Kasaragod Suddhi

Kasaragod Suddhi NEWS AND INFORMATION

ಕಾಸರಗೋಡು ಜಿಲ್ಲಾ ರೂಪೀಕರಣ ದಿನಾಚರಣೆಯ ಅಂಗವಾಗಿ ಬಿಜೆಪಿ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಮಾಸ್ಕ್ ವಿತರಣಾ ಅಭಿಯಾನವು ನಡೆಯುತ್ತಿದ್ದು ದೆಲಂಪಾಡ...
05/26/2020

ಕಾಸರಗೋಡು ಜಿಲ್ಲಾ ರೂಪೀಕರಣ ದಿನಾಚರಣೆಯ ಅಂಗವಾಗಿ ಬಿಜೆಪಿ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಮಾಸ್ಕ್ ವಿತರಣಾ ಅಭಿಯಾನವು ನಡೆಯುತ್ತಿದ್ದು ದೆಲಂಪಾಡಿ -ಮೈಂದಂಪಾರೆ ಯಲ್ಲಿ ಬಿಜೆಪಿ ಕೇರಳ ರಾಜ್ಯ ಸಮಿತಿ ಸದಸ್ಯರಾದ ಶ್ರೀ ಎಂ ಸಂಜೀವ ಶೆಟ್ಟಿಯವರು ಖ್ಯಾತ ಜ್ಯೋತಿಷ್ಯ ಉಣ್ಣಿಕೃಷ್ಣನ್ ನಂಬಿಶರಿಗೆ ಮಾಸ್ಕ್ ಗಳನ್ನು ನೀಡಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.

ಕಾಸರಗೋಡು ಜಿಲ್ಲಾ ರೂಪೀಕರಣ‌ ದಿನದ ಅಂಗವಾಗಿ ಬಿಜೆಪಿ ಜಿಲ್ಲಾ ಸಮಿತಿ 2 ಲಕ್ಷ ಮಾಸ್ಕ್ ನಿರ್ಮಾಣಕ್ಕೆ ಕರೆಕೊಟ್ಟಂತೆ ಬದಿಯಡ್ಕ ಲಕ್ಷ್ಮೀ ಗಣೇಶ್ ಕು...
05/24/2020

ಕಾಸರಗೋಡು ಜಿಲ್ಲಾ ರೂಪೀಕರಣ‌ ದಿನದ ಅಂಗವಾಗಿ ಬಿಜೆಪಿ ಜಿಲ್ಲಾ ಸಮಿತಿ 2 ಲಕ್ಷ ಮಾಸ್ಕ್ ನಿರ್ಮಾಣಕ್ಕೆ ಕರೆಕೊಟ್ಟಂತೆ ಬದಿಯಡ್ಕ ಲಕ್ಷ್ಮೀ ಗಣೇಶ್ ಕುಣಿತ ಭಜನೆಯ ವತಿಯಿಂದ ತಯಾರಿಸಿದ ಸುಮಾರು 1500ರಷ್ಟು ಮಾಸ್ಕ್‌ಗಳನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ ಶ್ರೀಕಾಂತ್ ಅವರಿಗೆ ಹಸ್ತಾಂತರಿಸಲಾಯಿತು.

05/21/2020

ವಿಶ್ವದಾದ್ಯಂತ 24 ಗಂಟೆಯಲ್ಲಿ 1 ಲಕ್ಷ ಮಂದಿಗೆ
ಕೊರೋನಾ ಪಾಸಿಟಿವ್

ಕಳೆದ 24 ತಾಸುಗಳಲ್ಲಿ ವಿಶ್ವದಾದ್ಯಂತ 1 ಲಕ್ಷಕ್ಕೂ ಅಧಿಕ ಮಂದಿಗೆ ಕೊರೋನಾ ಸೋಂಕು ತಗುಲಿದೆ.

ಜಗತ್ತಿನಾದ್ಯಂತ ಈವರೆಗೆ 3.29,763 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದು, 50,91,055 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಅಲ್ಲದೆ ಸುಮಾರು 47,000 ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರವಾಗಿದ್ದು, ಮರಣ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

05/15/2020

ಕರ್ನಾಟಕ ಗಡಿ ಮೂಲಕ ಕೇರಳಕ್ಕೆ ಒಳದಾರಿಯಾಗಿ ಅಕ್ರಮವಾಗಿ ಪ್ರವೇಶಿಸುವವರ ಮೇಲೆ ಹದ್ದಿನ ಕಣ್ಣಿಟ್ಟ ಪೊಲೀಸ್ ಸಶಸ್ತ್ರ ಮೀಸಲು ಪಡೆ

ಕಾಸರಗೋಡು : ಕೇರಳದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕರ್ನಾಟಕ ಗಡಿ ಮೂಲಕ ಕೇರಳಕ್ಕೆ ಒಳದಾರಿಯಾಗಿ ಅಕ್ರಮವಾಗಿ ಪ್ರವೇಶಿಸುವವರನ್ನು ತಡೆಯಲು ಆಡಳಿತ ಮಂಡಳಿಯು ಕೇರಳದ ಗಡಿ ಭಾಗಗಳಲ್ಲಿ ಪೊಲೀಸ್ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ.

ಬಂದಡ್ಕ, ಮಾಣಿಮೂಲೆ ,
ಪಾಣತ್ತೂರು ಮೊದಲಾದೆಡೆಗಳಲ್ಲಿ ಪೊಲೀಸ್ ಕಾವಲು ಹಾಕಲಾಗಿದ್ದು, ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ 22 , ಆದೂರಿನ 9 , ಬದಿಯಡ್ಕದ ಮೂರು ಕಡೆಗಳಲ್ಲಿ ಸಶಸ್ತ್ರ ಮೀಸಲು ಪಡೆಯ ಪೊಲೀಸರನ್ನು ನಿಯೋಜಿಸಲಾಗಿದೆ

ಕಾಸರಗೋಡಿನಲ್ಲಿ ಗುರುವಾರ 10 ಹಾಗೂ ಕೇರಳದಲ್ಲಿ ಒಟ್ಟು 26 ಮಂದಿಗೆ ಕೋವಿಡ್ ದೃಢಕರಿಸಲಾಗಿದೆ.

05/14/2020

ಕಾಸರಗೋಡು ಜಿಲ್ಲೆಯಲ್ಲಿ ಇಂದು 10 ಮಂದಿಗೆ ಕೋವಿಡ್ 19 ದೃಢ : ಕೇರಳದಲ್ಲಿ ಒಟ್ಟು 26

ಕಾಸರಗೋಡು : ಕೇರಳದಲ್ಲಿ ಇಂದು 26 ಜನರಿಗೆ ಕೋವಿಡ್ 19 ದೃಢ ಪಟ್ಟಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುದ್ಧಿ ಗೋಷ್ಠಿ ಯಲ್ಲಿ ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಹತ್ತು, ಮಲಪ್ಪುರಂ ಜಿಲ್ಲೆಯಲ್ಲಿ ಐದು, ಪಾಲಕ್ಕಾಡ್ ಮತ್ತು ವಯನಾಡ್ ಜಿಲ್ಲೆಗಳಲ್ಲಿ ತಲಾ ಮೂರು, ಕಣ್ಣೂರು ಜಿಲ್ಲೆಯಲ್ಲಿ ಇಬ್ಬರು ಮತ್ತು ಪಟ್ಟಣಂತಿಟ್ಟ, ಇಡುಕ್ಕಿ ಮತ್ತು ಕೋಝಿ ಕ್ಕೋಡ್ ಜಿಲ್ಲೆಗಳಲ್ಲಿ ತಲಾ ಒಬ್ಬರು ರೋಗ ದೃಡಪಟ್ಟವರಾಗಿದ್ದಾರೆ.

ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿ ಇಂದು ಸಂಜೆ 4 ಗಂಟೆಗೆ ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ:https://playnowdaily.com/?p=2125
05/13/2020

ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿ ಇಂದು ಸಂಜೆ 4 ಗಂಟೆಗೆ

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ:
https://playnowdaily.com/?p=2125

ಕೊರೋನಾ ವಿರುದ್ಧ ಹೋರಾಡಬೇಕು, ನಾವು ಉಳಿಯಬೇಕು, ಮುಂದೆ ಬೆಳೆಯಬೇಕು : ಪ್ರಧಾನಿ ಮೋದಿಇಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ...
05/12/2020

ಕೊರೋನಾ ವಿರುದ್ಧ ಹೋರಾಡಬೇಕು, ನಾವು ಉಳಿಯಬೇಕು, ಮುಂದೆ ಬೆಳೆಯಬೇಕು : ಪ್ರಧಾನಿ ಮೋದಿ

ಇಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ನಾವು ಕೊರೋನಾ ವೈರಸ್ ನಿಂದ ಬದುಕಿ ಉಳಿಯಬೇಕು , ಹೋರಾಟ ನಡೆಸಬೇಕು ಮತ್ತು ಮುಂದೆ ಬೆಳೆಯಬೇಕು. ಅದಕ್ಕಾಗಿ ಸದೃಢ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಆರಂಭದಲ್ಲಿ ಭಾರತದಲ್ಲಿ ಪಿಪಿಇ ಕಿಟ್ ಮತ್ತು ಎನ್೯೫ ಮಾಸ್ಕ್ ಉತ್ಪಾದನೆಯನ್ನೆ ಮಾಡುತ್ತಿರಲಿಲ್ಲ. ಆದರೆ ಇದೀಗ ಒಂದು ದಿನದಲ್ಲಿ ೨ ಲಕ್ಷದಷ್ಟೂ ಪಿಪಿಇ ಮತ್ತು ಮಾಸ್ಕ್ ಉತ್ಪಾದನೆಯಾಗುತ್ತಿದೆ. ಸಮಸ್ಯೆಯೂ ನಮಗೆ ಬದುಕುವುದನ್ನು ಕಲಿಸಿದೆ.

ನಾವು ಹಲವಾರು ವರ್ಷಗಳಿಂದ ೨೦೨೦ನೇ ಇಸವಿ ಭಾರತದ ವರ್ಷ ಎಂದು ಹೇಳಿಕೊಂಡು ಬಂದಿದ್ದೆವು. ಆದರೆ ಕೊರೋನಾ ಆವರಿಸುವ ಮುನ್ನ, ಹಾಗೂ ನಂತರ ಬಹಳ ವ್ಯತ್ಯಾಸವಿದೆ. ಆದರೆ ೨೦೨೦ನ್ನು ಭಾರತದ ವರ್ಷವನ್ನಾಗಿ ಮಾಡುವುದು ಪ್ರತಿಯೊಬ್ಬರ ಜವಾಬ್ಧಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ .

05/12/2020

ಎಂಜಿ ವಿಶ್ವವಿದ್ಯಾಲಯ ಯುಜಿ ಪರೀಕ್ಷೆಯನ್ನು ಮೇ 26 ರಂದು ಪುನರಾರಂಭವಾಗಲಿದೆ.

ಆರನೇ ಸೆಮಿಸ್ಟರ್ ಸಿಬಿಸಿಎಸ್ (ನಿಯಮಿತ, ಖಾಸಗಿ) ಮತ್ತು ಸಿಬಿಸಿಎಸ್ಎಸ್ (ಪೂರಕ) ಪದವಿ ಪರೀಕ್ಷೆಗಳನ್ನು ಮೇ 26 ರಂದು ಪುನರಾರಂಭಿಸಲಾಗುವುದು.

ನಾಲ್ಕನೇ ಸೆಮಿಸ್ಟರ್ ಯುಜಿ ಪರೀಕ್ಷೆಗಳು ಮೇ 27 ರಿಂದ ಮತ್ತು ಐದನೇ ಸೆಮಿಸ್ಟರ್ ಸಿಬಿಸಿಎಸ್ (ಪ್ರೈವೇಟ್) ಪರೀಕ್ಷೆಗಳು ಜೂನ್ 4 ರಿಂದ ಪ್ರಾರಂಭವಾಗಲಿವೆ.

ನಾಲ್ಕನೇ ಸೆಮಿಸ್ಟರ್ ಸ್ನಾತಕೋತ್ತರ ಪರೀಕ್ಷೆಗಳು ಜೂನ್ 3 ರಿಂದ ಪ್ರಾರಂಭವಾಗಲಿವೆ. ಆರನೇ ಸೆಮಿಸ್ಟರ್ ಯುಜಿ ಪರೀಕ್ಷೆಗಳು 26, 28, 30 ಮತ್ತು ಜೂನ್ 1 ರಂದು ಮತ್ತು 4 ನೇ ಸೆಮಿಸ್ಟರ್ ಪರೀಕ್ಷೆಗಳು 27, 29, ಜೂನ್ 2 ಮತ್ತು 4 ರಂದು ನಡೆಯಲಿದೆ.

ಐದನೇ ಸೆಮಿಸ್ಟರ್ ಖಾಸಗಿ ಪರೀಕ್ಷೆಗಳು ಜೂನ್ 4, 5, 6 ಮತ್ತು 8 ರಂದು ಮತ್ತು ನಾಲ್ಕನೇ ಸೆಮಿಸ್ಟರ್ ಪಿಜಿ ಪರೀಕ್ಷೆಗಳು ಜೂನ್ 3, 4, 5 ಮತ್ತು 6 ರಂದು ನಡೆಯಲಿದೆ.

04/29/2020

ಕೇರಳದಲ್ಲಿ ಇಂದು 10 ಮಂದಿಗೆ ಕೊರೊನಾ ದೃಢ : ಕಾಸರಗೋಡು 2
ಕೇರಳದಲ್ಲಿ ಇಂದು (ಬುಧವಾರ) 10 ಮಂದಿಯಲ್ಲಿ ಕೊರೊನಾ ಸೋಂಕು ದೃಢ ಪಟ್ಟಿದೆ. ಇದರಲ್ಲಿ ಕೊಲ್ಲಂ 6, ತಿರುವನಂತಪುರ ಮತ್ತು ಕಾಸರಗೋಡು ತಲಾ ಒಬ್ಬರಿಗೆ ಸೋಂಕು ದೃಢ ಪಟ್ಟಿದೆ

ಬಾರದ ಲೋಕಕ್ಕೆ ಇರ್ಫಾನ್ ಖಾನ್
04/29/2020

ಬಾರದ ಲೋಕಕ್ಕೆ ಇರ್ಫಾನ್ ಖಾನ್

Irfan Khan (इरफ़ान खान) | Death Latest News ತನ್ನ ಅಭಿನಯ ಶೈಲಿಯಿಂದಲೇ ಬಾಲಿವುಡ್ ನಲ್ಲಿ ಛಾಪು ಮೂಡಿಸಿದ್ದ ನಟ ಇರ್ಫಾನ್ ಖಾನ್ ಅವರು....

ಕೋಝೀಕ್ಕೊಡ್ ನಲ್ಲಿ ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದ 4 ತಿಂಗಳ ಮಗು ಸಾವು : ಕೇರಳದಲ್ಲಿ ಕೋವಿಡ್ ಗೆ ಮೂರನೇ ಮರಣ
04/24/2020

ಕೋಝೀಕ್ಕೊಡ್ ನಲ್ಲಿ ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದ 4 ತಿಂಗಳ ಮಗು ಸಾವು : ಕೇರಳದಲ್ಲಿ ಕೋವಿಡ್ ಗೆ ಮೂರನೇ ಮರಣ

ಮಗುವಿಗೆ 4 ತಿಂಗಳಿನಿಂದ ಹೃದಯ ಸಂಬಂಧವಾದ ಸಮಸ್ಯೆಗಳಿದ್ದವು ಕೋಝೀಕ್ಕೊಡ್ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಗೆ ಚಿಕಿತ್ಸೆ ಪಡೆಯುತ್.....

Address

Charlotte, NC

Alerts

Be the first to know and let us send you an email when Kasaragod Suddhi posts news and promotions. Your email address will not be used for any other purpose, and you can unsubscribe at any time.

Contact The Business

Send a message to Kasaragod Suddhi:

Share