07/11/2025
ಶುಕ್ರವಾರದ ಸಿನಿಮಾ - ಚಿತ್ರಮಂದಿರದಲ್ಲಿ ಹೊಸ ಕಥೆಗಳ ಹಬ್ಬ :📽🎬🙂
ಔಷಧಿ ಮಾಫಿಯಾ ಸುತ್ತ "ಹೇ ಪ್ರಭು" :📽
ಔಷಧಿ ಕಂಪೆನಿಗಳ ಲಾಬಿ, ನಕಲಿ ಔಷಧ ಮಾರಾಟ ಮತ್ತು ಕಾರ್ಪೊರೇಟ್ ಲಾಭದ ಹಂಬಲ ಇವುಗಳ ಪರಿಣಾಮ ಹೇಗೆ ಜನರ ಆರೋಗ್ಯದ ಮೇಲೆ ಬಾಧೆ ಉಂಟು ಮಾಡುತ್ತದೆ ಎಂಬುದನ್ನು ಚಿತ್ರ ಮನರಂಜನೆಯ ಹಾಸ್ಯ, ಭಾವನೆ ಮತ್ತು ವಾಸ್ತವಿಕ ಪಾತ್ರಗಳ ಮೂಲಕ ತೋರಿಸಲಾಗಿದೆ. ಚಿತ್ರದಲ್ಲಿ ಯಮುನಾ ಶ್ರೀನಿಧಿ, ಜಯ ವರ್ಧನ್, ಸಂಹಿತಾ ವಿನ್ಯಾ, ಗಜಾನನ ಹೆಗ್ಡೆ, ಲಕ್ಷ್ಮಣ ಶಿವಶಂಕರ್, ಡಾ. ಸುಧಾಕರ್ ಶೆಟ್ಟಿ ನಟಿಸಿದ್ದಾರೆ. ಮನರಂಜನೆಯ ಜೊತೆಗೆ ಸಾಮಾಜಿಕ ಸಂದೇಶವಿರುವ ಕಾಮಿಡಿ ಎಂಟರ್ಟೈನರ್ ಇದಾಗಿದ್ದು, ವೆಂಕಟ್ ಭಾರದ್ವಾಜ್ ನಿರ್ದೇಶನದ 'ಹೇ ಪ್ರಭು' ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಅಮೃತ ಫಿಲಂ ಸೆಂಟರ್ ಮತ್ತು ೨೪ ರೀಲ್ಸ್ ಸಂಸ್ಥೆ ನಿರ್ಮಾಣ ಮಾಡಿದ್ದಾರೆ.
ಅಪ್ಪ-ಮಗನ ಕಥೆಯ ರಘು ರಾಜನ "ರೋಣ" :📽
ರೋಣ ಚಿತ್ರ ಇಂದು ಬಿಡುಗಡೆಯಾಗುತ್ತಿದ್ದು ಅಪ್ಪ-ಮಗನ ಕಥೆಯನ್ನು ಒಳಗೊಂಡಿದ್ದು, ಹಳ್ಳಿ ಸೊಗಡಿನಲ್ಲಿ ವೈಜ್ಞಾನಿಕ, ಧಾರ್ಮಿಕ, ರಾಜಕೀಯ, ಸೇಹ, ಪ್ರೀತಿ ಸೇರಿದಂತೆ ಮನರಂಜನೆಯ ಎಲ್ಲಾ ಅಂಶಗಳು ಒಳಗೊಂಡಿದೆ. ರೋಣ ಚಿತ್ರವನ್ನು ನಟ, ನಿರ್ಮಾಪಕ ರಘು ರಾಜ ನಂದ ನಿರ್ಮಿಸಿದ್ದು, ಸತೀಶ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಪ್ರಕೃತಿ ಪ್ರಸಾದ್ ಈ ಚಿತ್ರದ ನಾಯಕಿ. ಈ ಚಿತ್ರದಲ್ಲಿ ಶರತ್ ಲೋಹಿತಾಶ್ವನಾಯಕನ ತಂದೆಯ ಪಾತ್ರದಲ್ಲಿದ್ದು, ಮಾಲೂರು ವಿಜಯ್, ಚಿಲ್ಲರ್ ಮಂಜು, ಬಲರಾಜವಾಡಿ, ಸಂಗೀತ ಅನೀಲ್, ರಂಗಭೂಮಿ ಪ್ರತಿಭೆ ಗೀತಾ, ಹಿತೇಶ್ ಅಭಿಷೇಕ್ ಆರ್ಯ, ವಿನೋದ್, ದರ್ಶನ್ ಶೆಟ್ಟಿ, ಮನೋಜ್ ಕುಮಾರ್‌ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
ರೊಮ್ಯಾಂಟಿಕ್ ಡ್ರಿಲ್ಲರ್ "ಐ ಯಾಮ್ ಗಾಡ್" :📽
ಈಗಾಗಲೇ ಟ್ರೇಲರ್ ಹಿಟ್ ಆಗಿರುವ "ಐ ಯಾಮ್ ಗಾಡ್" ಚಿತ್ರ ಇಂದು ಬಿಡುಗಡೆಯಾಗುತ್ತಿದ್ದು. ರವಿ ಗೌಡ ಈ ಚಿತ್ರದ ನಾಯಕರಾಗಿ ನಟಿಸುವ ಜೊತೆಗೆ ನಿರ್ಮಾಣ, ನಿರ್ದೇಶನದ ಜವಾಬ್ದಾರಿ ಅವರೇ ವಹಿಸಿಕೊಂಡಿದ್ದಾರೆ. ರೊಮ್ಯಾಂಟಿಕ್ ಡ್ರಿಲ್ಲರ್ ಕಥಾಹಂದರ ಹೊಂದಿರುವ "ಐ ಯಾಮ್ ಗಾಡ್" ಸಿನಿಮಾಕ್ಕೆ ಬೆಂಗಳೂರು ಹಾಗೂ ಕೇರಳದಲ್ಲಿ ಶೂಟಿಂಗ್ ನಡೆಸಲಾಗಿದೆ. ಈ ಚಿತ್ರದಲ್ಲಿ ರವಿ ಗೌಡ ಅವರಿಗೆ ನಾಯಕಿಯಾಗಿ ವಿತೇಜಾ ಪರೀಕ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಈ ಸಿನಿಮಾದಲ್ಲಿ ರವಿಶಂಕರ್, ಅವಿನಾಶ್, ಅರುಣಾ ಬಾಲರಾಜ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.