Petkarmedia

Petkarmedia Petkarmedia is video content creator

09/10/2022

ಭವ್ಯ ಆರ್ ಎಸ್ ಎಸ್ ಪಥ ಸಂಚಲನ

09/10/2022

ಆರ್ ಎಸ್ ಎಸ್ ಪಥಸಂಚಲ ಕ್ಷಣಗಣನೆ@ಬಾಗಲಕೋಟೆ

05/10/2022

ಮೈಸೂರು ದಸರಾದಲ್ಲಿ ಗಮನಾರ್ಷಣೆ ಮಾಡಿದ ನಮ್ಮ ಬಾಗಲಕೋಟೆ ಜಿಲ್ಲೆಯ ಮುಧೋಳ ನಾಯಿ, ದುರ್ಗಾದೇವಾಲಯ,ಇಲಕಲ್ ಸೀರೆ.

17/09/2022

ಗಮನಿಸಿ...

01/09/2022

#ಗಣಪ್ಪ ಬಂದಾನ ಬಾಳಿಗೆ ಬೆಳಕ ತಂದಾನ

ವಕ್ರತುಂಡ ಮಹಾಕಾಯ | ಸೂರ್ಯಕೋಟಿ ಸಮಪ್ರಭ ||ನಿರ್ವಿಘ್ನಂ ಕುರುಮೇ ದೇವ | ಸರ್ವಕಾರ್ಯೇಷು ಸರ್ವದಾ
31/08/2022

ವಕ್ರತುಂಡ ಮಹಾಕಾಯ | ಸೂರ್ಯಕೋಟಿ ಸಮಪ್ರಭ ||
ನಿರ್ವಿಘ್ನಂ ಕುರುಮೇ ದೇವ | ಸರ್ವಕಾರ್ಯೇಷು ಸರ್ವದಾ

31/08/2022

#20ಅಡಿ ಎತ್ತರಕ್ಕೆ ಸಿದ್ದವಾದ ವಾಟರ್‌ ಬಾಟಲ್‌ ಗಣೇಶ

#ಕಸದಿಂದ ರಸ ಎನ್ನುವ ಹಾಗೆ ನಿರುಪಯುಕ್ತ ವಾಟರ್ ಬಾಟಲ್ ಮೂಲಕ ಸುಮಾರ ೨೦ ಅಡಿಯ ಗಣೇಶ ಪ್ರತಿಷ್ಟಾಪನೆಗೊಂಡಿದೆ..ಬಾಗಲಕೋಟ ಜಿಲ್ಲೆಯ ಇಲಕಲ್ ಪಟ್ಟಣದಲ್ಲಿ ವಿಜಯ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಈ ಬಾರಿಯ ಗಣೇಶ ಚಥುರ್ತಿಗೆ 20 ಅಡಿಯ ವಾಟರ್‌ ಬಾಟಲ್‌ ಗಣೇಶ ಪ್ರತಿಷ್ಠಾಪನೆಗೊಳಿಸಿದ್ದಾರೆ.
#ಕಳೆದ 30 ವರ್ಷಗಳಿಂದ ಈ ಗಣೇಶ ಹಬ್ಬವನ್ನು ಧಾರ್ಮಿಕ ಸಂದರ್ಭಗಳಲ್ಲಿ ಜನಸಾಮಾನ್ಯರು ದೇವರಂತೆ ಕಾಣಿವ ಕಲಾಕೃತಿಯೊಂದನ್ನು ಪರಿಚಯಿಸುವುದು ಮತ್ತು ಪ್ರತಿಷ್ಠಾಪನೆಯ ಸೊಗಡನ್ನು ಬಿತ್ತುವ ಕೆಲಸವನ್ನು ಕಳೆದ 30 ವರ್ಷಗಳಿಂದ ಕಸದಲ್ಲಿ ರಸ ಎಂಬಂತೆ ನಿರುಪಯುಕ್ತ ವಸ್ತುಗಳಿಂದ ಗಣೇಶನ್ನು ತಯಾರಿಸಿ ಅನೇಕ ದಿನಾಗಳ ಕಾಲ ಸಾರ್ವಜನಿಕರ ವಿಕ್ಷಣೆಗೆ ಅವಕಾಶ ಕಲ್ಪಿಸಲಾಗಿರುತ್ತದೆ. #ಜಗತ್ತಿನಲ್ಲಿ ಯಾರೂ ಮಾಡದೇ ಇರುವ ವಸ್ತುಗಳಿಂದ ಮಾಡುವ ಗಣೇಶನನ್ನು ನಿರ್ಮಿಸುವ ಪ್ರತೀತಿ ಇಲ್ಲಿಯದ್ದು.
ಈ ವರ್ಷದ ವಾಟರ್‌ ಬಾಟಲ್‌ ಗಣೇಶ ನೀರಿನ ಬೃಹದಾಕಾರದ ಸುಮಾರು 20 ಅಡಿ ಎತ್ತರದಲ್ಲಿದ್ದು, ಸಾವಿರಾರು ನೀರಿನ ಬಾಟಲಿಗಳನ್ನು ಬೀದಿ ಬದಿಯಲ್ಲಿ, ಡಾಬಾಗಳು, ಹೊಟೆಲುಗಳಿಂದ ಕಲಾಶಾಲೆಯ ವಿದ್ಯಾರ್ಥಿಗಳು ತಿಂಗಳಾನುಗಟ್ಟಲೆ ಸಂಗ್ರಹಿಸಿ ಸುಚಿಗೊಳಿಸಿ ಪೂಜೆಗೆ ಯೋಗ್ಯವಾಗುವಂತೆ ನಿರ್ಮಿಸಲಾಗಿದೆ. ಜೊತೆಗೆ ಜಗತ್ತಿಗೆ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್ ಗಳನ್ನು ನಿಷೇಧಿಸಿ ಗಣೇಶ ಎಲ್ಲರಿಗೂ ತನ್ನ ನಾಲ್ಕು ಕೈಗಳಿಂದ ಬಟ್ಟೆಯಲ್ಲಿ ತಯಾರಿಸಿದ ಕೈಚಿಲಗಳನ್ನು ನೀಡುವಂತೆ ಸಿದ್ದಪಡಿಸಲಾಗಿದೆ. 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು 10 ದಿನಗಳಿಂದ ಶ್ರಮವಹಿಸಿ ನಗರದ ಜೋಶಿಗಲ್ಲಿಯ ವಿಜಯ ಚಿತ್ರಕಲಾ ಮಹಾವಿದ್ಯಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದು ಪ್ರಾಚಾರ್ಯ
ಡಾ. ಬಸವರಾಜ ಗವಿಮಠ ಎಂದು ತಿಳಿಸಿದ್ದಾರೆ.

31/08/2022

#20ಅಡಿ ಎತ್ತರದ ವಾಟರ್ ಬಾಟಲ್ ಗಣೇಶ ಪ್ರತಿಷ್ಠಾಪನೆ

#ಬಾಗಲಕೋಟೆ ಜಿಲ್ಲೆಯ ಇಲಕಲ್ ವಿಜಯ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಈ ಬಾರಿ ಬಳಸಿ ಬಿಸಾಡಿದ ನೀರಿನ ಬಾಟಲ್‍ಗಳನ್ನು ಬಳಸಿಕೊಂಡು ಮಾಡಿರುವ ಗಣೇಶ

#30ವರ್ಷಗಳಿಂದ ವಿಜಯ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಸವರಾಜ ಗವಿಮಠ ಮಾರ್ಗದರ್ಶನ
#ಗಣೇಶನ ಸೃಷ್ಟಿಯಲ್ಲಿಯೇ ಸೃಜನಶೀಲತೆ
#20ಅಡಿ ಗಣೇಶನನ್ನು ರೂಪಿಸುವುದಕ್ಕಾಗಿ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹೋಟೆಲ್, ಡಾಬಾ, ರಸ್ತೆ ಬದಿಯಲ್ಲಿ ಬಳಸಿ ಬೀಸಾಡಿದ ಸಾವಿರಾರು ನೀರಿನ ಬಾಟಲ್‍ಗಳನ್ನು ತಿಂಗಳಿಂದ ಸಂಗ್ರಹಿಸಿ, ಶುಚಿಗೊಳಿಸಿ ಸಿದ್ಧವಾದ ಗಣೇಶ.
#ಪ್ರಾಚಾರ್ಯ ಡಾ.ಬಸವರಾಜ ಗವಿಮಠ ಅವರ ಮಾರ್ಗದರ್ಶನದಲ್ಲಿ ಉಪನ್ಯಾಸಕ ಎಂ.ಬಿ.ಬಡಿಗೇರ, ವಿಜಯ ಗವಿಮಠ, ಸಿದ್ದು ಹಿರೇಮಠ ಹಾಗೂ 30 ವಿದ್ಯಾರ್ಥಿಗಳು 10 ದಿನ ಶ್ರಮದಿಂದ ಅರಳಿದ ವಾಟರ್ ಬಾಟಲ್ ಗಣೇಶ

24/08/2022

ಭಕ್ತಾದಿಗಳ ಆರಾಧ್ಯದೈವ ಮುಚಖಂಡಿ ವೀರಭದ್ರೇಶ್ವರ ಸ್ವಾಮಿ ಪೂಜೆ

18/08/2022

#ನ ಹಿ ಕಶ್ಚಿತ್‌ಕ್ಷಣಮಪಿ ಜಾತು ತಿಷ್ಟತ್ಯಕರ್ಮಕೃತ್‌ |

ಕಾರ್ಯತೇ ಹಶಃ ಕರ್ಮ ಸರ್ವ ಪ್ರಕೃತಿಜೈರ್ಗುಣೌಃ||"

#ಅರ್ಥ: ಒಂದು ಕೆಲಸವೂ ಮಾಡದೆ ಯಾವುದೇ ಮನುಷ್ಯನು ಬದುಕಲು ಸಾಧ್ಯವಿಲ್ಲ. ಎಲ್ಲಾ ಜೀವಿಗಳು ಪ್ರಕೃತಿಗೆ ಒಳಪಟ್ಟಿರುತ್ತವೆ ಮತ್ತು ಪ್ರಕೃತಿಯು ಪ್ರತಿ ಜೀವಿ ತನ್ನ ಕಾರ್ಯಗಳನ್ನು ತಕ್ಕಂತೆ ನಿರ್ವಹಿಸುವಂತೆ ಮಾಡುತ್ತದೆ ಮತ್ತು ಅದಕ್ಕೆ ತಕ್ಕಂತೆ ಫಲಿತಾಂಶವನ್ನು ನೀಡುತ್ತದೆ.

#ನಿರ್ವಹಣಾ ಸೂತ್ರ: ಕೆಟ್ಟ ಫಲಿತಾಂಶಗಳು ಸಿಗಬಹುದೆನ್ನುವ ಭಯದಿಂದ ನಾವು ಏನನ್ನೂ ಮಾಡಲು ಮುಂದಾಗದಿದ್ದರೆ, ಅದು ನಮ್ಮ ಮೂರ್ಖತನ. ಖಾಲಿಯಾಗಿ ಕುಳಿತುಕೊಳ್ಳುವುದು ಕೂಡ ಒಂದು ರೀತಿಯ ಕರ್ಮ, ಇದರಿಂದಾಗಿ ನಮ್ಮ ಆರ್ಥಿಕ ನಷ್ಟ, ವ್ಯರ್ಥ ಮತ್ತು ಸಮಯ ನಷ್ಟವಾಗುತ್ತದೆ. ಎಲ್ಲಾ ಜೀವಿಗಳು ಪ್ರಕೃತಿಗೆ ಒಳಪಟ್ಟಿರುತ್ತವೆ. ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಮಾಡುವುದರಿಂದ ಫಲವನ್ನು ಪಡೆಯಬಹುದು. ಆದ್ದರಿಂದ, ನಾವು ಎಂದಿಗೂ ಕರ್ಮದ ಬಗ್ಗೆ ಅಸಡ್ಡೆ ತೋರಬಾರದು, ನಮ್ಮ ಸಾಮರ್ಥ್ಯ ಮತ್ತು ವಿವೇಕದ ಆಧಾರದ ಮೇಲೆ ನಾವು ಕರ್ಮವನ್ನು ಮುಂದುವರಿಸಬೇಕು.

17/08/2022

#ಲೋಕಾಪುರ ಲೋಕೇಶ್ವರನಿಗೆ ಬಸವೇಶ್ವರನ ರೂಪಕ*

#ಎಂದಿನಂತೆ ಶ್ರಾವಣ ಮಾಸದಲ್ಲಿ ಮುಧೋಳ ತಾಲೂಕಿನ ಲೋಕಾಪುರದ ಭಕ್ತರ ಆರಾಧ್ಯದೈವ ಲೋಕೇಶ್ವರನಿಗೆ ನಿತ್ಯ ಪೂಜೆ ಪುನಸ್ಕಾರ ನಡೆಯುತ್ತವೆ. ಆದರೆ ಈ ಶ್ರಾವಣ ಬುಧವಾರ ಲೋಕದೊಡೆಯ ಲೋಕೇಶ್ವರನಿಗೆ ಕಲಾರ್ಚಕರು ಬಸವೇಶ್ವರ ರೂಪಕ ನೀಡಿ ಭಕ್ತಾದಿಗಳಿಗೆ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ.ವಚನ ಅನುಭಾವ ಕ್ರಾಂತಿಯ ಮೂಲಕ ಜಗದೋದ್ಧಾರ ಮಾಡಿದ ಬಸವೇಶ್ವರ ರೂಪಕ ನೋಡಲು ದರ್ಶನ ಮಾಡಲು ಲೋಕೇಶ್ವರನ ದೇವಾಲಯಕ್ಕೆ ಆಗಮಿಸಿ ಕೃಪಾಶೀರ್ವಾದ ಪಡೆಯುತ್ತಿದ್ದಾರೆ.

14/08/2022

#ಮೂರ ದಿನಾ ಇದ್ದ ಹೋಗಾಕ ಬಂದೇವ ಅಂತ ಅರಿಯಬೇಕೋ

#ಹರ್ ಘರ್ ತಿರಂಗಾ ಅಭಿಯಾನದ ಕುರಿತು ಅರ್ಥಪೂರ್ಣವಾದ ಜಾನಪದ ಗೀತೆ

#ರಚಿಸಿ ಹಾಡಿದ ಉತ್ತರ ಕರ್ನಾಟಕದ ಪ್ರಸಿದ್ಧ ಜಾನಪದ ಕಲಾವಿದರಾದ ಶ್ರೀ ರಮೇಶ ಕುರುಬಗಟ್ಟಿ.

Address

Bagalkot

Telephone

+17019043893

Website

Alerts

Be the first to know and let us send you an email when Petkarmedia posts news and promotions. Your email address will not be used for any other purpose, and you can unsubscribe at any time.

Share