Cini Lahari

Cini Lahari It is an innovative website portal for news and article about the film industry. A dedicated web
(5)

30/09/2025

ಗಾಯಕ ನವೀನ್ ಸಜ್ಜು ನಾಯಕ ನಟರಾಗಿ ಕಾಣಿಸಿಕೊಂಡು ಕೀರ್ತಿ ಸ್ವಾಮಿ ನಿರ್ಮಾಣದ “ಲೋ ನವೀನ “ಚಿತ್ರ ತಂಡದಿಂದ ನಾಡಿನ ಜನತೆಗೆ ಆಯುಧ ಪೂಜೆ ಹಾಗು ವಿಜಯದಶಮಿಯ ಶುಭಾಶಯಗಳು.




ಸಂಚಿತ್ ಸಂಜಿವ್ ಅಭಿನಯದ ಮ್ಯಾಂಗೋ ಪಚ್ಚ ಸಿನಿಮಾದ ಟೀಸರ್ ಬಿಡುಗಡೆ ಸಂಚಿತ್ ಮೊದಲ ಸಿನಿಮಾ ಟೀಸರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್ವಿವೇಕ ನಿರ್ದೇಶ...
30/09/2025

ಸಂಚಿತ್ ಸಂಜಿವ್ ಅಭಿನಯದ ಮ್ಯಾಂಗೋ ಪಚ್ಚ ಸಿನಿಮಾದ ಟೀಸರ್ ಬಿಡುಗಡೆ

ಸಂಚಿತ್ ಮೊದಲ ಸಿನಿಮಾ ಟೀಸರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್

ವಿವೇಕ ನಿರ್ದೇಶನದ ಸಿನಿಮಾ ಮ್ಯಾಂಗೋ ಪಚ್ಚ

ಕೆಆರ್ ಜಿ ಹಾಗೂ ಸುಪ್ರಿಯಾನ್ವಿ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಾಣ ಮಾಡ್ತಿರೋ ಸಿನಿಮಾ

ದಸರಾ ಹಬ್ಬದ ವಿಶೇಷವಾಗಿ ಬಿಡುಗಡೆ ಆಗಿರೋ ಟೀಸರ್

ಗೆದ್ದು ಬೀಗಿದ ಪಪ್ಪಿ!ಬೆಂಗಳೂರು ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ 2ನೇ ಆವೃತ್ತಿಗೆ ತೆರೆ..ಪಪ್ಪಿ ಸಿನಿಮಾಗೆ ಮೊದಲ ಸ್ಥಾನ*ಬೆಂಗಳೂರು ಅಂತ...
30/09/2025

ಗೆದ್ದು ಬೀಗಿದ ಪಪ್ಪಿ!

ಬೆಂಗಳೂರು ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ 2ನೇ ಆವೃತ್ತಿಗೆ ತೆರೆ..ಪಪ್ಪಿ ಸಿನಿಮಾಗೆ ಮೊದಲ ಸ್ಥಾನ

*ಬೆಂಗಳೂರು ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ 2ನೇ ಆವೃತ್ತಿಯಲ್ಲಿ ಯಾರೆಲ್ಲ ಗೆದ್ದರು ಗೊತ್ತಾ?

ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ಆಯೋಜಿಸಿದ್ದ ಎರಡನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ ತೆರೆ ಬಿದ್ದಿದೆ. ಮಕ್ಕಳ ಚಿತ್ರಕ್ಕೆ ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದ ಈ‌ ಚಿತ್ರೋತ್ಸವ ಆಯೋಜನೆ ಮಾಡಲಾಗುತ್ತದೆ. ಈ ಬಾರಿ ಒಟ್ಟು 9 ಸಿನಿಮಾಗಳ ಪ್ರದರ್ಶನ ನಡೆದಿದೆ. ಆಯ್ದ ಮಕ್ಕಳ ಸಿನಿಮಾಗಳಿಗೆ 18 ಬೇರೆ ಬೇರೆ ವಿಭಾಗದಲ್ಲಿ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.

*ಪ್ರಶಸ್ತಿ ಪಡೆದ ಸಿನಿಮಾ ಯಾವುದು?*

ವಿನ್ನರ್-ಪಪ್ಪಿ ಸಿನಿಮಾ
• 1st ರನ್ನರ್ ಅಪ್-ಕರಡಿಗುಡ್ಡ ಸಿನಿಮಾ
• 2nd ರನ್ನರ್ ಅಪ್-ಬಾಲ್ಯ ಸಿನಿಮಾ

• ಅತ್ಯುತ್ತಮ ಬಾಲ ಕಲಾವಿದ- ಪುರುಷ ವಿಭಾಗ

ವರುಣ್ ಗಂಗಾಧರ್ – ಸ್ವರಾಜ್ಯ

•ಅತ್ಯುತ್ತಮ ಬಾಲ ಕಲಾವಿದೆ

ರುತು - ಟೇಕ್ವಾಂಡೋ ಗರ್ಲ್

• ಅತ್ಯುತ್ತಮ ಬಾಲ ಕಲಾವಿದ ಮಾಸ್ಟರ್ ಶ್ರೇಯಸ್ – ಜೀನಿಯಸ್ ಮುತ್ತಾ

• ಅತ್ಯುತ್ತಮ ಬಾಲ ಕಲಾವಿದೆ
ಇದು ನಮ್ಮ ಶಾಲೆ -ಪುಣ್ಯಶ್ರೀ

• ಅತ್ಯುತ್ತಮ ನಟ
ವಿಜಯ್ ರಾಘವೇಂದ್ರ -ಜೀನಿಯಾಸ್ ಮುತ್ತಾ

• ಅತ್ಯುತ್ತಮ ನಟಿ
ವೀಣಾ ಸುಂದರ್- ಸ್ವರಾಜ್ಯ

• ಅತ್ಯುತ್ತಮ ಪೋಷಕ ನಟ
ಸುಮನ್ - ಏಕಲವ್ಯ

• ಅತ್ಯುತ್ತಮ ಪೋಷಕ ನಟಿ
ಪದ್ಮ ವಾಸಂತಿ - ಜೀನೀಸ್ ಮುತ್ತಾ

• ಅತ್ಯುತ್ತಮ ನಿರ್ದೇಶಕ
ನಾಗಿಣಿ ಭರಣ-ಜೀನೀಸ್ ಮುತ್ತಾ

•ಅತ್ಯುತ್ತಮ ಸಂಕಲನ
ರವಿಚಂದ್ರನ್ - ಟೇಕ್ವಾಂಡೋ ಗರ್ಲ್

• ಅತ್ಯುತ್ತಮ ಗಾಯಕ
ಶಮಿತಾ ಮಲ್ನಾಡ್- ಚಿಣ್ಣರ ಚಂದ್ರ

• ಅತ್ಯುತ್ತಮ ಛಾಯಾಗ್ರಹಣ
ವಿ. ಪವನ್ ಕುಮಾರ್ -ಕರಡಿ ಗುಡ್ಡ

• ಅತ್ಯುತ್ತಮ ಚಿತ್ರಕಥೆ
ಅಮ್ಮಿತ್ ರಾವ್ – ಕರಡಿ ಗುಡ್ಡ

• ಅತ್ಯುತ್ತಮ PRO ಸುಧೀಂದ್ರ ವೆಂಕಟೇಶ್

• ಅತ್ಯುತ್ತಮ ಪ್ರೊಡಕ್ಷನ್ ಹೌಸ್
ವೈ ಮೂವೀಸ್ ಸ್ವರಾಜ್ಯ

ಈ ಹಿಂದೆ ಚಲನಚಿತ್ರೋತ್ಸವ ಅಪ್ಪು ಹೆಸರಿನಲ್ಲಿ ನಡೆದಿತ್ತು. ಪುನೀತ್ ತಮ್ಮ ಸೇವೆಯಿಂದ ಎಲ್ಲರ ಮನಸ್ಸಿನಲ್ಲಿ ಭದ್ರ ಸ್ಥಾನ ಹೊಂದಿದ್ದಾರೆ. ಅವರ ಸತ್ಕಾರ್ಯಗಳು ಎಲ್ಲರಿಗೂ ಸ್ಪೂರ್ತಿ ಆಗಬೇಕು. ಅವರ ಹೆಸರಿನಿಂದ ಮಕ್ಕಳ ಚಲನಚಿತ್ರೋತ್ಸವ ಆರಂಭವಾಗಿರುವುದು ನಿಜಕ್ಕೂ ಸಂತಸ ತಂದಿದೆ.

ಕಾಂತಾರ 1 ಜೊತೆಗೆ ನಿಮ್ಮ ಥಿಯೇಟರ್‌ನಲ್ಲಿ ಕೋಣ ಚಿತ್ರದ ಟ್ರೇಲರ್..ಹೊಸ ಅವತಾರದಲ್ಲಿ ಸೆನ್ಸೇಷನಲ್ ಸ್ಟಾರ್ ಕೋಮಲ್‌ಕುಮಾರ್..ಕುತೂಹಲ ಹೆಚ್ಚಿಸಿದ ...
30/09/2025

ಕಾಂತಾರ 1 ಜೊತೆಗೆ ನಿಮ್ಮ ಥಿಯೇಟರ್‌ನಲ್ಲಿ ಕೋಣ ಚಿತ್ರದ ಟ್ರೇಲರ್..

ಹೊಸ ಅವತಾರದಲ್ಲಿ ಸೆನ್ಸೇಷನಲ್ ಸ್ಟಾರ್ ಕೋಮಲ್‌ಕುಮಾರ್..
ಕುತೂಹಲ ಹೆಚ್ಚಿಸಿದ ಕೋಣ ಚಿತ್ರದ ಟ್ರೇಲರ್.. ಕೋಮಲ್ ಹೊಸ ಅವತಾರ

ಕಾಂತಾರ ಚಾಪ್ಟರ್ 1 ಸಿನಿಮಾ ತೆರೆಗೆ ಬರೋದಿಕ್ಕೆ ಮೂರೇ ದಿನ ಬಾಕಿ. ಕೋಮಲ್ ಫ್ಯಾನ್ಸ್ ಗೆ ಗುಡ್ ನ್ಯೂಸ್ ಅದೇನಪ್ಪ ಅಂತೀರಾ..? ಕಾಂತಾರ 1 ಸಿನಿಮಾ ಬಿಡುಗಡೆಯಾಗುವ ಥಿಯೇಟರ್ ನಲ್ಲಿ ಕೋಣ ಚಿತ್ರದ ಟ್ರೇಲರ್ ಬಿಡುಗಡೆ..
ಸಹಜಾಭಿನಯದ ಮೂಲಕ ಮನೆ ಮಾತಾಗಿರುವ ಕೋಮಲ್ ಕುಮಾರ್ ಇದೀಗ ಕೋಣ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿಯಾಗುತ್ತಿದ್ದಾರೆ. ಟೀಸರ್ ಮೂಲಕ ಕುತೂಹಲ ಹೆಚ್ಚಿಸಿದ್ದ ಕೋಣ ಚಿತ್ರದ ಟ್ರೇಲರ್ ಇದೀಗ ರಿಲೀಸ್ ಆಗಿದೆ. ಕಾಮಿಡಿ, ಆಕ್ಷನ್, ಸಸ್ಪೆನ್ಸ್ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ. ಇಲ್ಲಿ ಕೋಮಲ್ ಹೊಸ ಅವತಾರದಲ್ಲಿ ಕಾಣಿಸುತ್ತಾರೆ.

ನಿರ್ಮಾಣದಲ್ಲಿ ಕೈ ಜೋಡಿಸಿರುವ ತನಿಷಾ ಕುಪ್ಪಂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೀರ್ತಿರಾಜ್, ರಿತ್ವಿ ಜಗದೀಶ್, ನಮ್ರತಾ ಗೌಡ, ವಿನಯ್ ಗೌಡ, ರಾಘು ರಾಮನಕೊಪ್ಪ, ವಿಜಯ್ ಚೆಂಡೂರ್, ಎಂ.ಕೆ.ಮಠ್, ರಂಜಿತ್ ಗೌಡ, ತುಕಾಲಿ ಸಂತೋಷ್, ಹುಲಿ ಕಾರ್ತಿಕ್, ನಿರಂಜನ್, ಅನಂತ್, ಶಿಶಿರ್ ಶಾಸ್ತಿç, ಗೋಲ್ಡ್ ಸುರೇಶ್, ಸುಷ್ಮಿತ, ಜಗಪ್ಪ, ಮಂಜು ಪಾವಗಡ, ಕುರಿ ಸುನಿಲ್, ಮೋಹನ್ ಕೃಷ್ಣರಾಜ್ ಹೀಗೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
ಡಾರ್ಕ್ ಕಾಮೆಡಿ ಶೈಲಿಯಲ್ಲಿ ‘ಕೋಣ’ ಸಿನಿಮಾ ಮೂಡಿಬರಲಿದೆ. ಜಗ್ಗೇಶ್ ನಟನೆಯ ‘8 MM’ ಸಿನಿಮಾಗೆ ನಿರ್ದೇಶನ ಮಾಡಿದ್ದ ಎಸ್. ಹರಿಕೃಷ್ಣ ಅವರು ಈ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ನಾಗೇಶ್.ಎನ್ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ.. ಒಂದು ನೈಜ ಘಟನೆಯನ್ನು ಆಧರಿಸಿ ಈ ಚಿತ್ರ ತಯಾರಾಗಿದ್ದು ತೆರೆಗೆ ಬರಲು ಸಿದ್ಧವಾಗಿದೆ..ಕೋಮಲ್ ಕುಮಾರ್ ಅವರು ಈವರೆಗೂ ಕಾಣಿಸಿಕೊಂಡಿರದ ಪಾತ್ರವನ್ನು ‘ಕೋಣ’ ಸಿನಿಮಾದಲ್ಲಿ ನಿಭಾಯಿಸಿದ್ದಾರೆ..
ಕುಪ್ಪಂಡಾಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತನಿಷಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕಪಾಲ್, ರವಿಕಿರಣ್ .ಎನ್ ಅವರು ‘ಕೋಣ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಶಾಂಕ್ ಶೇಷಗಿರಿ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ವೀನಸ್ ನಾಗರಾಜ್‌ಮೂರ್ತಿ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದು ಇವರ ಜೊತೆ ವಿಶಾಲ್ ಗೌಡ ಸಹ ಕೈ ಜೋಡಿಸಿದ್ದಾರೆ..ಉಮೇಶ್ ಆರ್. ಬಿ. ಅವರ ಸಂಕಲನ ಚಿತ್ರಕ್ಕಿದೆ, ಸಾಹಸ ನಿರ್ದೇಶಕರಾಗಿ ವಿನೋದ್‌ಕುಮಾರ್, ಮುರುಗನ್ ಅವರ ನೃತ್ಯ ನಿರ್ದೇಶನ ಹಾಗೂ ಶಶಿಕುಮಾರ್, ಸಂದೀಪ್ ಆಚಾರ್ಯ ಸಂಭಾಷಣೆ ಚಿತ್ರಕ್ಕಿದ್ದು ಕೋಣ ಚಿತ್ರ ಅದ್ಭುತವಾಗಿ ಮೂಡಿಬಂದಿದ್ದು ಪ್ರೇಕ್ಷಕರನ್ನ ಸೆಳೆಯುವಲ್ಲಿ ಅನುಮಾನವೇ ಇಲ್ಲ..




#

ಸಿಂಪಲ್ ಸುನಿ‌ ನಿರ್ದೇಶನದ ಗತವೈಭವ ರೆಡಿನ.14ಕ್ಕೆ‌ ದುಶ್ಯಂತ್-ಆಶಿಕಾ ಸಿನಿಮಾ ತೆರೆಗೆಸಿಂಪಲ್ ಸುನಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಗತವೈಭ...
30/09/2025

ಸಿಂಪಲ್ ಸುನಿ‌ ನಿರ್ದೇಶನದ ಗತವೈಭವ ರೆಡಿ
ನ.14ಕ್ಕೆ‌ ದುಶ್ಯಂತ್-ಆಶಿಕಾ ಸಿನಿಮಾ ತೆರೆಗೆ

ಸಿಂಪಲ್ ಸುನಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಗತವೈಭವ ತೆರೆಗೆ ಬರಲು ಸಜ್ಜಾಗಿದೆ. ನವೆಂಬರ್ 14ರಂದು ಈ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಯುವ ಪ್ರತಿಭೆ ದುಶ್ಯಂತ್ ನಾಯಕನಾಗಿ, ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಗತವೈಭವ ಟೀಸರ್ ಅನಾವರಣ ಮಾಡುವ ಮೂಲಕ ಚಿತ್ರತಂಡ ಪ್ರಚಾರ ಕಾರ್ಯ ನಡೆಸಿದೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಗತವೈಭವ ಸಿನಿಮಾದ ಸುದ್ದಿಗೋಷ್ಟಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ಗತವೈಭವ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡ ಪ್ರಾಜೆಕ್ಟ್.‌ ನನ್ನ ಬ್ಯಾನರ್‌ನಡಿ ಮಾಡಬೇಕು ಎಂದುಕೊಂಡ ಸಿನಿಮಾ ಇದು. ದುಶ್ಯಂತ್ ಈ ಪ್ರಾಜೆಕ್ಟ್ ಮಾಡಬೇಕು ಎಂದು ಬರೆದಿತ್ತು. ಅದಕ್ಕೆ ಇದು ಆಗಿದೆ. ನಾಲ್ಕು ಸಿನಿಮಾ ಮಾಡಿದಷ್ಟು ಈ ಜರ್ನಿ ಆಗಿದೆ. ಅಂದುಕೊಂಡ ರೀತಿ ಗತವೈಭವ ಮೂಡಿ ಬಂದಿದೆ. ಕೆಲವು ಸಿನಿಮಾ ಪ್ರಚಾರ ಮಾಡಿ ತೆರೆಗೆ ಬರುತ್ತವೆ. ಈ ಚಿತ್ರ ರಿಲೀಸ್ ಆದರೆ ಪ್ರಚಾರವಾಗುತ್ತವೆ. ನಾನು ಆಡಿಯನ್ಸ್ ರೀತಿ ಈ‌ ಸಿನಿಮಾಗಾಗಿ ಕಾಯುತ್ತಿದ್ದೇವೆ. ಪ್ರತಿ ಶಾರ್ಟ್ ತುಂಬಾ ಚೆನ್ನಾಗಿ ಬಂದಿದೆ. ಪ್ರೊಡ್ಯೂಸರ್ ದೀಪಕ್ ಸರ್ ಚಿತ್ರಕ್ಕೆ ಎಲ್ಲವನ್ನೂ ಒದಗಿಸಿದ್ದಾರೆ. ದುಶ್ಯಂತ್ ನ್ಯಾಚುರಲ್ ಆರ್ಟಿಸ್ಟ್. ಆಶಿಕಾ ಫ್ಯಾಮಿಲಿ ತರ ಆಗಿದ್ದಾರೆ. ಚಿತ್ರದಲ್ಲಿ ಎಂಟರ್ಟೈನ್ಮೆಂಟ್, ‌ಎಮೋಷನ್ ಎಲ್ಲವೂ ಇದೆ ಎಂದರು.

ನಟ ದುಶ್ಯಂತ್ ಮಾತನಾಡಿ, ನೂರು ದಿನಕ್ಕೂ ಹೆಚ್ಚು ಕಾಲ ಶೂಟಿಂಗ್ ಮಾಡಿದ್ದೇವೆ. ಪೋರ್ಚುಗಲ್ ಚಿತ್ರೀಕರಣ ಮಾಡಿದ್ದೇವೆ. ಗ್ರಾಫಿಕ್ ಕಾರಣದಿಂದ ಸಿನಿಮಾ ತಡವಾಯ್ತು. ನಿರೀಕ್ಷೆಗೂ‌ ಮೀರಿದಷ್ಟು ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಗತವೈಭವ ಅದಕ್ಕೆ ಏನೂ ಬೇಕು ಅದು ತೆಗೆದುಕೊಳ್ತು. ಸುನಿ ಸರ್ ಅವರ ಹತ್ತು ಸಿನಿಮಾಗಳಿಗಿಂತ ಇದು ಬೆಸ್ಟ್ ಸಿನಿಮಾವಾಗಲಿದೆ. ಆಶಿಕಾ ಅವರ ಕರಿಯರ್‌ನಲ್ಲೂ ಇದು ಬೆಸ್ಟ್ ಚಿತ್ರ ಎನಿಸಿಕೊಳ್ಳಲಿದೆ. ನವೆಂಬರ್ 14ಕ್ಕೆ ಗತವೈಭವ ತೆರೆಗೆ ಬರಲಿದೆ. ಅಕ್ಟೋಬರ್ ನಲ್ಲಿ ಹಾಡುಗಳನ್ನು ರಿಲೀಸ್ ಮಾಡುವ ಪ್ಲ್ಯಾನ್ ನಡೆದಿದೆ ಎಂದರು.

ನಟಿ ಆಶಿಕಾ ರಂಗನಾಥ್ ಮಾತನಾಡಿ, ಗತವೈಭವ ತುಂಬಾ ಸ್ಪೆಷಲ್ ಸಿನಿಮಾ. ತಂಜಾವೂರಿನಲ್ಲಿ ಶೂಟಿಂಗ್ ಸಮಯದಲ್ಲಿ ಕೇಳಿದ ಕಥೆ. ತುಂಬಾ ಎಂಜಾಯ್ ಮಾಡಿಕೊಂಡು ಕಥೆ ಕೇಳಿದೆ. ಕಥೆ ಹೊಸದಾಗಿ. ಸುನಿ ಸರ್ ಗೂ ಇದು ಹೊಸದು ಅನಿಸುತ್ತದೆ. ಪ್ರತಿಯೊಬ್ಬ ಕಲಾವಿದರು ಈ ರೀತಿ ಪಾತ್ರ ಸಿಗಲು ಅದೃಷ್ಟ ಮಾಡಿರಬೇಕು. ನನಗೆ ಚಿತ್ರದಲ್ಲಿ ನಾಲ್ಕು ಲುಕ್ ಇದೆ. ಗತವೈಭವದಲ್ಲಿ ನಟಿಸಿರುವುದು ಬೇರೆಯದ್ದೇ ಅನುಭವ. ಹೋಮ್ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡಿದೆ ಅನುಭವ. ತೆರೆಮೇಲೆ ವೈಭವವಾಗಿ ಕಾಣಿಸಲು ಅದ್ಧೂರಿಯಾಗಿ ಚಿತ್ರೀಕರಣ ಮಾಡಲಾಗಿದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿದ ಅನುಭವ. ದುಶ್ಯಂತ್ ಅದ್ಭುತ ನಟ. ಇದೊಂದು ವಿಭಿನ್ನ ಸಿನಿಮಾ ಎಂದು ಹೇಳಿದರು.

ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆಗೆ ಸೈಂಟಿಫಿಕ್ ಥ್ರಿಲ್ಲರ್ ಕಂಟೆಂಟ್ ಬ್ಲೆಂಡ್ ಮಾಡಿ ಸುನಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಕಥೆ-ಚಿತ್ರಕಥೆ ಜೊತೆಗೆ ಸಂಭಾಷಣೆ ಬರೆದಿದ್ದು, ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಿಕ್ ಹಾಗೂ ಸುನಿ ಚಿತ್ರ ನಿರ್ಮಾಣ ಮಾಡ್ತಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ.

ದಿಲ್ಮಾರ್'ಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್..ಕೆಜಿಎಫ್ ಮಾತುಗಾರನ ಚೊಚ್ಚಲ ಚಿತ್ರಕೆಜಿಎಫ್‌ ಸಿನಿಮಾದ ಸಂಭಾಷಣೆಕಾರ ಚಂದ್ರಮೌಳಿ ನಿರ್ದೇಶನ ಮ...
30/09/2025

ದಿಲ್ಮಾರ್'ಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್..ಕೆಜಿಎಫ್ ಮಾತುಗಾರನ ಚೊಚ್ಚಲ ಚಿತ್ರ

ಕೆಜಿಎಫ್‌ ಸಿನಿಮಾದ ಸಂಭಾಷಣೆಕಾರ ಚಂದ್ರಮೌಳಿ ನಿರ್ದೇಶನ ಮಾಡಿರುವ ಚೊಚ್ಚಲ ಸಿನಿಮಾ ದಿಲ್ಮಾರ್ ತೆರೆಗೆ ಬರಲು ಸಜ್ಜಾಗಿದೆ. ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಮೊದಲ ಹಾಡು ಬಿಡುಗಡೆ ಕಾರ್ಯಕ್ರಮ ನಿನ್ನೆ ಎಂಎಂಬಿ ಲೆಗಸಿಯಲ್ಲಿ ನಡೆಯಿತು. ರೋರಿಂಗ್ ಸ್ಟಾರ್ ಶ್ರೀಮುರಳಿ ದಿಲ್ಮಾರ್ ಚಿತ್ರದ ನೀನಿಲ್ಲದೇ ಎಂಬ ಪ್ಯಾಥೋ ಗೀತೆಯನ್ನು ಅನಾವರಣ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು.

ಶ್ರೀಮುರಳಿ ಮಾತನಾಡಿ, ನಿರ್ಮಾಪಕರು ಒಳ್ಳೆ ಪ್ರಯತ್ನ ಮಾಡಿದ್ದಾರೆ. ಒಳ್ಳೆದಾಗುವ ವಿಷಯಗಳು ಕೆಲವೊಮ್ಮೆ ತಡ ಆಗುತ್ತವೆ. ಕಷ್ಟ ಕೊಡುತ್ತವೆ. ಆ ಬಗ್ಗೆ ಯೋಚನೆ ಮಾಡಬೇಡಿ. ಚಂದ್ರಮೌಳಿ ಮೇಲೆ ಒಂದು ಕಣ್ಣಿತ್ತು. ನೀವೆಲ್ಲಾ ಟ್ಯಾಲೆಂಟ್‌ ಡೈರೆಕ್ಟರ್, ರೈಟರ್. ನೀವು ಜಾಸ್ತಿ ಸಿನಿಮಾ ಮಾಡಿದರೆ ನಮಗೆ ಒಳ್ಳೊಳ್ಳೆ ಸಿನಿಮಾ ಬರುತ್ತದೆ. ನೀವು ತಡ ಮಾಡಬಾರದು. ರಾಮ್ ಚಿತ್ರದಲ್ಲಿ ಪಾತ್ರವಾಗಿ ಕಾಣಿಸುತ್ತಾರೆ. ಹೀರೋ ಆಕ್ಟಿಂಗ್ ಚೆನ್ನಾಗಿದೆ. ಡೈರೆಕ್ಟರ್ ಗೆ ಒಳ್ಳೆ ಟೆಸ್ಟ್ ಇರುವುದು ಕಾಣಿಸುತ್ತದೆ. ಸಾಧನೆ ಸುಲಭ ಅಲ್ಲ. ಬರುತ್ತದೆ. ಸಿಗುತ್ತದೆ. ಅಚ್ಚುಕಟ್ಟಾಗಿ ಕೆಲಸ ಮಾಡಿದರೆ ಯಾರಿಂದಲೂ ಅದನ್ನು ಕಿತ್ತುಕೊಳ್ಳಲು ಆಗಿಲ್ಲ. ಅದು ನಿಮಗೆ ಈ ಸಿನಿಮಾ ಮೂಲಕ ಆಗುತ್ತದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ನಟ ರಾಮ್ ಮಾತನಾಡಿ, ಹೀರೋ ಆಗಬೇಕು ಎಂದು 19 ವರ್ಷದಿಂದ ಹೋರಾಟ ಮಾಡುತ್ತಿದ್ದೆ. ಆ ಅವಕಾಶ ದಿಲ್ಮಾರ್ ಮೂಲಕ ನೆರವೇರಿದೆ. ಒಂದಷ್ಟು ವರ್ಷ ಡೈರೆಕ್ಷನ್ ಟೀಂ ನಲ್ಲಿ ಕೆಲಸ ಮಾಡಿದೆ. ನಾನು‌ ಇಲ್ಲಿ ಹೀರೋ ಆಗಿ‌ ನಿಂತಿದ್ದೇನೆ ಎಂದರೆ ಕಾರಣ ಚಂದ್ರಮೌಳಿ ಅವರು. ಪ್ರತಿ ವಿಷಯದಲ್ಲಿ ನನ್ನನ್ನು ತಿದ್ದಿದ್ದಾರೆ. ನಿರ್ಮಾಪಕರು ಹೊಸಬರು ಆದರೂ ಒಂದು ದಿನ ಶೂಟಿಂಗ್ ಸೆಟ್ ಗೆ ಬಂದಿಲ್ಲ. ನಿರ್ದೇಶಕರು ಹಾಗೂ ತಂಡದ ಮೇಲೆ ಅವರು ನಂಬಿಕೆ ಇಟ್ಟಿದ್ದಾರೆ. ಹೊಸಬರಿಗೆ ಶ್ರೀಮುರಳಿ ಸರ್ ಸಪೋರ್ಟ್ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ. ಇಡೀ ತಂಡಕ್ಕೆ ನಿಮ್ಮ ಬೆಂಬಲ ಇರಲಿ ಎಂದರು.

ನಿರ್ದೇಶಕ ಚಂದ್ರಮೌಳಿ ಮಾತನಾಡಿ, ದಿಲ್ಮಾರ್ ಟೀಸರ್ ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಬಳಿಕ ಎಲ್ಲರೂ ರಿಲೀಸ್ ಯಾವಾಗ ಎಂದು ಕೇಳುತ್ತಿದ್ದರು . ಆದರೆ ಕಾರಣದಿಂದ ಸ್ವಲ್ಪ ತಡವಾಗಿದೆ. ಇನ್ಮೇಲೆ ಯಾವುದೇ ಸಮಸ್ಯೆ ಇಲ್ಲ. ಹಾಡು ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಶುರು ಮಾಡಿದ್ದೇವೆ. ಒಂದೇ ಒಂದು ಕಾಲ್ ಗೆ ಶ್ರೀಮುರಳಿ ಸರ್ ಬಂದು ಹಾಡನ್ನು ಬಿಡುಗಡೆ ಮಾಡಿಕೊಟ್ಟಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಚಿತ್ರದಲ್ಲಿ ಆಕ್ಷನ್ ಜೊತೆಗೆ ಎಮೋಷನ್, ಲವ್ ಇದೆ. ರಾಮ್ ತುಂಬಾ ಚೆನ್ನಾಗಿ ನಟಿಸಿದ್ದಾರೆ ಎಂದರು.

*ಹೇಗಿದೆ ಹಾಡು?*

ನೀನಿಲ್ಲದೇ ಎಂಬ ಪ್ಯಾಥೋ ಗೀತೆಗೆ ಕೇಶವ್ ವಿಜಿ ಸಾಹಿತ್ಯ ಬರೆದಿದ್ದು, ಶರತ್ ಸಂತೋಷ್ ಧ್ವನಿಯಾಗಿದ್ದಾರೆ. ರದನ್‌ ಹಾಡಿಗೆ ಮಸ್ತ್ ಟ್ಯೂನ್ ಹಾಕಿದ್ದಾರೆ. ಲವ್ ನಲ್ಲಿ ಫೆಲ್ಯೂರ್ ಆದ ಪ್ರೇಮಿಗಳಿಗೆ ಹೇಳಿ ಮಾಡಿಸಿದ ರೀತಿ ಹಾಡಿದೆ.

ದಿಲ್ಮಾರ್ ಚಿತ್ರವನ್ನು ಕನ್ನಡ ಮತ್ತು ತೆಲುಗು ದ್ವಿಭಾಷೆಯಲ್ಲಿ ನಿರ್ಮಿಸಲಾಗುತ್ತಿದೆ. ನವನಾಯಕ ರಾಮ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ದಿಲ್ಮಾರ್ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು , ತೆಲುಗಿನ ನಟಿ ಡಿಂಪಲ್ ಹಯಾತಿ ಹಾಗೂ ಆದಿತಿ ಪ್ರಭುದೇವ ನಟಿಸಿದ್ದಾರೆ. ಸಾಯಿ ಕುಮಾರ್, ಶರತ್ ಲೋಹಿತಾಶ್ವ, ಅಶೋಕ್ ಅವರಂತಹ ಅನುಭವಿ ತಾರಾಬಳಗ ಚಿತ್ರದಲ್ಲಿದೆ.

ಇದೊಂದು ಲವ್‌ ಸ್ಟೋರಿಯಾದರೂ ಮಾಸ್‌ ಎಲಿಮೆಂಟ್ಸ್‌ ಇರುವ ಸಿನಿಮಾ. ಈ ಚಿತ್ರಕ್ಕೆ ಅರ್ಜುನ್‌ ರೆಡ್ಡಿ ಸಿನಿಮಾದ ಸಂಗೀತ ನಿರ್ದೇಶಕ ರದನ್‌ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ. ತನ್ವಿಕ್ ಅವರ ಛಾಯಾಗ್ರಹಣ, ಶಶಾಂಕ್ ಮುರುಳಿಧರನ್ ಸಂಕಲನ ಚಿತ್ರಕ್ಕಿದೆ. ಚಿತ್ರವನ್ನು ನಾಗರಾಜ್ ಭದ್ರಾವತಿ ಹಾಗೂ ಮಹೇಶ್ ಕೆ ನಿರ್ಮಿಸುತ್ತಿದ್ದಾರೆ.

ರೋರಿಂಗ್ ಸ್ಟಾರ್ ಶ್ರೀಮುರಳಿ ಹೊಸ ಸಿನಿಮಾ ಪರಾಕ್ ಗೆ ಚಾಲನೆಪರಾಕ್'ಗೆ ಮುಹೂರ್ತದ ಸಂಭ್ರಮ..ಬಂಡಿ ಮಹಾಕಾಳಿ ಸನ್ನಿಧಿಯಲ್ಲಿ ಶ್ರೀಮುರಳಿ ಹೊಸ ಚಿತ್...
30/09/2025

ರೋರಿಂಗ್ ಸ್ಟಾರ್ ಶ್ರೀಮುರಳಿ ಹೊಸ ಸಿನಿಮಾ ಪರಾಕ್ ಗೆ ಚಾಲನೆ

ಪರಾಕ್'ಗೆ ಮುಹೂರ್ತದ ಸಂಭ್ರಮ..ಬಂಡಿ ಮಹಾಕಾಳಿ ಸನ್ನಿಧಿಯಲ್ಲಿ ಶ್ರೀಮುರಳಿ ಹೊಸ ಚಿತ್ರದ ಮುಹೂರ್ತ

ಬಘೀರ ಸಿನಿಮಾದ ಸಕ್ಸಸ್ ಬಳಿಕ ರೋರಿಂಗ್ ಸ್ಟಾರ್ ಶ್ರೀಮುರಳಿ ಪರಾಕ್ ಎಂಬ ಚಿತ್ರ ಒಪ್ಪಿಕೊಂಡಿದ್ದಾರೆ. ಇಂದು ಬೆಂಗಳೂರಿನ ಬಂಡಿ ಮಹಾಕಾಳಿ ದೇಗುಲದಲ್ಲಿ ಪರಾಕ್ ಚಿತ್ರದ ಮುಹೂರ್ತ ನೆರವೇರಿದೆ. ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಕ್ಲ್ಯಾಪ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.

ಬಳಿಕ ಸುದ್ದಿಗಾರರೊಂದಿಗೆ ಶ್ರೀಮುರಳಿ ಮಾತನಾಡಿ,
"ಪರಾಕ್ ವಿಂಟೇಜ್ ಸ್ಟೈಲ್‌ನಲ್ಲಿ ನಡೆಯುವ ಸಿನಿಮಾ. ಮುಂದಿನ ಚಿತ್ರ ಯಾವ ರೀತಿ ಕಥೆ ಆಯ್ಕೆ ಮಾಡಬೇಕು ಎಂಬ ಟೆನ್ಷನ್ ಇತ್ತು. ಸುಮಾರು 200 ಕಥೆ ಕೇಳಿದ್ದೆ. ಪರಾಕ್ ಸಿನಿಮಾ ತಂಡದ ಜೊತೆ ಎರಡು ವರ್ಷ ಈಗಾಗಲೇ ಟ್ರಾವೆಲ್ ಮಾಡಿದ್ದೆ. ಈ‌ ತಿಂಗಳಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ. ಚರಣ್ ರಾಜ್ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರೆ" ಎಂದು ಮಾಹಿತಿ ನೀಡಿದರು.

ಯುವ ಪ್ರತಿಭೆ ಹಾಲೇಶ್ ಕೋಗುಂಡಿ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಇವರಿಗೆ ಇದು ಮೊದಲ ಚಿತ್ರವಾಗಿದೆ. ಈ ಮೊದಲು ಕೆಲವು ಕಿರು ಚಿತ್ರ ಮಾಡಿರೋ ಅನುಭವ ಇದೆ. ಇದೀಗ ಪರಾಕ್ ಮೂಲಕ ಡೈರೆಕ್ಟರ್ ಆಗುತ್ತಿದ್ದಾರೆ.
ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್ ಅಡಿ ಈ ಪರಾಕ್ ಸಿನಿಮಾ ನಿರ್ಮಾಣವಾಗುತ್ತಿದೆ.

ಚರಣ್ ರಾಜ್ ಸಂಗೀತ, ಸಂದೀಪ್ ವಲ್ಲುರಿ ಕ್ಯಾಮೆರಾ, ಉಲ್ಲಾಸ್ ಹೈದೂರ್ ಕಲಾ ನಿರ್ದೇಶನ, ಇಂಚರಾ ಸುರೇಶ್ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಉಳಿದ ಅಪ್ ಡೇಟ್ ನ್ನು ಚಿತ್ರತಂಡ ರಿವೀಲ್ ಮಾಡಲಿದೆ.




Baadshah  visits the ‘Operation’
30/09/2025

Baadshah visits the ‘Operation’



ರಂಗಭೂಮಿ ಕಲಾವಿದರು ಹಾಗೂ ಸಿನಿಮಾ ನಟರಾದ ಯಶವಂತ ಸರದೇಶಪಾಂಡೆ ಅವರು ನಿಧನರಾಗಿದ್ಸಾರೆ.
29/09/2025

ರಂಗಭೂಮಿ ಕಲಾವಿದರು ಹಾಗೂ ಸಿನಿಮಾ ನಟರಾದ ಯಶವಂತ ಸರದೇಶಪಾಂಡೆ ಅವರು ನಿಧನರಾಗಿದ್ಸಾರೆ.

28/09/2025

ಬಿಗ್ ಬಾಸ್ ಮನೆಯಲ್ಲಿ ನಿಮ್ಮ ಪ್ರೀತಿಯ ಮಂಜು ಭಾಷಿಣಿ
ನಿಮ್ಮೆಲ್ಲರ ಹಾರೈಕೆ ಇರಲಿ.




ಬಿಗ್ ಬಾಸ್ GRAND OPENING | ಇಂದು ಸಂಜೆ 6 | ಪ್ರತಿ ರಾತ್ರಿ 9:30

#ಕಲರ್‌ಫುಲ್‌‌ಕತೆ

'ಕಾಂತಾರ ಅಧ್ಯಾಯ 1' ಟ್ರೇಲರ್  ರಿಲೀಸ್ ಬಹು ನಿರೀಕ್ಷೆಯ ಸಿನಿಮಾ ಕಾಂತಾರ 1 ಟ್ರೇಲರ್ ರಿಲೀಸ್ ಆಗಿದೆ. ಹೃತಿಕ್ ರೋಷನ್, ಶಿವಕಾರ್ತಿಕೇಯನ್, ಪೃಥ್...
22/09/2025

'ಕಾಂತಾರ ಅಧ್ಯಾಯ 1' ಟ್ರೇಲರ್ ರಿಲೀಸ್

ಬಹು ನಿರೀಕ್ಷೆಯ ಸಿನಿಮಾ ಕಾಂತಾರ 1 ಟ್ರೇಲರ್ ರಿಲೀಸ್ ಆಗಿದೆ. ಹೃತಿಕ್ ರೋಷನ್, ಶಿವಕಾರ್ತಿಕೇಯನ್, ಪೃಥ್ವಿರಾಜ್ ಸುಕುಮಾರನ್, ಪ್ರಭಾಸ್ ಅವರು ಕಾಂತಾರ ಅಧ್ಯಾಯ 1' ಚಿತ್ರದ ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

ಸಾಕಷ್ಟು ಕುತೂಹಲ, ಕಾತುರ ಮೂಡಿಸಿರುವ, ಹೊಂಬಾಳೆ ಫಿಲಂಸ್ ನಿರ್ಮಾಣ ಹಾಗೂ ರಿಷಬ್ ಶೆಟ್ಟಿ ಅವರ ನಟನೆ ಹಾಗೂ ನಿರ್ದೇಶನದ, ವಿಶ್ವವೇ ಎದುರು ನೋಡುತ್ತಿರುವ, ಬಹು ನಿರೀಕ್ಷಿತ "ಕಾಂತಾರ ಅಧ್ಯಾಯ 1" ಚಿತ್ರವು ಸಪ್ತ ಭಾಷೆಗಳಲ್ಲಿ ಅಕ್ಟೋಬರ್ 2 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಸೆ.22ರ ಸೋಮವಾರ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳ ಟ್ರೇಲರನ್ನು ಆಯಾ ಭಾಷೆಗಳ ಸ್ಟಾರ್ ನಟರುಗಳು ಬಿಡುಗಡೆ ಮಾಡಿದ್ದಾರೆ. ಹಿಂದಿ ಟ್ರೇಲರ್ ಅನ್ನು ಹೃತಿಕ್ ರೋಶನ್, ತಮಿಳಿನ ಟ್ರೇಲರ್ ಅನ್ನು ಶಿವಕಾರ್ತಿಕೇಯನ್, ಮಲಯಾಳಂ ಟ್ರೇಲರ್ ಅನ್ನು ಪೃಥ್ವಿರಾಜ್ ಸುಕುಮಾರನ್ ಹಾಗೂ ತೆಲುಗು ಭಾಷೆಯ ಟ್ರೇಲರ್ ಅನ್ನು ಪ್ರಭಾಸ್ ಅವರು ಅನಾವರಣ ಮಾಡಿದರು.

ಕನ್ನಡದ ಕಲಾಭಿಮಾಗಳಿಂದಲೇ ಕನ್ನಡದ "ಕಾಂತಾರ 1" ಚಿತ್ರದ ಟ್ರೇಲರ್ ಬಿಡುಗಡೆಯಾಗಿರುವುದು ವಿಶೇಷ.
ಚಿತ್ರದ ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿದ್ದು, ಈಗಾಗಲೇ ರಿಲೀಸಾಗಿರುವ ಚಿತ್ರದ ಮೇಕಿಂಗ್ ವಿಡಿಯೋ, ಪೋಸ್ಟರ್ ಗಳಿಗೆ ಫಿದಾ ಆಗಿರುವ ಅಭಿಮಾನಿಗಳು ಅಕ್ಟೋಬರ್ 2ರಂದು ಕಾಂತಾರ-1 ಚಿತ್ರವನ್ನು ತೆರೆ ಮೇಲೆ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ.

ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ, ಅರವಿಂದ್ ಎಸ್. ಕಶ್ಯಪ್ ಅವ ಛಾಯಾಗ್ರಹಣ ಹಾಗೂ ಪ್ರಗತಿ ಶೆಟ್ಟಿ ಅವರ ವಸ್ತ್ರ ವಿನ್ಯಾಸ "ಕಾಂತಾರ-೧ ಚಿತ್ರಕ್ಕಿದೆ.

ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಅವರುಗಳು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

'ಕಾಂತಾರ ಅಧ್ಯಾಯ 1. ಕಲೆ, ಭಕ್ತಿ ಮತ್ತು ಶಕ್ತಿಯ ಮಹತ್ವವನ್ನು ಒಳಗೊಂಡ ಚಿತ್ರವಾಗಿದ್ದು, ಸದಭಿರುಚಿಯ ಚಿತ್ರಗಳನ್ನೇ ನಿರ್ಮಾಣ ಮಾಡುತ್ತಾ ಬಂದಿರುವ ಹೊಂಬಾಳೆ ಫಿಲಂಸ್ ನಿಂದ ಮತ್ತೊಂದು ಅದ್ಭುತ ಚಿತ್ರ ವಿಶ್ವದ ಸಿನಿಪ್ರೇಮಿಗಳಿಗೆ, ಜನರಿಗೆ ವೀಕ್ಷಿಸಲು ಸಿಗುವುದಂತೂ ಖಂಡಿತ.



ಕಾಂತಾರ ಅಧ್ಯಾಯ 1' ಟ್ರೇಲರ್ ಬಿಡುಗಡೆ ದಿನ ಪ್ರಕಟಬಹು ನಿರೀಕ್ಷಿತ 'ಕಾಂತಾರ ಅಧ್ಯಾಯ 1' ಸಿನಿಮಾದ ಟ್ರೇಲರ್ ಇದೇ ಸೆಪ್ಟೆಂಬರ್ 22, 2025 ರಂದು ಮ...
19/09/2025

ಕಾಂತಾರ ಅಧ್ಯಾಯ 1' ಟ್ರೇಲರ್ ಬಿಡುಗಡೆ ದಿನ ಪ್ರಕಟ

ಬಹು ನಿರೀಕ್ಷಿತ 'ಕಾಂತಾರ ಅಧ್ಯಾಯ 1' ಸಿನಿಮಾದ ಟ್ರೇಲರ್ ಇದೇ ಸೆಪ್ಟೆಂಬರ್ 22, 2025 ರಂದು ಮಧ್ಯಾಹ್ನ 12:40ಕ್ಕೆ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲಂಸ್ ಇಂದು ಘೋಷಿಸಿದೆ. ಈ ಚಿತ್ರವು ಅಕ್ಟೋಬರ್ 2, 2025 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆ ಕಾಣಲಿದೆ.

ರಿಷಬ್ ಶೆಟ್ಟಿ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವು, ಜಾಗತಿಕ ಮಟ್ಟದಲ್ಲಿ ಯಶಸ್ಸು ಕಂಡ 'ಕಾಂತಾರ' ಚಿತ್ರದ ಪ್ರೀಕ್ವೆಲ್ ಆಗಿದೆ.

ಕರಾವಳಿ ಕರ್ನಾಟಕದ ಅತೀಂದ್ರಿಯ ಲೋಕವನ್ನು ಅನಾವರಣಗೊಳಿಸುವ ಈ ಚಿತ್ರವು, ಪುರಾಣ, ಭಕ್ತಿ ಮತ್ತು ಅದೃಷ್ಟದ ನಡುವಿನ ಪೌರಾಣಿಕ ಕಥೆಯನ್ನು ಹೇಳುತ್ತದೆ.

ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರ ಅದ್ಭುತ ಸಂಗೀತ, ಛಾಯಾಗ್ರಾಹಕ ಅರವಿಂದ್ ಎಸ್. ಕಶ್ಯಪ್ ಅವರ ದೃಶ್ಯ ವೈಭವ ಮತ್ತು ವಸ್ತ್ರ ವಿನ್ಯಾಸಕಿ ಪ್ರಗತಿ ಶೆಟ್ಟಿ ಅವರ ವಿಶಿಷ್ಟ ಕಲಾಕೃತಿಗಳು ಚಿತ್ರಕ್ಕೆ ಮೆರುಗು ನೀಡಲಿವೆ.

ರಿಷಬ್ ಶೆಟ್ಟಿ, ಜೊತೆಗೆ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಅವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಕಾಂತಾರ ಅಧ್ಯಾಯ 1' ಚಿತ್ರವು ಕಲೆ, ಭಕ್ತಿ ಮತ್ತು ಶಕ್ತಿಯನ್ನು ಒಳಗೊಂಡಿದ್ದು, ಮತ್ತೊಮ್ಮೆ ಇತಿಹಾಸ ಸೃಷ್ಟಿಸಲು ಸಿದ್ಧವಾಗಿದೆ.

Address

62, 4th Floor, Renukamba Studio, 4th Main Road, 18th Cross, Malleshwaram
Bangalore
560055

Alerts

Be the first to know and let us send you an email when Cini Lahari posts news and promotions. Your email address will not be used for any other purpose, and you can unsubscribe at any time.

Share