ಬೀಸುವ ಗಾಳಿಗೆ ತಡೆದಿರುವೆ
ನಿನ್ನ ಮೈಗೆ ಚಳಿ ಅಂಟದಿರಲೆಂದು
ಬೆಚ್ಚಗಿಡುವೆ ನನ್ನೆದೆಯೊಳಗೆ
ಅರಸಿ ಬರುವೆಯಾ,
ಎಂದೂ ಹೋಗದಿರು ದೂರ
ನನ್ನಂತರಾಳವ ತೊರೆದು
ಎಂದಿಗೂ ನಿನ್ನವನಾಗಿರುವೆ
ಈ ದೇಹ ಮಣ್ಣನೊಳಗೆ ಲೀನವಾಗುವರೆಗೆ..!
#ರೋಹಿತ್...🖊
30/10/2024
ಇಂದು ಅವರವರ ಕೆಲಸ
ಅವರಿಗೆ ಹೆಚ್ಚಾದಾಗ
ಅಂದು ನಾವೇ ಹೆಚ್ಚಾಗಿದ್ದ
ದಿನಗಳು ಮಾಯವಾದವು..!
#ರೋಹಿತ್...🖋
10/10/2024
ನಿನ್ನಂದವ ನೋಡಿ ಆಕಾಶದ
ನಕ್ಷತ್ರವು ಸಹ ನಾಚಿಕೊಂಡಿದೆ,
ಕವಿ ಕಾಳಿದಾಸ, ರವಿವರ್ಮ ಕೂಡ
ಮೌನ ತಾಳಿದ್ದಾರೆ..!
#ರೋಹಿತ್...🖋
13/09/2024
ನನ್ನ ಶವದ ಮೆರವಣಿಗೆ ಹೊರಟಾಗ
ನಿಮ್ಮ ಮನೆಯ ಕಿಡಕಿಯಿಂದ
ಇಣುಕಾದ್ರು ನೋಡು
ಹೂವಿಂದ ಅಲಂಕಾರಗೊಂಡ
ನನ್ನ ಶವಯಾತ್ರೆ ರಥವನ್ನ..!
#ರೋಹಿತ್...
10/09/2024
ಯಾರದೋ ಎದೆಗೊರಗಿ
ಮಲಗುವ ಮುನ್ನ
ನನ್ನ ಜೊತೆ ಕಳೆದ
ಆ ದಿನಗಳು ನೆನಪಾಗಿಲ್ಲವೆ...!
#ರೋಹಿತ್
13/07/2024
ಅವಳನ್ನ ಮುಟ್ಟಿ ತಬ್ಬಬೇಕು
ಅನ್ನೋ ಆಸೆ ನನಗಿಲ್ಲ
ಅವಳ ಪ್ರೀತಿಯ ಮುಂದೆ
ಬಾಹ್ಯ ಸ್ಪರ್ಶವೆಲ್ಲ ನಶ್ವರ..!
#ರೋಹಿತ್
08/06/2024
14/03/2024
ಬ್ಯಾಸಗಿ ದಿವಸದಾಗ
ಮನೆ ಅಂಗಳದಾಗ ಮಲ್ಕೊಂಡು
ಆಕಾಶದಾಗಿನ ನಕ್ಷತ್ರ ನೋಡೊ ಮಜಾ
ಇವಾಗಿನ ಎ.ಸಿ ಮನಿಯೊಳಗೆ ಮಲ್ಕೊಂಡು
ಟಿ.ವಿ ನೋಡೊದ್ರಲ್ಲಿ ಸಿಗಂಗಿಲ್ಲ ರೀ...
#ರೋಹಿತ್...🖋️
Be the first to know and let us send you an email when ನೆನಪಿನ ನಾವಿಕ posts news and promotions. Your email address will not be used for any other purpose, and you can unsubscribe at any time.