Active News 24×7

  • Home
  • Active News 24×7
01/11/2025

ಅರಕಲಗೂಡು ತಾಲ್ಲೂಕು ಹೆಣ್ಣೂರು ಕೊಂಗಳಲೆ ಸರ್ಕಾರಿ ಪ್ರೌಢಶಾಲೆಯ ವಿಧ್ಯಾರ್ಥಿನಿಯರು ವಾಲಿಬಾಲ್ ಕ್ರೀಡೆಯಲ್ಲಿ ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಹಿನ್ನಲೆ ತಾಲ್ಲೂಕು ರೈತ ಸಂಘದ ವತಿಯಿಂದ ಶಾಲೆಯ ದೈಹಿಕ ಶಿಕ್ಷಕರನ್ನು ಹಾಗೂ ಆಯ್ಕೆಯಾದ ಶಾಲೆಯ ವಿಧ್ಯಾರ್ಥಿ ಕ್ರೀಡಾಪಟುಗಳನ್ನು ಸನ್ಮಾನಿಸಿ ಗೌರವಿಸಿದರು.
ರಾಷ್ಟ್ರಮಟ್ಟದಲ್ಲಿ ಗೆದ್ದು ನಮ್ಮ ಅರಕಲಗೂಡು ತಾಲ್ಲೂಕು, ಜಿಲ್ಲೆ & ರಾಜ್ಯಕ್ಕೆ ಹೆಚ್ಚಿನ ಗೌರವ ತರುವ ಮೂಲಕ ನಮ್ಮ ತಾಲ್ಲೂಕಿನ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಆಶಿಸಿದರು.
#ವಾಲಿಬಾಲ್ #ರಾಜ್ಯಮಟ್ಟ #ರಾಷ್ಟ್ರಮಟ್ಟ #ಕ್ರೀಡೆ #ವಿಧ್ಯಾರ್ಥಿನಿಯರು #ಅರಕಲಗೂಡು #ಹಾಸನ #ಸರ್ಕಾರಿಶಾಲೆ #ಪ್ರೌಡಶಾಲೆ #ಹೆಣ್ಣೂರುಕೊಂಗಳಲೆ

ಕರ್ನಾಟಕ ಕ್ರೀಡಾ ರತ್ನ  ಸ್ಪರ್ಧೆಯಲ್ಲಿ ಭಾಗವಹಿಸಿ 80kg ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು ಕರ್ನಾಟಕ ಕ್ರೀಡಾ ರತ್ನ ಬೆಸ್ಟ್ ಪೋಸರ್ ಟೈಟಲ್ ಜಯಿಸ...
25/10/2025

ಕರ್ನಾಟಕ ಕ್ರೀಡಾ ರತ್ನ ಸ್ಪರ್ಧೆಯಲ್ಲಿ ಭಾಗವಹಿಸಿ 80kg ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು ಕರ್ನಾಟಕ ಕ್ರೀಡಾ ರತ್ನ ಬೆಸ್ಟ್ ಪೋಸರ್ ಟೈಟಲ್ ಜಯಿಸಿದ ಅರಕಲಗೂಡು MS POWER ZYM ಮಾಲೀಕರಾದ ಮಧು ರವರು.

22/10/2025

ಅರಕಲಗೂಡು ಹೊಳೆನರಸೀಪುರ ರಸ್ತೆಯಲ್ಲಿರುವ ಜೈ ಅಂಬೆ ಶುಂಟಿ ವಾಶಿಂಗ್ ನಲ್ಲಿ ಈ ರೀತಿಯ ತೂಕದಲ್ಲಿ ವ್ಯತ್ಯಾಸ ಕಂಡುಬಂದಿದೆ.

ಒಂದು ಚೀಲಕ್ಕೆ ಒಂದು ಕೆಜಿ ಅಷ್ಟು ಮೋಸ ನಡೆಯುತ್ತದೆ..!

ಸಂಬಂದಪಟ್ಟ ಅಧಿಕಾರಿಗಳು ಕೂಡಲೇ ತೂಕದ ಸ್ಕೇಲ್ ಪರೀಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ.

ಅರಕಲಗೂಡು ಗ್ರಾಮ ದೇವತೆ ಶ್ರೀ ದೊಡ್ಡಮ್ಮ ದೇವಿ.
22/10/2025

ಅರಕಲಗೂಡು ಗ್ರಾಮ ದೇವತೆ ಶ್ರೀ ದೊಡ್ಡಮ್ಮ ದೇವಿ.

21/10/2025

ಬೈಕ್ ಚಾರ್ಜರ್ ಕದ್ದು ಎಸ್ಕೇಪ್ ಆದ ಕಿಲಾಡಿ ಲೇಡಿಯ ಕಳ್ಳತನ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ.

ಅರಕಲಗೂಡು ಪಟ್ಟಣದ ವೆಂಕಟೇಶ್ವರ ಬುಕ್ ಸ್ಟೋರ್ ನಲ್ಲಿ ಕಳ್ಳತನ.

ಬುಕ್ ಸ್ಟೋರ್ ಮಾಲೀಕರಾದ ನಾಗೇಂದ್ರ ರವರ ಎಲೆಕ್ಟ್ರಿಕ್ ಬೈಕ್ ನ ಚಾರ್ಜರ್ ಕಳವು.

ಚಾರ್ಜರ್ ಕದ್ದು ಕ್ಷಣಾರ್ಧದಲ್ಲಿ ಪರಾರಿಯಾದ ಕಿಲಾಡಿ ಲೇಡಿ.

ಸುಮಾರು ಹದಿನೈದು ಸಾವಿರ ಬೆಲೆಬಾಳುವ ಚಾರ್ಜರ್ ಕಳ್ಳತನ ಮಾಡಿದ ಖತರ್ನಾಕ್ ಮಹಿಳೆ.

ಮಹಿಳೆ ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ.

ಈ ಖತರ್ನಾಕ್ ಲೇಡಿಯ ಗುರುತು ಸಿಕ್ಕಲ್ಲಿ ಅರಕಲಗೂಡು ಪೊಲೀಸ್ ಠಾಣೆ / ಪೇಟೆ ಮುಖ್ಯರಸ್ತೆಯಲ್ಲಿರುವ ವೆಂಕಟೇಶ್ವರ ಬುಕ್ ಸ್ಟೋರ್ ಅವರಿಗೆ ಮಾಹಿತಿ ನೀಡುವಂತೆ ಮನವಿ.

20/10/2025

ಅರಕಲಗೂಡು ತಹಶಿಲ್ದಾರ್ ಹಾಗೂ ಹಾಸನ ಜಿಲ್ಲಾಧಿಕಾರಿಗಳು ಹಾಸನಾಂಬ ದೇವಸ್ಥಾನ ಬಿಟ್ಟು ರೈತರ ಸಂಕಷ್ಟಕ್ಕೆ ಸ್ಪಂದಿಸಲಿ. ರೈತ ಸಂಘ ಆಗ್ರಹ.

ಅರಕಲಗೂಡು ತಾಲ್ಲೂಕಿನ ಚೋಳೇನಹಳ್ಳಿ ಗ್ರಾಮದ ಕೋಡಿ ಒಡೆದು ಸುಮಾರು 10 ಎಕರೆ ಪ್ರದೇಶದ ತೋಟ ಹಾಗೂ ಗದ್ದೆಗೆ ಹಾನಿಯಾಗಿದೆ.

ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದ್ದ ತಾಲ್ಲೂಕು ಹಾಗೂ ಜಿಲ್ಲಾಡಳಿತ ಹಾಸನಾಂಬ ದೇವಸ್ಥಾನದ ಹಿಂದೆ ಬಿದ್ದಿದ್ದು ಜಿಲ್ಲೆಯಲ್ಲಿ ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯವಾಗಿದೆ.

ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಸೂಕ್ತ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ನಷ್ಟ ಆಗಿರುವ ರೈತರಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ತಕ್ಷಣವೇ ಸ್ಪಂದಿಸಬೇಕು ಎಂದು ರೈತ ಸಂಘದ ಮುಖಂಡ ಭುವನೇಶ್ ಆಗ್ರಹಿಸಿದರು.

20/10/2025

ಅರಕಲಗೂಡು : ಸೀಬಹಳ್ಳಿ ಹಾನಗಲ್ ರಸ್ತೆ ಸಂಪರ್ಕ ಕಡಿತ.

20/10/2025

ಅರಕಲಗೂಡು : ಕಾರಹಳ್ಳಿ ಸೀಬಹಳ್ಳಿ ಮಾರ್ಗ ಹಾನಗಲ್ ಕಾಳೇನಹಳ್ಳಿ ಕೆರಳಾಪುರ ರಸ್ತೆ ಸಂಪರ್ಕ ಮಾರ್ಗ ಕಡಿತ. ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ.

19/10/2025

ಅರಕಲಗೂಡು: ಬಾರಿ ಮಳೆ ಅವಾಂತರ — ಡ್ರೈನೆಜ್ ಕೊರತೆಯಿಂದ ಬೈಕ್ ಗ್ಯಾರೇಜ್‌ಗೂ ನುಗ್ಗಿದ ನೀರು
ಅರಕಲಗೂಡು, ಅ.18:
ನೆನ್ನೆ ಅರಕಲಗೂಡು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುರಿದ ಬಾರಿ ಮಳೆಯಿಂದ ಪಟ್ಟಣದ ಹಲವೆಡೆ ನೀರು ನುಗ್ಗುವ ಅವಾಂತರ ಉಂಟಾಯಿತು. ಹೆಂಟಗೆರೆ ರಸ್ತೆಯ Expo ಬೈಕ್ ಗ್ಯಾರೇಜ್ ಒಳಗೂ ಮಳೆನೀರು ನುಗ್ಗಿದ್ದು, ವ್ಯಾಪಾರಿಗಳಿಗೆ ತೊಂದರೆ ಉಂಟಾಗಿದೆ.
ಸ್ಥಳೀಯರು “ಸರಿಯಾದ ಡ್ರೈನೆಜ್ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತಿ ಬಾರಿ ಮಳೆಯಾಗುವಾಗ ಇದೇ ತೊಂದರೆ ಎದುರಾಗುತ್ತದೆ. ಪಟ್ಟಣ ಪಂಚಾಯಿತಿಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ” ಎಂದು ಆ*ಕ್ರೋಶ ವ್ಯಕ್ತಪಡಿಸಿದರು.

19/10/2025

ಅರಕಲಗೂಡು ಪಟ್ಟಣದ ರೈತ ಮಿತ್ರ ಆಗ್ರೋ ಸೆಂಟರ್ ಗೆ ನುಗ್ಗಿದ ಮಳೆ ನೀರು...

ಬೆಳಗ್ಗೆ ಬಂದು ಅಂಗಡಿ ಓಪನ್ ಮಾಡಿದ ಮಾಲೀಕರಿಗೆ ಶಾಕ್...

ಹಲವು ವಸ್ತುಗಳಿಗೆ ಮಳೆ‌ ನೀರಿನಿಂದ ಹಾನಿ..

ಅಬ್ಬರದ ಮಳೆ ಅವಾಂತರಕ್ಕೆ ಅಂಗಡಿ ಮಾಲೀಕರಿಗೆ ಸಂಕಷ್ಟ..

19/10/2025

ಅರಕಲಗೂಡು ಪಟ್ಟಣದ ಸಿಂಗಪಟ್ಲಮ್ಮ ಕಾಂಪ್ಲೆಕ್ಸ್ ನ ಹಲವು ಅಂಗಡಿಗಳಿಗೆ ನುಗ್ಗಿದ ಮಳೆ‌ನೀರು...

ಹಲವು ವಸ್ತುಗಳಿಗೆ ಹಾನಿಯಾಗಿರುವ ಸಾಧ್ಯತೆ.

19/10/2025

ಅರಕಲಗೂಡು. ಮಳೆಯ ಅಬ್ಬರಕ್ಕೆ ಅವಾಂತರ..

Address

Arkalgud Arakalgud Arakalagudu

573102

Alerts

Be the first to know and let us send you an email when Active News 24×7 posts news and promotions. Your email address will not be used for any other purpose, and you can unsubscribe at any time.

Contact The Business

Send a message to Active News 24×7:

  • Want your business to be the top-listed Media Company?

Share