Yuvabharatha news

  • Home
  • Yuvabharatha news

Yuvabharatha news Contact information, map and directions, contact form, opening hours, services, ratings, photos, videos and announcements from Yuvabharatha news, News & Media Website, .

ಗೋಕಾಕ: ನಾನು ಮತ್ತು ಗೋಕಾಕ ಶಾಸಕ ರಮೇಶ್‌ ಜಾರಕಿಹೊಳಿಯವರು ಸೇರಿಕೊಂಡು ಇದೇ ತಿಂಗಳ ಅಂತ್ಯದೊಳಗೆ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಅಭ್ಯರ್ಥಿಗಳನ್...
10/09/2025

ಗೋಕಾಕ: ನಾನು ಮತ್ತು ಗೋಕಾಕ ಶಾಸಕ ರಮೇಶ್‌ ಜಾರಕಿಹೊಳಿಯವರು ಸೇರಿಕೊಂಡು ಇದೇ ತಿಂಗಳ ಅಂತ್ಯದೊಳಗೆ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದಾಗಿ ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಬುಧವಾರದಂದು ನಗರದ ಹೊರವಲಯದಲ್ಲಿರುವ ಗೋಕಾಕ ಸಪ್ಲಾಯರ್ಸ್ ಭವನದಲ್ಲಿ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ
ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, ಸಂಘಗಳಿಗೆ ಇಷ್ಟವಾಗುವ ರೀತಿಯಲ್ಲಿ ಸಮರ್ಥ ವ್ಯಕ್ತಿಗಳನ್ನು ಬ್ಯಾಂಕಿನ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡುವುದಾಗಿ ತಿಳಿಸಿದರು.
ಬಿಡಿಸಿಸಿ ಬ್ಯಾಂಕಿಗೆ ನಡೆಯುವ ಚುನಾವಣೆಯಲ್ಲಿ ಎಲ್ಲ ಸ್ಥಾನಕ್ಕೂ ಚುನಾವಣೆಯನ್ನು ನಡೆಸದೇ ಹೊಂದಾಣಿಕೆಯಿರುವ ಕಡೆಗಳಲ್ಲಿ ಅವಿರೋಧವಾಗಿ ಆಯ್ಕೆ ಮಾಡುವ ತೀರ್ಮಾನಕ್ಕೆ ಬರಲಾಗಿದೆ. ಅವಶ್ಯವಿದ್ದಲ್ಲಿ ಮಾತ್ರ ಕೆಲವು ಸ್ಥಾನಗಳಿಗೆ ಚುನಾವಣೆಯನ್ನು ನಡೆಸಲಾಗುತ್ತದೆ. ಒಟ್ಟು 16 ಸ್ಥಾನಗಳ ಪೈಕಿ 12 ಸ್ಥಾನಗಳಲ್ಲಿ ನಮ್ಮ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ. ಈಗಾಗಲೇ ನಮ್ಮ ಟೀಂ ಬ್ಯಾಂಕಿನ ಅಧಿಕಾರ ಚುಕ್ಕಾಣಿ ಹಿಡಿದಿದೆ ಎಂಬುದನ್ನು ಆತ್ಮವಿಶ್ವಾಸದಿಂದ ಹೇಳುತ್ತಿದ್ದೇನೆ ಎಂದು ಅವರು ತಿಳಿಸಿದರು.
ಅಕ್ಟೋಬರ್ ತಿಂಗಳಲ್ಲಿ ಜರುಗುತ್ತಿರುವ ಈ ಚುನಾವಣೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಚುನಾವಣೆಗೂ ಮುನ್ನವೇ ಮೂರು ತಿಂಗಳಿನಿಂದ ಜಿಲ್ಲೆಯ ಎಲ್ಲ ತಾಲ್ಲೂಕು ಕ್ಷೇತ್ರಗಳಿಗೆ ಭೇಟಿ ನೀಡಿ ಸಹಕಾರ ಸಂಘಗಳ ಸದಸ್ಯರುಗಳ ಅಹವಾಲುಗಳನ್ನು ಸ್ವೀಕರಿಸಿದ್ದೇನೆ. ಬಿಡಿಸಿಸಿ ಬ್ಯಾಂಕಿನಿಂದ ರೈತರಿಗೆ ಮತ್ತು ಸಹಕಾರ ಸಂಘಗಳಿಗೆ ಹೆಚ್ಚಿನ ನೆರವು ಸಿಗಬೇಕೆಂಬುದು ನಮ್ಮ ಆಶಯವಾಗಿದೆ. ಈ ದಿಸೆಯಲ್ಲಿ ಜಿಲ್ಲೆಯಾದ್ಯಂತ ಸಹಕಾರ ಸಂಘಗಳ ಬಗ್ಗೆ ತಿಳುವಳಿಕೆ ಹೊಂದಿರುವ, ರೈತರ ಕಷ್ಟಗಳಿಗೆ ಸಮರ್ಪಕ ರೀತಿಯಲ್ಲಿ ಸ್ಪಂದಿಸುವ ಕ್ರಿಯಾಶೀಲ ವ್ಯಕ್ತಿಗಳನ್ನು ಗುರುತಿಸುತ್ತಿದ್ದೇವೆ. ಬಹುತೇಕ ಕಡೆಗಳಲ್ಲಿ ಅಭ್ಯರ್ಥಿಗಳ ಆಯ್ಕೆಯು ಮುಗಿದಂತಾಗಿದೆ. ಬಾಕಿ ಉಳಿದಿರುವ ಕ್ಷೇತ್ರಗಳಲ್ಲಿ ಜಿಲ್ಲೆಯ ಎಲ್ಲ ವಿವಿಧ ಪಕ್ಷಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು
ಅಭ್ಯರ್ಥಿಗಳನ್ನು ಅಂತಿಮ ಮಾಡುವುದಾಗಿ ಅವರು ಹೇಳಿದರು.
ನಮ್ಮ ಟೀಂ ನಿಂದ ಹೆಚ್ಚಿನ ಪ್ರಮಾಣದಲ್ಲಿ ಅಭ್ಯರ್ಥಿಗಳು ಆಯ್ಕೆಗೊಂಡರೆ ನಮಗೆ ಲಾಭವಾಗುತ್ತದೆ. ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ-
ಉಪಾಧ್ಯಕ್ಷರು ನಮ್ಮವರಾದರೆ ನಮ್ಮ ಸಂಘ- ಸಂಸ್ಥೆಗಳು ಉಳಿಯುತ್ತವೆ. ಇದನ್ನು ಮನಗಂಡು ಜಿಲ್ಲೆಯಾದ್ಯಂತ ಸಂಚರಿಸಿ ಸಹಕಾರಿಗಳ ಬಳಿಗೆ ಹೋಗಿ ಮತ ಯಾಚಿಸುತ್ತಿದ್ದೇನೆ. ಇದರಲ್ಲಿ ನಮ್ಮದು ಯಾವ ಸ್ವಾರ್ಥವೂ ಇಲ್ಲವೆಂದು ಅವರು ಸ್ಪಷ್ಟಪಡಿಸಿದರು.
ಮುಂದಿನ ದಿನಗಳಲ್ಲಿ ಬಿಡಿಸಿಸಿ ಬ್ಯಾಂಕನ್ನು ರೈತರ ಮನೆ ಬಾಗಿಲಿಗೆ ಹೋಗಬೇಕು. ರೈತರ ಕಷ್ಟಗಳನ್ನು ಅರಿಯಬೇಕು. ರೈತರ ಆರ್ಥಿಕ ಅಭಿವೃದ್ಧಿಗೆ ಸೌಲಭ್ಯಗಳು ದೊರಕಬೇಕು. ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ಸಿಗಬೇಕೆಂಬ ಸಂಕಲ್ಪದಿಂದ ರೈತರ ಸುಖ, ನೆಮ್ಮದಿಗಾಗಿ ಬ್ಯಾಂಕಿನ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಕೆಎಲ್ಇ ಚೇರಮನ್ ಡಾ. ಪ್ರಭಾಕರ ಕೋರೆ, ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರನ್ನು ಒಟ್ಟಾಗಿ ಸೇರಿಸಿಕೊಂಡು ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಸಂಪೂರ್ಣ ಬಹುಮತದಿಂದ ಬ್ಯಾಂಕಿನ ಆಡಳಿತವು ನಮ್ಮ ಕೈಗೆ ಸಿಗಲಿದೆ ಎಂದು ಬಾಲಚಂದ್ರ ಜಾರಕಿಹೊಳಿಯವರು ವಿಶ್ವಾಸ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಜಿ.ಢವಳೇಶ್ವರ, ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ,ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಜಿ.ಪಂ. ಮಾಜಿ ಸದಸ್ಯರಾದ ತುಕಾರಾಮ ಕಾಗಲ್, ಮಡ್ಡೆಪ್ಪ ತೋಳಿನವರ, ವಿಠ್ಠಲ ಸವದತ್ತಿ, ಶಂಕರ ಬಿಲಕುಂದಿ, ವಿಠ್ಠಲ ಪಾಟೀಲ, ಪ್ರಭಾ ಶುಗರ್ಸ್ ನಿರ್ಧೇಶಕ ಶಿದ್ಲಿಂಗ ಕಂಬಳಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

*ಗೋಕಾಕ*- ದೇವರು ಮತ್ತು ಸಹಕಾರ ಕ್ಷೇತ್ರದ ಮತದಾರರ ಆಶೀರ್ವಾದದಿಂದ ಜಿಲ್ಲಾ ಮಧ್ಯವರ್ತಿ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯುವುದಾ...
08/09/2025

*ಗೋಕಾಕ*- ದೇವರು ಮತ್ತು ಸಹಕಾರ ಕ್ಷೇತ್ರದ ಮತದಾರರ ಆಶೀರ್ವಾದದಿಂದ ಜಿಲ್ಲಾ ಮಧ್ಯವರ್ತಿ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯುವುದಾಗಿ ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರದಂದು ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದಲ್ಲಿ ಬ್ಯಾಂಕಿನ ಪ್ರಚಾರಾರ್ಥವಾಗಿ ಜಿಲ್ಲೆಯ ಇತರೇ ಸಹಕಾರ ಸಂಘಗಳ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, ಇತರೇ ಸ್ಥಾನವು ನಮ್ಮ ಗುಂಪಿಗೆ ದೊರಕಲಿದೆ ಎಂದವರು ಹೇಳಿದರು.
ಜಿಲ್ಲೆಯ 853 ಇತರೇ ಸಹಕಾರ ಸಂಘಗಳ ಪೈಕಿ ಸುಮಾರು 577 ಸಹಕಾರ ಸಂಘಗಳ ಸದಸ್ಯರು ಇಂದಿನ ಸಭೆಯಲ್ಲಿ ಹಾಜರಾಗಿ ನಾವು ಕೈಕೊಳ್ಳುವ ನಿರ್ಧಾರಕ್ಕೆ ಬದ್ಧರಿರುವುದಾಗಿ ತಿಳಿಸಿದ್ದಾರೆ. ಸೆಪ್ಟೆಂಬರ್ ತಿಂಗಳಾಂತ್ಯದಲ್ಲಿ ಸಂಘಗಳ ಹಿತಕ್ಕಾಗಿ ದುಡಿಯುವ, ಕಷ್ಟಕ್ಕೆ ಮಿಡಿಯುವ ಯೋಗ್ಯ ಅಭ್ಯರ್ಥಿಯನ್ನು ಹಾಕಲಾಗುವುದು. ಜತೆಗೆ ಅವಿರೋಧ ಆಯ್ಕೆಗೆ ಹೆಚ್ಚಿನ ಒಲುವು ತೋರಲಾಗುತ್ತಿದೆ. ಚುನಾವಣೆ ನಡೆಸದೇ ಎಲ್ಲರೂ ಒಪ್ಪುವ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲೆಯ ಆರು ವಿವಿಧ ಸಹಕಾರ ಸಂಘಗಳನ್ನು ಕೂಡಿಸಿಕೊಂಡು ಕೇವಲ ಒಂದೇ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಏಕಪಕ್ಷೀಯ ನಿರ್ಧಾರದಿಂದಾಗಿ ಅಧ್ಯಕ್ಷರೊಂದಿಗೆ ಮನಸ್ತಾಪ ಉಂಟಾಗಿದ್ದರಿಂದ, ಸಹಕಾರ ಸಂಘಗಳ ಬಳಿಗೆ ಹೋಗಿ ಮತ ಯಾಚಿಸುತ್ತಿದ್ದೇವೆ. 6 ಸ್ಥಾನಗಳನ್ನು ಕಡಿಮೆ ಮಾಡಿ ಕೇವಲ ಒಂದೇ ಒಂದು ಸ್ಥಾನವನ್ನು ಮಾಡಿದ್ದರಿಂದ ಆಯಾ ವಿಭಾಗದ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ.
ಬ್ಯಾಂಕಿನ ಸರ್ವ ಸಾಧಾರಣ ಸಭೆಯಲ್ಲಿ ಶೇಅರುದಾರರ ಅನುಮತಿಯನ್ನು ಪಡೆಯದೇ, ಆಡಳಿತ ಮಂಡಳಿಯವರ ಗಮನಕ್ಕೂ ತರದೇ ಅಧ್ಯಕ್ಷರೊಬ್ಬರೇ ನಿರ್ಧಾರ ಕೈಗೊಂಡರು. ಇದೇ ಕಾರಣಕ್ಕೆ ಅಧ್ಯಕ್ಷರ ವಿರುದ್ಧ ತಿರುಗಿ ಬೀಳಲು ಕಾರಣವಾಯಿತು ಎಂದು ಇದೇ ಮೊದಲ ಬಾರಿಗೆ ಕತ್ತಿಯವರೊಂದಿನ ಮನಸ್ತಾಪವನ್ನು ಬಹಿರಂಗ ಪಡಿಸಿದರು.
ಕುರಿ ಉಣ್ಣೆ ಉತ್ಪಾದಕರು, ಗ್ರಾಹಕರ ಸಹಕಾರ ಸಂಘ, ಔದ್ಯೋಗಿಕ ಸಹಕಾರ ಸಂಘ, ಹಾಲು ಉತ್ಪಾದಕ ಸಹಕಾರ ಸಂಘ, ಅರ್ಬನ್ ಸೊಸೈಟಿ, ಟಿಎಪಿಸಿಎಂಎಸ್ ಗಳನ್ನು ಕೂಡಿಸಿಕೊಂಡು ಇತರೇ ಸಹಕಾರ ಸಂಘದ ಹೆಸರಿನಲ್ಲಿ ಒಂದೇ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಇದರಿಂದ ಉಳಿದ ಸ್ಪರ್ಧಾಕಾಂಕ್ಷಿಗಳಿಗೆ ತೀವ್ರ ನೋವುಂಟಾಗಿದೆ. ಪಕ್ಕದ ಬಾಗಲಕೋಟೆ ಜಿಲ್ಲೆಯಲ್ಲಿ ಯಾವ ಬದಲಾವಣೆಯೂ ಆಗದೇ ಆರೂ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ನಮ್ಮ ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ ಮಾತ್ರ ಇತರೇ ಸಹಕಾರ ಸಂಘಕ್ಕೆ ಒಂದು ಸ್ಥಾನಕ್ಕೆ ಚುನಾವಣೆ ಜರುಗುತ್ತಿದೆ ಎಂದು ರಮೇಶ ಕತ್ತಿಯವರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು.
ಶತಮಾನೋತ್ಸವ ಸಂಭ್ರಮದಲ್ಲಿರುವ ಬಿಡಿಸಿಸಿ ಬ್ಯಾಂಕಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹೊಸ ಆಡಳಿತ ಮಂಡಳಿಯು ಅಧಿಕಾರಕ್ಕೆ ಬರಲಿದ್ದು, ಮುಂದಿನ ಐದು ವರ್ಷಗಳ ಅವಧಿಯಲ್ಲಿ ಉತ್ತಮ ಆಡಳಿತ ನಡೆಸುತ್ತೇವೆ. ಸಹಕಾರ ಸಂಘಗಳ ಆರ್ಥಿಕ ಬಲವರ್ಧನೆಗೆ ಅನೇಕ ಕ್ರಮಗಳನ್ನು ಕೈಗೊಳ್ಳುತ್ತೇವೆ. ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ಸೌಲಯ ದೊರಕಿಸಿಕೊಡುತ್ತೇವೆ. ಪಾರದರ್ಶಕ ಆಡಳಿತ ನಡೆಸಿ ಈಗಿರುವ ಬ್ಯಾಂಕಿನ ಆರ್ಥಿಕ ಮಟ್ಟವನ್ನು ದ್ವಿಗುಣ ಮಾಡುತ್ತೇವೆ ಎಂದು ತಿಳಿಸಿದರು.
ಅಕ್ಟೋಬರ್ ತಿಂಗಳಲ್ಲಿ ಜರುಗಲಿರುವ ಈ ಚುನಾವಣೆಯನ್ನು 16 ಸ್ಥಾನಗಳ ಪೈಕಿ 12 ಸ್ಥಾನಗಳನ್ನು ಗೆಲ್ಲುತ್ತೇವೆ. ಇದರಲ್ಲಿ ಯಾವ ಸಂಶಯವೂ ಇಲ್ಲ. ಮತದಾರರ ಆಶೀರ್ವಾದವು ನಮಗೆ ಶ್ರೀರಕ್ಷೆಯಾಗಿದೆ. ಮೂಡಲಗಿ ಮತ್ತು ಗೋಕಾಕ ತಾಲ್ಲೂಕಿನ ಅಭ್ಯರ್ಥಿಯನ್ನು ಈ ತಿಂಗಳಾಂತ್ಯಕ್ಕೆ ಪ್ರಕಟಿಸುತ್ತೇವೆ ಎಂದು ಅವರು ಹೇಳಿದರು.
*ನಾಮ ನಿರ್ದೇಶನದ ಮೂಲಕ ಹಾಲುಮತ ಸಮಾಜಕ್ಕೆ ಅವಕಾಶ ಮಾಡಿಕೊಡಲು ಪ್ರಯತ್ನ*
ಇತ್ತೀಚೆಗೆ ನಮ್ಮ ಕ್ಷೇತ್ರದ ಹಾಲುಮತ ಬಾಂಧವರು ಭೇಟಿ ಮಾಡಿ ಬಿಡಿಸಿಸಿ ಬ್ಯಾಂಕಿನಲ್ಲಿ ಕಳೆದ ಅವಧಿಯಲ್ಲಿ ಹಾಲು ಮತ ಸಮಾಜಕ್ಕೆ ಆದ್ಯತೆ ಸಿಕ್ಕಿಲ್ಲವೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಖಂಡಿತವಾಗಿಯೂ ಈ ಸಮಾಜಕ್ಕೆ ಆದ್ಯತೆ ನೀಡುವ ಕೆಲಸ ಮಾಡುತ್ತೇವೆ. ಸಚಿವ ಸತೀಶ್ ಜಾರಕಿಹೊಳಿಯವರೊಂದಿಗೆ ಚರ್ಚಿಸಿ ಹಾಲುಮತ ಸಮಾಜಕ್ಕೆ ನಾಮ ನಿರ್ದೇಶನದ ಮೂಲಕ ಪ್ರಾಶಸ್ತ್ಯ ನೀಡಲಿಕ್ಕೆ ಪ್ರಯತ್ನ ಮಾಡುತ್ತೇವೆ‌ ಎಂದು ಅವರು ಹಾಲುಮತ ಸಮಾಜದವರಿಗೆ
ಭರವಸೆಯನ್ನು ನೀಡಿದರು. ಜತೆಗೆ ಉಳಿದ ಸಮಾಜಕ್ಕೂ ಅವಕಾಶ ಮಾಡಿಕೊಡುವ ವಾಗ್ದಾನ ಮಾಡಿದರು.
ವೇದಿಕೆಯಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಢವಳೇಶ್ವರ, ಬೂಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಬಿಡಿಸಿಸಿ ನಿರ್ದೇಶಕರಾದ ನೀಲಕಂಠ ಕಪ್ಪಲಗುದ್ದಿ, ಪಂಚನಗೌಡ ದ್ಯಾಮನಗೌಡರ, ಕೃಷ್ಣಾ ಅನಗೋಳಕರ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಸದೆಪ್ಪ ವಾರಿ, ರಮೇಶ ಅಣ್ಣಿಗೇರಿ, ಪ್ರಕಾಶ ಅಂಬೋಜಿ, ಶಂಕರ ಇಟ್ನಾಳ, ಬಾಬು ವಾಗ್ಮೂರೆ, ಸದಾಶಿವ ಶಿಂತ್ರೆ, ವೀರುಪಾಕ್ಷಿ ಈಟಿ, ಮಹಾದೇವ ಬಿಳಿಕುರಿ, ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಸಹಕಾರ ಸಂಘಗಳ ಪ್ರಮುಖರು ಉಪಸ್ಥಿತರಿದ್ದರು.

*ಫೋಟೋ ಕ್ಯಾಪ್ಶನ್- 8 ಜಿಕೆಕೆ- 01*
*ಗೋಕಾಕ*- ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ನಿಮಿತ್ತ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಗೋಕಾಕ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದಲ್ಲಿ ಸೋಮವಾರದಂದು ಬೆಳಗಾವಿ ಜಿಲ್ಲೆಯ ಇತರೇ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಸಭೆಯನ್ನು ಉದ್ಘಾಟಿಸಿದರು.
ಬೂಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಇತರೇ ಸಹಕಾರಿಗಳು ಉಪಸ್ಥಿತರಿದ್ದರು.

*ಫೋಟೋ ಕ್ಯಾಪ್ಶನ್- 8 ಜಿಕೆಕೆ- 02, 03, 04*
*ಗೋಕಾಕ*- ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ನಿಮಿತ್ತ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಗೋಕಾಕ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದಲ್ಲಿ ಸೋಮವಾರದಂದು ಬೆಳಗಾವಿ ಜಿಲ್ಲೆಯ ಇತರೇ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಸಭೆಯನ್ನು ಉದ್ಘಾಟಿಸಿದರು.
ಬೂಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಇತರೇ ಸಹಕಾರಿಗಳು ಉಪಸ್ಥಿತರಿದ್ದರು

*ಗೋಕಾಕನಲ್ಲಿ ಇಂಜನಿಯರಿ0ಗ್ ಕಾಲೇಜು ಪ್ರವೇಶಗಳು ಶೀಘ್ರದಲ್ಲಿ*.! https://yuvabharatha.com/1234-10/*ಯುವ ಭಾರತ ಸುದ್ದಿ*
25/08/2025

*ಗೋಕಾಕನಲ್ಲಿ ಇಂಜನಿಯರಿ0ಗ್ ಕಾಲೇಜು ಪ್ರವೇಶಗಳು ಶೀಘ್ರದಲ್ಲಿ*.!
https://yuvabharatha.com/1234-10/

*ಯುವ ಭಾರತ ಸುದ್ದಿ*

ಗೋಕಾಕನಲ್ಲಿ ಇಂಜನಿಯರಿ0ಗ್ ಕಾಲೇಜು ಪ್ರವೇಶಗಳು ಶೀಘ್ರದಲ್ಲಿ.! ಯುವ ಭಾರತ ಸುದ್ದಿ ಗೋಕಾಕ: ಗೋಕಾಕ ಭಾಗದ ಜನರ ಬಹುದಿನಗಳ ಕನಸಾಗಿದ್ದ ಇಂ...

ಉತ್ತರ ಕರ್ನಾಟಕದ ಶಕ್ತಿ ದೇವತೆಯಾದ ಜಗನ್ಮಾತೆ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಿಯ ದರ್ಶನ ಪಡೆದ ಬಿಜೆಪಿ ಪಕ್ಷದ ಹಿರಿಯ ನಾಯಕರು ಹಾಗೂ ಗೋಕಾ...
23/08/2025

ಉತ್ತರ ಕರ್ನಾಟಕದ ಶಕ್ತಿ ದೇವತೆಯಾದ ಜಗನ್ಮಾತೆ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಿಯ ದರ್ಶನ ಪಡೆದ ಬಿಜೆಪಿ ಪಕ್ಷದ ಹಿರಿಯ ನಾಯಕರು ಹಾಗೂ ಗೋಕಾಕ ಮತಕ್ಷೇತ್ರ ಜನಪ್ರಿಯ ಶಾಸಕರಾದ #ಸನ್ಮಾನ್ಯ_ಶ್ರೀ_ರಮೇಶ_ಅಣ್ಣಾ_ಜಾರಕಿಹೊಳಿ
ರವರು..ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸವದತ್ತಿ ಬಿಜೆಪಿ ಮಂಡಲದ ಅಧ್ಯಕ್ಷರಾದ ವಿರುಪಾಕ್ಷ ಮಾಮನಿ ,ಹಿರಿಯರು, ಮುಖಂಡರು, ಯುವ-ಮಿತ್ರರು, ಕಾರ್ಯಕರ್ತರು ಉಪಸ್ಥಿತರಿದ್ದರು.

20/08/2025
ಗೋಕಾಕ- ಮಹಾರಾಷ್ಟ್ರ ಮತ್ತು ಹಿಡಕಲ್ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ...
19/08/2025

ಗೋಕಾಕ- ಮಹಾರಾಷ್ಟ್ರ ಮತ್ತು ಹಿಡಕಲ್ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಕೂಡಲೇ ಅಧಿಕಾರಿಗಳು ಸಂತ್ರಸ್ತರಿಗೆ ಯಾವುದೇ ಸಮಸ್ಯೆಗಳು ಬಾರದಂತೆ ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಸಂಜೆ ನಗರದ ನಾಕಾ ಬಳಿ ಇರುವ ಪ್ರವಾಸಿ ಮಂದಿರದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೂಡಲೇ ಅಧಿಕಾರಿಗಳು ಸಂತ್ರಸ್ತ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ವರದಿ ಮಾಡುವಂತೆ ಸೂಚನೆ ನೀಡಿದರು.
ಪಶ್ಚಿಮ ಘಟ್ಟದಲ್ಲಿ ಧಾರಾಕಾರವಾಗಿ ಮಳೆಯು ಸುರಿಯುತ್ತಿದೆ. ನಮ್ಮ ಭಾಗದಲ್ಲಿಯೂ ಮಳೆಯು ನಿಲ್ಲುತ್ತಿಲ್ಲ. ಈಗಾಗಲೇ ಘಟಪ್ರಭಾ ನದಿಗೆ 51 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. 62 ಸಾವಿರಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಘಟಪ್ರಭಾ ನದಿಗೆ ಬಂದಿದ್ದಾದರೆ ಲೋಳಸೂರ ಸೇತುವೆಯು ಜಲಾವೃತಗೊಳ್ಳಲಿದೆ. ಇದರಿಂದ ಗೋಕಾಕ ಮತ್ತು ಮೂಡಲಗಿ ತಾಲ್ಲೂಕಿನ ಸುಮಾರು 28 ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಬರಲಿದೆ.‌ ಹೀಗಾಗಿ ಈಗಿಂದಲೇ ಅಧಿಕಾರಿಗಳು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂತ್ರಸ್ತರಿಗೆ ಕೂಡಲೇ ಕಾಳಜಿ ಕೇಂದ್ರಗಳನ್ನು ತೆರೆಯಬೇಕು.‌‌ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಸ್ಥಳೀಯವಾಗಿ ಪಿಡಿಓ, ಗ್ರಾಮ ಆಡಳಿತಾಧಿಕಾರಿ ಮತ್ತು ಉಸ್ತುವಾರಿ ಅಧಿಕಾರಿಗಳು ಇದ್ದುಕೊಂಡು ಕರ್ತವ್ಯ ನಿರ್ವಹಿಸಬೇಕು. ನೀರಿನ ಮಟ್ಟ ಹೆಚ್ಚುತ್ತಿರುವದರಿಂದ ಪರಿಸ್ಥಿತಿ ಕಡೆಗೆ ಗಮನ ನೀಡಬೇಕು. ಜನ ಮತ್ತು ಜಾನುವಾರುಗಳಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಕೂಡಲೇ ನದಿ ತೀರದ ಗ್ರಾಮಗಳಲ್ಲಿ ಮುಂಜಾಗ್ರತವಾಗಿ ಡಂಗುರ ಸಾರಿ ಸಂತ್ರಸ್ತರಿಗೆ ಪ್ರವಾಹದ ಸಂಬಂಧ ತಿಳುವಳಿಕೆಯನ್ನು ನೀಡಿ ಅಗತ್ಯ ಬಿದ್ದರೆ ಅವರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಳಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಹದಿಂದ ನೀರು ಮನೆಯ ಒಳಗಡೆ ನುಗ್ಗಬಹುದು. ಮನೆಗಳು ಕುಸಿಯಬಹುದು. ಕೃಷಿ ಮತ್ತು ತೋಟಗಾರಿಕೆಯ ಬೆಳೆಗಳು ಹಾನಿಯಾಗಬಹುದು. ವಿದ್ಯುತ್ ಕಂಬಗಳು ಸಹ ಬೀಳಬಹುದು. ಮನೆಗಳು ಮತ್ತು ಬೆಳೆಗಳ ಹಾನಿ ಬಗ್ಗೆ ವರದಿ ಮಾಡುವಾಗ ನಿಜವಾದ ಫಲಾನುಭವಿಗಳನ್ನು ಗುರುತಿಸಿ ನ್ಯಾಯ ಒದಗಿಸಬೇಕು. ಸಮೀಕ್ಷಾ ಕಾರ್ಯಗಳನ್ನು ಪ್ರಾಮಾಣಿಕವಾಗಿ ಕೈಕೊಳ್ಳಬೇಕು. ಸಂತ್ರಸ್ತ ಕುಟುಂಬಗಳಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡಬೇಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನದಿ ತೀರದ 28 ಗ್ರಾಮಗಳಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಈಗಾಗಲೇ ಉಸ್ತುವಾರಿ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ಸ್ಥಳೀಯ ಮಟ್ಟದ ಅಧಿಕಾರಿಗಳು ಕೂಡಿಕೊಂಡು ಸಮನ್ವತೆಯಿಂದ ಕೆಲಸ ಮಾಡಲು ಸೂಚಿಸಲಾಗಿದೆ. ಪ್ರವಾಹ ಪೀಡಿತ ಗ್ರಾಮಗಳಿಗೆ ತೆರಳಿ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸವನ್ನು ನಮ್ಮ ಟೀಂ ಎನ್ಎಸ್ಎಫ್ ರಚನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಗೋಕಾಕ ತಹಶೀಲ್ದಾರ ಮೋಹನ್ ಭಸ್ಮೆ, ಮೂಡಲಗಿ ತಹಶೀಲ್ದಾರ ಶ್ರೀಶೈಲ ಗುಡುಮೆ, ಮೂಡಲಗಿ ತಾ.ಪಂ. ಇಓ ಎಫ್.ಜಿ.ಚಿನ್ನನ್ನವರ, ಗೋಕಾಕ ತಾ.ಪಂ.ಇಓ ಪರಶುರಾಮ ಗಸ್ತಿ, ಡಿವೈಎಸ್ಪಿ ರವಿ ನಾಯಿಕ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಧಿಕಾರಿಗಳ ಸಭೆಗೂ ಮುನ್ನ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಲೋಳಸೂರ ಸೇತುವೆಗೆ ತೆರಳಿ ನೀರಿನ ಪರಿಸ್ಥಿತಿಯನ್ನು ಅವಲೋಕಿಸಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.

ಗೋಕಾಕನಲ್ಲಿ ಮಳೆಯ ಅವಾಂತರದಿಂದ ಗೋಕಾಕ ನಗರದ ಮಾರುಕಟ್ಟೆಯ ಹತ್ತಿರದ ಸೋಮವಾರ ಪೇಟೆ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಗೋಡೆ ಕುಸಿದು ಕಾರು...
08/08/2025

ಗೋಕಾಕನಲ್ಲಿ ಮಳೆಯ ಅವಾಂತರದಿಂದ ಗೋಕಾಕ ನಗರದ ಮಾರುಕಟ್ಟೆಯ ಹತ್ತಿರದ ಸೋಮವಾರ ಪೇಟೆ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಗೋಡೆ ಕುಸಿದು ಕಾರು ಜಖಂ.

ಬಾಗಲಕೋಟೆ ಜಿಲ್ಲೆಯ ಉಪನಿರ್ದೇಶಕರು (ಆಡಳಿತ) ಹುದ್ದೆಗೆ ಸ್ಥಾನಪನ್ನ ಬಡ್ತಿ ಹೊಂದಿದ ಹಿನ್ನೆಲೆಯಲ್ಲಿ ಇಂದು ಎನ್ ಎಸ್ ಎಫ್ ಅತಿಥಿಗೃಹದಲ್ಲಿ ಶ್ರೀ ...
07/08/2025

ಬಾಗಲಕೋಟೆ ಜಿಲ್ಲೆಯ ಉಪನಿರ್ದೇಶಕರು (ಆಡಳಿತ) ಹುದ್ದೆಗೆ ಸ್ಥಾನಪನ್ನ ಬಡ್ತಿ ಹೊಂದಿದ ಹಿನ್ನೆಲೆಯಲ್ಲಿ ಇಂದು ಎನ್ ಎಸ್ ಎಫ್ ಅತಿಥಿಗೃಹದಲ್ಲಿ
ಶ್ರೀ ಅಜಿತ್ ಚೂನಪ್ಪಾ ಮಣಿಕೇರಿ ಸರ್
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು,ಮೂಡಲಗಿ ಇವರಿಗೆ ಅರಭಾವಿ ವಿಧಾನ ಸಭಾ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಬೆಮೂಲ್ ಅಧ್ಯಕ್ಷರಾದ ಸನ್ಮಾನ್ಯ_ಶ್ರೀ_ಬಾಲಚಂದ್ರ_ಅಣ್ಣಾ_ಜಾರಕಿಹೊಳಿ ರವರ ಆಪ್ತ ಸಹಾಯಕರಾದ ಶ್ರೀ ಲಕ್ಕಪ್ಪ ಅಣ್ಣಾ ಲೋಕುರಿ , ಶ್ರೀ ನಿಂಗಪ್ಪಾ ಅಣ್ಣಾ ಕುರಬೇಟ್, ದಾಸಪ್ಪಾ ಅಣ್ಣಾ ನಾಯಿಕ್ ,ಅಶೋಕ್ ಹಸರಂಗಿ ಸರ್,NSF ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು..

07/08/2025
ಗೋಕಾಕ- ಮನ್ನಿಕೇರಿ ಗ್ರಾಮದ ಸಾರ್ವಜನಿಕರಿಗೆ ಅನುಕೂಲವಾಗಲು ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಮುಂದಿನ‌ ದಿನಗಳಲ್ಲಿ ಈ ಯೋ...
31/07/2025

ಗೋಕಾಕ- ಮನ್ನಿಕೇರಿ ಗ್ರಾಮದ ಸಾರ್ವಜನಿಕರಿಗೆ ಅನುಕೂಲವಾಗಲು ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಮುಂದಿನ‌ ದಿನಗಳಲ್ಲಿ ಈ ಯೋಜನೆಯಿಂದ ರೈತರಿಗೆ ಎಲ್ಲ ರೀತಿಯಿಂದ ಅನುಕೂಲವಾಗಲಿದೆ ಎಂದು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಈಚೆಗೆ ಮನ್ನಿಕೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಲಕ್ಷ್ಮೀದೇವಿ ದೇವಸ್ಥಾನವನ್ನು ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ಈ ಭಾಗಕ್ಕೆ ಕಲ್ಮಡ್ಡಿ ಏತ ನೀರಾವರಿ ಯೋಜನೆಯನ್ನು ಜಾರಿ ಮಾಡಲಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಅನುಕೂಲ ಮಾಡಿಕೊಡಲು ಯೋಚನೆಯನ್ನು ಮಾಡಲಾಗಿದೆ. ಶೀಘ್ರದಲ್ಲಿ ಘಟಪ್ರಭಾ ನದಿಯಿಂದ ಮನ್ನಿಕೇರಿ ಕೆರೆಗೆ ನೀರು ಭರ್ತಿ ಮಾಡುವ ಯೋಜನೆ ಇದೆ. ಈಗಾಗಲೇ ಈ ಸಂಬಂಧ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ ಎಂದವರು ತಿಳಿಸಿದರು
ಗ್ರಾಮದ ಅಭಿವೃದ್ಧಿಗೆ ಸಂಘಟಿತ ಹೋರಾಟ ಅವಶ್ಯವಾಗಿದೆ. ಇಲ್ಲಿಯ ಯುವಕರು ಹಿರಿಯರೊಂದಿಗೆ ಕೂಡಿಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಬೇಕು. ಅಂದಾಗ ಮಾತ್ರ ಸರ್ಕಾರದ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಲಕ್ಷ್ಮೀದೇವಿ ದೇವಸ್ಥಾನದ ನಿರ್ಮಾಣಕ್ಕೆ ೧೦ ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿರುವ ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ದೇವಸ್ಥಾನದಿಂದ ಸತ್ಕರಿಸಲಾಯಿತು.
ಭಾಗೋಜಿಕೊಪ್ಪದ ಮುರುಘ ರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ವಿಜಯ ಸಿದ್ಧೇಶ್ವರ ಸ್ವಾಮಿಗಳು, ವೆ.ಮೂ. ಮಹಾಂತಯ್ಯ ಹೀರೇಮಠ ಅವರು ಸಾನಿಧ್ಯ ವಹಿಸಿದ್ದರು.
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಬಾಳಪ್ಪ ಗೌಡರ, ಮುದುಕಪ್ಪ ಗೋಡಿ, ಪ್ರಮುಖರಾದ ಸತೀಶ ಗಡಾದ, ಲಕ್ಷ್ಮಣ ಗಡಾದ, ಪುಂಡಲೀಕ ದಳವಾಯಿ, ಬಸು ನಾಯಿಕ, ಮಹಾಂತೇಶ ಮೆಟ್ಟಿನ, ರಾಮಣ್ಣ ನಾಡಗೌಡ, ಕೆಂಚಪ್ಪ ನಾಡಗೌಡ, ರಾಜು ಪೂಜೇರಿ, ಮಹಾಂತೇಶ ಗಡಾದ, ಶಂಕರ ತವಗಿ, ಎಕನಾಥ ಬಡಿಗೇರ, ಶ್ರೀ ಶೈಲ ಗಡಾದ, ಪಿಡಿಓ ಮಾರುತಿ ಯಡ್ರಾವಿ,ವೆಂಕಟ ಪೂಜೇರಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

31/07/2025

ಗೋಕಾಕ ನಗರದ ಚಿತ್ರಾ ಸಭಾಭವನ(ಚಿತ್ರಾ ಟಾಕೀಸ್‌ದಲ್ಲಿ) ವಿಶೇಷ ನಾಟಕ ಪ್ರದರ್ಶನ ಉಡಾಳ ಮೆಂಬರ್ ಖ್ಯಾತಿಯ ರೇವಣ್ಣ ಲಕ್ಷೇಶ್ವರ ರಚಿಸಿ, ನಟಿಸಿರುವ ಅಲ್ಲೇನ್ ನೋಡ್ತಿ ಇಲ್ಲಿ ನೋಡ್ ಫುಲ್ ಕಾಮಿಡಿ ನಾಟಕ ಕೇವಲ 3 ದಿನಗಳು ಮಾತ್ರ ಈ ನಾಟಕಕ್ಕೆ ವಿಶೇಷ ಪಾತ್ರದಲ್ಲಿ Zಕನ್ನಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಂಥನಾ ಬೆಂಗಳೂರು
ಅವರು ಪ್ರಥಮ ಬಾರಿಗೆ ಗೋಕಾಕ ನಗರಕ್ಕೆ ಆಗಮಿಸಲಿದ್ದಾರೆ ಪ್ರತಿದಿನ 3 ಪ್ರದರ್ಶನ ಮದ್ಯಾಹ್ನ:3-15ಕ್ಕೆ, ಸಂಜೆ: 6-30ಕ್ಕೆ ಮತ್ತು ರಾತ್ರಿ: 9-30ಕ್ಕೆ ಅಗಸ್ಟ್ 8,9,10 2025 ಟಿಕೇಟಗಳಿಗಾಗಿ ಸಂಪರ್ಕಿಸಿರಿ: 9743 661 668, 7483 799 549

Address


Alerts

Be the first to know and let us send you an email when Yuvabharatha news posts news and promotions. Your email address will not be used for any other purpose, and you can unsubscribe at any time.

Contact The Business

Send a message to Yuvabharatha news:

  • Want your business to be the top-listed Media Company?

Share