05/08/2025
ನಾಲ್ಕು ವರ್ಷ ಆರು ತಿಂಗಳು ಕೋರ್ಟು ಮೆಟ್ಟಿಲು ಹತ್ತಿ ನ್ಯಾಯ ಗೆದ್ದು ಬಂದು ಗ್ರಾಮ ಪಂಚಾಯಿತಿ ಸದಸ್ಯರಾದ.
ನಾರಾಯಣಸ್ವಾಮಿ (ಮೊದಲಿಯಾರ್) ರವರು ದೊಮ್ಮಸಂದ್ರ ಗ್ರಾಮ ಪಂಚಾಯಿತಿ ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಆನೇಕಲ್ ತಾಲ್ಲೂಕಿನ ದೊಮ್ಮಸಂದ್ರ ಗ್ರಾಮ ಪಂಚಾಯಿತಿಯಲ್ಲಿ 12ನೇ ವಾರ್ಡಿನ ಸದಸ್ಯರಾದ ಕೃಷ್ಣಾರೆಡ್ಡಿ ರವರು 2020 ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಸಮಯದಲ್ಲಿ ನಾಮ ಪತ್ರ ಸಲ್ಲಿಸುವ ಸಂಧರ್ಭದಲ್ಲಿ ತಮ್ಮ ಮೇಲೆ ಇದ್ದ ಕೇಸುಗಳ ಬಗ್ಗೆ ದಾಖಲಿಸದೆ ಸುಳ್ಳು ದಾಖಲೆಗಳನ್ನು ಜೊತೆಗೆ ನಾಮ ಪತ್ರ ಸಲ್ಲಿಸಿ ಚುನಾವಣೆಯಲ್ಲಿ ಗೆದ್ದಿದ್ದು, ಕೃಷ್ಣಾರೆಡ್ಡಿ ರವರ ವಿರುದ್ದ ಪರಾಭವಗೊಂಡಿದ್ದ ನಾರಾಯಣಸ್ವಾಮಿ (ಮೊದಲಿಯಾರ್) ರವರು ಪಂಚಾಯಿತಿ ಸದಸ್ಯರಾದ ಕೃಷ್ಣಾರೆಡ್ಡಿ, ರವರ ವಿರುದ್ದ ಚುನಾವಣೆ ಅದಿಕಾರಿಗಳಿಗೆ ಮತ್ತು ನ್ಯಾಯಾಲಯದಲ್ಲಿ ಭೂ ಕಬಳಿಕೆ ವಿಚಾರಕ್ಕೆ ಸಂಬಂದಿಸಿದ ಬಗ್ಗೆ ಕೇಸು ಹಾಕಿದ್ದು ಕಳೆದ 4 ವರ್ಷ 6 ತಿಂಗಳು ಕಾಲ ನ್ಯಾಯಾದೀಶರು ಇಬ್ಬರು ವ್ಯಕ್ತಿಗಳ ವಿಚಾರಗಳನ್ನು ಮತ್ತು ದಾಖಲೆಗಳನ್ನು ವಿಮರ್ಶೆ ಮಾಡಿ ಕಳೆದ ವಾರ ದೊಮ್ಮಸಂದ್ರ ಗ್ರಾಮ ಪಂಚಾಯಿತಿಯ 12ನೇ ವಾರ್ಡಿನ ಸದಸ್ಯರಾದ ಕೃಷ್ಣಾರೆಡ್ಡಿ ರವರನ್ನು ಗ್ರಾಮ ಪಂಚಾಯಿತಿ ಸದಸ್ಯತ್ವವನ್ನು ರದ್ದು ಮಾಡಿ ವಜಗೊಳಿಸಿದ್ದಾರೆ,
ಇನ್ನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿ ನಾಮಪತ್ರ ಸಲ್ಲಿಸಿದ ದೊಮ್ಮಸಂದ್ರ ಗ್ರಾಮ ಪಂಚಾಯಿತಿ 12ನೇ ವಾರ್ಡಿನ ನಾರಾಯಣಸ್ವಾಮಿ (ಮೊದಲಿಯಾರ್) ರನ್ನು ಗ್ರಾಮ ಪಂಚಾಯಿತಿ ಸದಸ್ಯರೆಂದು ನ್ಯಾಯಾದೀಶರು ಆದೇಶ ನೀಡಿದ್ದು ಇಂದು ದೊಮ್ಮಸಂದ್ರ ಗ್ರಾಮ ಪಂಚಾಯಿತಿಗೆ ನ್ಯಾಯಾಲಯದ ಆದೇಶ ಪತ್ರವನ್ನು ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರನ್ನು ಜೊತೆಗೂಡಿಸಿಕೊಂಡು ಗ್ರಾಮದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ನಾರಾಯಣಸ್ವಾಮಿ (ಮೊದಲಿಯಾರ್) ತಿಳಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಮುಖಂಡರಾದ ಸದಸ್ಯರು ಜಯದೇವ್, ಆರತಿಗೌಡ. ಪುನೀತಮ್ಮ.ಸುರೇಶ್ ರೆಡ್ಡಿ. ವಿಕಾಸ್ ರೆಡ್ಡಿ, ಧನಲಷ್ಮೀ. ಗೋವಿಂದರಾಜ್. ಅಜಯ್ ಕುಮಾರ್. ಶಿವಶಂಕರ್. ಸುಬ್ಬು. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ರವೀಂದ್ರ, ಮುನಿರಾಜು. ಟಿಸಿ,ಹಳ್ಳಿ ಸುಶೀಲಮ್ಮ. ಬಾಸ್ಕರ್ ರೆಡ್ಡಿ, ಮತ್ತಿತರು ಹಾಜರಿದ್ದರು.