GDG TV

GDG TV gadag local news and events

ಬಿಜೆಪಿ ಬಂಡಾಯ ಅಭ್ಯರ್ಥಿಗಳ ಪಾಲಾದ ಗದ್ದುಗೆ!ನರೇಗಲ್:‌ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾಗಿ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷರಾಗಿ ಕುಮಾರಸ್ವಾಮಿ ಆಯ್ಕೆ...
03/09/2024

ಬಿಜೆಪಿ ಬಂಡಾಯ ಅಭ್ಯರ್ಥಿಗಳ ಪಾಲಾದ ಗದ್ದುಗೆ!

ನರೇಗಲ್:‌ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾಗಿ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷರಾಗಿ ಕುಮಾರಸ್ವಾಮಿ ಆಯ್ಕೆ

ನರೇಗಲ್ ಪಟ್ಟಣದ ಅಭಿವೃದ್ಧಿಗಾಗಿ ಬೆಂಬಲಿಸಿದ್ದೇವೆ ಎಂದರು ಶಾಸಕರಾದ ಜಿ. ಎಸ್. ಪಾಟೀಲರು

ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ, ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿಲ್ಲ, ನಾವಿಬ್ಬರು ಈಗಲೂ ಬಿಜೆಪಿ ಪಕ್ಷದ ಸದಸ್ಯರೆ ಆದರೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಮಾತ್ರ ಬಿಜೆಪಿ ಸದಸ್ಯರ, ಕಾಂಗ್ರೆಸ್ ಸದಸ್ಯರ, ಕಾಂಗ್ರೆಸ್‌ ಶಾಸಕರ, ಪಕ್ಷೇತರ ಸದಸ್ಯರ ಬೆಂಬಲ ಪಡೆದಿದ್ದೇವೆ ಎನ್ನುತ್ತಾರೆ ನೂತನ ಅಧ್ಯಕ್ಷ, ಉಪಾಧ್ಯಕ್ಷರು.

ಈ ಕುರಿತು ಇಂದಿನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳು
--
ಚಂದ್ರು ಎಂ. ರಾಥೋಡ್

ಆರು ದಶಕವಾದರೂ ಅಭಿವೃದ್ಧಿಯಾಗದ ಉಪ ಮಾರುಕಟ್ಟೆ!ರೈತರಿಗೆ, ಕೃಷಿಕರಿಗೆ ತಪ್ಪದ ಅಲೆದಾಟ: ಎಪಿಎಂಸಿಗೆ ಮೂಲಸೌಕರ್ಯ ಒದಗಿಸಲು ಆಗ್ರಹ--ಗದಗ ಜಿಲ್ಲೆಯ ...
19/08/2024

ಆರು ದಶಕವಾದರೂ ಅಭಿವೃದ್ಧಿಯಾಗದ ಉಪ ಮಾರುಕಟ್ಟೆ!

ರೈತರಿಗೆ, ಕೃಷಿಕರಿಗೆ ತಪ್ಪದ ಅಲೆದಾಟ: ಎಪಿಎಂಸಿಗೆ ಮೂಲಸೌಕರ್ಯ ಒದಗಿಸಲು ಆಗ್ರಹ
--
ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ನರೇಗಲ್‌ ಪಟ್ಟಣದಲ್ಲಿ ಕೃಷಿ ಉತ್ಪನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಇದ್ದೂ, ಇಲ್ಲದಂತಾಗಿದೆ. ಆರು ದಶಕಗಳಿಂದ ಇಲ್ಲಿಯವರೆಗೆ ಯಾವುದೇ ವ್ಯಾಪಾರ, ವಹಿವಾಟು ನಡೆಸಿಲ್ಲ. ಯಾವುದೇ ತರಹದ ಚಟುವಟಿಕೆಗಳನ್ನು ಆರಂಭಿಸಿಲ್ಲ ಎನ್ನುವುದು ಈ ಭಾಗದ ರೈತರಿಗೆ ನೋವಿನ ಸಂಗತಿಯಾಗಿದೆ.

ಮಳಿಗೆಗಳ ನಿರ್ಮಾಣ, ಮೂಲಸೌಕರ್ಯಗಳ ಪೂರೈಕೆ ಹಾಗೂ ಸಿಬ್ಬಂದಿ ನಿಯೋಜನೆ ಕಾರ್ಯಗಳು ಕುಂಠಿತಗೊಂಡಿರುವ ಕಾರಣ ಇಲ್ಲಿನ ಎಪಿಎಂಸಿ ಬಯಲು ಶೌಚದ ಆವರಣವಾಗಿ ಪರಿವರ್ತನೆಗೊಂಡಿದೆ. ಹೊಲದಲ್ಲಿ ಬೆಳೆಯುವ ಪ್ರತಿ ಉತ್ಪನವನ್ನು ಮಾರಾಟ ಮಾಡಲು ದೂರದ ಕೊಪ್ಪಳ, ಗದಗ, ಗಜೇಂದ್ರಗಡ ಹಾಗೂ ಇತರೆ ಪಟ್ಟಣಗಳಿಗೆ ಹೋಗುವ ಅನಿವಾರ್ಯತೆ ನಿರ್ಮಾಣವಾಗಿದೆ.

ಅಪಾರ ಪ್ರಮಾಣದ ಕೃಷಿ ಭೂಮಿಯನ್ನು ಹೊಂದಿರುವ ನರೇಗಲ್‌ ಪಟ್ಟಣದಲ್ಲಿ ಹಾಗೂ ಇಲ್ಲಿನ ಎಪಿಎಂಸಿಯಲ್ಲಿ ಕಾಳು, ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಒಂದೂ ಗೋದಾಮುಗಳಿಲ್ಲ. ಬೆಲೆ ಕುಸಿತ ಕಂಡಾಗ ಈರುಳ್ಳಿ, ಮೆಣಸಿನಕಾಯಿ ಹಾಗೂ ಇತರೆ ಬೆಳೆಗಳನ್ನು ಕಾಪಾಡಿಕೊಳ್ಳಲು ಉಗ್ರಾಣಗಳಿಲ್ಲ. ಇದರಿಂದ ರೈತರು ಎಲ್ಲೆಂದರಲ್ಲಿ ಸಿಕ್ಕಸಿಕ್ಕ ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಬೆಳೆಗಳನ್ನು ಮಾರಾಟ ಮಾಡುತ್ತಿದ್ದಾರೆ

ಈ ಕುರಿತು ಇಂದಿನ ಪ್ರಜಾವಾಣಿ ಪತ್ರಿಕೆಯಲ್ಲಿ ನಮ್ಮ ಜನ – ನಮ್ಮ ಧ್ವನಿ ಅಂಕಣಕ್ಕೆ ಪ್ರಕಟವಾದ ಲೇಖನ
---
ಚಂದ್ರು ಎಂ. ರಾಥೋಡ್‌
#ಕೃಷಿಉತ್ಪನಮಾರುಕಟ್ಟೆ #ಎಪಿಎಂಸಿ #ಗದಗ #ಗಜೇಂದ್ರಗಡ #ನರೇಗಲ್‌‌ #ಹೊಳೆಆಲೂರ #ಪ್ರಜಾವಾಣಿ #ಗೋದಾಮು #ಉಗ್ರಾಣ #ರೈತ #ಚಂದ್ರುಎಂರಾಥೋಡ್

ಇಂದು ವಯನಾಡು ನಾಳೆ ಕೋಟೆನಾಡು!ಕಾಲಕಾಲೇಶ್ವರ-ಗಜೇಂದ್ರಗಡಕ್ಕೆ ಗುಡ್ಡ ಕುಸಿತ ಅಪಾಯ ಕಟ್ಟಿಟ್ಟಬುತ್ತಿಮರಣ ಮೃದಂಗದ ದುರಂತ ಸಂಭವಿಸುವ ಮುನ್ನ ಎಚ್ಚರ...
11/08/2024

ಇಂದು ವಯನಾಡು ನಾಳೆ ಕೋಟೆನಾಡು!

ಕಾಲಕಾಲೇಶ್ವರ-ಗಜೇಂದ್ರಗಡಕ್ಕೆ ಗುಡ್ಡ ಕುಸಿತ ಅಪಾಯ ಕಟ್ಟಿಟ್ಟಬುತ್ತಿ

ಮರಣ ಮೃದಂಗದ ದುರಂತ ಸಂಭವಿಸುವ ಮುನ್ನ ಎಚ್ಚರಿಕೆ ವಹಿಸಬೇಕು
----
ಮಾನವನ ಅತಿಯಾದ ಹಸ್ತಕ್ಷೇಪದಿಂದ ಹಾಗೂ ದುರಾಸೆಯಿಂದ ಭೂಮಿಯ ಒಡಿಲನ್ನು ಅಗೆದ ಕಾರಣದಿಂದಾಗಿ ಪ್ರಕೃತಿ ತಾಯಿಯು ಮುನಿಸಿಕೊಂಡು ತನ್ನ ಕೋಪವನ್ನು ಪಕ್ಕದ ಕೇರಳ ರಾಜ್ಯದ ವಯನಾಡಿನಲ್ಲಿ ಈಚೆಗೆ ಹೊರಹಾಕಿದ್ದಾಳೆ. ಅಲ್ಲಿನ ಭೀಕರ ಗುಡ್ಡದ ಭೂಕುಸಿತಕ್ಕೆ ಸಾವುಗಳ ಸಂಖ್ಯೆ ನಿಖರವಾಗಿ ಸಿಗಲಿಲ್ಲ. ನಾಲ್ಕು ಗ್ರಾಮಗಳು ಕೊಚ್ಚಿಹೋಗಿವೆ. ಕೆಸರು ಮೆತ್ತಿಕೊಂಡ ಮೃತದೇಹಗಳು, ಅಮ್ಮಂದಿರ ತೆಕ್ಕೆಯಲ್ಲೇ ಚಿರನಿದ್ರೆಗೆ ಜಾರಿದ ಕಂದಮ್ಮಗಳು ದುರಂತದ ತೀವ್ರತೆ ತೆರೆದಿಟ್ಟ ದೃಶ್ಯಗಳಾಗಿವೆ.
ಮಣ್ಣಿನಲ್ಲಿಯೇ ಕುಟುಂಬ ಸಮೇತರಾಗಿ ಮಣ್ಣಾಗಿ ಹೋದ ದೇಹಳಿಗೆ ಲೆಕ್ಕವಿಲ್ಲವಾಗಿದೆ. ಅಲ್ಲಿ ಎತ್ತ ಹೆಜ್ಜೆ ಹಾಕಿದರೂ ನೋವಿನ ನೋಟಗಳೇ ಕಣ್ಣಿಗೆ ಬಿಳುತ್ತವೆ. ಬೆಟ್ಟ-ಗುಡ್ಡದ ಜೀವಗಳ ಆಕ್ರಂದನದ ಸದ್ದಿಗೆ ಈಡೀ ದೇಶವೇ ಕಣ್ಣೀರು ಹಾಕಿದೆ. ಇದು ಕೇರಳ ರಾಜ್ಯ ಕಂಡಂತಹ ಅತ್ಯಂತ ಭೀಕರ ಪ್ರಕೃತಿ ವಿಕೋಪಗಳಲ್ಲಿ ಒಂದಾಗಿದೆ.
ಇದಕ್ಕೆ ಪ್ರಕೃತಿ ವಿಕೋಪ ಒಂದೇಡೆಯಾದರೆ ಮಾನವ ಹಸ್ತಕ್ಷೇಪ ಪ್ರಮುಖ ಕಾರಣವಾಗಿದೆ. ನೀರಿನ ಹರಿವಿನ ಹಾದಿಯನ್ನು ಪರಿಗಣಿಸದೆ ನಿರ್ಮಾಣ ಕಾಮಗಾರಿ, ಸ್ಫೋಟಕ ಬಳಸಿ ಬಂಡೆ ಒಡೆಯುವುದು, ರೇಸಾರ್ಟ್‌ ಮಾಡುವುದು, ಮಣ್ಣು ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಕಾಡಿಗೆ ಬೆಂಕಿ ಹಾಕುವುದು ಸೇರಿದಂತೆ ಇತರೆ ಅಕ್ರಮಗಳು ಕುಸಿತಕ್ಕೆ ನೇರ ಅಥವಾ ಪರೋಕ್ಷ ಕಾರಣ ಆಗಿವೆ.
ಇದೇ ಪರಿಸ್ಥಿತಿ ಗದಗ ಜಿಲ್ಲೆಯ ಗಜೇಂದ್ರಗಡ, ಕಾಲಕಾಲೇಶ್ವರ ಗುಡ್ಡದ ಪ್ರದೇಶಕ್ಕೆ ಆಗುವ ಸಾಧ್ಯತೆ ದೂರವಿಲ್ಲವಾಗಿದೆ. ಅದಕ್ಕೆ ಕಾರಣ ಇಲ್ಲಿನ ಗುಡ್ಡ, ಬೆಟ್ಟ ಪ್ರದೇಶಗಳಲ್ಲಿ ಅಕ್ರಮವಾಗಿ, ಕಾನೂನು ಬಾಹಿರವಾಗಿ ನಡೆಯುತ್ತಿರುವ ಚಟುವಟಿಕೆಗಳು. ಗುಡ್ಡದ ಏರಿಳಿತಕ್ಕೆ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಗರಸಿಗಾಗಿ(ಮೋರಂ) ಕೊರೆದಿರುವ ತಗ್ಗು ಪ್ರದೇಶಗಳೇ, ಅಲ್ಲಲ್ಲಿ ಕೈಗೊಂಡಿರುವ ಸ್ಫೋಟಕ ಬಳಸಿ ಬಂಡೆ ಒಡೆಯುವ ಕೆಲಸಗಳು ಸದ್ಯ ಎಲ್ಲರಿಗೂ ಕಂಡು ಬರುವ ಜೀವಂತಿ ಸಾಕ್ಷಿ ದೃಶ್ಯಗಳಾಗಿವೆ.
ಈಗಾಗಲೇ ಗಜೇಂದ್ರಗಡ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಬೃಹತ್‌ ಪ್ರಮಾಣದ ಕಲ್ಲೊಂದು ಉರುಳಿ ಬಂದ ಘಟನೆ ನಡೆದಿದೆ. ಇದು ಮುಂದೆ ನಡೆಯುವ ದುರಂತ ಹಾಗೂ ಸಾವುಗಳ ಮೃದಂಗದ ಮುನ್ಸೂಚನೆಯಾಗಿದೆ. ಬೃಹತ್‌ ಕಲ್ಲುಗಳಿಗೆ ಕೆಳಮಟ್ಟದಲ್ಲಿ ಬಿಗಿಯಾಗಿ ಹಿಡಿದಿರುವ ಮಣ್ಣು ಅಲ್ಲಿಯೇ ಗಟ್ಟಿಯಾಗಿ ನಿಲ್ಲುವಂತೆ ರಕ್ಷಣೆ ನೀಡಿದೆ. ಆದಕಾರಣ ಇಂದಿಗೂ ಅಪಾಯದ ಘಟನೆಗಳು ನಡೆದಿಲ್ಲ.
ಈಚೆಗೆ ಪೈಪೋಟಿಯಲ್ಲಿ ರಾಜಕೀಯ ನಾಯಕರು, ಪ್ರಭಾವಿಗಳು ಪುಕ್ಕಟೆಯಾಗಿ ಸಿಗುವ ಪ್ರಕೃತಿ ಮಡಿಲನ್ನು ಮನಸೋ ಇಚ್ಚೆ ಕೊರೆಯುತ್ತಿದ್ದಾರೆ, ಬ್ಲಾಸ್ಟ್‌ ಮಾಡುತ್ತಿದ್ದಾರೆ. ಕಂಡುಕಾಣದಂತೆ ಬಾಯಿಮುಚ್ಚಿಕೊಂಡು ಕುಳಿತುಕೊಳ್ಳುವ ಅನಿವಾರ್ಯತೆ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ, ಪರಿಸರ ಪ್ರೇಮಿಗಳಿಗೆ, ಹಿರಿಯ ಜೀವಿಗಳಿಗೆ ಒದಗಿದೆ. ಕಾರಣ ಅವರಿಗೂ ಕುಟುಂಬವಿದೆ. ಧ್ವನಿ ಎತ್ತಿದ್ದರೆ ಅವರೇ ಇರುವ ಸಾಧ್ಯತೆ ಇಲ್ಲವಾಗಿದೆ. ಆದರೆ ಕೇರಳದ ದುರಂತ ಗಜೇಂದ್ರಗಡದ ದುರಂತವಾದಾಗ ಅದರ ಅರಿವು ಎಲ್ಲರಿಗೂ ಗೊತ್ತಾಗುತ್ತದೆ.
ಗುಡ್ಡದ ತಳಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಕೊರೆಯುವ ಮಣ್ಣಿನಿಂದ ಭೂಕುಸಿತವಾಗಿ ಗುಡ್ಡದ ಕಲ್ಲುಗಳು ಕುಸಿಯಬಹುದು, ಅಕ್ರಮ ಚಟುವಟಿಕೆಗಳ ಕಾರಣದಿಂದಾಗಿ ಪೂರ್ಣ ಗುಡ್ಡವೇ ಕುಸಿಯಬಹುದು. ಒಂದು ವೇಳೆ ಹೀಗಾದರೆ ಸಂಭವಿಸಬಹುದಾದ ಸಾವುನೋವುಗಳ ಬಗ್ಗೆ ಒಂದೊಂಮ್ಮೆ ಆತ್ಮಸಾಕ್ಷಿಯಿಂದ ವಿಚಾರ ಮಾಡಿರಿ. ಗಜೇಂದ್ರಗಡದಿಂದ ಬರುವ ಕಲ್ಲುಗಳು ಕೊಡಗಾನೂರ, ಚೀಲಝರಿ, ಪುರ್ತಗೇರಿ, ಬೆಣಚಮಟ್ಟಿ, ಗೋಗೇರಿ ಹಾಗೂ ಗುಡ್ಡದ ಸುತ್ತಳತೆಯ ಎಲ್ಲಾ ಗ್ರಾಮಗಳ ವರೆಗೆ ಬರಬಹುದು.
ಆಗ ನಡೆಯುವ ದುರ್ಘಟನೆಯಲ್ಲೂ ಎಷ್ಟೋ ಗ್ರಾಮಗಳೇ ನಾಪತ್ತೆಯಾಗಬಹುದು. ಈಗ ನಡೆಯುತ್ತಿರುವ ಅಕ್ರಮವನ್ನು ನೋಡಿಯುವ ಸುಮ್ಮನಿರುವ ಪ್ರತಿಯೊಬ್ಬರಿಗೂ ಅದರ ಪಾಪ ತಲುಪಬಹುದು. ನಾಳೆಯ ಒಳ್ಳೆಯದಕ್ಕಾಗಿ ಇಂದಿನ ಪ್ರಕೃತಿಯನ್ನು ಕಾಪಾಡುವುದು ಪ್ರತಿಯೊಬ್ಬರಿಗೂ ಅನಿವಾರ್ಯವಾಗಿದೆ.
ಗಜೇಂದ್ರಗಡ ವ್ಯಾಪ್ತಿಯ ಗಜೇಂದ್ರಗಡ, ಕಾಲಕಾಲೇಶ್ವರ, ಕುಂಟೋಜಿ, ಕೃಷ್ಣಾಪುರ(ಕಣವಿ), ಗೌಡಗೇರಿ, ದಿಂಡೂರು, ಲಕ್ಕಲಕಟ್ಟಿ, ನೆಲ್ಲೂರು ಸೇರಿದಂತೆ ಎಲ್ಲೆಡೆ ಇದೇ ರೀತಿ ಗುಡ್ಡ ಕೊರೆಯುವ ಚಟುವಟಕೆಗಳು ದಿನವೂ ನಡೆಯುತ್ತಿವೆ. ಇನ್ನಾದರು ಎಚ್ಚೆತ್ತುಕೊಳ್ಳುವುದು ಅಗತ್ಯವಾಗಿದೆ. ಎಚ್ಚೆತ್ತುಕೊಳ್ಳದೆ ಇದ್ದರೆ ಮುಂದೊಂದು ದಿನ ನಡೆಯುವ ಘಟನೆಗೆ ಈ ಲೇಖನ ಸಾಕ್ಷಿಯಾಗಲಿದೆ.

ಧನ್ಯವಾದಗಳೊಂದಿಗೆ
---
ಚಂದ್ರು ಎಂ. ರಾಥೋಡ್‌, ಗ್ರೀನ್‌ ಆರ್ಮಿ ತಂಡದ ಸದಸ್ಯ
ಮೊಬೈಲ್‌ ನಂ: 7676296140

Address


Opening Hours

Monday 09:00 - 17:00
Tuesday 09:00 - 17:00
Wednesday 09:00 - 17:00
Thursday 09:00 - 17:00
Friday 09:00 - 17:00
Saturday 09:00 - 17:00
Sunday 09:00 - 17:00

Telephone

+917676769030

Alerts

Be the first to know and let us send you an email when GDG TV posts news and promotions. Your email address will not be used for any other purpose, and you can unsubscribe at any time.

Contact The Business

Send a message to GDG TV:

Shortcuts

  • Address
  • Telephone
  • Opening Hours
  • Alerts
  • Contact The Business
  • Claim ownership or report listing
  • Want your business to be the top-listed Media Company?

Share