Namma Chikodi

  • Home
  • Namma Chikodi

Namma Chikodi Information About Chikodi and Belagavi district. All current affairs, Religious & other Information..

26/07/2025

ರಾಧಾನಗರಿ ಜಲಾಶಯ ಪೂರ್ತಿ ಭರ್ತಿ...Radhanagari Dam live 🔴 इशारा 🔴 आज दि. 25/7/2025 रात्री 10.03 वा. राधानगरी धरणाचे स्वयंचलित द्वार क्र. 6 सुद्ध....

CB KORE ಕಾಲೇಜಿನಲ್ಲಿ ಒಂದು ದಿನದ ಕಾರ್ಯಾಗಾರ.. ಪತ್ರಿಕೋದ್ಯಮದಲ್ಲಿ AI ನಿಂದ ಕ್ರಾಂತಿ: ಶ್ರೀಕಾಂತ ಕುಬಕಡ್ಡಿ.. ಚಿಕ್ಕೋಡಿ: ಜಗತ್ತಿನ ಎಲ್ಲಾ ...
25/07/2025

CB KORE ಕಾಲೇಜಿನಲ್ಲಿ ಒಂದು ದಿನದ ಕಾರ್ಯಾಗಾರ..

ಪತ್ರಿಕೋದ್ಯಮದಲ್ಲಿ AI ನಿಂದ ಕ್ರಾಂತಿ: ಶ್ರೀಕಾಂತ ಕುಬಕಡ್ಡಿ..

ಚಿಕ್ಕೋಡಿ: ಜಗತ್ತಿನ ಎಲ್ಲಾ ಕ್ಷೇತ್ರದಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI) ಬಹು ಮುಖ್ಯವಾದ ಕ್ರಾಂತಿಕಾರಿ ಬೆಳವಣಿಗೆಯಲ್ಲಿ ಮುಂದಿದೆ. ಪತ್ರಿಕೋದ್ಯಮದಲ್ಲಿ AI , ಡಿಜಿಟಲ್ ಮಾಧ್ಯಮ,ಸುದ್ದಿ ವಿಶ್ಲೇಷಣೆ, ಆ್ಯಂಕರಿಂಗ, ಗ್ರಾಫಿಕ್ಸ್, ಸುಳ್ಳು ಸುದ್ದಿ ಪತ್ತೆ (ಫ್ಯಾಕ್ಟ್ ಚೆಕಿಂಗ್) ಸಾಮಾಜಿಕ ಜಾಲತಾಣಗಳು, ಸಮೂಹ ಮಾಧ್ಯಮಗಳು ವರದಿಗಾರಿಕೆಗೆ ತಂತ್ರಜ್ಞಾನ ಅದ್ಭುತ ಶಕ್ತಿಯನ್ನು ನೀಡುತ್ತಿದೆ ಎಂದು ನ್ಯೂಸ್ ಫಸ್ಟ್ ಕನ್ನಡ ವಾಹಿನಿಯ ಹಿರಿಯ ಪತ್ರಕರ್ತ ಶ್ರೀಕಾಂತ್ ಕುಬಕಡ್ಡಿ ಹೇಳಿದರು.. ಚಿಕ್ಕೋಡಿಯ CB KORE ಕಾಲೇಜಿನಲ್ಲಿ ಇಂದು ದಿನದ ಕಾರ್ಯಾಗಾರ ನಡೆದು, ಕನ್ನಡ ಭಾಷೆ ಹಾಗೂ ಪತ್ರಿಕೋದ್ಯಮದ ವಿಭಾಗದಲ್ಲಿ ಡಿಜಿಟಲ್ ಮಾಧ್ಯಮದ ಮಹತ್ವದ ಹಾಗೂ ಅದರಿಂದ ಆಗುತ್ತಿರುವ ದುಷ್ಪರಿಣಾಮದ‌ ಕುರಿತು ನಡೆದ ಕಾರ್ಯಗಾರ..

ಶ್ರೀ ಸಂಪಾದನ ಚರಮೂರ್ತಿಮಠ, ಚಿಕ್ಕೋಡಿ ಇವರು ಶ್ರಾವಣ ಮಾಸದಲ್ಲಿ ಹಮ್ಮಿಕೊಂಡ "ಮಹಾತ್ಮರ ಚರಿತಾಮೃತ" ಪ್ರವಚನ ಕಾರ್ಯಕ್ರಮ
25/07/2025

ಶ್ರೀ ಸಂಪಾದನ ಚರಮೂರ್ತಿಮಠ, ಚಿಕ್ಕೋಡಿ ಇವರು ಶ್ರಾವಣ ಮಾಸದಲ್ಲಿ ಹಮ್ಮಿಕೊಂಡ "ಮಹಾತ್ಮರ ಚರಿತಾಮೃತ" ಪ್ರವಚನ ಕಾರ್ಯಕ್ರಮ

ಬರುವ ಅಕ್ಟೋಬರ್ ೧೯ ರಂದು ನಡೆಯುವ ಬಿಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಮಾ...
23/07/2025

ಬರುವ ಅಕ್ಟೋಬರ್ ೧೯ ರಂದು ನಡೆಯುವ ಬಿಡಿಸಿಸಿ ಬ್ಯಾಂಕ್ ಚುನಾವಣೆಯನ್ನು
ಸಮರ್ಥವಾಗಿ ಎದುರಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಮಾಜಿ ಸಂಸದ ಜೊಲ್ಲೆಯವರ ಯಕ್ಸಂಬಾ ಬ್ಯಾಂಕಿನಲ್ಲಿ ಮಂಗಳವಾರದಂದು ಸಭೆಯನ್ನು ನಡೆಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ರಾಜ್ಯಸಭಾ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ, ಗೋಕಾಕ ಶಾಸಕ ರಮೇಶ್‌ ಜಾರಕಿಹೊಳಿ, ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರ ನೇತೃತ್ವದಲ್ಲಿ ಬಿಡಿಸಿಸಿ ಬ್ಯಾಂಕಿನ ಚುನಾವಣೆಯು ನಡೆಯಲಿದೆ.
ಚುನಾವಣೆಗೆ ಇನ್ನೂ ಮೂರು ತಿಂಗಳ ಬಾಕಿ ಇರುವಾಗಲೇ ಈಗಿಂದಲೇ ಚುನಾವಣೆಯ ಅಖಾಡವು ಸಿದ್ಧಗೊಂಡಿದೆ.
ಈಗಾಗಲೇ ಮೊದಲ ಹಂತದಲ್ಲಿ ಪ್ರಚಾರ ಕಾರ್ಯವನ್ನು ಕೈಕೊಂಡಿದ್ದು, ಬಾಕಿ ಉಳಿದಿರುವ ರಾಯಬಾಗ, ನಿಪ್ಪಾಣಿ, ಬೈಲಹೊಂಗಲ ಮತ್ತು ಚೆನ್ನಮ್ಮನ ಕಿತ್ತೂರು ತಾಲ್ಲೂಕುಗಳಲ್ಲಿ ಇದೇ ಅಗಸ್ಟ್ ತಿಂಗಳಲ್ಲಿ ಪ್ರಚಾರ ಕಾರ್ಯವು ನಡೆಯಲಿದೆ.
ಜತೆಗೆ ಹುಕ್ಕೇರಿ ಮತ್ತು ಕಾಗವಾಡ ತಾಲ್ಲೂಕುಗಳಲ್ಲಿ ಚುನಾವಣೆಯನ್ನು ನಡೆಸಲು ಸಭೆಯು ತೀರ್ಮಾಣಿಸಿದೆ.
ಜಿದ್ದಾಜಿದ್ದಿನಿಂದ ಕೂಡಿರುವ ಈ ಬಿಡಿಸಿಸಿ ಬ್ಯಾಂಕಿನ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ನಮ್ಮ ಎಲ್ಲ ಅಭ್ಯರ್ಥಿಗಳ ಗೆಲುವಿಗೆ ಈಗಾಗಲೇ ರಣತಂತ್ರಗಳನ್ನು ಹೆಣೆಯಲಾಗಿದ್ದು, ಮತ್ತೊಂದು ಅವಧಿಗೆ ನಮ್ಮ ಬಣವು ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ವಿರೋಧಿಗಳು ಯಾರೇ ಆಗಿದ್ದರೂ ಅವರನ್ನು ಸಮರ್ಥವಾಗಿ ಎದುರಿಸಲು ನಮ್ಮ ಬಣವು ಸಿದ್ಧಗೊಂಡಿದೆ. ಅಧಿಕಾರವನ್ನು ಹಿಡಿದು ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ. ಈ ಚುನಾವಣೆಯು ಪಕ್ಷಾತೀತವಾಗಿದ್ದು, ಎಲ್ಲ ಪಕ್ಷಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಗೆ ಅಣಿಯಾಗುತ್ತಿದ್ದೇವೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ್ ಕುಲಗೋಡೆ, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡ್ರ, ಅರವಿಂದ ಪಾಟೀಲ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ, ಅಪ್ಪಾಸಾಹೇಬ್ ಜೊಲ್ಲೆ, ವಿಕ್ರಮ ಇನಾಂದಾರ, ಶಂಕರಗೌಡ ಪಾಟೀಲ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ಹಿರಿಯ ಪತ್ರಕಾರ್ಯರು ಶ್ರೀ ಸುಭಾಷ ದಲಾಲ ಸರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು...
22/07/2025

ಹಿರಿಯ ಪತ್ರಕಾರ್ಯರು ಶ್ರೀ ಸುಭಾಷ ದಲಾಲ ಸರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು...

22/07/2025
ರಾಯಬಾಗ ತಾಲೂಕಿನ ಹಾರೂಗೆರಿಯ ಜೈನ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ ಜಾರಕಿಹೊಳಿ ಹಾಗೂ ಮಾಜಿ ಸಂಸದರಾದ ಶ್ರೀ ರಮೇಶ ಕತ್ತಿ ಅವರ...
21/07/2025

ರಾಯಬಾಗ ತಾಲೂಕಿನ ಹಾರೂಗೆರಿಯ ಜೈನ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ ಜಾರಕಿಹೊಳಿ ಹಾಗೂ ಮಾಜಿ ಸಂಸದರಾದ ಶ್ರೀ ರಮೇಶ ಕತ್ತಿ ಅವರು ಅಕ್ಕಪಕ್ಕ ಕೂತು ಚರ್ಚಿಸುತ್ತಿದ್ದಾರೆ.

ಕಳೆದ ಕೆಲ ದಿನಗಳಿಂದ ಜಾರಕಿಹೊಳಿ Vs ಕತ್ತಿ ಕುಟುಂಬದ ನಡುವೆ ಮಾತಿನ ಸಮರ ನಡೆಯುತ್ತಿದೆ ಎಂದು ಎಲ್ಲೆಡೆ ಚರ್ಚೆ ನಡೆದಿತ್ತು. ಈಗ ಇಬ್ಬರು ನಾಯಕರು ಒಟ್ಟಿಗೆ ಕುಳಿತು ಚರ್ಚೆ ಮಾಡುತ್ತಿರುವುದು ಅನೇಕರಿಗೆ ಆಶ್ಚರ್ಯ ಉಂಟು ಮಾಡಿದೆ.

ನಮ್ಮ‌ ಪುಟದ ಬೆನ್ನೆಲುಬು... ಆತ್ಮೀಯರಿಗೆ ಹುಟ್ಟು ಹಬ್ಬದ ಶುಭಾಶಯಗಳು...🤗🤗
21/07/2025

ನಮ್ಮ‌ ಪುಟದ ಬೆನ್ನೆಲುಬು... ಆತ್ಮೀಯರಿಗೆ ಹುಟ್ಟು ಹಬ್ಬದ ಶುಭಾಶಯಗಳು...🤗🤗

ಕೊಲ್ಹಾಪುರದ ಮೊದಲ ಗಣಪತಿ ಆಗಮನ...ಕೊಲ್ಹಾಪುರದ ರಂಕಾಳಾವೇಸ್ ಗೋಲ್ ಸರ್ಕಲ್ ಮಂಡಳದ ಗಣಪ ಮೂರ್ತಿ ಇಂದು ಅಗಮನಗೊಂಡಿತ್ತು...✨ कोल्हापुर मधील रं...
20/07/2025

ಕೊಲ್ಹಾಪುರದ ಮೊದಲ ಗಣಪತಿ ಆಗಮನ...
ಕೊಲ್ಹಾಪುರದ ರಂಕಾಳಾವೇಸ್ ಗೋಲ್ ಸರ್ಕಲ್ ಮಂಡಳದ ಗಣಪ ಮೂರ್ತಿ ಇಂದು ಅಗಮನಗೊಂಡಿತ್ತು...

✨ कोल्हापुर मधील रंकाळावेस गोल सर्कल मंडळ्याच्या गणपतीचे करवीर. नगरी मध्ये ढोल-ताशांच्या गजरात जल्लोशात स्वागत..

‼️ मोरया...🙏🌺🚩

ಕೊಲ್ಹಾಪುರದ ಮೊದಲ ಗಣಪತಿ ಆಗಮನ... First Welcome of Ganapati in Kolhapur

ಚಿಕ್ಕೋಡಿಯ ಹಿರಿಯ ಪತ್ರಕರ್ತರಾದ ಕಾಶಿನಾಥ ಸುಳಕೂಡೆ ಅವರು ಪುಢಾರಿ ನ್ಯೂಸ್ ಸೇಟೆಲೇಟ್ ಚಾನೆಲ್ ( ಸ್ಟೇಟ್ ಲೆವಲ ಸುದ್ದಿವಾಹಿನಿ)  ವರದಿಗಾರರಾಗಿ ...
18/07/2025

ಚಿಕ್ಕೋಡಿಯ ಹಿರಿಯ ಪತ್ರಕರ್ತರಾದ ಕಾಶಿನಾಥ ಸುಳಕೂಡೆ ಅವರು ಪುಢಾರಿ ನ್ಯೂಸ್ ಸೇಟೆಲೇಟ್ ಚಾನೆಲ್ ( ಸ್ಟೇಟ್ ಲೆವಲ ಸುದ್ದಿವಾಹಿನಿ) ವರದಿಗಾರರಾಗಿ ಆಯ್ಕೆ ಆಗಿದ್ದಾರೆ. ಅವರಿಗೆ ಹಾರ್ದಿಕ ಅಭಿನಂದನೆಗಳು... 🌸

Address


Website

Alerts

Be the first to know and let us send you an email when Namma Chikodi posts news and promotions. Your email address will not be used for any other purpose, and you can unsubscribe at any time.

Contact The Business

Send a message to Namma Chikodi:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share