
08/06/2025
*ಇಂದು ವಿರಾಜಪೇಟೆಯಲ್ಲಿ ದಕ್ಷಿಣ ಕೊಡಗು ದೈವಜ್ಞ ಸಮಾಜದ ವತಿಯಿಂದ ನೂತನ ಕಟ್ಟಡದ ಲೋಕಾರ್ಪಣೆ*
*ಕರ್ಕಿ ಶ್ರೀ ಜ್ಞಾನೇಶ್ವರಿ ಪೀಠ ದೈವಜ್ಞ ಬ್ರಾಹ್ಮಣ ಮಠದ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳಿಂದ ಉದ್ಘಾಟನೆ.*
# # # # # # # # # # # # #
ದೈವಜ್ಞ ಸಮಾಜ ದಕ್ಷಿಣ ಕೊಡಗು ಇವರು ವಿರಾಜಪೇಟೆಯಲ್ಲಿ ನಿರ್ಮಿಸಿರುವ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಇಂದು ಬೆಳಿಗ್ಗೆ 10.40ಕ್ಕೆ ನೆರವೇರಲಿದೆ.
ಶ್ರೀ ಕ್ಷೇತ್ರ ಕರ್ಕಿ ಶ್ರೀ ಜ್ಞಾನೇಶ್ವರಿ ಪೀಠ ದೈವಜ್ಞ ಬ್ರಾಹ್ಮಣ ಮಠ ದ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳ ಅಮೃತ ಹಸ್ತದಿಂದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ. ನಂತರ ಶ್ರೀಗಳಿಗೆ ಸಮಾಜದ ವತಿಯಿಂದ ಪಾದುಕ ಪೂಜೆ ಹಾಗೂ ಶ್ರೀ ಸತ್ಯನಾರಾಯಣ ವೃತ ಪೂಜೆ ಹಾಗು ಪ್ರಸಾದ ವಿನಿಯೋಗ ನಡೆಯಲಿದೆ.
ಮಧ್ಯಾಹ್ನ 3 ಗಂಟೆಗೆ ಸಭಾ ಕಾರ್ಯಕ್ರಮ , ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನೆರವೇರಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೈವಜ್ಞ ಸಮಾಜ ದಕ್ಷಿಣ ಕೊಡಗು ಇದರ ಅಧ್ಯಕ್ಷರಾದ ಉಲ್ಲಾಸ್ ಸಿ ಶೇಟ್ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್ ಪೊನ್ನಣ್ಣ , , ವಿಧಾನಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಪುರಸಭಾ ಅಧ್ಯಕ್ಷರಾದ ದೇಚ್ಚಮ ಕಾಳಪ್ಪ, ಸದಸ್ಯರಾದ ಶ್ರೀಮತಿ ಅನಿತಾ ಕುಮಾರ , ಅಖಿಲ ಕರ್ನಾಟಕ ದೈವಜ್ಞ ಸಮಾಜದ ಅಧ್ಯಕ್ಷರಾದ ರವಿ ಎಸ್ ಗಾಂವ್ಕರ್,, ಅಖಿಲ ಕರ್ನಾಟಕ ಮಹಿಳಾ ಸಮಾಜ ಅಧ್ಯಕ್ಷರಾದ ಶ್ರೀಮತಿ ವಿನಯ ಆರ್ ರಾಯ್ಕರ್, ಮಂಗಳೂರಿನ ದೈವಘ್ನ ಸೌರಭ ಪತ್ರಿಕೆಯ ಸಂಪಾದಕರಾದ ಶ್ರೀ ಪ್ರಶಾಂತ್ ಶೇಟ್ ರವರು ಭಾಗವಹಿಸಲಿದ್ದಾರೆ, ಸಭಾ ಕಾರ್ಯಕ್ರಮದ ನಂತರ ಸಂಜೆ 6 ರಿಂದ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ