Ica10tvnews

Ica10tvnews ica 10tvnews ಉತ್ತಮ ಸಮಾಜಕ್ಕಾಗಿ

24/05/2025

ವಡಗೇರಾ ತಾಲ್ಲೂಕಿನ ಐಕೂರು ಗ್ರಾಮ ಪಂಚಾಯತಿಗೆ ಕಿವಿ ಮತ್ತು ಹೃದಯ ಎರಡೂ ಇಲ್ಲ. ಯಾದಗಿರಿ ಸಿಇಓ ಅವರ ಜವಬ್ದಾರಿಗಳೇನೋ ನಮಗಂತೂ ಅರ್ಥವಾಗುತ್ತಿಲ್ಲ. ಈ ಕುರಿತು ಇಓ ಅವರೊಂದಿಗೆ ಮಾತನಾಡಿದರೂ ಪ್ರಯೋಜನೆ ಇಲ್ಲ. ರಾಜ್ಯದಲ್ಲಿ ಆಡಳಿತದಲ್ಲಿರುವುದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸರ್ಕಾರ ಅನ್ನುವ ಭಾವನೆಯೇ ಯಾರಲ್ಲೂ ಮೂಡುತ್ತಿಲ್ಲ. ಈ ಕ್ಷೇತ್ರದ ಶಾಸಕ ಚೆನ್ನಾರಡ್ಡಿ‌ ಕೇವಲ ಚುನಾವಣೆಯ ಶಾಸಕನಂತಾಗಿದೆ. ಗ್ರಾಮದ ಸಮಸ್ಯೆಗಳನ್ನು ಸ್ಥಳೀಯವಾಗಿ‌ ಮೊದಲು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯ ಗಮನಕ್ಕೆ ತರಬೇಕಿರುತ್ತದೆ, ತಂದರೆ ಹಾರಿಕೆಯ ಉತ್ತರ. ಮೇಲಾಧಿಕಾರಿ ಇಓ ಅವರ ಗಮನಕ್ಕೆ ತರಬೇಕಿರುತ್ತದೆ, ಅಲ್ಲೂ ಏಮಾರಿಸುವಿಕೆ!

ಈಗ ಯಾರ ಗಮನಕ್ಕೆ ತಂದರೆ ಏನು ಪ್ರಯೋಜನೆ?

ಐಕೂರು ಗ್ರಾಮದ ದಲಿತ ಕೇರಿಯ ಸಮಸ್ಯೆಗಳನ್ನು ಕೇಳುವವರು ಯಾರು? ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಟಕ್ಕುಂಟು ಲೆಖ್ಖಕ್ಕಿಲ್ಲ ಎಂಬಂಥಿದ್ದಾರೆ. ಜನ ಯಾರಿಗೆ ದೂರು ನೀಡಬೇಕು?

16/04/2025

134ನೇ ಬಾಬಾ ಸಾಹೇಬ್ ಸಂವಿಧಾನ ಶಿಲ್ಪಿ
ಡಾ||ಬಿ.ಆರ್.ಅಂಬೇಡ್ಕರ್ ರವರ ಜಯಂತಿಯನ್ನು "ಧಾರವಾಡ ಕೃಷಿ ವಿಶ್ವ ವಿದ್ಯಾಲಯದಲ್ಲಿ" ಅದ್ದೂರಿಯಾಗಿ ರಾಜ್ಯಾದ ಪ್ರಮುಖ ಗಣ್ಯರ ಸಮ್ಮುಖದಲ್ಲಿ ತುಂಬಾ ಅರ್ಥ ಪೂರ್ಣವಾಗಿ ಆಚರಿಸಿದಂತಹ ಕ್ಷಣ ಹಾಗೂ ಈ ವೇದಿಕೆಯಲ್ಲಿ ಭಾರತ ಕಂಡಂತಹ ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನ ವಾಗಿರುವಂತಹ "ನಿವೃತ್ತ ನ್ಯಾಯಾಧೀಶರು ಸರ್ವೋಚ್ಚ ನ್ಯಾಲಯ ಭಾರತ ಸರ್ಕಾರ,ಮಾಜಿ ಲೋಕಾಯುಕ್ತರು ಕರ್ನಾಟಕ ಸರ್ಕಾರ, ಸನ್ಮಾನ್ಯ ಡಾ|| ಸಂತೋಷ್ ಹೆಗ್ಡೆ ರವರು ಹಾಗೂ ಭಾರತಿಯರ ಸೇವಾ ಸಮಿತಿ (ರಿ) ರಾಷ್ಟ್ರೀಯ ಅಧ್ಯಕರಾದ ಭಾರತ ಜ್ಯೋತಿ ಡಾ||ಎಮ್,ರಾಮಚಂದ್ರರವರು (ಹೂಡಿ ಚಿನ್ನಿ ಅಣ್ಣ) ಹಾಗೂ ಭೀಮ್ ಸೇವಾ ಸಮಿತಿ ರಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀಕಾಂತ್ ರಾವಣ್ ರವರು ಹಾಗೂ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಿದಂತಹ ಕ್ಷಣ

ಯುವ ಘಟಕ ರಾಜ್ಯಾಧ್ಯಕ್ಷರು
#ಗಂಗಾಧರ್_ಬಿ_ಸಿ
ಚಾಲಕರ ಘಟಕ ಬೆಂ ಗ್ರಾಂ ಜಿಲ್ಲಾಧ್ಯಕ್ಷರು
#ಮುನಿರಾಜ್_ಬಿ_ಆರ್
ಆಟೋ ಘಟಕ ಬೆಂ ಗ್ರಾಂ ಜಿಲ್ಲಾಧ್ಯಕ್ಷರು
#ಶ್ರೀನಾಥ್_ಸಿ
ಕಾರ್ಮಿಕ ಘಟಕ ಬೆಂ ಗ್ರಾಂ ಜಿಲ್ಲಾಧ್ಯಕ್ಷರು
#ವರುಣ್_ರಾಜ್_ಚಕ್ರವರ್ತಿ

ಶ್ರೀಕಾಂತ್ ರಾವಣ್
ಸಂಸ್ಥಾಪಕ ರಾಜ್ಯಾಧ್ಯಕ್ಷರು
ಭೀಮ್ ಸೇವಾ ಸಮಿತಿ (ರಿ)

16/04/2025

BAnk Janardhan

16/04/2025
16/04/2025

ಕೆ.ಪಿ.ನಂಜುಂಡಿ ವಿಶ್ವಕರ್ಮ ಹುಟ್ಟುಹಬ್ಬದ ಅಂಗವಾಗಿ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ಎಪ್ರೀಲ್ ಕೂಲ್ ಕಾರ್ಯಕ್ರಮ

ಸಿಂಧನೂರು ನಗರದ APMC ಗಣೇಶ ದೇವಸ್ಥಾನದ ಆವರಣದ ಉದ್ಯಾನವನದಲ್ಲಿ ವಿಶ್ವಕರ್ಮ ಸಮಾಜ ಸಿಂಧನೂರು ಹಾಗೂ ವನಸಿರಿ ಪೌಂಡೇಷನ್ (ರಿ) ರಾಯಚೂರು ವತಿಯಿಂದ ಮಾಜಿ ವಿಧಾನ ಪರಿಷತ್ ಸದಸ್ಯರು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷರು,ಕರ್ನಾಟಕ ವಿಶ್ವಕರ್ಮ ಸಮುದಾಯದ ಜನಪ್ರಿಯ ನಾಯಕರಾದ ಕೆ.ಪಿ. ನಂಜುಂಡಿ ಯವರ 60 ನೇ ಹುಟ್ಟುಹಬ್ಬದ ಪ್ರಯುಕ್ತ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ದೇವದುರ್ಗ ಮಠದ ಪರಮ ಪೂಜ್ಯ ಶ್ರೀ ಅಜೇಂದ್ರ ಮಹಾಸ್ವಾಮಿಗಳು ಮತ್ತು ಮಾತೋಶ್ರೀ ಸುಮಂಗಲಮ್ಮ ಅವರು ಅರವಟ್ಟಿಗೆಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮ ಮುಖ್ಯ ಅತಿಥಿ ಆಗಿ ಆಗಮಿಸಿದ ವನಸಿರಿ ಪೌಂಡೇಷನ್ ರಾಜ್ಯಾಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ವನಸಿರಿ ಪೌಂಡೇಷನ್ ಸುಮಾರು ವರ್ಷಗಳಿಂದ ಪರಿಸರ ಸಂರಕ್ಷಣೆಯಲ್ಲಿ ತೊಡಗಿದ್ದು,ಇಂದು ವಿಶ್ವಕರ್ಮ ಸಮಾಜಕ್ಕೆ ಹಗಲಿರುಳು ಶ್ರಮಿಸುತ್ತಿರುವ ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ ಪಿ ನಂಜುಂಡಿ ವಿಶ್ವಕರ್ಮ ಅವರ 60ನೇ ಹುಟ್ಟುವನ್ನು ವಿಶೇಷವಾಗಿ ಪಕ್ಷಿಗಳಿಗೆ ನೀರುಣಿಸುವ ಮೂಲಕ ಸಿಂಧನೂರು ವಿಶ್ವಕರ್ಮ ಸಮಾಜದ ಬಂಧುಗಳು ಆಚರಿಸುತ್ತಿರುವುದು ಬಹಳ ಶ್ಲಾಘನೀಯ ಕಾರ್ಯ.ಇವತ್ತು ಯುವಕರು ಮೋಜು ಮಾಸ್ತಿಗಿಳಿಯುವ ಸಂಧರ್ಭದಲ್ಲಿ ವನಸಿರಿ ಪೌಂಡೇಷನ್ ಜೊತೆಗೆ ಕೈಜೋಡಿಸಿ ಮೂಕ ಪ್ರಾಣಿ ಪಕ್ಷಿಗಳಿಗೆ ನಿರುಣಿಸುತ್ತಿರುವುದು ಹೆಮ್ಮೆಯ ವಿಷಯ.ಇದೇರೀತಿ ಹಿಂದೆ ಇವರ ನೇತೃತ್ವದಲ್ಲಿ ಕನಕಗಿರಿ ಹತ್ತಿರ ಬೈರಾಪುರ ಗ್ರಾಮದ ಮೌನೇಶ್ವರ ದೇವಸ್ಥಾನ ಉದ್ಘಾಟನೆ ಸಂಧರ್ಭದಲ್ಲಿ ಕೂಡಾ ಸಸಿಗಳನ್ನು ನೆಟ್ಟು ಪರಿಸರ ಕಾಳಜಿಯನ್ನು ಮೆರೆದಿದ್ದಾರೆ. ಮತ್ತು ನಮ್ಮ ಆಲದಮರದ ಹತ್ತಿರ ಜಾಕಣಾಚಾರಿ ಜಯಂತಿ ಅಂಗವಾಗಿ ಸಸಿ ನೆಟ್ಟಿರುವುದು ಹೆಮ್ಮರವಾಗಿ ಬೆಳೆದಿವೆ ಇದು ಅವರ ಪರಿಸರದ ಮೇಲೆ ಇರುವ ಕಾಳಜಿಯನ್ನು ತೋರಿಸುತ್ತದೆ.ಇವರಿಗೆ ತಾಯಿ ವೃಕ್ಷ ಮಾತೆಯ ಆರ್ಶಿವಾದ ಸದಾಕಾಲ ಇರಲಿ ಮತ್ತು ನೀವುಗಳೆಲ್ಲರೂ ವನಸಿರಿ ಪೌಂಡೇಷನ್ ಜೊತೆಗೆ ಸದಾಕಾಲ ಹೀಗೆ ಕೈಜೋಡಿಸಬೇಕು ಮತ್ತು ವಿಶ್ವಕರ್ಮ ಸಮಾಜದ ಚನ್ನಪ್ಪ ಕೆ ಹೊಸಹಳ್ಳಿ ಮತ್ತು ರಾಜು ಪತ್ತಾರ ಅವರ ಮೇಲೆ ವನಸಿರಿ ತಂಡದ ಜವಾಬ್ದಾರಿ ಬಹಳ ಇದೆ.ನಮ್ಮ ತಂಡವನ್ನು ಮುನ್ನಡೆಸು ಇನ್ನೂ ಹೆಚ್ಚಿನ ಜವಾಬ್ದಾರಿ ನೀಡುತ್ತೇವೆ. ನಮಗೆ ನಿಮ್ಮ ಸಹಕಾರ ಸದಾಕಾಲ ಇರಲಿ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ವಿಶ್ವಕರ್ಮ ಸಮಾಜದ ತಾಲೂಕ ಅಧ್ಯಕ್ಷ ಮೌನೇಶ ತಿಡಿಗೋಳ,ಬಡಿಗೇರ ಸಂಘದ ಅಧ್ಯಕ್ಷ ರವೀಂದ್ರ ಗದ್ರಟಗಿ,ವಿರೇಶ ಕೋಟೆ, ಕ.ರ.ವೇ.ಉಪಾಧ್ಯಕ್ಷ ಬಸವರಾಜ ವಿಶ್ವಕರ್ಮ, ವೀರಭದ್ರ ಅಲಬನೂರು, ಬಸವರಾಜ ಕಮತಗಿ,ನರಸಪ್ಪ ಪೂಜಾರಿ,ಚನ್ನಪ್ಪ ಕೆ ಹೊಸಹಳ್ಳಿ,ರಾಜು ಬಳಗಾನೂರ,ವಿರೇಶ ಸುಕಲಪೇಟೆ,ಮುತ್ತಣ್ಣ ಪತ್ತಾರ, ಮುದುಕಪ್ಪ ಹೊಸಳ್ಳಿ ಕ್ಯಾಂಪ್ ಇನ್ನಿತರರು ಇದ್ದರು

Address

#79, 6th Cross, Magadi Road, Kottigepalya
Bangalore
560091

Website

Alerts

Be the first to know and let us send you an email when Ica10tvnews posts news and promotions. Your email address will not be used for any other purpose, and you can unsubscribe at any time.

Share