02/10/2026
ಸಿನಿಮಾ ನಟನೆ ಬಿಟ್ಟು ವಿದೇಶದಲ್ಲಿ ಸೆಟಲ್ ಆದ ನಟಿ
ಜೋಶ್ ಸಿನಿಮಾ ಖ್ಯಾತಿಯ ಸ್ನೇಹಾ ಆಚಾರ್ಯ ಸದ್ಯ ಪತಿಯೊಂದಿಗೆ ವಿದೇಶದಲ್ಲಿ ನೆಲೆಸಿದ್ದಾರೆ. ಇವರು ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳು ಹಾಗೂ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದರು. ಡ್ಯಾನ್ಸ್ ಅಂದರೆ ತುಂಬಾ ಇಷ್ಟಪಡುವ ಸ್ನೇಹಾ, ಹಿಂದಿಯಲ್ಲಿ ಸೆಲೆಬ್ರಿಟಿ ನೃತ್ಯ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದಾರೆ. ಜೊತೆಗೆ ಕೆಲ ಹಿಂದಿ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದರು. ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಆದ ಬಿಗ್‌ಬಾಸ್ ಸೀಸನ್ ೬ರಲ್ಲೂ ಕಾಣಿಸಿಕೊಂಡಿದ್ದ ಇವರು, ಕುಣಿಯೋಣ ಬಾರ ನೃತ್ಯ ಕಾರ್ಯಕ್ರಮದ ನಿರೂಪಕಿಯಾಗಿದ್ದರು. ರಷ್ಯನ್ ಮೂಲದ ರಾಯನ್ ಎಂಬುವವರನ್ನು ಮದುವೆಯಾಗಿರುವ ಇವರು, ಪತಿಗೆ ವಿದೇಶದಲ್ಲಿ ಕೆಲಸ ಇರುವುದರಿಂದ ಅಲ್ಲಿಯೇ ನೆಲಸಿದ್ದಾರೆ. ಸ್ನೇಹಾ ಇತ್ತೀಚೆಗಷ್ಟೇ ಗಂಡು ಮಗುವಿನ ತಾಯಿಯಾಗಿದ್ದಾರೆ.