Citizen News Puttur

Citizen News Puttur Welcome to Citizen News Puttur! Your trusted source for local news, updates, and community stories from Puttur and beyond.

Stay informed with the latest happenings, events & insights that matter to you. Follow us for accurate, timely, & engaging content!

ಬೆಂಗಳೂರಿನಲ್ಲಿ Q- ಸಿಟಿ (ಕ್ವಾಂಟಮ್ ಸಿಟಿ) ಯನ್ನು ಸ್ಥಾಪನೆ:ಸಚಿವ ಎನ್.ಎಸ್.ಭೋಸರಾಜುಬೆಂಗಳೂರು, ಜು. 31: ಕ್ವಾಂಟಮ್ ಕಂಪ್ಯೂಟರ್ ಕ್ಷೇತ್ರದಲ್ಲ...
31/07/2025

ಬೆಂಗಳೂರಿನಲ್ಲಿ Q- ಸಿಟಿ (ಕ್ವಾಂಟಮ್ ಸಿಟಿ) ಯನ್ನು ಸ್ಥಾಪನೆ:ಸಚಿವ ಎನ್.ಎಸ್.ಭೋಸರಾಜು

ಬೆಂಗಳೂರು, ಜು. 31: ಕ್ವಾಂಟಮ್ ಕಂಪ್ಯೂಟರ್ ಕ್ಷೇತ್ರದಲ್ಲಿ 2035 ರ ವೇಳೆಗೆ ಕರ್ನಾಟಕವನ್ನು 20 ಶತಕೋಟಿ ಡಾಲರ್ ಕ್ವಾಂಟಮ್ ಆರ್ಥಿಕ ರಾಜ್ಯವಾಗಿ ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳಲಿದೆ. ಇದಕ್ಕೆ ಪೂರಕವಾಗಿ ನಮ್ಮ ಸರ್ಕಾರ ಕ್ಯೂ-ಸಿಟಿ (Q- ಸಿಟಿ (ಕ್ವಾಂಟಮ್) ನಗರಿಯನ್ನು ಸ್ಥಾಪಿಸಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಸಚಿವರಾದ ಎನ್.ಎಸ್. ಭೋಸರಾಜು ಹೇಳಿದ್ದಾರೆ.

ಅಲ್ಲದೆ, ಕ್ವಾಂಟಮ್ ಕಂಪ್ಯೂಟರ್ ವಲಯದಲ್ಲಿ 2 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ 2035 ರ ವೇಳೆಗೆ ಜಾಗತಿಕ ಕ್ವಾಂಟಮ್ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಶೇ. 20ರಷ್ಟು ಪಾಲನ್ನು ಕರ್ನಾಟಕದ್ದಾಗಿಸಲು ಗುರಿ ಇಟ್ಟುಕೊಂಡು ಅದಕ್ಕಾಗಿ ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದೆ ಎಂದಿದ್ದಾರೆ.

ಕ್ವಾಂಟಮ್ ಇಂಡಿಯಾ ಶೃಂಗಸಭೆ 2025 ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, "ಇದಕ್ಕೆ ಪೂರಕವಾಗಿ ನಮ್ಮ ಸರ್ಕಾರವು Q- ಸಿಟಿ (ಕ್ವಾಂಟಮ್) ನಗರಿಯನ್ನು ಬೆಂಗಳೂರಿನ ಬಳಿ ಸ್ಥಾಪಿಸಲಿದ್ದು, ಇಲ್ಲಿ ವಿಶ್ವ ದರ್ಜೆಯ ಸೌಲಭ್ಯಗಳನ್ನು ಒದಗಿಸಲಾಗುವುದು. ಇದು ಶೈಕ್ಷಣಿಕ ಸಂಸ್ಥೆಗಳು, ನಾವೀನ್ಯತಾ ಕೇಂದ್ರಗಳು, ಕ್ವಾಂಟಮ್ ಹಾರ್ಡ್‌ವೇರ್‌ಗಳಿಗಾಗಿ ಉತ್ಪಾದನಾ ಕ್ಲಸ್ಟರ್‌ಗಳು, ಪ್ರೊಸೆಸರ್‌ಗಳು ಮತ್ತು ಸಹಾಯಕಗಳು ಹಾಗೂ ಕ್ವಾಂಟಮ್ ಎಚ್ .ಪಿ.ಸಿ. ಡೇಟಾ ಕೇಂದ್ರಗಳ ಸಹಯೋಗದೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಕ್ಲಸ್ಟರ್‌ಗಳನ್ನು ಸಂಯೋಜಿಸಲಿದೆ," ಎಂದರು.

"ನಾವೀನ್ಯತೆಗೆ ಹೆಸರಾದ ಬೆಂಗಳೂರಿನಲ್ಲಿ ಪ್ರಮುಖ ವಿಜ್ಞಾನ ಸಂಸ್ಥೆಗಳು, ಹಲವಾರು ಸ್ಟಾರ್ಟ್‌ಅಪ್‌ಗಳು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳಿದ್ದು, ಭಾರತದ ಕ್ವಾಂಟಮ್ ರಾಜಧಾನಿಯಾಗಿ ಹೊರಹೊಮ್ಮಿದೆ. ಬೆಂಗಳೂರಿನಲ್ಲಿ ಸ್ಥಳೀಯವಾಗಿ ನಿರ್ಮಿಸಲಾದ ದೇಶದ ಮೊದಲ ವಾಣಿಜ್ಯ ದರ್ಜೆಯ ಕ್ವಾಂಟಮ್ ಕಂಪ್ಯೂಟರ್‌ ಈಗಾಗಲೇ ತನ್ನ ವಾಣಿಜ್ಯ ಸೇವೆಗಳನ್ನು ಒದಗಿಸುತ್ತಿದೆ. ನಮ್ಮ ಕನ್ನಡಿಗ ಮತ್ತು ನಮ್ಮ ಸ್ವದೇಶಿ ಉದ್ಯಮವು ಅಭಿವೃದ್ಧಿಪಡಿಸಿದ ಈ ಕ್ವಾಂಟಮ್ ಕಂಪ್ಯೂಟರ್ ಕೇವಲ ಪರಿಕಲ್ಪನೆಯ ಪುರಾವೆಯಲ್ಲ, ಇದು ದೃಢನಿಶ್ಚಯಕ್ಕೆ ಸಾಕ್ಷಿಯಾಗಿದೆ," ಎಂದರು.

"ಕರ್ನಾಟಕ ಸರ್ಕಾರವು ಐಐಎಸ್‌ಸಿ ಬೆಂಗಳೂರಿನಲ್ಲಿ ಕ್ವಾಂಟಮ್ ಸಂಶೋಧನಾ ಉದ್ಯಾನವನವನ್ನು ಸ್ಥಾಪಿಸುವ ಮೂಲಕ ಈ ತಂತ್ರಜ್ಞಾನಕ್ಕೆ ಈಗಾಗಲೇ ಮಹತ್ವದ ಬದ್ಧತೆಯನ್ನು ತೋರಿದೆ. ಈ ಸೌಲಭ್ಯವು 55ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳು ಮತ್ತು 13 ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಿದೆ. ವಾರ್ಷಿಕ 1,000ಕ್ಕೂ ಹೆಚ್ಚು ಕ್ವಾಂಟಮ್ ತಜ್ಞರಿಗೆ ತರಬೇತಿ ನೀಡುತ್ತಿದೆ. ದೀರ್ಘಾವಧಿಯಲ್ಲಿ ಇದನ್ನು ಮುಂದುವರಿಸಲು ನಮ್ಮ ಸರ್ಕಾರವು 48 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಿದೆ," ಎಂದು ತಿಳಿಸಿದರು.

"ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೃಷ್ಟಿಕೋನವನ್ನು ಸಾಕಾರಗೊಳಿಸಲು ಈಗಾಗಲೇ ಕ್ವಾಂಟಮ್ ಮಾರ್ಗಸೂಚಿಯನ್ನು ಹೊರತರಲಾಗಿದೆ. ಆ ಮೂಲಕ ಈ ತಂತ್ರಜ್ಞಾನದ ಪ್ರಗತಿಗೆ ಸೂಕ್ತ ಅಡಿಪಾಯ ಹಾಕಿ, ಮೂಲ ಸೌಕರ್ಯ ಒದಗಿಸುವುದು, ಸಂಶೋಧನೆ ಮತ್ತು ಅಭಿವೃದ್ಧಿಗೆ ಬೆಂಬಲ ನೀಡಿ ಕರ್ನಾಟಕವನ್ನು ಕ್ವಾಂಟಮ್ ಪವರ್‌ಹೌಸ್ ಮತ್ತು ರಫ್ತು ತಾಣವಾಗಿ ಅಭಿವೃದ್ಧಿಪಡಿಸುವ ಗುರಿ ಹಾಕಿಕೊಳ್ಳಲಾಗಿದೆ," ಎಂದು ಹೇಳಿದರು.

ಈ ವರ್ಷದ ಅಂತ್ಯದ ವೇಳೆಗೆ ಕ್ವಾಂಟಮ್ ಚಿಪ್ ಫ್ಯಾಬ್ರಿಕೇಶನ್ ಸಾಮರ್ಥ್ಯಗಳನ್ನು ಸ್ಥಾಪಿಸುವ ನಿರೀಕ್ಷೆಯಿದೆ ಎಂದು ಹೇಳಿದ ಸಚಿವರು, "ಜಾಗತಿಕ ಕ್ವಾಂಟಮ್ ಪವರ್‌ಹೌಸ್‌ ಆಗಿ ಕರ್ನಾಟಕವ್ನನು ಕೊಂಡೊಯ್ಯಲು ಉನ್ನತ ಮಾಧ್ಯಮಿಕ ಮಟ್ಟದಲ್ಲಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸ್ಟ್ರೀಮ್ ಲ್ಯಾಬ್ಸ್ ಉಪಕ್ರಮದ ಮೂಲಕ ಕ್ವಾಂಟಮ್ ಪಠ್ಯಕ್ರಮ ಪರಿಚಯಿಸಲಾಗುವುದು. ವಿದ್ಯಾರ್ಥಿಗಳಿಗೆ ಮೀಸಲಾದ ಡಿಎಸ್‌ಟಿ ಪಿಎಚ್‌ಡಿ ಫೆಲೋಶಿಪ್‌ಗಳನ್ನು ವಿಸ್ತರಿಸಲಾಗುವುದು. ಈ ಫೆಲೋಶಿಪ್ ಗಳು ಕ್ವಾಂಟಮ್ ಕಂಪ್ಯೂಟಿಂಗ್, ಕ್ವಾಂಟಮ್ ಸಂವಹನ ಮತ್ತು ಕ್ವಾಂಟಮ್ ಸೆನ್ಸಿಂಗ್, ಕ್ವಾಂಟಮ್ ಸಾಧನಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಾಮರ್ಥ್ಯ ವೃದ್ಧಿಗೆ ಸಹಕಾರಿಯಾಗಲಿದೆ," ಎಂದು ತಿಳಿಸಿದರು.

"ಕೇಂದ್ರ ಸರ್ಕಾರವು ಸುಮಾರು 6,000 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಕ್ವಾಂಟಮ್ ಮಿಷನ್ (NQM) ಆರಂಭಿಸಿದ್ದು,ಇದರ ಯಶಸ್ವಿ ಅನುಷ್ಠಾನಕ್ಕಾಗಿ ಮತ್ತು ರಾಜ್ಯಗಳನ್ನು ಬೆಂಬಲಿಸಲು ಕರ್ನಾಟಕದ ನೇತೃತ್ವದಲ್ಲಿ ನಾವೀನ್ಯತೆ ಮತ್ತ ವಿಕೇಂದ್ರೀಕೃತ ವಿಧಾನಗಳನ್ನು ಅಳವಡಿಸಿಕೊಳ್ಳಲು ಅನುಮತಿ ನೀಡಬೇಕು," ಎಂದು ಸಚಿವರು ಇದೇ ವೇಳೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಅಭಯ್ ಕರಂಡಿಕರ್ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಕೋಟ್--

"ಕ್ವಾಂಟಮ್ ತಂತ್ರಜ್ಞಾನದ ಕಥೆ ವಿದೇಶಿಯಲ್ಲ, ಅದು ಸ್ಥಳೀಯವಾಗಿದೆ. ಶತಮಾನದ ಹಿಂದೆ, ಪ್ರೊಫೆಸರ್ ಸತ್ಯೇಂದ್ರ ನಾಥ್ ಬೋಸ್ ಅವರು ಐನ್‌ಸ್ಟೈನ್‌ ಅವರೊದಿಗಿನ ಅವರ ಕ್ರಾಂತಿಕಾರಿ ಸಹಯೋಗದ ಮೂಲಕ ನಾವು ಈಗ ಬೋಸಾನ್‌ಗಳು ಎಂದು ಕರೆಯುವ ಕಣಗಳಿಗೆ ಅಡಿಪಾಯ ಹಾಕಿದರು. ಅವರ ಕೆಲಸವು ಕ್ವಾಂಟಮ್ ಅಂಕಿಅಂಶಗಳ ಕುರಿತಾದ ಅವರ ಕೆಲಸದ ಮೂಲಕ ಕ್ವಾಂಟಮ್ ಸಿದ್ಧಾಂತಕ್ಕೆ ಅಡಿಪಾಯ ಹಾಕಿತು. ಅವರ ಹೆಸರು ಸಮಕಾಲೀನ ಕ್ವಾಂಟಮ್ ಭೌತಶಾಸ್ತ್ರ ಕ್ಷೇತ್ರದಲ್ಲಿ ಚಿರಪರಿಚಿತವಾಗಿದೆ,".
- ಎನ್.ಎಸ್. ಭೋಸರಾಜು, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಸಚಿವರು

ವಿಶ್ವ ಸ್ತನ್ಯಪಾನ ಸಪ್ತಾಹ (ಆಗಸ್ಟ್ 1-7, 2025)  ಎದೆ ಹಾಲುಣಿಸುವಿಕೆ ಎನ್ನುವುದು  ತಾಯಿಯ ಪ್ರಾಥಮಿಕ ಜವಾಬ್ದಾರಿ ಮತ್ತು ಜನ್ಮಸಿದ್ದ ಹಕ್ಕು. ‘...
31/07/2025

ವಿಶ್ವ ಸ್ತನ್ಯಪಾನ ಸಪ್ತಾಹ (ಆಗಸ್ಟ್ 1-7, 2025)

ಎದೆ ಹಾಲುಣಿಸುವಿಕೆ ಎನ್ನುವುದು ತಾಯಿಯ ಪ್ರಾಥಮಿಕ ಜವಾಬ್ದಾರಿ ಮತ್ತು ಜನ್ಮಸಿದ್ದ ಹಕ್ಕು. ‘ಸ್ತನ್ಯಪಾನದಿಂದ ಉಂಟಾಗುವ ಧನಾತ್ಮಕ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಆಗಸ್ಟ್ ಮೊದಲ ವಾರದಂದು ವಿಶ್ವದಾದ್ಯಂತ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತಿದೆ.ನವಜಾತ ಶಿಶುಗಳಿಗೆ ತಾಯಿಯ ಮೊಲೆ ಹಾಲೇ ಆಹಾರ ಮತ್ತು ಅಮ್ರತ. ಮಗುವಿನ ದೈಹಿಕ, ಮಾನಸಿಕ ಮತ್ತು ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ಪೋಷಕಾಂಶಗಳು, ಪೌಷ್ಟಿಕಾಂಶ ಗಳು ಹಾಗೂ ಆಂಟಿಬಾಡಿಗಳು ಮೊಲೆ ಹಾಲಿನಲ್ಲಿ ಇರುವ ಕಾರಣ ದಿಂದ ಸ್ತನ್ಯಪಾನ ಶಿಶುಗಳಿಗೆ ಅತೀ ಅಗತ್ಯವಾಗಿದೆ.ಭಾರತದ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಯುನಿಸೆಫ್ ಸಂಸ್ಥೆಗಳು ಕೂಡಾ ಸ್ತನ್ಯಪಾನದ ಅಗತ್ಯತೆ ಮತ್ತು ಅನಿವಾರ್ಯತೆ ಬಗ್ಗೆ ಈ ಕೆಳಗಿನಂತೆ ಆದೇಶ ಹೊರಡಿಸಿದೆ.
1) ಮಗು ಜನಿಸಿದ ಒಂದು ಗಂಟೆಯೊಳಗೆ ಮೊಲೆ ಹಾಲನ್ನು ನೀಡತಕ್ಕದ್ದು.
2) ಮಗುವಿಗೆ ಆರು ತಿಂಗಳು ಆಗುವ ವರೆಗೆ ಸ್ತನ್ಯಪಾನ ಮಾಡಿಸಬೇಕು. ಎದೆಹಾಲು ಅಲ್ಲದೆ ಬೇರೆ ಯಾವುದೇ ಆಹಾರ ನೀಡಬಾರದು.
3) ಸ್ತನ್ಯಪಾನವನ್ನು ಎರಡು ವರ್ಷಗಳ ವರೆಗೆ ಮುಂದುವರಿಸಬಹುದು.
4) ಮಗುವಿಗೆ ಆರು ತಿಂಗಳು ಆದ ಬಳಿಕ ಸೂಕ್ತವಾದ ಪೂರಕ ಆಹಾರವನ್ನು ಆರಂಭಿಸಬಹುದು.

ಸ್ತನ್ಯಪಾನದ ಪ್ರಯೋಜನಗಳು.

ತಾಯಿಯ ಎದೆಹಾಲಿನಲ್ಲಿರುವ ಪ್ರೋಟೀನ್ ಮಗುವಿನ ಮೆದುಳು ಬೆಳವಣಿಗೆಗೆ ಅತೀ ಅವಶ್ಯಕ ಮತ್ತು ಎದೆ ಹಾಲಿನಲ್ಲಿರುವ ಕೊಬ್ಬಿನ ಅಂಶವು ಮಗುವಿನ ನರಮಂಡಲ ವ್ಯವಸ್ಥೆ ಅಭಿವೃದ್ಧಿಯಾಗಲು ಪೂರಕ. ತಾಯಿಯ ಎದೆ ಹಾಲಿನಲ್ಲಿ ಇರುವ ಸೋಡಿಯಂ,ಜಿಂಕ್ ಹಾಗೂ ಇತರ ಲವಣಗಳು ಮಗುವಿನ ರಕ್ಷಣಾ ವ್ಯವಸ್ಥೆಯನ್ನು ಬಲಿಷ್ಟ ಗೊಳಿಸುತ್ತದೆ. ರಕ್ತಹೀನತೆ, ಕ್ಯಾಲ್ಸಿಯಂ ಕೊರತೆ, ಅಲರ್ಜಿ, ಅಸ್ತಮಾ ,ಕಾಮಾಲೆ, ಹೃದ್ರೋಗ ಮತ್ತು ಜಠರ ರೋಗಗಳನ್ನು ತಡೆಗಟ್ಟಲು ತಾಯಿಯ ಎದೆ ಹಾಲು ಅತೀ ಅಗತ್ಯ. ಎದೆಹಾಲನ್ನು ಯಥೇಚ್ಛವಾಗಿ ಕುಡಿದ ಮಗುವಿನ ಬುದ್ಧಿಮಟ್ಟವು ಹೆಚ್ಚಾಗಿರುತ್ತದೆ ಎಂದೂ ಅಧ್ಯಯನಗಳಿಂದ ತಿಳಿದುಬಂದಿದೆ. ತಾಯಿಯ ಎದೆ ಹಾಲಿನಲ್ಲಿ ಹೇರಳವಾಗಿ ಕಿಣ್ವಗಳು, ಆಂಟಿ ಆಕ್ಸಿಡೆಂಟ್ ಗಳು ಹಾಗೂ ಆಂಟಿಬಾಡಿಗಳು ಇರುತ್ತದೆ ಮತ್ತು ಶಿಶುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತದೆ. ತಾಯಿಯ ಎದೆ ಹಾಲು ಕುಡಿದ ಮಕ್ಕಳಲ್ಲಿ ಮಲಬದ್ಧತೆ, ಅತಿಸಾರ, ಬೇಧಿ ಹಾಗೂ ಇತರ ಜಠರ ಸಂಬಂಧಿ ಕಾಯಿಲೆ ವಿರಳವಾಗಿರುತ್ತದೆ. ಅದೇ ರೀತಿ ಎದೆ ಹಾಲು ನೀಡುವ ತಾಯಂದಿರಿಗೆ ಅಸ್ಥಿ ರಂಧ್ರತೆ ಬರುವ ಸಾಧ್ಯತೆ ಕಡಿಮೆ ಮತ್ತು ಅಂಡಾಶಯದ ಕ್ಯಾನ್ಸರ್ ಬರದಂತೆ ತಡೆಯುತ್ತದೆ.ಎಲ್ಲಕ್ಕಿಂತ ಮಿಗಿಲಾಗಿ ತಾಯಿ ಮತ್ತು ಮಗುವಿನ ಬಾಂಧವ್ಯ ವ್ರದ್ದಿಸುತ್ತದೆ.ತಾಯಿಯ ಅನಗತ್ಯ ಗರ್ಭಧಾರಣೆ ಯನ್ನು ತಡೆಯುತ್ತದೆ.ಸ್ತನದ ಕ್ಯಾನ್ಸರ್ ನಿಂದ ರಕ್ಷಣೆ ನೀಡುತ್ತದೆ. ದೇಹದ ತೂಕ ನಿಯಂತ್ರಿಸಿ ಸೌಂದರ್ಯ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.

ಕೊಲೆಸ್ಟ್ರಾಲ್ ಎಂಬ ಸಂಜೀವಿನಿ

ಮಗು ತಾಯಿಯ ಗರ್ಭದಿಂದ ಹೊರಬಂದ ಕೂಡಲೇ ತಾಯಿಯ ಸ್ತನಗಳಿಂದ ಒಂದೆರಡು ಘಂಟೆಗಳ ಕಾಲ ಹಳದಿ ಬಣ್ಣದ ಜೀವದ್ರವ್ಯ ಒಸರಲು ಆರಂಭವಾಗುತ್ತದೆ. ಎದೆ ಹಾಲು ಬರುವ ಮೊದಲೇ ಈ ಜೀವದ್ರವ್ಯ ಸಾಮಾನ್ಯವಾಗಿ ಎಲ್ಲಾ ಸಸ್ತನಿಗಳ ಸ್ತನಗಳಿಂದ ಒಸರುತ್ತದೆ. ಆಂಗ್ಲಭಾಷೆಯಲ್ಲಿ ಈ ದ್ರವವನ್ನು ಕೊಲೆಸ್ಟ್ರಮ್ ಎಂದು ಕರೆಯುತ್ತಾರೆ. ಇದೊಂದು ನಸು ಹಳದಿ ಬಣ್ಣದ ಅಂಟಾದ ಮಂದ ದ್ರವ್ಯವಾಗಿರುತ್ತದೆ.ಅಚ್ಚ ಕನ್ನಡ ದಲ್ಲಿ ಗಿಣ್ಣುಹಾಲು ಎಂದೂ ಕರೆಯುತ್ತಾರೆ.ಇದೊಂದು ಅತ್ಯಂತ ಅಮೂಲ್ಯವಾದ ಸಂಜೀವಿನಿ ಅಥವಾ ಜೀವದ್ರವ್ಯ ಎಂದರೂ ಅತಿಶಯೋಕ್ತಿಯಾಗಲಾರದು. ತಾಯಂದಿರು ಈ ಕೊಲೆಸ್ಟ್ರಮ್‍ ಅನ್ನು ಸಂಪೂರ್ಣವಾಗಿ ಮಗುವಿಗೆ ನೀಡಬೇಕು. ಒಂದು ಹನಿಯೂ ವ್ಯರ್ಥವಾಗದಂತೆ ಈ ಜೀವ ದ್ರವವನ್ನು ಮಗುವಿಗೆ ಸಿಗುವಂತೆ ಮಾಡುವ ಹೊಣೆಗಾರಿಕೆ ತಾಯಂದಿರು ಮತ್ತು ದಾದಿಯರಿಗೆ ಇರುತ್ತದೆ. ಈ ಕಾರಣದಿಂದಲೇ ತಾಯಂದಿರು ಮಗು ಹುಟ್ಟಿದ ಕೂಡಲೇ ಒಂದೆರಡು ಗಂಟೆಗಳ ಒಳಗೆ ಮಗುವಿಗೆ ಸ್ತನಪಾನ ಮಾಡಿಸಲೇಬೇಕು. ಈ ಕೊಲೆಸ್ಟ್ರಮ್‍ನಲ್ಲಿ ತಾಯಿಯಿಂದ ಮಗುವಿಗೆ ಪೋಷಕಾಂಶಗಳು, ರೋಗಗಳಿಂದ ರಕ್ಷಣೆ ನೀಡುವ ಅತ್ಯಮೂಲ್ಯ ಆಂಟಿಬಾಡಿಗಳು ಇರುತ್ತದೆ. ಈ ಆಂಟಿಬಾಡಿಗಳು ಮಗುವನ್ನು ಹಲವಾರು ರೋಗಗಳಿಂದ ರಕ್ಷಿಸುತ್ತದೆ. ಮಗುವಿನ ಜೀವ ರಕ್ಷಕ ವ್ಯವಸ್ಥೆ ಮತ್ತು ರಕ್ಷಣಾ ವ್ಯವಸ್ಥೆ ಸರಿಯಾಗಿ ಬೆಳವಣಿಗೆ ಆಗಿ, ತನ್ನಿಂತಾನೇ ತನ್ನದೇ ದೇಹದಲ್ಲಿ ಆಂಟಿಬಾಡಿಗಳು ಉತ್ಪಾದನೆಯಾಗುವವರೆಗೆ ತಾಯಿಯಿಂದ ಕೊಲೆಸ್ಟ್ರಮ್‍ನ ಜೊತೆಗೆ ಬಳುವಳಿಯಾಗಿ ಬಂದ ಆಂಟಿಬಾಡಿಗಳು ಮಗುವನ್ನು ಮಾರಣಾಂತಿಕ ರೋಗಗಳಿಂದ ರಕ್ಷಿಸುತ್ತದೆ. ಮಗುವಿನ ರಕ್ಷಣಾ ವ್ಯವಸ್ಥೆಗೆ ಪೂರಕವಾಗಿ ಕೆಲಸ ಮಾಡಿ ಯಾವುದೇ ಸೋಂಕು ಶಿಶುವಿಗೆ ಬಾರದಂತೆ ತಡೆಯುತ್ತದೆ. ಈ ಜೀವದ್ರವ್ಯ ಕೊಲೆಸ್ಟ್ರಮ್‍ನಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಇರುತ್ತದೆ. ಈ ಪ್ರೋಟೀನ್ ಮಗುವಿನ ಆರಂಭಿಕ ಬೆಳವಣಿಗೆಗೆ ಮತ್ತು ರಕ್ಷಣಾ ವ್ಯವಸ್ಥೆಯನ್ನು ಸುದೃಡಗೊಳಿಸಲು ಅತೀ ಅವಶ್ಯಕ.
ಶಿಶುಗಳಲ್ಲಿ ಜೀರ್ಣಾಂಗ ವ್ಯವಸ್ಥೆ ಅತ್ಯಂತ ಚಿಕ್ಕದಾಗಿದ್ದು ಪ್ರಾಥಮಿಕ ಹಂತದಲ್ಲಿ ಇರುತ್ತದೆ. ಇಂತಹ ಸಂದರ್ಭದಲ್ಲಿ ಅತೀ ಹೆಚ್ಚು ಸಾಮಥ್ರ್ಯದ ಪೋಷಕಾಂಶಯುಕ್ತ ಪ್ರೋಟೀನ್ ಮತ್ತು ಖನಿಜಾಂಶಗಳು, ಜೀವಧಾತುಗಳನ್ನು ಅತೀ ಕಡಮೆ ಗಾತ್ರದಲ್ಲಿ ನೀಡುತ್ತದೆ. ಈ ಕೊಲೆಸ್ಟ್ರಮ್ ಮಗುವಿಗೆ ಮೊದಲ ಮಲವಿರ್ಸಜನೆ ಮಾಡಲು ಪೂರಕವಾದ ವಾತಾವರಣ ನಿರ್ಮಿಸಿ ಕೊಡುತ್ತದೆ. ಶಿಶುಗಳ ಮೊದಲ ಮಲವನ್ನು ಮೆಕೋನಿಯಮ್ ಎನ್ನುತ್ತಾರೆ. ಇದರ ಮುಖಾಂತರ ದೇಹದಲ್ಲಿನ ಹೆಚ್ಚಿನ ಪ್ರಮಾಣದ ‘ಬಿಲುರುಬಿನ್’ ಎಂಬ ವಸ್ತು ದೇಹದಿಂದ ಹೊರಹಾಕಲ್ಪಡುತ್ತದೆ. ಮಗು ತಾಯಿಯ ಗರ್ಭದಿಂದ ಹೊರ ಬಂದಾಗ ರಕ್ತದ ಪ್ರಮಾಣ ತೀವ್ರವಾಗಿ ಕಡಮೆಯಾಗಿ, ಕೆಂಪು ರಕ್ತಕಣಗಳು ಸತ್ತು ಹೋಗಿ ಅತಿ ಹೆಚ್ಚು ಪ್ರಮಾಣದಲ್ಲಿ ಬಿಲುರುಬಿನ್ ದೇಹದಲ್ಲಿ ಶೇಖರಣೆಯಾದಲ್ಲಿ ಮಗುವಿಗೆ ಕಾಮಾಲೆ ರೋಗ ಅಥವಾ ಜಾಂಡೀಸ್ ಬರುತ್ತದೆ. ಒಟ್ಟಿನಲ್ಲಿ ಈ ‘ಬಿಲುರುಬಿನ್’ ವರ್ಣದ್ರವ್ಯ ಸರಾಗವಾಗಿ ದೇಹದಿಂದ ಹೊರ ಹೋಗಲು ಕೊಲೆಸ್ಟ್ರಮ್ ಸಹಾಯ ಮಾಡುತ್ತದೆ.
ಕೊಲೆಸ್ಟ್ರಮ್‍ನಲ್ಲಿ ದೇಹದ ರಕ್ಷಣ ವ್ಯವಸ್ಥೆಯ ಸೈನಿಕರಾದ ‘ಲಿಂಪೋಸೈಟ್’ ಎಂಬ ಬಿಳಿರಕ್ತಕಣಗಳು ಮತ್ತು ಅತೀ ಪ್ರಮುಖವಾದ ಆಂಟಿಬಾಡಿಗಳಾದ IgA, IgG ಮತ್ತು IgM ಇರುತ್ತದೆ. ಇದಲ್ಲದೆ ಲೈಜೋಜೈಮ್, ಲಾಕ್ಟೋಪೆರಾಕ್ಸಿಡೇಸ್, ಕಾಂಪ್ಲಿಮೆಂಟ್, ಪಾಲಿಪೆಪ್ಟೈಡ್, ಇಂಟರ್‍ಲ್ಯುಕಿನ್, ಸೈಟೋಕೈನ್ ಮುಂತಾದ ಅತೀ ಅವಶ್ಯಕ ಜೀವರಕ್ಷಕ ಧಾತುಗಳು ಇರುತ್ತದೆ.

ಕೊನೆಮಾತು :-

ಜಗತ್ತಿನಲ್ಲಿ ಜನ್ಮವೆತ್ತ ಪ್ರತಿ ಜೀವಸಂಕುಲಕ್ಕೂ, ಹುಟ್ಟಿದ ತಕ್ಷಣದಿಂದ ಆಹಾರ ಅತೀ ಅವಶ್ಯಕ. ನವಜಾತ ಶಿಶುವಿಗೆ ತಾಯಿಯ ಎದೆಹಾಲಿಗೆ ಸರಿ ಸಮಾನವಾದ ಆಹಾರ ಇನ್ನೊಂದಿಲ್ಲ. ಎದೆಹಾಲು ಎನ್ನುವುದು ಮಗುವಿಗೆಂದೇ ತಯಾರಾದ ನೈಸರ್ಗಿಕ ಆಹಾರ. ಅಥವಾ ಜೀವ ರಕ್ಷಕ ಜೀವದ್ರವ್ಯ. ಎದೆಹಾಲು ಕುಡಿಸುವುದರಿಂದ ತಾಯಿಗೆ ಮಾತೃತ್ವದ ಖುಷಿ ದೊರಕಿದರೆ ಮಗುವಿಗೆ ಆಹಾರದ ಜೊತೆಗೆ ಸುರಕ್ಷತೆಯ ಭಾವ ಮೂಡುತ್ತದೆ. ಸ್ತನಪಾನ ಕ್ರಿಯೆಯಲ್ಲಿ ತಾಯಿ ಮತ್ತು ಶಿಶುವಿಗೆ ಪರಸ್ಪರವಾಗಿ ಒಬ್ಬರಿಗೆ ಒಬ್ಬರ ಉಸಿರು, ವಾಸನೆ, ಹೃದಯ ಬಡಿತ ಸಮ್ಮಿಳಿತಗೊಂಡು ಅನ್ಯೋನತೆಯ ಎಳೆಗಳು ಬೆಸೆದುಕೊಳ್ಳುತ್ತದೆ. ಎದೆ ಹಾಲು ಉತ್ಪತ್ತಿಯಾಗುವ ಮೊದಲು ಒಸರುವ ಹಳದಿ ಬಣ್ಣದ ಜೀವದ್ರವ್ಯ, ಕೊಲೆಸ್ಟ್ರಮ್ ಕೋಟಿಕೋಟಿ ಕೊಟ್ಟರೂ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಮಗು ಹುಟ್ಟಿದ ಮೂರರಿಂದ ನಾಲ್ಕು ದಿನಗಳವರೆಗೆ ಕೊಲೆಸ್ಟ್ರಮ್ ಮಗುವಿಗೆ ಸಿಗುತ್ತದೆ. ಅ ಬಳಿಕ ಹೆಚ್ಚು ಎದೆ ಹಾಲು ಉತ್ಪತ್ತಿಯಾಗಿ ಕೊಲೆಸ್ಟ್ರಮ್ ಅಂಶ ಕಡಿಮೆಯಾಗುತ್ತದೆ. ಕೆಲವೊಮ್ಮೆ ನೀರು ನೀರಾಗಿ ಬಣ್ಣ ರಹಿತ ದ್ರವವಾಗಿ ಕಂಡು ಬಂದರೂ. ಕೊಲೆಸ್ಟ್ರಮ್‍ನಲ್ಲಿರುವ ಬೀಟಾಕೆರೊಟಿನ್ ಅಂಶದಿಂದಾಗಿ ಹೆಚ್ಚಾಗಿ ನಸು ಹಳದಿ ಬಣ್ಣ ಬರುತ್ತದೆ. ಪ್ರತಿಬಾರಿ ಸ್ತನ್ಯಪಾನ ಮಾಡಿದಾಗಲೂ ಮಗುವಿಗೆ ಅರ್ಧ ಟೀ ಸ್ಪೂನ್‍ನಷ್ಟು ಕೊಲೆಸ್ಟ್ರಾಮ್ ಮೊದಲ 24 ಗಂಟೆಗಳಲ್ಲಿ ದೊರಕುತ್ತದೆ. ಮಗುವಿನ ಸಣ್ಣ ಕರುಳಿನ ಗಾತ್ರ ಕೇವಲ 5ರಿಂದ 7ಮೀ.ಲೀ ಇರುವುದರಿಂದ ಪ್ರತಿಬಾರಿ ಸ್ತನಪಾನ ಮಾಡಿದಾಗ ಒಂದು ಟೀ ಸ್ಪೂನ್ ಕೊಲೆಸ್ಟ್ರಮ್ ಧಾರಾಳವಾಗಿ ಸಾಕಾಗುತ್ತದೆ. ಒಟ್ಟಿನಲ್ಲಿ ಕೋಟಿ ಕೋಟಿ ಕೊಟ್ಟರೂ ಸಿಗದ ಕೊಲೆಸ್ಟ್ರಮ್ ಶಿಶುಗಳ ಆರೋಗ್ಯವನ್ನು ಕಾಪಾಡುವ ಸಂಜೀವಿನಿ ಎಂದರೆ ಅತಿಶಯೊಕ್ತಿಯಲ್ಲ. ಪ್ರತೀ ತಾಯಂದಿರು ಈ ಕೊಲೆಸ್ಟ್ರಮ್ ಮಹತ್ವವನ್ನು ಅರಿತು ಮಗು ಹುಟ್ಟಿದ ಕೂಡಲೇ ಶಿಶುಗಳಿಗೆ ಸ್ತನ್ಯಪಾನ ಮಾಡಿಸಿದ್ದಲ್ಲಿ ಆರೋಗ್ಯವಂತ ಶಿಶುಗಳು ಮಕ್ಕಳಾಗಿ ಬೆಳೆದು ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯವಿದೆ ಅದರಲ್ಲಿಯೇ ಸಮಾಜದ ಹಿತ ಅಡಗಿದೆ.

ಡಾ|| ಮುರಲೀ ಮೋಹನ್ ಚೂಂತಾರು, MDS,DNB,MOSRCSEd(U.K), FPFA, M.B.A, ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು .

ಕರ್ನಾಟಕ ಹವಾಮಾನ ನಾಳೆ (ಜುಲೈ 29) ಬೆಳಿಗ್ಗೆ 8.30ರ ತನಕ ಹೀಗಿರಲಿದೆ - ಹವಾಮಾನ ಇಲಾಖೆ
28/07/2025

ಕರ್ನಾಟಕ ಹವಾಮಾನ ನಾಳೆ (ಜುಲೈ 29) ಬೆಳಿಗ್ಗೆ 8.30ರ ತನಕ ಹೀಗಿರಲಿದೆ - ಹವಾಮಾನ ಇಲಾಖೆ

28/07/2025

ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ಮತ್ತೆ ಕುಸಿದ ಗುಡ್ಡ. ಹೆದ್ದಾರಿ ಬಂದ್..

27/07/2025

ಮಂಗಳೂರು- ಬೆಂಗಳೂರು (ಪುತ್ತೂರು ಮಾರ್ಗ) ಎರಡು ಹೊಸ ಅಂಬಾರಿ ಉತ್ಸವ ಐಷಾರಾಮಿ ಸ್ಲೀಪರ್ ಬಸ್ ಸಂಚಾರ ಶುರು.

ಸೋಮವಾರ (ಜುಲೈ 28) ಬೆಳಿಗ್ಗೆ 8.30ರ ತನಕದ ಕರ್ನಾಟಕ ಹವಾಮಾನ
27/07/2025

ಸೋಮವಾರ (ಜುಲೈ 28) ಬೆಳಿಗ್ಗೆ 8.30ರ ತನಕದ ಕರ್ನಾಟಕ ಹವಾಮಾನ

20/07/2025

Amidst rising concern, the Karnataka govt has established a Special Investigation Team (SIT) to delve into grim allegations of mass graves, rapes, and homicides in Dharmasthala police station limit in Dakshina Kannada dist. This move follows intense pressure from the Karnataka State Women Commission and civil society, triggered by a whistleblower's harrowing disclosures. Check video for Home Minister byte - Full report in Citizen News puttur. Check the news link in Comment bis.

Yakshagana community grieves the demise of legendary performer Pathala Venkataramana Bhat. The 92-year-old maestro breat...
19/07/2025

Yakshagana community grieves the demise of legendary performer Pathala Venkataramana Bhat. The 92-year-old maestro breathed his last at home in Pathala on Saturday. Post breakfast, he was taken to a nearby hospital but could not recover. Bhat's exceptional dedication to Yakshagana leaves an indelible mark. Two sons, four daughters, and numerous loved ones survive him. Read full report in Citizen News Puttur. Check Link in the comment box

ಮಾಧ್ಯಮ ಅಕಾಡೆಮಿಯಿಂದ ಫೆಲೋಷಿಪ್‌ಗೆ : ಅರ್ಜಿ ಆಹ್ವಾನಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯ ವತಿಯಿಂದ ಪತ್ರಕರ್ತರಿಗೆ ಆರು ವಿಷಯಗಳ ಕುರಿತ ಫೆಲ...
18/07/2025

ಮಾಧ್ಯಮ ಅಕಾಡೆಮಿಯಿಂದ ಫೆಲೋಷಿಪ್‌ಗೆ : ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯ ವತಿಯಿಂದ ಪತ್ರಕರ್ತರಿಗೆ ಆರು ವಿಷಯಗಳ ಕುರಿತ ಫೆಲೋಷಿಪ್‌ಗೆ ಅರ್ಜಿ ಆಹ್ವಾನಿಸಲಾಗಿದೆ.

ಅಕಾಡೆಮಿಯ ಸಾಮಾನ್ಯ ಆಯವ್ಯಯದಡಿ ಎರಡು, ಮಹಿಳಾ ಆಯವ್ಯಯದಡಿ ಎರಡು ಹಾಗೂ ಪರಿಶಿಷ್ಟ ಜಾತಿ ಉಪಯೋಜನೆಯಡಿ ಒಂದು ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ಒಂದು ಫೆಲೋಷಿಪ್‌ ನೀಡಲಾಗುವುದು. ಫೆಲೋಷಿಪ್‌ ಅವಧಿ 6 ತಿಂಗಳು.
ಕನಿಷ್ಠ ಐದು ವರ್ಷ ಸೇವಾನುಭವ ಹೊಂದಿರುವ, ಕನಿಷ್ಠ 30 ವರ್ಷದಿಂದ 50 ವರ್ಷ ವಯೋಮಿತಿಯ ಪತ್ರಕರ್ತರು ಫೆಲೋಷಿಪ್‌ಗೆ ಅರ್ಜಿ ಸಲ್ಲಿಸಬಹುದು. ಪತ್ರಕರ್ತರು ಪದವೀಧರರಾಗಿರಬೇಕು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳು ಹಾಗೂ ಉಪಗ್ರಹ ಸುದ್ದಿವಾಹಿನಿಗಳಲ್ಲಿ ಕಾರ್ಯನಿರ್ವಹಿಸುತ್ತಿರಬೇಕು. ಈ ಕುರಿತು ಸಂಪಾದಕರ ದೃಢೀಕರಣ ಪತ್ರ ಸಲ್ಲಿಸಬೇಕು.

ಫೆಲೋಷಿಪ್‌ನ ವಿಷಯಗಳು ಈ ಕೆಳಗಿನಂತಿವೆ

1. ಬಾಲ್ಯವಿವಾಹ, POCSO, ಮರ್ಯಾದೆಗೇಡು ಹತ್ಯೆ- ಮಾಧ್ಯಮ ದೃಷ್ಟಿಕೋನ

2. ಕೃಷಿ ಸಂವಹನ- ಒಂದು ಅಧ್ಯಯನ

3. ಕಲ್ಯಾಣ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ

4. ಬುಡಕಟ್ಟು ಕಾಯ್ದೆಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ- ಮಾಧ್ಯಮ ನೋಟ

5. Role of Media in creating awareness on cybercrime and digital safety (ಇಂಗ್ಲಿಷ್‌ನಲ್ಲಿ ಅಧ್ಯಯನ ವರದಿ ಸಲ್ಲಿಸುವುದು)

6. ಮಾಧ್ಯಮ ಶಿಕ್ಷಣ ಮತ್ತು ವೃತ್ತಿ ನಡುವಿನ ಅಂತರ: ಕಾರಣಗಳು, ಪರಿಣಾಮ ಹಾಗೂ ಪರಿಹಾರ

ಫೆಲೋಷಿಪ್‌ ಅವಧಿ ಆರು ತಿಂಗಳು. ಅರ್ಜಿ ಸ್ವೀಕರಿಸಲು 2 ನೇ ಆಗಸ್ಟ್‌ 2025 ಕೊನೆಯ ದಿನವಾಗಿದ್ದು, ವಿಜೇತರ ಆಯ್ಕೆಯಲ್ಲಿ ಅಕಾಡೆಮಿಯ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್‌ಸೈಟ್‌ mediaacademy.karnataka.gov.in
ನಿಂದ ಡೌನ್‌ಲೋಡ್‌ ಮಾಡಿಕೊಂಡು ಭರ್ತಿ ಮಾಡಿ ಪೂರಕ ದಾಖಲೆಗಳು ಹಾಗೂ ಅಧ್ಯಯನ ಕುರಿತ ಟಿಪ್ಪಣಿಯೊಂದಿಗೆ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಪೋಡಿಯಂ ಬ್ಲಾಕ್‌, ವಿಶ್ವೇಶ್ವರಯ್ಯ ಗೋಪುರ, ಡಾ. ಬಿ.ಆರ್.‌ ಅಂಬೇಡ್ಕರ್‌ ವೀದಿ, ಬೆಂಗಳೂರು 560001 ಇವರಿಗೆ ಕಳುಹಿಸಬಹುದು ಅಥವಾ [email protected] ಗೆ ಇ - ಮೇಲ್ ಮೂಲಕ ಕಳಿಸಬಹುದು.

ಕರ್ನಾಟಕದ ಹವಾಮಾನ- ಜು.19ರ ಬೆಳಿಗ್ಗೆ 8.30ರ ತನಕದ ಹವಾಮಾನ ಮುನ್ಸೂಚನೆ ಚಿತ್ರಣ..
18/07/2025

ಕರ್ನಾಟಕದ ಹವಾಮಾನ- ಜು.19ರ ಬೆಳಿಗ್ಗೆ 8.30ರ ತನಕದ ಹವಾಮಾನ ಮುನ್ಸೂಚನೆ ಚಿತ್ರಣ..

ಜಿ.ಟಿ.ಟಿ.ಸಿ:  ಪ.ಜಾ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿಮಂಗಳೂರು: ಜಿ.ಟಿ.ಟಿ.ಸಿ ಮಂಗಳೂರು ಕೇಂದ್ರದಲ್ಲಿ 2025-26ನೆ ಸಾಲಿನ “ತಂತ್ರಜ್ಞಾನ ತರಬೇತ...
18/07/2025

ಜಿ.ಟಿ.ಟಿ.ಸಿ: ಪ.ಜಾ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ
ಮಂಗಳೂರು: ಜಿ.ಟಿ.ಟಿ.ಸಿ ಮಂಗಳೂರು ಕೇಂದ್ರದಲ್ಲಿ 2025-26ನೆ ಸಾಲಿನ “ತಂತ್ರಜ್ಞಾನ ತರಬೇತಿ ಸಂಸ್ಥೆಗಳ ನೆರವು ಯೋಜನೆ, ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ” ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಂದ ಸಿ.ಎನ್.ಸಿ. ಪ್ರೊಗ್ರಾಮರ್, ಲೇತ್ ಆಪರೇಟರ್, ಮಿಲ್ಲಿಂಗ್ ಮೆಶಿನ್ ಆಪರೇಟರ್, ಸರ್ಫೇಸ್ ಗ್ರೈಂಡಿಂಗ್ ಆಪರೇಟರ್, ಮೆಕಾನಿಕಲ್ ಡಿಸೈನರ್ 4 ತಿಂಗಳ ಸರ್ಟಿಫಿಕೆಟ್ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಕೋರ್ಸ್‍ಗೆ 10 ನೇ ತರಗತಿ ಪಾಸ್ ಅಥವಾ ಐಟಿಐ ಪಾಸ್/ಫೇಲ್ ಅಥವಾ ಡಿಪ್ಲೊಮೊ ಪಾಸ್/ಫೇಲ್ ಹಾಗೂ ಇಂಜಿನಿಯರಿಂಗ್ ಪಾಸ್/ಫೇಲ್ ಆದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೋರ್ಸ್‍ಗಳು ಉಚಿತವಾಗಿದ್ದು, ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.2500 ಸ್ಟೈಪೆಂಡ್ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ನಗರದ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದ ಜಿ.ಟಿ.ಟಿ.ಸಿ ಕೇಂದ್ರವನ್ನು (ದೂ.ಸಂ : 8073208137, 7899070548, 9481265587) ಸಂಪರ್ಕಿಸಬಹುದು ಎಂದು ಜಿ.ಟಿ.ಟಿ.ಸಿ ಪ್ರಾಂಶುಪಾಲರು ತಿಳಿಸಿದ್ದಾರೆ.

ನಾಳೆ ಬೆಳಗ್ಗೆ ೮.೩೦ರ ತನಕದ ಮಳೆ ಮುನ್ಸೂಚನೆ...
17/07/2025

ನಾಳೆ ಬೆಳಗ್ಗೆ ೮.೩೦ರ ತನಕದ ಮಳೆ ಮುನ್ಸೂಚನೆ...

Address

Bolwar
Puttur
574201

Alerts

Be the first to know and let us send you an email when Citizen News Puttur posts news and promotions. Your email address will not be used for any other purpose, and you can unsubscribe at any time.

Share