Hubli-Dharwad Times

  • Home
  • Hubli-Dharwad Times

Hubli-Dharwad Times Namma Hubballi-Dharwad News Portal,
Get Updated Minute to Minute News on Your Fingertips...

16/02/2025
ಸಾಹಿತಿ ನವೀದ್ ಮುಲ್ಲಾ ಅವರ ಕಾವ್ಯ ಕಸ್ತೂರಿ ಕವನ ಸಂಕಲನ ಬಿಡುಗಡೆ ಮಾಡಿದ ಸಂತೋಷ ಲಾಡ್ಹುಬ್ಬಳ್ಳಿಯ ಚೇಂಬರ್ ಆಫ್ ಕಾಮರ್ಸ ನಲ್ಲಿ ನಿನ್ನೆ ಸಂಜೆ ನ...
26/11/2023

ಸಾಹಿತಿ ನವೀದ್ ಮುಲ್ಲಾ ಅವರ ಕಾವ್ಯ ಕಸ್ತೂರಿ ಕವನ ಸಂಕಲನ ಬಿಡುಗಡೆ ಮಾಡಿದ ಸಂತೋಷ ಲಾಡ್

ಹುಬ್ಬಳ್ಳಿಯ ಚೇಂಬರ್ ಆಫ್ ಕಾಮರ್ಸ ನಲ್ಲಿ ನಿನ್ನೆ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ನವೀದ್ ಮುಲ್ಲಾ ಅವರು ಬರೆದ ಕಾವ್ಯ ಕಸ್ತೂರಿ ಕವನ ಸಂಕಲನವನ್ನು ರಾಜ್ಯದ ಕಾರ್ಮಿಕ ಖಾತೆ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಂತೋಷ ಲಾಡ್ ಅವರು ತಮ್ಮ ಅಮೃತ ಹಸ್ತದಿಂದ ಬಿಡುಗಡೆ ಮಾಡಿದರು,

ಈ ಸಂದರ್ಭದಲ್ಲಿ ಉಭಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಲ್ತಾಫ್ ಹಳ್ಳೂರ,ಶ್ರೀ ಅನಿಲ್ ಪಾಟೀಲ್, ಮಾಜಿ ಸಚಿವರಾದ ಶ್ರೀ ಎ.ಎಂ.ಹಿಂಡಸಗೇರಿ,ಕಾಂಗ್ರೆಸ್ ಮುಖಂಡರಾದ ಶ್ರೀ ದೀಪಕ ಚಿಂಚೂರೆ,ಶ್ರೀ ಸತೀಶ ಮಹೆರವಾಡೆ,ಶ್ರೀ ಸದಾನಂದ ಡಂಗನವರ,ಶ್ರೀ ನಾಗರಾಜ್ ಗೌರಿ,ಶ್ರೀ ಪಾರಸಮಲ್ ಜೈನ್,ಶ್ರೀ ಶರಣಪ್ಪ ಕೊಟಗಿ,ಶ್ರೀಮತಿ ದೀಪಾ ಗೌರಿ,ಶ್ರೀ ನಾಗೇಶ ಕಲಬುರ್ಗಿ, ಕು.ಸ್ವಾತಿ ಮಳಗಿ,ಶ್ರೀ ಹನಮಂತಪ್ಪ ಬಂಕಾಪೂರ,ಶ್ರೀ ದೊಡ್ಡರಾಮಪ್ಪ ದೊಡ್ಡಮನಿ,ಶ್ರೀ ಐ.ಎಂ.ಜವಳಿ.ಶ್ರೀ ದಾನಪ್ಪ ಕಬ್ಬೇರ,ಶ್ರೀಮತಿ ಸುವರ್ಣ ಕಲ್ಲಕುಂಟ್ಲ,ಶ್ರೀ ಬಸವರಾಜ ಕಿತ್ತೂರ,ಶ್ರೀ ಅನ್ವರ ಮುಧೋಳ,ಶ್ರೀ ಅಲ್ತಾಫ್ ಕಿತ್ತೂರ,ಶ್ರೀ ಮಹೆಮೂದ್ ಕೊಳೂರ,ಶ್ರೀ ಡಾ.ಮಯೂರ ಮೋರೆ,ಶ್ರೀ ಪ್ರಕಾಶ ಕುರಹಟ್ಟಿ,ಶ್ರೀ ಇಕ್ಬಾಲ್ ನವಲೂರ,ಶ್ರೀ ಸಂದಿಲ್ ಕುಮಾರ್,ಶ್ರೀ ಶಂಕ್ರಪ್ಪ ಹರಿಜನ,ಶ್ರೀಮತಿ ತಾರಾದೇವಿ ವಾಲಿ,ಶ್ರೀಮತಿ ಅಕ್ಕಮ್ಮ ಕಂಬಳಿ,ಶ್ರೀ ರಫೀಕ ಚವ್ಹಾಣ,ಶ್ರೀ ರಾಜು ಹರಪನಹಳ್ಳಿ,ಶ್ರೀ ಮುತ್ತುರಾಜ್ ಮಾಕಡವಾಲೆ,ಶ್ರೀ ಸಮದ್ ಗುಲಬರ್ಗಾ, ಶ್ರೀ ಲತೀಫ ಶರಬತವಾಲೆ,ಶ್ರೀ ವೀರಣ್ಣ ಹಿರೇಹಾಳ,ಶ್ರೀ ವಾದಿರಾಜ್ ಕುಲಕರ್ಣಿ, ಶ್ರೀ ಅಜರ್ ಕಲಿಂ ಮರ್ಚೆಂಟ್, ಶ್ರೀ ಕುಮಾರ್ ಗೌರಕ್ಕನವರ,ಶ್ರೀ ಮಂಜೂರ ಅಥಣಿ,ಶ್ರೀ ರಮೇಶ ಅಣ್ಣ,ಶ್ರೀ ಖಾಶಿಮ್ ಕುಡಲಗಿ, ಸಿಕಂದರ್ ಹವಾಲ್ದಾರ್, ಶ್ರೀ ಮಹ್ಮದ್ ಮುಲ್ಲಾ,ಶ್ರೀ ಶಫೀ ಮುದ್ದೇಬಿಹಾಳ, ಶ್ರೀ ಇಕ್ಬಾಲ್ ಮುಲ್ಲಾ, ಶ್ರೀ ಮುಶ್ತಾಕ ಪಠಾಣ,ಶ್ರೀ ಬಾಬರ್ ಅಥಣಿ,ಶ್ರೀ ಅನ್ವರ ನದಾಫ,ಶ್ರೀ ಅಮ್ಜದ್ ಮುಲ್ಲಾ,ಶ್ರೀ ಇಫ್ತೆಖಾರ ಜವಳಿ,ಶ್ರೀ ಸಿ.ಎಸ್.ಮಹೆಬೂಬ್ ಬಾಷಾ, ಶ್ರೀ ಅಬ್ದುಲ್ ಗನಿ ವಲಿಅಹ್ಮದ್,ಶ್ರೀ ಬಸವರಾಜ್ ಬೆಣಕಲ್,ಶ್ರೀ ಸಲೀಂ ಸುಂಡಕೆ,ಶ್ರೀ ಶಾರೂಖ ಮುಲ್ಲಾ,ಶ್ರೀ ಡಾ.ಆನಂದಕುಮಾರ್ ಬಿ.ಜಿ.ಶ್ರೀ ಈಶ್ವರ ಶಿರಸಿಂಗಿ.ಶ್ರೀ ಪ್ರೇಮನಾಥ ಚಿಕ್ಕತುಂಬಳ,ಶ್ರೀ ಸುಹೇಲ್ ಪಠಾಣ,ಶ್ರೀ ನದೀಮ ಆಚಮಟ್ಟಿ,ಶ್ರೀ ದಾವಲಸಾಬ್ ನದಾಫ,ಶ್ರೀ ಸೋಮು ಯಲಿಗಾರ,ಶ್ರೀ ಶ್ರೀಧರ ನಾಯ್ಕರ, ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.

ಶಿಕ್ಷಕರ ದಿನಾಚರಣೆಯಂದೇ SSLC-PUC ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ ಸರ್ಕಾರಬೆಂಗಳೂರು: ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣ...
06/09/2023

ಶಿಕ್ಷಕರ ದಿನಾಚರಣೆಯಂದೇ SSLC-PUC ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವತ್ತ ಹೆಜ್ಜೆಯನ್ನಿಡುತ್ತಿದೆ. ಇದಲ್ಲದೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಇದರ ಭಾಗವಾಗಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ಕೊಡಲಾಗಿದೆ.

2023-24ನೇ ಶೈಕ್ಷಣಿಕ ಸಾಲಿನಿಂದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದ್ದು, ಒಂದೇ ವರ್ಷಕ್ಕೆ ಮೂರು ಪರೀಕ್ಷೆಯನ್ನು ಆಯೋಜನೆ ಮಾಡಿ ಆದೇಶಿಸಲಾಗಿದೆ.

ಈ ಮೂಲಕ ಪರೀಕ್ಷೆಯಲ್ಲಿ ಅನುತ್ತೀರ್ಣ ಆದವರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ರಾಜ್ಯ ಶಿಕ್ಷಣ ಇಲಾಖೆ ಮಾಡಿದ್ದು, ಪ್ರಮುಖ ಪರೀಕ್ಷೆಯ ನಂತರ ಎರಡು ಪೂರಕ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಿಕ್ಷಕರ ದಿನದಂದೇ ಇಂಥದ್ದೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಈಗಿನ ಹೊಸ ನಿಯಮದಂತೆ ಪೂರಕ ಪರೀಕ್ಷೆ ಎಂಬ ಪದ್ಧತಿಯನ್ನು ತೆಗೆದಿದ್ದು, ಪರೀಕ್ಷೆ 1, ಪರೀಕ್ಷೆ 2, ಪರೀಕ್ಷೆ 3 ಎಂದು ಮಾಡಲಾಗಿದೆ. ಅದರನ್ವಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ವಿಪರೀತ ಮಳೆ : ಜುಲೈ 27 ರಂದು ಧಾರವಾಡ ಜಿಲ್ಲೆಯಾದ್ಯಂತ ಶಾಲಾ, ಕಾಲೇಜುಗಳಿಗೆ ರಜೆಧಾರವಾಡ: ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯೂ (...
26/07/2023

ವಿಪರೀತ ಮಳೆ : ಜುಲೈ 27 ರಂದು ಧಾರವಾಡ ಜಿಲ್ಲೆಯಾದ್ಯಂತ ಶಾಲಾ, ಕಾಲೇಜುಗಳಿಗೆ ರಜೆ

ಧಾರವಾಡ: ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯೂ (ಜುಲೈ 27) ಧಾರವಾಡ ಜಿಲ್ಲೆಯಾದ್ಯಂತ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ರಜೆ ಘೋಷಣೆ ಮಾಡಿದ್ದಾರೆ.

ಧಾರವಾಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಸೋಮವಾರವೂ ಜಿಲ್ಲಾಧಿಕಾರಿಗಳು ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದರು. ಆದರೆ, ಮಳೆ ಇನ್ನೂ ಮುಂದುವರಿದ ಹಿನ್ನೆಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ನಾಳೆಯೂ ಒಂದು ದಿನ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರ, ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ.

23/07/2023

ನಾಳೆ ಜು.24 ರಂದು ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಒಂದು ದಿನ ರಜೆ ನೀಡಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ.

ಧಾರವಾಡ (ಕ.ವಾ) ಜು.23: ಧಾರವಾಡ ಜಿಲ್ಲೆ ಆದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವದರಿಂದ ನಾಳೆ ಜುಲೈ 24 ರಂದು ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಒಂದು ದಿನದ ರಜೆ ಘೋಷಿಸಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಇಂದು ಸಂಜೆ ಆದೇಶಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಳೆದ ಎರಡಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಕ್ಕಳ ರಕ್ಷಣೆ ಹಿತದೃಷ್ಟಿಯಿಂದ ನಾಳೆ ಒಂದು ದಿನ ಮಾತ್ರ ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದೆ.
ಈ ರಜಾ ದಿನವನ್ನು ಮುಂದಿನ ಆಗಸ್ಟ್ 5ರ ಶನಿವಾರದಂದು ಪೂರ್ಣ ದಿನ ಶಾಲೆ ನಡೆಸುವ ಮೂಲಕ ಜುಲೈ 24 ರ ರಜೆ ಹೊಂದಾಣಿಕೆ ಮಾಡಿಕೋಳ್ಳಬೇಕು. ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಜಿಲ್ಲೆಯ ಎಲ್ಲ ಶಾಲಾ ಮುಖ್ಯಸ್ಥರಿಗೆ ಮಾಹಿತಿ ನೀಡಿ, ಸೂಕ್ತ ಕ್ರಮವಹಿಸಬೇಕೆಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಇಂದು ರಾಜ್ಯ ಸರ್ಕಾರದ ಎರಡನೇ ಮಹತ್ವಾಕಾಂಕ್ಷೆಯ ಯೋಜನೆ 'ಗೃಹ ಜ್ಯೋತಿ' ಅರ್ಜಿ ಸಲ್ಲಿಕೆ ಆರಂಭಬೆಂಗಳೂರು: ಇಂದಿನಿಂದ ರಾಜ್ಯ ಸರ್ಕಾರದ ಎರಡನೇ ಮಹತ್...
18/06/2023

ಇಂದು ರಾಜ್ಯ ಸರ್ಕಾರದ ಎರಡನೇ ಮಹತ್ವಾಕಾಂಕ್ಷೆಯ ಯೋಜನೆ 'ಗೃಹ ಜ್ಯೋತಿ' ಅರ್ಜಿ ಸಲ್ಲಿಕೆ ಆರಂಭ

ಬೆಂಗಳೂರು: ಇಂದಿನಿಂದ ರಾಜ್ಯ ಸರ್ಕಾರದ ಎರಡನೇ ಮಹತ್ವಾಕಾಂಕ್ಷೆಯ ಯೋಜನೆ 'ಗೃಹ ಜ್ಯೋತಿ' ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆದರೆ ಕೆಲ ವೆಬ್ ಸೈಟ್‌ಗಳಲ್ಲಿ ಇನ್ನೂ ವಿಳಂಬವಾಗಿದ್ದು, ಬೆಸ್ಕಾಂ, ಜೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಮೆಸ್ಕಾಂನಲ್ಲಿ 3ಗಂಟೆಯ ನಂತರ ಜಾರಿಯಾಗಲಿದೆ.

ಏಕಕಾಲದಲ್ಲಿ ರಾಜ್ಯಾದ್ಯಂತ ಜಾರಿಯಾಗಬೇಕಿದ್ದ ಗೃಹ ಜ್ಯೋತಿ ಇಂದು ಬೆಳ್ಳಿಗ್ಗೆಯಿಂದ ಬೆಂಗಳೂರು 1ನಲ್ಲಿ ಓಪನ್ ಆರಂಭವಾಗಲಿದೆ. ಮಧ್ಯಾಹ್ನದ 3 ಗಂಟೆ ನಂತರ ನಾಡಕಚೇರಿ, ಗ್ರಾಮ ಪಂಚಾಯ್ತಿ, ವಿದ್ಯುತ್ ಕಚೇರಿಯಲ್ಲಿ ಓಪನ್ ಆಗುವ ಸಾಧ್ಯತೆ ಇದೆ. ಏನಾದರೂ ಸರ್ವರ್ ಸಮಸ್ಯೆ ಕಂಡು ಬಂದರೆ ಮಧ್ಯಾಹ್ನ ಮೂರು ಗಂಟೆ ‌ನಂತರ ಅರ್ಜಿ ಸಲ್ಲಿಸಬಹುದು. ಬಾಡಿಗೆ ಮನೆಯಲ್ಲಿ ಇರುವವರಿಗೂ ಹಾಗೂ ಸ್ವಂತ ಮನೆಯಲ್ಲಿ ಇರುವವರಿಗೂ ಸರಳಿ ಕರಣವನ್ನು ಇಂಧನ ಇಲಾಖೆ ಮಾಡಿದೆ.

ಆಧಾರ್ ನಂಬರ್‌ಗೆ ಮೊಬೈಲ್ ನಂಬರ್ ಲಿಂಕ್ ‌ಇರಲೇಬೇಕು. ವಿದ್ಯುತ್ ಬಿಲ್‌ ಹಾಗೂ ಆಧಾರ ಲಿಂಕ್‌ ಇರುವ ಮೊಬೈಲ್ ಕಡ್ಡಾಯ. ಈ‌ ಮೂರು ಇದ್ದರೆ‌ ಮಾತ್ರ ಅರ್ಜಿ‌ ಸಲ್ಲಿಸಬಹುದು. ಯಾವುದೇ ಕರಾರು ಪತ್ರ ಅವಶ್ಯಕತೆ ಇಲ್ಲ. ಬೆಸ್ಕಾಂ ಸ್ಥಳೀಯ ಆಫೀಸ್ ಹಾಗೂ ಬೆಂಗಳೂರು ಒನ್, ಕರ್ನಾಟಕ ಒನ್‌ ನಾಡ ಕಛೇರಿ ಹಾಗೂ ಮೊಬೈಲ್ ಮೂಲಕವು ಅರ್ಜಿ ಸಲ್ಲಿಸಬಹುದು. ಮಧ್ಯಾಹ್ನ ಮೂರು ಗಂಟೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ಪ್ರಯತ್ನ ಮಾಡಬಹುದು ಎಂದು ಇಂಧನ ಇಲಾಖೆ ತಿಳಿಸಿದೆ.

BIG BREAKING: ಮೇ 10ರಂದು ಕರ್ನಾಟಕ ವಿಧಾನ ಸಭೆಗೆ ಮತದಾನ- ಮೇ 13ಕ್ಕೆ ಫಲಿತಾಂಶನವದೆಹಲಿ: ಕರ್ನಾಟಕ ರಾಜ್ಯ ವಿಧಾನ ಸಭೆ ಚುನಾವಣೆಗೆ ದಿನಾಂಕ ನಿ...
29/03/2023

BIG BREAKING: ಮೇ 10ರಂದು ಕರ್ನಾಟಕ ವಿಧಾನ ಸಭೆಗೆ ಮತದಾನ- ಮೇ 13ಕ್ಕೆ ಫಲಿತಾಂಶ

ನವದೆಹಲಿ: ಕರ್ನಾಟಕ ರಾಜ್ಯ ವಿಧಾನ ಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 10ರಂದು ಮತದಾನ ನಡೆಯಲಿದೆ. ಮೇ 13 ಫಲಿತಾಂಶ ಹೊರಬೀಳಲಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಚುನಾವಣೆ ಆಯೋಗದ ಮುಖ್ಯ ಆಯುಕ್ತ ರಾಜೀವ್‌ಕುಮಾರ್ ರಾಜ್ಯ ಚುನಾವಣೆಗೆ ದಿನಾಂಕ‌ ಘೋಷಿಸಿದ್ದಾರೆ.

ಚುನಾವಣೆ ಪ್ರಕ್ರಿಯೆ ಆರಂಭದಿಂದ ಫಲಿತಾಂಶ ಬರುವವರೆಗೆ ಯಾವುದಕ್ಕೆ ಯಾವ ದಿನಾಂಕ ಕೊನೆ? ಯಾವ ದಿನಾಂಕದಂದು ಏನು ನಡೆಯಲಿದೆ ಎಂಬ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ.

*ಏಪ್ರಿಲ್ 13 ಕ್ಕೆ ಅಧಿಸೂಚನೆ

*ಏಪ್ರಿಲ್ 20 ನಾಮಪತ್ರ ಸಲ್ಲಿಸಲು ಕೊನೆದಿನ

*21ಕ್ಕೆ ನಾಮಪತ್ರ ಪರಿಶೀಲನೆ

*ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆ ದಿನ

*ಮೇ 10ರಂದು ಮತದಾನ

ಮೇ 13ಕ್ಕೆ ಫಲಿತಾಂಶ

ಮೇ 23ರ ಒಳಗಾಗಿ ಹೊಸ ಚುನಾಯಿತ ಸರಕಾರ ಅಸ್ತಿತ್ವಕ್ಕೆ

ಇಂದಿನಿಂದಲೇ ನೀತಿ ಸಂಹಿತೆ ಜಾರಿ

ತುಮಕೂರು ಭೀಕರ ಅಪಘಾತದಲ್ಲಿ 9 ಪ್ರಯಾಣಿಕರು ಸಾವು; ಪ್ರಧಾನಿ ಮೋದಿಯಿಂದ ಸಂತಾಪ, ಪರಿಹಾರ ಘೋಷಣೆಬೆಂಗಳೂರು: ತುಮಕೂರಲ್ಲಿ ನಡೆದ ಭೀಕರ ರಸ್ತೆ ಅಪಘಾ...
25/08/2022

ತುಮಕೂರು ಭೀಕರ ಅಪಘಾತದಲ್ಲಿ 9 ಪ್ರಯಾಣಿಕರು ಸಾವು; ಪ್ರಧಾನಿ ಮೋದಿಯಿಂದ ಸಂತಾಪ, ಪರಿಹಾರ ಘೋಷಣೆ

ಬೆಂಗಳೂರು: ತುಮಕೂರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಪರಿಹಾರವನ್ನು ಘೋಷಣೆ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕರ್ನಾಟಕದ ತುಮಕೂರಿನಲ್ಲಿ ನಡೆದ ರಸ್ತೆ ಅಪಘಾತವು ಹೃದಯ ವಿದ್ರಾವಕವಾಗಿದೆ. ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸುತ್ತೇನೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬಕ್ಕೆ ತಲಾ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್​ಆರ್​ಎಫ್) ಅಡಿಯಲ್ಲಿ 2 ಲಕ್ಷ ರೂಪಾಯಿ ಪರಿಹಾರ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

CBSE 12 ನೇ ತರಗತಿ ಫಲಿತಾಂಶ ಪ್ರಕಟನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 2022ರ 12 ನೇ ತರಗತಿಯ ಪರೀಕ್ಷೆಗಳ ಫಲಿತಾಂಶ...
22/07/2022

CBSE 12 ನೇ ತರಗತಿ ಫಲಿತಾಂಶ ಪ್ರಕಟ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 2022ರ 12 ನೇ ತರಗತಿಯ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದೆ.
ಈ ವರ್ಷ ಉತ್ತೀರ್ಣರಾದ ಶೇಕಡಾವಾರು 92.71 ಕ್ಕೆ ತಲುಪಿದೆ. ವಿದ್ಯಾರ್ಥಿಗಳು ವೆಬ್ ಸೈಟ್ ಗಳಲ್ಲಿ ಅಂಕಪಟ್ಟಿಯನ್ನು ಡೌನ್ ಲೋಡ್ ಮಾಡಬಹುದು ಎಂದು ತಿಳಿಸಲಾಗಿದೆ.

cbse.gov.in, results.cbse.nic.in ವೆಬ್ಸೈಟ್ ನಲ್ಲಿ ಫಲಿತಾಂಶವನ್ನು ರೋಲ್ ಸಂಖ್ಯೆ, ಶಾಲೆಯ ಸಂಖ್ಯೆಗಳನ್ನು ಬಳಸಿ ನೋಡಬಹುದು.
CBSE ಟರ್ಮ್ 2 ಪರೀಕ್ಷೆಯನ್ನು ಏಪ್ರಿಲ್ 26 ಮತ್ತು ಜೂನ್ 4 ರ ನಡುವೆ ನಡೆಸಲಾಗಿತ್ತು.

ನವೆಂಬರ್-ಡಿಸೆಂಬರ್ 2021 ರಲ್ಲಿ ನಡೆದ CBSE ಟರ್ಮ್ 1 ಬೋರ್ಡ್ ಪರೀಕ್ಷೆಗಳನ್ನು ಬಹು-ಆಯ್ಕೆಯ ಪ್ರಶ್ನೆಗಳಿಗಾಗಿ ನಡೆಸಲಾಯಿತು, ಆದರೆ ಏಪ್ರಿಲ್-ಮೇ 2022 ರಲ್ಲಿ ಟರ್ಮ್ 2 ಪರೀಕ್ಷೆಗಳು ವಿಶ್ಲೇಷಣಾತ್ಮಕ ಮತ್ತು ಕೇಸ್ ಆಧಾರಿತ ಪ್ರಶ್ನೆಗಳನ್ನು ಹೊಂದಿದ್ದವು ನಡೆದಿದ್ದವು.

BREAKING: ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ: ಅಧಿಕೃತ ಘೋಷಣೆನವದೆಹಲಿ: ದೇಶದ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಹುದ್ದ...
21/07/2022

BREAKING: ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ: ಅಧಿಕೃತ ಘೋಷಣೆ

ನವದೆಹಲಿ: ದೇಶದ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿದ್ದ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ.

15ನೇ ರಾಷ್ಟ್ರಪತಿ ಆಯ್ಕೆಗೆ ನಡೆದಿದ್ದ ಎಲ್ಲ ಚುನಾವಣಾ ಪ್ರಕ್ರಿಯೆಗಳು ಮುಗಿದಿದ್ದು ಮುರ್ಮು ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಜುಲೈ 18ಕ್ಕೆ ಮತದಾನ ನಡೆದಿದ್ದು ಇಂದು ಗುರುವಾರ ಬೆಳಿಗ್ಗೆ 11ಕ್ಕೆ ಮತ ಎಣಿಕೆ ಆರಂಭವಾಗಿತ್ತು. ಮುರ್ಮು ಅವರಿಗೆ 540 ಮತಗಳು ಲಭಿಸಿದ್ದು ಯುಪಿಎ ಅಭ್ಯರ್ಥಿ ಯಶವಂತ ಸಿನ್ಹಾ ಅವರಿಗೆ 208 ಮತಗಳು ಲಭಿಸಿದೆ.

ಇನ್ನೂ 2 ದಿನಗಳ ಕಾಲ ಸುರಿಯಲಿದೆ ನಿರಂತರ ಮಳೆ: ಹವಾಮಾನ ಇಲಾಖೆ ಮುನ್ಸೂಚನೆಬೆಂಗಳೂರು: ಈಗಾಗಲೇ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ರಾಜ್ಯದ ಜನ...
16/07/2022

ಇನ್ನೂ 2 ದಿನಗಳ ಕಾಲ ಸುರಿಯಲಿದೆ ನಿರಂತರ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಈಗಾಗಲೇ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ರಾಜ್ಯದ ಜನತೆ ಹೈರಾಣಾಗಿ ಹೋಗಿದ್ದಾರೆ. ಈ ನಡುವೆ ರಾಜ್ಯಾಧ್ಯಂತ ಇನ್ನೂ 2 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿರುವಂತ ರಾಜ್ಯ ಹವಾಮಾನ ಇಲಾಖೆಯು, ಅರಬ್ಬೀ ಸಮುದ್ರದಲ್ಲಿನ ಮೇಲ್ಮೈ ಸುಳಿಗಾಳಿಯ ಪರಿಣಾಮದಿಂದಾಗಿ ಮುಂದಿನ 2 ದಿನಗಳ ಕಾಲ ಭಾರೀ ಮಳೆಯಾಗಲಿದೆ. ಗಾಳಿ ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಇನ್ನೂ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಹಿನ್ನಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಅಲ್ಲದೇ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನಲ್ಲಿ ಇನ್ನೂ 2 ದಿನ ಮಳೆಯಾಗಲಿದೆ ಎಂದು ತಿಳಿಸಿದೆ.

ಉತ್ತರ ಒಳನಾಡಿನಲ್ಲಿಯೂ ಮಳೆಯಾಗುವ ಹಿನ್ನಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಲಿದೆ ಎಂಬುದಾಗಿ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ ಎಂದು ಮುನ್ಸೂಚನೆ ನೀಡಿದೆ.

ಮೇಯರ್, ಉಪಮೇಯರ್ ಚುನಾವಣೆ: ವಿಚಾರಣೆ ಮುಂದೂಡಿದ ಹೈಕೋರ್ಟ್ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ ನಡೆಸಲು ...
23/04/2022

ಮೇಯರ್, ಉಪಮೇಯರ್ ಚುನಾವಣೆ: ವಿಚಾರಣೆ ಮುಂದೂಡಿದ ಹೈಕೋರ್ಟ್

ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ ನಡೆಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಪೀಠ, ನಾಲ್ಕು ವಾರಗಳ ಕಾಲ ಮುಂದೂಡಿದೆ. ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಹಲವು ತಿಂಗಳು ಕಳೆದರೂ ಮೇಯರ್, ಉಪಮೇಯರ್ ಚುನಾವಣೆಯನ್ನು ಸರ್ಕಾರ ನಡೆಸುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಕಾಂಗ್ರೆಸ್‌ನ ಪಾಲಿಕೆ ಸದಸ್ಯ ಶಂಭುಗೌಡ ಸಾಲಮನಿ ಸೇರಿದಂತೆ ಇತರರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ಮಾಡಿದ ಹೈಕೋರ್ಟ್ ಏಕಸದಸ್ಯ ಪೀಠ, ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಇದೆ ಎಂದು ಅಭಿಪ್ರಾಯಪಟ್ಟು, ನಾಲ್ಕುವಾರ ವಿಚಾರಣೆ ಮುಂದೂಡಿದೆ.

Address


Website

Alerts

Be the first to know and let us send you an email when Hubli-Dharwad Times posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share