District Health Society Udupi

  • Home
  • District Health Society Udupi

District Health Society Udupi Contact information, map and directions, contact form, opening hours, services, ratings, photos, videos and announcements from District Health Society Udupi, Media, .

ದಿನಾಂಕ: 20.06.2025 ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ 2023-24 ಸಾಲಿನಲ್...
20/06/2025

ದಿನಾಂಕ: 20.06.2025 ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ 2023-24 ಸಾಲಿನಲ್ಲಿ ಅನುಮೋದನೆಗೊಂಡ ಹೊಸ ಲಸಿಕಾ ಉಗ್ರಾಣ ಕಟ್ಟಡ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸವನ್ನು ಮಾನ್ಯ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಭಾಗವಹಿಸಿದ್ದರು.

ಈ ಸಂಧರ್ಭದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ಜಿಲ್ಲಾಧಿಕಾರಿಗಳಾದ ಶ್ರೀಮತಿ ಸ್ವರೂಪ ಟಿ. ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರತೀಕ್ ಬಾಯಲ್, ಡಾ ಬಸವರಾಜ ಜಿ ಹುಬ್ಬಳ್ಳಿ, ಎಲ್ಲಾ ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ಫಾರ್ಮಸಿ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

*ಉಡುಪಿ ಜಿಲ್ಲೆಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ – 2025*ದಿನಾಂಕ- 17/06/2025 ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ...
17/06/2025

*ಉಡುಪಿ ಜಿಲ್ಲೆಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ – 2025*

ದಿನಾಂಕ- 17/06/2025 ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಹಾಗೂ ನಿಯಂತ್ರಣ ಘಟಕ ಉಡುಪಿ, ರಕ್ತನಿಧಿ ಕೇಂದ್ರ, ಜಿಲ್ಲಾ ಆಸ್ಪತ್ರೆ ಉಡುಪಿ, ಯೂತ್ ರೆಡ್ ಕ್ರಾಸ್, ರೋಟರಾಕ್ಟ್ ಕ್ಲಬ್,ರಾಷ್ಟ್ರೀಯ ಸೇವಾ ಯೋಜನೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕುತ್ಪಾಡಿ ಉಡುಪಿ ಹಾಗೂ ಜೆಸಿಐ ಅಲುಮಿನಿ ಕ್ಲಬ್ ವಲಯ 15 ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಯಿತು,

ಈ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧನೆಯನ್ನು *“ರಕ್ತನೀಡಿ, ಭರವಸೆ ನೀಡಿ"*, ಜೊತೆಯಾಗಿ ನಾವು ಜೀವ ಉಳಿಸೋಣ (Give Blood, Give Hope: Together we save Life)” ಎಂಬ ಧ್ಯೇಯ ವಾಕ್ಯದೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕುತ್ಪಾಡಿ ಇಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ಬಸವರಾಜ್ ಜಿ ಹುಬ್ಬಳ್ಳಿ, ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿಗಳು ಉಡುಪಿ ಇವರು ನೆರವೇರಿಸಿ ರಕ್ತದಾನ ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದ ದಾನಗಳಲ್ಲಿ ಒಂದಾಗಿದೆ. ರಕ್ತವನ್ನು ದಾನದಿಂದಲೇ ಪಡೆಯಬೇಕು ಕೃತಕವಾಗಿ ತಯಾರಿಸಲು ಸಾದ್ಯವಾಗುವುದಿಲ್ಲ ಮತ್ತು ಒಬ್ಬ ವ್ಯಕ್ತಿ ತನ್ನ ಜೀವಿತಾವಾಧಿಯಲ್ಲಿ 160ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಬಹುದು ಎಲ್ಲರು ರಕ್ತದಾನದಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಡಾ ಆಶೋಕ್, ಜಿಲ್ಲಾ ಸರ್ಜನ ಜಿಲ್ಲಾ ಆಸ್ಪತ್ರೆ ಉಡುಪಿ ಇವರು ಮಾತನಾಡಿ ಉಡುಪಿ ಜಿಲ್ಲೆ ರಕ್ತ ದಾನಿಗಳ ಜಿಲ್ಲೆ ಎಂದು ಗುರುತಿಸಲ್ಪಟ್ಟಿರುತ್ತದೆ, ಮತ್ತು ವಿದ್ಯಾರ್ಥಿ ಜೀವನದಲ್ಲಿ ರಕ್ತದಾನ ಮಾಡುವ ಹವ್ಯಾಸವನ್ನು ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಂದು ಅತೀ ಹೆಚ್ಚು ಬಾರಿ ರಾಕ್ತದಾನ ಮಾಡಿದ ಮಹನೀಯರಿಗೆ ಸನ್ಮಾನ ಮಾಡಲಾಯಿತು.
1. ಶ್ರೀ ಲಕ್ಷೀಶ ಉಡುಪ್ - A +ve, 56- ಬಾರಿ ರಕ್ತದಾನ
2. ರೂಪ ಬಲ್ಲಾಳ- B +ve , 48- ಬಾರಿ ರಕ್ತದಾನ
3. ಕಾರ್ತಿಕ್ ನಾಯ್ಕ್ - B +ve, 44- ಬಾರಿ ರಕ್ತದಾನ
4. ಜಗದೀಶ ಚಂದ್ರನ್ -A +ve, 50- ಬಾರಿ ರಕ್ತದಾನ
5. ಗಿರಿಜ ಸುವರ್ಣ – B +ve, 28- ಬಾರಿ ರಕ್ತದಾನ

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಹಾನೀಯರಿಂದ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಡಾ ಚಿದಾನಂದ ಸಂಜು.ಎಸ್.ವಿ, ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಉಡುಪಿ. ಇವರು ಉಪಸ್ಥಿರಿದ್ದ ವಿದ್ಯಾರ್ಥಿಗಳಿಗೆ ಪ್ರತಿಜ್ಷಾ ವಿಧಿ ಬೋಧನೆ ಮಾಡಿದರು. ಕಾರ್ಯಕ್ರಮದಲ್ಲಿ, ಡಾ.ನಾಗರಾಜ್ ಎಸ್. ಆಸ್ಪತ್ರೆ ಮತ್ತು ವೈದ್ಯಕೀಯ ಅಧಿಕ್ಷಕರು, ಡಾ ವೀಣಾ ಕುಮಾರಿ, ವೈದ್ಯಾಧಿಕಾರಿ ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ, JFJPDM ಆಶಾ ಅಲೇನ್ ವಾಜ್ ಅದ್ಯಕ್ಷರು ಅಲೂಮಿನಿ ಕ್ಲಬ್ ವಲಯ 15 ಮತ್ತು ಶ್ರೀ ಮಂಜುನಾಥ ವಾರ್ತಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ ಮಮತಾ ಕೆ.ವಿ, ಪ್ರಾಂಶುಪಾಲರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕುತ್ಪಾಡಿ ಉಡುಪಿ. ಇವರು ಅಧ್ಯಕ್ಷತೆ ವಹಿಸಿ ನಮ್ಮ ಕಾಲೇಜಿನಲ್ಲಿ ವರ್ಷಕ್ಕೆ ಎರಡು ಬಾರಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗುತ್ತದೆ ಮತ್ತು 250ಕ್ಕೂ ಹೆಚ್ಚು ರಕ್ತದ ಯುನಿಟ್ ಸಂಗ್ರಹ ಮಾಡಲಾಗಿರುತ್ತದೆ ಹಾಗೂ ಇವತ್ತಿನ ರಕ್ತದಾನ ಶಿಬಿರದಲ್ಲಿ 150ಕ್ಕೂ ಹೆಚ್ಚು ರಕ್ತದ ಯುನಿಟ್ ಸಂಗ್ರಹಿಸುವ ಗುರಿ ಹೊಂದಿರುತ್ತೇವೆ ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಆಶಕ್ತಿ ಹೊಂದಿರುತ್ತಾರೆ ಎಂದು ತಿಳಿಸಿದರು.

ಡಾ.ವಿದ್ಯಾಲಕ್ಷಿ ಡೀನ ಕಮ್ಯೂನಿಟಿ ಸರ್ವೀಸ್ ಇವರು ಸ್ವಾಗತಿಸಿ, ಡಾ.ಯೋಗಿಶ್ ಆಚಾರ್ಯ ಸಹಾಯಕ ಡೀನ್ ಯುತ್ ರೆಡ ಕ್ರಾಸ ಇವರು ಧನ್ಯವಾದ ಸಮರ್ಪಣೆ ಮಾಡಿದರು. ಗೀತಾ ಮತ್ತು ಅವರ ತಂಡ ಪ್ರಾರ್ಥನೆ ನೇರವೇರಿಸಿದರು. ಶ್ರೀ ಮಾಹಾಬಲೇಶ್ವರ ಜಿಲ್ಲಾ ಕಾರ್ಯಕ್ರಮ ಮೇಲ್ವೀಚಾರಕರು ಕಾರ್ಯಕ್ರಮ ನೀರುಪಣೆ ಮಾಡಿದರು. ಇವತ್ತಿನ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 150 ಯುನಿಟ್ ರಕ್ತ ಸಂಗ್ರಹಿಸಲಾಯಿತು.

ಪ್ರಕಟಣೆ

*ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ*

ಉಡುಪಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಉಡುಪಿ ಇಲ್ಲಿ ಮಹಿಳೆಯರು ಮತ್ತು ಗರ್ಭಿಣಿರಿಗೆ ಅಧಿಕ ರಕ್ತದೊತ್ತಡದ ಬಗ್ಗೆ ಮಾಹಿತಿ ನೀಡಲಾಯಿತು
29/05/2025

ಉಡುಪಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಉಡುಪಿ ಇಲ್ಲಿ ಮಹಿಳೆಯರು ಮತ್ತು ಗರ್ಭಿಣಿರಿಗೆ ಅಧಿಕ ರಕ್ತದೊತ್ತಡದ ಬಗ್ಗೆ ಮಾಹಿತಿ ನೀಡಲಾಯಿತು

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿರಾಷ್ಟ್ರೀಯ ಆರೋಗ್ಯ ಅಭಿಯಾನ  ಉಡುಪಿಜಿಲ್ಲಾ ಸರ್ವೇಕ್ಷಣ ಘಟಕ ಎನ್.ಸಿ.ಡಿ ಘಟಕ  ಉಡುಪಿಜಿಲ್...
29/05/2025

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ
ರಾಷ್ಟ್ರೀಯ ಆರೋಗ್ಯ ಅಭಿಯಾನ ಉಡುಪಿ
ಜಿಲ್ಲಾ ಸರ್ವೇಕ್ಷಣ ಘಟಕ ಎನ್.ಸಿ.ಡಿ ಘಟಕ ಉಡುಪಿ
ಜಿಲ್ಲಾ ಆಸ್ಪತ್ರೆ ಎನ್.ಸಿ.ಡಿ ವಿಭಾಗ ಉಡುಪಿ
ಮಹಿಳಾ ನಿಲಾಯ ನಿಟ್ಟೂರು ಉಡುಪಿ
ಇವರ ಸಹಯೋಗದೊಂದಿಗೆ
ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆ 17.05.2025
ಘೋಷಣೆ: ನಿಮ್ಮ ರಕ್ತದೊತ್ತಡವನ್ನು ನಿಖರವಾಗಿ ಅಳೆಯಿರಿ, ಅದನ್ನು ನಿಯಂತ್ರಿಸಿ, ಧಿರ್ಘಕಾಲ ಕಾಲ ಬದುಕಿ".
ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಆಸ್ಪತ್ರೆ ಎನ್.ಸಿ.ಡಿ ಉಡುಪಿ ವತಿಯಿಂದ ದಿನಾಂಕ 17 .05 .2025 ರಂದ ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆಯ ಪ್ರಯುಕ್ತ ಅಸಾಂಕ್ರಮಿಕ ರೋಗಗಳು ಬಗ್ಗೆ ಮತ್ತು ತಂಬಾಕು ದುಷ್ಪರಿಣಾಮ ಗಳ ಬಗ್ಗೆ ಇದರ ಜೊತೆಗೆ ಪಿಜೋಯೊತೆರಪಿ ಬಗ್ಗೆ ಮಾಹಿತಿ ನೀಡಲಾಯಿತು ಹಾಗು ಉಚಿತ ಆರೋಗ್ಯ ತಪಾಸಣೆ ಕೊಡ ನೆಡಸಾಲಯಿತು ಈ ಶಿಬಿರದಲ್ಲಿ
ಮಧುಮೇಹ ರಕ್ತ ಪರೀಕ್ಷೆ
ರಕ್ತದೊತ್ತಡ ಪರೀಕ್ಷೆ
ದಂತ ತಪಾಸಣೆ
ಕಣ್ಣಿನ ಪರೀಕ್ಷೆ
BMI ಪರೀಕ್ಷೆ
ಜೀವನಶೈಲಿ ಬಗ್ಗೆ
ಆಪ್ತ ಸಮಾಲೋಚನೆ
ಪೀಜೋಯತೆರಪಿ ಚಿಕಿತ್ಸೆ ನೀಡಲಾಯಿತು

Total screening done=62
Suspected HTN =03
Suspected Dm =00
Suspected Dm+HTN,=000
Suspected oral CA= 00
Suspected cvrix =00
Suspected Brest= 00

Diagnosed HTN =00
Diagnosed DM=00
Diagnosed Dm +Htn-00
diagnosed oral =00

Follow up case
DM- 02
HTN - 03
Dm+HTN 03
Old stroke 01

29/05/2025

ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆಯ ಮಾಹಿತಿ ನೀಡಿದ್ದು

29/05/2025

ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆಯ ಪ್ರಯುಕ್ತ, ಮಾನ್ಯ ಜಿಲ್ಲಾ ಸರ್ಜನ್ ಡಾ. ಅಶೋಕ್ ಎಚ್ ಇವರು ಮಾಹಿತಿ ನೀಡಿದ್ದು.

29/05/2025
29/05/2025

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಉಡುಪಿ ಜಿಲ್ಲಾ ಸರ್ವೇಕ್ಷಣ ಘಟಕ ಎನ್.ಸಿ.ಡಿ ಘಟಕ ಉಡುಪಿಜಿಲ್ಲಾ ಆಸ್ಪತ್ರೆ ಎನ್.ಸಿ.ಡಿ ವಿಭಾಗ ಉಡುಪಿ ಇವರ ಸಹಯೋಗದೊಂದಿಗೆ ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆ ಪ್ರಯುಕ್ತ ರೀಲ್ಸ್ ಹಾಗೂ ವಿಡಿಯೋ ತಯಾರಿಸಿ ಮಾಹಿತಿ ಪ್ರಚಾರ ಮಾಡಿರುವುದು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ರಾಷ್ಟ್ರೀಯ ಆರೋಗ್ಯ ಅಭಿಯಾನ  ಉಡುಪಿ ಜಿಲ್ಲಾ ಸರ್ವೇಕ್ಷಣ ಘಟಕ ಎನ್.ಸಿ.ಡಿ ಘಟಕ  ಉಡುಪಿಜಿ...
29/05/2025

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಉಡುಪಿ ಜಿಲ್ಲಾ ಸರ್ವೇಕ್ಷಣ ಘಟಕ ಎನ್.ಸಿ.ಡಿ ಘಟಕ ಉಡುಪಿಜಿಲ್ಲಾ ಆಸ್ಪತ್ರೆ ಎನ್.ಸಿ.ಡಿ ವಿಭಾಗ ಉಡುಪಿ ಇವರ ಸಹಯೋಗದೊಂದಿಗೆ ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆ.

Address


Website

Alerts

Be the first to know and let us send you an email when District Health Society Udupi posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share