Melbourne kannada christians

  • Home
  • Melbourne kannada christians

Melbourne kannada christians A page to share devotionals, updates of kannada special Christian programs. A platform to unite Kannadiga Christians in Melbourne together.

17/01/2026

ಇಂದು ಬೆಳಿಗ್ಗೆ ನಾನು ಶಾಂತಿಯಿಂದ ಒಂದು ಪುಸ್ತಕ ಓದುತ್ತಿದ್ದೆ. ಅದನ್ನು ಓದುತ್ತಿರುವಾಗ, ಪಶ್ಚಾತ್ತಾಪದ ಕುರಿತು ದೇವರು ನನ್ನ ಹೃದಯದಲ್ಲಿ ಒಂದು ಆಳವಾದ ಚಿಂತನೆ ಕೊಟ್ಟರು. ನಾನು ಈಗಾಗಲೇ ಕ್ರಿಸ್ತನಲ್ಲಿ ನಂಬಿಕೆಯ ಜೀವನ ನಡೆಸುತ್ತಿದ್ದವನಾದರೂ, ಆ ಪುಸ್ತಕದ ಕೆಲವು ವಾಕ್ಯಗಳು ನನ್ನೊಳಗೆ ಹೊಸ ತೇಜಸ್ಸು ಮೂಡಿಸಿದವು. ಪಶ್ಚಾತ್ತಾಪವೆಂದರೆ ಕೇವಲ ಕ್ರಿಸ್ತನನ್ನು ಅರಿತಿರದವರಿಗೆ ಮಾತ್ರವಲ್ಲ, ಈಗಾಗಲೇ ಕ್ರಿಸ್ತನಲ್ಲಿ ನಡೆಯುತ್ತಿರುವ ನಂಬಿಗಸ್ತನಿಗು ಪ್ರತಿದಿನ ಹೊಸತನ ಬೇಕೆಂಬ ಆತ್ಮೀಯ ಎಚ್ಚರಿಕೆಯಾಗಿದೆ ಎಂಬ ಸತ್ಯವನ್ನು ನನಗೆ ಸ್ಪಷ್ಟವಾಗಿ ತಿಳಿಯಿತು.

ಆ ಸಮಯದಲ್ಲಿ ದೇವರು ನನಗೆ ಚಿಟ್ಟೆಯ ಜೀವನವನ್ನು ನೆನಪಿಸಿದರು — ಅದು ಪ್ರಕೃತಿಯಲ್ಲಿರುವ ಒಂದು ಅದ್ಭುತ ದೃಶ್ಯ. ಮೊದಲು ಅದು ಎಲೆಯ ಮೇಲಿನ ಸಣ್ಣ ಮೊಟ್ಟೆಯಾಗಿ ಆರಂಭವಾಗುತ್ತದೆ. ನಂತರ ಅದು ಹುಳಾಗಿ ಬೆಳೆಯುತ್ತದೆ ಮತ್ತು ತಿನ್ನುತ್ತಾ ಬಲಿಷ್ಠವಾಗುತ್ತದೆ. ಬಳಿಕ ಅದು ತನ್ನ ಸುತ್ತಲೂ ಕೋಶವನ್ನು ನಿರ್ಮಿಸಿ ಅದರೊಳಗೆ ಶಾಂತವಾಗಿ ಬದಲಾವಣೆಯನ್ನು ಅನುಭವಿಸುತ್ತದೆ. ಕೊನೆಗೆ, ಅದೇ ಹುಳು ಸುಂದರ ಚಿಟ್ಟೆಯಾಗಿ ಹೊರಬಂದು ಸ್ವತಂತ್ರವಾಗಿ ಹಾರುತ್ತದೆ. ಇದೇ ನಂಬಿಗಸ್ತನ ಆತ್ಮೀಯ ಪಯಣದ ಸುಂದರ ರೂಪಕ. ಪಶ್ಚಾತ್ತಾಪಕ್ಕೂ ಮೊದಲು ಅವನು ಪಾಪದ ಭಾರದಿಂದ ದಣಿದವನಾಗಿದ್ದಾನೆ, ಹಳೆಯ ಸ್ವಭಾವದ ಬಂಧನದಲ್ಲಿ ಬದುಕುತ್ತಿದ್ದಾನೆ. ಪಶ್ಚಾತ್ತಾಪದ ಮಧ್ಯದಲ್ಲಿ ದೇವರು ಅವನ ಒಳಗಿನ ಮನಸ್ಸನ್ನು ಬದಲಾಯಿಸುತ್ತಾರೆ, ಗಾಯಗೊಂಡ ಹೃದಯಕ್ಕೆ ಚೇತರಿಕೆಯನ್ನು ನೀಡುತ್ತಾರೆ. ಪಶ್ಚಾತ್ತಾಪದ ನಂತರ ಅವನು ಚಿಟ್ಟೆಯಂತೆಯೇ ಕ್ರಿಸ್ತನ ಕೃಪೆಯ ಗಾಳಿಯಲ್ಲಿ ಹಾರುವ ಸ್ವಾತಂತ್ರ್ಯವನ್ನು ಅನುಭವಿಸುತ್ತಾನೆ.

ಬೈಬಲ್ ಹೇಳುತ್ತದೆ: “ಆದದರಿಂದ ನೀವು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ; ಆಗ ನಿಮ್ಮ ಪಾಪಗಳು ಅಳಿಸಲ್ಪಡುವುವು” (ಪ್ರೇರಿತರು 3:19). ನಿಜವಾದ ಪಶ್ಚಾತ್ತಾಪ ಬಂದಾಗ, ಹಳೆಯ ದ್ವೇಷಗಳು ಕರಗಿಹೋಗುತ್ತವೆ, ಅಹಂಕಾರವು ಸತ್ತುಹೋಗುತ್ತದೆ, ಮತ್ತು ಹೊಸ ವ್ಯಕ್ತಿತ್ವ ಕ್ರಿಸ್ತನಲ್ಲಿ ಬೆಳೆಯುತ್ತದೆ. “ಯಾರು ಕ್ರಿಸ್ತನಲ್ಲಿ ಇದ್ದಾರೋ ಅವರು ಹೊಸ ಸೃಷ್ಟಿ; ಹಳೆಯವು ಕಳೆಯಲ್ಪಟ್ಟಿವೆ; ಇಗೋ, ಎಲ್ಲಾ ಹೊಸದಾಗಿದೆ” (2 ಕೊರಿಂಥದವರಿಗೆ 5:17) ಎಂಬ ಶಾಸ್ತ್ರ ವಚನವು ಅವನ ಜೀವನದಲ್ಲಿ ನಿಜವಾಗುತ್ತದೆ.

ಪಶ್ಚಾತ್ತಾಪವು ಒಂದು ಕ್ಷಣದ ಕೃಯೇಯಲ್ಲ; ಅದು ಪ್ರತಿದಿನದ ಜೀವನದ ಭಾಗವಾಗಿದೆ. ಪ್ರತಿದಿನ ತನ್ನ ತಪ್ಪುಗಳನ್ನು ದೇವರ ಮುಂದೆ ಒಪ್ಪಿಕೊಳ್ಳುವಾಗ, ದೇವರು ಅವನ ಹೃದಯವನ್ನು ಹೊಸತಾಗಿಸುತ್ತಾರೆ. ಬೈಬಲ್ ಹೇಳುತ್ತದೆ: “ನಾವೇ ನಮ್ಮ ಪಾಪಗಳನ್ನು ಅಂಗೀಕರಿಸಿದರೆ, ಆತನು ನಂಬಿಗಸ್ತನೂ ನ್ಯಾಯವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷಮಿಸಿ ಎಲ್ಲಾ ಅಧರ್ಮದಿಂದ ನಮ್ಮನ್ನು ಶುದ್ಧಗೊಳಿಸುವನು” (1 ಯೋಹಾನ 1:9). ಈ ಪಶ್ಚಾತ್ತಾಪದ ಜೀವನವು ಅವನನ್ನು ಪ್ರತಿದಿನ ವಿನಯಶೀಲನನ್ನಾಗಿ, ಶುದ್ಧನನ್ನಾಗಿ, ಮತ್ತು ದೇವರ ಕೃಪೆಯೊಳಗೆ ಬೆಳೆಯುವವನನ್ನಾಗಿ ರೂಪಿಸುತ್ತದೆ. ಕ್ರಿಸ್ತನಲ್ಲಿ ಹಳೆಯದನ್ನು ಬಿಟ್ಟು ಹೊಸ ರೆಕ್ಕೆಗಳಲ್ಲಿ ಹಾರುವಂತೆಯೇ ಅವನ ಆತ್ಮೀಯ ಜೀವನ ರೂಪಾಂತರಗೊಳಿಸುತದೆ.

Address


Opening Hours

18:30 - 21:00

Website

Alerts

Be the first to know and let us send you an email when Melbourne kannada christians posts news and promotions. Your email address will not be used for any other purpose, and you can unsubscribe at any time.

Shortcuts

  • Want your business to be the top-listed Media Company?

Share