21/08/2025
ಶಾಸಕ ರಮೇಶ್ ಜಾರಕಿಹೊಳಿ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ!
ತರಕಾರಿ ಮಾರುಕಟ್ಟೆಯಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ!
ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ!
***********************************************
ಘಟಪ್ರಭಾ: ಪಕ್ಷ ವೇದ ಮರೆತು ಎಲ್ಲರೂ ಕೂಡಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಗುರುವಾರದಂದು ಸ್ಥಳಿಯ ಪುರಸಭೆ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಸ್ಥಳಗಳಲ್ಲಿ ಸಿ.ಸಿ, ಕ್ಯಾಮರಾ, ಇಂದಿರಾ ಕ್ಯಾಂಟಿನ್ ಉದ್ಘಾಟನೆ ಹಾಗೂ ಮೃತ್ಯುಂಜಯ ಸರ್ಕಲದಿಂದ ಮಲ್ಲಾಪೂರ ಪಿ.ಜಿ.ಯ ಕಾಳಿಕಾ ದೇವಿ ದೇವಸ್ಥಾನ ವರೆಗಿನ ಮುಖ್ಯ ರಸ್ತೆಯ ನವೀಕರಣ ಕಾರ್ಯಕ್ರಮದ ಅಡಿಗಲ್ಲು ಸಮಾರಂಭವನ್ನು ನೆರವೇರಿಸಿ ಮಾತನಾಡಿದ ಅವರು, ಅಸಂಘಟಿತ ಕಾರ್ಮಿಕರು, ಬಡ ಜನರಿಗೆ ಇಂದಿರಾ ಕ್ಯಾಂಟಿನ್ ವರದಾನವಾಗಿದ್ದು, ಕಡಿಮೆ ದರದಲ್ಲಿ ಉಪಹಾರ ಮತ್ತು ಊಟದ ಸೌಲಭ್ಯಗಳನ್ನು ಹೊಂದಿರುವ ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ರಮೇಶ ಜಾರಕಿಹೊಳಿ ಅವರು ಸಾರ್ವಜನಿಕರಿಗೆ ಕರೆ ನೀಡಿದರು.
ಕಡಿಮೆ ದರದಲ್ಲಿ ಬೆಳಗಿನ ಉಪಹಾರ ಮತ್ತು ಮದ್ಯಾಹ್ನ ಭೋಜನವು ಇದರಲ್ಲಿ ಸಿಗುತ್ತದೆ. ಕಡು ಬಡವರು, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಮಹಿಳೆಯರು ಇಂದಿರಾ ಕ್ಯಾಂಟಿನ್ ಪ್ರಯೋಜನ ಪಡೆದುಕೊಳ್ಳಬೇಕು. ಕೇವಲ ೫ ರೂ ನೀಡಿದರೆ ಉಪಹಾರ ಮತ್ತು ೧೦ ರೂ. ನೀಡಿದರೆ ಊಟವು ಕಡಿಮೆ ದರದಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದ್ದು, ಗುಣಮಟ್ಟದ ಆಹಾರವು ದೊರೆಯಲಿದೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಪುರಸಭೆಯಿಂದ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಸತ್ಕರಿಸಲಾಯಿತು. ನಂತರ ಶಾಸಕರು ಇಂದಿರಾ ಕ್ಯಾಂಟಿನ್ ದಲ್ಲಿ ತಯಾರಿಸಿದ ತಿಂಡಿ ತಿನಿಸುಗಳನ್ನು ಪರೀಕ್ಷಿಸಿದರು. ನಂತರ ಸನ್ ೨೦೨೩-೨೪ ನೇ ಸಾಲಿನ ಎಸ್.ಎಸ್.ಎಫ್.ಸಿ ಮುಕ್ತನಿಧಿ ಅನುದಾನದ ಇತರೆ ಬಡ ಜನರ ಯೋಜನೆಯಡಿ ಬಿ.ಇ/ ಎಂ.ಬಿ.ಬಿ.ಎಸ್ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪಟಾಪಗಳನ್ನು ವಿತರಿಸಲಾಯಿತು. ಘಟಪ್ರಭಾ ಪುರಸಭೆ ವ್ಯಾಪ್ತಿಯ ವಾರ್ಡ ನಂ.೭ರಲ್ಲಿ ಸಯ್ಯದ ಜಿಂದನ್ನವರ ಮನೆಯಿಂದ ಗೌಸಖಾನ ಕಿತ್ತೂರಕರ ರವರ ಮನೆಯವರೆಗೆ ಸಿ.ಸಿ ರಸ್ತೆಗೆ ಭೂಮಿ ಪೂಜೆ ಕಾರ್ಯಕ್ರಮ ಜರುಗಿತು.
ಬಹು ದಿನಗಳ ಬೇಡಿಕೆಯಾದ ಘಟಪ್ರಭಾ ಮುಖ್ಯ ರಸ್ಥೆಯು ೧೦-೧೫ ವರ್ಷಗಳ ಹಿಂದೆ ಮಾಡಲಾಗಿತ್ತು. ಇಲ್ಲಿಯ ವರೆಗೆ ರಿಪೇರಿ ಮಾಡುತ್ತ ಬಂದಿದ್ದು, ಈಗ ಈ ರಸ್ತೆಗೆ ನವೀಕರಣದ ಭಾಗ್ಯ ಲಬ್ಯವಾಗಲಿದೆ. ಪುರಸಭೆಯ ಕೇಲವೂಂದು ಸ್ಥಳದಲ್ಲಿ ಕಿಸೆಗಳ್ಳತನ ಹೆಚ್ಚಾಗುತ್ತಿದ್ದು ಅದನ್ನು ತಡೆಯಲು ಆರು ಕಡೆ ಅಳವಡಿಸಲಾದ ಸಿ.ಸಿ.ಕ್ಯಾಮರಾಗಳನ್ನು ಉದ್ಘಾಟಿಸಲಾಯಿತು.
ಪಸಂದರ್ಭದಲ್ಲಿ ಟಿ.ಆರ್. ಕಾಗಲ, ಮುಖ್ಯಾಧಿಕಾರಿ ಶ್ರೀಮತಿ ಎಂ.ಎಸ್ ಪಾಟೀಲ, ಹಿರಿಯರಾದ ಡಿ. ಎಂ. ದಳವಾಯಿ, ರಾಮಣ್ಣ ಹುಕ್ಕೇರಿ, ಈಶ್ವರ ಮಟಗಾರ, ಅರವಿಂದ ಬಡಕುಂದ್ರಿ, ಜಿ.ಎಸ್. ರಜಪೂತ, ಮುಸ್ಲಿಂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.