PNDM News

PNDM News Contact information, map and directions, contact form, opening hours, services, ratings, photos, videos and announcements from PNDM News, Media/News Company, Bangalore.

ಇಂದಿನ ದಿನ ಪತ್ರಿಕೆಯಲ್ಲಿ ಪ್ರಸಾರ ಗೊಂಡ ನನ್ನ ವರದಿಗಳು
21/08/2022

ಇಂದಿನ ದಿನ ಪತ್ರಿಕೆಯಲ್ಲಿ ಪ್ರಸಾರ ಗೊಂಡ ನನ್ನ ವರದಿಗಳು

15/08/2022
25/07/2022
28/05/2022

ಏಯ್...... ಕುಮಾರಸ್ವಾಮಿ ಎಂದು #ಏಕವಚನದಲ್ಲಿಯೇ ಎಚ್ಚರಿಸಿದ ರೈತ ಮುಖಂಡರು

25/05/2022

#ರಾಜ್ಯಪಾಲರ_ಪ್ರಯಾಣ ರೈತರ #ಜಲ್ವಂತ_ಸಮಸ್ಯೆಗಳ_ಮನವಿ_ನೀಡುವ_ನಿರೀಕ್ಷೆ_ಹುಸಿ.

ನವಲಗುಂದ : ವಿಜಯಪುರ ಜಿಲ್ಲಾ ಆಲಮಟ್ಟಿ ಜಲಾಶಯ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೋಳ್ಳಲು ಹುಬ್ಬಳ್ಳಿಯಿಂದ ನವಲಗುಂದ ಸೊಲ್ಲಾಪೂರ ರಸ್ತೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸಿದರು.

ಈ ಸಂದರ್ಭದಲ್ಲಿ ಸುಮಾರು ವರ್ಷಗಳಿಂದ ಈ ಭಾಗದ ರೈತರ ಜಲ್ವಂತ ಸಮಸ್ಯೆಯಾದ ಮಹಾದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಕುಂಠಿತಗೊಂಡಿರುವ ಕುರಿತು ಗಣವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೂಟ್ ಅನಿರೀಕ್ಷಿತವಾಗಿ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಹೋಗುತ್ತಿರುವ ವಿಷಯ ಮಹಾದಾಯಿ ಹೋರಾಟಗಾರರಿಗೆ ತಿಳಿದ ತಕ್ಷಣ ಈ ಭಾಗದ ಜಲ್ವಂತ ಸಮಸ್ಯೆಗಳ ಕುರಿತು ರಾಜ್ಯಪಾಲರಿಗೆ ಮನವಿ ನೀಡಬೇಕೆಂಬ ನಿರೀಕ್ಷೆಯಲ್ಲಿದ್ದರು.

ತಹಶೀಲ್ದಾರ ಪೋಲಿಸ್ ಇಲಾಖೆಯವರು ರೈತರಿಗೆ ಪೂರ್ವ ನಿಗದಿತವಾಗಿ ಸಮಯ ನೀಡಿಲ್ಲದ ಕಾರಣ ವಿಜಯಪುರ ಜಿಲ್ಲೆ ಆಲಮಟ್ಟಿಗೆ ಶರವೇಗದಲ್ಲಿ ಪ್ರಯಾಣಿಸಿದರು.ಇದರಿಂದ ರೈತರು ತುಂಬಾ ಬೇಸರಗೊಂಡರು

ಮಹಾದಾಯಿ ನೀರಿಗಾಗಿ ವಿವಿಧ ರೀತಿಯ ಹೋರಾಟವನ್ನು ಮಾಡುತ್ತಾ ಬಂದಿರುತ್ತಾರೆ. ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಕಳಸಾ ಬಂಡೂರಿ ರೈತರಿಗೆ ಅವಶ್ಯಕವಾಗಿ ಬೇಕಾಗಿರುತ್ತದೆ. ಉತ್ತರ ಕರ್ನಾಟಕದ ರೈತರ ಜಲ್ವಂತ ಸಮಸ್ಯೆಗಳನ್ನು ರಾಜ್ಯಪಾಲರು ಅವಲೋಕಿಸಿ ರೈತರ ಮನವಿಯನ್ನು ಪಡೆದುಕೊಳ್ಳಬೇಕೆಂದು ರೈತರ ಒತ್ತಾಸೆಯಾಗಿತ್ತು.

ವಿಜಯಪುರ ಜಿಲ್ಲೆಯ ಅಲಮಟ್ಟಿಯಿಂದ ಬಾಗಲಕೋಟ ಜಿಲ್ಲೆ ಕೂಡಲಸಂಗಮಕ್ಕೆ ಬೇಟಿ ನೀಡಿ ಅದೇ ದಿನ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ 11 ನೇ ಘಟಿಕೋತ್ಸವ ಕಾರ್ಯಕ್ರಮಗಳು ಮುಗಿದ ನಂತರ ವಾಪಾಸ್ ಬರುವ ಇದೆ ಮಾರ್ಗದಲ್ಲಿ ಪ್ರಯಾಣಿಸುವಾಗ ರೈತಭವನದಲ್ಲಿ ಮಹಾದಾಯಿ ಹೋರಾಟಗಾರರ ಮನವಿ ಸ್ವೀಕರಿಸಿ ರೈತರಿಗೆ ಸ್ಪಂದಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಮಹದಾಯಿ ಹೋರಾಟಗಾರರು ಇದ್ದಾರೆ.

ರಾಜ್ಯಪಾಲರು ಬರುವ ಸಮಯ ಪೂರ್ವನಿಗದಿಯಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ ನವಲಗುಂದ ರಸ್ತೆಯುದ್ಧಕ್ಕೂ ಶಿಷ್ಠಾಚಾರದಂತೆ ನವಲಗುಂದ ತಹಸೀಲ್ದಾರ ಅನೀಲ್ ಬಡಿಗೇರ ಮತ್ತು ಸಿಪಿಐ ಚಂದ್ರಶೇಖರ ಮಠಪತಿ ಪಿಎಸ್ಐ ಕಲ್ಮೇಶ ಬನ್ನೂರ್ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಅಚ್ಚುಕಟ್ಟಾಗಿ ಬಂದುಬಸ್ತ ವ್ಯವಸ್ಥೆಯನ್ನು ನೆರವೇರಿಸಿದ್ದರು.

25/05/2022

ಭೂಮಿ ಪೂಜೆಗೆ ಬಂದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಹೂವು ಹಾಕಿದ ನಿವಾಸಿಗಳು

25/05/2022

ಮಂಗಳೂರು : ಕಾಂಕ್ರಿಟ್ ರಸ್ತೆ ಮೇಲೆ ಮಲಗಿ ಪ್ರತಿಭಟಿಸಿದ ಮಹಿಳೆ

25/05/2022

ಈ ಬಾರಿ ಗೆಲವು ಇತಿಹಾಸ ಪುಟ ಸೇರುತ್ತೇನೆಂದ ಬಸವರಾಜ್ ಹೊರಟ್ಟಿ

03/05/2022

#ನವಲಗುಂದದಲ್ಲಿ ಪವಿತ್ರ ರಂಜಾನ್ ಪ್ರಾಥನೆ

19/04/2022

ಕೆಪಿಸಿಸಿ ಸಾಮಾಜಿಕ ಜಾಲತಾಣದ ಪರಿಶೀಲನಾ ಸಭೆ

ನವಲಗುಂದ : ನವಲಗುಂದ ಬ್ಲಾಕ್ ಮತ್ತು ಅಣ್ಣಿಗೇರಿ ಬ್ಲಾಕ್ ಕೆಪಿಸಿಸಿ ಸಾಮಾಜಿಕ ಜಾಲತಾಣದ ಪರಿಶೀಲನಾ ಸಭೆಜರುಗಿತು. ಸಭೆಯಲ್ಲಿ ರಾಜ್ಯ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಂಜಯ್ ಚಂದ್ರಪ್ಪ ಕೆಪಿಸಿಸಿ ಸಾಮಾಜಿಕ ಜಾಲತಾಣದ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ವಿಜಯಗೌಡ ಪಾಟೀಲ್, ಉಸ್ಮಾನ್ ಬಬರ್ಚಿ, ಅಪ್ಪಣ್ಣ ಹಳ್ಳದ, ಆನಂದ ಜಕ್ಕನಗೌಡ್ರ
ಗುರುಸಿದ್ದೇಶ ಬೆಂಗೇರಿ, ಕಿರಣ ಉಳ್ಳಿಗೇರಿ, ಅಶ್ಫಕ್ ಮುಲ್ಲಾ, ಫಕ್ಕೀರಪ್ಪ ಚವಡಕಿ, ಗೋವಿಂದ ಲಮಾಣಿ, ಇಜಾಜ್ ಅಹ್ಮದ್ ದಂಡಿನ್, ಲಕ್ಷ್ಮಣ ಮೇದಾರ ಇತರರು ಉಪಸ್ಥಿತರಿದ್ದರು.

19/04/2022

ಯುವಕರ ಬದುಕಿಗೆ ಕೊಳ್ಳಿ ಇಟ್ಟ ಸುಳ್ಳಿನ ನಾಯಕ ಮೋದಿ : ನರೇಂದ್ರಸ್ವಾಮಿ

Address

Bangalore

Website

Alerts

Be the first to know and let us send you an email when PNDM News posts news and promotions. Your email address will not be used for any other purpose, and you can unsubscribe at any time.

Share