05/11/2024
ಬಡ ಮೇಷ್ಟ್ರು ಮಗ ಶಾಸಕನಾದ ರೋಚಕ ಕಥೆ...
ಚನ್ನಪಟ್ಟಣದ ಚಕ್ಕೆರೆ ಗ್ರಾಮದಲ್ಲಿ ಜನಿಸಿದ ಬಡ ಮೇಷ್ಟ್ರು ಮಗ ಯೋಗೇಶ್ವರ್ ಈ ಮಟ್ಟಕ್ಕೆ ಬೆಳೆಯಲು
ಕಾರಣವಾದ್ರೂ ಏನು...?
ಅಂದು ಬೆಂಗಳೂರಿಗೆ ಕೆಲಸ ಬಯಸಿ ಬಂದಿದ್ದ ಯೋಗೇಶ, ಆರಂಭದ ದಿನಗಳಲ್ಲಿ ಮಯೂರಿ ಟೆಕ್ಸ್ ಟೈಲ್ಸ್ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ...
ಊಟಕ್ಕಾಗಿ ಪರದಾಡ್ತಿದ್ದ ಯೋಗೇಶ ಊರಿಂದ ತಂದಿದ್ದ ತೆಂಗಿನಕಾಯಿ ಮಾರಿ ಬಂದ ಹಣದಲ್ಲಿ ಊಟ ಮಾಡ್ತಿದ್ನಂತೆ...
ಆಗ ಅವನಿಗೆ ಕಣ್ಣಿಗೆ ಬಿದ್ದದ್ದು ಮಯೂರಿ ಟೆಕ್ಸ್ ಟೈಲ್ಸ್ ಬಟ್ಟೆ ಅಂಗಡಿ ಮಾಲೀಕನ ಮಗಳು ಮಂಜುಳ, ಆಕೆಯನ್ನು ಬುಟ್ಟಿಗೆ ಹಾಕಿಕೊಂಡರೆ ನನ್ನ ಬಡತನ ತೊಲಗುತ್ತದೆ ಅನ್ನೋ ಆಲೋಚನೆ ಆತನಿಗೆ ಆಗ ಬರುತ್ತದೆ...
ಅದರಂತೆಯೇ ಆಕೆಯನ್ನು ತನ್ನ ಪ್ರೇಮದ ಪಾಷಕ್ಕೆ ಸಿಲುಕುವಂತೆ ಮಾಡಿ, ಅವರ ಮನೆ ಅಳಿಯನಾಗಿ ಬಿಡುತ್ತಾನೆ...
ಆನಂತರ ಅವರ ಆಸ್ತಿ ಯನ್ನ ಲಫಟಾಯಿಸಿಬಿಡುತ್ತಾನೆ...,
ತದನಂತರ ಆತ ಕೈ ಹಾಕಿದ್ದೆ ಮೇಘಾಸಿಟಿ ಟೌನ್ ಶಿಫ್ ಅನ್ನೋ ಕರ್ನಾಟಕದ ಅತೀ ದೊಡ್ಡ ಹಗರಣಕ್ಕೆ...
ಮೇಘಾಸಿಟಿ ಟೌನ್ ಶಿಫ್ ಅನ್ನೋ ಹೆಸರಿನಲ್ಲಿ ನ್ಯೂಸ್ ಪೇಪರ್ ನಲ್ಲಿ ಅಡ್ವರ್ಟೈಸ್ ಮೆಂಟ್ ಕೊಡಿಸಿದ ಯೋಗೇಶ, ಬಡವರಿಗೆ ಸೈಟ್ ಕೊಡಿಸುವ ಯೋಜನೆ ಇದಾಗಿದ್ದು, ಇದಕ್ಕೆ ಪ್ರತೀ ತಿಂಗಳು 3000 ದಂತೆ 60 ತಿಂಗಳುಗಳ ಕಂತುಗಳನ್ನು ಕಟ್ಟಿದರೆ ಸಾಕು ಸೈಟ್ ನಿಮ್ಮದಾಗುತ್ತದೆ ಎಂಬಂತೆ ಜನರನ್ನ ನಂಬಿಸಿಬಿಡುತ್ತಾನೆ...
ಅದನ್ನು ನಂಬಿ ಈತನ ಕುತಂತ್ರ ಕ್ಕೆ ಬಲಿಯಾದ ಕುಟುಂಬಗಳು ಬರೋಬ್ಬರಿ 10,000 ಕುಟುಂಬಗಳು, ಆರಂಭದಲ್ಲಿ ಕೇವಲ 5ಲಕ್ಷ ಹಣ ಇನ್ವೇಷ್ಟ್ ಮಾಡಿದ ಈತ ದೋಚಿದ್ದು ಮಾತ್ರ 70 ಕೋಟಿಯಂತ ಬೃಹತ್ ಮೊತ್ತ...
ಇದೆಲ್ಲಾ ನಡೆದದ್ದು 1995ನೇ ಇಸವಿಯಲ್ಲೇ ಅನ್ನೋದು ವಿಶೇಷ, ಇವತ್ತಿನ ಮಾರ್ಕೇಟ್ ವ್ಯಾಲ್ಯೂ ವನ್ನ ಪರಿಗಣಿಸಿದರೆ 70,000 ಕೋಟಿ ಅಷ್ಟಾಗಬಹುದು ಎಂದು ಅಂದಾಜಿಸಲಾಗಿದೆ...
ಈ ಪ್ರಕರಣದಲ್ಲಿ ಜನರನ್ನ ಯಾಮಾರಿಸಲು ಈತ ಬಳಸಿಕೊಂಡದ್ದು ಮಾತ್ರ ಸಮಾಜದ ಗಣ್ಯವ್ಯಕ್ತಿಗಳನ್ನ ಅನ್ನೋದು ವಿಷಾಧನೀಯ, ಈತನ ಈ ದೊಡ್ಡ ಫ್ರಾಡ್ ಕೆಲಸಕ್ಕೆ ಅತಿಥಿಗಳಾಗಿ ಕರೆಸಿದ್ದು ಡಾ.ರಾಜ್ ಕುಮಾರ್, ಅಮಿತಾಬ್ ಬಚ್ಚನ್, ಐಶ್ವರ್ಯ ರೈ, ಬಾಲಗಂಗಾಧರ ನಾಥ ಸ್ವಾಮೀಜಿ, ಪೇಜಾವರ ಶ್ರೀ ಯಂತ ಇನ್ನೂ ಮುಂತಾದ ಗಣ್ಯವ್ಯಕ್ತಿಗಳನ್ನ...
ಈ ಫ್ರಾಡ್ ಖರೀಧಿಸಿದ್ದ ಭೂಮಿ ಕೇವಲ 1 ಎಕರೆ ಆದರೆ ಗ್ರಾಹಕರ ಬಳಿ ಹೇಳಿಕೊಂಡಿದ್ದು ಮಾತ್ರ 200 ಎಕರೆ ಭೂಮಿ ಖರೀಧಿಸಿರುವುದಾಗಿ...
ಈ ರೀತಿಯಾಗಿ ಆಗಿನ ಕಾಲಕ್ಕೆ ಅಂದರೆ 1995 ರಲ್ಲೇ 5 ಲಕ್ಷ ಹಣ ಹೂಡಿ 70 ಕೋಟಿಯಷ್ಟು ಹಣ ಗಳಿಸಿ ಬಿಡುತ್ತಾನೆ...
ಆ ಪಾಪದ ಹಣದಿಂದ ತನ್ನೂರು ಚಕ್ಕೆರೆಯಲ್ಲಿ ಒಂದು ದೇವಸ್ಥಾನ ಕಟ್ಟಿಸುತ್ತಾನೆ, ಸ್ವಂತ ಮನೆಯನ್ನೂ ಕೂಡ ಕಟ್ಟಿಸಿಕೊಳ್ಳುತ್ತಾನೆ, ಅಷ್ಟಲ್ಲದೇ ಸಿನಿಮಾ ಗಳಲ್ಲೂ ಹೂಡಿಕೆ ಮಾಡಿ ಹಿರೋ ಆಗಿಬಿಡುತ್ತಾನೆ...
ಸಿನಿಮಾ ಅಷ್ಟರ ಮಟ್ಟಿಗೆ ಕೈಹಿಡಿಯದಿದ್ದಾಗ ರಾಜಕೀಯ ಕ್ಕೆ ಪ್ರವೇಶ ಪಡೆಯುತ್ತಾನೆ...
ಇಲ್ಲಿ ವಿಪರ್ಯಾಸ ಏನಪ್ಪಾ ಅಂದರೆ ತನ್ನ ರಾಜಕೀಯ ಪ್ರಚಾರಕ್ಕೆ ಆತ ತನ್ನ ಕೈಯಿಂದಲೇ ಮೋಸಕ್ಕೆ ಒಳಗಾಗಿದ್ದ ಮೇಘಾಸಿಟಿ ಟೌನ್ ಶಿಫ್ ನ ಸಂತ್ರಸ್ತ ಸಿನಿ ತಾರೆಯರನ್ನ ಬಳಸಿಕೊಂಡು ಶಾಸಕನೂ ಆಗಿಬಿಡುತ್ತಾನೆ...
ಮುಂದೆ ಸಚಿವನೂ ಆಗ್ತಾನೆ, ದೇವೇಗೌಡರು ಹಾಗೂ ವರದೇಗೌಡರು ಮಾಡಿದ ನೀರಾವರಿ ಕೆಲಸಗಳನ್ನ ತಾನೇ ಮಾಡಿರುವುದಾಗಿ, ಸಿನಿಮಾ ಪೋಟೋಶೂಟ್ ಮಾಡಿಸಿಬಿಡುತ್ತಾನೆ...
ಆ ಸಿನಿಮಾ ಪೋಟೋಶೂಟ್ ನಲ್ಲಿ ಚನ್ನಪಟ್ಟಣ ವನ್ನ ಬರಡು ಭೂಮಿಯನ್ನಾಗಿ ತೋರಿಸಿ, ರೈತರೆಲ್ಲ ತಲೆಮೇಲೆ ಕೈ ಇಟ್ಟು ಕೂತು ಮಳೆಗಾಗಿ ಎದುರು ನೋಡುವಂತೆ ಮಾಡಿ, ತಾನು ಭಗೀರಥನಂತೆ ಬಂದು ಚನ್ನಪಟ್ಟಣ ಕ್ಕೆ ನೀರು ಕೊಟ್ಟೆ ಎಂಬುದಾಗಿ ಟಿವಿ ಮಾಧ್ಯಮಗಳಲ್ಲಿ ಹಾಗೂ ಪತ್ರಿಕೆ ಗಳಲ್ಲಿ ಪ್ರಚಾರ ಮಾಡಿಸಿ ಚನ್ನಪಟ್ಟಣದ ಭಗೀರಥ ನೆನಿಸಿಕೊಂಡು ಬಿಡುತ್ತಾನೆ...
ಇವತ್ತಿಗೂ ಕೂಡ ಅಂದರೆ 30 ವರ್ಷಗಳು ಕಳೆದರೂ ಕೂಡ ಆತ ಮೇಘಾಸಿಟಿ ಅನ್ನೋ ಹೆಸರಿನ ಟೌನ್ ಶಿಫ್ ನಿರ್ಮಿಸಿಯೂ ಇಲ್ಲ,
ಒಂದೇ ಒಂದು ಸೈಟ್ ಕೂಡ ಯಾವ ಬಡ ಕುಟುಂಬಕ್ಕೂ ಕೊಟ್ಟಿಲ್ಲ...
ಹಾಗೂ ಚನ್ನಪಟ್ಟಣದ ಭಗೀರಥ ನೂ ಇವನಲ್ಲ, ಅಸಲಿ ಭಗೀರಥರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ವರದೇಗೌಡರು...
ಇಂತಹ ಒಬ್ಬ ಮನೆಹಾಳನನ್ನ, ಮೋಸಗಾರನನ್ನ, ಧಗಾಕೋರನನ್ನ, ಸುಳ್ಳೇಶ್ವರನನ್ನ ಚನ್ನಪಟ್ಟಣದ ಜನತೆ ಎಂದಿಗೂ ಕೂಡ ಕೈ ಹಿಡಿಯಬೇಡಿ...
ಮುಂದೆಯೂ ಕೂಡ ಚನ್ನಪಟ್ಟಣದಲ್ಲಾಗಲಿ ಬೇರಾವುದೇ ಕ್ಷೇತ್ರದಲ್ಲಾಗಲಿ ಆರಿಸಿ ಕಳಿಸಬೇಡಿ...
ಇಂತಿ
ಚನ್ನಪಟ್ಟಣದ ಪ್ರಜ್ಞಾವಂತ ಮತದಾರರು.
#ಚನ್ನಪಟ್ಟಣ #ಜೆಡಿಎಸ್