K99 Kannada News 24x7

K99 Kannada News 24x7 Contact information, map and directions, contact form, opening hours, services, ratings, photos, videos and announcements from K99 Kannada News 24x7, Media/News Company, 528 29th A Main Road Jayanagara 9th Block Jayanagar, Las Vegas, NV.

07/05/2025

ಹೊಸೂರು ರಸ್ತೆ ಗುಡ್ನಹಳ್ಳಿ ಕೆರೆ ಎರಿಮೇಲೆ ಚಾಲಕ ನ ನಿಯಂತ್ರಣ ತಪ್ಪಿಕಾರು ಅಪಘಾತ ಚಾಲಕ ಪ್ರಾಣಪಾಯದಿಂದ ಪಾರು.
ನಮ್ಮ ಆನೇಕಲ್ Anekal ಆನೇಕಲ್ ತಾಲ್ಲೂಕ್ ಸಮಾಚಾರ್ ನಮ್ಮ ಆನೇಕಲ್ | Namma Anekal C Srinivas Anekal Bjp Namma Bannerghatta-ನಮ್ಮ ಬನ್ನೇರುಘಟ್ಟ Anekal News Anekal Rounds ಆನೇಕಲ್ Bangalore, India My Bengaluru / ನಮ್ಮ ಬೆಂಗಳೂರು Chandapura Hostel Terrace in Bangalore ಆನೇಕಲ್ ತಾಲ್ಲೂಕು ತಿಗಳ ವಹ್ನಿಕುಲ ಕ್ಷತ್ರಿಯರು🚩 Anekal Naryana swamy ಮಂಟಪ ಜಿಲ್ಲಾ ಪಂಚಾಯಿತಿ ಯೂತ್ ಕಾಂಗ್ರೆಸ್ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ K99 Kannada News 24x7 Kumar Vm Bannada jagathu -ಕನ್ನಡ news

07/04/2025

ಇದೇ ತಿಂಗಳು ಜುಲೈ 9ನೇ ತಾರೀಖಿನಂದು ಗುರುವಂದನಾ ಕಾರ್ಯಕ್ರಮ - ಕಲಾವಿದರಿಗೆ ಸನ್ಮಾನ,ಕಾರ್ಯಕ್ರಮ

ವರದಿ : ಆನಂದ್ ಕುಮಾರ್ K99 ಕನ್ನಡ ನ್ಯೂಸ್ ಚಾನಲ್ ಆನೇಕಲ್

ಇದೇ ತಿಂಗಳ 9ನೇ ತಾರೀಕಿನಂದು ಗುರುವಂದನಾ ಕಾರ್ಯಕ್ರಮ: ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ...!!

ಅಂಕರ್ :ಗುರುವಿನ ಮಾರ್ಗದರ್ಶನ ಸಮಾಜದ ಏಳಿಗೆಗೆ ಬಹಳ ಮುಖ್ಯವಾದದ್ದು ಎಂದು ರೈನ್ಬೋ ಶಾಲೆಯ ಸಂಸ್ಥಾಪಕರಾದ ವಿಜಯಕುಮಾರ್ ಗೌಡ ತಿಳಿಸಿದರು ಆನೇಕಲ್ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕೆ ಘೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಇದೇ ತಿಂಗಳು 9 ನೇ ತಾರೀಖಿನಂದು ಗುರುವಂದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ..ಚಂದನ ಸೇವಾ ಟ್ರಸ್ಟ್ ಹಾಗೂ ರೇಣುಕಾರಾಧ್ಯ ಕಲಾವಿದರ ಬಳಗ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಇನ್ನು ಆನೇಕಲ್‌ ಶ್ರೀರಾಮಕುಟೀರದಲ್ಲಿ ಕಾರ್ಯಕ್ರಮ ನಡೆಯಲಿದ್ದು ಮುಜರಾಯಿ ಇಲಾಖೆ ಹಾಗೂ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು .. ಗುರು ಜಗತ್ತಿನಲ್ಲಿ ಶ್ರೇಷ್ಠ ಸ್ಥಾನಮಾನವನ್ನು ಹೊಂದಿದ್ದಾರೆ ಅವರಿಗೆ ಇಡೀ ಸಮಾಜ ಋಣಿ ಆಗಿರಬೇಕಾಗುತ್ತದೆ ಇವರ ಸ್ಮರಣಾರ್ಥವಾಗಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು

ಕಲಾವಿದರಾದ ಕುಪೇಂದ್ರ ಗೌಡ ಮಾತನಾಡಿ ಸಂಸ್ಥೆಗಳು ಮಾನವ ಕುಲಕ್ಕೆ ಉಪಕಾರಮಾಡುವ ಕೆಲಸವನ್ನು ಮಾಡುತ್ತ ಪ್ರಾಣಿ-ಪಕ್ಷಿ ಪರಿಸರಕ್ಕೆ ಕೃತಜ್ಞನಾಗಿರಬೇಕಾಗಿದೆ ಆದರೆ ಇವೆಲ್ಲವೂ ಕಣ್ಮರೆ ಆಗಿರುವುದರಿಂದ ಮತ್ತೆ ನಾವು ಇವುಗಳನ್ನು ನೆನಪಿಸುವ ಕೆಲಸ ಮಾಡಬೇಕು ಆ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಸಮಾಜಕ್ಕೆ ಅನಿವಾರ್ಯವಾಗಿದೆ ಎಂದು ಹೇಳಿದರು

ಚಂದನ ಸೇವಾ ಟ್ರಸ್ಟ್ ಕಾರ್ಯದರ್ಶಿಯಾದ ಮಲ್ಲಿಕಾರ್ಜುನ ಆರಾಧ್ಯ ಮಾತನಾಡಿ ಯುವಕರು ಗುರುವಿನ ಸನಿಹವಿಲ್ಲದೆ ಸಮಸ್ಯೆಗಳು ಉದ್ಭವವಾಗಿವೆ ಪಠ್ಯಪುಸ್ತಕಗಳಲ್ಲಿ ನೀತಿ ಪಾಠಗಳಿಲ್ಲದೆ ಸಾಮಾಜಿಕ ಬದಲಾವಣೆಗಳಿಲ್ಲದೆ ಮುನ್ನಡೆಯುತ್ತಿರುವಾಗ ಸುಭದ್ರವಾದ ದೇಶವನ್ನು ಕಟ್ಟಲು ಅಸಾಧ್ಯ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಬೇಕಾದರೆ ಪೌರಾಣಿಕ ನಾಟಕಗಳು ಬಹಳ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು..ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಆದೂರು ಪ್ರಕಾಶ್ ಸಂಸ್ಥೆಯ ಪೋಷಕರಾದ ಮಹದೇಶ ಗೌಡ ನವೀನ್ ಶೆಟ್ಟಿ ಸಾಗರ್ ಹಾಜರಿದ್ದರು

07/04/2025

*4ನೇ ವರ್ಷದ ಗುರುವಂದನಾ ಕಾರ್ಯಕ್ರಮ ಶ್ರೀರಾಮ ಕುಟೀರ ಆನೇಕಲ್ ನಲ್ಲಿ 09.07.2025 ರಂದು.ಕುರಿತು ಪತ್ರಿಕಾ ಗೋಷ್ಟಿ*

07/03/2025

15- ವರ್ಷಗಳೇ ಕಳೆದ್ರು ಅಭಿವೃದ್ಧಿ ಕಾಣಾದೆ ಅನೈತಿಕ ಚಟುವಟಿಕೆಗಳ ತಾಣ ಅಯ್ತೇ. KHB .?

ಪೈಲ್ : 15 ವರ್ಷ ಕಳೆದರೂ ಅಭಿವೃದ್ಧಿಕಾಣದ ಸೂರ್ಯ ನಗರ ಎರಡನೇ ಹಂತ
ಪಾರ್ಮೇಟ್ : ಎವಿಬಿ
K99 Kannada news AnandKumar
ಆನೇಕಲ್

15 ವರ್ಷ ಕಳೆದರೂ ಅಭಿವೃದ್ಧಿ ಕಾಣದ ಕೆಎಚ್‌ಬಿ: ರೈತರ ಭೂಮಿಗಳಿಗೆ ಕೊಳ್ಳಿಟ್ಟ ರಾಜ್ಯ ಸರ್ಕಾರ...!!!

( ಕರ್ನಾಟಕ ಗೃಹ ಮಂಡಳಿ )ರಾಜ್ಯದಲ್ಲಿ ವಸತಿ ಅಗತ್ಯಗಳನ್ನು ಪೂರೈಸಲು ಸ್ಥಾಪಿಸಿದ ಒಂದು ಸಂಸ್ಥೆ ಅದರಲ್ಲೂ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ ಅದರೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸೂರ್ಯನಗರ 1 ನೇ ಹಂತ ಸ್ವಲ್ಪಮಟ್ಟಿಗೆ ಅಭಿವೃದ್ಧಿ ಕಂಡಿದ್ದು ಎರಡನೇ ಹಂತ ಮೂರನೇ ಹಂತ ಸಂಪೂರ್ಣ ಹಳ್ಳ ಹಿಡಿದಿದೆ.. ಅದರ ನಡುವೆಯೂ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಇಂಡ್ಲವಾಡಿಯಲ್ಲಿ ನಾಲ್ಕನೇ ಹಂತ ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ..

ಹೌದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸೂರ್ಯ ನಗರ ಎರಡನೇ ಹಂತವನ್ನು ಕರ್ನಾಟಕ ಗೃಹ ಮಂಡಳಿ ವಸತಿ ನಿರ್ಮಾಣ ಮಾಡಲು ಕಂದಾಯ ಇಲಾಖೆ 76 ಭೂಸ್ವಾಧೀನ 2006 ಕಾಯ್ದೆ ಪ್ರಕಾರ ಅಗಿನ ಸರ್ಕಾರ 2009ರಲ್ಲಿ ರೈತರ ಬಳಿ ಜಮೀನನ್ನ ಭೂ ಸ್ವಾದಿನವನ್ನ ಮಾಡ್ಕೊಂಡಿತ್ತು , ಕಂದಾಯ ಇಲಾಖೆಯಿಂದ ಹಿನ್ನಕ್ಕಿ ಗ್ರಾಮದ 474 ಎಕರೆ 11 ಗುಂಟೆ , 170 ಎಕರೆ ಒಂದು ಗುಂಟೆ ಜಾಗ ಮರ್ಸೂರು ಪಂಚಾಯಿತಿಯಿಂದ, 110 ಎಕರೆ 10ಗುಂಟೆ ಲಿಂಗಾಪುರ ಗ್ರಾಮದಿಂದ ಒಟ್ಟು 754 ಎಕರೆ ಜಾಗವನ್ನು ರೈತರಿಂದ ಭೂಸ್ವಾದಿನ ಪಡಿಸಿಕೊಂಡಿತ್ತು. ಈಗ 15 ವರ್ಷ ಕಳೆದರೂ ಕೂಡ ಅಭಿವೃದ್ಧಿ ಕಾಣದೆ ನೆನಗುದ್ಧಿಗೆ ಬಿದ್ದಿದೆ, ಸೂರ್ಯ ನಗರ 2ನೇ ಹಂತದಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಸೈಟ್ ಗಳಿದ್ದು 400 ರಿಂದ 500 ಮನೆಗಳು ತಲೆ ಎತ್ತಿದೆ ಆದರೆ ಮೂಲಭೂತ ಸೌಕರ್ಯಗಳಿಲ್ಲದೆ ಅನೈತಿಕ ಚಟುವಟಿಕೆಗಳಿಗೆ ತಾಣವಾಗಿ ಮಾರ್ಪಾಡುತ್ತಿದೆ.
ಇನ್ನು ಸ್ಥಳೀಯ ನಿವಾಸಿ ಮಂಜುನಾಥ್ ಮಾತನಾಡಿ ಇನ್ವೆಸ್ಟರ್ಸ್ ತುಂಬಾ ಜನ ಬರ್ತಿದ್ದಾರೆ ಆದರೆ ಮೂಲಭೂತ ಸೌಕರ್ಯಗಳಿಲ್ಲದೆ ಕಾರಣಕ್ಕೆ ವಾಪಸ್ ಹೋಗ್ತಿದ್ದಾರೆ ಪೈಪ್ ಲೈನ್ ಇಲ್ಲ ಟ್ರ್ಯಾಕ್ಟರ್ ಮೂಲಕ ನೀರನ್ನು ಬಿಡಲಾಗುತ್ತಿದೆ ಜನರಿಗೆ ಹೋಡಾಡಲು ಬಸ್ ಸೌಲಭ್ಯ ಇಲ್ಲ , ಮಳೆ ಬಂದ್ರಂತು ವಿದ್ಯುತ್ ಸಂಪರ್ಕ ಇರೋದಿಲ್ಲ ಲ್‌ಟಿ ಕೇಬಲ್ಗಳು ಕೂಡ ವರ್ಕ್ ಆಗ್ತಿಲ್ಲ ನಾವು ಕೂಡ ಅಧಿಕಾರಿಗಳಿಗೆ ಡಿಮ್ಯಾಂಡ್ ಮಾಡುತ್ತಿದ್ದೇವೆ ಆದರೆ ಮಾಡಿ ಕೊಡ್ತೀವಿ ಅಂತ ಭರವಸೆ ಕೊಟ್ಟಿದ್ದಾರೆ ಆದರೆ ಇದುವರೆಗೂ ಕೆಲಸ ಮಾಡಿ ಕೊಡುತ್ತಿಲ್ಲ ..

ಇನ್ನು ಹೌಸಿಂಗ್ ಬೋರ್ಡ್ ನಲ್ಲಿ ಹೊರ ರಾಜ್ಯದ ನೌಕರರಿಗೆ ಅಲಾಟ್ಮೆಂಟ್ ಆಗಿರೋದು ಇಲ್ಲಿನ ಸ್ಥಳೀಯರಿಗೆ ಅಲಾಟ್ಮೆಂಟ್ ಆಗಿಲ್ಲ ಹೌಸಿಂಗ್ ಬೋರ್ಡ್ ಒಂದೇ ಕುಟುಂಬಕ್ಕೆ ಮೂರು ಮನೆಗಳನ್ನು ನೀಡಿದೆ ಈ ರಸ್ತೆಯಲ್ಲಿ ಲಾರಿಗಳ ಹಾವಳಿ ಜಾಸ್ತಿ, ರಾತ್ರಿಯಾದರೆ ಪುಂಡಿ ಪೋಕರಿಗಳ ಹಾವಳಿ, ಅಲ್ಲದೆ ಕಳಪೆ ಕಾಮಗಾರಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು

ಹರೀಶ್ ಗೌತಮನಂದ ನಿವಾಸಿ

2009ರಲ್ಲಿ ಹಾಕಿರುವಂತ ರಸ್ತೆಗಳು ಬೀದಿ ದೀಪದ ಕಂಬಗಳು ಮಳೆ ಬಂದ್ರಂತು ಕರೆಂಟೇ ಇರೋದಿಲ್ಲ ಒಂಟಿಯಾಗಿ ಓಡಾಡಲು ತುಂಬಾ ತೊಂದರೆ ಇದೆ ಅಲ್ಲದೆ ನೀರಿನ ಸೌಲಭ್ಯ ಮತ್ತು ಮೂಲಭೂತ ಸೌಕರ್ಯಗಳಿಲ್ಲ ಟ್ಯಾಂಕರ್ ಮೂಲಕ ನೀರು ಬೀಡಲಾಗಿದೆ ಕಾಂಕ್ರೀಟ್ ಮಿಕ್ಸರ್ ಪಕ್ಕದಲ್ಲಿ ಇದೆ ರಾತ್ರೋರಾತ್ರಿ ಲಾರಿಗಳು ಹೆಚ್ಚು ಓಡಾಟದಿಂದ ರಸ್ತೆಗಳನ್ನು ಹಾಳಾಗಿದೆ

ಹರ್ಷಲ್ ವಿದ್ಯಾರ್ಥಿನಿ

ಕಾಲೇಜಿನಿಂದ ಮನೆಗೆ ಬರುವಾಗ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬರುವ ಪರಿಸ್ಥಿತಿ ಇದೆ ಬಸ್ಸಿನ ಸೌಲಭ್ಯ ಕಡಿಮೆ ಮನೆಯಲ್ಲಿ ಯಾರಾದರೂ ಒಬ್ಬರು ಕರೆದುಕೊಂಡು ಹೋಗೋದಕ್ಕೆ ಬರಲೇಬೇಕು ಹೇಳ್ಕೊಳ್ಳೋದಕ್ಕೆ ಲೇವೇಟ್ ಅಷ್ಟೇ, ಇದು ನಿರ್ಜನ ಪ್ರದೇಶ ಆಗ್ಬಿಟ್ಟಿದೆ ಪೊಲೀಸರು ಕೂಡ ಬೀಟ್ ಹಾಕ್ಬೇಕು

ಇನ್ನು ಕೆ ಹೆಚ್ ಬಿ ಸಹಾಯಕ ಕಾರ್ಯ ಪಾಲಕ ಅಭಿಯಂತರರು ಬೊಪಣ್ಣ ಮಾತನಾಡಿ ಈಗಾಗಲೇ ಅಲ್ಲಿನ ನಿವಾಸಿಗಳು ತುಂಬಾ ದಿನಗಳಿಂದ ದೂರುಗಳನ್ನು ನೀಡುತ್ತಿದ್ದಾರೆ ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸಿ ಕೊಡುವುದಾಗಿ ತಿಳಿಸಿದರು ಅಲ್ಲದೆ ರೆಸಿಡೆನ್ಸಿ ಏರಿಯಾದಲ್ಲಿ ಸಿಮೆಂಟ್ ಕಾಂಕ್ರೀಟ್ ಆ ಜಾಗದಲ್ಲಿ ಅಕ್ರಮವಾಗಿ ತಲೆಯೆತ್ತಿದೆ.. 2009ರಲ್ಲಿ ಹಾಕಿರುವ ರಸ್ತೆಗಳು ವಿದ್ಯುತ್ ಕಂಬಗಳು ಹಾಗಾಗಿ ಎಲ್ಲಾ ಹಾಳಾಗಿದೆ ಸಮಸ್ಯೆಗಳನ್ನು ಬಗೆಹರಿಸುತ್ತೇವೆ, ಅಲ್ಲದೆ ಟೆಂಡರ್ ಸಹ ಕರೆದಿದ್ದೇವೆ ಎಂದು ತಿಳಿಸಿದರು
ವರದಿ: ಆನಂದ್ ಕುಮಾರ್ K99 ಕನ್ನಡ ನ್ಯೂಸ್ ಚಾನಲ್ ಆನೇಕಲ್

06/29/2025

ಆನೇಕಲ್: K99 news

ಜಮೀನು ವಿಚಾರಕ್ಕೆ ಮಾರಾಮಾರಿ

ಅಣ್ಣ ತಮ್ಮಂದಿರು ಹಾಗೂ ಮಕ್ಕಳ ನಡುವೆ ಮಾರಾಮಾರಿ

ಆನೇಕಲ್ ಪಟ್ಟಣದ ಮುತ್ತಗಟ್ಟಿ ರಸ್ತೆ ಬಳಿ ಘಟನೆ

ಬೆಂಗಳೂರು ಹೊರವಲಯ ಆನೇಕಲ್

ರಸ್ತೆ ವಿಚಾರಕ್ಕೆ ಬಡಿದಾಡಿಕೊಂಡ ದಾಯಾದಿಗಳು ಹಾಗೂ ಮಕ್ಕಳು

ಸಹೋದರರಾದ ಭಾಸ್ಕರ್ ಪ್ರಸಾದ್ ಕುಟುಂಬದ ನಡುವೆ ಮಾರಾಮಾರಿ

ಭಾಸ್ಕರ್ ಮಕ್ಕಳಾದ ಹರೀಶ್ ಮತ್ತು ಭರತ್ ಮೇಲೆ ಹಲ್ಲೆ

ಚಿಕ್ಕಪ್ಪ ಪ್ರಸಾದ್ ಅಂಡ್ ಗ್ಯಾಂಗ್ನಿಂದ ಹಲ್ಲೆ

ಇದೇ ವೇಳೆ ಪ್ರಸಾದ್ ಪತ್ನಿ ಕವಿತಾ ಆಕೆಯ ತಮ್ಮನ ಮೇಲೂ ಹಲ್ಲೆ

ಆನೇಕಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ

ಹಲ್ಲೆ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಕೇಸ್ ಅಂಡ್ ಕೌಂಟರ್ ಕೇಸ್ ದಾಖಲು

06/27/2025

K99 Kannada news

ಫೈಲ್ : ವಿದ್ಯುತ್ ಸಂಪರ್ಕ ಮರು ಪರಿಶೀಲನೆ ಒತ್ತಾಯಿಸಿ ಪ್ರತಿಭಟನೆ
ಪಾರ್ಮೇಟ್ : ಎ ವಿ ಬಿ ವಿ
ದಿನಾಂಕ: 28-06-2025
ಅನೇಕಲ್

ಅಂಕರ್ : ಸುಪ್ರೀಂ ಕೋರ್ಟ್ ಹೊರಡಿಸಿರುವ ನೂತನ ವಿದ್ಯುತ್ ಸಂಪರ್ಕ ಕಾಯ್ದೆಯನ್ನು ಮರುಪರಿಶೀಲನೆ ಮಾಡುವಂತೆ ಆಗ್ರಹಿಸಿ ಇಂದು ಗುತ್ತಿಗೆ ಕಾಂಟ್ರಾಕ್ಟರ್ ಅಸೋಸಿಯೇಷನ್ ಸಂಘಟನೆ ಮತ್ತು ಆನೇಕಲ್ ತಾಲೂಕು ನೊಂದ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.. ರಾಜ್ಯ ಸರ್ಕಾರ ಮತ್ತು ರಾಜ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಪೋಷಣೆ ಕೂಗಿ ಆಕ್ರೋಶ ಹೊರಹಾಕಿದರು .. ಇನ್ನು ಗುತ್ತಿಗೆ ಸಂಘಟನೆಯ ಅಸೋಸಿಯೇಷನ್ ಶಿವಾನಂದ ರೆಡ್ಡಿ ನೇತೃತ್ವದಲ್ಲಿ ಚಂದಾಪುರ ಸರ್ಕಲ್ ನಲ್ಲಿಂದ ಹಿಡಿದು ಚಂದಾಪುರ ಕೆಇಬಿ ಕಚೇರಿ ಅವರಿಗೆ ಕಾಲ್ನಡಿಗೆ ಜಾಥಯನ್ನು ಮಾಡಲಾಯಿತು ಇನ್ನು ರಾಜ್ಯ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಹೊರಡಿಸಿರುವ ನೂತನ ಕಾಯ್ದೆಯನ್ನು ಮರು ಪರಿಶೀಲನೆ ಮಾಡುವಂತೆ ಸರ್ಕಾರದ ವಿರುದ್ಧ ದಿಕ್ಕಾರ ಹಾಕುವ ಮೂಲಕ ಆಕ್ರೋಶ ಹೊರಹಾಕಿದ್ದರು.. ಇನ್ನು ಇದೆ ವೇಳೆ ವಿದ್ಯುತ್ ಕಂಟ್ರಾಕ್ಟರ್ ಅಸೋಸಿಯೇಷನ್ ಆನೇಕಲ್ ಅಧ್ಯಕ್ಷ ಶಿವಾನಂದ ರೆಡ್ಡಿ ಮಾತನಾಡಿ ರಾಜ್ಯ ಸರ್ಕಾರ ಇಷ್ಟೊಂದು ತರಾತುರಿಯಲ್ಲಿ ಮಾಡಬೇಕಾದ ಅನಿವಾರ್ಯತೆ ಏನಿತ್ತು? ಸುಪ್ರೀಂಕೋರ್ಟ್ ಸಿಸಿ ಮತ್ತು ಓಸಿ ಗಳನ್ನ ಪಡೆದು ಅನುಮತಿ ನೀಡಿ ಅಂತ ಹೇಳಿದೆ ಆದ್ರೆ ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು ನೆರ ರಾಜ್ಯಗಳಲ್ಲಿ ಕೂಡ ಇತರದ ಪರಿಸ್ಥಿತಿಯನ್ನು ಇಲ್ಲ ಕರ್ನಾಟಕದಲ್ಲಿ ಮಾತ್ರ ವಿಶೇಷ ಏನು !? 24-೦4- 25 ಈ ಹಿಂದೆ ತೆಗೆದುಕೊಂಡಿರುವ ಕಟ್ಟಡ ಲೈಸೆನ್ಸ್ ಗಳನ್ನು ಅಂದ್ರೆ ಈಗಾಗಲೇ ತಾತ್ಕಾಲಿಕ ಸಂಪರ್ಕ ನೀಡಿದಂತಹ ಕಟ್ಟಡಗಳಿಗೆ ಶಾಶ್ವತ ಸಂಪರ್ಕ ನೀಡಿ , ಠೇವಣಿ ಮಾಡಿಸಿಕೊಂಡಿರುವಂತಹ ಕಟ್ಟಡಗಳಿಗೆ ಶೀಘ್ರವಾಗಿ ಕಾರ್ಯ ಆದೇಶ ಮಾಡಿ ನೊಂದಣಿ ಆಗಿರುವಂತಹ ಅರ್ಜಿಗಳನ್ನ ಕೂಡ ನೆ ಪರಿಶೀಲಿಸಿ ಮಾಡಿ ಗ್ರಾಮ ಪಂಚಾಯಿತಿಯಲ್ಲಿ ನೀಡುವಂತಹ ಮ್ಯಾನ್ವಲ್ ನಕ್ಷೆ ಅನುಮೋದನೆಯನ್ನು ಅಂಗೀಕರಿಸಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡುವಂತ ಕಟ್ಟಡಗಳಿಗೆ ಶೀಘ್ರದಲ್ಲಿ ತಾತ್ಕಾಲಿಕ ಸಂಪರ್ಕ ನೀಡಿ ಕೂಲಿಕಾರ್ಮಿಕರ ಜೀವ ಉಳಿಸಿ ಸಾಲ ಸೋಲ ಮಾಡಿ ಕಟ್ಟಿದಂತಹ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕವನ್ನು ನೀಡಿ ಎಂದು ರಾಜ್ಯ ಸರ್ಕಾರದ ವಿರುದ್ಧ ಶಿವಾನಂದ ರೆಡ್ಡಿ ತಿರುಗಿಬಿದ್ದಿದ್ದಾರೆ
ಇನ್ನು ಹೊಸದಾಗಿ ಕಟ್ಟುವಂತಹ ಮನೆಗಳಿಗೆ ಬೆಸ್ಕಾಂ ಅಧಿಕಾರಿಗಳು ಸಿಸಿ ಮತ್ತು ಓಸಿಗಳನ್ನು ಕೇಳುತ್ತಿದ್ದಾರೆ ಈ ಹಿಂದೆ ಇತರದ ರೂಲ್ಸ್ ಇರ್ಲಿಲ್ಲ ಮೂಲಭೂತ ಹಕ್ಕನ್ನೇ ಕಸಿದು ಕೊಳ್ಳುತ್ತಿದ್ದಾರೆ ಯಾರು ಕೂಡ ಮುಂದೆ ಕಾಂಗ್ರೆಸ್ ಸರ್ಕಾರವನ್ನು ಪ್ರೋತ್ಸಾಹ ಮಾಡಬೇಡಿ ಅವರಿಗೆ ವೋಟ್ ಕೊಡಬೇಡಿ ಸಾಲ ಸೋಲ ಮಾಡಿ ಮನೆ ಕಟ್ತಿದಿವಿ ಈಗ ವಿದ್ಯುತ್ ಸಂಪರ್ಕ ಇಲ್ಲದಿದ್ದರೆ ನಾವು ಜೀವನ ಮಾಡೋದು ಹೇಗೆ ಮುಂದಿನ ತಿಂಗಳಿಂದ ಇಎಂಐ ಇದೆ ಇಂತಹ ಕೆಳಮಟ್ಟದಲ್ಲಿ ಅಧಿಕಾರವನ್ನು ನಡೆಸುತ್ತಿದ್ದಾರೆ ನಮಗೆ ವಿದ್ಯುತ್ ಸಂಪರ್ಕ ಕೊಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ..

ಪ್ಲೊ..

ಬೈಟ್ : ಶಿವಾನಂದ ರೆಡ್ಡಿ ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷರು ಆನೇಕಲ್
ಬೈಟ್ : ವಿದ್ಯುತ್ ಬಳೆಗಾರ ಹೋರಾಟಗಾರ
ಬೈಟ್ : ಮೇಘನಾ ಗ್ರಾಹಕರು..

ವರದಿ: ಆನಂದ್ ಕುಮಾರ್ K99 Kannada news channel Anekal

ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಸಾರ್ವಜನಿಕರ ದೂರುಗಳ ಬಂದ ಹಿನ್ನೆಲೆಯಲ್ಲಿ ಆನೇಕಲ್ ಪುರಸಭೆ CEO ಅಮರ್ ನಾಥ್ ಮನೆಯ ಮೇಲೆ ಹಾಗು ಕಛೇರಿಯ ಮೇಲೆ ...
06/24/2025

ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಸಾರ್ವಜನಿಕರ ದೂರುಗಳ ಬಂದ ಹಿನ್ನೆಲೆಯಲ್ಲಿ ಆನೇಕಲ್ ಪುರಸಭೆ CEO ಅಮರ್ ನಾಥ್ ಮನೆಯ ಮೇಲೆ ಹಾಗು ಕಛೇರಿಯ ಮೇಲೆ ದಾಳಿ ಮಾಡಿರುವ ಲೋಕಯುಕ್ತ ಅಧಿಕಾರಿಗಳು..
E ಖಾತೆಗಳ ಅಕ್ರಮ ಖಾತೆಗಳ ವಿಳಂಬ ಇನ್ನೂ ಹಲವಾರು ದೂರುಗಳಿಗೆ ಸಂಬಂಧಿಸಿದಂತೆ ಇಂದು ದಾಳಿ

06/23/2025

ಭಾರತ ಕಮಿನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)
ಆನೇಕಲ್ ಟೌನ್ ಮತ್ತು ಕಸಬಾ ಶಾಖೆಯ ನೇತೃತ್ವದಲ್ಲಿ
ಆನೇಕಲ್ ಟೌನ್ ಪುರಸಭಾ ಕಚೇರಿಯ ಮುಂಭಾಗದಲ್ಲಿ ನಗರದ ನಾಗರಿಕ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಪ್ರತಿಭಟನೆ

ಕೇಂದ್ರ ಮತ್ತು ರಾಜ್ಯ ಸರ್ಕಾರ ಜನವಿರೋಧಿ ನೀತಿಗಳಾದ ಸಾಮಾನ್ಯ ಜನರು ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಲ್ಲಾ ಅಗತ್ಯ ವಸ್ತುಗಳು ಬೆಲೆ ಏರಿಕೆ ಇಂದ ತತ್ತರಿಸುತ್ತಿದ್ದಾರೆ
ಮನೆ ಬಾಡಿಗೆ ಶಿಕ್ಷಣ ಆರೋಗ್ಯ ದುಬಾರಿ ಯಾಗುತ್ತಿದೆ ಜನರ ಅಗತ್ಯಗಳಾದ ಮನೆ ನಿವೇಶನ ಹಕ್ಕುಪತ್ರ ಸಮರ್ಪಕ ರಸ್ತೆ ಕುಡಿಯುವ ನೀರು ಇತ್ಯಾದಿ ಸರಿಯಾಗಿ ದೊರಕುತ್ತಿಲ್ಲ. ಪುರಸಭೆ ಕಚೇರಿಯಿಂದ ಅರ್ಜಿಗಳನ್ನು ಪಡಿದರು ಇದುವರೆಗೂ ನಿವೇಶ ನೀಡಲು ಮುಂದಾಗುತ್ತಿಲ್ಲ. ಹತ್ತಾರು ವರ್ಷಗಳಿಂದ ಮನೆ ನಿರ್ಮಿಸಿಕೊಂಡಿರುವ ಅವರಿಗೆ ಅಕ್ರಮ ಸಕ್ರಮದೊಡ್ಡಿ ಹಕ್ಕುಪತ್ರ ನೀಡಿರುವ ನೋಂದಣಿ ಮಾಡುಕೊಡದೆ ವಿಳಂಬ ಮಾಡುತ್ತಿದ್ದಾರೆ
ನಗರದ ಮುಖ್ಯವಾದ ಬೇಡಿಕೆಗಳು
1.ಆಶ್ರಯ ಯೋಜನೆ ಅಡಿ ಮನೆಗಳಿಗೆ ಕುಡಿಯುವ ನೀರು ಶೀಘ್ರವೇ ಕೊಡಬೇಕು ಮತ್ತು ಕಸ ವಿಲೇವಾರಿ ಪ್ರತಿನಿತ್ಯ ಮಾಡಬೇಕು
2. ಆನೇಕಲ್ ಟೌನ್ ಮುಖ್ಯ ರಸ್ತೆಗಳು ಮಳೆ ಬಂದಾಗ ನೀರು ಹರಿದು ಚೌಡರೆಡ್ಡಿ ವೃತ್ತ ದಿಂದ ವೆಂಕಟೇಶ್ವರ ಚಿತ್ರ ಮಂದಿರದವರಿಗೂ ರಸ್ತೆ ಹದಗೆಟ್ಟಿದೆ ಅಪಘಾತಗಳು ಸಂಭವಿಸುತ್ತಿದೆ. ಆನೇಕಲ್ ಟೌನ್ ಮುಖ್ಯ ರಸ್ತೆಗಳಲ್ಲಿ ಮಳೆ ಬಂದಾಗ ನೀರು ತುಂಬಿರುತ್ತವೆ ಹಾಗಾಗಿ ಕೂಡಲೇ ಪುರಸಭೆ ವತಿಯಿಂದ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕು
3. ಚೌಡರೆಡ್ಡಿರುತ್ತದಿಂದ ಗಾಂಧಿ ಪ್ರತಿಮೆ ಆಗು ತಿಲಕ್ ಸರ್ಕಲ್ ವರೆಗೂ ಬೆಳಗ್ಗೆ ಮತ್ತು ಸಂಜೆ ವಿಪರೀತ ವಾಹನಗಳು ಓಡಾಡುವುದರಿಂದ ಮುಖ್ಯ ಸರ್ಕಲ್ ಗಳಲ್ಲಿ ಸಿಗ್ನಲ್ ಗಳನ್ನು ಅಳವಡಿಸಬೇಕು ಮತ್ತು ಮುಖ್ಯ ಸರ್ಕಲ್ ಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿರುತ್ತಾರೆ ಅದರ ಬಗ್ಗೆ ಪುರಸಭಾ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಗಮನ ಹರಿಸಬೇಕು ಎಂದು ಒತ್ತಾಯಿಸುತ್ತಾ ಪ್ರತಿಭಟಿಸಲಾಯಿತು. ಈ ಪ್ರತಿಭಟನಾ ಸಭೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಬಿ. ಎನ್. ಮಂಜುನಾಥ್ ರವರು ಭಾಗವಹಿಸಿ ಮಾತನಾಡಿದರು. ತಾಲೂಕು ಕಾರ್ಯದರ್ಶಿ ಮಂಡಳಿ ಸದಸ್ಯರು ಡಿ. ಮಹದೇಶ್ ರವರು ಭಾಗವಹಿಸಿ ಮಾತನಾಡಿದರು. ಕೆ ಬಾಲರಾಜ್ ಟಗರು ಭಾಗವಹಿಸಿ ಮಾತನಾಡಿದರು ತಾಲೂಕು ಕಾರ್ಯದರ್ಶಿ, ಪಿ. ಸುರೇಶ್ . ಟೌನ್ ಶಾಖೆ ಕಾರ್ಯದರ್ಶಿ. ಹನುಮಯ್ಯ. ಕಸಬಾ ಶಾಖೆ ಸದಸ್ಯರು ನಾಗರಾಜ್. ಟೌನ್ ಶಾಖೆ ಸದಸ್ಯರುಗಳಾದ ಅಬ್ಬಯ್ಯ. ನಾಗರಾಜ್. ಗುರು. ಫಯಾಜ್. ಮುದ್ದುಕೃಷ್ಣ. ಮಾರೇಶ್. ಚಂದ್ರಶೇಖರ್. ಸೈಯದ್. ಬಾಬು. ರವೀಂದ್ರ ಮುಂತಾದವರು ಭಾಗವಹಿಸಿದ್ದರು

06/22/2025

ಜಗನ್ ರ್ಯಾಲಿಯಲ್ಲಿ ಕಾರ್ಯಕರ್ತ ನ ಮೇಲೆ ಹರಿದ ಕಾರು ..

06/16/2025

ಆನೇಕಲ್ ತಾಲ್ಲೂಕಿನಲ್ಲಿ ಜಾತಿ ಜನಗಣತಿಯಲ್ಲು ರಾಜಕೀಯ.ಅಂತ ಇಂದು ತಾಲ್ಲೂಕು ಕಛೇರಿ ಆವರಣದಲ್ಲಿ ಕರ್ನಾಟಕ ರಿಪಬ್ಲಿಕ್ ಸೇನೆ ನೇತೃತ್ವದಲ್ಲಿ ಶಾಂತಿ ಯುತ ಪ್ರತಿಭಟನೆ

06/16/2025

ಆನೇಕಲ್ .ಚಂದಪುರ ಸೇರಿದಂತೆ ಸಾರ್ವಜನಿಕರಿಗೆ ತೊಂದರೆ ಆಗುವರೀತಿಯಲ್ಲಿ ಬ್ಯಾನರ್ ಆಕಿದವರ ವಿರುದ್ಧ ಸಾರ್ವಜನಿಕರು ಒಬ್ಬ ಅಧಿಕಾರಿಗಳನ್ನು ಕ್ಯಾಕರಿಸಿ ಮುಖಕ್ಕೆ ಉಗಿತಿರುವ ದೃಶ್ಯಾವಳಿಗಳನ್ನು ಸೊಶೀಯಲ್ ಮೀಡಿಯಾ ದಲ್ಲಿ ಹರಿದಾಡ್ತೀರುವುದನ್ನ ಕಾಣಬಹುದು. ಆನೇಕಲ್ ತಾಲ್ಲೂಕ್ ಸಮಾಚಾರ್ ಭಾರತೀಯ ನಾಗರೀಕಹಕ್ಕು ಸೇವಾ ಹಿತರಕ್ಷಣ ಸಮಿತಿ ರಿ ನಮ್ಮ ಆನೇಕಲ್ C Srinivas Anekal Bjp Anekal ನಮ್ಮ ಆನೇಕಲ್ | Namma Anekal Namma Bannerghatta-ನಮ್ಮ ಬನ್ನೇರುಘಟ್ಟ Chandapura Hostel Terrace in Bangalore ಮಂಟಪ ಜಿಲ್ಲಾ ಪಂಚಾಯಿತಿ ಯೂತ್ ಕಾಂಗ್ರೆಸ್ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ Anekal News Anekal Rounds Bangalore, India ಆನೇಕಲ್ My Bengaluru / ನಮ್ಮ ಬೆಂಗಳೂರು ಚಂದಪುರ

Address

528 29th A Main Road Jayanagara 9th Block Jayanagar
Las Vegas, NV
560041

Telephone

+17022526669

Website

Alerts

Be the first to know and let us send you an email when K99 Kannada News 24x7 posts news and promotions. Your email address will not be used for any other purpose, and you can unsubscribe at any time.

Share