Skyline Dilip

  • Home
  • Skyline Dilip

Skyline Dilip Karnataka rashtriya samiti

ಸರ್ವರಿಗೂ 79ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳುವಿಶ್ವದಲ್ಲಿ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿರುವ ಭಾರತ ಇಂದು 79...
15/08/2025

ಸರ್ವರಿಗೂ 79ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು

ವಿಶ್ವದಲ್ಲಿ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿರುವ ಭಾರತ ಇಂದು 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯಲ್ಲಿದೆ. ಭಾರತದ ಸ್ವಾತಂತ್ರ್ಯಕ್ಕಾಗಿ ತ್ಯಾಗ-ಬಲಿದಾನಗೈದ ಮಹಾತ್ಮರು, ಕ್ರಾಂತಿಕಾರಿಗಳು ಮತ್ತು ಸಮಸ್ತ ಸ್ವಾತಂತ್ರ್ಯ ಹೋರಾಟಗಾರರಿಗೆ ಶತ ಶತ ಕೋಟಿ ನಮನಗಳು. ರಾಷ್ಟ್ರ ನಿರ್ಮಾತೃರನ್ನು ಸ್ಮರಿಸಿ ಗೌರವಿಸುತ್ತ ಭವ್ಯ ಭಾರತಕ್ಕಾಗಿ ಒಟ್ಟಾಗಿ ಶ್ರಮಿಸೋಣ. ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು. ವಂದೇ ಮಾತರಂ.

Republic TV Kannada
Skyline Dilip

*ಮಾಧ್ಯಮ ತರಬೇತಿ: ವೃತ್ತಿಜೀವನಕ್ಕೆ ಹೊಸ ದಾರಿ*ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರವು ಒಂದು ಆಕರ್ಷಕ ಮತ್ತು ಬೇಡಿಕೆಯ ವೃತ್ತಿಜೀವನದ ಆಯ್ಕೆಯ...
05/08/2025

*ಮಾಧ್ಯಮ ತರಬೇತಿ: ವೃತ್ತಿಜೀವನಕ್ಕೆ ಹೊಸ ದಾರಿ*

ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರವು ಒಂದು ಆಕರ್ಷಕ ಮತ್ತು ಬೇಡಿಕೆಯ ವೃತ್ತಿಜೀವನದ ಆಯ್ಕೆಯಾಗಿ ಹೊರಹೊಮ್ಮಿದೆ. ಸಿನಿಮಾ, ಧಾರಾವಾಹಿ, ಸುದ್ದಿವಾಹಿನಿ, ಮತ್ತು ಪತ್ರಿಕೆಗಳಲ್ಲಿ ಕೆಲಸ ಮಾಡುವ ಆಸೆ ಅನೇಕ ಯುವಜನರಿಗಿದೆ. ಆದರೆ, ಈ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಕೇವಲ ಆಸೆ ಮಾತ್ರ ಸಾಕಾಗುವುದಿಲ್ಲ, ಅದಕ್ಕೆ ಸರಿಯಾದ ತರಬೇತಿ ಮತ್ತು ಜ್ಞಾನದ ಅಗತ್ಯವಿದೆ. ಈ ನಿಟ್ಟಿನಲ್ಲಿ, *'ಕಾವೇರಿ ನ್ಯೂಸ್' ಮತ್ತು 'ರಿಪಬ್ಲಿಕ್ ಟಿವಿ ಕನ್ನಡ'* ಜೊತೆಗೂಡಿ ಮಾಧ್ಯಮ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ತರಬೇತಿ ಕಾರ್ಯಕ್ರಮವು ಮಾಧ್ಯಮ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಆಸಕ್ತಿ ಇರುವವರಿಗೆ ಒಂದು ಉತ್ತಮ ವೇದಿಕೆಯನ್ನು ಒದಗಿಸುತ್ತದೆ. ತರಬೇತಿಯಲ್ಲಿ ಒಳಗೊಂಡಿರುವ ಕೆಲವು ಪ್ರಮುಖ ವಿಷಯಗಳು ಇಲ್ಲಿವೆ:

* PCR (Program Control Room): ಸುದ್ದಿ ಪ್ರಸಾರಕ್ಕೆ ಬೇಕಾದ ತಾಂತ್ರಿಕ ಜ್ಞಾನ ಮತ್ತು ನಿಯಂತ್ರಣ ಕೊಠಡಿಯ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಯಬಹುದು.

* News & Programme Anchoring: ಸುದ್ದಿ ಮತ್ತು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಕಲೆ, ಭಾಷೆಯ ಬಳಕೆ, ಮತ್ತು ಆತ್ಮವಿಶ್ವಾಸ ಬೆಳೆಸುವ ಬಗ್ಗೆ ತರಬೇತಿ ನೀಡಲಾಗುತ್ತದೆ.

* Television & News Paper Reporting: ಕ್ಷೇತ್ರಕ್ಕೆ ಹೋಗಿ ವರದಿ ಮಾಡುವ ವಿಧಾನ, ಸುದ್ದಿ ಸಂಗ್ರಹಣೆ, ಮತ್ತು ಸುದ್ದಿ ಪತ್ರಿಕೆಗಳಿಗೆ ಲೇಖನ ಬರೆಯುವ ಕೌಶಲ್ಯಗಳನ್ನು ಕಲಿಸಲಾಗುತ್ತದೆ.

* Writing for Television & Print Media: ಟಿವಿ ಮತ್ತು ಪತ್ರಿಕೆಗಳಿಗೆ ಸ್ಕ್ರಿಪ್ಟ್ ಬರೆಯುವುದು, ಲೇಖನ ರಚನೆ ಮತ್ತು ವಿಷಯ ವಿಶ್ಲೇಷಣೆಯ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ.

* Video Editing, Video Mixing: ವೀಡಿಯೊ ಸಂಪಾದನೆ ಮತ್ತು ಮಿಶ್ರಣ ತಂತ್ರಜ್ಞಾನದ ಬಗ್ಗೆ ಪ್ರಾಯೋಗಿಕ ತರಬೇತಿ ಇರುತ್ತದೆ.

* Special Effects, Documentary: ವಿಶೇಷ ಪರಿಣಾಮಗಳನ್ನು ಬಳಸುವ ವಿಧಾನ ಮತ್ತು ಸಾಕ್ಷ್ಯಚಿತ್ರಗಳ ನಿರ್ಮಾಣದ ಬಗ್ಗೆ ಜ್ಞಾನ ಹಂಚಿಕೊಳ್ಳಲಾಗುತ್ತದೆ.

* Films, Serial Editing: ಚಲನಚಿತ್ರ ಮತ್ತು ಧಾರಾವಾಹಿಗಳ ಸಂಪಾದನೆಯಲ್ಲಿನ ಪ್ರಮುಖ ಹಂತಗಳ ಬಗ್ಗೆ ತಿಳಿಸಲಾಗುತ್ತದೆ.

* Film & Short Movies Making: ಚಲನಚಿತ್ರ ಮತ್ತು ಕಿರುಚಿತ್ರಗಳ ನಿರ್ಮಾಣ ಪ್ರಕ್ರಿಯೆಯ ಬಗ್ಗೆ ಸಂಪೂರ್ಣ ತರಬೇತಿ ನೀಡಲಾಗುತ್ತದೆ.

ಈ ತರಬೇತಿಯ ಒಂದು ವಿಶೇಷತೆಯೆಂದರೆ, ಇದು ಉದ್ಯೋಗಾವಕಾಶಗಳಿಗೂ ಸಹ ಸಹಾಯ ಮಾಡುತ್ತದೆ. ತರಬೇತಿ ಪಡೆದವರಿಗೆ ಕೆಲಸ ಪಡೆಯಲು ಮಾರ್ಗದರ್ಶನ ನೀಡಲಾಗುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು: 9845662145, 8549872102. ತರಬೇತಿ ಕೇಂದ್ರವು ಹೊಯ್ಸಳ ಸರ್ಕಲ್, 19, 12th ಕ್ರಾಸ್ ರಸ್ತೆ, ಎಂ.ಟಿ.ಎಸ್ ಲೇಔಟ್, ಜ್ಞಾನಭಾರತಿ, ಸ್ಟೇಜ್ 2, ಕೆಂಗೇರಿ ಸ್ಯಾಟಲೈಟ್ ಟೌನ್, ಬೆಂಗಳೂರು - 560060, ಈ ವಿಳಾಸದಲ್ಲಿದೆ.
ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವವರಿಗೆ ಇದೊಂದು ಸುವರ್ಣಾವಕಾಶ. ಸರಿಯಾದ ತರಬೇತಿ ಮತ್ತು ಮಾರ್ಗದರ್ಶನದ ಮೂಲಕ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬಹುದು.

ತ್ಯಾಗ ಪ್ರೀತಿ ಮಮತೆ ಕರುಣೆಯ ಪ್ರತಿರೂಪವಾಗಿ ನಿಸ್ವಾರ್ಥ ಸೇವೆಯ ಮೂಲಕ ಜಗತ್ತನ್ನು ಸಲಹುತ್ತಿರುವ ಎಲ್ಲಾ ಮಾತೃ ಹೃದಯಗಳಿಗೆ 'ವಿಶ್ವ ತಾಯಂದಿರ ದಿನ...
11/05/2025

ತ್ಯಾಗ ಪ್ರೀತಿ ಮಮತೆ ಕರುಣೆಯ ಪ್ರತಿರೂಪವಾಗಿ ನಿಸ್ವಾರ್ಥ ಸೇವೆಯ ಮೂಲಕ ಜಗತ್ತನ್ನು ಸಲಹುತ್ತಿರುವ ಎಲ್ಲಾ ಮಾತೃ ಹೃದಯಗಳಿಗೆ 'ವಿಶ್ವ ತಾಯಂದಿರ ದಿನ'ದಂದು ನನ್ನ ಕೃತಜ್ಞತಾ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ

ವಾತ್ಸಲ್ಯ ಕರುಣೆ ಮಮತೆಯ ಮಹಾಸಾಗರವೇ ಆಗಿರುವ ತಾಯಿಗಿಂತ ಮಿಗಿಲಾದ ದೇವರಿಲ್ಲ ಅಮ್ಮನಿಲ್ಲದ ಜಗವನ್ನು ಊಹಿಸಲೂ ಸಾಧ್ಯವಿಲ್ಲ ಅಮ್ಮನ ಮಡಿಲು ದೈವ ಸನ್ನಿಧಿಗಿಂತಲೂ ಮಿಗಿಲು
ಮಾತೃದೇವೋ ಭವ 🙏

#ವಿಶ್ವತಾಯಂದಿರದಿನ

18-04-2025 ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಯಾಗುತ್ತಿರುವ *ಕೋರ* ಸಿನಿಮಾ ಯಶಸ್ವಿಯಾಗಿ ಜನಪ್ರಿಯ ವಾಗಲಿ. ಚಿತ್ರದ ನಿರ್ಮಾಪಕರಾದ "ಪಿ.ಮೂರ್ತಿ...
15/04/2025

18-04-2025 ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಯಾಗುತ್ತಿರುವ *ಕೋರ* ಸಿನಿಮಾ ಯಶಸ್ವಿಯಾಗಿ ಜನಪ್ರಿಯ ವಾಗಲಿ.

ಚಿತ್ರದ ನಿರ್ಮಾಪಕರಾದ "ಪಿ.ಮೂರ್ತಿ' ಹಾಗೂ "ಪಿ ಚೆಲುವರಾಜ್" ಅಣ್ಣನವರಿಗೆ ಹಾಗೂ ಸ್ನೇಹಿತರಾದ ನಿರ್ದೇಶಕ "ಒರಟ ಶ್ರೀ" ನಾಯಕ ನಟ "ಸುನಾಮಿ ಕಿಟ್ಟಿ" ಹಾಗೂ ಚಿತ್ರತಂಡದ ಎಲ್ಲರಿಗೂ ಶುಭಾಶಯಗಳು,

ಇಂದ
ದಿಲೀಪ್ ಕುಮಾರ್
(ಸ್ಕೈಲೈನ್ ದಿಲೀಪ್)
[IFMA ನ್ಯಾಷನಲ್ ಪ್ರೆಸಿಡೆಂಟ್]

ಮನೋಜವಂ ಮಾರುತ ತುಲ್ಯವೇಗಂಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ||ವಾತಾತ್ಮಜಂ ವಾನರ ಯೂಥ ಮುಖ್ಯಂಶ್ರೀ ರಾಮದೂತಂ ಶಿರಸಾ ನಮಾಮಿ||ನಾಡಿನ ಸಮಸ್ತ ಜನ...
12/04/2025

ಮನೋಜವಂ ಮಾರುತ ತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ||
ವಾತಾತ್ಮಜಂ ವಾನರ ಯೂಥ ಮುಖ್ಯಂ
ಶ್ರೀ ರಾಮದೂತಂ ಶಿರಸಾ ನಮಾಮಿ||

ನಾಡಿನ ಸಮಸ್ತ ಜನತೆಗೆ ಪವನಸುತ, ಶ್ರೀರಾಮನ ಪರಮಭಕ್ತ, ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು.

5 ದಶಕಗಳಲ್ಲಿ 200ಕ್ಕೂ ಹೆಚ್ಚು ವಿಭಿನ್ನ, ಜನಪ್ರಿಯ ಚಿತ್ರಗಳಲ್ಲಿ ನಟಿಸಿ ಗಾಯಕರಾಗಿಯೂ ಅಪಾರ ಜನಮನ್ನಣೆಗಳಿಸಿದ,ಕನ್ನಡಿಗರ ಮನೆ ಮನದಲ್ಲಿ ಶಾಶ್ವತ...
12/04/2025

5 ದಶಕಗಳಲ್ಲಿ 200ಕ್ಕೂ ಹೆಚ್ಚು ವಿಭಿನ್ನ, ಜನಪ್ರಿಯ ಚಿತ್ರಗಳಲ್ಲಿ ನಟಿಸಿ ಗಾಯಕರಾಗಿಯೂ ಅಪಾರ ಜನಮನ್ನಣೆಗಳಿಸಿದ,

ಕನ್ನಡಿಗರ ಮನೆ ಮನದಲ್ಲಿ ಶಾಶ್ವತವಾಗುಳಿದ ಕನ್ನಡ ಚಿತ್ರರಂಗದ ಧ್ರುವತಾರೆ,

ಐತಿಹಾಸಿಕ ಗೋಕಾಕ್ ಚಳುವಳಿಯ ಮುಂಚೂಣಿ ನಾಯತ್ವ ವಹಿಸಿದ್ದ,

ನಾಡೋಜ, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ, ಕರ್ನಾಟಕ ರತ್ನ ,‌ ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರನ್ನು ಗೌರವ ಪೂರ್ವಕವಾಗಿ ನೆನೆಯುತ್ತೇವೆ.

20/03/2025

ಪುನೀತ್ ರಾಜ್‌ಕುಮಾರ್‌ಗೆ ಗೌರವ ಸೂಚಕವಾಗಿ 'ಅಪ್ಪು ಟ್ಯಾಕ್ಸಿ' ಚಿತ್ರ ಘೋಷಣೆ; ಜಗ್ಗು ಸಿರ್ಸಿ ಆ್ಯಕ್ಷನ್ ಕಟ್!
ಚಿತ್ರದ ಶೀರ್ಷಿಕೆ ವಿನ್ಯಾಸವು ಹೃದಯಸ್ಪರ್ಶಿಯಾಗಿದ್ದು, ಪುನೀತ್ ರಾಜ್‌ಕುಮಾರ್ ಅವರ ಚಿತ್ರವನ್ನು ಒಳಗೊಂಡಿದೆ. ಅಪ್ಪು ಟ್ಯಾಕ್ಸಿ ಪುನೀತ್ ಅವರ ನಡವಳಿಕೆ ಮತ್ತು ಅವರು ಸಮಾಜದ ಮೇಲೆ ಬಿಟ್ಟ ಆಳವಾದ ಪ್ರಭಾವದ ಕುರಿತು ಹೇಳಲು ಪ್ರಯತ್ನಿಸುತ್ತದೆ.
ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಹುಟ್ಟುಹಬ್ಬದಂದು ದಿಲೀಪ್ ಕುಮಾರ್ ಎಚ್‌ಆರ್ ತಮ್ಮ ಮುಂಬರುವ ಚಿತ್ರ 'ಅಪ್ಪು ಟ್ಯಾಕ್ಸಿ'ಯನ್ನು ಘೋಷಿಸಿದ್ದಾರೆ. ಮಾರ್ಚ್ 17 ರಂದು ಈ ಘೋಷಣೆ ಮಾಡಲಾಗಿದೆ. ಸಿನಿಮಾ ಪತ್ರಿಕೋದ್ಯಮ, ಪ್ರೊಡಕ್ಷನ್ ಮತ್ತು ವಿತರಣೆಯಲ್ಲಿ ಎರಡು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ದಿಲೀಪ್ ಕುಮಾರ್ ಎಚ್‌ಆರ್ ಭಾರತೀಯ ಚಲನಚಿತ್ರ ತಯಾರಕರ ಸಂಘದ ಸಹ ಸಂಸ್ಥಾಪಕರಾಗಿದ್ದಾರೆ. ಅಪ್ಪು ಟ್ಯಾಕ್ಸಿ ಪುನೀತ್ ಅವರನ್ನು ಆಚರಿಸುವ ಗುರಿಯನ್ನು ಹೊಂದಿದೆ.

ಚಿತ್ರದ ಶೀರ್ಷಿಕೆ ವಿನ್ಯಾಸವು ಹೃದಯಸ್ಪರ್ಶಿಯಾಗಿದ್ದು, ಪುನೀತ್ ರಾಜ್‌ಕುಮಾರ್ ಅವರ ಚಿತ್ರವನ್ನು ಒಳಗೊಂಡಿದೆ. ಅಪ್ಪು ಟ್ಯಾಕ್ಸಿ ಪುನೀತ್ ಅವರ ನಡವಳಿಕೆ ಮತ್ತು ಅವರು ಸಮಾಜದ ಮೇಲೆ ಬಿಟ್ಟ ಆಳವಾದ ಪ್ರಭಾವದ ಕುರಿತು ಹೇಳಲು ಪ್ರಯತ್ನಿಸುತ್ತದೆ. ಸ್ಕೈಲೈನ್ ಮ್ಯೂಸಿಕ್‌ನ ಸಹಯೋಗದೊಂದಿಗೆ ಚಿತ್ರ ನಿರ್ಮಾಣವಾಗಲಿದೆ.

ಭಾರತೀಯ ಸಿನಿಮಾ ರಂಗದಲ್ಲಿ ಎರಡು ದಶಕಗಳ ಅನುಭವ ಹೊಂದಿರುವ ಅನುಭವಿ ಬರಹಗಾರ ಮತ್ತು ಚಲನಚಿತ್ರ ನಿರ್ದೇಶಕ ಜಗ್ಗು ಸಿರ್ಸಿ 'ಅಪ್ಪು ಟ್ಯಾಕ್ಸಿ' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಹಾಲಿವುಡ್‌ನಲ್ಲಿ ತರಬೇತಿ ಪಡೆದ ತಾಂತ್ರಿಕ ತಜ್ಞ ಶಾಮ್ ರೇ, ಅನಿಮೇಟೆಡ್ ಗ್ರಾಫಿಕ್ಸ್ ಅನ್ನು ನೋಡಿಕೊಳ್ಳುತ್ತಾರೆ. ಬರಹಗಾರ ವೈದ್ ಬರೆದ ಚಿತ್ರಕಥೆಯು ಪುನೀತ್ ಅವರ ಪರಂಪರೆಯ ಆಳ ಮತ್ತು ಸೌಂದರ್ಯವನ್ನು ತೆರೆ ಮೇಲೆ ತರುವ ಗುರಿಯನ್ನು ಹೊಂದಿದೆ.

ನಿಜ ಜೀವನದ ಘಟನೆಗಳನ್ನು ಆಧರಿಸಿದ 'ಅಪ್ಪು ಟ್ಯಾಕ್ಸಿ' ಚಿತ್ರವು, ಪುನೀತ್ ಸ್ವತಃ ಪ್ರತಿನಿಧಿಸಿದ ಮೌಲ್ಯಗಳು ಮತ್ತು ಆದರ್ಶಗಳ ಮೂಲಕ, ಮನುಷ್ಯನ ಜೀವನವನ್ನು ಪರಿವರ್ತಿಸಲು ಸಹಾಯ ಮಾಡುವ ಟ್ಯಾಕ್ಸಿ ಚಾಲಕನ ಪ್ರಯಾಣದ ಕುರಿತು ಹೇಳುತ್ತದೆ. ಈ ಚಿತ್ರವು ನಟ ತನ್ನ ಕಾರ್ಯಗಳು ಮತ್ತು ಮಾತುಗಳ ಮೂಲಕ ಅನೇಕರ ಜೀವನದ ಮೇಲೆ ಹೇಗೆ ಪರಿಣಾಮ ಬೀರಿದರು ಎಂಬುದನ್ನು ಎತ್ತಿ ತೋರಿಸುತ್ತದೆ.

ಅಪ್ಪು ಟ್ಯಾಕ್ಸಿ ಚಿತ್ರವನ್ನು ಬಹುಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. ಚಿತ್ರವು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು 2026ರ ಮಾರ್ಚ್ 17 ರಂದು ಬಿಡುಗಡೆಯಾಗಲಿದೆ.

ಅಭಿಮಾನಿಗಳ ದೇವರು ಪುನೀತ್ ರಾಜಕುಮಾರ್ ಜನ್ಮದಿನದ ಶುಭಾಶಯಗಳ ಅಂಗವಾಗಿ ಅಪ್ಪು ಅಭಿಮಾನಿಗಳಿಗೆ ಸಂಭ್ರಮದ ಸುದ್ದಿಯೊಂದು ಕನ್ನಡ ಚಿತ್ರರಂಗದಿಂದ, ದಿ...
17/03/2025

ಅಭಿಮಾನಿಗಳ ದೇವರು ಪುನೀತ್ ರಾಜಕುಮಾರ್ ಜನ್ಮದಿನದ ಶುಭಾಶಯಗಳ ಅಂಗವಾಗಿ ಅಪ್ಪು ಅಭಿಮಾನಿಗಳಿಗೆ ಸಂಭ್ರಮದ ಸುದ್ದಿಯೊಂದು ಕನ್ನಡ ಚಿತ್ರರಂಗದಿಂದ,
ದಿಲೀಪ್ ಕುಮಾರ್.ಎಚ್.ಆರ್ ರವರು ಸಿನಿಮಾ ಮಾಧ್ಯಮ ವಿಭಾಗದಲ್ಲಿ ಪತ್ರಕರ್ತರಾಗಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ, ಭಾರತೀಯ ಹಲವು ಭಾಷೆಯಲ್ಲಿಯ ಸಿನಿಮಾ ಮೇಲ್ವಿಚಾರಕರಾಗಿ ಕೆಲಸ ಮಾಡಿ, ನಿರ್ಮಾಪಕರಾಗಿ, ಸಿನಿಮಾ ಹಂಚಿಕೆದಾರರಾಗಿ, ಸಿನಿಮಾಗಳನ್ನು ಬಿಡುಗಡೆ ಮಾಡಿದ್ದಾರೆ, ಕನ್ನಡ ಚಿತ್ರರಂಗದ ದಂತಕಥೆ ಸ್ಕೈಲೈನ್ ಸ್ಟುಡಿಯೋವನ್ನು ಮರು ನಿರ್ಮಾಣ ಮಾಡಿ, ಇಂಡಿಯನ್ ಫಿಲಂ ಮೇಕರ್ ಅಸೋಸಿಯೇಷನ್ ಸ್ಥಾಪಿಸಿ 14 ರಾಜ್ಯಗಳಲ್ಲಿ ಈ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದ್ದು ಈ ಸಂಸ್ಥೆಯ ನ್ಯಾಷನಲ್ ಪ್ರೆಸಿಡೆಂಟ್ ಆಗಿರುವ ಇವರು, ಚಿತ್ರರಂಗದಲ್ಲಿ 20 ವರ್ಷಗಳ ಸುದೀರ್ಘ ಅನುಭವವುಳ್ಳ ವ್ಯಕ್ತಿಯಾಗಿದ್ದಾರೆ,
ಇವರು ಸ್ಕೈಲೈನ್ ಮ್ಯೂಸಿಕ್ ಸಂಸ್ಥೆಯ ಸಹಯೋಗತ್ವದಲ್ಲಿ ಅಪ್ಪು ಟ್ಯಾಕ್ಸಿ ಸಿನಿಮಾ ಶೀರ್ಷಿಕೆಯನ್ನು ಇಂದು ಅನಾವರಣಗೊಳಿಸಿದ್ದಾರೆ,
ಈ ಸಿನಿಮಾವನ್ನು ಕನ್ನಡ ಚಿತ್ರರಂಗದಲ್ಲಿ 20 ವರ್ಷಗಳಿಂದ ಬರಹಗಾರರಾಗಿ ಹಾಗೂ ಭಾರತೀಯ ಚಿತ್ರರಂಗದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ ಜಗ್ಗು ಶಿರಸಿ ಯವರು ನಿರ್ದೇಶನ ಮಾಡುತ್ತಿದ್ದಾರೆ, ತಾಂತ್ರಿಕತೆಯ ತಂತ್ರಜ್ಞರಾಗಿ ಶಾಮ್ ರೇ ಕಾರ್ಯನಿರ್ವಹಿಸುತ್ತಿದ್ದಾರೆ ಇವರು ಹಾಲಿವುಡ್ ಅನಿಮೇಟೆಡ್ ಗ್ರಾಫಿಕ್ಸ್ ಕ್ರಿಯೇಟರ್ ಆಗಿ ಕೆಲಸ ಮಾಡಿದ್ದಾರೆ, ಕಥಾ ಬರಹದಲ್ಲಿ ವೇದ್ ಭಾಗಿಯಾಗಿದ್ದಾರೆ,
ಜೀವನ ಸಂಚಾರ ಎನ್ನುವ ಕಥಾ ತಿರುಳನ್ನು ಇಟ್ಟುಕೊಂಡು ಪುನೀತ್ ರಾಜಕುಮಾರ್ ರವರ ಆದರ್ಶ ಜೀವನ ಮೌಲ್ಯದ ಸಾಂಕೇತಿಕವಾಗಿ ಒಬ್ಬ ಟ್ಯಾಕ್ಸಿ ಡ್ರೈವರ್ ಅಪ್ಪುರವರು ಮಾಡಿದ ಸಹಾಯದಿಂದ ತನ್ನ ಜೀವನ ರೂಪಿಸಿಕೊಂಡ ಸತ್ಯ ಘಟನೆಯನ್ನು ಆಧರಿಸಿ ಚಿತ್ರಕಥೆ ಸಾಗುವಂತಹ ಸಿನಿಮಾ ಇದಾಗಿದೆ, ಸಮಾಜದ ಎಷ್ಟೋ ಜನಗಳ ಜೀವನದ ಭಾಗವಾಗಿ ಅಪ್ಪು ರವರು ಪರೋಕ್ಷವಾಗಿ ಹೇಗೆ ಪ್ರಭಾವಿತರಾಗಿದ್ದಾರೆ ಎನ್ನುವ ವಿಷಯ ಜನಗಳಿಗೆ ತಿಳಿಯದ ಹಲವು ವಿಚಾರಗಳು ಅನಾವರಣಗೊಳ್ಳಲಿದೆ,
ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಾಣ ಆಗಲಿದೆ, ಈ ಸಿನಿಮಾ ತಾಂತ್ರಿಕತೆಯಲ್ಲಿ ಇಂಡಿಯಾದ ಹಾಲಿವುಡ್ ಸಿನಿಮಾ ಆಗಲಿದೆ, ಚಿತ್ರ ಪ್ರೇಮಿಗಳಿಗೆ ಮತ್ತು ಅಪ್ಪು ಅಭಿಮಾನಿಗಳಿಗೆ ಸಂಭ್ರಮದಿ ಸಂಭ್ರಮಿಸುವುದರ ಜೊತೆಗೆ ತಮ್ಮ ತಮ್ಮ ಜೀವನವನ್ನು ಅವಲೋಕನ ಮಾಡಿಕೊಳ್ಳುವಂತೆ ಚಿಂತನೆಗೆ ಒಳಪಡಿಸುವುದು, ಇಂದು ಸಿನಿಮಾ ಶೀರ್ಷಿಕೆಯನ್ನು ಮಾತ್ರ ಅನಾವರಣಗೊಳಿಸಿದ್ದಾರೆ, ಭಾರತೀಯ ಚಿತ್ರರಂಗದ ಹಲವು ಕಲಾವಿದರು ಇದರಲ್ಲಿ ಅಭಿನಯಿಸುತ್ತಿದ್ದಾರೆ,
ಅತ್ಯುನ್ನತ ಶ್ರೇಷ್ಠ ಸಿನಿಮಾಗಳಲ್ಲಿ ಕೆಲಸ ಮಾಡಿದ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಸಿನಿಮಾದ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಬಿಡುಗಡೆ ಮಾಡಲಿದೆ, ಎಂಬುವುದನ್ನು ಈ ಸಿನಿಮಾದ ಕಾರ್ಯಕಾರಿ ನಿರ್ಮಾಪಕರಾದಂತ ದಿಲೀಪ್ ಕುಮಾರ್.ಎಚ್.ಆರ್ ರವರು ಮಾಧ್ಯಮಕ್ಕೆ ತಿಳಿಸಿದ್ದಾರೆ, ಈ ಸಿನಿಮಾವನ್ನು ಮುಂದಿನ ವರ್ಷ 2026 ಮಾರ್ಚ್ 17ರಂದು ಅಪ್ಪು ರವರ ಜನ್ಮದಿನದಂದು ಬಿಡುಗಡೆ ಮಾಡಲು ಅತಿ ಕ್ರಿಯಾಶೀಲವಾಗಿ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ, ಎಂಬುವ ವಿಷಯ ಚಿತ್ರತಂಡ ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿದೆ, ಜೊತೆಗೆ ಸಿನಿಮಾದ ಪ್ರತಿ ವಿಚಾರಗಳನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಬಿಡುಗಡೆ ಮಾಡಲಿದ್ದಾರೆ,
ಈ ಸಿನಿಮಾ ಶೀರ್ಷಿಕೆ ವೈವಿಧ್ಯಮಯವಾಗಿದೆ, ಕಾರಣ ಅಪ್ಪು ರವರ ಭಾವಚಿತ್ರದಲ್ಲಿ ಸಿನಿಮಾ ಶೀರ್ಷಿಕೆ ರೂಪಿಸಿರುವುದು ಚಿತ್ರದ ನಿರ್ದೇಶಕ ಜಗ್ಗು ಸಿರ್ಸಿ ಅವರ ಕ್ರಿಯಾಶೀಲತೆಯ ಗುಣಮಟ್ಟದ ಮೌಲ್ಯವನ್ನು ತಿಳಿಸುತ್ತದೆ, ಈ ವರ್ಷದ ಸಿನಿಮಾ ನಿರ್ಮಾಣದಲ್ಲಿ ಭರವಸೆಯ ಸಿನಿಮಾ ಇದಾಗಲಿದೆ, ಅಪ್ಪು ರವರು ಸದಾ ಪ್ರತಿಯೊಬ್ಬರ ಹೃದಯದಲ್ಲಿ ಜೀವಂತವಾಗಿ ಸದಾ ವಿಜ್ರಂಬಿಸುತ್ತಿದ್ದಾರೆ ಎನ್ನಲು ಈ ಸಿನಿಮಾ ಸಾಕ್ಷಿಕರಿಸುತ್ತಲಿದೆ,

17.03.2025 ಸೋಮವಾರ 5:04am ರ ಬೆಳಿಗ್ಗೆ, ಅಭಿಮಾನಿಗಳ ದೇವರು ಪುನೀತ್ ರಾಜಕುಮಾರ್ ಅವರ ಜನ್ಮದಿನ ಪ್ರಯುಕ್ತ, ಚಿತ್ರ ಪ್ರೇಮಿಗಳಿಗೆ ಉಡುಗೊರೆಯಾಗ...
16/03/2025

17.03.2025 ಸೋಮವಾರ 5:04am ರ ಬೆಳಿಗ್ಗೆ, ಅಭಿಮಾನಿಗಳ ದೇವರು ಪುನೀತ್ ರಾಜಕುಮಾರ್ ಅವರ ಜನ್ಮದಿನ ಪ್ರಯುಕ್ತ, ಚಿತ್ರ ಪ್ರೇಮಿಗಳಿಗೆ ಉಡುಗೊರೆಯಾಗಿ ಜಗ್ಗು ಶಿರ್ಸಿ ನಿರ್ದೇಶನದ ಸಿನಿಮಾ ಶೀರ್ಷಿಕೆ, ಅನಾವರಣಗೊಳ್ಳುತ್ತಿದೆ.

08/03/2025

ಕನ್ನಡ ಚಿತ್ರರಂಗಕ್ಕೆ ಡಿಕೆಶಿ ನಟ್ಟು, ಬೋಲ್ಟ್ ಹೇಳಿಕೆ?! | DK Shivakumar | Sadhu Kokila | Republictvkannada

Address


Website

Alerts

Be the first to know and let us send you an email when Skyline Dilip posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share