ಅರಕಲಗೂಡು ನ್ಯೂಸ್ Arkalgud News

ಅರಕಲಗೂಡು ನ್ಯೂಸ್ Arkalgud News Stick to your brand voice and tone, but also keep it conversational.

ಅರಕಲಗೂಡು : ಸಾಮಾಜಿಕ ಬದಲಾವಣೆಯ ಹರಿಕಾರರಾಗಿದ್ದ ಬಾಬು ಜಗಜೀವನ ರಾಮ್ ಅವರ ಆದರ್ಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ ಎಂದು ತಹಸೀಲ್ದಾರ್ ಸೌ...
06/04/2025

ಅರಕಲಗೂಡು : ಸಾಮಾಜಿಕ ಬದಲಾವಣೆಯ ಹರಿಕಾರರಾಗಿದ್ದ ಬಾಬು ಜಗಜೀವನ ರಾಮ್ ಅವರ ಆದರ್ಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ ಎಂದು ತಹಸೀಲ್ದಾರ್ ಸೌಮ್ಯ ಅವರು ತಿಳಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಶನಿವಾರ ಪಟ್ಟಣದ ಅರಸು ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಗಜೀವನರಾಮ್ ಅವರ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು,ಜಗಜೀವನರಾಮ್ ಅವರು ದೇಶದ ಉಪ ಪ್ರಧಾನಿ,ಹಲವು ಖಾತೆಗಳನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದ್ದಾರೆ.ಇವರ ಅವಧಿಯಲ್ಲಿ ಪ್ರಮುಖವಾಗಿ ಅನುಷ್ಠಾನಗೊಂಡ ಆಹಾರ ಭದ್ರತಾ ಕಾಯಿದೆ,ಹಸಿರು ಕ್ರಾಂತಿಯ ಹರಿಕಾರರಾಗಿದ್ದಾರೆ ಎಂದು ಬಣ್ಣಿಸಿದರು.

ವಿಶೇಷವಾಗಿ ಅಂದು ಉಂಟಾಗಿದ್ದ ಬರಗಾಲದ ಸಮಯದಲ್ಲಿ ತೀವ್ರ ಆಹಾರ ಬಿಕ್ಕಟ್ಟನ್ನು ಪರಿಹರಿಸುವ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ಜಗಜೀವನ್ ರಾಮ್ ಅವರು ನಿರ್ವಹಿಸಿದ್ದಾರೆ.ಇದರ ಫಲವಾಗಿ ಇಂದು ಆಹಾರದ ಸಮಸ್ಯೆ ಉಲ್ಬಣಗೊಳ್ಳದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಉಪನ್ಯಾಸಕ ರವಿಕುಮಾರ್ ಮಾತನಾಡಿ,ಬಾಬುಜೀ ಎಂದು ಜನಪ್ರೀಯವಾಗಿರುವ ಜಗಜೀವನ ರಾಮ್ ಅವರ ಆದರ್ಶ ವ್ಯಕ್ತಿತ್ವ ನಮ್ಮ ಸಮಾಜಕ್ಕೆ ಇಂದಿಗೂ ಪ್ರಸ್ತುತವಾಗಿದೆ.ಭಾರತೀಯ ಸ್ವಾತಂತ್ರ್ಯ ಕಾರ್ಯಕರ್ತ ಮತ್ತು ರಾಜಕಾರಣಿ.ವಿವಿಧ ಖಾತೆಗಳೊಂದಿಗೆ ಸಚಿವರಾಗಿ ಮತ್ತು ಉಪ ಪ್ರಧಾನಿಯಾಗಿಯೂ ಸಹ ಸೇವೆ ಸಲ್ಲಿದ್ದಾರೆ.ಭಾರತೀಯ ಕೃಷಿಯ ಅಧುನೀಕರಣಕ್ಕೆ ಗಮನಾರ್ಹವಾಗಿ ಕೊಡುಗೆ ನೀಡಿದ್ದಾರೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಮಾತನಾಡಿ,ಸ್ವಾತಂತ್ರ್ಯ ಚಳುವಳಿ,ರಾಜಕಾರಣದಲ್ಲಿ ತಮ್ಮದೇ ಆದ ಕೊಡುಗೆ ನೀಡಿರುವ ಜಗಜೀವನ ರಾಮ್ ಅವರನ್ನು ಅತ್ಯಂತ ಸಂಭ್ರಮದಿಂದ ಆರಾಧಿಸಿ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷ ಪ್ರದೀಪ್‌ಕುಮಾರ್,ಸದಸ್ಯರಾದ ಹೂವಣ್ಣ,ಇಒ ಪ್ರಕಾಶ್,ಬಿಇಒ ನಾರಾಯಣ,ಆರ್‌ಎಫ್‌ಒ ಯಶ್ಮಾ ಮಾಚಮ್ಮ,ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ ಸಮಾಜದ ಮುಖಂಡರಾದ ದೊರೆಬಾಬು,ಗಣೇಶ್ ವೇಲಾಪುರಿ,ನಿಂಗರಾಜು,ಚಂದ್ರ,ಕೃಷ್ಣ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನಾ ತಾಲೂಕು ಕಚೇರಿ ಆವರಣದಿಂದ ಬೆಳ್ಳಿ ಸಾರೋಟಿನಲ್ಲಿ ಜಗಜೀವನರಾಮ್ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.

ಅರಕಲಗೂಡು : ತಾಲೂಕು ಆಡಳಿತ ವತಿಯಿಂದ ಏಪ್ರಿಲ್-14ರಂದು ಅದ್ಧೂರಿಯಾಗಿ ನಡೆಯುವ ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಅವರ ಜಯಂತಿ ಆಚರಣೆ ಕಾರ್ಯಕ್ರಮದಲ...
06/04/2025

ಅರಕಲಗೂಡು : ತಾಲೂಕು ಆಡಳಿತ ವತಿಯಿಂದ ಏಪ್ರಿಲ್-14ರಂದು ಅದ್ಧೂರಿಯಾಗಿ ನಡೆಯುವ ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಅವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಎಲ್ಲಾ ಪ್ರಗತಿ ಪರ ಸಂಘ ಸಂಸ್ಥೆಗಳ ಕಾರ್ಯಕರ್ತರು,ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಶಾಸಕ ಎ.ಮಂಜು ಮನವಿ ಮಾಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪೂರ್ವ ಭಾವಿಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು,ಈ ಬಾರಿ ಯಾವುದೇ ಚುನಾವಣೆ ಇಲ್ಲದೇ ಇರುವುದರಿಂದ ಅರ್ಥಪೂರ್ಣವಾಗಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಆಯೋಜನೆ ಮಾಡುವುದು ನಮ್ಮ ಭಾಗ್ಯವಾಗಿದೆ.ಪಟ್ಟಣ ಸೇರಿದಂತೆ ಇಡೀ ತಾಲೂಕಿನಾದ್ಯಂತ ಜನರು ಸಂಭ್ರಮದಿAದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂವಿಧಾನಶಿಲ್ಪಿಗೆ ಗೌರವ ತಂದುಕೊಡಬೇಕೆAದು ಕರೆನೀಡಿದರು.

ತಾಲೂಕು ಕಚೇರಿ ಆವರಣದಲ್ಲಿನ ಅಂಬೇಡ್ಕರ್ ಪ್ರತಿಮೆಯ ಗೋಪುರ ಕಾರ್ಯಕ್ರಮ ಈಗಾಗಲೇ ಪೂರ್ಣಗೊಳ್ಳಬೇಕಿತ್ತು.ಕೆಲಸ ನಿರ್ವಹಿಸುವ ತಂಡ ಸುಳ್ಳು ನೆಪಹೇಳಿ ಬೇರೆ ಕಡೆ ತೆರಳಿರುವ ಪರಿಣಾಮ ಅಂದುಕೊAಡ ವೇಳೆಗೆ ಗೋಪುರ ಕೆಲಸ ಮುಗಿದಿಲ್ಲ.ಈ ಬಾರಿಯ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಗೋಪುರ ಸಮರ್ಪಣೆ ಮಾಡುವ ಮೂಲಕ ಐತಿಹಾಸಿಕ ಕಾರ್ಯಕ್ರಮ ಆಯೋಜನೆ ಮಾಡುವ ಉದ್ದೇಶವನ್ನು ಹೊಂದಲಾಗಿತ್ತು.ಕೆಲಸಗಾರರಿAದ ಅದು ಸಾಧ್ಯವಾಗಿಲ್ಲ.ಏಪ್ರಿಲ್ 14ರ ಜಯಂತಿ ಕಾರ್ಯಕ್ರಮ ಮುಗಿದ ನಂತರ ಗೋಪುರ ಉದ್ಘಾಟನೆ ಕಾರ್ಯಕ್ರಮವನ್ನು ಅತ್ಯಂತ ಹೆಚ್ಚಿನ ರೀತಿಯ ವೈಭವದಿಂದ ಕಾರ್ಯಕ್ರಮ ಆಯೋಜನೆ ಮಾಡೋಣ ಎಂದು ಹೇಳಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಲಿದೆ.ಪಟ್ಟಣ ಪಂಚಾಯಿತಿ ಎಲ್ಲಾ ಸದಸ್ಯರು,ತಾಲೂಕಿನ ಎಲ್ಲಾ ಗ್ರಾಪಂಗಳ ಸದಸ್ಯರು,ಅಧಿಕಾರಿಗಳು,ಸಿಬ್ಬಂದಿಗಳು ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿ,ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿರಬೇಕು.ಯಾರು ಗೈರಾಗುತ್ತಾರೋ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು.ಈಗಾಗಲೇ ಎಲ್ಲರಿಗೂ ಮಾಹಿತಿ ನೀಡುವಂತೆ ತಹಸೀಲ್ದಾರ್,ಇಒ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಡೀ ದೇಶಕ್ಕೆ ಸಂವಿಧಾನ ನೀಡಿ ಪ್ರಜಾಪ್ರಭುತ್ವದ ಆಶಯಗಳನ್ನು ಪ್ರತಿಯೊಬ್ಬರಿಗೂ ಕಲ್ಪಿಸಿರುವ ಅಂಬೇಡ್ಕರ್ ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು.ಎಲ್ಲಾ ಸಮಾಜದವರು,ಅಭಿಮಾನಿಗಳು,ವಿದ್ಯಾರ್ಥಿಗಳು,ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು,ಸಹಾಯಕಿಯರು,ಆಶಾ ವರ್ಕರ್‌ಗಳು,ಮಹಿಳಾ ಸ್ವಸಹಾಯ ಸಂಘದ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಿದೆ.ಈ ಬಗ್ಗೆ ಆಯಾ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಮಂಜು ಅವರು ತಿಳಿಸಿದರು.

ತಹಸೀಲ್ದಾರ್ ಸೌಮ್ಯ ಅವರು ಮಾತನಾಡಿ,ಏಪ್ರಿಲ್-14ರಂದು ಬೆಳಿಗ್ಗೆ ತಾಲೂಕು ಕಚೇರಿ ಆವರಣದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಬೆಳ್ಳಿರಥದ ಸಾರೋಟಿನಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆ ವಿವಿಧ ಕಲಾತಂಡಗಳು,ಅಧಿಕಾರಿಗಳೊAದಿಗೆ ನಡೆಯಲಿದೆ.ಇದಾದ ಬಳಿಕ ಶಿಕ್ಷಕರ ಭವನದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.ಅವತ್ತಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಉಪಾರದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ದಲಿತ ಸಮುದಾಯದ ಗಣ್ಯರಿಗೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅತೀ ಹೆಚ್ಚಿನ ಅಂಕಗಳಿಸಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು.ವಿಶೇಷಭಾಷಣದ ವ್ಯವಸ್ಥೆಯನ್ನು ಸಂಪನ್ಮೂಲ ವ್ಯಕ್ತಿಯಿಂದ ನಡೆಯಲಿದೆ ಎಂದು ಹೇಳಿದರು.

ಸಭೆಯಲ್ಲಿ ದಲಿತ ಪರ ಸಂಘಟನೆಗಳ ಮುಖಂಡರು ಕಾರ್ಯಕ್ರಮ ಆಯೋಜನೆ ಕುರಿತು ಕೆಲವು ಸಲಹೆಗಳನ್ನು ನೀಡಿದರು.ಪಪಂ ಅಧ್ಯಕ್ಷ ಪ್ರದೀಪ್ ಕುಮಾರ್,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್,ವಿವಿಧ ಇಲಾಖೆ ಅಧಿಕಾರಿಗಳು, ಸಮಾಜದ ಮುಖಂಡರು ಹಾಜರಿದ್ದರು.

ಹಾಸನ ಹಾಲು ಒಕ್ಕೂಟಕ್ಕೆ ಭರ್ಜರಿ ಲಾಭ: ಬೇಸಿಗೆಯಲ್ಲಿ ಐಸ್‌ಕ್ರೀಂ, ಹಾಲು, ಮೊಸರಿಗೆ ಭಾರಿ ಬೇಡಿಕೆಹಾಸನ ವ್ಯಾಪ್ತಿಯ ಹಾಲು ಒಕ್ಕೂಟಕ್ಕೆ ನಂದಿನಿ ಉ...
26/03/2025

ಹಾಸನ ಹಾಲು ಒಕ್ಕೂಟಕ್ಕೆ ಭರ್ಜರಿ ಲಾಭ: ಬೇಸಿಗೆಯಲ್ಲಿ ಐಸ್‌ಕ್ರೀಂ, ಹಾಲು, ಮೊಸರಿಗೆ ಭಾರಿ ಬೇಡಿಕೆ

ಹಾಸನ ವ್ಯಾಪ್ತಿಯ ಹಾಲು ಒಕ್ಕೂಟಕ್ಕೆ ನಂದಿನಿ ಉತ್ಪನ್ನಗಳ ಭರ್ಜರಿ ಭೇಡಿಕೆ ಬಂದಿದೆ. ಇದರಿಂದ ದಾಸ್ತಾನಿದ್ದ ಎಲ್ಲಾ ನಂದಿನಿ ಉತ್ಪನ್ನಗಳು ಉತ್ತಮವಾಗಿ ಮಾರಾಟ ಕಾಣ್ತಿವೆ. ಗೋದಾಮಿನಲ್ಲಿ ತುಂಬಿ ತುಳುಕುತ್ತಿದ್ದ ಹಾಲಿನ ಪೌಡರ್‌, ನಂದಿನಿ ತುಪ್ಪ ಮಾರಾಟವಾಗುತ್ತಿದ್ದು, ಹೊಸದಾಗಿ ಹಾಲಿನ ಉತ್ಪನ್ನ ತಯಾರು ಮಾಡಲಾಗುತ್ತಿದೆ.

ಹೈಲೈಟ್ಸ್‌:

ಪ್ರತಿನಿತ್ಯ 12 ಸಾವಿರ ಲೀಟರ್‌ ಐಸ್‌ ಕ್ರೀಂಗೆ ಡಿಮ್ಯಾಂಡ್‌

10 ಸಾವಿರ ಲೀಟರ್‌ ಮೊಸರು, ಎರಡು ಪಟ್ಟು ಮಜ್ಜಿಗೆ ಮಾರಾಟ

ದಾಸ್ತಾನು ಖಾಲಿ, ಹೆಚ್ಚಿದ ಲಾಭ ಪ್ರಮಾಣ

26/03/2025

ದಿನ ಭವಿಷ್ಯ 26 ಮಾರ್ಚ್ 2025: ಇಂದು ಪಾಪಮೋಚನಿ ಏಕಾದಶಿ, ಈ ರಾಶಿಗೆ ವಿನಾಯಕನ ಪೂರ್ಣ ಕೃಪೆ!

2025 ಮಾರ್ಚ್ 26ರ ಬುಧವಾರವಾದ ಇಂದು, ಚಂದ್ರನ ಸ್ಥಾನ ಬದಲಾವಣೆಯಿಂದ ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

2025 ಮಾರ್ಚ್ 26ರ ಬುಧವಾರವಾದ ಇಂದು, ಮಕರ ರಾಶಿಯ ನಂತರ ಕುಂಭ ರಾಶಿಗೆ ಪ್ರವೇಶಿಸುವ ಮೂಲಕ ಚಂದ್ರನು ಸುನಫ ಯೋಗವನ್ನು ಸೃಷ್ಟಿಸುತ್ತಾನೆ. ಒಟ್ಟಾರೆ ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ.

ಮೇಷ ರಾಶಿ
ಇಂದು ಮೇಷ ರಾಶಿಯವರ ಮನಸ್ಸು ಚಂಚಲವಾಗಿರುತ್ತದೆ. ನೀವು ವ್ಯವಹಾರದಲ್ಲಿ ಹೆಚ್ಚು ಓಡಾಡಬೇಕಾಗಬಹುದು. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿಯೂ ನೀವು ಅಡೆತಡೆಗಳನ್ನು ಎದುರಿಸಬಹುದು. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಆಗಬಹುದು. ಆದಾಯ ಹೆಚ್ಚಾಗಲಿದೆ. ಕೆಲಸದಲ್ಲಿ ಯಶಸ್ವಿಯಾಗಲು ನೀವು ಮಾಡುವ ಪ್ರಯತ್ನವು ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸಂಪತ್ತು ಮತ್ತು ಆರೋಗ್ಯದ ದೃಷ್ಟಿಯಿಂದ ನಿಮಗೆ ಉತ್ತಮ ದಿನವಾಗಿರುತ್ತದೆ.
ಇಂದಿನ ಅದೃಷ್ಟ-91%

ವೃಷಭ ರಾಶಿ
ವೃಷಭ ರಾಶಿ ಜನರು ಇಂದು ತಮ್ಮ ಮಾನಸಿಕ ಸ್ಥಿತಿಯಲ್ಲಿ ಏರಿಳಿತಗಳನ್ನು ಹೊಂದಿರಬಹುದು. ನಿಮ್ಮ ಆತ್ಮವಿಶ್ವಾಸ ಕಡಿಮೆಯಾಗಲಿದೆ. ವ್ಯವಹಾರದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ನಿಮಗೆ ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ನಿಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಆರ್ಥಿಕವಾಗಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ವ್ಯವಹಾರದ ಯಶಸ್ಸು ಉತ್ತಮ ಆರೋಗ್ಯದಿಂದ ಬೆಂಬಲಿತವಾಗಿದೆ. ಸರಿಯಾದ ಹಣಕಾಸು ಯೋಜನೆಯನ್ನು ಕಂಡುಕೊಳ್ಳುವುದು ಮತ್ತು ಬುದ್ಧಿವಂತ ಹೂಡಿಕೆಗಳನ್ನು ಮಾಡುವುದು ಇಂದು ನಿಮ್ಮ ಆದ್ಯತೆಯಾಗಿರಬೇಕು.
ಇಂದಿನ ಅದೃಷ್ಟ- 71%

ಮಿಥುನ ರಾಶಿ
ಮಿಥುನ ರಾಶಿಚಕ್ರದ ಜನರಲ್ಲಿ ಇಂದು ಸಂತೋಷ ಹೆಚ್ಚಾಗಬಹುದು. ಅತಿಯಾದ ಖರ್ಚು ಮನಸ್ಸನ್ನು ತೊಂದರೆಗೊಳಿಸುತ್ತದೆ. ಆದರೆ ಇಂದು ಉದ್ಯೋಗ ಬದಲಾವಣೆಯೊಂದಿಗೆ ಬಡ್ತಿಗೆ ಅವಕಾಶಗಳು ಇರಬಹುದು. ಆದಾಯ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ನಿಮಗೆ ಸಿಗುತ್ತವೆ. ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ವರ್ತನೆ ಪ್ರಮುಖ ಪಾತ್ರ ವಹಿಸುತ್ತದೆ. ಹಣವನ್ನು ಎಚ್ಚರಿಕೆಯಿಂದ ನಿರ್ವಹಿಸಿ.
ಇಂದಿನ ಅದೃಷ್ಟ-80%

ಕಟಕ ರಾಶಿ
ಇಂದು ಕಟಕ ರಾಶಿಚಕ್ರದ ಜನರು ಇಂದು ತಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ಚಿಂತಿತರಾಗಬಹುದು. ತಾಳ್ಮೆಯಿಂದಿರಿ. ಉದ್ಯೋಗದಲ್ಲಿ ಪ್ರಗತಿಗೆ ದಾರಿಗಳು ತೆರೆದುಕೊಳ್ಳುತ್ತವೆ. ನಿಮಗೆ ಸರ್ಕಾರದಿಂದ ಬೆಂಬಲ ಸಿಗುತ್ತದೆ. ಆದಾಯ ಹೆಚ್ಚಾಗಲಿದೆ. ನಿಮಗೆ ಉನ್ನತ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ. ಭಾವನಾತ್ಮಕ ಮನಸ್ಸಿನಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
ಇಂದಿನ ಅದೃಷ್ಟ-81%

ಸಿಂಹ ರಾಶಿ
ಸಿಂಹ ರಾಶಿಚಕ್ರದ ಜನರಿಗೆ ಇಂದು ಅದೃಷ್ಟದ ಬೆಂಬಲ ಸಿಗುತ್ತದೆ. ಅದೃಷ್ಟವಶಾತ್ ಇಂದು ಕೆಲವು ಕೆಲಸಗಳು ಸಹ ಮುಗಿಯುತ್ತವೆ. ಹಿರಿಯರಿಂದ ಆಶೀರ್ವಾದವೂ ಸಿಗಲಿದೆ. ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಕೆಲಸದ ಕ್ಷೇತ್ರದಲ್ಲಿಯೂ ಬದಲಾವಣೆಯಾಗಬಹುದು. ವ್ಯವಹಾರದಲ್ಲಿ ವಿಸ್ತರಣೆ ಇರಬಹುದು.
ಇಂದಿನ ಅದೃಷ್ಟ-76%

ಕನ್ಯಾರಾಶಿ
ಇಂದು ಮನೆಯ ಹಿರಿಯರು ನಿಮ್ಮನ್ನು ಹೊಗಳಬಹುದು. ಉದ್ಯೋಗದಲ್ಲಿ ನಿಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ನಿಮಗೆ ಅವಕಾಶ ಸಿಗಬಹುದು. ಬಡ್ತಿಯೊಂದಿಗೆ ಆದಾಯ ಹೆಚ್ಚಾಗುವ ಸೂಚನೆಗಳಿವೆ. ಹಣಕಾಸಿನ ಬಜೆಟ್ ತಯಾರಿಸಿ, ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ದಿನದ ಮೊದಲಾರ್ಧದಲ್ಲಿ ಉತ್ಪಾದಕತೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೂ, ನೀವು ಗಡುವನ್ನು ಪೂರೈಸುವಲ್ಲಿ ಯಶಸ್ವಿಯಾಗುತ್ತೀರಿ.
ಇಂದಿನ ಅದೃಷ್ಟ-80%

ತುಲಾ ರಾಶಿ
ತುಲಾ ರಾಶಿಚಕ್ರದ ಜನರು ಇಂದು ತಮ್ಮ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ತಪ್ಪಿಸಿ. ಅಜ್ಞಾತ ಭಯ ನಿಮ್ಮನ್ನು ಕಾಡುತ್ತದೆ. ಪರಿಸ್ಥಿತಿಗಳು ಪ್ರತಿಕೂಲವಾಗಿವೆ, ಎಚ್ಚರಿಕೆಯಿಂದ ಅವುಗಳನ್ನು ದಾಟಿ. ಇಂದು ನಿಮ್ಮ ಮನಸ್ಸು ತೊಂದರೆಗೊಳಗಾಗಬಹುದು. ಕಡಿಮೆ ಆದಾಯ ಮತ್ತು ಹೆಚ್ಚಿನ ಖರ್ಚು ಇರುವ ಪರಿಸ್ಥಿತಿ ಬರಬಹುದು. ಕುಟುಂಬಕ್ಕೆ ಬೆಂಬಲ ನೀಡಿ. ವ್ಯವಹಾರದತ್ತ ಗಮನ ಹರಿಸಿ.
ಇಂದಿನ ಅದೃಷ್ಟ-63%

ವೃಶ್ಚಿಕ ರಾಶಿ
ಇಂದು ಕೆಲಸದ ಸ್ಥಳದ ಸವಾಲುಗಳನ್ನು ನಿವಾರಿಸಲು ತಂಡದ ಕೆಲಸ ಸಹಾಯಕವಾಗಿರುತ್ತದೆ. ಪ್ರೀತಿಪಾತ್ರರ ಜೊತೆ ಕಳೆದ ಕ್ಷಣಗಳು ಅದ್ಭುತವಾಗಿರುತ್ತವೆ. ಬಹಳ ದಿನಗಳಿಂದ ಬಾಕಿ ಇರುವ ಪಾವತಿಗಳನ್ನು ಪೂರ್ಣಗೊಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ.​
ಇಂದಿನ ಅದೃಷ್ಟ-80%

ಧನು ರಾಶಿ
ಧನು ರಾಶಿ ಜನರು ಇಂದು ಮಾತಿನಲ್ಲಿ ಸೌಮ್ಯವಾಗಿರಬೇಕು. ಮನಸ್ಸು ತೊಂದರೆಗೊಳಗಾಗಬಹುದು. ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಶೈಕ್ಷಣಿಕ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಬೌದ್ಧಿಕ ಕೆಲಸದಿಂದ ಆದಾಯ ಹೆಚ್ಚಾಗಬಹುದು. ಇಂದು ಯಶಸ್ಸು ಬದ್ಧತೆ ಮತ್ತು ಕಠಿಣ ಪರಿಶ್ರಮದಿಂದ ಬರುತ್ತದೆ. ನಿಮ್ಮ ಸಂಬಂಧದಲ್ಲಿ ನಡೆಯುತ್ತಿರುವ ಪ್ರಕ್ಷುಬ್ಧತೆಯನ್ನು ಇಂದು ಪರಿಹರಿಸಿ. ವ್ಯವಹಾರದಲ್ಲಿನ ಸವಾಲುಗಳನ್ನು ನಿವಾರಿಸಲು ಪ್ರಯತ್ನಿಸಿ. ನೀವು ಆರ್ಥಿಕ ಯಶಸ್ಸನ್ನು ಪಡೆಯುತ್ತೀರಿ.
ಇಂದಿನ ಅದೃಷ್ಟ-90%

ಮಕರ ರಾಶಿ
ಮಕರ ರಾಶಿಯವರಿಗೆ ಇಂದು ಹಠಾತ್ ಆರ್ಥಿಕ ಲಾಭ ಸಿಗಬಹುದು. ಪ್ರಯಾಣದ ಸಾಧ್ಯತೆ ಇರುತ್ತದೆ. ಆದಾಯ ಹೆಚ್ಚಾಗಲಿದೆ. ಆತ್ಮವಿಶ್ವಾಸ ತುಂಬಿರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಆಗಬಹುದು. ವೃತ್ತಿಪರ ಸಮಸ್ಯೆಗಳನ್ನು ನೋಡಿಕೊಳ್ಳಿ. ನಿಮಗೆ ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ನೀವು ಪ್ರಭಾವಿ ವ್ಯಕ್ತಿಯನ್ನು ಭೇಟಿಯಾಗಬಹುದು. ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ.
ಇಂದಿನ ಅದೃಷ್ಟ-88%

ಕುಂಭ ರಾಶಿ
ಕುಂಭ ರಾಶಿಯ ಜನರು ಇಂದು ಚಂಚಲ ಮನಸ್ಸನ್ನು ಹೊಂದಿರಬಹುದು. ತಾಳ್ಮೆಯಿಂದಿರಿ. ತಾಳ್ಮೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಹಣಕಾಸು ಮತ್ತು ಆರೋಗ್ಯದ ಬಗ್ಗೆ ಜಾಗರೂಕರಾಗಿರುವುದು ಒಳ್ಳೆಯದು. ಶೈಕ್ಷಣಿಕ ಮತ್ತು ಬೌದ್ಧಿಕ ಚಟುವಟಿಕೆಗಳಲ್ಲಿ ಕಾರ್ಯನಿರತತೆ ಹೆಚ್ಚಾಗುತ್ತದೆ. ಶೈಕ್ಷಣಿಕ ಉದ್ದೇಶಗಳಿಗಾಗಿ ವಿದೇಶಕ್ಕೆ ಹೋಗಬಹುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯಬಹುದು.
ಇಂದಿನ ಅದೃಷ್ಟ-70%

ಮೀನ ರಾಶಿ
ಇಂದು ನಿಮ್ಮ ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವು ಎಂದಿಗಿಂತಲೂ ಬಲವಾಗಿರುತ್ತದೆ. ನೀವು ಹೊಸ ಸ್ಥಳಗಳನ್ನು ಅನ್ವೇಷಿಸಲು ಮತ್ತು ಅಲ್ಲಿಗೆ ಭೇಟಿ ನೀಡಲು ಯೋಜಿಸಬಹುದು. ಹಣಕಾಸಿನ ಶಾರ್ಟ್‌ಕಟ್‌ಗಳನ್ನು ತಪ್ಪಿಸಿ, ಏಕೆಂದರೆ ಸ್ಥಿರ ಪ್ರಯತ್ನಗಳ ಮೂಲಕ ಸ್ಥಿರತೆಯನ್ನು ಉತ್ತಮವಾಗಿ ಸಾಧಿಸಬಹುದು. ನೀವು ಶೈಕ್ಷಣಿಕವಾಗಿ ಯಶಸ್ವಿಯಾಗುತ್ತೀರಿ.
ಇಂದಿನ ಅದೃಷ್ಟ-91%

IPL 2025: ಪಂಜಾಬ್ ಕಿಂಗ್ಸ್ ನಲ್ಲೂ ಶ್ರೇಯಸ್ ಅಯ್ಯರ್ ನಾಯಕನಾಟ!; ಗೆಲುವಿನ ಹೊಸ್ತಿಲಲ್ಲಿ ಗುಜರಾತ್ ಟೈಟಾನ್ಸ್ ಗೆ ಹೊಡೆತ ನೀಡಿದ ಕನ್ನಡಿಗ!GT V...
26/03/2025

IPL 2025: ಪಂಜಾಬ್ ಕಿಂಗ್ಸ್ ನಲ್ಲೂ ಶ್ರೇಯಸ್ ಅಯ್ಯರ್ ನಾಯಕನಾಟ!; ಗೆಲುವಿನ ಹೊಸ್ತಿಲಲ್ಲಿ ಗುಜರಾತ್ ಟೈಟಾನ್ಸ್ ಗೆ ಹೊಡೆತ ನೀಡಿದ ಕನ್ನಡಿಗ!

GT Vs PBKS - ತಂಡವಷ್ಟೇ ಬದಲಾಗಿದೆ; ಶ್ರೇಯಸ್ ಅಯ್ಯರ್ ಗೆಲುವಿನೋಟ ಅದೇ ರೀತಿ ಮುಂದುವರಿದಿದೆ! ಹೌದು ಕಳೆದ ಬಾರಿ ಕೋಲ್ಕತಾ ನೈಟ್ ರೈಡರ್ಸ್ ಅನ್ನು ಚಾಂಪಿಯನ್ಸ್ ಪಟ್ಟದಲ್ಲಿ ಕುಳ್ಳಿರಿಸಿದ್ದ ಶ್ರೇಯ್ಯಸ್ ಅಯ್ಯರ್ ಇದೀಗ ಪಂಜಾಬ್ ಕಿಂಗ್ಸ್ ತಂಡಕ್ಕೂ ಗೆಲುವಿನ ಶುಭಾರಂಭ ಒದಗಿಸಿದ್ದಾರೆ. ಗುಜರಾತ್ ಟೈಟಾನ್ಸ್ ಗೆ ವಿರುದ್ಧ ನಾಯಕನ ಆಟವಾಡಿದ ಅವರು ಶತಕದಿಂದ ಕೇವಲ 3 ರನ್ ಗಳಿಂದ ವಂಚಿತರಾದರೂ ಬೃಹತ್ ಮೊತಕ್ಕೆ ಕಾರಣರಾದರು. ಬೃಹತ್ ಮೊತ್ತವನ್ನು ಬೆಂಬತ್ತಿ ಹೊರಟ ಗುಜರಾತ್ ಕಿಂಗ್ಸ್ ಕೇವಲ 11 ರನ್ ಗಳಿಂದ ಗುರಿ ತಲುಪುವಲ್ಲಿ ಎಡವಿತು.

Fact Check: ಐಪಿಎಲ್‌ ವೀಕ್ಷಕರಿಗೆ ಫೋನ್‌ಪೇ ನಿಂದ ಭರ್ಜರಿ ₹698 ಕ್ಯಾಷ್‌ಬ್ಯಾಕ್ ಆಫರ್, ನಿಜವೇ?ಐಪಿಎಲ್‌ 2025 ಪ್ರಾರಂಭವಾಗಿದ್ದು, ಫೋನ್‌ಪೇ ...
26/03/2025

Fact Check: ಐಪಿಎಲ್‌ ವೀಕ್ಷಕರಿಗೆ ಫೋನ್‌ಪೇ ನಿಂದ ಭರ್ಜರಿ ₹698 ಕ್ಯಾಷ್‌ಬ್ಯಾಕ್ ಆಫರ್, ನಿಜವೇ?

ಐಪಿಎಲ್‌ 2025 ಪ್ರಾರಂಭವಾಗಿದ್ದು, ಫೋನ್‌ಪೇ 698 ರೂಪಾಯಿಗಳ ಉಚಿತ ಕ್ಯಾಶ್‌ಬ್ಯಾಕ್ ನೀಡುತ್ತಿದೆ ಎಂಬ ಪೋಸ್ಟ್ ವೈರಲ್ ಆಗುತ್ತಿದೆ. ಆದರೆ ಪರಿಶೀಲನೆ ನಡೆಸಿದಾಗ ಈ ಪೋಸ್ಟ್ ಸುಳ್ಳು ಎಂದು ತಿಳಿದುಬಂದಿದೆ.

ಹೈಲೈಟ್ಸ್‌:

ಐಪಿಎಲ್‌ 2025 ಪ್ರಾರಂಭವಾಗಿದ್ದು, ಫೋನ್‌ಪೇ 698 ರೂ.ಗಳ ಕ್ಯಾಶ್‌ಬ್ಯಾಕ್ ನೀಡುತ್ತಿದೆ ಎಂಬ ಪೋಸ್ಟ್ ವೈರಲ್

ಆದರೆ ಪರಿಶೀಲನೆ ನಡೆಸಿದಾಗ ಈ ಪೋಸ್ಟ್ ಸುಳ್ಳು ಎಂದು ದೃಢ

ಫೋನ್‌ಪೇ ಇಂಥಹ ಯಾವುದೇ ಆಫರ್ ನೀಡಿಲ್ಲ ಎಂದು ಸಾಬೀತು

ಕರ್ನಾಟಕದಲ್ಲಿ ಏ.1 ರಿಂದಲೇ ಟೋಲ್‌ ದರ ಹೆಚ್ಚಳ: ನೇರವಾಗಿ ಗ್ರಾಹಕರಿಗೆ ತಟ್ಟಲಿರುವ ಬಿಸಿಹೊಸ ಟೋಲ್ ದರಗಳು ಕರ್ನಾಟಕದ 66 ಟೋಲ್‌ ಪ್ಲಾಜಾಗಳಲ್ಲಿ ...
26/03/2025

ಕರ್ನಾಟಕದಲ್ಲಿ ಏ.1 ರಿಂದಲೇ ಟೋಲ್‌ ದರ ಹೆಚ್ಚಳ: ನೇರವಾಗಿ ಗ್ರಾಹಕರಿಗೆ ತಟ್ಟಲಿರುವ ಬಿಸಿ

ಹೊಸ ಟೋಲ್ ದರಗಳು ಕರ್ನಾಟಕದ 66 ಟೋಲ್‌ ಪ್ಲಾಜಾಗಳಲ್ಲಿ ಜಾರಿಯಾಗುವ ಸಾಧ್ಯತೆ ಇದೆ. ಬೆಲೆ ಹೆಚ್ಚಳದ ಬಿಸಿ ನೇರವಾಗಿ ಗ್ರಾಹಕರಿಗೆ ತಟ್ಟಲಿದ್ದು, ಪ್ರವಾಸಿ ಕ್ಯಾಬ್‌ ಇತರೆ ವಾಹನಗಳು ಕೂಡಾ ಬೆಲೆ ಏರಿಕೆ ಮಾಡಲಿದ್ದು, ಇದು ಪ್ರಯಾಣಿಕರಿಗೆ ಹೊರೆಯಾಗಲಿದೆ. ಬೆಂಗಳೂರು-ಮೈಸೂರು ಮಾರ್ಗದ ಕನಮಿಣಿಕೆ ಮತ್ತು ಶೇಷಗಿರಿಹಳ್ಳಿ, ಬೆಂಗಳೂರು-ತಿರುಪತಿ ಮಾರ್ಗದ ನಂಗಲಿ, ಬೆಂಗಳೂರು-ಹೈದರಾಬಾದ್ ಮಾರ್ಗದ ಬಾಗೇಪಲ್ಲಿ, ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ ಮೊದಲಾದ ಕಡೆ ಟೋಲ್ ದರ ಹೆಚ್ಚಳ ಆಗಲಿದೆ.

ಹೈಲೈಟ್ಸ್‌:

ರಾಜ್ಯದಲ್ಲಿ ಒಟ್ಟು 66 ಟೋಲ್ ಪ್ಲಾಜಾಗಳಿವೆ. ಅವುಗಳಲ್ಲಿ ಹೆಚ್ಚಿನವುಗಳ ಮೇಲೆ ಪರಿಷ್ಕೃತ ದರಗಳು ಅನ್ವಯವಾಗುತ್ತವೆ.

ಗರಿಷ್ಠ ಶೇ 5 ಮತ್ತು ಕನಿಷ್ಠ ಶೇ 3 ರಷ್ಟು ಟೋಲ್ ದರ ಹೆಚ್ಚಳವಾಗಲಿದೆ"

2023-24 ರಲ್ಲಿ ಭಾರತದ ಟೋಲ್ ಸಂಗ್ರಹ ಮೊತ್ತ 64,809.86 ಕೋಟಿ ರೂಪಾಯಿ ತಲುಪಿದೆ

♻️ 𝐏𝐎𝐒𝐓 𝐎𝐅𝐅𝐈𝐂𝐄 𝐑𝐄𝐂𝐑𝐔𝐈𝐓𝐌𝐄𝐍𝐓 𝟐𝟎𝟐𝟓 ಪೋಸ್ಟ್ ಆಫೀಸ್ ನೇಮಕಾತಿ 2025⭕️ Link: 👇https://kar.sarkarik.com/post-office-recruitment⭕️ ಹು...
26/03/2025

♻️ 𝐏𝐎𝐒𝐓 𝐎𝐅𝐅𝐈𝐂𝐄 𝐑𝐄𝐂𝐑𝐔𝐈𝐓𝐌𝐄𝐍𝐓 𝟐𝟎𝟐𝟓 ಪೋಸ್ಟ್ ಆಫೀಸ್ ನೇಮಕಾತಿ 2025

⭕️ Link: 👇
https://kar.sarkarik.com/post-office-recruitment

⭕️ ಹುದ್ದೆಯ ಹೆಸರು: ಪೋಸ್ಟ್ ಆಫೀಸ್ ಇಲಾಖೆಯಲ್ಲಿ ಹುದ್ದೆಗಳು

⭕️ ಒಟ್ಟು ಹುದ್ದೆಗಳು: ಹಲವಾರು ಹುದ್ದೆಗಳು

⭕️ ವಿದ್ಯಾರ್ಹತೆ: ಡಿಪ್ಲೊಮಾ ಅಥವಾ ಡಿಗ್ರಿ ಪಾಸ್ ಆಗಿರಬೇಕು

⭕️ ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ

⭕️ ಅಪ್ಲೈ ಮಾಡುವ ವಿಧಾನ: ಆಫ್’ಲೈನ್ (ಪೋಸ್ಟ್ ಆಫೀಸ್ ಮೂಲಕ)

⭕️ ಆಯ್ಕೆ ಮಾಡುವ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ

⭕️ ಅರ್ಜಿ ಸಲ್ಲಿಸಲು ಕೊನೆಯ ದಿನ: 15-ಏಪ್ರಿಲ್-2025

✅ ಅಪ್ಲೈ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ (APPLY LINK):
https://kar.sarkarik.com/post-office-recruitment

=================
🙏 PLEASE SHARE 🙏
=================

Mumbai Indians: ವಿಘ್ನೇಶ್ ಪುತ್ತೂರ್ ಗೆ ದುಬಾರಿ ಉಡುಗೊರೆ ನೀಡಿದ ನೀತಾ ಅಂಬಾನಿ, ಸಾಧನೆಗೆ ಸಿಕ್ಕ ಫಲNita Ambani Gift To Vighnesh Puth...
26/03/2025

Mumbai Indians: ವಿಘ್ನೇಶ್ ಪುತ್ತೂರ್ ಗೆ ದುಬಾರಿ ಉಡುಗೊರೆ ನೀಡಿದ ನೀತಾ ಅಂಬಾನಿ, ಸಾಧನೆಗೆ ಸಿಕ್ಕ ಫಲ

Nita Ambani Gift To Vighnesh Puthur: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕೆಲವು ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ IPL ನ ಯುವ ಆಟಗಾರ ಅಂದರೆ ಅದು ವಿಘ್ನೇಶ್ ಪುತ್ತೂರ್ (Vighnesh Puthur) ಎಂದು ಹೇಳಬಹುದು. ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಟ ಆಡುತ್ತಿರುವ ವಿಘ್ನೇಶ್ ಪುತ್ತೂರ್ ಅವರು ಸದ್ಯ IPL ನಲ್ಲಿ ಮೊದಲ ಪಂದ್ಯದಲ್ಲೇ ಜನರ ಮೆಚ್ಚುಗೆಗೆ ಕಾರಣವಾಗಿದ್ದಾರೆ. ಮೂಲತಃ ಕೇರಳದವರು ಆಡಿರುವ ವಿಘ್ನೇಶ್ ಪುತ್ತೂರ್ ಅವರು ಬಡ ಕುಟುಂಬದಿಂದ ಬಂಡ ಆಟಗಾರ ಆಗಿದ್ದಾರೆ. ಇನ್ನು ವಿಘ್ನೇಶ್ ಪುತ್ತೂರ್ ಅವರ ತಂದೆ ಇನ್ನೂ ಕೂಡ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಕುಟುಂಬ ಮತ್ತು ಮನಗ ಕನಸು ನನಸು ಮಾಡುವ ಉದ್ದೇಶದಿಂದ ಆಟೋ ಓಡಿಸಿಕೊಂಡು ಬಂದ ಹಣದಲ್ಲಿ ಮಗನ ಸಾಧನೆಗೆ ನೆರವಾಗಿದ್ದಾರೆ ವಿಘ್ನೇಶ್ ಪುತ್ತೂರ್ ಅವರ ತಂದೆ. IPL ನಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ತಮ್ಮ ಮೊದಲ ಪಂದ್ಯ ಆಡಿದ ವಿಘ್ನೇಶ್ ಪುತ್ತೂರ್ ಅವರು ಮೊದಲ ಪಂದ್ಯದಲ್ಲೇ 3 ವಿಕೆಟ್ ಪಡೆದುಕೊಳ್ಳುವುದರ ಮೂಲಕ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮ ಮತ್ತು ಸೂರ್ಯಕುಮಾರ್ ಯಾದವ್ ಅವರ ಮೆಚ್ಚುಗೆಗೆ ಕೂಡ ಕಾರಣವಾಗಿದ್ದಾರೆ.

ಮೊದಲ ಪಂದ್ಯದಲ್ಲೇ ಫೇಮಸ್ ಆದ ವಿಘ್ನೇಶ್ ಪುತ್ತೂರ್
ಹೌದು, ವಿಘ್ನೇಶ್ ಪುತ್ತೂರ್ ಅವರು ಮೊದಲ ಪಂದ್ಯದಲ್ಲೇ ಅಮೋಘ ಮೂರೂ ವಿಕೆಟ್ ಪಡೆದುಕೊಳ್ಳುವುದರ ಮೂಲಕ ಅಪಾರ ಜನಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಮೂಲತಃ ಕೇರಳವಾದವರು ಆದ ವಿಘ್ನೇಶ್ ಪುತ್ತೂರ್ ಅವರು ತಮ್ಮ ಕಠಿಣ ಶ್ರಮದ ಕಾರಣ ಇಂದು IPL ಗೆ ಆಯ್ಕೆ ಆಗಿ ಬೌಲಿಂಗ್ ಮಾಡುತ್ತಿದ್ದಾರೆ. ಸದ್ಯ ವಿಘ್ನೇಶ್ ಪುತ್ತೂರ್ ಅವರ ಬೌಲಿಂಗ್ ಕಂಡು ದೇಶದ ಶ್ರೀಮಂತ ವ್ಯಕ್ತಿಯ ಮಡದಿಯಾದ ನೀತಾ ಅಂಬಾನಿ (Nita Ambani) ಅವರು ಮೆಚ್ಚುಗೆ ವ್ಯಕ್ತಪಡಿದ್ದಾರೆ. ಇನ್ನು ಪಂದ್ಯ ಮುಗಿದ ನಂತರ ಡ್ರೆಸ್ಸಿಂಗ್ ರೂಮ್ ಒಳಗೆ ಬಂದ ನೀತಾ ಅಂಬಾನಿ ಅವರು ವಿಘ್ನೇಶ್ ಪುತ್ತೂರ್ ಅವರಿಗೆ ಒಂದು ವಿಶೇಷ ಉಡುಗೊರೆ ಕೂಡ ನೀಡಿದ್ದಾರೆ.

ವಿಘ್ನೇಶ್ ಪುತ್ತೂರ್ ಗೆ ವಿಶೇಷ ಉಡುಗೊರೆ ನೀಡಿದ ನೀತಾ ಅಂಬಾನಿ
ವಿಘ್ನೇಶ್ ಪುತ್ತೂರ್ ಅವರ ಬೌಲಿಂಗ್ ಕಂಡು ಅಪಾರವಾದ ಮೆಚ್ಚುಗೆ ಹೊರಹಾಕಿದ ನೀತಾ ಅಂಬಾನಿ ಅವರು ನಂತರ ಡ್ರೆಸ್ಸಿಂಗ್ ರೂಮ್ ಒಳಗೆ ಬಂದು ಈ ವರ್ಷದ ಮೊದಲ ಅವಾರ್ಡ್ ನಾನು ಈಗ ಕೊಡಲು ಇಚ್ಚಿಸುತ್ತೇನೆ ಎಂದು ಹೇಳಿ ಆ ಅವಾರ್ಡ್ ಅನ್ನು ವಿಘ್ನೇಶ್ ಪುತ್ತೂರ್ ಅವರಿಗೆ ಕೊಟ್ಟಿದ್ದಾರೆ. ವಿಘ್ನೇಶ್ ಪುತ್ತೂರ್ ಅವರು ಒಂದು ವಿಶೇಷದ ಪಿನ್ ಅನ್ನು ವಿಘ್ನೇಶ್ ಪುತ್ತೂರ್ ಅವರ ಡ್ರೆಸ್ ಮೇಲೆ ಅಂಟಿಸಿದ್ದಾರೆ. ಸದ್ಯ ನೀತಾ ಅಂಬಾನಿ ಅವರು ಗಿಫ್ಟ್ ನೀಡಿರುವ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಕೂಡ ಆಗಿದೆ.

ಅಂಬಾನಿ ಮೆಚ್ಚುಗೆಗೆ ಕಾರವಾದ ವಿಘ್ನೇಶ್ ಪುತ್ತೂರ್
ಹೌದು, ವಿಘ್ನೇಶ್ ಪುತ್ತೂರ್ ಅವರು ತಮ್ಮ ಅಮೋಘಾದ ಬೌಲಿಂಗ್ ಮೂಲಕ ಈಗ ಮುಕೇಶ್ ಅಂಬಾನಿ (Mukesh Ambani) ಮತ್ತು ನೀತಾ ಅಂಬಾನಿಯವರ ಮೆಚ್ಚುಗೆಗೆ ಕೂಡ ಕಾರಣವಾಗಿದ್ದಾರೆ. ನೀತಾ ಅವರು ಈ ವರ್ಷದ ಮೊದಲ ಮುಂಬೈ ಇಂಡಿಯನ್ಸ್ ಅವಾದ್ ಪಿನ್ ಅನ್ನು ವಿಘ್ನೇಶ್ ಪುತ್ತೂರ್ ಅವರ ಡ್ರೆಸ್ ಗೆ ಅನಿತಿಸುವುದರ ಮೂಲಕ ವಿಘ್ನೇಶ್ ಪುತ್ತೂರ್ ವಿಶೇಷ ಗೌಡ ಸಲ್ಲಿಸಿದ್ದಾರೆ. ವಿಘ್ನೇಶ್ ಪುತ್ತೂರ್ ಅವರು ನೀತಾ ಅಂಬಾನಿ ಅವರ ಕಾಲಿಗೆ ಆಶೀರ್ವಾದ ಕೂಡ ಪಡೆದುಕೊಂಡಿದ್ದಾರೆ.

Mumbai Indians IPL - Indian Premier League ಅರಕಲಗೂಡು ನ್ಯೂಸ್ Arkalgud News

ದಿವಾಕರ್ ಗೌಡರಿಂದ ಅಭಿವೃದ್ದಿ ಕಾರ್ಯ :: ರೈತರಿಂದ ಅಭಿನಂದನೆ
26/03/2025

ದಿವಾಕರ್ ಗೌಡರಿಂದ ಅಭಿವೃದ್ದಿ ಕಾರ್ಯ :: ರೈತರಿಂದ ಅಭಿನಂದನೆ

25/03/2025

ಹನಿಟ್ರ್ಯಾಪ್ ವಿಚಾರದಲ್ಲಿ ಜಡ್ಜ್ ಗಳು ಸೇರಿದ್ದಾರೆ ಎಂದು ನಾನು ಹೇಳಿಯೇ ಇಲ್ಲ: ಸಚಿವ #ಕೆ.ಎನ್.ರಾಜಣ್ಣ

ತುಮಕೂರು: ಹನಿಟ್ರ್ಯಾಪ್ ವಿಚಾರದಲ್ಲಿ ಜಡ್ಜ್ ಗಳು ಸೇರಿದ್ದಾರೆ ಎಂದು ನಾನು ಹೇಳಿಯೇ ಇಲ್ಲ ಅದು ಸುಳ್ಳು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ವಕೀಲರೊಬ್ಬರು ಪಿಐಎಲ್ ಸಲ್ಲಿಸಿದ್ದಾರೆ, ಆದರೆ ನಾನು ಜಡ್ಜ್ ಗಳ ಹೆಸರನ್ನು ಪ್ರಸ್ತಾಪ ಮಾಡಿಯೇ ಇಲ್ಲ ಎಂದು ಹೇಳಿದ್ದಾರೆ.

ಎಲ್ಲಾ ಪಕ್ಷಗಳ ಪ್ರಮುಖ ರಾಜಕಾರಣಿ ಗಳು ಸೇರಿದ್ದಾರೆ ಎಂದು ಹೇಳಿದ್ದೇನೆಯೇ ಹೊರತು ಜಡ್ಜ್ ಗಳು ಎಂದು ಹೇಳಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಇಂದು ನನ್ನ ಹೇಳಿಕೆ ಸಂಬಂಧ ಗೃಹ ಮಂತ್ರಿಗಳಿಗೆ ಕಂಪ್ಲೇಂಟನ್ನು ಕೊಡುತ್ತಿದ್ದೇನೆ ಎಂದು ಹೇಳಿದರು.

25/03/2025

ಇಂಜೆಕ್ಷನ್ ವದಂತಿ: ಕಲ್ಲಂಗಡಿ ಬೆಳೆಗಾರರಿಗೆ, ವ್ಯಾಪಾರಿಗಳಿಗೆ ಸಂಕಷ್ಟ!

ಬಿರುಬಿಸಿಲಿನಲ್ಲಿ ಕಲ್ಲಂಗಡಿ ಹಣ್ಣಿಗೆ ಉತ್ತಮ ಬೇಡಿಕೆಯಿತ್ತು. ಆದ್ರೆ, ಕಲ್ಲಂಗಡಿ ಹಣ್ಣಿಗೆ ಕಲರ್ ಇಂಜೆಕ್ಷನ್ ಮಾಡುತ್ತಿದ್ದಾರೆ ಎನ್ನುವ ವದಂತಿಗಳ ಹಿನ್ನೆಲೆ ವ್ಯಾಪಾರಿಗಳು ಮಾತ್ರವಲ್ಲ, ರೈತರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಬಾರಿ ತಮಿಳುನಾಡು, ಆಂಧ್ರಪ್ರದೇಶದಿಂದ ಬೇಡಿಕೆಗೂ ಮೀರಿ ಅತಿ ಹೆಚ್ಚು ಕಲ್ಲಂಗಡಿ ಅಮದಾಗಿದೆ. ಅಲ್ಲದೆ, ರಾಸಾಯನಿಕ ಸೇರ್ಪಡೆ ವದಂತಿಯಿಂದ ಇಲ್ಲಿನ ರೈತರು ಬೆಳೆದ ಕಲ್ಲಂಗಡಿಗೆ ಬೇಡಿಕೆ ಕುಸಿದಿದೆ. ಇದರಿಂದ ರೈತರು ಬೆಳೆಯನ್ನು ಮಾರಾಟ ಮಾಡಲು ಆಗದೆ, ಹೊಲದಲ್ಲಿ ಬಿಡಲು ಆಗದೆ ನಷ್ಟ ಅನುಭವಿಸುವಂತಾಗಿದೆ.

ಉತ್ತಮ ದರ ಸಿಗುತ್ತದೆ ಎನ್ನುವ ಕಾರಣಕ್ಕೆ ಅತಿ ಹೆಚ್ಚು ರೈತರು ಕಲ್ಲಂಗಡಿ ಬಿತ್ತನೆ ಮಾಡಿದ್ದರು. ಉತ್ತಮ ವಾತಾವರಣವಿದ್ದ ಹಿನ್ನೆಲೆಯಲ್ಲಿ ಇಳುವರಿಯೂ ಹೆಚ್ಚಾಗಿದೆ. ಆದರೆ, ಪ್ರಸ್ತುತ ಹೋಲ್ಸೇಲ್ ಮಾರಾಟಗಾರರು ರೈತರಿಂದ 8, 10 ರೂ.ಗೆ ಕಲ್ಲಂಗಡಿ ಖರೀದಿಸುತ್ತಿದ್ದಾರೆ.

ಅಕ್ಟೋಬರ್ನಲ್ಲಿ ಕೆಜಿಗೆ 18 ರೂ., ನವೆಂಬರ್ನಲ್ಲಿ ಕೆಜಿಗೆ 10-12 ರೂ. ಬೆಲೆ ಇತ್ತು. ಆದರೆ ಈಗ ಪಾತಾಳಕ್ಕೆ ಕುಸಿದಿದೆ. ಚಿಲ್ಲರೆ ಮಾರುಕಟ್ಟೆಯಲ್ಲೆ ಕಲ್ಲಂಗಡಿ ಪ್ರತಿ ಕೆಜಿಗೆ 15-20 ರೂ.ಗೆ ಮಾರಾಟವಾಗುತ್ತಿದೆ. ಕಳೆದ ವರ್ಷದ ಒಂದು ಲೋಡ್ ಕಲ್ಲಂಗಡಿ ಮೂರು ದಿನದಲ್ಲಿ ಖಾಲಿ ಆಗುತ್ತಿತ್ತು. ಆದರೆ, ಈ ಬಾರಿ ಹತ್ತು ದಿನಗಳಾದರೂ ಹಣ್ಣು ಖಾಲಿಯಾಗುತ್ತಿಲ್ಲ ಎಂದು ವರದಿಯಾಗಿದೆ.

Address

Arkalgud
573102

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Telephone

+918892589974

Alerts

Be the first to know and let us send you an email when ಅರಕಲಗೂಡು ನ್ಯೂಸ್ Arkalgud News posts news and promotions. Your email address will not be used for any other purpose, and you can unsubscribe at any time.

Share