Anekal Times

Anekal Times "ಬದಲಾವಣೆ ನಮ್ಮ ಗುರಿ" ಯಾರಿಗು ಹೆದರುವುದು ಇಲ್ಲ ಬೆದರುವುದು ಇಲ್ಲ.

12/09/2026

ಆನೇಕಲ್ ತಾಲೂಕಿನ ಸರ್ಜಾಪುರದ ಡಾ.ಬಿ.ಆರ್ ಅಂಬೇಡ್ಕರ್ ಆಟದ ಮೈದಾನದಲ್ಲಿ ವೇದಮೂರ್ತಿಯನ್ನು ಗಡಿಪಾಡು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಪತ್ರಿಕಾಗೋಷ್ಠಿ.

02/09/2026

ಸಮಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಬಿ. ಶಿವಣ್ಣ.

28/08/2026

ಬೆಂಗಳೂರಿನಲ್ಲಿ ನಟೋರಿಯಸ್ ಸರಗಳ್ಳರು ಅಂದರ್.
ಮಹಿಳೆಯನ್ನ ಅಡ್ಡಗಟ್ಟಿ ಹಲ್ಲೆ ಮಾಡಿ ಸರಕಸಿದ್ದ ಖದೀಮರು.
ಕಳೆದ ಆಗಷ್ಟ್ 12 ರಂದು ದೊಡ್ಡಬಿದರಕಲ್ಲು ಬಳಿ ನಡೆದಿದ್ದ ಸರಗಳವು
40 ವರ್ಷದ ಮಹಿಳೆ ವಿಜಯಮ್ಮ ಬೆಳಗ್ಗೆ 5:10 ರ ಸುಮಾರಿಗೆ ಹಾಲು ತರಲು ಬರ್ತಿದ್ರು
ಈ ವೇಳೆ ಹಿಂಬದಿಯಿಂದ ಡಿಯೋ ಬೈಕ್ ನಲ್ಲಿ ಫಾಲೋ ಮಾಡಿದ್ದ ಆರೋಪಿಗಳು
ರಸ್ತೆಯಲ್ಲಿ ಮಹಿಳೆ ಒಬ್ಬಳೇ ಬರೋದನ್ನ ಗಮನಿಸಿ ಫಾಲೋ ಮಾಡಿದ್ರು
ನಂತರ ಏಕಾಏಕಿ ಆಕೆ ಮೇಲೆ ಹಲ್ಲೆ ಮಾಡಿ ನಡುರಸ್ತೆಯಲ್ಲಿ ಬಿದ್ದರೂ ಬಿಡದೇ ಸರ ಕಸಿದಿದ್ರು
ಸರಗಳವಿನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು
ಬೆಚ್ಚಿಬೀಳಿಸುವಂತಿದ್ದ ಸರಗಳ್ಳರ ದುಷೃತ್ಯ
ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಪೀಣ್ಯಾ ಪೊಲೀಸರು
ಪ್ರಕರಣ ಸಂಬಂಧ ಸರಗಳ್ಳರಾದ ಪ್ರೇಮ್ ಕುಮಾರ್ ಹಾಗೂ ಯಶವಂತ್ ಬಂಧನ.
ಈ ಹಿಂದೆ ಕೂಡ ಕಳ್ಳತನ ಕೇಸ್ ನಲ್ಲಿ ಭಾಗಿಯಾಗಿದ್ದ ಆರೋಪಿಗಳು
ಅಪ್ರಾಪ್ತರಿದ್ದಾಗಲೇ ಬೈಕ್ ಕಳ್ಳತನ ಶುರು ಮಾಡಿದ್ರು
ಅಪ್ರಾಪ್ತರಿದ್ದಾಗಲೇ ಎಂಟು ವಾಹನ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ರು
ರಿಮ್ಯಾಂಡ್ ಹೋಮ್ ನಿಂದ ಬಿಡುಗಡೆಯಾಗಿ ವಯಸ್ಕರಾಗ್ತಿದ್ದಂತೆ ಸರಗಳವು
ಸದ್ಯ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿರೋ ಪೀಣ್ಯಾ ಪೊಲೀಸರು

26/08/2026

ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಾಗ್ತಿದೆ ರಾತ್ರಿ ವೇಳೆಯ ರಾಬರಿಗಳು..! ರಾಬರಿ ಮಾಡಲು ಹೊಂಚು ಹಾಕಿ ಕೂತಿದ್ದ ಕಳ್ಳನಿಗೆ ಭೀಕರ ಅಪಘಾತ.

ದೇವನಹಳ್ಳಿ ಹೊರವಲಯದ ಬೈಚಾಪುರ ಬಳಿ ಇರುವ ಬ್ರೆಗೇಡ್ ಗೇಟ್ ಬಳಿ ಘಟನೆ. ಗಾಡಿಗಳನ್ನ ಅಡ್ಡ ಹಾಕಿ ಕಳ್ಳತನ ಮಾಡುವ ವೇಳೆ ಕಳ್ಳನಿಗೆ ಡಿಕ್ಕಿಯಾದ ಬೈಕ್. ಅಪಘಾತದಲ್ಲಿ ಕಳ್ಳ ಮತ್ತು ಬೈಕ್ ಸವಾರರು ರಸ್ತೆಗೆ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ. ತಡರಾತ್ರಿ 1 ಗಂಟೆ ಸುಮಾರಿಗೆ ರಾಬರಿ ಮಾಡಲು ಫೀಲ್ಡ್ ಗೆ ಇಳಿದಿದ್ದ ಇಬ್ಬರು ಕಳ್ಳರು. ರಸ್ತೆಯಲ್ಲಿ ದ್ವಿಚಕ್ರ ವಾಹನಗಳನ್ನ ಟಾರ್ಗೆಟ್ ಮಾಡಿ ರಾಬರಿಗೆ ಕಳ್ಳರು ಪ್ಲಾನ್. ಬೈಕ್ ಸವಾರರನ್ನ ಅಡ್ಡಗಟ್ಟಿ ಮೊಬೈಲ್ ಮತ್ತು ಹಣವನ್ನ ಪೀಕುತಿದ್ದ ರಾಬರಿ ಗ್ಯಾಂಗ್. ಇದೇ ವೇಳೆ ಬೈಕೊಂದಕ್ಕೆ ಅಡ್ಡ ಹಾಕಲು ಕಳ್ಳರಿಂದ ಪ್ರಯತ್ನ. ಕಳ್ಳರು ರಸ್ತೆಗೆ ಅಡ್ಡ ಇರುವುದು ನೋಡಿ ಸ್ಪೀಡ್ ಹೆಚ್ಚಿಸಿದ್ದ ಬೈಕ್ ಸವಾರ. ಬೈಕ್ ಗೆ ಅಡ್ಡ ಬಂದ ಕಳ್ಳರಿಗೆ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಓರ್ವ ಕಳ್ಳ. ಮತ್ತೊಬ್ಬ ಕಳ್ಳ ಬೈಕ್ ಸವಾರರ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿ. ರಾತ್ರಿ ರಾಬರಿ ಪ್ರಕರಣ ನೋಡಿ ಬೆಚ್ಚಿಬಿದ್ದಿರುವ ಸ್ಥಳೀಯರು.
ಕೂಡಲೇ ಪೊಲೀಸರು ಕಳ್ಳರನ್ನ ಮಟ್ಟ ಹಾಕಲು ಸಾರ್ವಜನಿಕರಿಂದ ಹೆಚ್ಚಿದ ಆಗ್ರಹ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಬೈಚಾಪುರ ಗ್ರಾಮದ ಸಮೀಪ ಘಟನೆ.

26/08/2026

"ವಿಜಯಪುರದಲ್ಲೊಂದು ಮನಕಲುಕುವ ಘಟನೆ ಒಂದೆ ಕುಟುಂಬದ 6 ಮಂದಿ ಭೂತನಾಳ ಕೆರೆಗೆ ಬಿದ್ದು ಆತ್ಮಹತ್ಯೆ"

ಭೂತನಾಳ ಕೆರೆಯಲ್ಲಿ 6 ಶವಗಳು ಪತ್ತೆಯಾಗಿವೆ. ವಿಜಯಪುರ ನಗರದ ಹೊರ ಭಾಗದಲ್ಲಿರುವ ಭೂತನಾಳ ಕೆರೆ. 2 ಮಕ್ಕಳು ಸೇರಿ 6 ಜನರ ಶವ ಪತ್ತೆಯಾಗಿದ್ದು, ಇದರಲ್ಲಿ 4 ಮಹಿಳೆಯರು, ಇಬ್ಬರು ಬಾಲಕರ ಶವ ಸಿಕ್ಕಿವೆ. ಇನ್ನು ಘಟನೆಗೆ ಕೌಟುಂಬಿಕ ಕಲಹ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಆಗಷ್ಟ್ 24 ರಂದು ಮಿಸ್ಸಿಂಗ್ ಆದವರು ಶವವಾಗಿ ಪತ್ತೆಯಾಗಿವೆ. ವಿಜಯಪುರ ತಾಲೂಕಿನ‌ ತೊರವಿ ಗ್ರಾಮದ ನಿವಾಸಿಗಳಾದ ಶೋಭಾ ಜಾಲಗೇರಿ (45) ತಾಯಿ, ವಿದ್ಯಾ (16), ಸುವರ್ಣ (14), ಗೌಡೇಶ್ (ಮಗ) (10), ವಿಕಾಸ (5) ಸಾನಿಕಾ (7) ಶವ ದೊರಕಿವೆ. ಅಂದು ಗಂಡ ಮಲಕಾರಿ ಭೀಮರಾಯ ಜಾಲಗೇರಿ ಜೊತೆಗೆ ಹೆಂಡತಿ ಜಗಳ ಮಾಡಿಕೊಂಡು ಮನೆಯಿಂದ ಹೊರಗಡೆ ಬಂದಿದ್ದಳು. ಅಲ್ಲದೇ, ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳೊದಾಗಿ ಹೇಳಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆರೆಯ ಅಂಚಿನಲ್ಲಿ ತೇಲಿ ಬಂದ ಶವಗಳನ್ನು ಪೊಲೀಸರು ಹೊರಗೆ ತೆಗೆದರು. ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆ ಹಾಗೂ ಮರಣೋತ್ತರ ಪರೀಕ್ಷೆ ಬಳಿಕ ನಿಖರ ಮಾಹಿತಿ ತಿಳಿದು ಬರಲಿದೆ. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

26/08/2026

ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ.
ಹೊತ್ತಿ ಉರಿದ ರೊನಾಲ್ಡ್ ಡೆಸ್ಟರ್ ಕಾರ್. KA 28 MB 3765 ನೋಂದಣಿ ನಂಬರಿನ ಕಾರ್. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿರೋ ಸಾಧ್ಯತೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಹಳೆ ಬಜಾರ್‌ ಬಳಿ ಘಟನೆ. ಆನಂದ ಇಜೇರಿ ಎಂಬುವರಿಗೆ ಸೇರಿದ ಕಾರ್. ದೇವರಹಿಪ್ಪರಗಿ ತಾಲೂಕಿನ ಮಾರ್ಕಪ್ಪನಹಳ್ಳಿ ಗ್ರಾಮದ ಅನಂದ. ಕಾರ್ ಮಾಲೀಕ ಆನಂದ ಹಾಗೂ ಚಾಲಕ ಚಂದ್ರಕಾಂತ ವಾಲಿ ಕನ್ಯಾ ನೋಡಲು ಸಿಂದಗಿಗೆ ಬಂದಿದ್ದ ವೇಳೆ ಘಟನೆ.
ಬೆಂಕಿ‌‌ ನಂದಿಸಿದ ಅಗ್ನಿಶಾಮಕ ‌ದಳ ಸಿಬ್ಬಂದಿ. ಘಟನಾ ಸ್ಥಳಕ್ಕೆ ಸಿಂದಗಿ ಪೊಲೀಸರ ಭೇಟಿ ಪರಿಶೀಲನೆ

25/08/2026

ಆನೇಕಲ್ ತಾಲ್ಲೂಕು ಮಟ್ಟದ ಕ್ರೀಡಾಂಗಣವನ್ನೆ ಮಾಡಲಾಗದವರು ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣ ಮಾಡಿದ್ರೆ ಏನು ಉಪಯೋಗ.
ಆನೇಕಲ್ ಪಟ್ಟಣದಲ್ಲಿ ಇದ್ದ ಒಂದೇ ಒಂದು ಸರ್ಕಾರಿ ಶಾಲೆಯ ಕ್ರೀಡಾಂಗಣಕ್ಕೆ ಪುರಸಭೆ ಕಣ್ಣು ಹಾಕಿದ್ದು ಈ ಹಿಂದೆ ಅಕ್ರಮವಾಗಿ ಶಾಲೆಯ ಆಟದ ಮೈದಾನದ ಒಂದು ಮೂಲೆಯಲ್ಲಿ ನಾಲ್ಕು ಓವರ್ ಹೆಡ್ ಟ್ಯಾಂಕ್ಗಳನ್ನ ನಿರ್ಮಾಣಮಾಡಿದ್ದರು. ಆದರೆ ಈಗ ಶೀತಲ ವ್ಯವಸ್ಥೆಗೆ ತಲುಪಿದ್ದು ಈಗ ಅರ್ದದಷ್ಟು ಆಟದ ಮೈದಾನವನ್ನು ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಬಳಸಿಕೊಳ್ಳಲು ಪುರಸಭೆ ಮುಂದಾಗಿದ್ದು ಸ್ಥಳೀಯರ ಆಕ್ರೋಶಕ್ಕು ಕಾರಣವಾಗಿದೆ. ಅಷ್ಟೇ ಅಲ್ಲದೆ ಮೈದಾನದಲ್ಲಿ ಇದ್ದ ಮರಗಳನ್ನು ಪೂರ್ವಾನುಮತಿ ಇಲ್ಲದೆ ಕಡಿದ್ದು ಈ ಪುರಸಭ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳ ಬೇಕೆಂದು ಸ್ಥಳೀಯರ ಒತ್ತಾಯವಾಗಿದೆ.

25/08/2026

"ಬೆಳ್ಳಂ ಬೆಳಗ್ಗೆ ಹೊಸಕೋಟೆಯಲ್ಲಿ ಘರ್ಜಿಸಿದ ಜೆಸಿಬಿಗಳು"

ಹೊಸಕೋಟೆ ನಗರಸಭೆ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆ..

ನಗರಸಭೆ ವ್ಯಾಪ್ತಿಯ ಪ್ರಮುಖ ಬೀದಿಗಳಲ್ಲಿ ಫುಟ್‌ಪಾತ್ ಒತ್ತುವರಿ ತೆರವು.. ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಕಾರ್ಯಾಚರಣೆ.. ಹೊಸಕೋಟೆ ಪೊಲೀಸರು ನಗರಸಭೆ ಸಿಬ್ಬಂದಿ ಜಂಟಿ ಕಾರ್ಯಚರಣೆ. ಅಂಗಡಿ ಹಾಗೂ ಮುಂಭಾಗದ ರಸ್ತೆ ಹಾಗೂ ಚರಂಡಿ ಒತ್ತುವರಿ.. ಪ್ರತಿನಿತ್ಯ ಟ್ರಾಫಿಕ್ ಜಾಮ್ ಆಗಿ ತೊಂದರೆ ಅನುಭವಿಸುತ್ತಿದ್ದ ಸಾರ್ವಜನಿಕರು.. ಹಲವಾರು ಬಾರಿ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ ತೆರವು ಕಾರ್ಯಚರಣೆ. ಅಂಗಡಿಗಳ ಮುಂಭಾಗದ ಶೀಟ್ ಮತ್ತು ಫುಟ್ಬಾತ್ ತೇರವು ಮಾಡಿದ ಅಧಿಕಾರಿಗಳು.. ಹೊಸಕೋಟೆ ಉಪ ವಿಭಾಗದ ನೂರಕ್ಕೂ ಹೆಚ್ಚು ಪೊಲೀಸರು ಹಾಗೂ 50ಕ್ಕೂ ಹೆಚ್ಚು ನಗರಸಭೆ ಸಿಬ್ಬಂದಿ ಇಂದ ಕಾರ್ಯಚರಣೆ..
ನಾಲಕ್ಕು ತಂಡ ಮಾಡಿಕೊಂಡು ಕಾರ್ಯಚರಣೆಗಳಿಂದ ಅಧಿಕಾರಿಗಳು.. ಏಕಾಏಕಿ ತೆರವು ಮಾಡುತ್ತಿದ್ದಾರೆ ಎಂದು ಕೆಲವು ಅಂಗಡಿ ಮಾಲೀಕರು ಆಕ್ರೋಶ.. ಪೋಲಿಸ್ ಬಿಗಿ ಭದ್ರತೆಯಿಂದ ತೆರವು ಕಾರ್ಯಚರಣೆ ಮುಂದುವರಿಸಲಾಗಿದೆ..

25/08/2026

ದಿನಾಂಕ : 28:08:2026ರಂದು SC/ST ಜಾಗೃತ ನೌಕರರ ರಾಜ್ಯ ಮಟ್ಟದ ಏಕ್ಯತಾ ಸಮಾವೇಶವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದ್ದು ಕಾರ್ಯಕ್ರಮದ ಪೂರ್ವಭಾವಿಯಾಗಿ ಆನೇಕಲ್ ನಲ್ಲಿ ಪತ್ರಿಕಾ ಘೋಷ್ಟಿ ನಡೆಯುತ್ತಿದೆ.

25/08/2026

*ರಸ್ತೆಯಲ್ಲೇ ಲಾಂಗ್ ಹಿಡಿದು ರೌಡಿಸಂ ಮಾಡಿದ್ದ ಆರೋಪಿಗಳು ಅಂದರ್..!*

ಅಂಬಣ್ಣ, ಅಜಯ್, ರಾಹುಲ್, ಶಿವಕುಮಾರ್ ಸೇರಿ ಆರು ಆರೋಪಿಗಳು ಅರೆಸ್ಟ್, ಸಿಗರೇಟ್ ವಿಚಾರಕ್ಕೆ ಗಲಾಟೆ ಶುರುವಾಗಿತ್ತು, ಬೆಂಗಳೂರಿನ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಗಲಾಟೆ, ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು, ಈ ಸಂಬಂಧ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ FIR ದಾಖಲಾಗಿತ್ತು, ಇದೀಗ ಆರು ಆರೋಪಿಗಳನ್ನ ಬಂಧಿಸಿ ವಿಚಾರಣೆ ಕೈಗೊಳ್ಳಲಾಗಿದೆ.

Address

Anekal

Telephone

+919036777559

Website

Alerts

Be the first to know and let us send you an email when Anekal Times posts news and promotions. Your email address will not be used for any other purpose, and you can unsubscribe at any time.

Contact The Business

Send a message to Anekal Times:

Shortcuts

Share