06/03/2018
ಸೌದಿಯಲ್ಲಿರುವ ವಿದೇಶಿಯರ ಇಖಾಮ ನವೀಕರಿಸುವುದಿಲ್ಲವೆಂಬ ವರದಿ ಸತ್ಯಕ್ಕೆ ದೂರ
ಸೌದಿ ಅರೇಬಿಯಾದಲ್ಲಿ ಸೌದೀಕರಣವಾಗುವ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿರುವ ವಿದೇಶಿ ಕಾರ್ಮಿಕರ ಇಖಾಮ ನವೀಕರಿಸಲಾಗುವುದಿಲ್ಲವೆಂಬ ಸುದ್ದಿಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದಂತೆ ಇದು ಸತ್ಯಕ್ಕೆ ದೂರವಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ. ಸೇಲ್ಸ್ ಮ್ಯಾನ್, ಅಕೌಂಟೆಂಟ್ ಹಾಗೂ ಚಾಲಕರು ಸೇರಿದಂತೆ ಬಹುತೇಕ ವೃತ್ತಿಗಳು ನವಿಕರಿಸಲಾಗುತ್ತಿದ್ದು, ಕೆಲವು ನಿರ್ದಿಷ್ಟ ವೃತ್ತಿಗಳನ್ನು ನವೀಕರಿಸಲಾಗುವುದಿಲ್ಲವೆಂದು ತಿಳಿದು ಬಂದಿದೆ. ಆದರೆ ಮುಂದೆ ಸೌದೀಕರಣವಾಗುವ ಉದ್ಯೋಗ ವಲಯಗಳ ವೃತ್ತಿಗಳಿರುವ ಇಖಾಮಗಳು ನವೀಕರಿಸದಿರುವ ಸಾಧ್ಯತೆಗಳಿದೆಯಾದರೂ ಇದುವರೆಗೂ ಯಾವುದೇ ಅಧಿಕೃತ ಪ್ರಕಟನೆ ಹೊರಬಿದ್ದಿಲ್ಲ.
ಅಡ್ಮಿನಿಸ್ಟೇಟರ್, ಅಡ್ಮಿನಿಸ್ಟ್ರೇಶನ್ ಮ್ಯಾನೇಜರ್, ಹೆಚ್.ಆರ್.ಮ್ಯಾನೇಜರ್, ಪರ್ಸನಲ್ ಡಿಪಾರ್ಟ್ಮೆಂಟ್ ಹೆಡ್, ಪರ್ಸನಲ್ ಮ್ಯಾನೇಜರ್, ವರ್ಕರ್ಸ್ ಸುಪರಿಂಟೆಂಡೆಂಟ್, ಪರ್ಸನಲ್ ರಿಲೇಶನ್ ಮ್ಯಾನೇಜರ್, ಪರ್ಸನಲ್ ಸ್ಪೆಷಲಿಸ್ಟ್, ಸ್ಟಾಫ್ ಕ್ಲರ್ಕ್,ರಿಕ್ರ್ಯೂಟ್ಮೆಂಟ್ ಕ್ಲರ್ಕ್, ವರ್ಕರ್ಸ್ ಕ್ಲರ್ಕ್, ಡ್ಯೂಟಿ ಕ್ಲರ್ಕ್, ಜನರಲ್ ರಿಶೆಪ್ಷನಿಸ್ಟ್, ಹೋಟೆಲ್ ರಿಶೆಪ್ಷನಿಸ್ಟ್, ಪೇಶಂಟ್ ರಿಶೆಪ್ಷನಿಸ್ಟ್,ಕಂಪ್ಲೆಂಟ್ ರೈಟರ್, ಕ್ಯಾಶಿಯರ್, ಸೆಕ್ಯೂರಿಟಿ ಪರ್ಸನ್ಸ್, ಗವರ್ನ್ಮೆಂಟ್ ರಿಲೇಶನ್ ಆಪಿಸರ್, ಕೀ ಮೇಕರ್, ಕಸ್ಟಮ್ಸ್ ಕ್ಲಿಯರೆನ್ಸ್ ಆಪಿಸರ್, ಲೇಡೀಸ್ ಮಾರ್ಕೆಟ್ ನಲ್ಲಿರುವ ಲೇಡಿಸ್ ಸ್ಟಾಫ್ ಎಂಬಿತ್ಯಾದಿ ಇಖಾಮಗಳು ನವೀಕರಣ ಆಗುವುದಿಲ್ಲವೆಂದು ತಿಳಿದು ಬಂದಿದೆ.