city_times_express

  • Home
  • city_times_express

city_times_express Contact information, map and directions, contact form, opening hours, services, ratings, photos, videos and announcements from city_times_express, Media/News Company, .

*’ಪೆದ್ದಿ’ ಅವತಾರ ತಾಳಿದ ರಾಮ್ ಚರಣ್...**ರಾಮ್ ಚರಣ್-ಶಿವಣ್ಣ ನಟಿಸುತ್ತಿರುವ ಚಿತ್ರಕ್ಕೆ ಪೆದ್ದಿ ಟೈಟಲ್ ಫಿಕ್ಸ್...ಮಾಸ್ ಲುಕ್ ನಲ್ಲಿ ಚೆರ್ರಿ...
28/03/2025

*’ಪೆದ್ದಿ’ ಅವತಾರ ತಾಳಿದ ರಾಮ್ ಚರಣ್...*

*ರಾಮ್ ಚರಣ್-ಶಿವಣ್ಣ ನಟಿಸುತ್ತಿರುವ ಚಿತ್ರಕ್ಕೆ ಪೆದ್ದಿ ಟೈಟಲ್ ಫಿಕ್ಸ್...ಮಾಸ್ ಲುಕ್ ನಲ್ಲಿ ಚೆರ್ರಿ ಅಬ್ಬರ*

ಗ್ಲೋಬಲ್ ಸ್ಟಾರ್ ರಾಮ್ ಚರಣ್ ಹೊಸ ಅವತಾರ ತಾಳಿದ್ದಾರೆ. ಅವರ ಜನ್ಮದಿನದ ಅಂಗವಾಗಿ RC16 ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಬುಚಿ ಬಾಬು ನಿರ್ದೇಶನದ ಈ ಚಿತ್ರದಲ್ಲಿ ರಾಮ್‌ಚರಣ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ.

ರಾಮ್‌ ಚರಣ್‌ ಹೊಸ ಚಿತ್ರಕ್ಕೆ ಪೆದ್ದಿ ಎಂಬ ವಿಭಿನ್ನ ಶೀರ್ಷಿಕೆ ಇಡಲಾಗಿದೆ. ಪೆದ್ದಿ ಚಿತ್ರದ ಎರಡು ಪೋಸ್ಟರ್‌ಗಳು ಬಿಡುಗಡೆ ಆಗಿವೆ. ಒಂದರಲ್ಲಿ ಬೀಡಿ ಸೇದುತ್ತಿದ್ದರೆ, ಇನ್ನೊಂದರಲ್ಲಿ ಕೈಲ್ಲಿ ಬ್ಯಾಟ್‌ ಹಿಡಿದು ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.

ಪೆದ್ದಿಯಲ್ಲಿ ರಾಮ್ ಚರಣ್ ಗೆ ಜೋಡಿಯಾಗಿ ಜಾನ್ವಿ ಕಪೂರ್ ಅಭಿನಯಿಸುತ್ತಿದ್ದು, ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್, ಜಗಪತಿ ಬಾಬು, ದಿವ್ಯೆಂದು ಶರ್ಮಾ ತಾರಾ ಬಳಗದಲ್ಲಿದ್ದಾರೆ. ಮೈತ್ರಿ ಮೂವೀ ಮೇಕರ್ಸ್, ಸುಕುಮಾರ್ ರೈಟಿಂಗ್ ಹಾಗೂ ವೃದ್ಧಿ ಸಿನಿಮಾಸ್ ಚಿತ್ರ ತಯಾರಾಗುತ್ತಿದ್ದು, ಎಆರ್ ರೆಹಮಾನ್ ಸಂಗೀತ, ನವೀನ್ ನೂಲಿ‌ ಸಂಕಲನ, ಆರ್ ರತ್ನವೇಲು ಛಾಯಾಗ್ರಹಣ ಚಿತ್ರಕ್ಕಿದೆ.


50th happy birthday to our one & only power star   sir 💐 productions thank you so much for the Appu movie rerelease on o...
16/03/2025

50th happy birthday to our one & only power star sir 💐

productions thank you so much for the Appu movie rerelease on occasion of our loved Puneet sir 50th birthday 🎁

*ರಾಕ್ ಸ್ಟಾರ್ DSP ರಾಕಿಂಗ್ ಪರ್ಫಾಮೆನ್ಸ್ ಗೆ ಸಿಲಿಕಾನ್ ಸಿಟಿ‌ಮಂದಿ ಫುಲ್ ಖುಷ್...ದೇವಿಶ್ರೀ ಪ್ರಸಾದ್ ಲೈಫ್ ಕಾನ್ಸರ್ಟ್ ಗೆ ಸ್ಯಾಂಡಲ್ ವುಡ್ ...
16/03/2025

*ರಾಕ್ ಸ್ಟಾರ್ DSP ರಾಕಿಂಗ್ ಪರ್ಫಾಮೆನ್ಸ್ ಗೆ ಸಿಲಿಕಾನ್ ಸಿಟಿ‌ಮಂದಿ ಫುಲ್ ಖುಷ್...ದೇವಿಶ್ರೀ ಪ್ರಸಾದ್ ಲೈಫ್ ಕಾನ್ಸರ್ಟ್ ಗೆ ಸ್ಯಾಂಡಲ್ ವುಡ್ ಸಾಥ್*

*ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಜರುಗಿದ ದೇವಿ ಶ್ರೀ ಪ್ರಸಾದ್ ಮ್ಯೂಸಿಕ್ ಹಬ್ಬ...ಶಿವಣ್ಣ, ಕಿಚ್ಚ ಸೇರಿ ಹಲವರು ಭಾಗಿ*

ರಾಕ್ ಸ್ಟಾರ್ ದೇವಿ ಶ್ರೀ ಪ್ರಸಾದ್..ತೆಲುಗು ಚಿತ್ರರಂಗದ ಟ್ರೆಂಡಿಂಗ್ ಮ್ಯೂಸಿಕ್‌ ಡೈರೆಕ್ಟರ್. ಆರ್ಯ’, ‘ಬನ್ನಿ, ‘ಆರ್ಯ 2’, ‘ಜುಲಾಯಿ’, ‘ಇದ್ದಿರಮ್ಮಾಯಿಲತೋ’, ‘ಸನ್‌ ಆಫ್ ಸತ್ಯಮೂರ್ತಿ’, ರಂಗಸ್ಥಳಂ, ಇತ್ತೀಚಿಗೆ ಬಂದ ಪುಷ್ಪ ಸರಣಿ ಚಿತ್ರಗಳಿಗೆ ಸಂಗೀತ ಒದಗಿಸಿರುವ DSP, ಮೊದಲ ಬಾರಿಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲೈವ್ ಕಾನ್ಸರ್ಟ್ ನಡೆಸಿದರು. ನಗರದ ಮಾದವರ ಬಳಿಕ ನೈಸ್ ಗ್ರೌಂಡ್ ನಲ್ಲಿ ನಡೆದ ಅದ್ಧೂರಿ ಸಂಗೀತ ಸಂಜೆಯಲ್ಲಿ ಸಿಲಿಕಾನ್ ಮಂದಿ ಭಾಗಿಯಾಗಿ, ಡಿಎಸ್ ಪಿ ರಾಕಿಂಗ್ ಮ್ಯೂಸಿಕ್ ಗೆ ತಲೆದೂಗಿದ್ದಾರೆ. ಇಂಡಿಯನ್ ಮೈಕಲ್ ಜಾಕ್ಸನ್ ಖ್ಯಾತಿಯ ಪ್ರಭುದೇವ, ಖ್ಯಾತ ಡ್ಯಾನ್ಸ್ ಕೊರಿಯೋಗ್ರಫ್ ಗಣೇಶ್ ಆಚಾರ್ಯ ಚಿಂದಿ ಡ್ಯಾನ್ಸಿಂಗ್ ಸ್ಟೆಪ್ಸ್ ಗೆ ಜನ ಹುಚ್ಚೆದ್ದು ಕುಣಿದ್ದರು.

ಬಹಳ ಅಚ್ಚುಕಟ್ಟಾಗಿ ನಡೆದ ಲೈವ್ ಕಾನ್ಸರ್ಟ್ ನಲ್ಲಿ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಭಾಗಿಯಾಗಿದ್ದು, ವಿಶೇಷವಾಗಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಪ್ರಜ್ವಲ್ ದೇವರಾಜ್ ದಂಪತಿ, ರೋರಿಂಗ್ ಸ್ಟಾರ್ ಶ್ರೀಮುರಳಿ, ಅಶ್ವಿನಿ ಪುನೀತ್ ರಾಜ್ ಕುಮಾರ್, ನಿರ್ದೇಶಕರಾದ ತರುಣ್ ಸುಧೀರ್, ಪವನ್ ಒಡೆಯರ್, ಸಂಗೀತ ನಿರ್ದೇಶಕರಾದ ಹರಿಕೃಷ್ಣ, ಗುರುಕಿರಣ್, ಜೂಡಾ ಸ್ಯಾಂಡಿ, ಪೂರ್ಣ ಚಂದ್ರ ತೇಜಸ್ವಿ, ನಟಿ ಮಾನ್ವಿತಾ ಕಾಮತ್, ಆಲ್ ಒಕೆ, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ವೆಂಕಟ್ ಕೊನಂಕಿ, ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಸೇರಿದಂತೆ ಹಲವರು ಭಾಗಿಯಾಗಿ, ದೇವಿ ಶ್ರೀ ಪ್ರಸಾದ್ ಸಂಗೀತಕ್ಕೆ ಚಪ್ಪಾಳೆ ತಟ್ಟಿದರು.


*ಫೆ.15ಕ್ಕೆ ಜೀ ಕನ್ನಡ ಹಾಗೂ ಜೀ5 ಒಟಿಟಿಯಲ್ಲಿ ಕಿಚ್ಚನ ಮ್ಯಾಕ್ಸ್ ಸಿನಿಮಾ ಸ್ಟ್ರೀಮಿಂಗ್**ಒಂದೇ ದಿನ ಟಿವಿ ಹಾಗೂ ಒಟಿಟಿಗೆ ಎಂಟ್ರಿ ಕೊಡ್ತಿದೆ ಕ...
13/02/2025

*ಫೆ.15ಕ್ಕೆ ಜೀ ಕನ್ನಡ ಹಾಗೂ ಜೀ5 ಒಟಿಟಿಯಲ್ಲಿ ಕಿಚ್ಚನ ಮ್ಯಾಕ್ಸ್ ಸಿನಿಮಾ ಸ್ಟ್ರೀಮಿಂಗ್*
*ಒಂದೇ ದಿನ ಟಿವಿ ಹಾಗೂ ಒಟಿಟಿಗೆ ಎಂಟ್ರಿ ಕೊಡ್ತಿದೆ ಕಿಚ್ಚನ ಮ್ಯಾಕ್ಸ್..ಎಲ್ಲಿ ಯಾವಾಗ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್*
*ಒಟಿಟಿಯಲ್ಲಿ ಮ್ಯಾಕ್ಸಿಮ್ ಎಂಟರ್ ಟೈನ್ಮೆಂಟ್ ಗೆ ರೆಡಿ ‘ಮ್ಯಾಕ್ಸ್’..ಎಲ್ಲಿ ಯಾವಾಗ ಸ್ಟ್ರೀಮಿಂಗ್ ಆಗಲಿದೆ ಕಿಚ್ಚನ ಸಿನಿಮಾ*?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬ್ಲಾಕ್ ಬಸ್ಟರ್ ಮ್ಯಾಕ್ಸ್ ಸಿನಿಮಾ ಒಟಿಟಿ ಎಂಟ್ರಿಗೆ ದಿನಾಂಕ ನಿಗದಿಯಾಗಿದೆ. ಬರೀ ಒಟಿಟಿ ಮಾತ್ರವಲ್ಲ ಟಿವಿಯಲ್ಲಿಯೂ ಬರ್ತಿದೆ ಮ್ಯಾಕ್ಸ್. ತಮಿಳಿನ ವಿಜಯ್ ಕಾರ್ತಿಕೇಯನ್ ನಿರ್ದೇಶನದ ಈ ಚಿತ್ರ ಕನ್ನಡ ಮಾತ್ರವಲ್ಲದೇ, ತೆಲುಗು-ಭಾಷೆಯಲ್ಲೂ ರಿಲೀಸ್ ಆಗಿತ್ತು. ಮ್ಯಾಕ್ಸ್ ಒಟಿಟಿ ಬಿಡುಗಡೆಗಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಒಟಿಟಿ ಜೊತೆಗೆ ಟಿವಿಯಲ್ಲಿ ಒಂದೇ ದಿನ ಕಿಚ್ಚ ಮ್ಯಾಕ್ಸ್ ಮೆರವಣಿಗೆ ಹೊರಡುತ್ತಿದೆ.

ಮ್ಯಾಕ್ಸ್ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಇದೇ ತಿಂಗಳ 15ರಂದು ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಮ್ಯಾಕ್ಸ್ ಚಿತ್ರ ಬಿಡುಗಡೆಗೂ ಮುನ್ನವೇ ಜೀ ವಾಹಿನಿ ಸಿನಿಮಾದ ಹಕ್ಕುಗಳನ್ನು ಖರೀದಿ ಮಾಡಿತ್ತು. ಮ್ಯಾಕ್ಸ್ ಸಿನಿಮಾವನ್ನು ಒಟಿಟಿಯಲ್ಲಿ ನೋಡಲು ಪ್ರೇಕ್ಷಕರು ಕಾಯುತ್ತಿದ್ದರು. ಅದರಂತೆ ಚಿತ್ರತಂಡ ಫೆಬ್ರವರಿ 15ಕ್ಕೆ ಜೀ5 ಒಟಿಟಿ ಜೊತೆಗೆ ಟಿವಿಯಲ್ಲಿಯೂ ಪ್ರಸಾರ ಮಾಡುತ್ತಿದೆ. ಮ್ಯಾಕ್ಸ್ ಸಿನಿಮಾವನ್ನು ಜೀಕನ್ನಡದಲ್ಲಿ ಫೆ. 15ಕ್ಕೆ ರಾತ್ರಿ 7.50ಕ್ಕೆ ಪ್ರಸಾರವಾಗ್ತಿದ್ದು, ಅದೇ ಸಮಯದಲ್ಲಿಯೂ ಜೀ5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ,.

ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಪಾತ್ರದ ಹೆಸರು ಮ್ಯಾಕ್ಸ್ ಅಲಿಯಾಸ್ ಅರ್ಜುನ್ ಮಹಾಕ್ಷಯ್. ಒಳ್ಳೇ ಕೆಲಸ ಮಾಡುತ್ತಿದ್ದರೂ ಪದೇ ಪದೇ ಸಸ್ಪೆಂಡ್ ಶಿಕ್ಷೆ ಅನುಭಸಿರುವ ಪೊಲೀಸ್ ಅಧಿಕಾರಿ. ಅಮಾನತಿನಲ್ಲಿದ್ದ ಅರ್ಜುನ್ ಮಹಾಕ್ಷಯ್ ಅವರನ್ನು ಹೊಸ ಪೊಲೀಸ್‌ ಸ್ಟೇಷನ್‌ಗೆ ವರ್ಗಾವಣೆ ಮಾಡಲಾಗುತ್ತೆ. ಆದರೆ, ಅರ್ಜುನ್ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳುವ ಹಿಂದಿನ ರಾತ್ರಿಯೇ ಒಂದಿಷ್ಟು ಅವಘಡಗಳು ನಡೆಯುತ್ತವೆ. ಹೀಗಾಗಿ, ಮಾರನೇ ದಿನ ಕೆಲಸಕ್ಕೆ ಜಾಯಿನ್ ಆಗಬೇಕಿದ್ದ ಮ್ಯಾಕ್ಸ್ ಹಿಂದಿನ ರಾತ್ರಿಯಿಂದಲೇ ಕಾರ್ಯೋನ್ಮುಖರಾಗುತ್ತಾರೆ. ಆ ಘಟನೆ ಏನು? ಈ ಪ್ರಕರಣವನ್ನು ಮ್ಯಾಕ್ಸ್ ಹೇಗೆ ತೆಗೆದುಕೊಂಡು ಹೋಗುತ್ತಾನೆ ಎಂಬುದೇ ಸಿನಿಮಾ ಕಥೆ.

‘ಮ್ಯಾಕ್ಸ್’ ಚಿತ್ರವನ್ನು ತಮಿಳಿನ ಕಲೈಪುಲಿ ಎಸ್ ಧಾನು ಅವರು ನಿರ್ಮಾಣ ಮಾಡಿದ್ದರು. ಈ ಚಿತ್ರದಲ್ಲಿ ಸುದೀಪ್ ಜೊತೆಗೆ ವರಲಕ್ಷ್ಮೀ ಶರತ್ ಕುಮಾರ್, ‘ಉಗ್ರಂ’ ಮಂಜು, ಸುಕೃತಾ ವಾಗ್ಳೆ, ಸಂಯುಕ್ತಾ ಹೊರನಾಡು, ವಿಜಯ್ ಚೆಂಡೂರು, ಶರತ್ ಲೋಹಿತಾಶ್ವ, ಸುಧಾ ಬೆಳವಾಡಿ, ತೆಲುಗು ನಟ ಸುನೀಲ್ ಮುಂತಾದವರು ನಟಿಸಿದ್ದರು. 2024ರ ಡಿಸೆಂಬರ್ 25ರಂದು ರಿಲೀಸ್ ಆಗಿದ್ದ ಮ್ಯಾಕ್ಸ್ ಥಿಯೇಟರ್ ನಲ್ಲಿ ಭರ್ಜರಿ ಸೌಂಡ್ ಮಾಡಿತ್ತು. ಬಾಕ್ಸಾಫೀಸ್ ನಲ್ಲಿಯೂ ಒಳ್ಳೆ ಕಲೆಕ್ಷನ್ ಮಾಡಿತ್ತು.




*ಸೂಪರ್ ಸ್ಟಾರ್ ವಿದ್ಯಾಳಾಗಿ ‘ವಿದ್ಯಾಪತಿ’ ಬ್ಯೂಟಿ ಮಲೈಕಾ ಎಂಟ್ರಿ**’ವಿದ್ಯಾಪತಿ’ಗೆ ಜೋಡಿ ಸೂಪರ್ ಸ್ಟಾರ್ ವಿದ್ಯಾ...ಮಲೈಕಾ ವಸೂಪಲ್ ಬರ್ತಡೇಗೆ...
12/02/2025

*ಸೂಪರ್ ಸ್ಟಾರ್ ವಿದ್ಯಾಳಾಗಿ ‘ವಿದ್ಯಾಪತಿ’ ಬ್ಯೂಟಿ ಮಲೈಕಾ ಎಂಟ್ರಿ*

*’ವಿದ್ಯಾಪತಿ’ಗೆ ಜೋಡಿ ಸೂಪರ್ ಸ್ಟಾರ್ ವಿದ್ಯಾ...ಮಲೈಕಾ ವಸೂಪಲ್ ಬರ್ತಡೇಗೆ ಫಸ್ಟ್ ಗ್ಲಿಂಪ್ಸ್ ರಿಲೀಸ್*

*ಮಲೈಕಾ ಬರ್ತಡೇಗೆ ‘ವಿದ್ಯಾಪತಿ’ ಫಸ್ಟ್ ಝಲಕ್ ರಿಲೀಸ್...ಸೂಪರ್ ಸ್ಟಾರ್ ವಿದ್ಯಾ ನಾಗಭೂಷಣ್ ಗೆ ಜೋಡಿ*

‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಎಡವಟ್ಟು ರಾಣಿ ಲೀಲಾ ಆಗಿ ನಟಿಸಿ ಸೈ ಎನಿಸಿಕೊಂಡ ಬೆಡಗಿ ಮಲೈಕಾ ವಸುಪಾಲ್ ಉಪಾಧ್ಯಕ್ಷ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಬಲಗಾಲಿಟ್ಟಿದ್ದು ಗೊತ್ತೇ ಇದೆ. ಚಿಕ್ಕಣ್ಣನಿಗೆ ಜೋಡಿಯಾಗಿ ಮಿಂಚಿದ್ದ ಬ್ಯೂಟಿ ಈಗ ವಿದ್ಯಾಪತಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇಂದು ಮಲೈಕಾ ವಸುಪಾಲ್ ಜನ್ಮದಿನ. ಅವರ ಹುಟ್ಟುಹಬ್ಬದ ವಿಶೇಷವಾಗಿ ವಿದ್ಯಾಪತಿ ಬಳಗದಿಂದ ಸ್ಪೆಷಲ್ ಗಿಫ್ಟ್ ಸಿಕ್ಕಿದೆ.

ವಿದ್ಯಾಪತಿ ಸಿನಿಮಾದಲ್ಲಿ ಮಲೈಕಾ ಅವರ ಮೊದಲ ಝಲಕ್ ಅನಾವರಣ ಮಾಡಲಾಗಿದೆ. ಸಿನಿಮಾದಲ್ಲಿನ ಸಿನಿಮಾ ನಾಯಕಿಯಾಗಿ ಮಲೈಕಾ ಅಭಿನಯಿಸುತ್ತಿದ್ದಾರೆ. ಅಂದರೆ ಸೂಪರ್ ಸ್ಟಾರ್ ವಿದ್ಯಾ ಪಾತ್ರದಲ್ಲಿ ಉಪಾಧ್ಯಕ್ಷ ಸುಂದರಿ ಬಣ್ಣ ಹಚ್ಚಿದ್ದಾರೆ. ಕರಾಟೆ ಗೆಟಪ್ ತೊಟ್ಟಿರುವ ನಾಯಕ ನಾಗಭೂಷಣ್ ಗೆ ಮಲೈಕಾ ವಸುಪಾಲ್ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ. ನಾಗಭೂಷಣ್ ಎದುರು ಗರುಡ ರಾಮ್ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಕರಾಟೆ ಮಾಸ್ಟರ್ ಅವತಾರದಲ್ಲಿ ರಂಗಾಯಣ ರಘು ನಟಿಸುತ್ತಿರುವುದು ಚಿತ್ರದ ಮತ್ತೊಂದು ವಿಶೇಷ.

ಆಕ್ಷನ್, ಕಾಮಿಡಿ ಕತೆ ಹೊಂದಿರುವ ಈ ಚಿತ್ರವನ್ನು ಇಶಾಂ ಹಾಗೂ ಹಸೀಂ ಖಾನ್ ನಿರ್ದೇಶನ ಮಾಡುತ್ತಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಕೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆಕ್ಷನ್ ಚಿತ್ರಕ್ಕಿದೆ. ಡಾಲಿ ಪಿಕ್ಚರ್ಸ್ ಅವರ ಬಹುನಿರೀಕ್ಷಿತ ಸಿನಿಮಾವಾಗಿರುವ ವಿದ್ಯಾಪತಿ ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರಲಿದೆ.


*ಯಶಸ್ವಿಯಾಗಿ 25 ದಿನ ಪೂರೈಸಿದ ‘ಅಮರನ್’....ಶಿವ ಕಾರ್ತಿಕೇಯನ್ ಸಿನಿಮಾಗೆ ಭರಪೂರ ಮೆಚ್ಚುಗೆ*ಮೇಜರ್ ಮುಕುಂದ್ ವರದರಾಜನ್ ಜೀವನಾಧರಿತ ‘ಅಮರನ್’ ಸ...
23/11/2024

*ಯಶಸ್ವಿಯಾಗಿ 25 ದಿನ ಪೂರೈಸಿದ ‘ಅಮರನ್’....ಶಿವ ಕಾರ್ತಿಕೇಯನ್ ಸಿನಿಮಾಗೆ ಭರಪೂರ ಮೆಚ್ಚುಗೆ*

ಮೇಜರ್ ಮುಕುಂದ್ ವರದರಾಜನ್ ಜೀವನಾಧರಿತ ‘ಅಮರನ್’ ಸಿನಿಮಾಗೆ ಪ್ರೇಕ್ಷರು ಫಿದಾ ಆಗಿದ್ದಾರೆ. ಶಿವ ಕಾರ್ತಿಕೇಯನ್ ಚಿತ್ರದಲ್ಲಿ ವರದರಾಜನ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪತ್ನಿ ರೆಬೆಕಾ ಪಾತ್ರದಲ್ಲಿ ಸಾಯಿ ಪಲ್ಲವಿ ಮಿಂಚಿದ್ದಾರೆ. ಇವರಿಬ್ಬರ ನಟನೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಕ್ಸಾಫೀಸ್ ನಲ್ಲಿ 300 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡು ಅಮರನ್ ದಾಖಲೆ ಬರೆದಿದೆ.

ರಾಜ್‌ಕುಮಾರ್ ಪೆರಿಯಸ್ವಾಮಿ ಎಂಬುವವರು ‘ಅಮರನ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಮಲ್ ಹಾಸನ್ ಸಹ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಭುವನ್ ಅರೋರ, ರಾಹುಲ್ ಬೋಸ್, ಶ್ಯಾಮ್ ಪ್ರಸಾದ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕಾಗಿ ದೇಹ ದಂಡಿಸಿ ಬಹಳ ಖಡಕ್ ಲುಕ್‌ನಲ್ಲಿ ಶಿವಕಾರ್ತಿಕೇಯನ್ ನಟಿಸಿದ್ದಾರೆ.

ನೈಜ ಕಥೆಯಾಗಿರುವ ʼಅಮರನ್‌ʼ ಸಿನೆಮಾವನ್ನು ಅತ್ಯದ್ಭುತವಾಗಿ ನಿರ್ಮಿಸಲಾಗಿದೆ. ಒಬ್ಬ ಸೈನಿಕ ಹಾಗೂ ಸೈನ್ಯದ ಗೌರವಕ್ಕೆ ಕಿಂಚಿತ್‌ ಧಕ್ಕೆ ಬರೆದಂತೆ ಸಿನೆಮಾವನ್ನು‌ ಕಟ್ಟಿಕೊಡಲಾಗಿದೆ. ಕಳೆದ ಅಕ್ಟೋಬರ್ ತಿಂಗಳ 31ರಂದು ಬಿಡುಗಡೆಯಾದ ಚಿತ್ರವೀಗ ಯಶಸ್ವಿಯಾಗಿ 25 ದಿನ ಪೂರೈಸಿದೆ. ಎಲ್ಲಾ ವರ್ಗದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಶಿವಕಾರ್ತಿಕೇಯನ್ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಇದಾಗಿದೆ. ಅಮರನ್ ಸಿನಿಮಾದಲ್ಲಿ ಭಾವನೆಗಳು ಮತ್ತು ಆಕ್ಷನ್ ಅಂಶಗಳೇ ಹೈಲೈಟ್‌. ಈ ಚಿತ್ರವು ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವ ಸೈನಿಕರ ಕುರಿತಾದ ಚಿತ್ರವಾಗಿದೆ. ವೃತ್ತಿಪರ ಜವಾಬ್ದಾರಿಗಳಿಂದಾಗಿ ತಮ್ಮ ಕುಟುಂಬಗಳಿಂದ ದೂರವಿರುವ ಸೈನಿಕರು ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವಾಗ, ಎದುರಿಸುತ್ತಿರುವ ಸವಾಲುಗಳನ್ನು ಈ ಸಿನಿಮಾದಲ್ಲಿ ತೋರಿಸಿದ್ದಾರೆ.

ಅಮರನ್ ಚಿತ್ರದ ಭಾರತೀಯ ಆವೃತ್ತಿಯ ಒಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ ಪಡೆದುಕೊಂಡಿದೆ. ಅಮರನ್ ಡಿಸೆಂಬರ್ 5 ಅಥವಾ 10 ರಿಂದ ಸ್ಟ್ರೀಮ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದರೆ‌ ಚಿತ್ರಮಂದಿರಗಳಲ್ಲಿ ಅಮರನ್ ಗೆ ಉತ್ತಮ‌ ಪ್ರತಿಕ್ರಿಯೆ ಸಿಗುತ್ತಿರುವ ಹಿನ್ನೆಲೆ ಇನ್ನೂ ತಡವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡುವಂತೆ ಥಿಯೇಟರ್ ಮಾಲೀಕರು ಬೇಡಿಕೆ ಇಡುತ್ತಿದ್ದಾರೆ.
senthamarai



*ಜೀಬ್ರಾಗೆ ‘ಭೀಮ’ ಬೆಂಬಲ..ಡಾಲಿ ಧನಂಜಯ್-ಸತ್ಯದೇವ್ ಸಿನಿಮಾಗೆ ದುನಿಯಾ ವಿಜಯ್ ಕುಮಾರ್ ಸಾಥ್**’ಜೀಬ್ರಾ’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಸಂಭ್ರಮ...
21/11/2024

*ಜೀಬ್ರಾಗೆ ‘ಭೀಮ’ ಬೆಂಬಲ..ಡಾಲಿ ಧನಂಜಯ್-ಸತ್ಯದೇವ್ ಸಿನಿಮಾಗೆ ದುನಿಯಾ ವಿಜಯ್ ಕುಮಾರ್ ಸಾಥ್*
*’ಜೀಬ್ರಾ’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಸಂಭ್ರಮ.. ಡಾಲಿ ಧನಂಜಯ್-ಸತ್ಯದೇವ್ ಚಿತ್ರ ಸಲಗ ಸಾಥ್*

ಕನ್ನಡದ ಡಾಲಿ ಧನಂಜಯ್ ಹಾಗೂ ತೆಲುಗಿನ ಸತ್ಯದೇವ್ ನಟನೆಯ ಜೀಬ್ರಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದೇ 22ಕ್ಕೆ ಮಲ್ಟಿಸ್ಟಾರ್ಸ್ ಹಾಗೂ ಬಹುಭಾಷಾ ಚಿತ್ರ ಜೀಬ್ರಾ ತೆರೆಗೆ ಬರ್ತಿದೆ. ಹೀಗಾಗಿ ಡಾಲಿ ಹಾಗೂ ಸತ್ಯದೇವ್ ಅಂತಿಮ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರಿನ ಮಾಲ್ ವೊಂದರಲ್ಲಿ ನಿನ್ನೆ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಿತು. ಈ ಇವೆಂಟ್ ಗೆ ಮುಖ್ಯ ಅತಿಥಿಗಳಾಗಿ ದುನಿಯಾ ವಿಜಯ್ ಕುಮಾರ್, ಸತೀಶ್ ನೀನಾಸಂ, ಸಪ್ತಮಿ ಗೌಡ, ನಾಗಭೂಷಣ್ ಭಾಗವಹಿಸಿದ್ದರು.

ನಟ ದುನಿಯಾ ವಿಜಯ್ ಕುಮಾರ್, ಡಾಲಿ, ಇಲ್ಲಿ ಒಂದಷ್ಟು ಜನ ನನ್ನ ತಮ್ಮಂದಿರು ಇದ್ದಾರೆ. ಧನಂಜಯ್ ಬಗ್ಗೆ ಅಪಾರವಾದ ಗೌರವಿದೆ. ತಾನು ಬೆಳೆದು ತನ್ನವವರನ್ನು ಬೆಳೆಯುಸುತ್ತಾರೆ. ಧನಂಜಯ್ ಬಂದ ರೂಟ್, ಸ್ಟ್ರಗಲ್, ಅವರು ಮನಸ್ಸು ನನಗೆ ಇಷ್ಟ. ಸಲಗದಲ್ಲಿ ಮುಖ್ಯ ಪಾತ್ರ ಮಾಡಿ ನನಗೆ ಗೆಲುವು ತಂದು ಕೊಟ್ಟಿದ್ದಾರೆ. ಸತ್ಯದೇವ್ ಕಷ್ಟುಪಟ್ಟು ದೊಡ್ಡ ಸ್ಥಾನಕ್ಕೆ ಬಂದು ನಿಂತಿದ್ದಾರೆ. ಸಿನಿಮಾಗೆ ಭಾಷೆ ಇಲ್ಲ. ಎಷ್ಟು ಖುಷಿ, ನೋವು ಹಂಚಿಕೊಳ್ಳುತ್ತೇವೆ. ಜೀಬ್ರಾ ನಮ್ಮ ಕನ್ನಡದ ಸಿನಿಮಾ, ಎಲ್ಲಾ ಕಡೆ ದೊಡ್ಡ ಮಟ್ಟಕ್ಕೆ ಆಗಲಿ ಎಂದರು.

ಡಾಲಿ ಧನಂಜಯ್, ಕನ್ನಡ ವರ್ಷನ್ ಸಿನಿಮಾಗಳನ್ನು ನೀವು ಹೆಚ್ಚಾಗಿ ನೋಡುವುದರಿಂದ ಡಿಮ್ಯಾಂಡ್ ಕ್ರಿಯೇಟ್ ಆಗುತ್ತದೆ. ಬೈಕೊಂಡು ಕುರುವುದರಿಂದ ಯಾವುದು ಆಗುವುದಿಲ್ಲ. ಪಕ್ಕ ಕನ್ನಡ ಸಿನಿಮಾ ಎನಿಸಲು ಶಶಾಂಕ್ ಅಂಡ್ ಟೀಂ ತುಂಬಾ ಚೆನ್ನಾಗಿ ಡಬ್ ಮಾಡಿದ್ದಾರೆ. ಜೀಬ್ರಾ ಇದೇ ನವೆಂಬರ್ 22ಕ್ಕೆ ಕನ್ನಡದಲ್ಲಿಯೂ ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದರು.

ಸತ್ಯದೇವ್, ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದ ದಿನಗಳನ್ನು ನೆನಪಿಸಿಕೊಂಡ ದಿನಗಳ ಬಗ್ಗೆ ಮೆಲುಕು ಹಾಕಿ, ಇದೇ 22ಕ್ಕೆ ಜೀಬ್ರಾ ಬಿಡುಗಡೆಯಾಗುತ್ತಿದೆ. ನಿಮ್ಮ ಬೆಂಬಲ ಸಿನಿಮಾ ಮೇಲೆ ಇರಲಿದೆ ಎಂದರು.


*’ಆರಾಮ್ ಅರವಿಂದ್ ಸ್ವಾಮಿ’ಗೆ ಬಘೀರ ಸಾಥ್...ನ.22ಕ್ಕೆ ಅನೀಶ್-ಅಭಿಷೇಕ್ ಶೆಟ್ಟಿ ಸಿನಿಮಾ ರಿಲೀಸ್**ಅನೀಶ್ ‘ಆರಾಮ್ ಅರವಿಂದ್ ಸ್ವಾಮಿ’ಗೆ ಶ್ರೀಮು...
19/11/2024

*’ಆರಾಮ್ ಅರವಿಂದ್ ಸ್ವಾಮಿ’ಗೆ ಬಘೀರ ಸಾಥ್...ನ.22ಕ್ಕೆ ಅನೀಶ್-ಅಭಿಷೇಕ್ ಶೆಟ್ಟಿ ಸಿನಿಮಾ ರಿಲೀಸ್*

*ಅನೀಶ್ ‘ಆರಾಮ್ ಅರವಿಂದ್ ಸ್ವಾಮಿ’ಗೆ ಶ್ರೀಮುರಳಿ ಸಾಥ್...ನ.22ಕ್ಕೆ ತೆರೆಗೆ ಬರ್ತಿದೆ ಸಿನಿಮಾ*

ಇದೇ ವೇಳೆ ನಟ ಶ್ರೀಮುರಳಿ ಮಾತನಾಡಿ, ಅನೀಶ್ ಅವರಿಗೆ ಒಳ್ಳೆದಾಗಲಿ. ಆರಾಮ್ ಅರವಿಂದ್ ಸ್ವಾಮಿ ನನಗೆ ಟೈಟಲ್ ತುಂಬಾ ಇಷ್ಟವಾಯಿತು ಅಭಿ. ನಿಮ್ಮ ಟೀಂನಲ್ಲಿ ಒಬ್ಬರಿಗೊಬ್ಬರಿಗೆ ಪ್ರೀತಿ ಕೊಡುತ್ತಿದ್ದೀರ. ನಮ್ಮ ಹೀರೋ ಬೆಳೆಯಬೇಕು ಅಂತಾ ನೀವು ಹೀರೋಗೆ ಸಪೋರ್ಟ್ ಮಾಡುವುದು. ಪ್ರೊಡ್ಯೂಸರ್ ಒಳ್ಳೆದಾಗಲಿ ಎಂದು ಹೀರೋ ಮಾತನಾಡುತ್ತಾರೆ. ಈ ಫೀಲಿಂಗ್ ಇಷ್ಟವಾಯ್ತು. ಸುಖ ಇರುವ ಕಡೆ ನೋವು ಬರುವುದು. ಸಕ್ಸಸ್ ಆದ್ಮೇಲೆ ಫೇಲ್ಯೂರ್ ಬರುವುದು. ಫೇಲ್ಯೂರ್ ಆದ್ಮೇಲೆ ಮತ್ತೆ ಸಕ್ಸಸ್ ಬರುತ್ತದೆ. ಈ ನಿಜಾಂಶ ತಿಳಿದುಕೊಳ್ಳಬೇಕು. ಜರ್ನಿ ಜಾಗದಲ್ಲಿ ತಾಳ್ಮೆ ಇರಬೇಕು. ಬಘೀರ ಆಗಿದ್ದು ಲಕ್ಕಿಯಿಂದಲ್ಲ. ಹಾರ್ಡ್ ವರ್ಕ್. ಶ್ರಮದಿಂದ ಸಕ್ಸಸ್ ಸಿಕ್ಕಿತು. ಸಕ್ಸಸ್ ಕೊಡುವುದು ಅಭಿಮಾನಿಗಳು. ನಿಮಗೆ ಒಳ್ಳೆದು ಆಗುತ್ತದೆ. ಅದಕ್ಕಾಗಿ ಕಾಯಬೇಕು. ಮಿಲನಾ ನಿಮ್ಮ ಬಗ್ಗೆ ಹೆಮ್ಮೆಯಾಯ್ತು. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ತಿಳಿಸಿದರು.

ನಟ ಅನೀಶ್ ಮಾತನಾಡಿ, ಕಷ್ಟಪಡುತ್ತಿದ್ದರೆ ಒಂದಲ್ಲ ಒಂದು ದಿನ ಫಲ ಸಿಗುತ್ತದೆ ಎನ್ನುವುದಕ್ಕೆ ಮುರಳಿ ಸರ್ ಬೆಸ್ಟ್ ಎಕ್ಸಂಪಲ್. ಇಂಡಸ್ಟ್ರೀಯಲ್ಲಿ ಒಬ್ಬರಿಗೊಬ್ಬರು ಸಪೋರ್ಟ್ ಮಾಡಲ್ಲ ಎಂಬ ಮಾತಿದೆ. ಅಕಿರಾ, ವಾಸು, ರಾಮಾರ್ಜುನಾ ಟೈಮ್ನಲ್ಲಿ ಈಗಲೂ ನಿಮ್ಮ ಬಳಿ ಬಂದು ಕೇಳಿದಾಗ ನಿನಗೋಸ್ಕರ ಬರುತ್ತೇನೆ ಎಂದ್ರಿ. ಇದು ನನ್ನ 12ನೇ ಸಿನಿಮಾ. ಇಂಡಸ್ಟ್ರೀಗೆ ಬಂದು ಅನೀಶ್ 14 ವರ್ಷವಾಯ್ತು ಎನ್ನುತ್ತಾರೆ. ನನಗೆ ಯಾವುದು ನೆನಪಿಲ್ಲ. 12ನೇ ಶುಕ್ರವಾರ ಎದುರಿಸ್ತಿದ್ದೇನೆ. ಅನೀಶ್ ನಟನೆ, ಡ್ಯಾನ್ಸ್, ಆಕ್ಷನ್ ಎಲ್ಲಾ ಚೆನ್ನಾಗಿ ಮಾಡಿದ್ದಾನೆ ಎನ್ನುತ್ತಾರೆ. ಹಾಸನ, ಬೆಂಗಳೂರು, ಮಂಗಳೂರಲ್ಲಿ ಇಷ್ಟು ಕಲೆಕ್ಷನ್ ಆಯ್ತು ಅನ್ನೋದನ್ನು ನೋಡಬೇಕು. ಈ ಪಯಣದಲ್ಲಿ ಏನು ಕಲಿತೆ ಎಂದರೆ. ಒಳ್ಳೆ ನಟ ಆಗಿರಬಹುದು. ಒಳ್ಳೆ ನಟ ಶುಕ್ರವಾರದ ಬಾಕ್ಸಾಫೀಸ್ ನಲ್ಲಿ ಸೋತರೆ ಕೆಟ್ಟ ನಟನೆ. ಒಂದೊಳ್ಳೆ ತಂಡ ನನ್ನ ಜೊತೆ ಇದೆ. ಇದೇ 22ಕ್ಕೆ ನಮ್ಮ ಸಿನಿಮಾ ಥಿಯೇಟರ್ ಗೆ ಬರುತ್ತಿದೆ ನಿಮ್ಮ ಬೆಂಬಲ ಇರಲಿ ಎಂದರು.


*’ಭೋದಕ’ನಾದ ಭಜರಂಗಿ...ಶಿವಣ್ಣ-ಶ್ರೀನಿ ಹೊಸ ಸಿನಿಮಾ ಅನೌನ್ಸ್**ಆಯುಧ ಬಿಟ್ಟು ಅಕ್ಷರ ಹಿಡಿದ ಶಿವಣ್ಣ...ಗೀತಾ ಪಿಕ್ಚರ್ಸ್ ಮೂರನೇ ಸಿನಿಮಾ A for...
14/11/2024

*’ಭೋದಕ’ನಾದ ಭಜರಂಗಿ...ಶಿವಣ್ಣ-ಶ್ರೀನಿ ಹೊಸ ಸಿನಿಮಾ ಅನೌನ್ಸ್*

*ಆಯುಧ ಬಿಟ್ಟು ಅಕ್ಷರ ಹಿಡಿದ ಶಿವಣ್ಣ...ಗೀತಾ ಪಿಕ್ಚರ್ಸ್ ಮೂರನೇ ಸಿನಿಮಾ A for ಆನಂದ್*

*ಮಕ್ಕಳ‌ ದಿನಾಚರಣೆ ದಿನದಂದು‌ ಮಕ್ಕಳ ಸಿನಿಮಾ ಘೋಷಿಸಿದ ಶಿವಣ್ಣ....ಗೀತಾ ಪಿಕ್ಚರ್ಸ್ ನಡಿ ಶ್ರೀನಿ ನಿರ್ದೇಶನದ ಚಿತ್ರ A for ಆನಂದ್*

ಭೈರತಿ ರಣಗಲ್ ನಲ್ಲಿ ಲಾಯರ್, ಟಗರು ಸಿನಿಮಾದಲ್ಲಿ ಪೊಲೀಸ್, ಮಫ್ತಿಯಲ್ಲಿ ಡಾನ್... ಹೀಗೆ ಪ್ರತಿ ಬಾರಿಯೂ ವಿಭಿನ್ನ ಪಾತ್ರಗಳ ಮೂಲಕ ಪರಕಾಯ ಪ್ರವೇಶಿಸುವ ಕರುನಾಡ ಕಿಂಗ್ ಶಿವರಾಜ್ ಕುಮಾರ್ ಈಗ ಮಾಸ್ ನಿಂದ ಮೇಸ್ಟ್ರಾಗಿ ಬದಲಾಗುತ್ತಿದ್ದಾರೆ. ಭಜರಂಗಿ ಈಗ ಭೋದಕನಾಗಿದ್ದಾರೆ. ಭೈರತಿ ರಣಗಲ್ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ದೊಡ್ಮನೆ ದೊರೆ ಶಿವ ಸೈನ್ಯಕ್ಕೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಈಗಾಗಲೇ ಸಾಲು ಸಾಲು ಸಿನಿಮಾಗಳಿಗೆ ಸೈ ಎಂದಿರುವ ಶಿವಣ್ಣ ಹೊಸ ಸಿನಿಮಾ ಘೋಷಿಸಿದ್ದಾರೆ.

ಇಂದು ಮಕ್ಕಳ‌ ದಿನಾಚರಣೆ. ಈ ಶುಭ ದಿನದಂದು ಶಿವಣ್ಣ ಮಕ್ಕಳ ಸಿನಿಮಾದಲ್ಲಿ ನಟಿಸುವ ಬಗ್ಗೆ ಗುಟ್ಟುರಟ್ಟು ಮಾಡಿದ್ದಾರೆ. ‘ಸುಂದರ ಕಾಂಡ’ದಲ್ಲಿ ಸಿನಿಮಾದಲ್ಲಿ ಟೀಚರ್ ಆಗಿ‌ ಅಭಿನಯಿಸಿದ್ದ ಕರುನಾಡ ಕಿಂಗ್ ಈಗ ಬಹಳ ವರ್ಷದ ಬಳಿಕ ಈ ರೀತಿಯ ಪಾತ್ರ ಒಪ್ಪಿಕೊಂಡಿದ್ದಾರೆ. ವಿಶೇಷ ಅಂದರೆ ಇದು ನೈಜ ಘಟನೆಯಾಧಾರಿತ ಸಿನಿಮಾ.

ಲಾಂಗ್ ಬಿಟ್ಟು ಶಿವಣ್ಣ ಈಗ ಪೆನ್ನು ಹಿಡಿಯುತ್ತಿದ್ದಾರೆ. ಗುರುವಾಗುತ್ತಿರುವ ಶಿವಣ್ಣನಿಗೆ ಓಂಕಾರ ಹಾಕೋದಿಕ್ಕೆ ಘೋಸ್ಟ್ ಸೂತ್ರಧಾರ ಶ್ರೀ‌ನಿ‌ ಸಜ್ಜಾಗಿದ್ದಾರೆ. ಶ್ರೀನಿ ಬೇರೆ ತರಹದ ಕಥೆ ಮಾಡಿಕೊಂಡು ಬಂದಿದ್ದಾರೆ. ಪಾತ್ರ ಕೂಡಾ ರೆಗ್ಯುಲರ್‌ ಆಗಿಲ್ಲ. ಈ ಸಿನಿಮಾದಲ್ಲಿ ಒಂದೊಳ್ಳೆಯ ಸಂದೇಶ ಇರಲಿದೆ. ಶಿವಣ್ಣ-ಶ್ರೀನಿ ಕಾಂಬೋದ A for ಆನಂದ್ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ವೇದ, ಭೈರತಿ ರಣಗಲ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿರುವ ಗೀತಾ ಶಿವರಾಜ್ ಕುಮಾರ್ ಒಡೆತನದ ಗೀತಾ ಪಿಕ್ಚರ್ಸ್ ಈ ಚಿತ್ರ ನಿರ್ಮಾಣ ಮಾಡುತ್ತಿದೆ. A for ಆನಂದ್ ಸಿನಿಮಾಗೆ ಬಹುತೇಕ ಘೋಸ್ಟ್ ತಾಂತ್ರಿಕ ವರ್ಗವೇ ಕೆಲಸ ಮಾಡುತ್ತಿದೆ. ಮಹೇನ್ ಸಿಂಹ ಕ್ಯಾಮೆರಾ, ದೀಪು ಎಸ್ ಕುಮಾರ್ ಸಂಕಲನ, ಪ್ರಸನ್ನ ವಿಎಂ ಸಂಭಾಷಣೆ ಚಿತ್ರಕ್ಕಿದೆ. ಮಾರ್ಚ್ ಅಥವಾ ಎಪ್ರಿಲ್ ತಿಂಗಳಲ್ಲಿ ಇಡೀ ತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

ರಿಯಲಿಸ್ಟಿಕ್ ರಿವೆಂಜ್ ಡ್ರಾಮಾ ‘ಮರ್ಯಾದೆ ಪ್ರಶ್ನೆ’ ಚಿತ್ರದ ಟ್ರೇಲರನ್ನು ಅಭಿನಯ ಚಕ್ರವರ್ತಿ ‘ಕಿಚ್ಚ ಸುದೀಪ್’ ಬಿಡುಗಡೆ ಮಾಡಿ “ಟ್ರೇಲರ್ ನನಗೆ...
13/11/2024

ರಿಯಲಿಸ್ಟಿಕ್ ರಿವೆಂಜ್ ಡ್ರಾಮಾ ‘ಮರ್ಯಾದೆ ಪ್ರಶ್ನೆ’ ಚಿತ್ರದ ಟ್ರೇಲರನ್ನು ಅಭಿನಯ ಚಕ್ರವರ್ತಿ ‘ಕಿಚ್ಚ ಸುದೀಪ್’ ಬಿಡುಗಡೆ ಮಾಡಿ “ಟ್ರೇಲರ್ ನನಗೆ ತುಂಬಾ ಇಷ್ಟವಾಯಿತು. ಸಾಕಷ್ಟು ವಿಚಾರ ತಿಳಿಸಿಯೂ ಕೂಡ ಕುತೂಹಲ ಹುಟ್ಟಿಸುವಂತೆ ಟ್ರೇಲರ್ ಕಟ್ ಮಾಡಿರುವುದು ನನಗೆ ಹಿಡಿಸಿತು. ಈ ಸಿನಿಮಾದಲ್ಲಿ ವಿಭಿನ್ನತೆ ಇದೆ. ಎಲ್ಲಾ ವಿಭಾಗಗಳ ಕೆಲಸವು ಅದ್ಭುತವಾಗಿದೆ. ಕನ್ನಡ ಇಂಡಸ್ಟ್ರಿ ನಡೆಯುತ್ತಿರುವ ದಾರಿಯ ಬಗ್ಗೆ ನನಗೆ ಹೆಮ್ಮೆ ಇದೆ” ಎಂದರು.

ಇದೇ ನವೆಂಬರ್ ೨೨ಕ್ಕೆ ಬಿಡುಗಡೆಗೆ ಸಜ್ಜಾಗಿರುವ ‘ಮರ್ಯಾದೆ ಪ್ರಶ್ನೆ’ ಚಿತ್ರದ ಟ್ರೇಲರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಸುಮಾರು 300ಕ್ಕೂ ಅಧಿಕ ಆರ್‌ಜೆಗಳು, ಗಾಯಕರು, ನಟನಟಿಯರು, ಡಾಕ್ಟರ್‌ಗಳು, ಲಾಯರ್ಗಳು, ಉದ್ಯಮಿಗಳು ಸಿನಿಮಾದ ಟ್ರೇಲರ್ ಮೆಚ್ಚಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಬಿಡುಗಡೆಗೊಂಡು ಎಲ್ಲೆಡೆ ಉತ್ತಮ ಸ್ಪಂದನೆ ಗಳಿಸುತ್ತಿರುವ ‘ಮಾರ್ಯಾದೆ ಪ್ರಶ್ನೆ’ ಚಿತ್ರದ ಟ್ರೇಲರನ್ನು ಈಗ ಸಕ್ಕತ್ ಸ್ಟುಡಿಯೋ ಯೂಟ್ಯೂಬ್ ಚಾನೆಲ್ಲಿನಲ್ಲಿ ವೀಕ್ಷಿಸಬಹುದು.

‘ಮರ್ಯಾದೆ ಪ್ರಶ್ನೆ’ ಚಿತ್ರದ ತಾರಾಗಣದಲ್ಲಿ ತೇಜು ಬೆಳವಾಡಿ, ಸುನಿಲ್ ರಾವ್, ಪೂರ್ಣಚಂದ್ರ ಮೈಸೂರು, ರಾಕೇಶ್ ಅಡಿಗ, ಶೈನ್ ಶೆಟ್ಟಿ, ಪ್ರಭು ಮುಂಡ್ಕುರ್ ಇದ್ದಾರೆ. ಉಳಿದಂತೆ ಹಿರಿಯ ನಟರಾದ ನಾಗಾಭರಣ, ಪ್ರಕಾಶ್ ತುಂಭಿನಾಡು, ನಂದಗೋಪಾಲ್, ನಾಗೇಂದ್ರ ಷಾ, ರೇಖಾ ಕುಂಡ್ಲಿಗಿ, ಶ್ರವಣ್, ಹರಿಹರನ್ ಮುಂತಾದವರು ಅಭಿನಯಿಸಿದ್ದಾರೆ. .



.belawadi

*ಅಬ್ಬರಿಸುತ್ತಿರುವ ‘ಅಮರನ್’...ಶಿವಕಾರ್ತಿಕೇಯನ್-ಸಾಯಿಪಲ್ಲವಿ ಸಿನಿಮಾಗೆ ಪ್ರೇಕ್ಷಕ ಜೈಕಾರ*ತಮಿಳು ನಟ ಶಿವ ಕಾರ್ತಿಕೇಯನ್ ಹಾಗೂ ನಟಿ ಸಾಯಿ ಪಲ್ಲ...
13/11/2024

*ಅಬ್ಬರಿಸುತ್ತಿರುವ ‘ಅಮರನ್’...ಶಿವಕಾರ್ತಿಕೇಯನ್-ಸಾಯಿಪಲ್ಲವಿ ಸಿನಿಮಾಗೆ ಪ್ರೇಕ್ಷಕ ಜೈಕಾರ*

ತಮಿಳು ನಟ ಶಿವ ಕಾರ್ತಿಕೇಯನ್ ಹಾಗೂ ನಟಿ ಸಾಯಿ ಪಲ್ಲವಿ ನಟನೆಯ ಅಮರನ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸ್ ನಲ್ಲೂ ಗಳಿಕೆಯಲ್ಲಿ ಸಖತ್ ಸದ್ದು ಮಾಡ್ತಿದೆ. ಹುತಾತ್ಮರಾದ ಭಾರತೀಯ ಸೇನಾ ಅಧಿಕಾರಿ ಮೇಜರ್ ಮುಕುಂದ್ ವರದರಾಜನ್ ಅವರ ಸ್ಪೂರ್ತಿದಾಯಕ ಕಥೆ ಹೇಳುವ ಬಹುನಿರೀಕ್ಷಿತ ಬಯೋಪಿಕ್ ಸಿನಿಮಾ 2024ರ ತಮಿಳು ಚಿತ್ರರಂಗದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದೆ. ಅಕ್ಟೋಬರ್ 31ರಂದು ತೆರೆಕಂಡ ಅಮರನ್ ಸಿನಿಮಾ ಎಲ್ಲಾ ಕಡೆಗಳಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.

ಸೋನಿ ಪಿಕ್ಚರ್ಸ್ ಸಹಯೋಗದಲ್ಲಿ ನಟ ಕಮಲ್ ಹಾಸನ್ ಅವರ ರಾಜಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಈ ಚಿತ್ರವನ್ನು ನಿರ್ಮಿಸಿದೆ. ಚಿತ್ರದಲ್ಲಿ ಶಿವಕಾರ್ತಿಕೇಯನ್ ಸೇನಾ ಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಸಾಯಿ ಪಲ್ಲವಿ ಅದ್ಭುತವಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಟರ್ ಜಿವಿ ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ.

ಈ ಚಿತ್ರವು ದಿವಂಗತ ಸೇನಾ ಮೇಜರ್ ಮುಕುಂದ್ ವರದರಾಜನ್ ಅವರ ಜೀವನವನ್ನು ಆಧರಿಸಿದೆ. ಶಿವಕಾರ್ತಿಕೇಯನ್ ಅವರು ಮೇಜರ್ ಮುಕುಂದ್ ಪಾತ್ರದಲ್ಲಿ ಕಾಣಿಸಿಕೊಂಡ್ರೆ. ಪತ್ನಿ ಇಂದೂ ರೆಬೆಕಾ ವರ್ಗೀಸ್ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ದೀಪಾವಳಿ ಹಬ್ಬದ ದಿನದಂದು ತಮಿಳು, ತೆಲುಗು, ಹಿಂದಿ, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಅಮರನ್ ಎಲ್ಲೆಡೆ ಅಬ್ಬರಿಸುತ್ತಿದ್ದು, ಚಿತ್ರತಂಡದ ಖುಷಿಗೆ ಕಾರಣವಾಗಿದೆ.


Address


Website

Alerts

Be the first to know and let us send you an email when city_times_express posts news and promotions. Your email address will not be used for any other purpose, and you can unsubscribe at any time.

Contact The Business

Send a message to city_times_express:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share