ ಪ್ರಾರಂಭ ಮಾಡಿದ್ದು ಮೊದಲನೆ ದಿನದ ಅನಿರ್ದಿಷ್ಟಾವದಿ ಧರಣಿ ಸತ್ಯಾಗ್ರಹಕ್ಕೆ ಹೋರಾಟಗಾರರು ಮತ್ತು ಪರಿಸರ ಪ್ರೇಮಿಗಳು ಚಾಲನೆ ನೀಡಿದರು. ಇನ್ನು ಅನಿರ್ದಿಷ್ಟಾವದಿ ಧರಣಿ ಸತ್ಯಾಗ್ರಹದಲ್ಲಿ ಮಳೆ ಬಂದರು ಸಹ, ಸಿಡಿಲು ಬಂದರು ಸಹ ರೈತರು ಕಾರ್ಯಕ್ರಮವನ್ನು ಮೊಟಕುಗೊಳಿಸದೆ ಧರಣಿ ಸತ್ಯಾಗ್ರಹವನ್ನು ಮುಂದುವರೆಸಿದ ದೃಶ್ಯ ಕಂಡು ಬಂತು.

ಇನ್ನು ಅನಿರ್ದಿಷ್ಟಾವದಿ ಧರಣಿ ಸತ್ಯಾಗ್ರಹದಲ್ಲಿ ಚನ್ನರಾಯಪಟ್ಟಣದ ಹೋರಾಟಗಾರರಾದ ಯಶವಂತ್ ಮತ್ತು ಮುಳ್ಳೂರು ಶಿವಣ್ಣ ರವರು ಬಾಗವಹಿಸಿ ಚನ್ನರಾಯಪಟ್ಟಣದ ಭಾಗದಲ್ಲಿ ಭೂ ಸ್ವಾದೀನ ವಿರೋದಿಸಿ ಹಮ್ಮಿಕೊಂಡಿದ್ದ ಹೋರಾಟದ ಬಗ್ಗೆ ರೈತರಿಗೆ ತಿಳಿ ಹೇಳಿದರು ಮತ್ತು ರೈತರ ಭೂಮಿಗಳನ್ನು ಉಳಿಸಿಕೊಳ್ಳಲು ತೆಗದು ಕೊಳ್ಳಬೇಕಾದ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡೆಯನ್ನು ಸಹ ಖಂಡಿಸಿದ ದೃಶ್ಯ ಕಂಡು ಬಂತು.
ಈ ಕೂಡಲೇ ರಾಜ್ಯ ಸರ್ಕಾರ ಸರ್ಜಾಪುರ ಹೋಬಳಿ ವ್ಯಾಪ್ತಿಯ ಗ್ರಾಮಗಳ ಕೃಷಿ ಭೂಮಿಗಳ ಮೇಲೆ ಹೊರಡಿಸಿರುವ ಭೂ ಸ್ವಾದೀನ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಇಲ್ಲವಾದಲ್ಲಿ ಹೋರಾಟದ ಸ್ವರೂಪವನ್ನು ಮತ್ತಷ್ಠು ತೀವ್ರಗೊಳಿಸಲಾಗುವುದು ಎಂದು ರೈತರು ಹಾಗೂ ಹೋರಾಟಗಾರರು ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದರು.

ಇನ್ನು ಅನಿರ್ದಿಷ್ಟಾವದಿ ಧರಣಿ ಸತ್ಯಾಗ್ರಹದಲ್ಲಿ ಹೋರಾಟಗಾರರಾದ ಎಂ.ಸಿ. ಹಳ್ಳಿ ವೇಣು. ಕಾಡ ಅಗ್ರಹಾರ ಜಯಪ್ರಕಾಶ್. ದೇವರಾಜ್, ಮಂಜುನಾಥ್ ದೇವು. ವಿಶ್ವನಾಥರೆಡ್ಡಿ. ಹಂದೇನಹಳ್ಳಿ ಚಂದ್ರಾರೆಡ್ಡಿ. ವಕೀಲರಾದ ರಾಮಸ್ವಾಮಿರೆಡ್ಡಿ. ರಾವಣ. ದೇವರಾಜ್. ಡಾ|| ಚಿನ್ನಪ್ಪ ಚಿಕ್ಕಹಾಗಡೆ. ಎಸ್.ವಿ.ಟಿ ಮಂಜುನಾಥ್, ಮಹದೇಶ್. ರವಿಕುಮಾರ್. ಯಾಸ್ಮೀನ್ ತಾಜ್. ಟಿಸಿಹಳ್ಳಿ ಕೇಶವ. ಮಂಜುನಾಥ್. ಶ್ರೀಮತಿ ಸುಧಮ್ಮ ನಾರಾಯಣಸ್ವಾಮಿ. ವಂದೇಮಾತರA ಮಹೇಶ್. ವಿಶ್ವ. ಮೋಹನ್. ಮದು. ಮನೋಜ್. ಉಮಾ ಮತ್ತು ಆನೇಕಲ್ ತಾಲ್ಲೂಕು ಭೂ ಸ್ವಾದೀನ ವಿರೋದಿ ಹೋರಾಟ ಸಮಿತಿ ಪದಾದಿಕಾರಿಗಳು ಮತ್ತು ರೈತರು ಬಾಗವಹಿಸಿದ್ದರು

05/08/2025

ಶ್ರೀ ಗೌರಮ್ಮ ತಿಮ್ಮಾರೆಡ್ಡಿ ಪೌಂಡೇಶನ್ ವತಿಯಿಂದ ೯೨೫ ಸರ್ಕಾರಿ ಶಾಲೆಯ ಮಕ್ಕಳಿಗೆ ಸಮವಸ್ತç ಹಾಗೂ ನೋಟ್ ಪುಸ್ತಕ ವಿತರಣೆ

ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಗೌರಮ್ಮ ತಿಮ್ಮಾರೆಡ್ಡಿ ಪೌಂಡೇಶನ್ ವತಿಯಿಂದ ಸುಮಾರು ೯೨೫ ಸರ್ಕಾರಿ ಶಾಲೆಯ ಮಕ್ಕಳಿಗೆ ಸಮವಸ್ತç ಹಾಗೂ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.
ಇನ್ನು ಸಮ ವಸ್ತç ಹಾಗೂ ನೋಟ್ ಪುಸ್ತಕಗಳನ್ನು ವಿತರಣಾ ಕಾರ್ಯಕ್ರಮಕಕ್ಕೆ ರಾಜ್ಯ ಸಭಾ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ರವರು ಚಾಲನೆ ನೀಡಿ ಶುಭ ಹಾರೈಸಿದರು.
ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗೌರಮ್ಮ ತಿಮ್ಮಾರೆಡ್ಡಿ ಪೌಂಡೇಶನ್ ಮುಖ್ಯಸ್ಥರಾದ ಬಿಟಿ ನಾಗರಾಜ್ ರೆಡ್ಡಿ ರವರು ವಹಿಸಿದ್ದರು. ಇನ್ನು ಒಟ್ಟು ೯೨೫ ಸರ್ಕಾರಿ ಶಾಲಾ ಮಕ್ಕಳಿಗೆ ಶ್ರೀ ಗೌರಮ್ಮ ತಿಮ್ಮಾರೆಡ್ಡಿ ಪೌಂಡೇಶನ್ ವತಿಯಿಂದ ಸಮವಸ್ತ ಹಾಗೂ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಇನ್ನು ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ರಾಮಸ್ವಾಮಿರೆಡ್ಡಿ. ಚಂದಾಪುರ ಸ್ವಾಮಿ ವಿವೇಕಾನಂದ ಶಾಲೆಯ ವೆಂಕಟೇಶ್ ರೆಡ್ಡಿ. ಮುಖಂಡರಾದ ಪ್ರಕಾಶ್, ಕಿತ್ತಗಾನಹಳ್ಳಿ ಶಿವಪ್ಪ ರೆಡ್ಡಿ. ಬೊಮ್ಮಸಂದ್ರ ಸರ್ಕಾರಿ ಶಾಲೆಯ ಮುಖ್ಯೋಪಾದ್ಯಾಯರಾದ ಮಂಜುನಾಥ್. ಲೋಕೇಶ್ ಮತ್ತು ಶಿಕ್ಷಕರು. ವಿದ್ಯಾರ್ಥಿಗಳು ಬಾಗವಹಿಸಿದ್ದರು.

05/08/2025

ಜಯ ಕರ್ನಾಟಕ ಸಂಘಟನೆಯ ಆನೇಕಲ್ ತಾಲ್ಲೂಕು ನೂತನ ಅಧ್ಯಕ್ಷರಾಗಿ ಎಂ.ರವಿಕುಮಾರ್ ರವರು ಆಯ್ಕೆ

ಜಯ ಕರ್ನಾಟಕ ಸಂಘಟನೆಯ ಆನೇಕಲ್ ತಾಲ್ಲೂಕು ನೂತನ ಅಧ್ಯಕ್ಷರಾಗಿ ಎಂ.ರವಿಕುಮಾರ್ ರವರು ಆಯ್ಕೆಗೊಂಡರು ಹಾಗೆಯೇ ಜಯ ಕರ್ನಾಟಕ ಸಂಘಟನೆಯ ಮಹಿಳಾ ಘಟಕದ ಆನೇಕಲ್ ತಾಲ್ಲೂಕು ಅಧ್ಯಕ್ಷ ರಾಗಿ ಯಾಸ್ಮೀನ್ ತಾಜ್ ರವರು ಮರು ಆಯ್ಕೆಗೊಂಡರು. ಇನ್ನು ಇದೇ ಸಂಧರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ನಾಗನಾಯಕನಹಳ್ಳಿ ಅಂಬರೀಶ್ ಮತ್ತು ಬೆಂಗಳೂರು ನಗರ ಜಿಲ್ಲಾ ಪ್ರದಾನ ಕಾರ್ಯದರ್ಶಿಯಾದ ಕಿರಣ್ ಪ್ರಬಾಕರ್ ರೆಡ್ಡಿ ರವರ ಸಮ್ಮುಖದಲ್ಲಿ ಜಯ ಕರ್ನಾಟಕ ಸಂಘಟನೆಯ ಆನೇಕಲ್ ತಾಲ್ಲೂಕು ನೂತನ ಅಧ್ಯಕ್ಷ ರಾದ ರವಿಕುಮಾರ್ ರವರಿಗೆ ಮತ್ತು ಯಾಸ್ಮೀನ್ ತಾಜ್ ರವರಿಗೆ ಜಯಕರ್ನಾಟಕ ಸಂಘಟನೆಯ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಬಿ.ಎನ್. ಯೋಗಾನಂದ ರವರು ಆದೇಶ ಪತ್ರವನ್ನು ವಿತರಿಸಿ ಗೌರವ ಪೂರ್ವಕವಾಗಿ ಅಭಿನಂದಿಸಿದರು.ಇನ್ನು ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ಸಂಘಟನೆಯ ಅತ್ತಿಬೆಲೆ ನಾಗರಾಜ್. ವಿನೋದ್. ತರುಣ್. ಮಂಜುನಾಥ್. ಮದು. ಲಷ್ಮೀ. ಸೀಮಾ, ಶಾಹಿನ್ ಮತ್ತಿತರು ಹಾಜರಿದ್ದರು.

03/08/2025

ಕಾಚನಾಯಕನಹಳ್ಳಿ ಗ್ರಾಮದಲ್ಲಿ ನಡೆದ ಹೆನ್ನಾಗರ ಗ್ರಾಮ ಪಂಚಾಯಿತಿಯ 2025-26ನೇ ಸಾಲಿನ ಗ್ರಾಮ ಸಭೆ

03/08/2025

ಆನೇಕಲ್ ತಾಲ್ಲೂಕು ಭೂ ಸ್ವಾದೀನ ವಿರೋದಿ ಹೋರಾಟ ಸಮಿತಿಯ ಹೋರಾಟಕ್ಕೆ ಬೆಂಬಲ ಸೂಚಿಸಿದ ಮಹಿಳಾ ಹೋರಾಟಗಾರರು

Address

ANEKAL
Bangalore
562107

Website

Alerts

Be the first to know and let us send you an email when Vikas.Tv posts news and promotions. Your email address will not be used for any other purpose, and you can unsubscribe at any time.

Share

Category