Veega News Kannada

Veega News Kannada Contact information, map and directions, contact form, opening hours, services, ratings, photos, videos and announcements from Veega News Kannada, Media/News Company, Bangalore.

Veega News Kannada is a Most Popular Digital Media, It's owned by Mesta
SUBSCRIBE OUR CHANNEL TO GET LATEST NEWS

DM for Paid Promotion or Collaboration 👇
[email protected]

15/09/2025

ಟೋಲ್ ಸಿಬ್ಬಂದಿ ವಿರುದ್ದ ಸಂಘಟನೆಗಳ ಗರಂ| Veega News Kannada EXCLUSIVE

ಹಾಸನ: ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತವೊಂದು ಸಂಭವಿಸಿದೆ. ಗಣೇಶ ಮೆರವಣಿಗೆ ಹೋಗುತ್ತಿದ್ದವರ ಮೇಲೆ ಏಕಾಏಕಿ ಟ್ರಕ್ ಹರಿದು ಸಾವನ್ನಪ್ಪಿದವರ ಸ...
13/09/2025

ಹಾಸನ: ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತವೊಂದು ಸಂಭವಿಸಿದೆ. ಗಣೇಶ ಮೆರವಣಿಗೆ ಹೋಗುತ್ತಿದ್ದವರ ಮೇಲೆ ಏಕಾಏಕಿ ಟ್ರಕ್ ಹರಿದು ಸಾವನ್ನಪ್ಪಿದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಅಪಘಾತ ಸಂಭವಿಸಿದೆ. ಅವಘಡದಲ್ಲಿ 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ ಮೃತರ ವಿವರ ಹೀಗಿದೆ...

1. ಪ್ರವೀಣ್ ಕುಮಾ‌ರ್, ಅಂತಿಮ ಬಿಇ ವಿದ್ಯಾರ್ಥಿ, ಬಳ್ಳಾಕ

2. ರಾಜೇಶ ಬಿನ್ ಮೂರ್ತಿ 17 ವರ್ಷ ಕೆ.ಬಿ.ಪಾಳ್ಯ, ಹಳೆಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು

3. ಈಶ್ವರ ಬಿನ್ ರವಿಕುಮಾರ (17) ಡನಾಯಕನಹಳ್ಳಿ ಕೊಪ್ಪಲು, ಹೊಳೆನರಸೀಪುರ ತಾಲೂಕು

4. ಗೋಕುಲ ಬಿನ್ ಸಂಪತ್ ಕುಮಾರ್ (17) ಮುತ್ತಿಗೆಹೀರಳ್ಳಿ ಗ್ರಾಮ, ಹೊಳೆನರಸೀಪುರ ತಾಲ್ಲೂಕು

5. ಕುಮಾರ ಬಿನ್ ತಿಮ್ಮಯ್ಯ (25) ಕಬ್ಬಿನಹಳ್ಳಿ ಗ್ರಾಮ, ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು.

6. ಪ್ರವೀಣ ಬಿನ್ ಹನುಮಯ್ಯ (25) ಕಬ್ಬಿನಹಳ್ಳಿ ಗ್ರಾಮ ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು.

7. ಮಿಥುನ್ ಬಿನ್ ವಿಜಯ್ (23) ಗವಿಗಂಗಾಪುರ ಗ್ರಾಮ ಹೊಸದುರ್ಗ ತಾಲೂಕು ಚಿತ್ರದುರ್ಗ ಜಿಲ್ಲೆ.

8. ಸುರೇಶ ಬಿನ್ ರಮೇಶ ಬಿಇ ವಿದ್ಯಾರ್ಥಿ ಮಣೆನಹಳ್ಳಿ ಮರ್ಲೆ ಗ್ರಾಮ, ಚಿಕ್ಕಮಗಳೂರು ಜಿಲ್ಲೆ

9. ಪ್ರಭಾಕರ್ (55) ಬಂಟರಹಳ್ಳಿ, ಹಾಸನ ತಾಲ್ಲೂಕು

ಇನ್ನು ಮೊಸಳೆಹೊಸಳ್ಳಿ ಗ್ರಾಮಸ್ಥರು ಗ್ರಾಮದಲ್ಲಿ 25 ವರ್ಷಗಳಿಂದ ಗ್ರಾಮಸ್ಥರು ಗಣಪತಿ ಕೂರಿಸುತ್ತಿದ್ದಾರೆ. ರಾತ್ರಿ ಆರ್ಕೆಸ್ಟ್ರಾ ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಆರ್ಕೆಸ್ಟ್ರಾ ಬಳಿಗೆ ಸಾವಿರಾರು ಮಂದಿ ಬರುತ್ತಿದ್ದರು. ಈ ವೇಳೆ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಯಮಸ್ವರೂಪಿ ಟ್ರಕ್ ಹರಿದು ಈ ದುರಂತ ಸಂಭವಿಸಿದೆ.

ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಐವರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ದುರಂತ ಸಾವು ಕಂಡಿದ್ದಾರೆ. ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಈವರೆಗೆ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. 20 ಗಾಯಾಳುಗಳಿಗೆ ಹಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಪೈಕಿ ಮೂವರು ಐಸಿಯುನಲ್ಲಿದ್ದಾರೆ. 7 ಮಂದಿ ಗಾಯಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ಮೂರು ದಿನ ಕಾವೇರಿ ನೀರಿನ ಅಭಾವ ಇರುತ್ತದೆ. ಅದರ ಅಪ್ಡೇಟ್ ಇಲ್ಲಿದೆ ನೋಡಿ👇
12/09/2025

ಬೆಂಗಳೂರಿನಲ್ಲಿ ಮೂರು ದಿನ ಕಾವೇರಿ ನೀರಿನ ಅಭಾವ ಇರುತ್ತದೆ. ಅದರ ಅಪ್ಡೇಟ್ ಇಲ್ಲಿದೆ ನೋಡಿ👇

11/09/2025

ಕಿಸ್ ಕೊಟ್ಟರೆ ಮೊಬೈಲ್ ವಾಪಸ್ ಕೊಡುವುದಾಗಿ ಯುವತಿಗೆ ಹೇಳಿದ ಸ್ಪೇರ್ ಡ್ರೈವರ್ ಆರೀಫ್..
ಬಸ್ಸು ಚಲಿಸುವಾಗ ಯುವತಿ ಮಲಗಿದ್ದ ಸೀಟ್ ಗೆ ಬಂದು ಲೈಂಗಿಕ ಕಿರುಕುಳ.. ಯುವತಿ ವಿರೋಧಿಸಿದಾಗ ರಾತ್ರಿ ಪದೇ ಪದೇ ಬಂದು ಯುವತಿಗೆ ಲೈಂಗಿಕ ಕಿರುಕುಳ..| Veega News Kannada Live EXPOSE

09/09/2025

ನಿಮ್ಮ ಧ್ವನಿಗೆ ಧ್ವನಿಯಾಗಿ ವೇಗ ನ್ಯೂಸ್ ಕನ್ನಡ ನಿಂತಿದೆ ಹೊಸಕೋಟೆಗೆ ವೈಟ್ಫೀಲ್ಡ್ ಗೆ ಕನೆಕ್ಟ್ ಮಾಡುವ ರಸ್ತೆಯಲ್ಲಿ ನಿತ್ಯ ಹೆಚ್ಚಾಗುತ್ತಿದೆ ಟ್ರಾಫಿಕ್!|

08/09/2025

MANDYA GANESH VISARJAN| ಮಂಡ್ಯದಲ್ಲಿ ಗಣೇಶನ ವಿಸರ್ಜನೆ ವೇಳೆ ಮುಸ್ಲಿಂರಿಂದ ಕಲ್ಲು ತೂರಾಟ...

07/09/2025

LIVE� ರಕ್ತ ಚಂದ್ರ ಗ್ರಹಣ ಲೈವ್: Lunar Eclipse 2025 | Lunar 'blood moon

14/05/2025

ಬಿಡದಿ ಹತ್ತಿರ ಇರುವಂತಹ ಒಂದು ಗ್ರಾಮದಲ್ಲಿ ಸುಮಾರು ಮೂರು ದಿನಗಳ ಹಿಂದೆ ನಡೆದಂತಹ ಈ ಒಂದು ಘಟನೆ ನಿಜವಾಗಲೂ ಮನುಕುಲವನ್ನೇ ಬೆಚ್ಚಿ ಬೀಳಿಸುವಂತಹ ಸುದ್ದಿ ಇದಾಗಿದೆ ಖುಷಿ ಎಂಬಾಕೆಯನ್ನು ಬರಬರವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವಂತಹ ಒಂದು ಘಟನೆ ನಡೆದಿದ್ದು ನಿಜವಾಗಿಯೂ ನಾವೆಲ್ಲ ವಾಸಿಸುತ್ತಿರುವುದು ಜನರ ಮಧ್ಯೆ ಅಥವಾ ರಾಕ್ಷಸರ ಮಧ್ಯೆ ಅನ್ನುವಂತಹ ಪ್ರಶ್ನೆ ಮಾಡುತ್ತಿದೆ ಆದಷ್ಟು ಬೇಗ ಈ ಒಂದು ವಿಚಾರದಲ್ಲಿ ಪೊಲೀಸರು ಕ್ರಮವನ್ನು ಕೈಗೆತ್ತಿಕೊಂಡು ಆಕೆಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳಲಾಗುತ್ತದೆ

Address

Bangalore

Alerts

Be the first to know and let us send you an email when Veega News Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Veega News Kannada:

Share