30/09/2025
ಸಮಾಜದಲ್ಲಿ ದುಬಾರಿಯಾಗುತ್ತಿರುವ ಆರೋಗ್ಯ ಸೇವೆಗಳಿಂದ ಸೂಕ್ತ ಚಿಕಿತ್ಸೆಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿರುವ ಮಂದಿಯ ಅನುಕೂಲಕ್ಕಾಗಿ ಬಿಎಂಎಸ್ ಆಸ್ಪತ್ರೆ ಘಟಕ-೨ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಇತ್ತೀಚೆಗಷ್ಟೇ ತಾತಗುಣಿ ಬಳಿಯ ಅಗರ ಗ್ರಾಮದಲ್ಲಿರುವ ಮಾತೃಛಾಯಾ ಟ್ರಸ್ಟ್ ಆವರಣದ ಬಿಎಂಎಸ್ ಆಸ್ಪತ್ರೆ ಘಟಕ-೨ ರಲ್ಲಿ ಆಪರೇಷನ್ ಥಿಯೇಟರ್, ಡಯಾಲಿಸಿಸ್ ಸೆಂಟರ್ ಮತ್ತು ಐಸಿಯು ಘಟಕಗಳನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು, ಮೂತ್ರಪಿಂಂಡ ಶಾಸ್ತ್ರ, ಸಾಮಾನ್ಯ ಔಷಧ, ಪ್ರಸೂತಿ ಮತ್ತು ಸ್ತ್ರೀರೋಗ, ಕಿವಿ, ಮೂಗು ಮತ್ತು ಗಂಟಲು ಚಿಕಿತ್ಸೆ, ಮಕ್ಕಳ ವಿಭಾಗ, ಹೃದ್ರೋಗ, ಕೀಲು ಮತ್ತು ಮೂಳೆ ಚಿಕಿತ್ಸೆ, ಫಿಸಿಯೋಥೆರಪಿ, ಸಾಮಾನ್ಯ ಶಸ್ತ್ರ ಚಿಕಿತ್ಸೆ, ದಂತ ತಪಾಸಣೆಗೂ ಅವಕಾಶ ಕಲ್ಪಿಸಲಾಗಿತ್ತು.